ಗೋಡೆಯನ್ನು ನಯವಾಗಿಸುವುದರ ಜತೆಗೆ ವಾಲ್ ಪುಟ್ಟಿ ಬಳಕೆಯಿಂದ ಹಲವಾರು ಅನುಕೂಲಗಳು ಇವೆ. ದೀರ್ಘ ಕಾಲ ಪೇಂಟ್ ಬಾಳಿಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಪುಟ್ಟಿಯ ಬಳಕೆ ಅತ್ಯುತ್ತಮ ತಳಪಾಯ ಸೃಷ್ಟಿಸುತ್ತಿದೆ. ಇದರ ಜತೆಗೆ ಗೋಡೆಯ ಒಟ್ಟಾರೆ ನೋಟವನ್ನು ಸುಂದರವನ್ನಾಗಿಸುವ ನಿಟ್ಟಿನಲ್ಲಿ ನೆರವಾಗುತ್ತದೆ. ಪುಟ್ಟಿಯನ್ನು ಬಳಕೆ ಮಾಡುವುದರಿಂದ ಲಭಿಸುವ ಲಾಭಗಳು ಹೀಗೆ ಇವೆ:
1) ಮೃದು ಮತ್ತು ಮೇಲ್ಸ್ತರ
ಗೋಡೆಗಳಲ್ಲಿ ಇರುವ ಬಿರುಕು ಮತ್ತು ಸಣ್ಣ ಪ್ರಮಾಣದ ದೋಷಗಳನ್ನು ವಾಲ್ ಪುಟ್ಟಿಯನ್ನು ಲೇಪಿಸಿ ನಿವಾರಿಸಬಹುದು. ಅದರ ಮೂಲಕ ಗೋಡೆಯನ್ನು ಚೆಂದವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಪುಟ್ಟಿಯನ್ನು ಬಳಸಿದ ಬಳಿಕ ಸುಲಭವಾಗಿ ಪೇಂಟ್ ಮಾಡಲು ಅನುಕೂಲವಾಗುತ್ತದೆ. ಜತೆಗೆ ಅತ್ಯುತ್ತಮವಾಗಿ ಕೆಲಸವನ್ನು ಮುಕ್ತಾಯಗೊಳಿಸಲು ನೆರವಾಗುತ್ತದೆ. ಮನೆಯ ಒಳಗೆ ಮತ್ತು ಹೊರಗಿನ ಗೋಡೆಗಳೂ ಸೇರಿದಂತೆ ಎಲ್ಲ ರೀತಿಯ ಗೋಡೆಗಳಿಗೂ ವಾಲ್ ಪುಟ್ಟಿ ಅನುಕೂಲವಾಗುತ್ತದೆ.
2) ದೀರ್ಘ ಕಾಲದ ವರೆಗೆ ಬಾಳಿಕೆ
ಗೋಡೆಗೆ ಪುಟ್ಟಿಯನ್ನು ಲೇಪಿಸುವುದರಿಂದ ತೇವಾಂಶ, ಆದ್ರರ್ತತೆ ಸೇರಿದಂತೆ ಪರಿಸರದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳಿಂದ ರಕ್ಷಣೆ ಕೊಡುತ್ತದೆ. ಬಿರುಕು, ನೀರು ಸೇರಿದಂತೆ ಇನ್ನಿತರ ಕಾರಣಗಳಿಂದ ಪೇಂಟ್ ಅನ್ನು ಸ್ಥಿರವಾಗಿ ಇರಿಸಲು ನೆರವಾಗುತ್ತದೆ.
3) ಪೇಟ್ ನ ಗುಣಮಟ್ಟ ಹೆಚ್ಚಿಸಲು ನೆರವು
ಪುಟ್ಟಿಯನ್ನು ಲೇಪಿಸಿದ್ದರಿಂದ ಗೋಡೆ ನಯವಾಗುತ್ತದೆ. ಇದರಿಂದಾಗಿ ಪೇಂಟ್ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಳ್ಳಲು ಸಹಾಯಕವಾಗುತ್ತದೆ. ಇದರ ಜತೆಗೆ ಪೇಂಟ್ ದೀರ್ಘಕಾಲದ ವರೆಗೆ ಗೋಡೆಯಲ್ಲಿ ಅಂಟಿಕೊಂಡು ಇರಲು ನೆರವಾಗುತ್ತದೆ. ಹೀಗಾಗಿ ಪದೇ ಪದೆ ಗೋಡೆಗೆ ಪೇಂಟ್ ಮಾಡುವ ಅಗತ್ಯ ಬರುವುದಿಲ್ಲ. ಇದರಿಂದಾಗಿ ಹಣ ಮತ್ತು ಸಮಯದ ಉಳಿತಾಯವೂ ಆಗುತ್ತದೆ.
4) ಎಲ್ಲ ರೀತಿಯ ಗೋಡೆಗಳಿಗೆ ಸೂಕ್ತ
ಕಾಂಕ್ರೀಟ್, ಗಾರೆಯುಕ್ತ ಅಥವಾ ಕೇವಲ ಗೋಡೆ ಸೇರಿದಂತೆ ಎಲ್ಲ ವರ್ಗಕ್ಕೂ ವಾಲ್ ಪುಟ್ಟಿಯನ್ನು ಬಳಸಬಹುದು. ಗೋಡೆಯ ಹೊರಗೆ ಅಥವಾ ಒಳಗಿನ ಭಾಗಕ್ಕೆ ಕೂಡ ಉಪಯೋಗಿಸಬಹುದು. ಮನೆಯ ಗೋಡೆಯ ದುರಸ್ತಿಯಲ್ಲೂ ಉಪಯೋಗಿಸಬಹುದು.
5) ಆಕರ್ಷಕ ವಿನ್ಯಾಸಗಳಿಗೆ ಅತ್ಯುತ್ತಮ ಫಿನಿಶ್ ನೀಡಲು ಅನುಕೂಲ
When creating decorative wall finishes, wall putty provides the perfect base. Wall putty design in homes allows for the smooth application of textured patterns, geometric designs, or other creative finishes, giving your walls a stunning look that stands out.
6) ಎಲ್ಲ ರೀತಿಯ ಗೋಡೆಗಳಿಗೆ ಸೂಕ್ತ
ಮನೆಯ ಗೋಡೆಗಳಿಗೆ ವಾಲ್ ಪುಟ್ಟಿ ಬಳಸುವುದರಿಂದ ನಿಮಗೆ ಖರ್ಚು ಕಡಿಮೆಯಾಗಲಿದೆ. ಜತೆಗೆ ನಿಮ್ಮ ಮನೆಯ ಸೌಂದರ್ಯ ಕೂಡ ವೃದ್ಧಿಸಲಿದೆ. ಪುಟ್ಟಿ ಬಳಕೆ ಮಾಡಿದ್ದರಿಂದ ಗೋಡೆಯ ನಿರ್ವಹಣೆಯ ಅವಧಿ ಹೆಚ್ಚಾಗಲಿದೆ ಮತ್ತು ದೀರ್ಘ ಕಾಲದ ವರೆಗೆ ಪೇಂಟ್ ಮಾಡುವುದನ್ನು ತಪ್ಪಿಸುತ್ತದೆ. ಹೀಗಾಗಿ, ಇದೊಂದು ಸ್ಮಾರ್ಟ್ ಆಯ್ಕೆ ಎಂದು ಹೇಳಬಹುದು.