Share:
Share:
ಮಾನವ ಜನಾಂಗವು ಜಗತ್ತಿನಾದ್ಯಂತ ಪ್ರಮುಖವಾಗಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. 2050 ರ ಹೊತ್ತಿಗೆ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಜನರು ನೀರಿನ ಅಭಾವ ಎದುರಿಸುವ ಪ್ರದೇಶಗಳಲ್ಲಿ ವಾಸಿಸುತ್ತಾರೆ ಎಂಬ ಎಚ್ಚರಿಕೆಯ ವರದಿಗಳು (WaterAid ವರದಿ) ಬಂದಿವೆ. ಹೀಗಾಗಿ ಮನುಷ್ಯರು ತಾಜಾ ನೀರನ್ನು ಪಡೆಯಲು ಸಹಾಯ ಮಾಡುವ ವ್ಯವಸ್ಥೆಯ ತುರ್ತು ಅವಶ್ಯಕತೆಯಿದೆ. ಹೀಗಾಗಿ ನೀರು ಕೊರತೆಯ ಸಮಸ್ಯೆಗೆ ಪರಿಹಾರವೆಂದರೆ ಮಳೆ ನೀರು ಕೊಯ್ಲು. ತಾಜಾ ನೀರನ್ನು ಪಡೆಯಲು ಮಳೆಕೊಯ್ಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದ್ದು, ಈ ವ್ಯವಸ್ಥೆ ಕೆಲಸ ಮಾಡಲು ಯಾವುದೇ ವಿದ್ಯುತ್ ಶಕ್ತಿಯ ಅಗತ್ಯವಿರುವುದಿಲ್ಲ. ಜೊತೆಗೆ ಇದು ಬೇರೆ ಯಾವುದೇ ನೈಸರ್ಗಿಕ ಸಂಪನ್ಮೂಲಗಳನ್ನು ಬರಿದಾಗಿಸುವುದಿಲ್ಲ. ಅದರ ಬದಲಿಗೆ, ನೈಸರ್ಗಿಕ ವಾಸಸ್ಥಾನವನ್ನು ರಕ್ಷಿಸಿ ಮತ್ತು ಸಂರಕ್ಷಿಸಲು ಸಹಾಯ ಮಾಡುತ್ತದೆ. ಮಳೆನೀರು ಕೊಯ್ಲಿನ ಹಂತಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಳೆನೀರು ಕೊಯ್ಲಿನ ಅಗತ್ಯತೆಯನ್ನು ತಿಳಿಯುವುದು ಈ ಓದಿನ ಉದ್ದೇಶವಾಗಿದೆ.
ಸಮುದ್ರದ ಲವಣಯುಕ್ತ ನೀರು ಸೂರ್ಯನ ಶಾಖದಿಂದ ಆವಿಯಾಗಿ, ಮೋಡಗಳನ್ನು ಸೃಷ್ಟಿ ಮಾಡುತ್ತದೆ. ನಂತರ ಅದು ಸಿಹಿನೀರಿನ ಮಳೆಯಾಗಿ ಬೀಳುತ್ತದೆ. ಆದರೆ ಮಳೆ ನೀರಿನ ಹೆಚ್ಚಿನ ಭಾಗವು ಸಮುದ್ರ ಮತ್ತು ಚರಂಡಿಗಳಿಗೆ ಹರಿದು ಹೋಗುತ್ತದೆ. ನಾವು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾದರೆ, ಇದು ವಿವಿಧ ಬೇಡಿಕೆಗಳಿಗೆ ಬಳಸಬಹುದಾದ ಪ್ರಮುಖ ಮೂಲವಾಗಿದೆ. ಆದ್ದರಿಂದ, ಸಂಕ್ಷಿಪ್ತವಾಗಿ ಹೇಳುವುದಾದರೆ, ಮಳೆಕೊಯ್ಲು ಎನ್ನುವುದು ಮಳೆನೀರು ವ್ಯರ್ಥವಾಗಿ ಹರಿದುಹೋಗಲು ಬಿಡದೇ ಮರುಬಳಕೆಗಾಗಿ ಆ ನೀರನ್ನು ಸಂಗ್ರಹಿಸುವ ಪ್ರಕ್ರಿಯೆಯಾಗಿದೆ. ಹೀಗಾಗಿ, ಅದಕ್ಕೂ ಮೊದಲು ನಾವು ಮಳೆನೀರು ಕೊಯ್ಲಿನ ಹಂತಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ಮಳೆನೀರು ಕೊಯ್ಲಿನ ಪ್ರಕಾರಗಳನ್ನು ತಿಳಿದುಕೊಳ್ಳವುದರಿಂದ ಈ ವ್ಯವಸ್ಥೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಮಳೆನೀರು ಕೊಯ್ಲಿನ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳುವುದರಿಂದ ನಮಗೆ ಯಾವ ಪ್ರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿಯುತ್ತದೆ. ಅದಕ್ಕೆ ಅನುಗುಣವಾಗಿ ಮಳೆನೀರು ಕೊಯ್ಲು ಮಾಡುವ ಹಂತಗಳ ಬಗ್ಗೆಯೂ ತಿಳಿದುಕೊಳ್ಳೋಣ.
ಮಳೆನೀರು ಕೊಯ್ಲಿನ ಹಂತಗಳನ್ನು ಅರಿತುಕೊಳ್ಳುವುದಕ್ಕಿಂತ ಮೊದಲು, ಮಳೆನೀರು ಕೊಯ್ಲಿನ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತದೆ: ಜನಸಂಖ್ಯೆಯ ಹೆಚ್ಚಳದೊಂದಿಗೆ, ಅಂತರ್ಜಲದ ಮೇಲಿನ ಅವಲಂಬನೆಯೂ ಹೆಚ್ಚಾಗಿದೆ. ಅನೇಕ ಜನವಸತಿ ಕಾಲೋನಿಗಳು ಮತ್ತು ಕೈಗಾರಿಕೆಗಳು ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಅಂತರ್ಜಲದ ಮೇಲೆ ಅವಲಂಬಿತವಾಗಿದ್ದು, ಅಲ್ಲಿಂದ ನೀರನ್ನು ಹೊರಗೆ ತೆಗೆಯುತ್ತಿವೆ. ಇದು ಅಂತರ್ಜಲ ಮಟ್ಟದ ಕುಸಿತಕ್ಕೆ ಕಾರಣವಾಗಿದ್ದು, ಭಾರಿ ನೀರಿನ ಕೊರತೆ ಇರುವ ಕೆಲವು ಪ್ರದೇಶಗಳಲ್ಲಂತೂ ಅಂತರ್ಜಲದ ಮಟ್ಟವು ಅತಿ ಕೆಳಗೆ ಹೋಗಿದೆ. ಹೀಗಾಗಿ ಮಳೆನೀರು ಕೊಯ್ಲು ಮಾಡುವುದರಿಂದ ಅಂತರ್ಜಲ ಮತ್ತಷ್ಟು ಕೆಳಗೆ ಹೋಗುವುದನ್ನು ತಡೆದು ಅದನ್ನು ಮೇಲ್ಮಟ್ಟಕ್ಕೆ ಬರುವಂತೆ ಮಾಡುವುದು ಸಾಧ್ಯವಾಗುತ್ತದೆ.
ಬರಗಾಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ: ವಿಶೇಷವಾಗಿ ಒಣ ಪರಿಸರವನ್ನು ಹೊಂದಿರುವ ಅನೇಕ ದೇಶಗಳು, ಮಳೆನೀರು ಕೊಯ್ಲನ್ನು ಅತಿ ಕಡಿಮೆ ವೆಚ್ಚದಲ್ಲಿ ಶುದ್ಧ ನೀರನ್ನು ಪಡೆಯುವ ನಂಬಿಗೆಯ ಮೂಲವನ್ನಾಗಿ ಬಳಸುತ್ತವೆ. ಅನಾವೃಷ್ಟಿ ಎದುರಾದಾಗ, ಮೊದಲೇ ಕೊಯ್ಲು ಮಾಡಿ ಸಂಗ್ರಹಿಸಿದ ಮಳೆನೀರನ್ನು ಬಳಸಬಹುದು. ಮರುಭೂಮಿಗಳಲ್ಲಿ, ಬೆಟ್ಟಗಳು ಮತ್ತು ಇಳಿಜಾರುಗಳಿಂದ ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ತಡೆಯಲು ಮತ್ತು ನೀರಾವರಿ ಹೆಚ್ಚಿಸಲು ಮಣ್ಣಿನ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಅದರಿಂದ ಕಡಿಮೆ ಮಳೆ ಬೀಳುವ ಅವಧಿಯಲ್ಲೂ ಬೆಳೆ ಬೆಳೆಯಲು ಸಾಕಷ್ಟು ನೀರು ಸಂಗ್ರಹವಾಗುತ್ತದೆ.
ಅಂತರ್ಜಲದ ಮಟ್ಟವನ್ನು ಸುಧಾರಿಸುತ್ತದೆ ಮತ್ತು ನೀರನ್ನು ಮೇಲೆತ್ತಲು ಬಳಕೆಯಾಗುವ ವಿದ್ಯುತ್ ಅನ್ನು ಉಳಿಸುತ್ತದೆ: ಮಳೆನೀರು ಕೊಯ್ಲು ವ್ಯವಸ್ಥೆಯು ಅಂತರ್ಜಲವನ್ನು ಮತ್ತು ಅದರ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಅಂತರ್ಜವನ್ನು ಮರುಪೂರಣ ಮಾಡುತ್ತದೆ. ಕಡಿಮೆ ಮಳೆ ಬಿದ್ದರೂ ಸಹ ಮಳೆನೀರು ಕೊಯ್ಲು ವ್ಯವಸ್ಥೆಯು ಸುಸ್ಥಿರ ಅಂತರ್ಜಲ ಸಿಗುವಂತೆ ಮಾಡುತ್ತದೆ.
ಭೂಮಿಯ ಅಡಿಯಲ್ಲಿ ನೀರನ್ನು ಸಂಗ್ರಹಿಸುವುದು ಪರಿಸರಕ್ಕೆ ಒಳ್ಳೆಯದು: ಮಳೆನೀರನ್ನು ಭೂಮಿಯಡಿಯಲ್ಲಿ ಸಂಗ್ರಹಿಸುವುದರಿಂದ ನೀರು ಆವಿಯಾಗುವುದನ್ನು ತಡೆದು, ನೀರನ್ನು ದೀರ್ಘಕಾಲ ಶೇಖರಣೆ ಮಾಡಿ ಇಡಲು ಸಹಾಯ ಮಾಡುತ್ತದೆ. ಆ ಮೂಲಕ ಅಂತರ್ಜಲ ಪೂರೈಕೆಯನ್ನು ಸಹ ಮರುಪೂರಣಗೊಳಿಸಬಹುದು. ಜೊತೆಗೆ ಸಮುದ್ರದ ನೀರು ಒಳನುಗ್ಗದಂತೆ ತಡೆಯುತ್ತದೆ, ಅಂತರ್ಜಲವನ್ನು ಅವಲಂಬಿಸಿರುವ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುತ್ತದೆ.x`
ಇದು ಹೆಚ್ಚು ಲಾಭದಾಯಕವಾಗಿದೆ: ಮಳೆನೀರು ಕೊಯ್ಲು ಇತರ ನೀರಿನ ಮರುಬಳಕೆ ವಿಧಾನಗಳಿಗೆ ಲಾಭದಾಯಕವಾಗಿದೆ. ಇದು ದೀರ್ಘಾವಧಿಯ ಹೂಡಿಕೆಯಾಗಿರುವುದರಿಂದ ನಿಮಗೆ ಹೆಚ್ಚಿನ ಹಣದ ಹೊರೆಯಾಗುವುದಿಲ್ಲ. ಇದಲ್ಲದೆ, ಇದು ವಿವಿಧ ವಿಧಾನಗಳ ಮೂಲಕ ಮನೆ ಬಾಗಿಲಿಗೆ ನೀರನ್ನು ಸರಬರಾಜು ಮಾಡುವ ಅಗತ್ಯವನ್ನು ತೆಗೆದುಹಾಕುತ್ತದೆ.
ನೀರಿನ ಸಂರಕ್ಷಣೆಗೆ ಸಹಾಯ ಮಾಡುತ್ತದೆ: ಮಳೆನೀರನ್ನು ಕೊಯ್ಲು ಮಾಡುವ ಯೋಜನೆಯು ನೀರನ್ನು ಉಳಿಸಲು ಮತ್ತು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ಜೊತೆಗೆ ಇದು ನೀರಿನ ಸಂರಕ್ಷಣೆಯ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಆದರೂ, ವಾಸವಿರುವ ಸ್ಥಳದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗೆ ಹೆಚ್ಚಿನ ಗಮನ ಕೊಡಿ. ಇದಕ್ಕೆ ಬಳಕೆ ಮಾಡುವ ಕಾಂಕ್ರೀಟ್ ಶಕ್ತಿ ಪರೀಕ್ಷೆಯನ್ನು ಮಾಡಿಕೊಳ್ಳಿರಿ. ಅದರೊಂದಿಗೆ ಕಾಂಕ್ರೀಟ್ ಕಾಂಕ್ರೀಟ್ ಸಾಗಣೆ ಮಾಡುವುದು, ಇಡುವುದು ಮತ್ತು ಕ್ಯೂರಿಂಗ್ ಮಾಡುವುದನ್ನು ಎಚ್ಚರಿಕೆಯಿಂದ ಗಮನಿಸಿರಿ.
ಮಳೆನೀರು ಕೊಯ್ಲಿನ ಹಂತಗಳು ಸುದೀರ್ಘವಾಗಿವೆ ಎಂದೆನಿಸಬಹುದು. ಆದರೆ, ಇದನ್ನು ಸರಿಯಾಗಿ ಕಾರ್ಯಗತಗೊಳಿಸಿದರೆ, ಈ ವ್ಯವಸ್ಥೆಯು ನಿಮಗೆ ದೀರ್ಘಕಾಲ ಬಾಳಿಕೆ ಬರುತ್ತದೆ.
ಪೈಪ್ನಿಂದ ಸ್ಟೋರೇಜ್ಗೆ ನೀರು ಹೋಗುವ ಜಾಗೆಯಲ್ಲಿ ಒಂದು ಮೇಶ್ ಫಿಲ್ಟರ್ ಅನ್ನು ಅಳವಡಿಸಬೇಕು ಮತ್ತು ಮೊದಲ ಫ್ಲಶ್ (ಮೇಲ್ಛಾವಣಿಯನ್ನು ತೊಳೆಯುವ ಯಂತ್ರ ಎಂದೂ ಕರೆಯುತ್ತಾರೆ) ಸಾಧನವು ಮಳೆ ಬಿದ್ದ ತಕ್ಷಣ ಟ್ಯಾಂಕ್‌ಗೆ ಹರಿದು ಬರುವ ಸ್ವಚ್ಛವಿರದ ನೀರನ್ನು ಬೇರೆಡೆಗೆ ತಿರುಗಿಸುತ್ತದೆ.
ಸ್ಟೋರೇಜ್ ಟ್ಯಾಂಕ್‌ಗೆ ಪೈಪ್ ಅನ್ನು ಸಂಪರ್ಕಿಸುವ ಹಂತದಲ್ಲಿ ಫಿಲ್ಟರ್ ವ್ಯವಸ್ಥೆ ಇರಬೇಕು.
ಮಳೆನೀರು ಹಿಂದಕ್ಕೆ ಹರಿಯುವುದನ್ನು ತಡೆಯಲು ಒಂದು ಗಾಳಿಯ ಕಿಂಡಿ (ಏರ್ ಗ್ಯಾಪ್) ಇರಬೇಕು
ಪ್ರತಿಯೊಂದು ಟ್ಯಾಂಕ್ ತುಂಬಿದಾಗ ಹೆಚ್ಚಿನ ನೀರು ಹೊರಗೆ ಹೋಗುವ ಓವರ್‌ಫ್ಲೋ ವ್ಯವಸ್ಥೆಯನ್ನು ಹೊಂದಿರಬೇಕು.
ಹೆಚ್ಚುವರಿ ನೀರನ್ನು ಮರುಪೂರಣ ವ್ಯವಸ್ಥೆಗೆ ತಿರುಗಿಸಬಹುದು.
4. ಪೈಪ್‌ಗಳು ಮತ್ತು ಟ್ಯಾಂಕ್‌ಗಳನ್ನು ನಿರ್ಮಿಸಿಕೊಳ್ಳಿ:
ಪೈಪ್‌ಗಳನ್ನು ಅಳವಡಿಸುವುದಕ್ಕಾಗಿ:
ಪೈಪ್‌ಗಳನ್ನು ಹಾಕಲು ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು (ಅಗತ್ಯವಿದ್ದರೆ) ಮೊದಲೇ ಪಡೆದುಕೊಳ್ಳಿರಿ.
ನೆಲದಡಿಯಲ್ಲಿ ಹಾಕುವುದಾದರೆ, ಟ್ರೆಂಚ್ಗಳನ್ನು ತೆಗೆದು ಹಾಕಿರಿ.
ಮಳೆನೀರು ಕೋಯ್ಲು ಮಾಡಿದ ನೀರು ಸ್ಟೋರೇಜ್ ಟ್ಯಾಂಕ್ನ ಒಂದು ಕಡೆಯಲ್ಲಿ ಬೀಳುವಂತೆ ಮಾಡುವುದು ಉತ್ತಮ. ಅದರಿಂದ ಸುಲಭವಾಗಿ ಸ್ವಚ್ಛಗೊಳಿಸಲು ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ ಕೆಸರು ತುಂಬಿಕೊಳ್ಳುವುದನ್ನು ತಡೆಯುವುದು ಸಾಧ್ಯವಾಗುತ್ತದೆ.
ಪೈಪ್‌ಗಳನ್ನು ಟ್ರೆಂಚ್ಗಳಲ್ಲಿ ಅಥವಾ ಬೇರೆ ರೀತಿಯಲ್ಲಿ ಅಳವಡಿಸಿ ಮತ್ತು ಕನೆಕ್ಟರ್‌ಗಳನ್ನು ಬಳಸಿ ಪೈಪ್‌ಗಳನ್ನು ಸಂಪರ್ಕಿಸಿ.
ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲು:
ಪ್ರಾಪರ್ಟಿಗೆ ಒಂದು ಸೂಕ್ತವಾದ ಟ್ಯಾಂಕ್ ಸ್ಟ್ಯಾಂಡ್ ನಿರ್ಮಾಣ ಮಾಡಿ.
ಟ್ಯಾಂಕ್‌ಗಳನ್ನು ಸ್ಟ್ಯಾಂಡ್‌ನಲ್ಲಿ ಇರಿಸಿ ಮತ್ತು ಖಾಲಿಯಾದಾಗ ಅವು ಹಾರಿಹೋಗದಂತೆ ನೋಡಿಕೊಳ್ಳಿ.
ಎಲ್ಲ ಟ್ಯಾಂಕ್‌ಗಳನ್ನು ಒಂದಕ್ಕೊಂದು ಸಂಪರ್ಕಿಸಿ, ಅದರಿಂದ ಅವೆಲ್ಲವೂಗಳಲ್ಲಿ ಒಂದೇ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಸರಳವಾಗಿ ನಿರ್ವಹಣೆ ಮಾಡಲು ಪ್ರತಿ ಟ್ಯಾಂಕ್‌ಗೆ ವಾಲ್ವ್ ಹಾಕಲು ಶಿಫಾರಸು ಮಾಡಲಾಗಿದೆ.
ಹೆಚ್ಚು ಕಲುಷಿತವಾದ ಮಳೆನೀರನ್ನು ನಿಮ್ಮ ಮಳೆನೀರಿನ ಟ್ಯಾಂಕ್‌ಗೆ ಬರದಂತೆ ಮಾಡಲು ಫಸ್ಟ್ ಫ್ಲಶ್ ಡೈವರ್ಟರ್‌ಗಳನ್ನು ಅಳವಡಿಸಿಕೊಳ್ಳಿರಿ.
ಕೆಲವು ಬಗೆಯ ಓವರ್‌ಫ್ಲೋ ವ್ಯವಸ್ಥೆಯನ್ನು ಮಾಡಿಕೊಳ್ಳಿರಿ. ಟ್ಯಾಂಕ್ಗಳು ಸಂಪ್‌ನಲ್ಲಿದ್ದರೆ ಅವುಗಳಿಗೆ ಓವರ್‌ಫ್ಲೋ ವ್ಯವಸ್ಥೆ ಮತ್ತು ಸಾಕಷ್ಟು ಒಳಚರಂಡಿಗಳ ಅಗತ್ಯವಿರುತ್ತದೆ. ಓವರ್‌ಫ್ಲೋ ಕಿರಿದಾಗಿದ್ದರೆ ಪಂಪ್‌ಗಳು ಮುಳುಗುತ್ತವೆ.
PVC ಕಲೆಕ್ಟರ್ ಪೈಪ್‌ಗಳು ಮತ್ತು ಟ್ಯಾಂಕ್ಗಳ ನಡುವೆ ಅಂತಿಮ ಸಂಪರ್ಕವನ್ನು ಮಾಡಿ.
ನೀರಿನ ಮಟ್ಟ ಮತ್ತು ಬಳಕೆಯನ್ನು ನಿಯಮಿತವಾಗಿ ಅಳತೆ ಮಾಡಲು ಟ್ಯಾಂಕ್ ಗೇಜ್ ಅನ್ನು ಅಳವಡಿಸಿರಿ.
ಇವು ಮಳೆನೀರು ಕೊಯ್ಲಿನ ಹಂತಗಳು ಇವು ನೀವಿರುವ ಸ್ಥಳದಲ್ಲಿ ಉತ್ತಮ ವ್ಯವಸ್ಥೆಯನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸುತ್ತವೆ.