ಮನೆಯ ಫ್ಲೋರ್ ಪ್ಲಾನ್ ಎಂಬುದು ಕೋಣೆಗಳ ವಿನ್ಯಾಸ ಮತ್ತು ಮೇಲಿನಿಂದ ವೀಕ್ಷಿಸಿದ ಭೌತಿಕ ವೈಶಿಷ್ಟ್ಯಗಳನ್ನು ತೋರಿಸುವ ಮಾಪಕ-ರೇಖಾಚಿತ್ರವಾಗಿದೆ. ಇದು ಅಳತೆಗಳು, ಪೀಠೋಪಕರಣಗಳು, ಉಪಕರಣಗಳು ಮತ್ತು ಇತರ ಅಗತ್ಯ ಅಂಶಗಳನ್ನು ಒಳಗೊಂಡಿರುತ್ತದೆ. ಇದು ನಿಮ್ಮ ಮನೆಯ ನಿರ್ಮಾಣ ಮತ್ತು ವಿನ್ಯಾಸಕ್ಕೆ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಾಯೋಗಿಕ ಕಟ್ಟಡ ಯೋಜನೆ ರೇಖಾಚಿತ್ರವು ಬಿಲ್ಡರ್ ಗಳಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಎಲ್ಲಾ ವಿನ್ಯಾಸ ಅಂಶಗಳು ಒಟ್ಟಿಗೆ ಹೊಂದಿಕೊಳ್ಳುಔುದನ್ನು ಖಚಿತಪಡಿಸುತ್ತದೆ.
ನಿಮ್ಮ ಮನೆ ಯೋಜನೆಯನ್ನು ರೂಪಿಸುವುದರ ಪ್ರಾಮುಖ್ಯತೆ
ವಿವರವಾದ ಮನೆ ನಿರ್ಮಾಣ ಯೋಜನೆಯನ್ನು ರೂಪಿಸುವುದು ಹಲವಾರು ಕಾರಣಗಳಿಗಾಗಿ ಅತ್ಯಂತ ನಿರ್ಣಾಯಕ. ನಿಮ್ಮ ದೃಷ್ಟಿಯನ್ನು ಬಿಲ್ಡರ್‌ಗಳಿಗೆ ಸರಿಯಾಗಿ ಮನದಟ್ಟು ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ದೋಷಗಳು ಅಥವಾ ತಪ್ಪು ತಿಳುವಳಿಕೆಗಳನ್ನು ಕಡಿಮೆ ಮಾಡುತ್ತದೆ. ಸಮಗ್ರ ಯೋಜನೆಯು ಉತ್ತಮ ಬಜೆಟ್ ನಿರ್ವಹಣೆಗೆ ಅನುವು ಮಾಡಿಕೊಡುತ್ತದೆ. ಏಕೆಂದರೆ ನೀವು ಸಾಮಗ್ರಿಗಳು, ಕಾರ್ಮಿಕರು ಮತ್ತು ಇತರ ವೆಚ್ಚಗಳನ್ನು ಸಮಯಕ್ಕೆ ಮುಂಚಿತವಾಗಿ ಲೆಕ್ಕಹಾಕಬಹುದು. ಹೆಚ್ಚುವರಿಯಾಗಿ, ಇದು ಅಗತ್ಯ ಪರವಾನಗಿಗಳನ್ನು ಪಡೆಯಲು ಮತ್ತು ಸ್ಥಳೀಯ ಕಟ್ಟಡ ಸಂಹಿತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ಮನೆ ಯೋಜನೆಯನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು 10 ಸಲಹೆಗಳು
1) ಸಲಹೆ 1: ದೃಷ್ಟಿಯೊಂದಿಗೆ ಪ್ರಾರಂಭಿಸಿ
ನಿಮ್ಮ ಮನೆಯ ಯೋಜನೆಯನ್ನು ರೂಪಿಸಲು ಪ್ರಾರಂಭಿಸುವ ಮೊದಲು, ನಿಮಗೆ ಏನು ಬೇಕು ಎಂಬುದರ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರಿ. ನಿಮ್ಮ ಜೀವನಶೈಲಿ, ಅಗತ್ಯಗಳು ಮತ್ತು ಆದ್ಯತೆಗಳನ್ನು ಪರಿಗಣಿಸಿ. ಕೊಠಡಿಗಳ ಸಂಖ್ಯೆ, ಲೇಔಟ್ ಮತ್ತು ನೀವು ಬಯಸುವ ಯಾವುದೇ ವಿಶೇಷ ವೈಶಿಷ್ಟ್ಯಗಳ ಬಗ್ಗೆ ಯೋಚಿಸಿ.
2) ಸಲಹೆ 2: ಸಂಶೋಧನೆ ನಡೆಸಿ ಮತ್ತು ಸ್ಫೂರ್ತಿ ಪಡೆಯಿರಿ
ಸ್ಫೂರ್ತಿಗಾಗಿ ವಿವಿಧ ಮನೆ ವಿನ್ಯಾಸಗಳು ಮತ್ತು ಫ್ಲೋರ್ ಪ್ಲಾನ್‌ಗಳನ್ನು ನೋಡಿರಿ. ಮಾದರಿ ಮನೆಗಳಿಗೆ ಭೇಟಿ ನೀಡಿ, ವಾಸ್ತುಶಿಲ್ಪ ನಿಯತಕಾಲಿಕೆಗಳ ಮೇಲೆ ಕಣ್ಣಾಡಿಸಿ ಮತ್ತು ಆನ್ ಲೈನ್‌ನಲ್ಲಿ ದೊರೆಯುವ ಮಾಹಿತಿಯನ್ನು ಅನ್ವೇಷಿಸಿ. ನಿಮ್ಮ ಶೈಲಿ ಮತ್ತು ಕ್ರಿಯಾತ್ಮಕ ಅಗತ್ಯಗಳನ್ನು ಪ್ರತಿಫಲಿಸುವ ವಿಚಾರಗಳನ್ನು ಸಂಗ್ರಹಿಸಿ.
3) ಸಲಹೆ 3: ನಿಮ್ಮ ಬಜೆಟ್ ಅನ್ನು ನಿರ್ಧರಿಸಿ
ಬಜೆಟ್ ಅನ್ನು ಮೊದಲೇ ನಿರ್ಧರಿಸುವುದು ನಿಮ್ಮ ವಿನ್ಯಾಸ ಆಯ್ಕೆಗಳಿಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ. ನಿರ್ಮಾಣ ವೆಚ್ಚಗಳು, ಸಾಮಗ್ರಿಗಳು, ಕಾರ್ಮಿಕರು ಮತ್ತು ಯಾವುದೇ ಹೆಚ್ಚುವರಿ ವೆಚ್ಚಗಳನ್ನು ಪರಿಗಣಿಸಿ. ಸ್ಪಷ್ಟ ಬಜೆಟ್ ಹೊಂದಿರುವುದು ಅತಿಯಾದ ವೆಚ್ಚವನ್ನು ತಡೆಯುತ್ತದೆ ಮತ್ತು ಅಗತ್ಯ ವೈಶಿಷ್ಟ್ಯಗಳಿಗೆ ಆದ್ಯತೆ ನೀಡಲು ಸಹಾಯ ಮಾಡುತ್ತದೆ.
4) ಸಲಹೆ 4: ಸರಿಯಾದ ನಿವೇಶನ ಆಯ್ಕೆ ಮಾಡಿ