ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ನಿಮ್ಮ ಮನೆಯ ವಾಯುವ್ಯ ಮೂಲೆಯನ್ನು ಅತ್ಯುತ್ತಮವಾಗಿಸಲು ವಾಸ್ತುಶಾಸ್ತ್ರ ಸಲಹೆ

ಮನೆಯಲ್ಲಿ ಸಂಬಂಧ, ಸಾಮಾಜಿಕ ಸಾಮರಸ್ಯ ಮತ್ತು ಸುಖಶಾಂತಿ ನೆಮ್ಮದಿ ಉತ್ತಮಪಡಿಸಿಕೊಳ್ಳುವ ಸಲುವಾಗಿ ವಾಯುವ್ಯ ಮೂಲೆಯನ್ನು ಉತ್ತಮಪಡಿಸಲು ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Share:


ಈ ಅಂಶಗಳನ್ನು ಗಮನಿಸಿ

 

  • ವಾಯುವ್ಯ ಮೂಲೆ ವಾಯು ಅಂಶವನ್ನು ನಿಯಂತ್ರಿಸುತ್ತದೆ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಪ್ರಭಾವ ಬೀರುತ್ತದೆ.

     

  • ಸಮರ್ಪಕ ಬಣ್ಣಗಳು, ಸಸ್ಯಗಳು ಮತ್ತು ವಾಸ್ತು ಪರಿಹಾರಗಳ ಮೂಲಕ ಈ ಸ್ಥಳದ ಶಕ್ತಿ ಉತ್ತಮಪಡಿಸಬಹುದು.

     

  • ಮನೆಯಲ್ಲಿರುವವರ ಆರೋಗ್ಯ ಮತ್ತು ಸಂಬಂಧ ಉತ್ತಮಪಡಿಸುವ ಸಲುವಾಗಿ ವಾಯುವ್ಯ ವಾಸ್ತು ಸಲಹೆಗಳನ್ನು ಮನೆಯ ಯಾವುದೇ ಪ್ರದೇಶಕ್ಕೂ ಅನ್ವಯಿಸಬಹುದು.



ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ದಿಕ್ಕಿಗೂ ಅದರದ್ದೇ ಆದ ಮಹತ್ವವಿದೆ. ಇದೇ ರೀತಿ ವಾಯುವ್ಯ ಮೂಲೆಯೂ ಪ್ರಮುಖವಾಗಿದೆ. ವಾಯುವ್ಯ ಮೂಲೆಯು ಗಾಳಿಯ ಅಂಶಕ್ಕೆ ಸಂಬಂಧಪಟ್ಟಿದೆ. ಸಂಬಂಧಗಳು, ಆರೋಗ್ಯ ಮತ್ತು ಸಾಮಾಜಿಕ ಸಂಪರ್ಕಗಳ ಮೇಲೆ ಇದು ಪ್ರಭಾವ ಬೀರುತ್ತದೆ. ಸಮರ್ಪಕವಾದ ವಾಸ್ತು ತತ್ತ್ವಗಳನ್ನು ಅನುಸರಿಸುವ ಮೂಲಕ ವಾಯುವ್ಯ ಮೂಲೆಯಲ್ಲಿ ಶಕ್ತಿಯ ಹರಿವನ್ನು ಉತ್ತಮಪಡಿಸಬಹುದಾಗಿದೆ. ಈ ಮೂಲಕ ಮನೆಯಲ್ಲಿ ಸಾಮರಸ್ಯ, ಸ್ಥಿರತೆ ತರಬಹುದು. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವ ಸಲುವಾಗಿ ಅಗತ್ಯವಾದ ವಾಸ್ತು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ.


ವಾಸ್ತುಶಾಸ್ತ್ರದ ಪ್ರಕಾರ ವಾಯುವ್ಯ ದಿಕ್ಕು ಏನನ್ನು ಪ್ರತಿನಿಧಿಸುತ್ತದೆ?



1. ವಾಯುವಿನ ಅಂಶ

ವಾಸ್ತುಶಾಸ್ತ್ರದ ಪ್ರಕಾರ ಮನೆಯ ವಾಯುವ್ಯ ಮೂಲೆಯು ಗಾಳಿಯ ಅಂಶಕ್ಕೆ ಸಂಬಂಧಪಟ್ಟಿದೆ. ಇದು ಚಲನೆ, ಸಂವಹನ ಮತ್ತು ಸಾಮಾಜಿಕ ಮಾತುಕತೆಯನ್ನು ಪ್ರತಿನಿಧಿಸುತ್ತದೆ. ಮನೆಯಲ್ಲಿ ವಾಯುವಿನ ಅಂಶವು ಸಮತೋಲನದಲ್ಲಿದ್ದರೆ ಕುಟುಂಬದೊಳಗೆ ಮತ್ತು ಸಾಮಾಜಿಕವಾಗಿ ಸಕಾರಾತ್ಮಕ ಸಂಬಂಧ ಹೆಚ್ಚುತ್ತದೆ.

ಈ ಸ್ಥಳ ಅಡೆತಡೆ ಇಲ್ಲದೆ ಮುಕ್ತವಾಗಿ ತೆರೆದಿರಲಿ. ಈ ಮೂಲಕ ಶಕ್ತಿಯು ನೈಸರ್ಗಿಕವಾಗಿ ಹರಿಯುವಂತೆ ಮುಕ್ತವಾಗಿಡಿ. ಈ ಸಮತೋಲನವು ವಾಯುವ್ಯ ಮೂಲೆಯ ಮನೆಯ ವಾಸ್ತುವಿಗೆ ಮತ್ತು ವಾಯುವ್ಯ ಮೂಲೆಯ ಬೆಡ್‌ರೂಂ ವಾಸ್ತುವಿಗೆ ಅತ್ಯಂತ ಅಗತ್ಯ.

2. ಸಾಮಾಜಿಕ ಪ್ರಭಾವ

ವಾಯುವ್ಯ ಮೂಲೆಯು ಸಾಮಾಜಿಕ ಸಂವಹನದ ಮೇಲೆ ಪ್ರಭಾವ ಬೀರುತ್ತದೆ. ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳ ಜತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ನೆರವಾಗುತ್ತದೆ. ಸಾಮರಸ್ಯದ ವಾಯುವ್ಯ ಮೂಲೆಯು ಶಾಂತಿ ಮತ್ತು ಪರಸ್ಪರ ತಿಳಿವಳಿಕೆ ಹೆಚ್ಚಿಸುತ್ತದೆ. ವಿಶೇಷವಾಗಿ ಮನೆಯ ಮಹಿಳೆಯರ ಮೇಲೆ ಇದರ ಪ್ರಭಾವ ಹೆಚ್ಚು. ವಾಯುವ್ಯ ದಿಕ್ಕಿನ ಮನೆಯಲ್ಲಿ ವಾಯುವ್ಯ ಮೂಲೆಯನ್ನು ವಾಸ್ತು ಪ್ರಕಾರ ಅತ್ಯುತ್ತಮವಾಗಿಸುವ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಸಹಕಾರವನ್ನು ಉತ್ತೇಜಿಸಿಕೊಳ್ಳಿ.


ವಾಸ್ತುಶಾಸ್ತ್ರದ ಪ್ರಕಾರ ವಾಯುವ್ಯ ಮೂಲೆಗೆ ಸೂಕ್ತವಾದ ಬಣ್ಣಗಳು


ವಾಯುವ್ಯ ಮೂಲೆಯ ವಾಸ್ತುವಿಗೆ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ. ಇದರಿಂದ ಅದರ ಶಕ್ತಿ ಹೆಚ್ಚಾಗುತ್ತದೆ. ವಾಸ್ತು ಪ್ರಕಾರ, ಬಿಳಿ, ತಿಳಿ ಬೂದು, ಕೆನೆ ಮತ್ತು ತಿಳಿ ನೀಲಿ ಈ ದಿಕ್ಕಿಗೆ ಸೂಕ್ತವಾಗಿವೆ. ಈ ಬಣ್ಣಗಳು ಗಾಳಿಯ ಅಂಶವನ್ನು ಪ್ರತಿಬಿಂಬಿಸುತ್ತವೆ. ನೆಮ್ಮದಿ, ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತವೆ. ಬಿಳಿ ಬಣ್ಣವು ಶುದ್ಧತೆಯನ್ನು ಸಂಕೇತಿಸುತ್ತದೆ, ಆದರೆ ತಿಳಿ ನೀಲಿ ಬಣ್ಣವು ಶಾಂತಿ ಮತ್ತು ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ.



ವಾಯುವ್ಯ ದಿಕ್ಕಿನ ಮನೆಗೆ ಕೆಂಪು, ಕಿತ್ತಳೆ ಅಥವಾ ಗಾಢ ಕಂದು ಬಣ್ಣಗಳಂತಹ ಗಾಢ ಅಥವಾ ಉರಿಯುವ ಬಣ್ಣಗಳ ಬಳಕೆಯನ್ನು ತಪ್ಪಿಸಿ. ಏಕೆಂದರೆ ಈ ಬಣ್ಣಗಳು ಅಸಮತೋಲನ ಉಂಟು ಮಾಡುತ್ತವೆ.


ವಾಯುವ್ಯ ಮೂಲೆಯಲ್ಲಿ ಇಡಬಹುದಾದ ಸಸ್ಯಗಳು ಮತ್ತು ನೈಸರ್ಗಿಕ ಅಂಶಗಳು

ವಾಯುವ್ಯ ಮೂಲೆಯಲ್ಲಿ ಶಕ್ತಿ ಹೆಚ್ಚಿಸಲು ಸಸ್ಯಗಳು ಮತ್ತು ನೈಸರ್ಗಿಕ ಅಂಶಗಳನ್ನು ಸೇರಿಸುವುದು ವಾಯುವ್ಯ ವಾಸ್ತು ಪರಿಹಾರದ ದೃಷ್ಟಿಯಿಂದ ಉತ್ತಮ. ಬೆಳಕು ಮತ್ತು ಗಾಳಿಯಲ್ಲಿ ಬೆಳೆಯುವ ಅರೆಕಾ ಪಾಮ್ಸ್‌, ಪೀಸ್ ಲಿಲ್ಲಿ ಮತ್ತು ಮನಿ ಪ್ಲಾಂಟ್‌ಗಳಂತಹ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದಲ್ಲದೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸುತ್ತವೆ.



ಇದರೊಂದಿಗೆ, ಲೋಹದಿಂದ ಮಾಡಿದ ವಿಂಡ್ ಚೈಮ್‌ಗಳು ಗಾಳಿಯ ಅಂಶವನ್ನು ಸಮತೋಲನಗೊಳಿಸಲು ನೆರವಾಗುವ ಮತ್ತೊಂದು ವಸ್ತುವಾಗಿದೆ. ಇವುಗಳ ಶಬ್ದವು ಶಕ್ತಿಯನ್ನು ಚಲನೆಯಲ್ಲಿಡಲು ನೆರವಾಗುತ್ತದೆ. ವಾಯುವ್ಯ ಮೂಲೆಯ ಮಲಗುವ ಕೋಣೆಯಲ್ಲಿ ಸಣ್ಣ ಒಳಾಂಗಣ ಸಸ್ಯಗಳಂತಹ ಶಾತಗೊಳಿಸುವ ಅಂಶಗಳನ್ನು ಇರಿಸಿದರೆ ಪ್ರಶಾಂತವಾಗಿರುತ್ತದೆ.


ವಾಯುವ್ಯ ಮೂಲೆಯ ವಾಸ್ತು ದೋಷಕ್ಕೆ ಪರಿಹಾರ ಹೇಗೆ?

ವಾಯುವ್ಯ ಮೂಲೆಯಲ್ಲಿ ಏನಾದರೂ ವಾಸ್ತು ದೋಷಗಳು (ಅಸಮತೋಲನ) ಇದ್ದರೆ ಸಂಬಂಧಗಳು ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದರೆ, ಈ ಸಮಸ್ಯೆಗಳನ್ನು ಸರಿಪಡಿಸಲು ವಾಯುವ್ಯ ವಾಸ್ತು ಪರಿಹಾರಗಳು ಇವೆ. ಅವುಗಳೆಂದರೆ:

  • ಎಲ್ಲಾದರೂ ವಾಯುವ್ಯ ಮೂಲೆಯ ಅಂಚು ಇಲ್ಲದೆ ಇದ್ದರೆ ಲೋಹದ ಪಿರಾಮಿಡ್‌ ಅನ್ನು ಮೂಲೆಯಲ್ಲಿ ಇಡುವ ಮೂಲಕ ಅಸಮತೋಲನವನ್ನು ತಪ್ಪಿಸಬಹುದು.


  • ಮನೆಯ ವಾಯುವ್ಯ ದಿಕ್ಕಿನಲ್ಲಿ ವಾಸ್ತು ಯಂತ್ರ ಅಥವಾ ಪವಿತ್ರ ಜ್ಯಾಮಿತೀಯ ರೇಖಾಚಿತ್ರವನ್ನು ಸ್ಥಾಪಿಸುವುದರಿಂದ ನಕಾರಾತ್ಮಕ ಶಕ್ತಿಯನ್ನು ತಟಸ್ಥಗೊಳಿಸಬಹುದು.


  • ವಿಶೇಷವಾಗಿ ಮನೆಯ ವಾಯುವ್ಯ ಮೂಲೆಯ ವಾಸ್ತು ಪ್ರದೇಶದಲ್ಲಿ ಶಕ್ತಿಗೆ ಯಾವುದೇ ಅಡೆತಡೆ ಇಲ್ಲದಂತೆ ಶುಭ್ರವಾಗಿ, ಶುಚಿಯಾಗಿ, ಮುಕ್ತವಾಗಿ ಇಟ್ಟುಕೊಳ್ಳಿ.

 

ಈ ರೀತಿ ಮನೆಯ ವಾಸ್ತು ದೋಷಗಳನ್ನು ಪರಿಹರಿಸುವುದರಿಂದ ಶಕ್ತಿಯ ಸಮತೋಲನ ಸುಧಾರಿಸುತ್ತದೆ. ಮನೆಯಲ್ಲಿ ಸಾಮರಸ್ಯ ಹೆಚ್ಚುತ್ತದೆ. ವಿಶೇಷವಾಗಿ ವಾಯುವ್ಯ ದಿಕ್ಕಿನ ಮನೆ ಹೊಂದಿರುವವರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.


ವಾಯುವ್ಯ ವಾಸ್ತು: ಸಕಾರಾತ್ಮಕ ಶಕ್ತಿಯನ್ನು ಸೆಳೆಯಲು ಸಲಹೆಗಳು

ಈ ವಾಯುವ್ಯ ದಿಕ್ಕಿನಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಸೆಳೆಯಲು ಕೆಲವೊಂದು ಪ್ರಾಯೋಗಿಕ ವಾಯುವ್ಯ ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ:
 

  • ಲೋಹದ ವಸ್ತುಗಳನ್ನು ಬಳಸಿ: ಗಾಳಿಯ ಅಂಶವನ್ನು ಹೆಚ್ಚಿಸಲು ಬೆಳ್ಳಿ ಅಥವಾ ಹಿತ್ತಾಳೆ ವಸ್ತುಗಳನ್ನು ಇಡಿ. ಮೆಟಾಲಿಕ್‌ ವೈಂಡ್‌ ಚಿಮಿಸ್‌ ಅಥವಾ ಸಣ್ಣ ಪ್ರದರ್ಶನ ವಸ್ತುಗಳು ಸಹ ಶಕ್ತಿಯ ಹರಿವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
     

  • ಪೀಠೋಪಕರಣಗಳನ್ನು ಸಮರ್ಪಕವಾಗಿ ಇಡಿ: ವಾಯುವ್ಯ ಮೂಲೆಯಲ್ಲಿ ಭಾರವಾದ ಪೀಠೋಪಕರಣಗಳನ್ನು ಇಡುವುದನ್ನು ತಪ್ಪಿಸಿ. ಏಕೆಂದರೆ ಅದು ನೈಸರ್ಗಿಕ ಗಾಳಿಯ ಹರಿವನ್ನು ತಡೆಯಬಹುದು. ಇದರ ಬದಲು ಇಲ್ಲಿ ಯಾವುದೇ ಅಡೆತಡೆ ಇಲ್ಲದಂತೆ, ಗಾಳಿಯಾಡುವಂತೆ ಮಾಡಲು ಹಗುರ ವಸ್ತುಗಳನ್ನು ಇಡಿ.
     

  • ವೆಂಟಿಲೇಷನ್‌: ವಾಯುವ್ಯ ಮೂಲೆಯಲ್ಲಿ ಸರಿಯಾದ ಗಾಳಿಯ ಹರಿವು ಇರುವಂತೆ ಮಾಡಲು ಸಮರ್ಪಕವಾಗಿ ವಾತಾಯನ ಇರುವಂತೆ ನೋಡಿಕೊಳ್ಳಿ. ಆರೋಗ್ಯಕರ ಮತ್ತು ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ವಾಯುವ್ಯ ದಿಕ್ಕಿನ ಮನೆ ಯೋಜನೆಯನ್ನು ಅನುಸರಿಸುವವರಿಗೆ ಇದು ಅತ್ಯಂತ ಅಗತ್ಯ.
     

    ಅಸ್ತವ್ಯಸ್ತ ವಸ್ತುಗಳನ್ನು ತೆಗೆಯಿರಿ: ನಿಮ್ಮ ಮನೆಯ ವಾಯುವ್ಯ ವಾಸ್ತುವಿನಲ್ಲಿ ಸಾಮರಸ್ಯದ ಶಕ್ತಿಯ ಹರಿವನ್ನು ಕಾಪಾಡಿಕೊಳ್ಳಲು ಆ ಜಾಗ ಅಸ್ತವ್ಯಸ್ತವಾಗಿರದಂತೆ ನೋಡಿಕೊಳ್ಳಿ.



ನಿಮ್ಮ ಮನೆಯ ವಾಯುವ್ಯ ಮೂಲೆಯ ವಾಸ್ತು ಪ್ರಕಾರ ಇದ್ದರೆ ಸಾಮರಸ್ಯ, ಸಾಮಾಜಿಕ ಸಂವಹನ ಮತ್ತು ಸಕಾರಾತ್ಮಕ ಶಕ್ತಿ ಉತ್ತಮಗೊಳ್ಳುತ್ತದೆ. ಇದಕ್ಕಾಗಿ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡುವುದು, ಸಸ್ಯಗಳನ್ನು ಸೇರಿಸುವುದು ಮತ್ತು ವಾಸ್ತು ದೋಷಗಳನ್ನು ಪರಿಹರಿಸುವುದು ಮುಂತಾದ  ವಾಸ್ತು ಶಾಸ್ತ್ರ ತತ್ತ್ವಗಳನ್ನು ಅನುಸರಿಸಿ. ಇದರಿಂದ ನಿಮ್ಮ ಮನೆಯ ವಾಯುವ್ಯ ಮೂಲೆಯಲ್ಲಿ ಶಕ್ತಿಯ ಸಂಚಯ ಉತ್ತಮವಾಗುತ್ತದೆ. ಈ ವಾಸ್ತು ಟಿಪ್ಸ್‌ಗಳನ್ನು ಕಾರ್ಯಗತಗೊಳಿಸುವ ಮೂಲಕ ಉತ್ತಮ ಆರೋಗ್ಯ, ಸಂಬಂಧದಲ್ಲಿ ಸುಧಾರಣೆ ಮತ್ತು ಒಟ್ಟಾರೆ ಯೋಗಕ್ಷೇಮ ನಿಮ್ಮದಾಗಿಸಿಕೊಳ್ಳಬಹುದು.




ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವಾಯುವ್ಯ ದಿಕ್ಕಿನ ಬಾಗಿಲುಗಳಿಗೆ ಇರುವ ವಾಸ್ತು ಸಲಹೆಗಳು ಏನು?

ವಾಯುವ್ಯ ದಿಕ್ಕಿನ ಮನೆಯಲ್ಲಿ ಶಕ್ತಿಯು ಸರಾಗವಾಗಿ ಹರಿಯುವಂತೆ ಮಾಡಲು ಬಾಗಿಲಿನ ಪ್ರದೇಶವನ್ನು ಸ್ವಚ್ಛವಾಗಿ ಮತ್ತು ಅಡೆತಡೆಗಳು ಇಲ್ಲದಂತೆ ಇರಿಸಿ. ಬಾಗಿಲಿನ ಮೇಲೆ ಬಿಳಿ ಅಥವಾ ಕೆನೆ ಬಣ್ಣಗಳಂತಹ ತಿಳಿ ಬಣ್ಣಗಳನ್ನು ಬಳಸುವುದು ಉತ್ತಮ. ಪ್ರವೇಶದ್ವಾರದ ಬಳಿ ಭಾರವಾದ ಪೀಠೋಪಕರಣಗಳು ಅಥವಾ ಅಡೆತಡೆಗಳನ್ನು ಇಡುವುದನ್ನು ತಪ್ಪಿಸಿ.

 

2. ವಾಯುವ್ಯ ಮೂಲೆಯಲ್ಲಿ ತಪ್ಪಿಸಬೇಕಾದ ಅಂಶಗಳು ಯಾವುವು?

ವಾಯುವ್ಯ ಮೂಲೆಯಲ್ಲಿ ಸ್ಟವ್‌ ಅಥವಾ ಕ್ಯಾಂಡಲ್‌ಗಳನ್ನು ಇಡುವುದನ್ನು ತಪ್ಪಿಸಿ. ಏಕೆಂದರೆ, ಗಾಳಿಯ ಅಂಶದ ಜತೆ ಬೆಂಕಿ ಸಮಸ್ಯೆ ತರುತ್ತದೆ. ಇದರಿಂದ ಸಂಬಂಧದಲ್ಲಿ ಮತ್ತು ಅರೋಗ್ಯದಲ್ಲಿ ಅಸಮತೋಲನ ಉಂಟಾಗುತ್ತದೆ. ವಾಯುವ್ಯ ಮೂಲೆಯ ಮನೆಗೆ ಗಾಢ ಅಥವಾ ಬೆಂಕಿ ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ. ಜತೆಗೆ, ಪೀಠೋಪಕರಣಗಳನ್ನು ಹೆಚ್ಚು ಇಡಬೇಡಿ.

 

3. ವಾಯುವ್ಯ ಮೂಲೆಯ ಮನೆಯ ವಾಸ್ತು ದೋಷಗಳಿಗೆ ಪರಿಹಾರವೇನು?

ವಾಯುವ್ಯ ವಾಸ್ತು ಮೂಲೆಗೆ ಹಾನಿಯಾಗಿದ್ದರೆ, ಈ ಮೂಲೆಯಲ್ಲಿ ಅಡೆತಡೆ ಇದ್ದರೆ ಲೋಹದ ಪಿರಾಂಇಡ್‌ ಅಥವಾ ವಾಸ್ತು ಯಂತ್ರವನ್ನು ದೋಷಪೂರಿತ ಸ್ಥಳದಲ್ಲಿ ಇಡಿ. ಗಾಳಿಗೆ ಲೋಹದ ನಿನಾದ ಮೂಡಿಸುವ ಮೆಟಲ್‌ ವೈಂಡ್‌ ಚಿಮೀಸ್‌ ಅನ್ನು ಇಡುವ ಮೂಲಕವೂ ವಾಯುವ್ಯ ವಾಸ್ತುವಿನ ದೋಷಗಳನ್ನು ದೂರವಾಗಿಸಬಹುದು.

 

4. ವಾಯುವ್ಯ ಮೂಲೆಯ ಮನೆಯ ಮಲಗುವ ಕೊಠಡಿಯಲ್ಲಿ ಯಾವುದನ್ನು ತಪ್ಪಿಸಬೇಕು?

ವಾಯುವ್ಯ ಮೂಲೆಯ ಬೆಡ್‌ರೂಂ ವಾಸ್ತುವಿಗಾಗಿ ಎಲೆಕ್ಟ್ರಾನಿಕ್ಸ್‌ ಅಥವಾ ಭಾರೀ ಗಾತ್ರದ ವಸ್ತುಗಳನ್ನು ಬೆಡ್‌ ಪಕ್ಕ ಇಡಬೇಡಿ. ಇದು ನಿದ್ರೆಗೆ ತೊಂದರೆ ನೀಡುತ್ತದೆ, ಅಸಮತೋಲನ ಉಂಟು ಮಾಡುತ್ತದೆ. ಬೆಳಕು ಮತ್ತು ಗಾಳಿಯನ್ನು ಅನುಭವಿಸಲು ತೆಳು ಬಣ್ಣಗಳನ್ನು ಬಳಸಿ, ಕನಿಷ್ಠ ಪೀಠೋಪಕರಣಗಳು ಇರಲಿ.

 

5. ವಾಸ್ತು ಪ್ರಕಾರ ವಾಯುವ್ಯ ಮೂಲೆಯಲ್ಲಿ ಏನು ಇಡಬೇಕು?

ವಾಯುವ್ಯ ಮೂಲೆಯ ಮನೆಯಲ್ಲಿ ಶಕ್ತಿಯ ಸಂಚಯ ಹೆಚ್ಚಿಸಲು ಪೀಸ್‌ಲಿಲ್ಲಿ ಅಥವಾ ಅರೆಕಾ ಪಾಮ್ಸ್‌ನಂತಹ ಪುಟ್ಟ ಗಿಡಗಳನ್ನು ಇಡಿ. ಇದರೊಂದಿಗೆ ವೈಂಡ್‌ ಚಿಮೀಸ್‌ನಂತಹ ವಸ್ತುಗಳನ್ನು ಇಡಬಹುದು. ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಉತ್ತಮವಾಗಿರಲು ಸ್ಥಳ ಮುಕ್ತವಾಗಿರಲಿ, ಅತ್ಯುತ್ತಮ ವಾತಾಯನ ಹೊಂದಿರಲಿ.


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....