ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸಸ್ಯದ ಸ್ಥಳವನ್ನು ಅರ್ಥ ಮಾಡಿಕೊಳ್ಳುವುದು

Share:


ಈ ಅಂಶಗಳನ್ನು ಗಮನಿಸಿ

 

  • ಸಸ್ಯಗಳ ವಾಸ್ತು ಶಾಸ್ತ್ರವು ನಿರ್ದಿಷ್ಟ ಸಸ್ಯಗಳು ಮತ್ತು ಅವುಗಳನ್ನು ಇರಿಸುವ ದಿಕ್ಕುಗಳು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಸೂಚಿಸುತ್ತದೆ.
 
  • ಮನೆಯಲ್ಲಿನ ಕೆಲ ವಾಸ್ತು ಮರಗಳನ್ನು ಪವಿತ್ರ ಮತ್ತು ಅವು ಅದೃಷ್ಟ ಹಾಗೂ ಸಂಪತ್ತನ್ನು ತರುತ್ತವೆ ಎಂದು ಪರಿಗಣಿಸಲಾಗುತ್ತದೆ, ಕೆಲವುಗಳನ್ನು ಇರಿಸಬಾರದು.
 
  • ಸಸ್ಯ ವಾಸ್ತುವಿನ ಪ್ರಕಾರ ಸರಿಯಾದ ಸಸ್ಯದ ದಿಕ್ಕು ನಿಮ್ಮ ಮನೆಯ ಶಕ್ತಿಯ ಹರಿವು, ಆರೋಗ್ಯ ಮತ್ತು ನೆಮ್ಮದಿಯ ಮೇಲೆ ಪರಿಣಾಮ ಬೀರಬಲ್ಲದು.


ಭಾರತದ ಪ್ರಾಚೀನ ವಾಸ್ತುಶಿಲ್ಪ ಮತ್ತು ವಿನ್ಯಾಸದ ವಿಜ್ಞಾನ ವಾಸ್ತುಶಾಸ್ತ್ರವು ಕಟ್ಟಡಗಳು ಮತ್ತು ಒಳಾಂಗಣ ಅಲಂಕರಣಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಸಸ್ಯಗಳು ಮತ್ತು ಹಸಿರಿನ ವಾತಾವರಣಕ್ಕೂ ಅನ್ವಯಿಸುತ್ತದೆ. ಸಸ್ಯಗಳು ಮತ್ತು ಮರಗಳಿಗೆ ವಾಸ್ತುಶಾಸ್ತ್ರವು ಮನೆ ಮತ್ತು ಸುತ್ತಮುತ್ತಲಲ್ಲಿ ಅವುಗಳ ಸೂಕ್ತ ಸ್ಥಾನ ಕುರಿತು ಆದ್ಯತೆ ನೀಡುತ್ತದೆ, ಅದು ಸಕಾರಾತ್ಮಕ ಶಕ್ತಿ, ಆರೋಗ್ಯ ಮತ್ತು ಸಂಪತ್ತು ತರುತ್ತದೆ. ಈ ಮಾರ್ಗದರ್ಶಿಯು ವಾಸ್ತು ತತ್ವಗಳ ಅನ್ವಯ ಒಳಾಂಗಣ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಇರಿಸುವ ಪ್ರಾಮುಖ್ಯತೆಯನ್ನು ಆವಿಷ್ಕರಿಸುವ ಮೂಲಕ ನಿಮ್ಮ ವಾಸಸ್ಥಳದ ಸಾಮರಸ್ಯ ಮತ್ತು ಯೋಗಕ್ಷೇಮವನ್ನು ಕಾಪಾಡುತ್ತದೆ.

 

 


ಹೇಗೆ ವಾಸ್ತು ಸಸ್ಯಗಳ ದಿಕ್ಕು ನಿಮ್ಮ ಮನೆಗೆ ಪರಿಣಾಮ ಬೀರುತ್ತದೆ

ನಿಮ್ಮ ಮನೆಯಲ್ಲಿ ಸಸ್ಯಗಳನ್ನು ಇರಿಸಿರುವ ಸ್ಥಳವು ಶಕ್ತಿಯ ಹರಿವಿಗೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸಸ್ಯಗಳ ವಾಸ್ತುಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಸಸ್ಯಗಳನ್ನು ಇರಿಸುವುದು ಸಕಾರಾತ್ಮಕತೆ ಹೆಚ್ಚಿಸುತ್ತದೆ, ಆರೋಗ್ಯ ಸುಧಾರಿಸುತ್ತದೆ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.

 

  • ಉತ್ತರ ಮತ್ತು ಪೂರ್ವ ದಿಕ್ಕುಗಳು: ಬಹಳಷ್ಟು ಸಸ್ಯಗಳಿಗೆ ಸೂಕ್ತವಾಗಿದ್ದು ಈ ದಿಕ್ಕುಗಳಲ್ಲಿ ಹೆಚ್ಚಿನ ಸೂರ್ಯನ ಬೆಳಕು ಬರುತ್ತದೆ ಮತ್ತು ಪವಿತ್ರ ಎಂದು ಭಾವಿಸಲಾಗುತ್ತದೆ. ಇಲ್ಲಿ ಇರಿಸಲಾದ ಸಸ್ಯಗಳು ಸಂಪತ್ತು ಮತ್ತು ಪ್ರಗತಿಯನ್ನು ತರುತ್ತವೆ.
 
  • ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳು: ವಾಸ್ತು ಪ್ರಕಾರ ಈ ದಿಕ್ಕಿನಲ್ಲಿರುವ ಸಸ್ಯಗಳು ಅಡೆತಡೆ ಮತ್ತು ಋಣಾತ್ಮಕತೆಯ ದಿಕ್ಕುಗಳು ಎಂದು ಪರಿಗಣಿಸಲಾಗುವುದರಿಂದ ನೆಡುವ ಸಸ್ಯಗಳಿಗೆ ಸೂಕ್ತವಾಗಿದೆ. ಆದಾಗ್ಯೂ, ನೈಋತ್ಯ ದಿಕ್ಕಿನಲ್ಲಿ ಕಾಕ್ಟಿಯಂತಹ ಮುಳ್ಳಿನ ಗಿಡಗಳನ್ನು ಇರಿಸುವುದರಿಂದ ಮನೆಯ ಋಣಾತ್ಮಕ ಶಕ್ತಿ ನಿವಾರಣೆಯಾಗುತ್ತದೆ.
 
  • ಈಶಾನ್ಯ ಮೂಲೆ: ಇದು ತುಳಸಿಗೆ ಅತ್ಯುತ್ತಮ ಸ್ಥಳ, ಏಕೆಂದರೆ ಇದು ಉತ್ತಮ ಆರೋಗ್ಯ ತರುತ್ತದೆ ಮತ್ತು ಋಣಾತ್ಮಕ ಶಕ್ತಿ ನಿವಾರಿಸುತ್ತದೆ.

 

 

ಮನೆಯಲ್ಲಿ ಸಸ್ಯಗಳಿಗೆ ಸೂಕ್ತವಾದ ವಾಸ್ತು ದಿಕ್ಕು

ನೆಡುವ ಸಸ್ಯಗಳಿಗೆ ಸೂಕ್ತವಾದ ದಿಕ್ಕು ಆಯ್ಕೆ ಮಾಡಿಕೊಳ್ಳುವುದು ವಾಸ್ತುಶಾಸ್ತ್ರದಲ್ಲಿ ಬಹಳ ಮುಖ್ಯವಾಗಿದೆ. ವಿವಿಧ ಸಸ್ಯಗಳ ಶಿಫಾರಸು ಮಾಡಲಾದ ದಿಕ್ಕುಗಳು ಕೆಲವು ಇಲ್ಲಿವೆ:

 

  • ತುಳಸಿಯನ್ನು ಈಶಾನ್ಯ ದಿಕ್ಕಿನಲ್ಲಿರಿಸುವುದರಿಂದ ಆಧ್ಯಾತ್ಮಿಕ ತರಂಗಗಳು ಪಸರಿಸುತ್ತವೆ ಮತ್ತು ವಾತಾವರಣವನ್ನು ಶುದ್ಧಗೊಳಿಸುತ್ತದೆ.
 
  • ಮನಿ ಪ್ಲಾಂಟ್: ಈ ಗಿಡವನ್ನು ಮನೆಯ ಆಗ್ನೇಯ ಮೂಲೆಯಲ್ಲಿ ಇರಿಸಿದರೆ ಸಂಪತ್ತನ್ನು ಆಕರ್ಷಿಸುತ್ತದೆ ಮತ್ತು ಹಣಕಾಸು ಸ್ಥಿರತೆ ತರುತ್ತದೆ.
 
  • ಜೇಡ್ ಪ್ಲಾಂಟ್: ಪೂರ್ವ ದಿಕ್ಕಿನಲ್ಲಿರಿಸಲು ಸೂಕ್ತವಾಗಿದ್ದು ಸಂಪತ್ತು ಮತ್ತು ಸಕಾರಾತ್ಮಕತೆ ತರಲು ಹೆಸರಾಗಿದೆ.
 
  • ಸ್ನೇಕ್ ಪ್ಲಾಂಟ್: ಆಗ್ನೇಯ ದಿಕ್ಕಿನಲ್ಲಿರಿಸುವ ಮೂಲಕ ಋಣಾತ್ಮಕ ಶಕ್ತಿಗಳಿಂದ ರಕ್ಷಣೆ ಪಡೆಯಬಹುದು.

 

 

ವಾಸ್ತು ಪ್ರಕಾರ ಮನೆಗೆ ಅದೃಷ್ಟದ ಸಸ್ಯಗಳು

ಕೆಲ ಸಸ್ಯಗಳನ್ನು ಗೃಹವಾಸ್ತುವಿನಲ್ಲಿ ಅದೃಷ್ಟ ಎಂದು ಭಾವಿಸಲಾಗುತ್ತದೆ ಮತ್ತು ಅವುಗಳು ಉತ್ತಮ ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿ ತರುತ್ತವೆ ಎಂದು ನಂಬಲಾಗುತ್ತದೆ. ನಿಮ್ಮ ಮನೆಗೆ ಭರವಸೆಯ ವಾಸ್ತು ಸಸ್ಯಗಳು ಕೆಲವು ಇಲ್ಲಿವೆ:

 

1. ತುಳಸಿ: ಹಿಂದೂ ಸಂಸ್ಕೃತಿಯಲ್ಲಿ ಪೂಜಿಸುವ ತುಳಸಿಯು ಶಾಂತಿ, ಗಾಳಿಯಲ್ಲಿ ಸ್ವಚ್ಛತೆ ಮತ್ತು ಪಾಸಿಟಿವ್ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗುತ್ತದೆ.



2,ಮನಿಪ್ಲಾಂಟ್: ಸಂಪತ್ತು ಮತ್ತು ಆರ್ಥಿಕ ಸ್ಥಿರತೆಯನ್ನು ಆಕರ್ಷಿಸಲು ಹೆಸರಾದ ಇದನ್ನು ಆಗ್ನೇಯ ಮೂಲೆಯ ಒಳಾಂಗಣದಲ್ಲಿ ಇರಿಸಲಾಗುತ್ತದೆ.



3. ಅರೇಕಾ ಪಾಮ್: ಈ ಸಸ್ಯವು ಗಾಳಿಯ ಗುಣಮಟ್ಟ ಹೆಚ್ಚಿಸುತ್ತದೆ ಮತ್ತು ಸ್ಥಳಕ್ಕೆ ಉಜ್ವಲ ಶಕ್ತಿ ತರುತ್ತದೆ. ಇದನ್ನು ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿರಿಸಬಹುದು.



4. ಬಿದಿರಿನ ಸಸ್ಯ: ಅದೃಷ್ಟ ಮತ್ತು ಸಂಪತ್ತನ್ನು ಸಂಕೇತಿಸುತ್ತದೆ; ಇದು ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿರಿಸಲು ಸೂಕ್ತವಾಗಿದೆ.



5. ಜೇಡ್ ಪ್ಲಾಂಟ್: ಸಂಪತ್ತಿನ ಸಂಕೇತವಾದ ಇದು ಪೂರ್ವ ದಿಕ್ಕಿಗೆ ಸೂಕ್ತವಾಗಿದೆ ಮತ್ತು ಕೆಲವೊಮ್ಮೆ ಪ್ರವೇಶ ದ್ವಾರದಲ್ಲಿರಿಸುವ ಮೂಲಕ ಸಂಪತ್ತನ್ನು ಆಕರ್ಷಿಸಲಾಗುತ್ತದೆ.



6. ಸ್ನೇಕ್ ಪ್ಲಾಂಟ್: ಗಾಳಿಯನ್ನು ಶುದ್ಧೀಕರಿಸುವ ಮತ್ತು ಋಣಾತ್ಮಕ ಶಕ್ತಿಗಳಿಂದ ರಕ್ಷಿಸುವ ಈ ಸಸ್ಯವು ಆಗ್ನೇಯ ದಿಕ್ಕಿಗೆ ಸೂಕ್ತವಾಗಿದೆ.



ನೀವು ಮನೆಯಲ್ಲಿ ನೆಡಬಾರದ ವಾಸ್ತು ಮರಗಳು

ಹಲವಾರು ಸಸ್ಯಗಳು ಸಕಾರಾತ್ಮಕ ಶಕ್ತಿ ತಂದುಕೊಟ್ಟರೆ ವಾಸ್ತುಶಾಸ್ತ್ರದ ಪ್ರಕಾರ ಕೆಲ ಸಸ್ಯಗಳು ಮನೆಯಲ್ಲಿರಿಸಲು ಸೂಕ್ತವಲ್ಲ. ನೀವು ಮನೆಯಲ್ಲಿ ನೆಡಬಾರದ ಕೆಲ ಮರಗಳು ಇಲ್ಲಿವೆ:

 

1. ಬೊನ್ಸಾಯ್ ಮರಗಳು ಕುಂಠಿತ ಬೆಳವಣಿಗೆ ಮತ್ತು ಸಂಘರ್ಷವನ್ನು ಬಿಂಬಿಸುತ್ತವೆ. ವಾಸ್ತು ಪ್ರಕಾರ ಅವುಗಳನ್ನು ಮನೆಯಲ್ಲಿರಿಸಲು ಶಿಫಾರಸು ಮಾಡಲಾಗುವುದಿಲ್ಲ.

 

2. ಕಾಕ್ಟಸ್ ಮತ್ತು ಮುಳ್ಳಿನ ಗಿಡಗಳು: ಈ ಸಸ್ಯಗಳು ಋಣಾತ್ಮಕ ಶಕ್ತಿ ಮತ್ತು ಸಂಘರ್ಷದೊಂದಿಗೆ ಸಂಪರ್ಕ ಹೊಂದಿವೆ, ಆದ್ದರಿಂದ ಅವುಗಳನ್ನು ಒಳಾಂಗಣಗಳಲ್ಲಿ ಇರಿಸಬಾರದು. ಅವುಗಳನ್ನು ಇರಿಸಿದರೂ ನೈಋತ್ಯ ದಿಕ್ಕಿನಿಂದ ಹೊರಗಡೆ ಇರಿಸಬೇಕು.

 

3. ಹುಣಸೆ ಮತ್ತು ಹೊಳೆ ದಾಸವಾಳ (ಮರ್ಟಲ್) ಮರಗಳು: ಇವುಗಳು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ನಂಬಲಾಗುತ್ತದೆ ಮತ್ತು ವಸತಿ ಪ್ರದೇಶಗಳ ಹತ್ತಿರ ಇವುಗಳನ್ನು ಬೆಳೆಸಬಾರದು.

 

4. ಬಬುಲ್(ಅಕೇಷಿಯಾ): ಅಪವಿತ್ರ ಎಂದು ಪರಿಗಣಿಸಲಾಗುತ್ತದೆ, ಇದು ಕುಟುಂಬ ಸದಸ್ಯರ ನಡುವೆ ಆತಂಕ ಮತ್ತು ಬಿಕ್ಕಟ್ಟುಗಳನ್ನು ಆಹ್ವಾನಿಸುತ್ತದೆ.

 

5. ಹತ್ತಿ ಮತ್ತು ರೇಷ್ಮೆ ಗಿಡಗಳು: ಇವುಗಳು ಹಣಕಾಸಿನ ಬಿಕ್ಕಟ್ಟುಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ತರುತ್ತವೆ ಎಂದು ನಂಬಲಾಗುವುದರಿಂದ ಮನೆಗಳ ಬಳಿ ಈ ಸಸ್ಯಗಳನ್ನು ಇರಿಸಬೇಡಿ.



 

ಸಸ್ಯಗಳು ಮತ್ತು ಮರಗಳ ವಾಸ್ತು ಶಾಸ್ತ್ರವು ಹಸಿರಿನ ವಾತಾವರಣದ ಸೂಕ್ತ ಸ್ಥಳವನ್ನು ಆಯ್ಕೆ ಮಾಡುವುದಕ್ಕೆ ಒತ್ತು ನೀಡುವ ಮೂಲಕ ಸಕಾರಾತ್ಮಕ ಶಕ್ತಿಯ ಹರಿವನ್ನು ನಿಮ್ಮ ಮನೆ ಮತ್ತು ಸುತ್ತಮುತ್ತಲಿನಲ್ಲಿ ನೀಡಲು ಆದ್ಯತೆ ನೀಡುತ್ತದೆ. ನಿಮ್ಮ ಮನೆಗೆ ಬಹಳಷ್ಟು ಪ್ರಮುಖ ವಾಸ್ತು ಮರಗಳು ಮತ್ತು ಸಸ್ಯಗಳ್ನು ಆಯ್ಕೆ ಮಾಡುವುದು ಮತ್ತು ಅವುಗಳನ್ನು ಸೂಕ್ತ ದಿಕ್ಕಿನಲ್ಲಿರಿಸುವುದು ನಿಮ್ಮ ಮನೆಯ ಆರೋಗ್ಯ, ಸಂಪತ್ತು ಮತ್ತು ಸಾಮರಸ್ಯಕ್ಕೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.  




ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

1) ನಿಮ್ಮ ಮನೆಯಲ್ಲಿ ಸ್ನೇಕ್ ಪ್ಲಾಂಟ್ ಎಲ್ಲಿ ಇರಿಸಬೇಕು?

ಸ್ನೇಕ್ ಪ್ಲಾಂಟ್ ಅನ್ನು ಆಗ್ನೇಯ ದಿಕ್ಕಿನಲ್ಲಿರಿಸಿದರೆ ಗಾಳಿಯನ್ನು ಶುದ್ಧಗೊಳಿಸುತ್ತದೆ ಮತ್ತು ಋಣಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ.

 

2) ವಾಸ್ತುಶಾಸ್ತ್ರದ ಪ್ರಕಾರ ನಾನು ಮನಿಪ್ಲಾಂಟ್ ಎಲ್ಲಿರಿಸಬೇಕು?

ವಾಸ್ತುಶಾಸ್ತ್ರದ ಪ್ರಕಾರ ಮನಿಪ್ಲಾಂಟ್ ಅನ್ನು ಮನೆಯ ಆಗ್ನೇಯ ಮೂಲೆಯಲ್ಲಿರಿಸಿದರೆ ಸಂಪತ್ತು ಮತ್ತು ಹಣಕಾಸು ಸ್ಥಿರತೆಯನ್ನು ಆಕರ್ಷಿಸುತ್ತದೆ.

 

3) ವಾಸ್ತು ಶಾಸ್ತ್ರದ ಪ್ರಕಾರ ಯಾವ ಸಸ್ಯಗಳನ್ನು ಪವಿತ್ರ ಎಂದು ಭಾವಿಸಲಾಗುತ್ತದೆ?

ವಾಸ್ತು ಪ್ರಕಾರ ತುಳಸಿ, ಜೇಡ್, ಅರೇಕಾ ಪಾಮ್, ಬಿದಿರು ಮತ್ತು ಮನಿಪ್ಲಾಂಟ್ ನಂತಹ ಸಸ್ಯಗೆಳನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತು ತರುತ್ತವೆ.

 

4) ವಾಸ್ತು ಪ್ರಕಾರ ಉತ್ತಮ ಆರೋಗ್ಯಕ್ಕೆ ಯಾವುವು ಉತ್ತಮ ಒಳಾಂಗಣ ಸಸ್ಯಗಳು?

ವಾಸ್ತು ಶಾಸ್ತ್ರದ ಪ್ರಕಾರ ತುಳಸಿ, ಅರೇಕಾ ಪಾಮ್, ಸ್ನೇಕ್ ಪ್ಲಾಂಟ್ ಮತ್ತು ಅಲೋ ವೆರಾಗಳು ಉತ್ತಮ ಆರೋಗ್ಯ ತರುತ್ತವೆ. ಅವು ಗಾಳಿಯನ್ನು ಶುದ್ಧೀಕರಿಸುತ್ತವೆ ಮತ್ತು ಮನೆಯ ಒಟ್ಟಾರೆ ವಾತಾವರಣ ಉನ್ನತೀಕರಿಸುತ್ತವೆ.

 

5) ವಾಸ್ತು ಶಾಸ್ತ್ರದ ಪ್ರಕಾರ ಬೊನ್ಸಾಯ್ ಸಸ್ಯಗಳನ್ನು ಒಳಾಂಗಣಗಳಲ್ಲಿ ಇರಿಸಬಹುದೇ?

ವಾಸ್ತು ಶಾಸ್ತ್ರದ ಪ್ರಕಾರ ಬೊನ್ಸಾಯ್ ಗಿಡಗಳು ಒಳಾಂಗಣದಲ್ಲಿ ಇರಿಸಲು ಸೂಕ್ತವಲ್ಲ, ಅವು ಕುಂಠಿತ ಪ್ರಗತಿ ಮತ್ತು ಸಂಘರ್ಷವನ್ನು ಪ್ರತಿನಿಧಿಸುತ್ತವೆ. .

 

6) ವಾಸ್ತು ಪ್ರಕಾರ ಮನೆಯ ಮುಂದೆ ಯಾವ ಮರವಿದ್ದರೆ ಉತ್ತಮ?

ವಾಸ್ತು ಪ್ರಕಾರ ಅಶೋಕ ವೃಕ್ಷವು ಸಮೃದ್ಧಿಯನ್ನು ತರುತ್ತದೆ ಮತ್ತು ದುಃಖವನ್ನು ಹೋಗಲಾಡಿಸುತ್ತದೆ ಎಂಬ ನಂಬಿಕೆ ಇರುವುದರಿಂದ, ಅದನ್ನು ಮನೆಯ ಮುಂದೆ ನೆಟ್ಟರೆ ಮಂಗಳವನ್ನು ಉಂಟು ಮಾಡುತ್ತದೆ ಎಂದು ಪರಿಗಣಿಸಲಾಗುತ್ತದೆ.


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....