ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಒಳಗಿನ ಮತ್ತು ಹೊರಗಿನ ಗೋಡೆಗಳಿಗೆ ಪ್ಲಾಸ್ಟರಿಂಗ್ ದಪ್ಪ ಎಷ್ಟಿರಬೇಕು?

Share:


ಈ ಅಂಶಗಳನ್ನು ಗಮನಿಸಿ

 

  • ಒಳಗೋಡೆ ಪ್ಲಾಸ್ಟರ್ ದಪ್ಪವು ಸಾಮಾನ್ಯವಾಗಿ ಗೋಡೆಯ ವಿಧ ಮತ್ತು ಮೇಲ್ಮೈ ಸಿದ್ಧತೆಯನ್ನು ಆಧರಿಸಿ 10 ಮತ್ತು 15 ಮಿಮೀ ಇರುತ್ತದೆ.

 
  • ಹೊರಗೋಡೆಯ ಪ್ಲಾಸ್ಟರ್ ದಪ್ಪವು ಪಾರಿಸರಿಕ ಅಂಶಗಳಿಂದ ತಕ್ಕಷ್ಟು ರಕ್ಷಣೆ ನೀಡಲು ಸಾಮಾನ್ಯವಾಗಿ 15-25 ಮಿಮೀ ಇರುತ್ತದೆ.
 
  • ಹೊರಗಿನ ಗೋಡೆಯ ಪ್ಲಾಸ್ಟರಿಂಗ್ ಅನುಪಾತವು ಪ್ಲಾಸ್ಟರ್ ಸಾಮರ್ಥ್ಯ ಮತ್ತು ದೀರ್ಘಬಾಳಿಕೆ ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿದೆ.
 
  • ಗೋಡೆಯ ಪ್ಲಾಸ್ಟರ್ ದಪ್ಪದ ಸಮಾನತೆ ಕಾಪಾಡುವುದು ರಚನೆಯ ದೃಢತೆ ಮತ್ತು ಗೋಡೆಯ ಹೊರನೋಟಕ್ಕೆ ಬಹಳ ಮುಖ್ಯವಾಗಿದೆ.



ಪ್ಲಾಸ್ಟರಿಂಗ್ ದಪ್ಪ ಎನ್ನುವುದು ಗೋಡೆಗಳು ಮತ್ತು ತಾರಸಿಗಳಿಗೆ ರಕ್ಷಣಾತ್ಮಕ ಮತ್ತು ಅಲಂಕಾರಿಕ ಪದರದ ಸೇರ್ಪಡೆ ಮಾಡುವ ಕಟ್ಟಡ ನಿರ್ಮಾಣ ಪ್ರಕ್ರಿಯೆಯಲ್ಲಿ ಮುಖ್ಯವಾಗಿದೆ. ಈ ಪ್ಲಾಸ್ಟರಿಂಗ್ ದಪ್ಪವು ಮೇಲ್ಮೈನ ಹೊರನೋಟ ಮತ್ತು ದೀರ್ಘಬಾಳಿಕೆಯಲ್ಲಿ ಅತ್ಯಂತ ಮುಖ್ಯವಾಗಿದೆ. ಈ ಬ್ಲಾಕ್ ಒಳಗೊಮ ಮತ್ತು ಹೊರಗಿನ ಗೋಡೆಗಳಿಗೆ ಶಿಫಾರಸು ಮಾಡಲಾದ ಪ್ಲಾಸ್ಟರಿಂಗ್ ದಪ್ಪ, ಅದರ ಪ್ರಕ್ರಿಯೆ ಮತ್ತು ಅದನ್ನು ಪ್ರಭಾವಿಸುವ ಅಂಶಗಳ ಕುರಿತು ವಿವರಿಸುತ್ತದೆ.

 

 


ಒಳ ಗೋಡೆಯ ಪ್ಲಾಸ್ಟರಿಂಗ್

 

ಒಳ ಗೋಡೆಯ ಪ್ಲಾಸ್ಟರಿಂಗ್ ದಪ್ಪ ಎಷ್ಟಿರಬೇಕು?

ಒಳ ಗೋಡೆಗಳಿಗೆ, ಪ್ಲಾಸ್ಟರಿಂಗ್ ದಪ್ಪವು ಸಾಮಾನ್ಯವಾಗಿ 10ರಿಂದ 15 ಮಿಮೀ ಇರುತ್ತದೆ. ಈ ದಪ್ಪವು ತಲಾಧಾರದ ವಿಧ, ಗೋಡೆಯ ಪರಿಸ್ಥಿತಿ ಮತ್ತು ಯೋಜನೆಯ ನಿರ್ದಿಷ್ಟ ಅಗತ್ಯಗಳನ್ನು ಆಧರಿಸಿ ವ್ಯತ್ಯಾಸಗೊಳ್ಳಬಹುದು,

 

  • ಸಿಂಗಲ್ ಕೋಟ್ ಪ್ಲಾಸ್ಟರ್: ನಯವಾದ, ಸಮತಟ್ಟಾದ ಮೇಲ್ಮೈ ಪಡೆಯಲು 10 ಮಿಮೀ ದಪ್ಪ ಸಾಕಾಗುತ್ತದೆ.
 
  • ಡಬಲ್-ಕೋಟ್ ಪ್ಲಾಸ್ಟರ್: ಗೋಡೆಯ ಮೇಲ್ಮೈ ಅಸಮವಾಗಿದ್ದರೆ ಅಥವಾ ಹೆಚ್ಚುವರಿ ಬಲದ ಅಗತ್ಯವಿರುವಾಗ, ಸುಮಾರು 15 ಮಿಮೀ ಒಟ್ಟು ದಪ್ಪವಿರುವ ಎರಡು-ಕೋಟ್ ಪ್ಲಾಸ್ಟರ್ ಅನ್ನು ಶಿಫಾರಸು ಮಾಡಲಾಗುತ್ತದೆ.

 

ಪ್ಲಾಸ್ಟರಿಂಗ್ ಪ್ರಕ್ರಿಯೆ

ಒಳ ಗೋಡೆಯ ದಪ್ಪಕ್ಕೆ ಪ್ಲ್ಯಾಸ್ಟರಿಂಗ್ ಪ್ರಕ್ರಿಯೆಯು ಹಲವಾರು ಪ್ರಮುಖ ಹಂತಗಳನ್ನು ಒಳಗೊಂಡಿದೆ:

 

  • ಮೇಲ್ಮೈ ಸಿದ್ಧತೆ. ಗೋಡೆಯ ಮೇಲ್ಮೈ ಅನ್ನು ಸ್ವಚ್ಛಗೊಳಿಸಬೇಕು ಮತ್ತು ಧೂಳನ್ನು ನಿವಾರಿಸಲು ಪ್ಲಾಸ್ಟರ್ ಚೆನ್ನಾಗಿ ಅಂಟಿಕೊಳ್ಳಲು ತೇವದಿಂದ ಒರೆಸಬೇಕು.
 
  • ಮೊದಲ ಕೋಟ್ ಹಚ್ಚುವುದು (ಸ್ಕ್ರಾಚ್ ಕೋಟ್) 10 ಮಿಮೀ ದಪ್ಪದ ಕೋಟ್ ಅನ್ನು ಗೋಡೆ ಮೇಲೆ ಹಚ್ಚಬೇಕು ಮತ್ತು ಹೊಂದಿಕೊಳ್ಳಲು ಬಿಡಬೇಕು.
 
  • ಎರಡನೆಯ ಕೋಟ್ ಹಚ್ಚುವುದು (ಫಿನಿಷ್ ಕೋಟ್): ಅಗತ್ಯವಿದ್ದಲ್ಲಿ ಮೊದಲಿಗೆ ಬಳಿದಿರುವುದರ ಮೇಲೆ ಎರಡನೆಯ ಕೋಟ್ 5ಮಿಮೀ ಅನ್ನು ಹಚ್ಚಬೇಕು. ಈ ಕೋಟ್ ಅನ್ನು ಅಗತ್ಯವಿರುವ ಫಿನಿಷ್ ಪಡೆಯಲು ಮೃದು ಮತ್ತು ಸಮಾನಗೊಳಿಸಬೇಕು.
 
  • ಕ್ಯೂರಿಂಗ್: ಪ್ಲಾಸ್ಟರ್ ಮಾಡಲಾದ ಗೋಡೆಯನ್ನು ಹಲವಾರು ದಿನಗಳ ಕಾಲ ತೇವಾಂಶದಿಂದ ಇರಿಸಿದರೆ ಅದು ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಒಡೆಯುವುದಿಲ್ಲ.

 

ಒಳ ಗೋಡೆಯ ದಪ್ಪದ ಮೇಲೆ ಪರಿಣಾಮ ಬೀರುವ ಅಂಶಗಳು



ಒಳ ಗೋಡೆಯ ಪ್ಲಾಸ್ಟರ್ ದಪ್ಪದ ಮೇಲೆ ಪ್ರಭಾವಿಸುವ ಹಲವಾರು ಅಂಶಗಳಿವೆ:

 

  • ಗೋಡೆಯ ಉತ್ಪನ್ನ: ಇಟ್ಟಿಗೆ, ಕಾಂಕ್ರೀಟ್ ಅಥವಾ ಬ್ಲಾಕ್ ಗೋಡೆಗಳಿಗೆ ವಿವಿಧ ಬಗೆಯ ದಪ್ಪ ಅಗತ್ಯವುಂಟಾಗಬಹುದು, ಅದು ಅದರ ಮೇಲ್ಮೈ ರಚನೆ ಮತ್ತು ಹೀರಿಕೊಳ್ಳುವ ಗುಣಗಳನ್ನು ಆಧರಿಸಿರುತ್ತದೆ.
 
  • ಮೇಲ್ಮೈ ಅಸಮಾನತೆ: ಅಸಮಾನ ಮೇಲ್ಮೈಗಳಿಗೆ ಮೃದು, ಸಮಾನ ಫಿನಿಷ್ ನೀಡಡಲು ದಪ್ಪದ ಪ್ಲಾಸ್ಟರ್ ಅಗತ್ಯವಾಗಬಹುದು.
 
  • ಪ್ಲಾಸ್ಟರಿಂಗ್ ಉದ್ದೇಶ:ಅಲಂಕಾರಿಕ ಫಿನಿಷ್ ಗಳು ಅಥವಾ ಸೌಂಡ್ ಪ್ರೂಫಿಂಗ್ ಗೆ ಆಂತರಿಕ ಗೋಡೆಯ ದಪ್ಪದಲ್ಲಿ ವ್ಯತ್ಯಾಸಗಳು ಅಗತ್ಯವಾಗಬಹುದು.

 

 

ಹೊರಗಿನ ಗೋಡೆಯ ಪ್ಲಾಸ್ಟರಿಂಗ್



ಹೊರಗಿನ ಗೋಡೆಯ ಪ್ಲಾಸ್ಟರಿಂಗ್ ಎಂದರೇನು?

ಹೊರಗಿನ ಗೋಡೆಯ ಪ್ಲಾಸ್ಟರಿಂಗ್ ಗೆ ಸಾಮಾನ್ಯವಾಗಿ ದಪ್ಪದ ಕೋಟ್ ಅಗತ್ಯವಾಗಿದ್ದು ಅದು 15ರಿಂದ 25 ಮಿಮೀ ಇದ್ದು ಈ ಪ್ಲಾಸ್ಟರಿಂಗ್ ದಪ್ಪವು ಸಾಮಾನ್ಯವಾಗಿ IS ಕೋಡ್ ಇದಕ್ಕೆ ಮಾರ್ಗದರ್ಶಿಯಾಗಿದೆ. ಹೆಚ್ಚುವರಿ ದಪ್ಪವು ಕಟ್ಟಡವು ವಾತಾವರಣದ ಅಂಶಗಳಾದ ಮಳೆ, ಗಾಳಿ ಮತ್ತು ತೀವ್ರ ಉಷ್ಣತೆಗಳಿಂದ ರಕ್ಷಿಸುತ್ತದೆ.

 

  • ಪ್ರಾರಂಭದಲ್ಲಿ ಸುಮಾರು 12-15 ಮಿಮೀ ಬೇಸ್ ಕೋಟ್ ಹಾಕಲಾಗುತ್ತದೆ.
 
  • 8-10 ಮಿಮೀನ ಫಿನಿಷ್ ಕೋಟ್ ಅನ್ನು ಸೇರಿಸಲಾಗುತ್ತದೆ, ಅದು ಒಟ್ಟು ದಪ್ಪವನ್ನು 20-25 ಮಿಮೀಗೆ ತರುತ್ತದೆ.

 

ಪ್ಲಾಸ್ಟರಿಂಗ್ ಪ್ರಕ್ರಿಯೆ

ಹೊರಗಿನ ಪ್ಲಾಸ್ಟರಿಂಗ್ ಪ್ರಕ್ರಿಯೆಯು ಹೀಗಿರುತ್ತದೆ:

 

  • ಮೇಲ್ಮೈ ಸಿದ್ಧತೆ: ಗೋಡೆಯ ಮೇಲ್ಮೈ ಸ್ವಚ್ಛಗೊಳಿಸುವುದು ಮತ್ತು ಅಗತ್ಯವಿದ್ದಲ್ಲಿ ಬಾಂಡಿಂಗ್ ಏಜೆಂಟ್ ಹಚ್ಚುವುದು.
 
  • ಬೇಸ್ ಕೋಟ್ ಬಳಕೆ: 12-15 ಮಿಮೀ ದಪ್ಪದ ಬೇಸ್ ಕೋಟ್ ಹಚ್ಚಲಾಗುತ್ತದೆ ಮತ್ತು ಅದು ಕೊಂಚ ಒಣಗಲು ಅವಕಾಶ ನೀಡಲಾಗುತ್ತದೆ.
 
  • ಫಿನಿಷ್ ಕೋಟ್ ಬಳಕೆ: 8-10 ಮಿಮೀ ದಪ್ಪದ ಫಿನಿಷ್ ಕೋಟ್ ಅನ್ನು ಬೇಸ್ ಕೋಟ್ ಮೇಲೆ ಹಚ್ಚಲಾಗುತ್ತದೆ, ಮೃದುಗೊಳಿಸಲಾಗುತ್ತದೆ ಮತ್ತು ಅಗತ್ಯವಿದ್ದರೆ ರಚನೆಗಳನ್ನು ಮೂಡಿಸಲಾಗುತ್ತದೆ.
 
  • ಕ್ಯೂರಿಂಗ್: ಆಂತರಿಕ ಪ್ಲಾಸ್ಟರ್ ನಂತೆ ಹೊರಗಿನ ಪ್ಲಾಸ್ಟರ್ ಕೂಡಾ ಕನಿಷ್ಠ ಒಂದು ವಾರ ತೇವಾಂಶದೊಂದಿಗೆ ಕ್ಯೂರಿಂಗ್ ಮಾಡುವ ಮೂಲಕ ಸೂಕ್ತವಾಗಿ ಹೊಂದಿಕೆ ಮತ್ತು ದೀರ್ಘಬಾಳಿಕೆ ಬರುವಂತೆ ಮಾಡಲಾಗುತ್ತದೆ.

 

ಹೊರಗಿನ ಗೋಡೆಯ ಪ್ಲಾಸ್ಟರಿಂಗ್ ಗ ಹಾನಿ ಮಾಡುವ ಅಂಶಗಳು

ಹೊರಗಿನ ಗೋಡೆಯ ದಪ್ಪವು ಇವುಗಳಿಂದ ಪ್ರಭಾವಿತವಾಗುತ್ತದೆ:

 

  • ವಾತಾವರಣ: ಕಠಿಣ ವಾತಾವರಣದ ಪರಿಸ್ಥಿತಿಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಉತ್ತಮ ರಕ್ಷಣೆಗೆ ದಪ್ಪದ ಪ್ಲಾಸ್ಟರ್ ಅಗತ್ಯವಾಗಬಹುದು.
 
  • ಗೋಡೆಯ ಉತ್ಪನ್ನ: ಹೊರಗಿನ ಗೋಡೆಗಳಲ್ಲಿ ಬಳಸಲಾದ ಉತ್ಪನ್ನದ ವಿಧ ಅಂದರೆ ಇಟ್ಟಿಗೆ, ಕಾಂಕ್ರೀಟ್ ಅಥವಾ ಕಲ್ಲು ಗೋಡೆಗಳಿಗೆ ಅಗತ್ಯವಿರುವ ಪ್ಲಾಸ್ಟರ್ ದಪ್ಪದ ಮೇಲೆ ಪರಿಣಾಮ ಬೀರುತ್ತದೆ.
 
  • ಹೊರಗಿನ ಗೋಡೆಯ ಪ್ಲಾಸ್ಟರಿಂಗ್ ಅನುಪಾತ: ಪ್ಲಾಸ್ಟರ್ ಮಿಕ್ಸ್ ನಲ್ಲಿ ಸಿಮೆಂಟ್-ನಿಂದ ಮಣ್ಣಿನ ಅನುಪಾತವು ಹೊರಗಿನ ಪ್ಲಾಸ್ಟರ್ ಸಾಮರ್ಥ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 
  • ರಚನಾತ್ಮಕ ಅಗತ್ಯಗಳು: ಭೂಕಂಪದ ಆತಂಕವಿರುವ ಪ್ರದೇಶಗಳ ಕಟ್ಟಡಗಳಲ್ಲಿ ಪ್ಲಾಸ್ಟರ್ ಮಿಕ್ಸ್ ಹೊರಗಿನ ಪ್ಲಾಸ್ಟರ್ ಸಾಮರ್ಥ್ಯ ಮತ್ತು ದೀರ್ಘಬಾಳಿಕೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

 

ಉತ್ತಮ ಪ್ಲಾಸ್ಟರ್ ಫಿನಿಷ್ ಗೆ ಸಲಹೆಗಳು



ಮೃದು ಹಾಗೂ ದೀರ್ಘಬಾಳಿಕೆಯ ಪ್ಲಾಸ್ಟರ್ ಫಿನಿಷ್ ಸಾಧಿಸಲು ವಿವರಗಳಿಗೆ ಗಮನ ನೀಡಬೇಕು ಮತ್ತು ಸೂಕ್ತ ತಂತ್ರವಿರಬೇಕು. ಉತ್ತಮ ಪ್ಲಾಸ್ಟರ್ ಫಿನಿಷ್ ಪಡೆಯಲು ಇಲ್ಲಿ ಕೆಲವು ಸಲಹೆಗಳಿವೆ:

 

  • ಮೇಲ್ಮೈ ಸಿದ್ಧತೆ: ಅಂಟಿಕೊಳ್ಳುವಿಕೆ ಹೆಚ್ಚಿಸಲು ಪ್ಲಾಸ್ಟರ್ ಹಚ್ಚುವ ಮುನ್ನ ಸದಾ ಗೋಡೆಯನ್ನು ಸ್ವಚ್ಛ ಹಾಗೂ ಮೃದುಗೊಳಿಸಿ.
 
  • ಸ್ಥಿರ ಮಿಶ್ರಣ: ಗಂಟುಗಳನ್ನು ತಡೆಯಲು ಮತ್ತು ಪ್ಲಾಸ್ಟರ್ ಸಾಮರ್ಥ್ಯ ಹೆಚ್ಚಿಸಲು ಸ್ಥಿರವಾದ ನೀರಿನಿಂದ ಪ್ಲಾಸ್ಟರ್ ಅನುಪಾತ ಬಳಸಿ.
 
  • ಸೂಕ್ತ ಕ್ಯೂರಿಂಗ್: ಸೀಳು ಬಿಡುವುದನ್ನು ತಪ್ಪಿಸಲು ಮತ್ತು ಪ್ಲಾಸ್ಟರ್ ಶಕ್ತಿಯನ್ನು ಹೆಚ್ಚಿಸಲು ತಕ್ಕಷ್ಟು ಕ್ಯೂರಿಂಗ್ ಮಾಡಿರಿ.
 
  • ಗುಣಮಟ್ಟದ ಉತ್ಪನ್ನಗಳನ್ನು ಬಳಸಿ: ಉನ್ನತ ಗುಣಮಟ್ಟದ ಪ್ಲಾಸ್ಟರಿಂಗ್ ಉತ್ಪನ್ನಗಳು ಉತ್ತಮ ಫಿನಿಷ್ ಮತ್ತು ದೀರ್ಘಬಾಳಿಕೆ ನೀಡುತ್ತವೆ.


 

ಅಂತಿಮವಾಗಿ ಹೇಳಬೇಕೆಂದರೆ, ಆಂತರಿಕ ಮತ್ತು ಬಾಹ್ಯ ಗೋಡೆಗಳಿಗೆ ಪ್ಲಾಸ್ಟರಿಂಗ್ ದಪ್ಪವು ದೀರ್ಘಬಾಳಿಕೆ, ನೋಟ ಮತ್ತು ಕಟ್ಟಡದ ಒಟ್ಟಾರೆ ಸಮಗ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಂತರಿಕ ಪ್ಲಾಸ್ಟರಿಂಗ್ ಸಾಮಾನ್ಯವಾಗಿ 10-15ಮಿಮೀ ಇರುತ್ತದೆ, ಬಾಹ್ಯ ಪ್ಲಾಸ್ಟರಿಂಗ್ ಪಾರಿಸರಿಕ ಅಂಶಗಳಿಂದ ರಕ್ಷಿಸಲು 15-25 ಮಿಮೀನಷ್ಟು ಬಳಸಬೇಕಾಗುತ್ತದೆ. ಈ ಪ್ರಕ್ರಿಯೆ ಮತ್ತು ಗೋಡೆಗಳ ದಪ್ಪಕ್ಕೆ ಹಾನಿಯುಂಟು ಮಾಡುವ ಪ್ರಕ್ರಿಯೆಗಳು ಮತ್ತು ಅಂಶಗಳನ್ನುIS ಕೋಡ್ ಪ್ರಕಾರ ಅರ್ಥ ಮಾಡಿಕೊಳ್ಳುವ ಮೂಲಕ ಮೃದು ಮತ್ತು ದೀರ್ಘಾವಧಿ ಫಿನಿಷ್ ಪಡೆಯಬಹುದು.




ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

1. ಪ್ಲಾಸ್ಟರಿಂಗ್ ದಪ್ಪವು ಗೋಡೆಯ ಒಟ್ಟಾರೆ ದೀರ್ಘಬಾಳಿಕೆಯ ಮೇಲೆ ಪರಿಣಾಮ ಬೀರಬಲ್ಲದೇ?

ಹೌದು. ಪ್ಲಾಸ್ಟರಿಂಗ್ ದಪ್ಪವು ಗೋಡೆಯ ದೀರ್ಘಬಾಳಿಕೆಗೆ ಬಹಳ ಮುಖ್ಯ. ಹೊರಗಿನ ಗೋಡೆಗೆ ದಪ್ಪ ಪ್ಲಾಸ್ಟರ್ ಬಿಸಿಲು, ಮಳೆಗಾಳಿಯಿಂದ ಮತ್ತು ಒಡೆಯುವುದರ ವಿರುದ್ಧ ರಕ್ಷಣೆ ನೀಡುತ್ತದೆ.

 

2.ಪ್ಲಾಸ್ಟರಿಂಗ್ ದಪ್ಪವನ್ನು ಒಂದೇ ರೀತಿ ಕಾಪಾಡಿಕೊಳ್ಳುವುದು ಏಕೆ ಮುಖ್ಯ?

ಸಮಾನ ಪ್ಲಾಸ್ಟರಿಂಗ್ ದಪ್ಪ ಕಾಪಾಡಿಕೊಳ್ಳುವುದು ಕಟ್ಟಡದ ಸಮಗ್ರತೆ ಮತ್ತು ಮೃದುವಾದ ಫಿನಿಷ್ ನೀಡುತ್ತದೆ. ಅಸಮಾನ ಪ್ಲಾಸ್ಟರಿಂಗ್ ನಿಂದ ಸೀಳುಗಳು, ದುರ್ಬಲ ಸ್ಥಳಗಳು ಮತ್ತು ಕಳೆಗುಂದುತ್ತದೆ.

 

3. ಪ್ಲಾಸ್ಟರಿಂಗ್‌ನ ಸಾಮಾನ್ಯ ದಪ್ಪ ಎಷ್ಟಿರಬೇಕು?

ಸಾಮಾನ್ಯ ದಪ್ಪವು ಭಿನ್ನವಾಗಿರುತ್ತದೆ. ಒಳಗೋಡೆಗಳಿಗೆ ಇದು ಸಾಮಾನ್ಯವಾಗಿ 10-15 ಮಿಮೀ ಇದ್ದರೆ ಹೊರಗೋಡೆಗಳಿಗೆ 15-25 ಮಿಮೀ ಇರುತ್ತದೆ.

 

4. ಪ್ಲಾಸ್ಟರಿಂಗ್ ಮಾಡಿದ ನಂತರ ಅದರ ದಪ್ಪವನ್ನು ಸರಿಹೊಂದಿಸಬಹುದೇ?

ಒಮ್ಮೆ ಹಚ್ಚಿದ ನಂತರ ಪ್ಲಾಸ್ಟರ್ ದಪ್ಪವನ್ನು ಸರಿಹೊಂದಿಸುವುದು ಸವಾಲಿನ ಕೆಲಸ ಮತ್ತು ಇದು ಬಿರುಕುಗಳು ಅಥವಾ ದುರ್ಬಲ ಸ್ಥಳಗಳಿಗೆ ಕಾರಣವಾಗುತ್ತದೆ.ಪ್ರಾರಂಭಿಕ ಬಳಕೆಯಲ್ಲಿಯೇ ಸರಿಯಾದ ದಪ್ಪವನ್ನು ನಿರ್ಧರಿಸುವುದು ಸೂಕ್ತ.

 

ಪ್ಲಾಸ್ಟರಿಂಗ್ ನಲ್ಲಿ ಬಳಸುವ ವಸ್ತುಗಳ ವಿಧಗಳಾವುವು?

ಸಾಮಾನ್ಯ ವಸ್ತುಗಳಲ್ಲಿ ಸಿಮೆಂಟ್, ಸುಣ್ಣ, ಜಿಪ್ಸಂ ಮತ್ತು ಮಣ್ಣು ಇರುತ್ತದೆ. ಈ ಆಯ್ಕೆಯನ್ನು ಗೋಡೆ ಮತ್ತು ಬಯಸಿದ ಫಿನಿಷ್ ಆಧರಿಸಿ ಮಾಡಿಕೊಳ್ಳಲಾಗುತ್ತದೆ.


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....