ಗ್ರಿಲೇಜ್ ಫೌಂಡೇಶನ್ ನಿರ್ಮಾಣ ಪ್ರಕ್ರಿಯೆಯು ಸಮಗ್ರವಾಗಿದ್ದು, ಆರಂಭಿಕ ಹಂತದಿಂದ ಯೋಜನೆ ಪೂರ್ಣಗೊಳ್ಳುವವರೆಗಿನ ಸಂಪೂರ್ಣ ನಿರ್ಮಾಣವನ್ನು ಇದು ಒಳಗೊಂಡಿದೆ. ಹಂತಗಳ ವಿವರ ಮುಂದಿದೆ:
1) ವಿನ್ಯಾಸ ಮತ್ತು ಯೋಜನೆ: ರಚನೆಯ ಹೊರೆಯ ಅವಶ್ಯಕತೆಗಳು, ಮಣ್ಣಿನ ಪರಿಸ್ಥಿತಿಗಳು ಮತ್ತು ಪರಿಸರ ಅಂಶಗಳ ಆಧಾರದ ಮೇಲೆ ಎಂಜಿನಿಯರ್‌ಗಳು ಫೌಂಡೇಶನ್ ಅನ್ನು ವಿನ್ಯಾಸಗೊಳಿಸುತ್ತಾರೆ. ಅಗತ್ಯವಿರುವ ವಸ್ತುಗಳ ಪ್ರಕಾರ ಮತ್ತು ಸೈಜ್ ಅನ್ನು ನಿರ್ದಿಷ್ಟಪಡಿಸುವ ವಿವರವಾದ ಯೋಜನೆಗಳನ್ನು ರಚಿಸಲಾಗುತ್ತದೆ.
2) ಪಾಯ ಅಗೆಯುವುದು ಹಾಗೂ ತಯಾರಿ: ವಿನ್ಯಾಸ ಒಪ್ಪಪಿಗೆಯ ನಂತರ, ಭೂಮಿಯನ್ನು ಅಗತ್ಯಕ್ಕೆ ತಕ್ಕ ಆಳದವರೆಗೆ ಅಗೆಯಲಾಗುತ್ತದೆ. ಜೊತೆಗೆ ಮಣ್ಣನ್ನು ಗಟ್ಟಿಗೊಳಿಸಲಾಗುತ್ತದೆ ಮತ್ತು ದೃಢತೆಯನ್ನು ಮತ್ತು ಒಳಚರಂಡಿಯನ್ನು ಹೆಚ್ಚಿಸಲು ಮರಳು ಅಥವಾ ಜಲ್ಲಿ ಪದರವನ್ನು ಸೇರಿಸಬಹುದು.
3) ಗ್ರಿಲ್‌ಗಳ ನಿಯೋಜನೆ:
a) ಉಕ್ಕಿನ ಗ್ರಿಲೇಜ್‌ಗಳಿಗೆ, ಉಕ್ಕಿನ ಬೀಮ್‌ಗಳನ್ನು ವಿನ್ಯಾಸದ ಪ್ರಕಾರ ಇರಿಸಲಾಗುತ್ತದೆ, ಭಾರವಾದ ಬೀಮ್ಗಳ ಕೆಳಗಿನ ಪದರದಿಂದ ಪ್ರಾರಂಭಿಸಿ ನಂತರ ಲಂಬವಾಗಿ ಜೋಡಿಸಲಾದ ಹಗುರವಾದ ಬೀಮ್ಗಳ ಪದರವನ್ನು ಮಾಡಲಾಗುತ್ತದೆ.
ಬಿ) ಟಿಂಬರ್ ಗ್ರಿಲೇಜ್‌ಗಳಿಗೆ, ಸಂಸ್ಕರಿಸಿದ ಕಟ್ಟಿಗೆಯ ಬೀಮ್‌ಗಳನ್ನು ಇದೇ ಮಾದರಿಯಲ್ಲಿ ಇರಿಸಲಾಗುತ್ತದೆ. ಗ್ರಿಡ್ ಮಾದರಿಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಬೀಮ್ ಅನ್ನು ಜಾಗರೂಕತೆಯಿಂದ ಇಡಲಾಗುತ್ತದೆ.
4) ಬಲವರ್ಧನೆ (ಅಗತ್ಯವಿದ್ದರೆ): ಫೌಂಡೇಶನ್‌ನ ಶಕ್ತಿಯನ್ನು ಹೆಚ್ಚಿಸಲು ಉಕ್ಕಿನ ಸರಳುಗಳಂತಹ ಹೆಚ್ಚುವರಿ ಬಲವರ್ಧನೆಯ ವಸ್ತುಗಳನ್ನು ಸೇರಿಸಬಹುದು. ಹೆಚ್ಚಿನ ಹೊರೆಗಳನ್ನು ನಿರೀಕ್ಷಿಸುವ ಉಕ್ಕಿನ ಗ್ರಿಲೇಜ್‌ಗಳಲ್ಲಿ ಈ ಹಂತವು ಹೆಚ್ಚು ಸಾಮಾನ್ಯವಾಗಿದೆ.
5) ಕಾಂಕ್ರೀಟ್ ಸುರಿಯುವುದು (ಅಗತ್ಯವಾದಲ್ಲಿ): ಕಾಂಕ್ರೀಟ್ ಗ್ರಿಲೇಜ್ ಫೌಂಡೇಶನ್ ಅನ್ನು ನಿರ್ಮಿಸುತ್ತಿರುವ ಸಂದರ್ಭಗಳಲ್ಲಿ, ಜೋಡಿಸಲಾದ ಗ್ರಿಲ್‌ಗಳ ಮೇಲೆ ಕಾಂಕ್ರೀಟ್ ಹಾಕಲಾಗುತ್ತದೆ, ಇದರಿಂದಾಗಿ ಗಟ್ಟಿಯಾದ ಅಡಿಪಾಯ ಸೃಷ್ಟಿಯಾಗುತ್ತದೆ. ಕಾಂಕ್ರೀಟ್ ಅನ್ನು ಕ್ಯೂರಿಂಗ್ ಮಾಡಲು ಹಾಗೂ ಗಟ್ಟಿಯಾಗಲು ಇದು ಸಹಾಯ ಮಾಡುತ್ತದೆ. ಇದು ಮುಂದಿನ ಹಂತದ ನಿರ್ಮಾಣಕ್ಕೆ ಶಕ್ತಿಶಾಲಿ ಅಡಿಪಾಯವನ್ನು ಒದಗಿಸುತ್ತದೆ.
6) ಅಂತಿಮ ತಪಾಸಣೆ ಮತ್ತು ಪರೀಕ್ಷೆ: ಫೌಂಡೇಶನ್ ಅನ್ನು ನಿರ್ಮಾಣ ಮಾಡಿದ ನಂತರ, ಜೋಡಣೆ, ಲೇವಲ್ ಹಾಗೂ ಸ್ಟ್ರಕ್ಚರ್ನ ಸಮಗ್ರತೆಯನ್ನು ಪರಿಶೀಲಿಸಲು ಅಂತಿಮ ಪರೀಕ್ಷೆಯನ್ನು ಮಾಡಲಾಗುತ್ತದೆ. ನಿರ್ಮಾಣವಾಗಿರುವ ಫೌಂಡೇಶನ್ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ.
7) ಪೂರ್ಣಗೊಳಿಸುವಿಕೆ: ಎಲ್ಲಾ ಪರಿಶೀಲನೆಗಳು ಪೂರ್ಣಗೊಂಡ ನಂತರ, ಫೌಂಡೇಶನ್ ಇಡೀ ಸ್ಟ್ರಕ್ಚರ್ನ ಅಗತ್ಯಕ್ಕೆ ತಕ್ಕಂತೆ ಸಿದ್ಧವಾಗುತ್ತದೆ, ಇದು ಗ್ರಿಲೇಜ್ ಅಡಿಪಾಯ ನಿರ್ಮಾಣ ಪ್ರಕ್ರಿಯೆಯ ಪೂರ್ಣತೆಯನ್ನು ಒದಗಿಸುತ್ತದೆ.