ಅಲ್ಟ್ರಾಟೆಕ್ ವೆದರ್ ಪ್ಲಸ್ ಸಿಮೆಂಟ್ ನೀರಿನ ನಿವಾರಕವಾಗಿದೆ. ಇದು ನೀರನ್ನು ಪರಿಣಾಮಕಾರಿಯಾಗಿ ತಡೆಯುವುದಲ್ಲದೆ, ತೇವಾಂಶದಿಂದ ಉತ್ತಮ ರಕ್ಷಣೆಯನ್ನು ನೀಡುತ್ತದೆ. ಇದರಿಂದಾಗಿ ನಿಮ್ಮ ಮನೆಯ ಬಾಳಿಕೆ ಶಕ್ತಿಯನ್ನು ರಕ್ಷಿಸಿದಂತಾಗುತ್ತದೆ.
ಅಲ್ಟ್ರಾಟೆಕ್ ವೆದರ್ ಪ್ಲಸ್ನೊಂದಿಗೆ ನಿಮ್ಮ ಮನೆಯನ್ನು ಸದೃಢವಾಗಿ ಮತ್ತು ಬಾಳಿಕೆ ಬರುವಂತೆ ಇರಿಸಿಕೊಳ್ಳಿ.
ತೇವಾಂಶವು ನಿಮ್ಮ ಮನೆಯ ಯಾವುದೇ ಭಾಗ, ಛಾವಣಿ, ಗೋಡೆಗಳು ಅಥವಾ ನೆಲದ ಮೂಲಕವೂ ಆವರಿಸಿಕೊಳ್ಳಬಹುದು. ಒಮ್ಮೆ ಪ್ರವೇಶಿಸಿದೆ ಎಂದಾದರೆ ಅದು ವೇಗವಾಗಿ ಆವರಿಸಿಕೊಳ್ಳುತ್ತದೆ. ತೇವಾಂಶವು ಅಡಿಪಾಯದಿಂದಲೂ ನಿಮ್ಮ ಮನೆಯನ್ನು ಆವರಿಸಿಕೊಳ್ಳಬಹುದು.
ತೇವಾಂಶವು ಆರ್ಸಿಸಿಯಲ್ಲಿ ಕಬ್ಬಿಣದ ಸವೆತಕ್ಕೆ ಕಾರಣವಾಗುತ್ತದೆ. ಇದು ಬಿರುಕಿಗೆ ಕಾರಣವಾಗುತ್ತದೆ. ಜೊತೆಗೆ ನಿಮ್ಮ ಮನೆಯ ಸಂರಚನೆಯ ಬಲತ್ವವನ್ನು ಹದಗೆಡಿಸುತ್ತದೆ. ಇದು ಮನೆಯ ಸಂರಚನೆಯನ್ನು ಒಳಗಿನಿಂದ ದುರ್ಬಲಗೊಳಿಸುವ ಮೂಲಕ ಹಾನಿಯನ್ನು ಉಂಟು ಮಾಡುತ್ತದೆ. ದುರದೃಷ್ಟವಶಾತ್, ತೇವಾಂಶವು ಗೋಚರಿಸುವ ಸಮಯದಿಂದಲೇ ಹಾನಿಯೂ ಆರಂಭವಾಗಿರುತ್ತದೆ.
ತೇವಾಂಶವು ನಿಮ್ಮ ಮನೆಯ ಸಂರಚನೆಯನ್ನು ಟೊಳ್ಳಾಗಿಸುವುದಲ್ಲದೆ, ದುರ್ಬಲಗೊಳಿಸುತ್ತದೆ. ಮನೆಯ ರಚನಾತ್ಮಕ ಸಮಗ್ರತೆ ಮತ್ತು ಬಾಳಿಕೆಯನ್ನು ಅಪಾಯಕ್ಕೆ ತಳ್ಳುತ್ತದೆ. ಒಮ್ಮೆ ತೇವಾಂಶ ಆವರಿಸಿದರೆ ಅದರ ನಿಯಂತ್ರಣ ಬಹಳವೇ ಕಷ್ಟ. ವಾಟರ್ ಪ್ರೂಫ್ ಸಂಸ್ಕರಣೆ, ಪೇಂಟ್ ಅಥವಾ ಡಿಸ್ಟೆಂಪರ್ನ ತೆಳುವಾದ, ಸುರಕ್ಷಾತ್ಮಕ ಕೋಟಿಂಗ್‌ನ ಪದರಗಳು ಬೇಗನೆ ಉದುರಲಾರಂಭಿಸುತ್ತವೆ. ಅಲ್ಲದೆ, ಇದು ಕೇವಲ ಒಂದು ತಾತ್ಕಾಲಿಕ ಪರಿಹಾರವಾಗಿದೆ. ಮರು ಪ್ಲಾಸ್ಟರಿಂಗ್ ಮತ್ತು ಮರು ಪೇಂಟಿಂಗ್ ಕೇವಲ ಅಲ್ಪಾವಧಿಯ ಪರಿಹಾರಗಳಾಗಿವೆ. ಪರಿಣಾಮವಾಗಿ, ನಿಮ್ಮ ಮನೆಯನ್ನು ತೇವಾಂಶದಿಂದಲೇ ರಕ್ಷಿಸಲು ಇರುವ ತಡೆಗಟ್ಟುವ ಕ್ರಮವನ್ನು ಬಳಸುವುದು ಸೂಕ್ತ.
ತೇವಾಂಶವು ನೆಲ, ಛಾವಣಿ, ಗೋಡೆಗಳು, ಅಡಿಪಾಯ ಸೇರಿದಂತೆ ಎಲ್ಲಿಂದಲಾದರೂ ನಿಮ್ಮ ಮನೆಯನ್ನು ಆವರಿಸಿಕೊಳ್ಳಬಹುದು. ಆದ್ದರಿಂದ, ನಿಮ್ಮ ಮನೆಯ ಬಲತ್ವ ಮತ್ತು ಬಾಳಿಕೆಯನ್ನು ತೇವಾಂಶದಿಂದ ರಕ್ಷಿಸಲು ನೀವು ಅಲ್ಟ್ರಾಟೆಕ್ ವೆದರ್ ಪ್ಲಸ್ನೊಂದಿಗೆ ನಿಮ್ಮ ಸಂಪೂರ್ಣ ಮನೆಯನ್ನು ನಿರ್ಮಿಸಬೇಕು. ಇದು ನೀರು ಬಾರದಂತೆ ತಡೆಯುವುದರ ಜೊತೆಗೆ ನಿಮ್ಮ ಮನೆಯನ್ನು ಆವರಿಸುವ ತೇವಾಂಶದ ವಿರುದ್ಧ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೆ, ಅದರ ಸಂರಚನಾತ್ಮಕ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತದೆ.
ಅಲ್ಟ್ರಾಟೆಕ್ ವೆದರ್ ಪ್ಲಸ್ ಅನ್ನು ವಿಶೇಷವಾಗಿ ಕಾಂಕ್ರೀಟ್‌ನಲ್ಲಿರುವ ಚಿಕ್ಕ ಚಿಕ್ರ ರಂಧ್ರಗಳನ್ನು ತುಂಬಿಸುವ ಮೂಲಕ ಕ್ಯಾಪಿಲ್ಲರಿಗಳ ನಡುವಿನ ಅಂತರಸಂಪರ್ಕವನ್ನು ಕಡಿತಗೊಳಿಸಲು ಮತ್ತು ನೀರಿನ ಬರುವಿಕೆ ತಡೆಯಲು ಹಾಗೂ ತೇವಾಂಶದ ವಿರುದ್ಧ ವರ್ಧಿತ ರಕ್ಷಣೆಯನ್ನು ನೀಡಲು ಬಳಸಲಾಗುತ್ತದೆ. ಈ ಮೂಲಕ ನಿಮ್ಮ ಮನೆಯನ್ನು ಸದೃಢವಾಗಿ ಮತ್ತು ಬಾಳಿಕೆ ಬರುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ.
ಅಲ್ಟ್ರಾಟೆಕ್ ವೆದರ್ ಪ್ಲಸ್ ಸಾಗಣೆ ಮತ್ತು ಸಂಗ್ರಹಣೆಯ ಸಮಯದಲ್ಲಿ ಸಿಮೆಂಟ್ ನಷ್ಟವಾಗದಂತೆ ಖಚಿತಪಡಿಸಿಕೊಳ್ಳಲು ಟ್ಯಾಂಪರ್-ಪ್ರೂಫ್ ಬ್ಯಾಗ್‌ನಲ್ಲಿ ಬರುತ್ತದೆ. ಈ ಚೀಲಗಳು ಸಿಮೆಂಟ್‌ನ ಗುಣಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಮತ್ತು ಅದನ್ನು ಸದಾ ಬಳಕೆಗೆ ಯೋಗ್ಯವಾಗಿಸಲು ಅನುವು ಮಾಡಿಕೊಡುವಲ್ಲಿ ಅತ್ಯಂತ ಸಹಾಯಕವಾಗಿವೆ.