ಕೊಟ್ಟಿಗೆ ನಿರ್ಮಾಣ ಮಾಡಲು ಸರಿಯಾದ ವಿಧಾನ
ಕೊಟ್ಟಿಗೆಯು ಆಕಳು ಮತ್ತು ಎಮ್ಮೆಗಳಂತಹ ಜಾನುವಾರುಗಳಿಗೆ ಅತ್ಯಂತ ಪ್ರಮುಖ ವಸತಿ ವ್ಯವಸ್ಥೆಯಾಗಿದೆ. ಇಂತಹ ಕಟ್ಟಡದ ನಿರ್ಮಾಣ ಮಾಡುವುದಕ್ಕೂ ಮೊದಲು, ಕೆಲವು ಪ್ರಮುಖ ಸಂಗತಿಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳೆಂದರೆ, ವಾತಾಯನ ವ್ಯವಸ್ಥೆ, ಕಟ್ಟಡದ ಗೋಡೆ ಎತ್ತರ, ತೇವಾಂಶವನ್ನು ತಡೆಯಲು ವಾಟರ್‌ಪ್ರೂಫಿಂಗ್ ಏಜೆಂಟ್‌ಗಳ ಬಳಕೆ ಮತ್ತು ಇತರೆ. ಇದರೊಂದಿಗೆ, ಸಾಮಾನ್ಯ ತಪ್ಪುಗಳನ್ನು ನೀವು ದೂರವಿಡಬಹುದು ಮತ್ತು ಬಲಶಾಲಿಯಾದ ಪ್ರಾಥಮಿಕ ಸೆಟಪ್ ಹೊಂದಿರಬಹುದು.