રસોડું એ એક એવી જગ્યા છે જ્યાં પ્રકૃતિના 5 તત્વોમાંથી એક અગ્નિ તત્વ રહેલું હોય છે. વાસ્તુ મુજબ રસોડાની યોગ્ય ગોઠવણ એ આ તત્વના લાભ મેળવવા માટે સૌથી મહત્વપૂર્ણ છે, અન્યથા રસોડામાં અકસ્માતો થવાની સંભાવના રહેલી હોય છે.
ವಾಸ್ತು ಶಾಸ್ತ್ರ ಎನ್ನುವುದು ಸಂಸ್ಕೃತ ಪದವಾಗಿದ್ದು 'ನಿರ್ಮಾಣದ ವಿಜ್ಞಾನವನ್ನು' ಉಲ್ಲೇಖಿಸುತ್ತದೆ. ಇದು ಸ್ಥಳ, ಹೊಂದಿಸುವಿಕೆ, ರೂಪುರೇಷೆ, ಅಳತೆ ಮುಂತಾದ ಎಲ್ಲ ವಿಧದ ವಾಸ್ತು ಮತ್ತು ವಿನ್ಯಾಸದ ವಿಚಾರಗಳನ್ನು ಒಳಗೊಂಡಿದೆ. ಸಕಾರಾತ್ಮಕ ಶಕ್ತಿಯನ್ನು ತರಲು ಮನೆಯ ವಾಸ್ತು ಗಮನಾರ್ಹ ಪಾತ್ರ ವಹಿಸುತ್ತದೆ.
ನಿರ್ಮಾಣಕ್ಕೆ ಮುನ್ನ ಮನೆ ಕಟ್ಟುವ ವೆಚ್ಚಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದು ನಿರ್ಮಾಣದ ಹಂತಗಳು, ಅವುಗಳ ಟೈಮ್‌ಲೈನ್‌ಗಳು ಮತ್ತು ವೆಚ್ಚಗಳ ವಿಭಾಗೀಕರಣವನ್ನು ಒಳಗೊಂಡಿದ್ದು, ಇವು ನಿಮ್ಮ ಅಗತ್ಯಕ್ಕೆ ಅನುಸಾರ ಬದಲಾಗುತ್ತವೆ.
ಬಲಿಷ್ಠ ಮನೆಯನ್ನು ನಿರ್ಮಿಸಲು ಸರಿಯಾದ ಕಾಂಕ್ರೀಟ್ ಮಿಶ್ರಣ ಅತ್ಯಂತ ಮುಖ್ಯ. ಆದ ಕಾರಣ, ನಿಮ್ಮ ಕಾಂಕ್ರೀಟ್ ಮಿಶ್ರಣ ಬಳಸುವ ಮೊದಲು ಅದನ್ನು ಪರೀಕ್ಷಿಸುವುದು ಮುಖ್ಯ. ಆದ ಕಾರಣ, ಕಾಂಕ್ರೀಟ್ ಪರೀಕ್ಷೆಯನ್ನು ಮಾಡಬೇಕು. ಕಾಂಕ್ರೀಟ್ ಪರೀಕ್ಷೆಯಲ್ಲಿ 2 ವಿಧಗಳಿವೆ - ಕಾಸ್ಟಿಂಗ್‌ಗೆ ಮೊದಲು ಮತ್ತು ಸೆಟ್ಟಿಂಗ್‌ನ ಬಳಿಕ. ಕಾಂಕ್ರೀಟ್‌ನ ಸಮಗ್ರ ಸಾಮರ್ಥ್ಯವನ್ನು ಹೇಗೆ ಪರೀಕ್ಷಿಸಲಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.
ನಮ್ಮ ದೇಶದ ಅನೇಕ ಪ್ರದೇಶಗಳು ಪ್ರತಿ ವರ್ಷ ಪ್ರವಾಹದಿಂದ ಬಾಧಿತವಾಗುತ್ತವೆ. ಇದರಿಂದ ಮನೆಗಳಿಗೆ ತೀವ್ರ ಹಾನಿಯಾಗಬಹುದು. ಅಂಥ ಸನ್ನಿವೇಶಗಳಲ್ಲಿ, ಪ್ರವಾಹ ನಿರೋಧಕ ಮನೆಗಳ ಅಗತ್ಯವಿದೆ. ಪ್ರವಾಹ ನಿರೋಧಕ ನಿರ್ಮಾಣದ ಕುರಿತ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ.
ಜೀವನದಲ್ಲಿ ನೀವು ಮಾಡಿರಬಹುದಾದ ಉಳಿತಾಯದ ಬಹುಪಾಲು ಭಾಗವನ್ನು ನೀವು ಖರ್ಚು ಮಾಡಬೇಕಾಗುತ್ತದೆ, ಅದಕ್ಕಾಗಿಯೇ ನೀವು ಬಜೆಟ್ ಅನ್ನು ಮೊದಲೇ ಯೋಜಿಸುವುದು ಸರಿ ಎಂದು ತೋರುತ್ತದೆ, ಏಕೆಂದರೆ ನಿರ್ಮಾಣಕ್ಕೆ ಮುಂಚಿತವಾಗಿ ಬಜೆಟ್ ಮಾಡುವುದರಿಂದ ನಂತರ ಬಹಳಷ್ಟು ಹಣ ಉಳಿತಾಯ ಮಾಡುವಲ್ಲಿ ಅದು ಸಹಾಯ ಮಾಡುತ್ತದೆ.
ನಿಮ್ಮ ಹೊಸ ಮನೆಯನ್ನು ನಿರ್ಮಾಣ ಮಾಡುವ ಪ್ರಯಾಣದಲ್ಲಿ, ನೀವು ಮುಂದಿಡುವ ಮೊದಲ ಹೆಜ್ಜೆಯು ನಿವೇಶನವನ್ನು ಆಯ್ಕೆ ಮಾಡುವುದು ಆಗಿರುತ್ತದೆ. ಈ ಒಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ನೀವು ಒಮ್ಮೆ ನಿವೇಶನವನ್ನು ಖರೀದಿಸಿದ ನಂತರ, ನಿಮ್ಮ ನಿರ್ಧಾರದಿಂದ ಹಿಂದೆ ಬರಲು ಸಾಧ್ಯವಾಗುವುದಿಲ್ಲ. ಮನೆಯನ್ನು ನಿರ್ಮಿಸಲು ಬೇಕಾದ ಹಾಗೂ ಸೂಕ್ತವಾದ ನಿವೇಶನವನ್ನು ಆಯ್ಕೆ ಮಾಡುವ ಸಲುವಾಗಿ ನಿಮಗೆ ಸಹಾಯ ಮಾಡಲು ನಾವು ಕೆಲವು ಸಲಹೆಗಳನ್ನು ರಚಿಸಿದ್ದೇವೆ.
ನಿಮ್ಮ ಮನೆಯ ಗೋಡೆಗಳನ್ನು ಪ್ಲಾಸ್ಟರಿಂಗ್ ಮಾಡುವುದರಿಂದ ಸುಗಮ ಫಿನಿಶ್ ನೀಡುವ ಬಣ್ಣವನ್ನು ಸುಲಭವಾಗಿ ಬಳಿಯಬಹುದಾಗಿದೆ. ಇದು ಹವಾಮಾನದಲ್ಲಿ ಆಗಬಹುದಾದ ಬದಲಾವಣೆಗಳಿಂದಲೂ ಕೂಡಾ ನಿಮ್ಮ ಮನೆಯನ್ನು ರಕ್ಷಿಸುತ್ತದೆ. ನಿಮ್ಮ ಮನೆಯ ಪ್ಲಾಸ್ಟರಿಂಗ್ ಮಾಡುವಾಗ ಅನುಸರಿಸಬಹುದಾದ 4 ಪ್ರಮುಖ ಸಲಹೆಗಳು ಇಲ್ಲಿವೆ.
ನಿವೇಶನವನ್ನು ಖರೀದಿಸುವುದು ನಿಮ್ಮ ಮನೆ ನಿರ್ಮಾಣದ ಮೊದಲ ದೊಡ್ಡ ಹೆಜ್ಜೆಯಾಗಿರುತ್ತದೆ. ನಂತರದಲ್ಲಿ ಕಾನೂನಿನ ತೊಡಕುಗಳಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ, ನಿಮ್ಮ ಮನೆಯ ನಿರ್ಮಾಣವನ್ನು ಪ್ರಾರಂಭಿಸುವ ಮೊದಲೇ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀವು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
ದೀರ್ಘಾವಧಿಯಲ್ಲಿ ನೀರಿನ ಸೋರಿಕೆಯಾಗದಂತೆ ನಿಮ್ಮ ಮನೆಯನ್ನು ರಕ್ಷಿಸಲು ಉತ್ತಮ ಪರಿಹಾರವೆಂದರೆ ಜಲನಿರೋಧಕ ಪ್ರಕ್ರಿಯೆಯನ್ನು ಮಾಡುವುದು. ಈ ಕೆಳಗೆ ನಮೂದಿಸಿರುವ ನಿಮ್ಮ ಮನೆಯ ಜಾಗಗಳಲ್ಲಿ ಜಲನಿರೋಧಕವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ:
ನೀವು ನಿರ್ಮಿಸುವ ಮನೆಯು ನಿಮ್ಮ ಜೀವನದ ಅತಿ ಮಹತ್ವವಾದ ಕಾರ್ಯಗಳಲ್ಲಿ ಒಂದಾಗಿರುತ್ತದೆ ಹಾಗೂ ಅದರ ದೀರ್ಘಾಯುಷ್ಯವನ್ನು ಅದರ ಬಾಳಿಕೆಯು ನಿರ್ಧರಿಸುತ್ತದೆ. ನೀವು ನಿರ್ಮಿಸುವ ಮನೆಯು ತಲೆತಲಾಂತರದವರೆಗೂ ಇರುತ್ತದೆ ಎನ್ನುವುದನ್ನು ಸ್ಟ್ರಕ್ಚರಲ್ ಎಂಜಿನಿಯರ್‌ರವರು ಖಚಿತಪಡಿಸಬಹುದು. ಒಬ್ಬ ಸ್ಟ್ರಕ್ಚರಲ್ ಎಂಜಿನಿಯರ್ ಅನ್ನು ನೇಮಿಸಿಕೊಳ್ಳದೇ ಇರುವುದು, ನಿಮ್ಮ ಮನೆಯ ಸುದೀರ್ಘ ಬಾಳಿಕೆ ಸಾಧ್ಯತೆಯನ್ನು ಅಪಾಯಕ್ಕೆ ಒಡ್ಡಿದಂತೆ.
ನಿಮ್ಮ ಮನೆಯ ನಿರ್ಮಾಣದ ಕಾಮಗಾರಿಯ ವಿಷಯಕ್ಕೆ ಬಂದಲ್ಲಿ, ಯೋಜನೆಯ ಸಮಯದಿಂದ ಹಿಡಿದು ಅದನ್ನು ಮುಗಿಸುವವರೆಗಿನ ಬಗ್ಗೆ ಸಾಕಷ್ಟು ಯೋಚಿಸಬೇಕಾಗುತ್ತದೆ. ಆದರೆ ನೀವು ನಿರ್ಮಾಣದ ಕಾಮಗಾರಿಯ ಪ್ರಕ್ರಿಯೆಯಲ್ಲಿ ಸಾಗುತ್ತಿರುವಾಗ, ಸುರಕ್ಷತೆಯು ನೀವು ಯಾವುದೇ ರಾಜಿ ಮಾಡಿಕೊಳ್ಳಲು
ನಿಮ್ಮ ಮನೆಯ ನಿರ್ಮಾಣ ಕಾಮಗಾರಿಯಲ್ಲಿ ಅನೇಕ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಮಾಲೀಕರು - ನೀವು ಮತ್ತು ನಿಮ್ಮ ಕುಟುಂಬ, ಆರ್ಕಿಟೆಕ್ಟ್ - ಮನೆಯನ್ನು ವಿನ್ಯಾಸಗೊಳಿಸುವವರು, ಕಾರ್ಮಿಕರು ಮತ್ತು ಗಾರೆಯವರು - ನಿಮ್ಮ ಮನೆಯನ್ನು ನಿರ್ಮಿಸುವವರು ಮತ್ತು ಗುತ್ತಿಗೆದಾರ - ಹಾಗೂ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಯೋಜಿಸುವವರು ಮತ್ತು ಸಂಯೋಜಿಸುವವರು. ನಿಮ್ಮ ಮನೆಯ ಕಟ್ಟಡ ಕಾಮಗಾರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅವಿಭಾಜ್ಯ ಪಾತ್ರವನ್ನು ವಹಿಸುತ್ತಿರುತ್ತಾರೆ, ಅಂದಾಜು ಸಮಯ ಮತ್ತು ಬಜೆಟ್‌ನಲ್ಲಿ ಕಟ್ಟಡ ಯೋಜನೆಯು ಪೂರ್ಣಗೊಂಡಿದೆ ಎನ್ನುವುದನ್ನು ಖಚಿತಪಡಿಸುವಲ್ಲಿ ಗುತ್ತಿಗೆದಾರನ ಪಾತ್ರ ಬಹಳ ಮುಖ್ಯವಾಗಿರುತ್ತದೆ.
ನಿಮ್ಮ ಮನೆಯ ನಿರ್ಮಾಣವನ್ನು ಸೂಕ್ತವಾಗಿ ಯೋಜಿಸುವುದು ನಿಮ್ಮ ಅಂದಾಜು ಲೆಕ್ಕಾಚಾರಕ್ಕೆ ಸಹಾಯ ಮಾಡುವುದಲ್ಲದೇ ದುಬಾರಿ ತಪ್ಪುಗಳನ್ನು ಮಾಡುವುದನ್ನು ತಡೆಯುತ್ತದೆ. ನಿಮ್ಮ ಮನೆಯ ನಿರ್ಮಾಣವನ್ನು ನೀವು ಸೂಕ್ತ ರೀತಿಯಲ್ಲಿ ಯೋಜಿಸಿದಾಗ, ನಿಮಗೆ ವಸ್ತುಗಳ ಗುಣಮಟ್ಟವನ್ನು, ಒಳಾಂಗಣಗಳ ಲೆಕ್ಕಾಚಾರವನ್ನು ನಿರ್ಧರಿಸಲು ಹಾಗೂ ಪ್ರತಿ ಘಟ್ಟದಲ್ಲೂ ಬೇಕಾದ ಅಗತ್ಯವಾದ ಹಣದ ಹರಿವನ್ನು ವ್ಯವಸ್ಥೆಗೊಳಿಸಲು ಅನುಕೂಲವಾಗುತ್ತದೆ.
ನಿಮ್ಮ ಮನೆಯು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಇರುವ ಕೇವಲ ಒಂದು ಆಶ್ರಯತಾಣಕ್ಕೂ ಮೀರಿದ್ದಾಗಿರುತ್ತದೆ. ಇದು ನಿಮ್ಮ ಸುರಕ್ಷಿತ ತಾಣವಾಗಿರುತ್ತದೆ. ಇದು ಸೌಕರ್ಯ ನೀಡುವ ಮೃದುವಾದ ಕುಶನ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊರಭಾಗದ ಅಂಶಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿಯೇ, ಮುಂದಿನ ಪೀಳಿಗೆಗೆ ಉಳಿಯುವಂತಹ ಮನೆಯನ್ನು ನಿರ್ಮಿಸಲು ನೀವು ಸಾಕಷ್ಟು ಸಮಯ, ಹಣ ಮತ್ತು ಶಕ್ತಿಯನ್ನು ಹೂಡಿಕೆ ಮಾಡಿರುತ್ತೀರಿ.
ನಿಮ್ಮ ಮನೆಯನ್ನು ನಿರ್ಮಿಸುವ ಸಲುವಾಗಿ ಭೂಮಿಯನ್ನು ಖರೀದಿಸುವುದು ಒಂದು ಬದಲಾಯಿಸಲಾಗದ ನಿರ್ಧಾರವಾಗಿರುತ್ತದೆ. ಅಂದರೆ, ಒಮ್ಮೆ ನೀವು ಈ ಖರೀದಿಯನ್ನು ಮಾಡಿದ ನಂತರ, ಅದನ್ನು ನೀವು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ ಅಥವಾ ರದ್ದುಗೊಳಿಸುವ ಸಲುವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ
ಗೆದ್ದಲು ಹುಳುಗಳು ಬಹಳ ಉಪದ್ರವ ನೀಡುತ್ತವೆ. ಅವುಗಳು ನಿಮ್ಮ ಮನೆಯನ್ನು ಹೊಕ್ಕಲ್ಲಿ, ನಿಮ್ಮ ಪೀಠೋಪಕರಣಗಳು, ನೆಲೆವಸ್ತುಗಳು ಮತ್ತು ಮರದ ರಚನೆಗಳಿಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಇದನ್ನು ತಡೆಯುವ ಸಲುವಾಗಿ, ನೀವು ಮಾಡಬೇಕಾಗಿರುವುದು ಇಷ್ಟೇ, ನಿರ್ಮಾಣವನ್ನು ಪ್ರಾರಂಬಿಸುವ ಮೊದಲು, ಗೆದ್ದಲು-ವಿರೋಧಿ ಕ್ರಮಗಳನ್ನು ಅನುಸರಿಸಬೇಕು.
ನಿಮ್ಮ ಮನೆಯ ನಿರ್ಮಾಣದ ಸಂದರ್ಭದಲ್ಲಿ. ತಾವು ತಮ್ಮ ಜೀವನದಲ್ಲಿ ಮಾಡಿರಬಹುದಾದ ಉಳಿತಾಯದ ಗಣನೀಯ ಭಾಗವನ್ನು ಖರ್ಚು ಮಾಡಬೇಕಾಗುತ್ತದೆ. ಅನಗತ್ಯವಾಗಿ ಮಾಡಬಹುದಾದ ಖರ್ಚುಗಳನ್ನು ಕಡಿಮೆಗೊಳಿಸುವ ಸಲುವಾಗಿ ನಿಮಗೆ ಸಹಾಯ ಮಾಡಬಹುದಾದ ಕೆಲವು ಸಲಹೆಗಳು ಇಲ್ಲಿವೆ
ಹೊಸದಾಗಿ ನಿರ್ಮಾಣವಾದ ಅವರ ಮನೆಯಲ್ಲಿ ಯಾರೂ ಕೂಡಾ ಬಿರುಕುಗಳನ್ನು ನೋಡಲು ಬಯಸುವುದಿಲ್ಲ. ಕಾಂಕ್ರೀಟ್ ಸಂಪೂರ್ಣವಾಗಿ ದೃಢವಾದ ನಂತರ ಸಾಮಾನ್ಯವಾಗಿ ಸೀಳು ಬಿಡುವಿಕೆಯು ಕಾಣಿಸಲು ಪ್ರಾರಂಭಿಸುತ್ತದೆ.
ತಮ್ಮ ಸ್ವಂತ ಮನೆಯನ್ನು ಕಟ್ಟುವುದು ಪ್ರತಿಯೊಬ್ಬರ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ನಿಮ್ಮ ಮನೆಯು ನಿಮ್ಮ ಗುರುತಾಗಿರುತ್ತದೆ. ಹಾಗಾಗಿ, ಮನೆ ನಿರ್ಮಾಣದ ಎಲ್ಲಾ ಘಟ್ಟಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ, ಇದರಿಂದಾಗಿ ನಿಮ್ಮ ಹೊಸ ಮನೆಯ ನಿರ್ಮಿಸುವ ಕಾರ್ಯವನ್ನು ನೀವು ಪರಿಣಾಮಕಾರಿಯಾಗಿ ಯೋಜಿಸಬಹುದು ಮತ್ತು ಅದರ ಜಾಡನ್ನು ಇರಿಸಬಹುದು.
ವಾಸ್ತುಶಿಲ್ಪಿ ಅಥವಾ ಆರ್ಕಿಟೆಕ್ಟ್ ಅಂದರೆ ಯಾರು? ಸರಳವಾಗಿ ಹೇಳುವುದಾದಲ್ಲಿ, ವಾಸ್ತುಶಿಲ್ಪಿಯು ನಿಮ್ಮ ಇಡೀ ಮನೆಯ ವಿನ್ಯಾಸದ ಉಸ್ತುವಾರಿಯನ್ನು ವಹಿಸಿರುತ್ತಾರೆ. ನಿರ್ಮಾಣದ ಪ್ರಕ್ರಿಯೆಯ ಉದ್ದಕ್ಕೂ ವಾಸ್ತುಶಿಲ್ಪಿ ತನ್ನನ್ನು ತೊಡಗಿಸಿಕೊಂಡಿರುತ್ತಾರೆ, ಆದರೆ ಅವರ ಕೆಲಸದ ನಾಲಕ್ಕರಲ್ಲಿ ಮೂರರಷ್ಟು ಭಾಗವು ಯೋಜನಾ ಹಂತದಲ್ಲಿರುತ್ತದೆ.
ಮನೆ ನಿರ್ಮಿಸುವ ಪ್ರಕ್ರಿಯೆಯು ಸಾಮಾನ್ಯವಾಗಿ ಅನೇಕ ಘಟ್ಟಗಳನ್ನು ಒಳಗೊಂಡಿರುತ್ತದೆ ಮತ್ತು ಈ ಹೆಚ್ಚಿನ ಘಟ್ಟಗಳಲ್ಲಿ, ನಿಮ್ಮ ಸಿಮೆಂಟ್ ಆಯ್ಕೆಯು ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ
ನಿಮ್ಮ ಮನೆಗಾಗಿ ಎಂದಿಗೂ ಸಮುದ್ರ ಅಥವಾ ಮರುಭೂಮಿಯ ಮರಳು ಬಳಸಬೇಡಿ. ಈ ಮರಳು ಮೆರುಗು ಮತ್ತು ಹೊಳಪಿನ ನೋಟ ಹೊಂದಿದೆ ಅದರೆ ಅದು ಬಹಳ ನಯ ಮತ್ತು ವೃತ್ತಾಕಾರವಾಗಿರುತ್ತದೆ. ಈ ರೀತಿಯ ಮರಳು ಬಳಸುವುದರಿಂದ ನಿರ್ಮಿತಿ ದುರ್ಬಲವಾಗಬಹುದು.
ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಲು, ಹಣಕಾಸಿನ ಬಗ್ಗೆ ಯೋಜನೆ ಹಾಕುವುದು ಅತ್ಯಂತ ಮುಖ್ಯವಾಗಿರುತ್ತದೆ. ಹಣಕಾಸಿನ ತೊಂದರೆಯಿಂದಾಗಿ, ನಿಮ್ಮ ಮನೆಯನ್ನು ಅಪೂರ್ಣವಾಗಿರುವ ಪರಿಸ್ಥಿತಿಯಲ್ಲಿ ನೋಡಲು ನೀವು ಬಯಸುವುದಿಲ್ಲ.
ನಿಮ್ಮ ಮನೆಯನ್ನು ನಿರ್ಮಿಸುವ ಪ್ರಕ್ರಿಯೆ ಸಮಯದಲ್ಲಿ ವೆಚ್ಚವನ್ನು ಉಳಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ಎಲ್ಲವನ್ನೂ ಮುಂಚಿತವಾಗಿಯೇ ಯೋಜಿಸುವುದು ಮೊದಲ ಮತ್ತು ಪ್ರಮುಖ ಸಲಹೆಯಾಗಿದೆ. ಯಾವಾಗಲೂ ಪೂರ್ವ ಅನುಮೋದಿತ ಗೃಹ ಸಾಲವನ್ನು ತೆಗೆದುಕೊಳ್ಳಿ. ವೈಯಕ್ತಿಕ ಸಾಲಗಳು ದುಬಾರಿಯಾಗಿರುತ್ತವೆ.
ನಿಮ್ಮ ಮನೆಯ ನಿರ್ಮಾಣಕ್ಕೆ ಮೊದಲು ಮತ್ತು ಕಾಮಗಾರಿಯ ಸಮಯದಲ್ಲಿ ದೊಡ್ಡ ಬಜೆಟ್ ಅನ್ನು ನಿರ್ವಹಿಸುವುದು ನಿಮ್ಮ ಕಾಳಜಿಯಾಗಿರುತ್ತದೆ. ನಿಮ್ಮ ಬಜೆಟ್ ಅನ್ನು ತಹಬಂದಿಯಲ್ಲಿ ಇಟ್ಟುಕೊಳ್ಳಲು ಹೆಚ್ಚು ವ್ಯಾಪಕವಾಗಿ ಬಳಸಲಾಗುವ ವಿಧಾನವೆಂದರೆ ಬಜೆಟ್ ಟ್ರ್ಯಾಕರ್ ಅನ್ನು ಬಳಸುವುದು.
ನೀವು ನಿವೇಶನವನ್ನು ಖರೀದಿಸಲು ನಿರ್ಧರಿಸಿದ ನಂತರ, ನಿಮ್ಮ ಬಳಿ ಎಲ್ಲಾ ದಾಖಲೆಗಳಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇವುಗಳಿಲ್ಲದಿದ್ದಲ್ಲಿ, ನಿಮ್ಮ ಖರೀದಿಯು ವಿಳಂಬವಾಗುತ್ತದೆ.
ಪ್ಲಾನಿಂಗ್ ಹಂತದಲ್ಲಿ, ನಿರ್ಮಾಣದ ಹಲವು ಹಂತಗಳ ಉತ್ತಮ ಐಡಿಯಾ ಹೊಂದಿರುವುದು ಅತ್ಯಂತ ಪ್ರಮುಖ. ಈ ಹಂತಗಳನ್ನು ಗಮನದಲ್ಲಿಟ್ಟುಕೊಂಡರೆ, ಮನೆ ಮತ್ತು ಹಣಕಾಸುಗಳನ್ನು ಬಿಲ್ಡರ್ ಉತ್ತಮವಾಗಿ ಯೋಜಿಸಲು ಸಹಾಯವಾಗುತ್ತದೆ.
ಮನೆಯೊಂದಕ್ಕೆ ಅಡಿಪಾಯ ಹಾಕುವ ಮೊದಲು ನಿವೇಶನದಲ್ಲಿ ಅಗೆತವನ್ನು ಮಾಡಲಾಗುತ್ತದೆ. ಅಡಿಪಾಯವು ನಿಮ್ಮ ಮನೆಯ ರಚನೆಯ ತೂಕವನ್ನು ಅಡಿಪಾಯದ ಕೆಳಗಿನ ಬಲವಾದ ಮಣ್ಣಿನ ಮೇಲೆ ಹೇರುತ್ತದೆ. ಅಗೆತವನ್ನು ಸರಿಯಾದ ರೀತಿಯಲ್ಲಿ ಮಾಡದಿದ್ದಲ್ಲಿ, ಅಡಿಪಾಯವು ದುರ್ಬಲಗೊಳ್ಳುತ್ತದೆ, ಇದು ಗೋಡೆಗಳು ಮತ್ತು ಸ್ತಂಭಗಳಲ್ಲಿ ಬಿರುಕುಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.
ಬಲವಾದ ಮನೆಯ ರಹಸ್ಯವು ಅದರ ಬಲವಾದ ಅಡಿಪಾಯದಲ್ಲಿರುತ್ತದೆ. ಆದ್ದರಿಂದ, ಅಡಿಪಾಯ ಹಾಕುವ ಸಮಯದಲ್ಲಿ ಮೇಲ್ವಿಚಾರಣೆ ಮಾಡುವಾಗ ನೀವು ಜಾಗರೂಕರಾಗಿರುವುದು ಅತ್ಯಗತ್ಯವಾಗಿರುತ್ತದೆ. ಒಳಾಂಗಣಕ್ಕೆ ಹೋಲಿಸಿದಲ್ಲಿ, ಒಮ್ಮೆ ಹಾಕಿದ ಅಡಿಪಾಯವನ್ನು ಮತ್ತೆ ಬದಲಾಯಿಸಲು ಆಗುವುದಿಲ್ಲ.
ನೀವು ನಿರ್ಮಿಸುವ ಮನೆಯು ಸಾಕಷ್ಟು ಬಾಳಿಕೆ ಬರುವಂತಿರಬೇಕು. ಇಲ್ಲದಿದ್ದಲ್ಲಿ ನೀವು ರಿಪೇರಿ ಮತ್ತು ನವೀಕರಣಕ್ಕಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ವ್ಯರ್ಥ ಮಾಡಬೇಕಾಗುತ್ತದೆ.
ಗೆದ್ದಲುಗಳ ಭೀತಿಯನ್ನು ಎದುರಿಸಲು, ನಿರ್ಮಾಣದ ವಿವಿಧ ಹಂತಗಳಲ್ಲಿ ಗೆದ್ದಲು-ವಿರೋಧಿ ರಾಸಾಯನಿಕಗಳನ್ನು ಸಿಂಪಡಿಸಲು ನೀವು ತಜ್ಞರ ನೆರವನ್ನು ಪಡೆದುಕೊಳ್ಳಬೇಕು. ನೆನಪಿಡಿ, ಸಿಂಪಡಿಸುವಿಕೆಯು ಅಡಿಪಾಯದಿಂದ ಪ್ರಾರಂಭವಾಗಬೇಕು ಮತ್ತು ಮನೆಯು ಪೂರ್ಣಗೊಳ್ಳುವವರೆಗೆ ಮುಂದುವರಿಯಬೇಕು.
ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರ್‌ಗಳು ವಿಭಿನ್ನ ಪಾತ್ರಗಳನ್ನು ಹೊಂದಿದ್ದರೂ, ಇಬ್ಬರೂ ಸಮಾನವಾಗಿ ಪ್ರಮುಖವಾಗಿರುತ್ತಾರೆ. ವಿಶೇಷವಾಗಿ ನಿಮ್ಮ ಮನೆಯನ್ನು ನಿರ್ಮಿಸುವ ಯೋಜನೆ ಮತ್ತು ಮೇಲ್ವಿಚಾರಣೆಯ ಹಂತದಲ್ಲಿ. ಅವರು ಯಾವ ಪ್ರಯೋಜನವನ್ನು ಒದಗಿಸುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.
ಗೆದ್ದಲು-ವಿರೋಧಿ ಕ್ರಮಗಳನ್ನು ಮಾಡುವ ಸಮಯದಲ್ಲಿ, ಮನೆಯ ಅಡಿಭಾಗ ಹಾಗೂ ತಳಪಾಯದ ಸುತ್ತಮುತ್ತಲಿನ ಮಣ್ಣನ್ನು ಗೆದ್ದಲು-ವಿರೋಧಿ ರಾಸಾಯನಿಕ ಅಥವಾ ಕೀಟನಾಶಕದಿಂದ ಸಂಸ್ಕರಿಸಲಾಗುತ್ತದೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ