ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ವಾಸ್ತು ಪ್ರಕಾರ ಸೂಕ್ತ ಮಲಗುವ ದಿಕ್ಕು

ವಾಸ್ತು ನಿಯಮಗಳ ಅನುಸಾರ ನಿಮ್ಮ ಹಾಸಿಗೆಯ ಸ್ಥಾನವನ್ನು ಹೊಂದಿಸುವ ಮೂಲಕ ಸುಖನಿದ್ದೆ ಮತ್ತು ಯೋಗಕ್ಷೇಮದ ವೃದ್ದಿಯನ್ನು ಖಾತ್ರಿಗೊಳಿಸಿಕೊಳ್ಳಿ. ಸೂಕ್ತ ಶಕ್ತಿಯ ಹರಿಯುವಿಕೆಯ ದೃಷ್ಟಿಯಿಂದ ದಕ್ಷಿಣ ದಿಕ್ಕು ಮಲಗಲು ಸೂಕ್ತವಾಗಿದೆ. ಈ ಬ್ಲಾಗಿನಲ್ಲಿ ವಾಸ್ತುವಿನ ಅನುಸಾರ ಯಾವ ದಿಕ್ಕುಗಳು ಮಲಗಲು ಸೂಕ್ತ ಮತ್ತು ಹೇಗೆ ಅವು ನಿದ್ದೆ ಮತ್ತು ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿಯಬಹುದು.

Share:


ಈ ಅಂಶಗಳನ್ನು ಗಮನಿಸಿ

 

  • ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ವಾಸ್ತುವಿನ ಪ್ರಕಾರ ಮಲಗಲು ಸೂಕ್ತ ದಿಕ್ಕು ಎಂದು ಪರಿಗಣಿಸಲ್ಪಟ್ಟಿದೆ.

     

  • ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಸೂಕ್ತವಲ್ಲ, ಏಕೆಂದರೆ ಅದು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದು.

     

  • ಧನಾತ್ಮಕ ಶಕ್ತಿಯ ಹರಿವು ಹೆಚ್ಚುವಂತೆ ಮಲಗುವ ಕೋಣೆಯನ್ನು ವಿನ್ಯಾಸಗೊಳಿಸಲು ಸಹ ವಾಸ್ತುಶಾಸ್ತ್ರವು ಕೆಲವು ನಿರ್ದೇಶನಗಳನ್ನು ನೀಡುತ್ತದೆ.

     

  • ವಾಸ್ತುವಿನ ಅನುಸಾರ ಸರಿಯಾದ ದಿಕ್ಕು ಮತ್ತು ಜಾಗದಲ್ಲಿ ಮಲಗುವುದು ನಿಮ್ಮ ಯೋಗಕ್ಷೇಮದ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ.



ವಾಸ್ತುಶಿಲ್ಪ ಮತ್ತು ವಿನ್ಯಾಸದ ಕುರಿತಾದ ಭಾರತದ ಪುರಾತನ ವಿಜ್ಞಾನವಾದ ವಾಸ್ತುಶಾಸ್ತ್ರವು ವ್ಯಕ್ತಿಗಳು ಮತ್ತು ಅವರು ವಾಸಿಸುವ ಜಾಗದ ನಡುವಿನ ಸಾಮರಸ್ಯವನ್ನು ಒತ್ತಿ ಹೇಳುತ್ತದೆ. ಮಲಗುವ ದಿಕ್ಕು ವಾಸ್ತು ಪ್ರಕಾರ ಒಂದು ನಿರ್ಣಾಯಕ ಅಂಶವಾಗಿದ್ದು, ನಿಮ್ಮ ಆರೋಗ್ಯ, ಯೋಗಕ್ಷೇಮ ಮತ್ತು ಸಮಗ್ರ ಶಕ್ತಿಯ ಮಟ್ಟವನ್ನು ಪ್ರಭಾವಿಸುತ್ತದೆ. ಈ ಬ್ಲಾಗಿನಲ್ಲಿ ನಾವು ವಾಸ್ತು ಪ್ರಕಾರ ಸೂಕ್ತ ಮಲಗುವ ದಿಕ್ಕು, ತಪ್ಪಾದ ಅಥವಾ ಸರಿಯಾದ ದಿಕ್ಕಿನಲ್ಲಿ ಮಲಗುವದರಿಂದ ಆಗುವ ಪರಿಣಾಮಗಳು, ಮತ್ತು ನಮ್ಮ ದೈನಂದಿನ ಬದುಕಿನ ಮೇಲೆ ಅವುಗಳ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತೇವೆ.


ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದು ಯಾಕೆ ಉತ್ತಮವೆಂದು ಪರಿಗಣಿಸಲ್ಪಟ್ಟಿದೆ?

ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದು ಉತ್ತಮವೆಂದು ಪರಿಗಣಿಸಲ್ಪಟ್ಟಿದೆ. ಇದು ಭೂಮಿಯ ಕಾಂತೀಯ ಕ್ಷೇತ್ರದೊಂದಿಗೆ ಹೊಂದಿಕೊಳ್ಳುವುದರಿಂದ ವಿಶ್ರಾಂತಿ ಮತ್ತು ಮನೋಲ್ಲಾಸವನ್ನು ವೃದ್ದಿಸಿ ಶಕ್ತಿಯ ಸಹಜ ಹರಿವಿಗೆ ಆಸ್ಪದ ನೀಡುತ್ತದೆ.

 

ವಾಸ್ತುವಿನ ನಿಯಮಗಳ ಪ್ರಕಾರ ಭೂಮಿಯ ಕಾಂತೀಯ ಸೆಳೆತವು ಉತ್ತರದಿಂದ ದಕ್ಷಿಣದ ಕಡೆಗಿದ್ದು. ಅದರ ವಿರುದ್ಧ ದಿಕ್ಕಿಗೆ ಮಲಗುವುದರಿಂದ (ಅಂದರೆ ದಕ್ಷಿಣಕ್ಕೆ ತಲೆ ಮತ್ತು ಉತ್ತರಕ್ಕೆ ಕಾಲು ಹಾಕಿ) ನಿಮ್ಮ ದೇಹವು ಈ ನೈಸರ್ಗಿಕ ಸೆಳೆತದೊಂದಿಗೆ ಸಮನ್ವಯವನ್ನು ಹೊಂದಬಹುದು. ಇದರ ಕೆಲವು ಉಪಯೋಗಗಳು ಇಂತಿವೆ:

 

  • ಉತ್ತಮ ಗುಣಮಟ್ಟದ ನಿದ್ದೆ: ಭೂಮಿಯ ಕಾಂತೀಯ ಕ್ಷೇತ್ರದೊಂದಿಗೆ ಹೊಂದಿಕೊಳ್ಳುವುದರಿಂದ ದೇಹವು ಶಾಂತವಾಗಿ ಗಾಢನಿದ್ದೆಯು ಸಾಧ್ಯವಾಗುತ್ತದೆ.

 

  • ಆರೋಗ್ಯ ಸುಧಾರಣೆ: ದಕ್ಷಿಣಾಭಿಮುಖ ದಿಕ್ಕು ದೈಹಿಕ ಆರೋಗ್ಯದ ವೃದ್ದಿ ಮತ್ತು ರಕ್ತ ಪರಿಚಲನೆಯ ವೃದ್ಧಿಗೆ ಕಾರಣವಾಗುತ್ತದೆ.

 

  • ಧನಾತ್ಮಕ ಶಕ್ತಿಯ ಹರಿವು: ಈ ದಿಕ್ಕು ಧನಾತ್ಮಕ ಶಕ್ತಿಯ ನವಿರಾದ ಹರಿವಿಗೆ ಅನುವು ಮಾಡಿಕೊಡುವುದಲ್ಲದೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

 

  • ಮನಸ್ಸಿನ ಸ್ಪಷ್ಟತೆಯ ವೃದ್ಧಿ: ಸಾಮಾನ್ಯವಾಗಿ ದಕ್ಷಿಣಕ್ಕೆ ತಲೆ ಹಾಕಿ ಮಲಗುವವರು ಎದ್ದ ನಂತರ ಆಯಾಸ ಕಡಿಮೆಯಾಗುವುದಲ್ಲದೆ ಮನಸ್ಸಿನ ಸ್ಪಷ್ಟತೆ ವೃದ್ದಿಯಾಗುವುದಾಗಿ ಹೇಳಿಕೊಂಡಿದ್ದಾರೆ.

 

ವಾಸ್ತುವಿನ ಪ್ರಕಾರ, ದಕ್ಷಿಣಕ್ಕೆ ತಲೆಯಿಟ್ಟು ಮಲಗುವುದು ಉತ್ತಮ, ಏಕೆಂದರೆ ಇದು ಆರೋಗ್ಯವನ್ನು ಉತ್ತಮಗೊಳಿಸುವುದಲ್ಲದೆ ಹೆಚ್ಚು ವಿಶ್ರಾಂತಿಯ ನಿದ್ದೆಯನ್ನು ನೀಡುತ್ತದೆ.


ಉತ್ತರ, ಪೂರ್ವ ಅಥವಾ ಪಶ್ಚಿಮಕ್ಕೆ ತಲೆಯಿಟ್ಟು ಮಲಗುವುದರಿಂದ ಆಗುವ ಪರಿಣಾಮಗಳು.



ದಕ್ಷಿಣ ದಿಕ್ಕು ಉತ್ತಮವೆಂದು ಶಿಫಾರಸು ಮಾಡಿರುವುದೇನೋ ಸರಿ, ಆದರೆ ಉಳಿದ ದಿಕ್ಕುಗಳು? ವಾಸ್ತು ಶಾಸ್ತ್ರವು ಉತ್ತರ,ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮಲಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ಮತ್ತು ಹೇಗೆ ಈ ದಿಕ್ಕುಗಳು ಕೆಲವರಿಗೆ ಮಾತ್ರ ಸೂಕ್ತವೆಂಬುದರ ಬಗ್ಗೆ ತಿಳಿಸಿಕೊಡುತ್ತದೆ.

1. ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದು

ಉತ್ತರಕ್ಕೆ ತಲೆ ಹಾಕಿ ಮಲಗುವುದರಿಂದ ದೇಹದ ಸಹಜ ಶಕ್ತಿಯ ಹರಿಯುವಿಕೆಗೆ ತೊಂದರೆ ಉಂಟಾಗುವುದರಿಂದ ವಾಸ್ತುಶಾಸ್ತ್ರವು ಇದನ್ನುಪ್ರೋತ್ಸಾಹಿಸುವುದಿಲ್ಲ. ಭೂಮಿಯ ಕಾಂತೀಯ ವಲಯವು ಉತ್ತರದಿಂದ ದಕ್ಷಿಣದೆಡೆಗೆ ಇದ್ದು, ಉತ್ತರಕ್ಕೆ ತಲೆ ಇರಿಸುವುದರಿಂದ ನಿದ್ರಾಹೀನತೆ, ಚಡಪಡಿಕೆ ಹಾಗೂ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು.

 

2. ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದು

ಪೂರ್ವ ದಿಕ್ಕು ಒಂದು ಉತ್ತಮ ಪರ್ಯಾಯವೆಂದು ಪರಿಗಣಿಸಲ್ಪಟ್ಟಿದೆ. ವಾಸ್ತು ಪ್ರಕಾರ ಪೂರ್ವಕ್ಕೆ ತಲೆಯಿಟ್ಟು ಮಲಗುವುದರಿಂದ ಸ್ಮರಣ ಶಕ್ತಿಯ ವೃದ್ಧಿ, ಏಕಾಗ್ರತೆಯ ಹೆಚ್ಚಳ ಮತ್ತು ಮಾನಸಿಕ ಶಾಂತಿ ಲಭಿಸುತ್ತದೆ. ಈ ದಿಕ್ಕು ವಿಶೇಷವಾಗಿ ದೈನಂದಿನ ಕೆಲಸದಲ್ಲಿ ಏಕಾಗ್ರತೆ ಮತ್ತು ಸ್ಪಷ್ಟತೆಯನ್ನು ಬಯಸುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಪ್ರಯೋಜನಕಾರಿ.

 

3. ಪಶ್ಚಿಮ ದಿಕ್ಕಿಗೆ ತಲೆಯಿಟ್ಟು ಮಲಗುವುದು

ಪಶ್ಚಿಮ ದಿಕ್ಕು ಬಹುತೇಕ ತಟಸ್ಥವಾಗಿದೆ. ಈ ದಿಕ್ಕಿನಲ್ಲಿ ಮಲಗುವುದರಿಂದ ಯಾವುದೇ ತೊಂದರೆಯಿಲ್ಲದಿದ್ದರೂ, ದಕ್ಷಿಣ ಅಥವಾ ಪೂರ್ವದಂತೆ ಯಾವ ಅನುಕೂಲಗಳೂ ಇಲ್ಲ. ಪಶ್ಚಿಮಕ್ಕೆ ತಲೆಯಿಟ್ಟು ಮಲಗುವವರು ಸಾಧಾರಣ ವಿಶ್ರಾಂತಿ, ಕೆಲವೊಮ್ಮೆ ನಿದ್ದೆಯಿಂದ ಎದ್ದಾಗ ಅತೃಪ್ತಿ ಮೊದಲಾದ ಮಿಶ್ರಫಲಗಳನ್ನು ಅನುಭವಿಸಬಹುದು.

 

ವಾಸ್ತುವಿನ ಪ್ರಕಾರ ಮಲಗುವ ಸರಿಯಾದ ಮತ್ತು ಉತ್ತಮವಾದ ದಿಕ್ಕು ಮುಖ್ಯವಾಗಿ ನಿಮ್ಮ ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ, ಆದರೆ ಪಶ್ಚಿಮ ಮತ್ತು ಪೂರ್ವ ದಿಕ್ಕುಗಳನ್ನು ಅವುಗಳ ಧನಾತ್ಮಕ ಪ್ರಭಾವಗಳಿಂದಾಗಿ ಶಿಫ಼ಾರಸ್ಸು ಮಾಡಲಾಗುತ್ತದೆ ಹಾಗೂ ಉತ್ತರ ದಿಕ್ಕನ್ನು ಬಳಸದಿರುವುದು ಒಳ್ಳೆಯದು.


ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಮಲಗುವ ದಿಕ್ಕು ಬೀರುವ ಪರಿಣಾಮಗಳು.



ವಾಸ್ತುವಿನ ಪ್ರಕಾರ ಮಲಗುವ ದಿಕ್ಕು ನಿಮ್ಮ ದೈಹಿಕ ಹಾಗೂ ಮಾನಸಿಕ ಆರೊಗ್ಯದ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ಸರಿಯಾದ ದಿಕ್ಕಿನಲ್ಲಿ ಮಲಗುವುದು ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಬಲ್ಲದು ಆದರೆ ತಪ್ಪಾದ ಸ್ಥಾನವು ಆರೊಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೇಗೆಂದರೆ:

 

1. ದೈಹಿಕ ಆರೋಗ್ಯ

ಈ ಮೊದಲೇ ಹೇಳಿದಂತೆ ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ರಕ್ತ ಪರಿಚಲನೆ ವೃದ್ಧಿಯಾಗಿ ಹೃದಯ ರಕ್ತನಾಳದ ಆರೋಗ್ಯವೂ ಸುಧಾರಿಸುತ್ತದೆ. ಇದು ದೇಹದ ನೈಸರ್ಗಿಕ ಶಕ್ತಿಯೊಂದಿಗೂ ಹೊಂದಿಕೊಂಡಿರುವುದರಿಂದ ತಲೆನೋವು, ಒತ್ತಡ ಮತ್ತು ನಿದ್ರಾಹೀನತೆಯ ಆತಂಕವನ್ನು ದೂರ ಮಾಡುತ್ತದೆ.

ಬೇರೆ ದಿಕ್ಕುಗಳಲ್ಲಿ ಅದರಲ್ಲೂ ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ಈ ಎಲ್ಲಾ ಕ್ರಿಯೆಗಳಿಗೆ ಅಡ್ಡಿಯುಂಟಾಗಿ ಆಯಾಸ ಮತ್ತು ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

 

2. ಮಾನಸಿಕ ಆರೋಗ್ಯ

ಸರಿಯಾದ ಮಲಗುವ ದಿಕ್ಕಿನ ವಾಸ್ತು ಕೇವಲ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ್ದಲ್ಲ - ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನವನ್ನೂ ಇದು ಪ್ರಭಾವಿಸುತ್ತದೆ. ದಕ್ಷಿಣ ಅಥವಾ ಪೂರ್ವಕ್ಕೆ ಮಲಗುವುದು ಮಾನಸಿಕ ಶಾಂತಿಯನ್ನು ಹೆಚ್ಚಿಸಿ ಆತಂಕವನ್ನು ಕಡಿಮೆ ಮಾಡಿದರೆ ತಪ್ಪಾದ ದಿಕ್ಕಿನಲ್ಲಿ ಮಲಗುವುದು ಚಡಪಡಿಕೆ, ಸಿಡುಕುತನ ಮತ್ತು ಕೆಟ್ಟ ಕನಸುಗಳಿಗೂ ಕಾರಣವಾಗಬಹುದು.

 

ವಾಸ್ತು ನಿಯಮಗಳ ಅನುಸಾರವಾಗಿ ಮಲಗುವ ಜಾಗವನ್ನು ಆಯ್ಕೆ ಮಾಡಿಕೊಳ್ಳುವುದು ಮಾನಸಿಕ ಸಮತೋಲನ, ದೈಹಿಕ ಆರೋಗ್ಯ ಮತ್ತು ಉತ್ತಮ ಭಾವನಾತ್ಮಕ ಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ.


ನಿಮ್ಮ ಮಲಗುವ ಕೋಣೆಯಲ್ಲಿ ಸರಿಯಾದ ಮಲಗುವ ದಿಕ್ಕನ್ನು ಅಯ್ದುಕೊಳ್ಳಲು ವಾಸ್ತು ಸಲಹೆಗಳು



ನಿಮ್ಮ ಮಲಗುವ ಕೋಣೆಯನ್ನು ವಿನ್ಯಾಸಗೊಳಿಸುವಾಗ, ವಾಸ್ತು ನಿಯಮಗಳನ್ನು ಪಾಲಿಸುವುದು ಉತ್ತಮ ನಿದ್ದೆ ಮತ್ತು ಒಟ್ಟಾರೆ ಸಾಮರಸ್ಯಕ್ಕೆ ಕಾರಣವಾಗುತ್ತದೆ. ನಿಮ್ಮ ಮಲಗುವ ಕೋಣೆ ಮತ್ತು ಹಾಸಿಗೆಯ ಸರಿಯಾಗಿ ಹೊಂದಿಸಲು ಕೆಲವು ವಾಸ್ತು ಮಾರ್ಗಸೂಚಿಗಳು ಇಂತಿವೆ:

 

1. ನಿಮ್ಮ ಮಂಚದ ತಲೆಯ ಭಾಗವು ದಕ್ಷಿಣ ಅಥವಾ ಪೂರ್ವಕ್ಕೆ ಸ್ಥಾಪಿತವಾಗಿದೆಯೆಂಬುದನ್ನು ಖಾತ್ರಿಪಡಿಸಿಕೊಳ್ಳಿ. ವಾಸ್ತು ಪ್ರಕಾರ ಇದು ಮಲಗಲು ಅತ್ಯುತ್ತಮ ದಿಕ್ಕಾಗಿದ್ದು ಧನಾತ್ಮಕ ಶಕ್ತಿಯ ಹರಿವಿಗೆ ಎಡೆಮಾಡಿಕೊಡುತ್ತದೆ.

 

2. ಛಾವಣಿಯ ತೊಲೆಯ ಕೆಳಗೆ ಮಂಚವನ್ನು ಇರಿಸುವುದು ವಾಸ್ತುವಿನಲ್ಲಿ ಅಶುಭ ಎಂದು ಪರಿಗಣಿಸಲ್ಪಟ್ಟಿದೆ.ಇದರಿಂದ ಒತ್ತಡ ಮತ್ತು ಉದ್ವೇಗದ ಭಾವನೆಯು ಉಂಟಾಗಿ ವಿಶ್ರಾಂತಿಯಿಂದ ನಿದ್ರಿಸುವುದು ಕಷ್ಟವಾಗುತ್ತದೆ.

 

3. ವಾಸ್ತು ಪ್ರಕಾರ ಮಲಗುವ ಜಾಗವು ಬಾಗಿಲಿನಿಂದ ದೂರ ಇರಬೇಕು, ಆದರೆ ಮಲಗಿದಾಗ ಬಾಗಿಲು ಕಾಣಿಸುವಂತಹ ಜಾಗದಲ್ಲಿ ಇರಬೇಕು. ಇದು ಒಂದು ಬಗೆಯ ಭದ್ರತೆಯ ಭಾವನೆಯನ್ನು ನೀಡುವುದಲ್ಲದೇ ವಿಶ್ರಾಂತಿಯನ್ನು ನೀಡುತ್ತದೆ.

 

4. ಅಸ್ತವ್ಯಸ್ತವಾಗಿರುವ ಮಲಗುವ ಕೋಣೆಯು ಶಕ್ತಿಯ ಹರಿವಿಗೆ ತಡೆಯೊಡ್ಡಿ ನಿಮ್ಮ ನಿದ್ದೆಯನ್ನು ಹಾಳುಮಾಡುತ್ತದೆ.ನಿಮ್ಮ ಮಲಗುವ ಕೋಣೆ, ವಿಶೇಷವಾಗಿ ನಿಮ್ಮ ಹಾಸಿಗೆಯ ಸುತ್ತ ಸ್ವಚ್ಛವಾಗಿ, ವ್ಯವಸ್ಥಿತವಾಗಿ ಮತ್ತು ಅನವಶ್ಯಕ ವಸ್ತುಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಿ.

 

ವಾಸ್ತುವಿನ ಪ್ರಕಾರ, ಮಲಗುವ ಜಾಗ ಮತ್ತು ದಿಕ್ಕು ನಿಮ್ಮ ಕೋಣೆಯ ಒಟ್ಟಾರೆ ವಿನ್ಯಾಸ ಮತ್ತು ಪರಿಸರದಷ್ಟೇ ಮುಖ್ಯ. ಈ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ಮಲಗುವ ಜಾಗವು ವಾಸ್ತು ನಿಯಮಗಳೊಂದಿಗೆ ಸಾಮರಸ್ಯ ಸಾಧಿಸಬಹುದು.

 

 



ಮಲಗುವ ಸರಿಯಾದ ದಿಕ್ಕನ್ನು ಆಯ್ದುಕೊಳ್ಳುವುದು ಮತ್ತು ಈ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ನಿದ್ದೆಯ ಗುಣಮಟ್ಟ ಉತ್ತಮಗೊಳ್ಳುವುದಲ್ಲದೇ ಬದುಕಿನಲ್ಲಿ ಸಾಮರಸ್ಯ ಮತ್ತು ಸಮತೋಲನವು ಲಭಿಸುತ್ತದೆ.




ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

1. ಮಲಗಲು ಯಾವ ದಿಕ್ಕು ಸೂಕ್ತ?

ವಾಸ್ತು ಪ್ರಕಾರ ಮಲಗಲು ಸೂಕ್ತ ದಿಕ್ಕೆಂದರೆ ನಿಮ್ಮ ತಲೆಯನ್ನು ದಕ್ಷಿಣಕ್ಕಿರಿಸಿ ಮಲಗುವುದು, ಏಕೆಂದರೆ ಇದು ಭೂಮಿಯ ಕಾಂತೀಯ ವಲಯದೊಂದಿಗೆ ಹೊಂದಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಮತ್ತು ವಿಶ್ರಾಂತಿಯುತ ನಿದ್ದೆಯನ್ನು ನೀಡುತ್ತದೆ.

 

2. ಉತ್ತರ ಅಥವಾ ದಕ್ಷಿಣ ಯಾವ ದಿಕ್ಕಿಗೆ ತಲೆ ಹಾಕಿ ಮಲಗುವುದು ಉತ್ತಮ?

ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದು ಉತ್ತಮವೆಂದು ಹೇಳಲಾಗುತ್ತದೆ. ಉತ್ತರಕ್ಕೆ ತಲೆ ಹಾಕಿ ಮಲಗುವುದು ದೇಹದ ಸಹಜ ಶಕ್ತಿಯ ಹರಿವಿನ ಮೇಲೆ ಋಣಾತ್ಮಕ ಪರಿಣಾಮ ಬೀರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಇದು ಸೂಕ್ತವಲ್ಲವೆಂದು ಪರಿಗಣಿಸಲಾಗಿದೆ.

 

3. ಉತ್ತರ ದಿಕ್ಕು ಮಲಗಲು ಏಕೆ ಸೂಕ್ತವಲ್ಲ?

ವಾಸ್ತು ಪ್ರಕಾರ, ಉತ್ತರಕ್ಕೆ ತಲೆ ಹಾಕಿ ಮಲಗುವುದು ಭೂಮಿಯ ಕಾಂತೀಯ ವಲಯದೊಂದಿಗೆ ದೇಹದ ಹೊಂದಾಣಿಕೆಗೆ ಅಡ್ಡಿಯುಂಟುಮಾಡುತ್ತದೆ. ಇದು ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಮತ್ತು ಮಾನಸಿಕ ಅಶಾಂತಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

 

4. ವಾಸ್ತು ಪ್ರಕಾರ ಯಾವ ದಿಕ್ಕು ಮಲಗಲು ಯೋಗ್ಯವಲ್ಲ?

ವಾಸ್ತುವಿನ ಅನುಸಾರ, ಉತ್ತರಕ್ಕೆ ತಲೆ ಹಾಕಿ ಮಲಗುವುದನ್ನು ತಡೆಯಿರಿ, ಏಕೆಂದರೆ ಇದು ಅಶುಭವೆಂದು ಪರಿಗಣಿಸಲ್ಪಟ್ಟಿದೆ ಮತ್ತು ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ದುಷ್ಪರಿಣಾಮ ಬೀರುತ್ತದೆ.

 

5. ನಾವು ಯಾವ ದಿಕ್ಕಿಗೆ ಅಭಿಮುಖವಾಗಿ ಮಲಗಬೇಕು?

ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದು ಉತ್ತಮವೆಂದು ವಾಸ್ತು ಹೇಳುತ್ತದೆ, ಏಕೆಂದರೆ ಈ ಎರಡು ದಿಕ್ಕುಗಳು ಆರೋಗ್ಯ ಮತ್ತು ಮಾನಸಿಕ ಸ್ಪಷ್ಟತೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ.

 

6. ನಿಮ್ಮ ಹಾಸಿಗೆಯು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು?

ವಾಸ್ತುವಿನ ಪ್ರಕಾರ, ಯಾವ ದಿಕ್ಕಿಗೆ ಮಲಗಬೇಕೆಂಬುದು ನಿರ್ಣಾಯಕ ಅಂಶವಾಗಿದೆ. ನಿಮ್ಮ ಹಾಸಿಗೆಯು ದಕ್ಶಿಣ ಅಥವಾ ಪೂರ್ವಕ್ಕೆ ಅಭಿಮುಖವಾಗಿದ್ದರೆ ಉತ್ತಮ, ವಾಸ್ತು ನಿಯಮಗಳ ಅನುಸಾರ ನೀವು ನೆಮ್ಮದಿಯಿಂದ ಮಲಗುವುದನ್ನು ಇದು ಖಾತ್ರಿಪಡಿಸುತ್ತದೆ.


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....