ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಕಾರ್ಪೆಟ್ ಏರಿಯಾ ಮತ್ತು ಬಿಲ್ಟ್-ಅಪ್ ಏರಿಯಾ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳುವುದು

Share:


ಈ ಅಂಶಗಳನ್ನು ಗಮನಿಸಿ

 

  • ಕಾರ್ಪೆಟ್ ಏರಿಯಾ ಎಂದರೆ ಮನೆಯ ಗೋಡೆಗಳ ಒಳಗಡೆ ನಾವು ಬಳಸಬಲ್ಲ ಜಾಗಕ್ಕೆ ಹಾಗೆ ಹೇಳಲಾಗುತ್ತದೆ.
 
  • ಬಿಲ್ಟ್-ಅಪ್ ಏರಿಯಾದಲ್ಲಿ ಕಾರ್ಪೆಟ್ ಮತ್ತು ಗೋಡೆಗಳು ಮತ್ತಿತರೆ ಕಟ್ಟಡದ ಇತರೆ ಭಾಗಗಳು ಒಳಗೊಂಡಿರುತ್ತವೆ.
 
  • ಕಾರ್ಪೆಟ್ ಮತ್ತು ಬಿಲ್ಟ್-ಅಪ್ ಏರಿಯಾ ವ್ಯತ್ಯಾಸವು ಒಟ್ಟು ವೆಚ್ಚ ಹಾಗೂ ಮನೆಯ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
 
  • ಬಿಲ್ಟ್-ಅಪ್ ಪ್ರದೇಶ ಹಾಗೂ ಕಾರ್ಪೆಟ್ ಪ್ರದೇಶವನ್ನು ಅರ್ಥ ಮಾಡಿಕೊಳ್ಳುವುದು ಮಾಹಿತಿಪೂರ್ಣ ಗೃಹ ನಿರ್ಮಾಣದ ನಿರ್ಧಾರಗಳನ್ನು ಕೈಗೊಳ್ಳಲು ಅಗತ್ಯವಾಗಿದೆ.


ಕಾರ್ಪೆಟ್ ಏರಿಯಾ ಮತ್ತು ಬಿಲ್ಟ್-ಅಪ್ಏರಿಯಾದಂತಹ ಪದಗಳು ಮನೆಯ ಹಲವಾರು ಆಯಾಮಗಳನ್ನು ವಿವರಿಸುತ್ತವೆ. ಅವು ಮನೆಯ ಬಳಕೆಯ ಮೇಲೆ ಪರಿಣಾಮ ಬೀರುವುದರಿಂದ ಕೊಳ್ಳುಗರು ಮತ್ತು ಮಾರಾಟಗಾರರಿಗೆ ಈ ಪದಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಬ್ಲಾಗ್ ಕಾರ್ಪೆಟ್ ಮತ್ತು ಬಿಲ್ಟ್-ಅಪ್ ಏರಿಯಾಗಳ ನಡುವಿನ ಪ್ರಮುಖ ವ್ಯತ್ಯಾಸಗಳೇನು, ಅವುಗಳ ಪ್ರಾಮುಖ್ಯತೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ವಿವರಿಸುತ್ತದೆ.

 

 


ಬಿಲ್ಟ್-ಅಪ್ ಮತ್ತು ಕಾರ್ಪೆಟ್ ಏರಿಯಾ ಎಂದರೇನು?

ಕಾರ್ಪೆಟ್ ಏರಿಯಾಮತ್ತು ಬಿಲ್ಟ್-ಅಪ್ ಏರಿಯಾ ನಡುವಿನ ವ್ಯತ್ಯಾಸ ಚರ್ಚಿಸುವ ಮುನ್ನ, ಈ ಪದಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

 

ಕಾರ್ಪೆಟ್ ಏರಿಯಾ ಎಂದರೆ

ಇದು ಮನೆಯ ಗೋಡೆಗಳ ಒಳಗಡೆ ಒಟ್ಟು ವಾಸಿಸುವ ಪ್ರದೇಶ. ಇದರಲ್ಲಿ ಗೋಡೆಗಳ ದಪ್ಪ ಮತ್ತು ಬಾಲ್ಕನಿಗಳು, ಟೆರೇಸ್ ಗಳು ಅಥವಾ ಇತರೆ ವಿಸ್ತರಣೆಗಳಂತಹ ಇತರೆ ಯಾವುದೇ ಹೆಚ್ಚುವರಿ ಪ್ರದೇಶ ಹೊರತಾಗಿರುತ್ತದೆ. ಇಲ್ಲಿ ನೀವು ಕಾರ್ಪೆಟ್ ಹಾಕಬಲ್ಲಿರಿ, ಆದ್ದರಿಂದ ಹೀಗೆ ಹೇಳಲಾಗುತ್ತದೆ.

 

ಬಿಲ್ಟ್-ಅಪ್ ಏರಿಯಾ ಎಂದರೆ

ಬಿಲ್ಟ್-ಅಪ್ ಏರಿಯಾದಲ್ಲಿ ಕಾರ್ಪೆಟ್ ಏರಿಯಾ ಹಾಗೂ ಗೋಡೆಗಳ ದಪ್ಪ ಮತ್ತು ಬಾಲ್ಕನಿಗಳು, ಟೆರೇಸ್ ಗಳು ಅಥವಾ ಇತರೆ ವಿಸ್ತರಣೆಗಳಿರುತ್ತವೆ. ಸರಳವಾಗಿ ಹೇಳಬೇಕೆಂದರೆ, ಇದು ಮನೆಯ ನಿರ್ಮಿಸಬಲ್ಲ ಒಟ್ಟು ಪ್ರದೇಶವಾಗಿದೆ.

 

ಕಾರ್ಪೆಟ್ ಏರಿಯಾ ಮತ್ತು ಬಿಲ್ಟ್-ಅಪ್ ಏರಿಯಾ ಅರ್ಥ ತಿಳಿದುಕೊಳ್ಳುವುದು ಆಸ್ತಿಯ ಮೌಲ್ಯವನ್ನು ಅಂದಾಜಿಸಲು ನೆರವಾಗುತ್ತದೆ.

 

 

ಕಾರ್ಪೆಟ್ ಏರಿಯಾ ಹಾಗೂ ಬಿಲ್ಟ್-ಅಪ್ ಏರಿಯಾ ನಡುವಿನ ವ್ಯತ್ಯಾಸ

 

1. ಅಳತೆಯ ವ್ಯಾಪ್ತಿ:

 

  • ಕಾರ್ಪೆಟ್ ಏರಿಯಾ ಎಂದರೆ ಮನೆಯ ಒಳಗಿನ ಸ್ಥಳ
 
  • ಬಿಲ್ಟ್-ಅಪ್ ಏರಿಯಾ ಕಾರ್ಪೆಟ್ ಮತ್ತು ಗೋಡೆಗಳು ಹಾಗೂ ಹೆಚ್ಚುವರಿ ಸ್ಥಳಗಳನ್ನು ಒಳಗೊಂಡು ಮನೆಯ ಇತರೆ ಅಂಶಗಳನ್ನು ಒಳಗೊಂಡಿರುತ್ತದೆ.

 

2. ಬಳಕೆ

 

  • ಕಾರ್ಪೆಟ್ ಏರಿಯಾವು ಪೀಠೋಪಕರಣಗಳನ್ನು ಇರಿಸಬಲ್ಲ ನಾವು ಬಳಸಬಲ್ಲ ಸ್ಥಳವನ್ನು ತೋರುತ್ತದೆ.
 
  • ಬಿಲ್ಟ್-ಅಪ್ ಏರಿಯಾ ಮನೆಯ ಸ್ಥಳದ ಸಂಪೂರ್ಣ ನೋಟ ನೀಡುತ್ತದೆ.

 

3.ಬೆಲೆಯ ಪರಿಣಾಮ:

 

  • ಮನೆಗಳನ್ನು ಸಾಮಾನ್ಯವಾಗಿ ಬಿಲ್ಟ್-ಅಪ್ ಏರಿಯಾ ಆಧರಿಸಿ ನಿರ್ಧರಿಸಲಾಗುತ್ತದೆ, ಅದು ಕಾರ್ಪೆಟ್ ಏರಿಯಾ ಆಧರಿಸಿದ ಬೆಲೆಗಿಂತ ಹೆಚ್ಚಿರಬಹುದು.

 

 

ಕಾರ್ಪೆಟ್ ಏರಿಯಾ ಮತ್ತು ಬಿಲ್ಟ್-ಅಪ್ ಏರಿಯಾದ ಪ್ರಾಮುಖ್ಯತೆ

ಬಿಲ್ಟ್-ಅಪ್ ಏರಿಯಾ ಹಾಗೂ ಕಾರ್ಪೆಟ್ ಏರಿಯಾ ನಡುವಿನ ವ್ಯತ್ಯಾಸವು ಹಲವಾರು ಕಾರಣಗಳಿಗೆ ಮುಖ್ಯವಾಗಿದೆ:

 

1. ವೆಚ್ಚದ ಲೆಕ್ಕಾಚಾರ: ಬಿಲ್ಟ್-ಅಪ್ ಏರಿಯಾ ಅರ್ಥ ತಿಳಿಯುವುದು ನಿಖರ ವೆಚ್ಚವನ್ನು ಲೆಕ್ಕ ಹಾಕಲು ನೆರವಾಗುತ್ತದೆ, ಏಕೆಂದರೆ ಬಹಳಷ್ಟು ರಿಯಲ್ ಎಸ್ಟೇಟ್ ವಹಿವಾಟುಗಳು ಇದನ್ನೇ ಆಧರಿಸಿ ನಡೆಯುತ್ತವೆ. ನಮ್ಮ ಹೋಮ್ ಕನ್ಸ್ಟ್ರಕ್ಷನ್ ಕಾಸ್ಟ್ ಕ್ಯಾಲ್ಕುಲೇಟರ್ ಪ್ರಯತ್ನಿಸಿ.

2.ಸ್ಥಳ ಯೋಜನೆ: ಕಾರ್ಪೆಟ್ ಏರಿಯಾ ಸ್ಥಳ ಯೋಜನೆಯಲ್ಲಿ ಹಾಗೂ ಪೀಠೋಪಕರಣ ಜೋಡಣೆಯಲ್ಲಿ ಹೆಚ್ಚು ಮುಖ್ಯವಾಗಿರುತ್ತದೆ ಬಿಲ್ಟ್-ಅಪ್ ಏರಿಯಾ ಕಟ್ಟಡದ ಇತರೆ ಒಳಗೊಂಡು ಒಟ್ಟಾರೆ ಮನೆಯ ಪಕ್ಷಿನೋಟ ನೀಡುತ್ತದೆ.

3. ಹೂಡಿಕೆಯ ನಿರ್ಧಾರಗಳು: ಕಾರ್ಪೆಟ್ ಏರಿಯಾ ಮತ್ತು ಬಿಲ್ಟ್-ಅಪ್ ಏರಿಯಾ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳುವುದು ಖರೀದಿಯ ನಿರ್ಧಾರಗಳ ಮೇಲೆ ಹಾಗೂ ಹೂಡಿಕೆದಾರರು ಹಾಗೂ ಖರೀದಿದಾರರಿಗೆ ಭವಿಷ್ಯದ ಮರು ಮಾರಾಟ ಮೌಲ್ಯದ ಮೇಲೆ ಪರಿಣಾಮ ಬೀರಬಹುದು.

 

 

ಕಾರ್ಪೆಟ್ ಏರಿಯಾ ಮತ್ತು ಬಿಲ್ಟ್-ಅಪ್ ಏರಿಯಾ ಮತ್ತು ಸೂಪರ್ ಬಿಲ್ಟ್-ಅಪ್ ಏರಿಯಾ ಲೆಕ್ಕ ಹಾಕುವುದು ಹೇಗೆ?

ಬಿಲ್ಟ್-ಅಪ್ ಏರಿಯಾ ಹಾಗೂ ಕಾರ್ಪೆಟ್ ಏರಿಯಾ ನಿಖರವಾಗಿ ಅಂದಾಜಿಸಲು:

 

1. ಕಾರ್ಪೆಟ್ ಏರಿಯಾ: ಪ್ರತಿ ಕೋಣೆಯ ಉದ್ದ ಮತ್ತು ಅಗಲ ಅಳತೆ ಮಾಡಿ ಮತ್ತು ಗುಣಿಸುವ ಮೂಲಕ ಬಳಕೆಯ ಪ್ರದೇಶ ಪಡೆಯಿರಿ.

2. ಬಿಲ್ಟ್-ಅಪ್ ಏರಿಯಾ : ಕಾರ್ಪೆಟ್ ಏರಿಯಾವನ್ನು ಗೋಡೆಗಳು, ಬಾಲ್ಕನಿಗಳು ಮತ್ತಿತರೆ ಕಟ್ಟಡದ ಅಂಶಗಳು ಆಕ್ರಮಿಸಿಕೊಂಡಿರುವ ಪ್ರದೇಶಕ್ಕೆ ಸೇರಿಸಿ.

3. ಸೂಪರ್ ಬಿಲ್ಟ್-ಅಪ್ ಏರಿಯಾ: ಇದರಲ್ಲಿ ಬಿಲ್ಟ್-ಅಪ್ ಏರಿಯಾ, ಲಾಬಿಗಳು, ಮೆಟ್ಟಿಲುಗಳು ಮತ್ತು ಎಲಿವೇಟರ್ ಗಳಂತಹ ಸಾಮಾನ್ಯ ಪ್ರದೇಶಗಳ ಪ್ರಮಾಣಾವಾರು ಪಾಲಿರುತ್ತದೆ.

 

ಈ ಲೆಕ್ಕಾಚಾರಗಳು ನೀವು ಮನೆಯಲ್ಲಿ ಒಟ್ಟು ಲಭ್ಯವಿರುವ ಸ್ಥಳವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.



 

ಕಾರ್ಪೆಟ್ ಏರಿಯಾ ಮತ್ತ ಬಿಲ್ಟ್-ಅಪ್ ಏರಿಯಾಗಳನ್ನು ಅರ್ಥ ಮಾಡಿಕೊಳ್ಳುವುದು ಮಾಹಿತಿಪೂರ್ಣ ನಿರ್ಧಾರಗಳನ್ನು ಕೈಗೊಳ್ಳಲು ಅಗತ್ಯವಾಗಿದೆ. ಕಾರ್ಪೆಟ್ ಏರಿಯಾ ಬಳಸಬಲ್ಲ ಸ್ಥಳಕ್ಕೆ ಆದ್ಯತೆ ನೀಡಿದರೆ, ಬಿಲ್ಟ್-ಅಪ್ ಏರಿಯಾ ಆಸ್ತಿಯ ಒಟ್ಟಾರೆ ಸ್ಥಳದ ಸಮಗ್ರ ನೋಟ ನೀಡುತ್ತದೆ. ಎರಡೂ ಮಾನದಂಡಗಳು ಆಸ್ತಿಯ ಮೌಲ್ಯ, ವೆಚ್ಚದ ಲೆಕ್ಕಾಚಾರ ಮತ್ತು ಸ್ಥಳ ಯೋಜನೆಯಲ್ಲಿ ಮುಖ್ಯವಾಗಿವೆ.




ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

1) ಬಿಲ್ಟ್-ಅಪ್ ಏರಿಯಾದಲ್ಲಿ ಬಾಲ್ಕನಿ ಒಳಗೊಂಡಿರುತ್ತದೆಯೇ?

ಹೌದು, ಬಾಲ್ಕನಿಯು ಬಿಲ್ಟ್-ಅಪ್ ಏರಿಯಾದಲ್ಲಿ ಒಳಗೊಂಡಿರುತ್ತದೆ, ಆದರೆ ಕಾರ್ಪೆಟ್ ಏರಿಯಾದಲ್ಲಲ್ಲ.

 

2) ರೆರಾ ಕಾರ್ಪೆಟ್ ಏರಿಯಾ ಎಂದರೇನು?

ರೆರಾ ಕಾರ್ಪೆಟ್ ಏರಿಯಾವನ್ನು ರಿಯಲ್ ಎಸ್ಟೇಟ್ (ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯ್ದೆಯ ಅನ್ವಯ ಅಪಾರ್ಟ್ಮೆಂಟ್ ಗೋಡೆಗಳ ಒಳಗಿರುವ ನಿವ್ವಳ ಬಳಸಬಲ್ಲ ಪ್ರದೇಶವಾಗಿ ವ್ಯಾಖ್ಯಾನಿಸಲಾಗುತ್ತದೆ.

 

3) ಕಾರ್ಪೆಟ್ ಏರಿಯಾವನ್ನು ಬಿಲ್ಟ್-ಅಪ್ ಏರಿಯಾವನ್ನಾಗಿ ನೀವು ಹೇಗೆ ಪರಿವರ್ತಿಸುತ್ತೀರಿ?

ಕಾರ್ಪೆಟ್ ಏರಿಯಾವನ್ನು ಬಿಲ್ಟ್-ಅಪ್ ಏರಿಯಾವನ್ನಾಗಿ ಪರಿವರ್ತಿಸಲು ಗೋಡೆಗಳ ದಪ್ಪ ಮತ್ತು ಬಾಲ್ಕನಿಗಳಂತಹ ಯಾವುದೇ ಹೆಚ್ಚುವರಿ ಸ್ಥಳಗಳನ್ನು ಕಾರ್ಪೆಟ್ ಏರಿಯಾಗೆ ಸೇರಿಸಿ.

 

4) ಬಿಲ್ಟ್-ಅಪ್ ಏರಿಯಾದಲ್ಲಿ ಎಲ್ಲ ಮಹಡಿಗಳೂ ಇರುತ್ತವೆಯೇ?

ಇಲ್ಲ, ಬಿಲ್ಟ್-ಅಪ್ ಏರಿಯಾ ಎಂದರೆ ನಿರ್ದಿಷ್ಟ ಮಹಡಿ ಅಥವಾ ಯೂನಿಟ್ ಪ್ರದೇಶವಾಗಿರುತ್ತದೆ ಮತ್ತು ನಮೂದಿಸದ ಹೊರತು ಎಲ್ಲ ಮಹಡಿಗಳನ್ನೂ ಪರಿಗಣಿಸುವುದಿಲ್ಲ.

 

5) ಒಟ್ಟು ಬಿಲ್ಟ್-ಅಪ್ ಏರಿಯಾ ಎಂದರೇನು?

ಒಟ್ಟು ಬಿಲ್ಟ್-ಅಪ್ ಏರಿಯಾ ಎಲ್ಲ ಬಿಲ್ಟ್-ಅಪ್ ಏರಿಯಾಗಳ ಮೊತ್ತವಾಗಿದ್ದು ಅದರಲ್ಲಿ ಪ್ರತಿ ಮಹಡಿ, ಗೋಡೆಗಳು, ಬಾಲ್ಕನಿಗಳು ಮತ್ತಿತರೆ ವಿಸ್ತರಣೆಗಳಿರುತ್ತವೆ.


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....