ಆನ್-ಸೈಟ್ ಪರೀಕ್ಷೆಗಳು ಸಿಮೆಂಟ್ ಗುಣಮಟ್ಟದ ಆರಂಭಿಕ ಮೌಲ್ಯಮಾಪನವನ್ನು ಒದಗಿಸಬಹುದಾದರೂ, ಪ್ರಯೋಗಾಲಯ ಪರೀಕ್ಷೆಗಳು ಹೆಚ್ಚು ನಿಖರವಾದ ಮತ್ತು ಸಮಗ್ರ ಮೌಲ್ಯಮಾಪನವನ್ನು ನೀಡುತ್ತವೆ. ಸಿಮೆಂಟ್ ನ ಗುಣಮಟ್ಟವನ್ನು ನಿರ್ಧರಿಸಲು ಬಳಸುವ ಪ್ರಮುಖ ಪ್ರಯೋಗಾಲಯ ಪರೀಕ್ಷೆಗಳು ಇಲ್ಲಿವೆ.
ಸಿಮೆಂಟ್ ನ ನಯವಂತಿಕೆಯು ಅದರ ನೀರನ್ನು ಹಿಡಿದಿಟ್ಟುಕೊಳ್ಳುವ ದರ ಮತ್ತು ಶಕ್ತಿಗೆ ನೇರವಾಗಿ ಸಂಬಂಧಿಸಿದೆ. ನಯವಂತಿಕೆ ಪರೀಕ್ಷೆಯು ಸಿಮೆಂಟ್ ನ ಕಣದ ಗಾತ್ರವನ್ನು ಅಳೆಯುವುದನ್ನು ಒಳಗೊಂಡಿರುತ್ತದೆ. ಸಿಮೆಂಟ್ ನಯವಾಗಿದ್ದರೆ, ನೀರನ್ನು ಹಿಡಿದಿಟ್ಟುಕೊಳ್ಳಲು ಲಭ್ಯವಿರುವ ಮೇಲ್ಮೈ ವಿಸ್ತೀರ್ಣವು ಹೆಚ್ಚಾಗುತ್ತದೆ, ಇದು ಸಿಮೆಂಟ್ ಬಲಗೊಳ್ಳಲು ಕಾರಣವಾಗುತ್ತದೆ.
ಸೆಟ್ಟಿಂಗ್ ಸಮಯ ಪರೀಕ್ಷೆಗಳು
ಸಿಮೆಂಟ್ ಗಟ್ಟಿಯಾಗಲು ಮತ್ತು ಬಲವನ್ನು ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನಿರ್ಧರಿಸಲು ಸಿಮೆಂಟ್ ನ ಸೆಟ್ಟಿಂಗ್ ಸಮಯವು ನಿರ್ಣಾಯಕವಾಗಿದೆ. ಎರಡು ಪ್ರಮುಖ ಸೆಟ್ಟಿಂಗ್ ಸಮಯಗಳಿವೆ.
ಆರಂಭಿಕ ಸೆಟ್ಟಿಂಗ್ ಸಮಯವೆಂದರೆ, ಅದು ಸಿಮೆಂಟ್ ಪೇಸ್ಟ್ ಗಟ್ಟಿಯಾಗಲು ಪ್ರಾರಂಭಿಸಲು ತೆಗೆದುಕೊಳ್ಳುವ ಅವಧಿಯಾಗಿದೆ. ಸಿಮೆಂಟ್ ನ ಕೆಲಸದ ಸಮಯವನ್ನು ನಿರ್ಧರಿಸಲು ಇದು ಮುಖ್ಯವಾಗಿದೆ. ಪ್ರಮಾಣಿತ ಆರಂಭಿಕ ಸೆಟ್ಟಿಂಗ್ ಸಮಯವು ಸಿಮೆಂಟ್ ಗಟ್ಟಿಯಾಗಲು ಪ್ರಾರಂಭಿಸುವ ಮೊದಲು ಅದನ್ನು ಸರಿಯಾಗಿ ಅನ್ವಯಿಸುವುದನ್ನು ಖಚಿತಪಡಿಸುತ್ತದೆ.
ಅಂತಿಮ ಸೆಟ್ಟಿಂಗ್ ಸಮಯವು ಸಿಮೆಂಟ್ ಸಂಪೂರ್ಣವಾಗಿ ಗಟ್ಟಿಯಾಗಲು ತೆಗೆದುಕೊಳ್ಳುವ ಅವಧಿಯಾಗಿದೆ. ಈ ಪರೀಕ್ಷೆಯು ಸಿಮೆಂಟ್ ವಿರೂಪಗೊಳ್ಳದೆ ಹೊರೆಗಳನ್ನು ಹೊರುವ ಹಂತವನ್ನು ತಲುಪಿದೆ ಎಂದು ಖಚಿತಪಡಿಸುತ್ತದೆ.
ಸುಸ್ಥಿರತೆ ಎಂಬುದು ಸೆಟ್ಟಿಂಗ್ ಆದ ಬಳಿಕ ತನ್ನ ಪರಿಮಾಣವನ್ನು ಉಳಿಸಿಕೊಳ್ಳುವ ಸಿಮೆಂಟ್‌ನ ಸಾಮರ್ಥ್ಯವನ್ನು ಸೂಚಿಸುತ್ತದೆ. ಸುಸ್ಥಿರತೆ ಪರೀಕ್ಷೆಯು ಸಿಮೆಂಟ್ ಅತಿಯಾಗಿ ವಿಸ್ತರಿಸುವುದಿಲ್ಲ ಅಥವಾ ಸಂಕುಚಿತಗೊಳ್ಳುವುದಿಲ್ಲ ಎಂದು ಖಚಿತಪಡಿಸುತ್ತದೆ, ಏಕೆಂದರೆ, ವಿಸ್ತರಣೆ ಅಥವ ಸಂಕುಚತೆಯು ಕಟ್ಟಡದಲ್ಲಿ ಬಿರುಕು ಮತ್ತು ದುರ್ಬಲತೆಗೆ ಕಾರಣವಾಗಬಹುದು.
ಸಿಮೆಂಟ್ ಅದರ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ರಾಸಾಯನಿಕ ಸಂಯೋಜನೆಯನ್ನು ಹೊಂದಿರಬೇಕು. ರಾಸಾಯನಿಕ ಸಂಯೋಜನೆ ಪರೀಕ್ಷೆಯು ಸಿಮೆಂಟ್ ನಲ್ಲಿರುವ ಸುಣ್ಣ, ಸಿಲಿಕಾ, ಅಲ್ಯುಮಿನಾ ಮತ್ತು ಕಬ್ಬಿಣದ ಆಕ್ಸೈಡ್ ನಂತಹ ಅಂಶಗಳ ಪ್ರಮಾಣವನ್ನು ವಿಶ್ಲೇಷಿಸುತ್ತದೆ. ಸಿಮೆಂಟ್ ನ ಶಕ್ತಿ ಮತ್ತು ಬಾಳಿಕೆಗೆ ಸರಿಯಾದ ಪ್ರಮಾಣಗಳು ಅತ್ಯಗತ್ಯ.