ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಪೂಜಾ ಕೋಣೆಗೆ 6 ವಾಸ್ತು ಸಲಹೆಗಳು

ವಾಸ್ತು ಶಾಸ್ತ್ರವು ಎಂಬ ಶಬ್ದವು ಸಂಸ್ಕೃತ ಪದವಾಗಿದ್ದು, ಇದು ವಾಸ್ತುಶಿಲ್ಪದ ವಿಜ್ಞಾನವನ್ನು ಹೇಳುತ್ತದೆ. ಇದು ಎಲ್ಲಾ ರೀತಿಯ ವಾಸ್ತು ಮತ್ತು ವಿನ್ಯಾಸ ಕಲ್ಪನೆಗಳನ್ನು ಒಳಗೊಂಡಿದೆ. ಇದು ಎಲ್ಲಾ ರೀತಿಯ ವಾಸ್ತು ಮತ್ತು ವಿನ್ಯಾಸ ಕಲ್ಪನೆಗಳನ್ನು ಒಳಗೊಂಡಿದೆ. ಸ್ಥಳಾವಕಾಶ, ವ್ಯವಸ್ಥೆ, ವಿನ್ಯಾಸ, ಅಳತೆಗಳು, ಇತ್ಯಾದಿ. ಮನೆಯ ವಾಸ್ತು ಧನಾತ್ಮಕ ಶಕ್ತಿಯನ್ನು ತರುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

Share:
ವಾಸ್ತು ಶಾಸ್ತ್ರಜ್ಞರ ಪ್ರಕಾರ ಪೂಜಾ ಕೋಣೆಗೆ ವಾಸ್ತು

 

ಪೂಜಾ ಕೋಣೆಯು ಇಡೀ ಮನೆಯ ತೇಜಸ್ಸು ಮತ್ತು ವಾಸ್ತುವನ್ನು ನಿರ್ಧರಿಸುವುದರಿಂದ ಅದಕ್ಕೆ ವಾಸ್ತು ಹೆಚ್ಚು ಮುಖ್ಯವಾಗಿದೆ. ಪೂಜಾ ಕೊಠಡಿಯು ಮನೆಯಲ್ಲಿ ಧನಾತ್ಮಕ ಶಕ್ತಿಯ ಮತ್ತು ವೈಬ್ರೇಷನ್​ಗಳ ಕೇಂದ್ರವಾಗಿರುತ್ತದೆ ಎಂದು ವಾಸ್ತುಶಾಸ್ತ್ರಜ್ಞರು ಒತ್ತಿಹೇಳುತ್ತಾರೆ. ಮತ್ತು ಅದಕ್ಕಾಗಿಯೇ ನಿಮ್ಮ ಮನೆಯನ್ನು ನಿರ್ಮಿಸುವಾಗ ಪೂಜಾ ಕೋಣೆಗೆ ವಾಸ್ತುವನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

 

ಪೂಜಾ ಕೋಣೆಗೆ ವಾಸ್ತು ಮಹತ್ವ

 

 ಪೂಜಾ ಕೋಣೆಯು ಮನೆಯಲ್ಲಿ ಪ್ರಶಾಂತ ಮತ್ತು ಧನಾತ್ಮಕ ಶಕ್ತಿಯ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಅದು ನಿಮ್ಮ ಮನೆಯಲ್ಲಿ ದೇವರ ಸಾನ್ನಿಧ್ಯದಿಂದಾಗಿ ದೈವಿಕ ಶಕ್ತಿಯನ್ನು ಹೊರಸೂಸುತ್ತದೆ. ದೇವರಿಗಾಗಿ ಮಾತ್ರ ಪ್ರತ್ಯೇಕವಾದ ಜಾಗವನ್ನು ಅಂದರೆ ಪೂಜಾ ಕೋಣೆಯನ್ನು ನಿಗದಿ ಮಾಡುವುದು ಮುಖ್ಯವಾಗಿದೆ. ಪೂಜಾ ಕೋಣೆಯು ದೊಡ್ಡದಾಗಿರಲಿ ಅಥವಾ ಎಷ್ಟೇ ಸಣ್ಣದಾಗಿರಲಿ, ಅದು ಸರಿಯಾದ ವಾಸ್ತು ಶಾಂತ, ಪಾಸಿಟಿವ್​ ಶಕ್ತಿಯನ್ನು ತರುವಲ್ಲಿ ಮತ್ತು ನಿಮ್ಮ ಮನೆಯಲ್ಲಿ ಯಾವ ರೀತಿಯ ಶಕ್ತಿ ಹೊರಹೊಮ್ಮುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

 

ಪೂಜಾ ಕೊಠಡಿಯು ಮನೆಯಲ್ಲಿ ಒಳ್ಳೆಯ ವೈಬ್​ಗಳನ್ನು ಹೊರಹೊಮ್ಮಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮನ್ನು ದೈವಿಕ ಶಕ್ತಿಯ ಜೊತೆಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ನೆಗಟಿವ್ ಶಕ್ತಿಯನ್ನು ತೊಡೆದುಹಾಕಲು ಮತ್ತು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಪಾಸಿಟಿವಿಟಿ ತುಂಬಲು ವಾಸ್ತು ಪರಿಪೂರ್ಣವಾಗಿರಬೇಕು.


ಪೂಜಾ ಕೋಣೆಗೆ ವಾಸ್ತು ಸಲಹೆಗಳು

ವಾಸ್ತು ಶಾಸ್ತ್ರದ ತತ್ವಗಳ ಪ್ರಕಾರ ಪೂಜಾ ಕೋಣೆಗೆ ಸೂಕ್ತ ವಾಸ್ತು ಅಳವಡಿಸುವದರಿಂದ ನಿಮ್ಮ ಮನೆಯನ್ನು ಪಾಸಿಟಿವ್ ಮತ್ತು ದೈವಿಕ ಶಕ್ತಿಯ ಕೇಂದ್ರವಾಗಿ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಅದಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ:

 

 • 1. ಮನೆಯಲ್ಲಿ ಪೂಜಾ ಕೋಣೆಯು ಇರಬೇಕಾದ ಜಾಗೆ:

 

ವಾಸ್ತು ಪ್ರಕಾರ ಪೂಜಾ ಕೋಣೆಯ ಸ್ಥಾನಕ್ಕಾಗಿ ಸೂಚಿಸಲಾದ ಪ್ರತಿಯೊಂದು ದಿಕ್ಕು ವಿಶೇಷವಾದದ್ದನ್ನು ಸೂಚಿಸುತ್ತದೆ ಮತ್ತು ಪ್ರತಿನಿಧಿಸುತ್ತದೆ. ಅದಕ್ಕಾಗಿಯೇ ಪೂಜಾ ಕೋಣೆಯ ಸ್ಥಾನವು ಪೂಜಾ ಅದರ ವಾಸ್ತುವಿನ ಪ್ರಮುಖ ಭಾಗವಾಗಿದೆ.

 

 • ಈಶಾನ್ಯವು ಭಗವಾನ್ ಶಿವನ ವಲಯವೆಂದು ಪರಿಗಣಿಸಲ್ಪಟ್ಟಿರುವುದರಿಂದ ಈಶಾನ್ಯವನ್ನು ಅತ್ಯುತ್ತಮ ಪೂಜಾ ಕೊಠಡಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಅದರಿಂದಾಗಿಯೆ ಇದು ಅತ್ಯಂತ ಮಂಗಳಕರವಾಗಿದೆ. ಇದನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮಾಡಲಾಗುತ್ತದೆ. ದಕ್ಷಿಣಾಭಿಮುಖವಾಗಿರುವ ಪೂಜಾ ಕೊಠಡಿಯ ವಾಸ್ತುವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
 
 • ನಿಮ್ಮ ಪೂಜಾ ಕೋಣೆಯನ್ನು ಮೆಟ್ಟಿಲ​ ಕೆಳಗೆ ಅಥವಾ ವಾಶ್‌ರೂಮ್‌ನ ಬಳಿ ಮಾಡುವುದು ಬೇಡ. ಏಕೆಂದರೆ ಈ ಸ್ಥಳಗಳು ಪೂಜಾ ಕೋಣೆಗೆ ಅಶುಭವೆಂದು ಪರಿಗಣಿಸಲಾಗಿದೆ.
 
 • ವಾಸ್ತು ಪ್ರಕಾರ ಗ್ರೌಂಡ್ ಫ್ಲೋರ್​ ಹಾಗೂ ಮೇಲಿನ ಮಹಡಿಗಳು ಪೂಜಾ ಕೋಣೆಗೆ ಉತ್ತಮ ಸ್ಥಳವೆಂದು ಪರಿಗಣಿಸಲಾಗಿರದ ಕಾರಣ ಪೂಜಾ ಕೋಣೆಯನ್ನು ಕಟ್ಟುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

 

 • ಪೂಜಾ ಕೋಣೆಯ ಬಾಗಿಲು ಮತ್ತು ಕಿಟಕಿಗಳು ಉತ್ತರ ಅಥವಾ ಪೂರ್ವಕ್ಕೆ ತೆರೆಯುವಂತಿರಬೇಕು.

 

 • ಪೂಜಾ ಕೋಣೆಯಲ್ಲಿ ಪಾಸಿಟಿವ್ ವೈಬ್​ಗಳಿಗಾಗಿ ಪಿರಮಿಡ್ ಆಕಾರದ ಸೀಲಿಂಗ್ ಅನ್ನು ಪೂಜಾ ಕೋಣೆಯ ವಾಸ್ತು ಪ್ರಕಾರ ಸ್ಥಾಪಿಸಲು ಶಿಫಾರಸು ಮಾಡಲಾಗುತ್ತದೆ.
 
 • ಪೂಜಾ ಕೋಣೆಯ ವಾಸ್ತು ಪ್ರಕಾರ ಪೂರ್ವಾಭಿಮುಖವಾಗಿರುವ ಮನೆಗಳಿಗೆ ಪೂಜಾ ಕೊಠಡಿಯು ಉತ್ತರ ಅಥವಾ ಪೂರ್ವ ಮೂಲೆಯಲ್ಲಿರಬೇಕು ಎಂದು ಸಲಹೆ ಕೊಡಲಾಗುತ್ತದೆ.


 1. 2. ವಿಗ್ರಹಗಳು ಅಥವಾ ದೇವರುಗಳನ್ನು ಪ್ರತಿಷ್ಠಾಪಿಸುವ ಸ್ಥಾನ:

 

 • ಪೂಜಾ ಕೋಣೆಯ ವಾಸ್ತು ಪ್ರಕಾರ, ಪೂಜಾ ಕೋಣೆಯಲ್ಲಿರುವ ವಿಗ್ರಹಗಳು ಪರಸ್ಪರ ಎದುರಾಗಿರಬಾರದು ಮತ್ತು ಗೋಡೆಯ ಹತ್ತಿರ ಇರಬಾರದು.

 

 • ವಿಗ್ರಹಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು.
 
 • ಎಲ್ಲಾ ವಿಗ್ರಹಗಳು ಒಂದೇ ದಿಕ್ಕಿಗೆ ಮುಖ ಮಾಡಿರಬೇಕು ಮತ್ತು ಬಾಗಿಲಿಗೆ ಮುಖ ಮಾಡಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ.
 
 • ವಿಗ್ರಹಗಳು ಅವುಗಳ ಸುತ್ತಲೂ ಸಾಕಷ್ಟು ಗಾಳಿಯ ಹರಿದಾಡುವಂತಿರಲು ಅವುಗಳನ್ನು ಗೋಡೆಗಳಿಗೆ ಆನಿಸಿ ಇಡಬಾರದು.
 
 • ಪೂಜಾ ಕೋಣೆಯ ವಾಸ್ತು ಸಲಹೆಗಳ ಪ್ರಕಾರ ವಿಗ್ರಹಗಳನ್ನು ನೆಲದಿಂದ ಕನಿಷ್ಠ 6 ಇಂಚುಗಳಷ್ಟು ಎತ್ತರದಲ್ಲಿ ಇರಿಸಬೇಕು.
 
 • ಮೃತರ ಭಾವಚಿತ್ರಗಳನ್ನು ಅಥವಾ ಹಿಂಸಾಚಾರವನ್ನು ಬಿಂಬಿಸುವ ಚಿತ್ರಗಳನ್ನು ಪೂಜಾ ಕೋಣೆಯಲ್ಲಿ ಹಾಕಬಾರದು.
 
 • ವಿಗ್ರಹಗಳ ಸ್ಟ್ರಕ್ಚರ್​ ಒಡೆದಿಲ್ಲ ಅಥವಾ ಮುರಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
 
 • ಪೂಜಾ ಕೋಣೆಯಲ್ಲಿ ದೀಪಗಳ ಸ್ಥಾನವು ಆಗ್ನೇಯ ದಿಕ್ಕಿನಲ್ಲಿರಬೇಕು.


 1. 3. ಪವಿತ್ರ ವಸ್ತುಗಳನ್ನು ಇಡುವುದು:

 

 • ಪವಿತ್ರ ವಸ್ತುಗಳು ಮತ್ತು ಇತರ ಪೂಜಾ ಕೋಣೆಯ ವಸ್ತುಗಳನ್ನು ಇಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ಇತರ ವಸ್ತುಗಳನ್ನು ಪೂಜಾ ಕೋಣೆಯಲ್ಲಿ ಶೇಖರಣೆ ಮಾಡಬಾರದು. ಜೊತೆಗೆ ಪೂಜಾ ಕೋಣೆಯಲ್ಲಿ ಯಾವುದೇ ಅಸ್ತವ್ಯಸ್ತತೆ ಇರಬಾರದು.
 
 • ವಿಗ್ರಹಗಳ ಮೇಲುಗಡೆ ಯಾವುದೇ ವಸ್ತುವನ್ನು ಇಡಬಾರದು.
 
 • ಆಗ್ನೇಯ ದಿಕ್ಕಿನಲ್ಲಿ ದೀಪ ಮತ್ತು ಅಗ್ನಿ ಕುಂಡವನ್ನು ಇಡಬೇಕು.

 1. 4. ಪೂಜಾ ಕೋಣೆಯಲ್ಲಿ ಕ್ಯಾಬಿನೆಟ್‌ಗಳ ನಿಯೋಜನೆ:

 

 • ಪೂಜಾ ಕೋಣೆಯ ವಾಸ್ತು ಪ್ರಕಾರ ಸೂರ್ಯನ ಬೆಳಕನ್ನು ತಡೆಯದಂತೆ ಯಾವುದೇ ಕ್ಯಾಬಿನೆಟ್‌ಗಳನ್ನು ಪೂಜಾ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು.
 
 • ನೀವು ಪೂಜಾ ವಸ್ತುಗಳನ್ನು ಇಡುವುದಕ್ಕಾಗಿ ಪಿರಮಿಡ್-ಆಕಾರದ ಗೋಪುರ ಅಥವಾ ಕ್ಯಾಬಿನೆಟ್‌ಗಳನ್ನು ನಿರ್ಮಿಸಿಕೊಳ್ಳಬಹುದು ಏಕೆಂದರೆ ಅದು ಪಾಸಿಟಿವ್ ವೈಬ್​ಗಳನ್ನು ಹೊರಸೂಸುತ್ತದೆ.
 
 • ವಾಸ್ತು ಪ್ರಕಾರ ಪೂಜಾ ಕೋಣೆಯಲ್ಲಿ ವಿಗ್ರಹಗಳ ಮೇಲುಗಡೆ ಕ್ಯಾಬಿನೆಟ್‌ಗಳನ್ನು ನಿರ್ಮಿಸಬಾರದು.

 1. 5. ಪೂಜಾ ಕೋಣೆಯ ಬಣ್ಣ:
 
 • ತಿಳಿ ಬಣ್ಣಗಳು ಪೂಜಾ ಕೋಣೆಗೆ ಉತ್ತಮವಾಗಿವೆ. ಏಕೆಂದರೆ ಅವು ಪಾಸಿಟಿವ್ ವೈಬ್​ಗಳನ್ನು ಹೊರಸೂಸುತ್ತವೆ ಮತ್ತು ಪೂಜೆ ಮಾಡಲು ಮತ್ತು ಪ್ರಾರ್ಥನೆ ಮಾಡಲು ಪರಿಪೂರ್ಣವಾಗಿರುತ್ತವೆ.
 
 • ಕೆನೆ ಬಣ್ಣವು ಪೂಜಾ ಕೋಣೆಗೆ ಸೂಕ್ತವಾದ ಬಣ್ಣವಾಗಿದೆ.
 
 • ತಿಳಿ ನೀಲಿ, ಬಿಳಿ ಮತ್ತು ತಿಳಿ ಹಳದಿ ಬಣ್ಣಗಳು ಶಾಂತ ಮತ್ತು ಧ್ಯಾನಸ್ಥ ವಾತಾವರಣವನ್ನು ಸೃಷ್ಟಿಸುತ್ತವೆ.

 

 • ಈಶಾನ್ಯ ದಿಕ್ಕಿನಲ್ಲಿರುವ ಪೂಜಾ ಕೋಣೆಗೆ, ಬಿಳಿ ಬಣ್ಣವು ಸೂಕ್ತ ಬಣ್ಣವಾಗಿದೆ.

 


  ಇದನ್ನೂ ಓದಿ: ನಿಮ್ಮ ಮನೆಗೆ ಅದ್ಭುತವಾಗಿ ಬಣ್ಣಹಚ್ಚಲು ಸಲಹೆಗಳು ಮತ್ತು ತಂತ್ರಗಳು

 1. 6. ಪೂಜಾ ಕೋಣೆಯಲ್ಲಿ ದೀಪ:

 

 • ಪೂಜಾ ಕೋಣೆಯಲ್ಲಿ ಹಗಲಿನ ವೇಳೆಯಲ್ಲಿ ಚೆನ್ನಾಗಿ ಬೆಳಕು ಬರುವಂತಿರಲು ಕನಿಷ್ಠ ಒಂದು ಕಿಟಕಿಯನ್ನು ಹೊಂದಿರುವುದು ಮುಖ್ಯ. ಇದು ಪೂಜಾ ಕೋಣೆಗೆ ವಾಸ್ತು ಪ್ರಕಾರ ಸೂರ್ಯನ ಧನಾತ್ಮಕ ಶಕ್ತಿ ಮತ್ತು ವೈಬ್​ಗಳು ಮುಕ್ತವಾಗಿ ಹರಿಯುವಂತೆ ಮಾಡುತ್ತದೆ.
 
 • ಸೂರ್ಯಾಸ್ತದ ನಂತರವೂ ಪೂಜಾ ಕೋಣೆಯಲ್ಲಿ ಚೆನ್ನಾಗಿ ಬೆಳಕು ಇರುವುದನ್ನು ಖಚಿತಪಡಿಸಿಕೊಳ್ಳಿ. ಸಾಕಷ್ಟು ಬೆಳಕು ಇರುವಂತೆ ಮಾಡಲು ಪೂಜಾ ಕೋಣೆಯಲ್ಲಿ ದೀಪವನ್ನು ಅಳವಡಿಸಿ ಅಥವಾ ದೀಪವನ್ನು ಹಚ್ಚಿ ಇಟ್ಟಿರಿ.

 
ಪೂಜಾ ಕೋಣೆಯು ಅತ್ಯಂತ ಪವಿತ್ರವಾಗಿದೆ ಮತ್ತು ವಾಸ್ತು ತತ್ವಗಳಂತೆ ಅದನ್ನು ಇರಿಸುವುದರಿಂದ ಮನೆ ಸಂತೋಷದಿಂದ ತುಂಬಿರುತ್ತದೆ. ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಪವಿತ್ರ ಮತ್ತು ಸಂತೋಷದ ಮನೆಯಲ್ಲಿ ನೆಗೆಟಿವ್ ಶಕ್ತಿಗೆ ಸ್ಥಾನವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೂಜಾ ಕೋಣೆಗೆ ಈ ಎಲ್ಲಾ ವಾಸ್ತು ಸಲಹೆಗಳನ್ನು ಅನುಸರಿಸಿ.ನಿಮ್ಮ ಮನೆಯ ಮುಖ್ಯ ಬಾಗಿಲಿನ ಸರಿಯಾದ ಸ್ಥಾನದ ಮೂಲಕ ನಿಮ್ಮ ಮನೆಗೆ ಪ್ರವೇಶಿಸುವ ನೆಗೆಟಿವ್ ಶಕ್ತಿಯನ್ನು ನಿಯಂತ್ರಿಸಿ ಮತ್ತು ನಿಮ್ಮ ಮನೆಯನ್ನು ನೆಗೆಟಿವ್ ಶಕ್ತಿಯಿಂದ ರಕ್ಷಿಸಿ.ಸಂಬಂಧಿತ ಲೇಖನಗಳು
ಶಿಫಾರಸು ಮಾಡಿದ ವೀಡಿಯೊಗಳು

  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....