ಜಮೀನು ಖರೀದಿಗೆ ಮುನ್ನ ಈ ಕೆಳಗಿನ ದಾಖಲೆಗಳ ಕಾನೂನಿನ ಸಿಂಧುತ್ವವನ್ನು ಪರಿಶೀಲಿಸಿ, ದೃಢಪಡಿಸಿಕೊಳ್ಳಬೇಕು:
ಮದರ್ ಡೀಡ್: ಜಮೀನಿನ ಮೂಲ ಮಾಲೀಕನಿಂದ ಆರಂಭವಾಗಿ ಅದಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಹಕ್ಕುಗಳ ವರ್ಗಾವಣೆಯ ವಿವರ ಈ ದಾಖಲೆಯಲ್ಲಿರುತ್ತದೆ. ಆರಂಭದಿಂದಲೇ ಜಮೀನು ಯಾರ ಮಾಲೀಕತ್ವದಲ್ಲಿತ್ತು ಎಂಬ ವಿವರಗಳು ಅದರಲ್ಲಿರುತ್ತದೆ.
ಸೇಲ್ ಡೀಡ್: ಜಮೀನಿನ ಮಾಲೀಕತ್ವ ಮತ್ತೊಬ್ಬರಿಗೆ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ತೋರಿಸುವ ದಾಖಲೆ. ಜತೆಗೆ ಸದರಿ ಜಮೀನು ಹಾಲಿ ಮಾಲೀಕರಲ್ಲಿ ಇದೆ ಎಂದು ಖಚಿತಪಡಿಸುವ ದಾಖಲೆಯೂ ಹೌದು.
ಋಣಭಾರ ರಾಹಿತ್ಯ ಪತ್ರ (ಇ.ಸಿ.): ಜಮೀನಿನ ಮೇಲೆ ಸಾಲ ಪಡೆಯಲಾಗಿದೆಯೇ, ಪಡೆದಿರುವ ಸಾಲ ಪಾವತಿ ಆಗದೆ ಉಳಿದಿದೆಯೇ, ಅದರ ಆಧಾರದಲ್ಲಿ ಅಡಮಾನ ಸಾಲ ಪಡೆಯಲಾಗಿದೆಯೇ ಸೇರಿದಂತೆ ಇನ್ನಿತರ ವಿತ್ತೀಯ ಮಾಹಿತಿ ಈ ದಾಖಲೆಯಿಂದ ಲಭ್ಯವಾಗುತ್ತದೆ. ಈ ಅಂಶಗಳು ಇಲ್ಲದೇ ಇದ್ದರೆ ನೀವು ತೊಂದರೆಗೆ ಸಿಲುಕುವ ಅಪಾಯಗಳಿವೆ.
ಖಾತೆ ಪ್ರಮಾಣ ಪತ್ರ ಮತ್ತು ಖಾತೆ: ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಜಮೀನು ಇರುವ ಸ್ಥಳ ಮತ್ತು ಇತರ ಅಂಶಗಳ ಬಗ್ಗೆ ಅಧಿಕೃತವಾಗಿ ದಾಖಲಾಗಿರುವ ಬಗ್ಗೆ ಈ ದಾಖಲೆಯಲ್ಲಿ ನಮೂದಾಗಿರುತ್ತದೆ. ಅದರಲ್ಲಿ ವಿಶೇಷವಾಗಿ ತೆರಿಗೆ ಪಾವತಿ ಮಾಡಿರುವ ಅಂಶ ಇರುತ್ತದೆ. ಕಾನೂನುಬದ್ಧವಾಗಿ ಮಾಲೀಕತ್ವ ಹೊಂದಿರುವ ಬಗ್ಗೆ ಮತ್ತು ಸ್ಥಳೀಯ ಕಾನೂನು ಪಾಲನೆಗಾಗಿ ಇದು ಅಗತ್ಯ.
ಭೂದಾಖಲೆಗಳು (ಪಟ್ಟಾ/ಹಕ್ಕುಗಳ ದಾಖಲೆಗಳು): ಈ ದಾಖಲೆ ಮೂಲಕ ಜಮೀನಿನ ಮಾಲೀಕತ್ವದ ಬಗ್ಗೆ ದೃಢೀಕರಣ ಲಭಿಸುತ್ತದೆ. ಇದರ ಜತೆಗೆ ಅದರ ವರ್ಗೀಕರಣವನ್ನೂ ಅದರಲ್ಲಿ ಮುದ್ರಿಸಿರುತ್ತಾರೆ (ಉದಾಹರಣೆ: ಕೃಷಿ, ಗೃಹ ನಿರ್ಮಾಣ). ಜತೆಗೆ ಅದರ ಮೇಲೆ ಸಾಲ ಪಡೆದಿದ್ದರೆ ಅದರ ವಿವರಗಳು ಇರುತ್ತವೆ. ಜಮೀನಿನ ಮಾಲೀಕತ್ವದ ವಿವರಗಳನ್ನು ಶೋಧಿಸುವ ವೇಳೆ ಅದು ಪ್ರಮುಖವಾಗಿ ಬೇಕು.
ಭೂಪರಿವರ್ತನೆ ಆದೇಶ (ಅಗತ್ಯ ಬಿದ್ದರೆ): ಮೂಲದಲ್ಲಿ ಜಮೀನು ಕೃಷಿಗೆ ಬಳಕೆಯಾಗುತ್ತಿದ್ದು, ನಂತರದಲ್ಲಿ ಅದು ಕೃಷಿಯೇತರ ಉಪಯೋಗಕ್ಕೆ ಬಳಕೆಗೆ ಉದ್ದೇಶ ಇದ್ದರೆ ಅದಕ್ಕೆ ಸ್ಥಳೀಯ ಆಡಳಿತದ ನೀಡಿದ ಆದೇಶ ಬೇಕಾಗುತ್ತದೆ. ಜತೆಗೆ ಆ ಆದೇಶವನ್ನೂ ನೀಡಿದ್ದು ಖಚಿತವೇ ಎಂಬುದನ್ನೂ ದೃಢಪಡಿಸಿಕೊಳ್ಳಬೇಕು. ಅದು ದೃಢಪಟ್ಟರೆ ಜಮೀನನ್ನು ಗೃಹ ನಿರ್ಮಾಣಕ್ಕೋ ಅಥವಾ ವಾಣಿಜ್ಯ ಬಳಕೆಗೋ ಉಪಯೋಗಿಸಬಹುದು.
ಅಧಿಕಾರ ಪತ್ರ: ಒಬ್ಬನ ಸ್ವಾಧೀನ ಇರುವ ಜಮೀನನ್ನು ಮತ್ತೊಬ್ಬ ಮಾರಾಟ ಮಾಡಲು ನೀಡುವ ಅನುಮತಿ. ಈ ರೀತಿ ಅಧಿಕಾರ ಪತ್ರ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ನೀವು ಒಂದು ಬಾರಿ ಮಾತ್ರ ಮನೆ ನಿರ್ಮಿಸುತ್ತೀರಿ. ಹೀಗಾಗಿ, ಸೂಕ್ತ ಸಮಯ ತೆಗೆದುಕೊಂಡು ಜಮೀನಿನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ, ಅವು ಕಾನೂನುಬದ್ಧವಾಗಿವೇ ಎಂದು ದೃಢೀಕರಿಸಿ. ಈ ಮೂಲಕ ಮನೆ ನಿರ್ಮಾಣ ಆಗುವ ಜಮೀನು ಕಾನೂನುಬದ್ಧವಾಗಿರುವುದರಿಂದ ನಿಮಗೆ ನೆಮ್ಮದಿ ಸಿಗುತ್ತದೆ.
ಜಮೀನಿನ ನಿಜವಾದ ಮಾಲೀಕರನ್ನು ಪತ್ತೆ ಹಚ್ಚಲು ಸಲಹೆಗಳು
ಸರಿಯಾದ ಜಮೀನು ಮಾಲೀಕನ ಜತೆಗೆ ಮಾತುಕತೆ ನಡೆಸುತ್ತಿದ್ದೀರಿ ಎಂದಾದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ:
1) ಪ್ರಮುಖ ಅಂಶಗಳನ್ನು ಸಂಗ್ರಹಿಸಿ
2) ಸ್ಥಳೀಯ ಸರ್ಕಾರಿ ಕಚೇರಿಗೆ ಭೇಟಿ ಕೊಡಿ
3) ಆನ್ ಲೈನ್ ಪೋರ್ಟಲ್ ಗಳನ್ನು ಬಳಸಿ
4) ಪ್ರಮುಖ ದಾಖಲೆಗಳನ್ನು ದೃಢೀಕರಿಸಿ
5) ಎಲ್ಲ ರೀತಿಯ ಕಾನೂನು ಮತ್ತು ಪರವಾನಗಿ ಪಡೆಯಿರಿ
ಮನೆ ನಿರ್ಮಾಣ ಕಾಮಗಾರಿ ಆರಂಭಕ್ಕೆ ಮೊದಲು ಎಲ್ಲ ಇಲಾಖೆಗಳಿಂದ ಪರವಾನಗಿ ಪಡೆದುಕೊಳ್ಳಬೇಕು.
ನಿಮ್ಮ ಮನೆ ನಿರ್ಮಾಣದ ಖರ್ಚಿನಲ್ಲಿ ಪರವಾನಗಿ ಪಡೆಯಲು ನೀಡಿದ ಶುಲ್ಕ, ಪರವಾನಗಿ ಪಡೆಯಲು ತಪಾಸಣೆ ನಡೆಸಿದ್ದಕ್ಕೆ ಶುಲ್ಕವನ್ನೂ ಸೇರಿಸಿ. ಈ ಮೂಲಕ ಅನಪೇಕ್ಷಿತ ವೆಚ್ಚ ತಡೆಯಿರಿ.
ಜಮೀನು ಮಾಲೀಕತ್ವ ದಾಖಲೆ ದೃಢೀಕರಿಸದಿದ್ದರೆ ಉಂಟಾಗುವ ಕಾನೂನು ಸಮಸ್ಯೆಗಳು
ಜಮೀನು ಖರೀದಿಸುವ ವೇಳೆ ಮಾಲೀಕತ್ವದ ದಾಖಲೆಗಳು ಸರಿಯಾಗಿ ಇವೆಯೇ ಎಂದು ಪರೀಕ್ಷಿಸದಿದ್ದರೆ ಹಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಕಾನೂನು ಶುಲ್ಕ, ಅನಗತ್ಯ ವಿವಾದಗಳುಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಆತಂಕ ಇದೆ. ಉದಾಹರಣೆಗೆ ಜಮೀನಿನ ಮಾಲೀಕ ನಾನೇ ಎಂದು ಹಲವರು ವಾದಿಸಬಹುದು, ಅದಕ್ಕೆ ಸಾಲ ಪಡೆಯಲು, ಅಡಮಾನ ಸಾಲ ಪಡೆಯಲು, ಕೋರ್ಟ್ ನಲ್ಲಿ ಜಮೀನು ನಿಮಗೆ ಸೇರಿದ್ದು ಅಲ್ಲ ಎಂಬ ತೀರ್ಪೂ ಬರಬಹುದು. ಖರೀದಿಗೆ ಮುನ್ನವೇ ಜಮೀನಿನ ಮಾಲೀಕತ್ವದ ಬಗೆಗಿನ ದಾಖಲೆಗಳನ್ನು ಪರೀಕ್ಷಿಸಿ ದೃಢಪಡಿಸಿದರೆ ನೀವು ಮಾಡಿದ ಹೂಡಿಕೆಯೂ ಮತ್ತು ನಿರ್ಮಾಣಗೊಂಡ ಮನೆಯೂ ಸುರಕ್ಷಿತವಾಗಿರುತ್ತದೆ.
ಜಮೀನು ದಾಖಲೆ ದೃಢೀಕರಿಸುವ ವಕೀಲರ ಜತೆಗೆ ಮಾತುಕತೆಗೆ ಸಲಹೆಗಳು
ಕೆಲವೊಂದು ಸಂದರ್ಭಗಳಲ್ಲಿ ಜಮೀನಿನ ದಾಖಲೆಗಳನ್ನು ನಮಗೇ ಪರೀಕ್ಷಿಸಲು ಕಷ್ಟವಾಗಬಹುದು. ಆ ಜಮೀನಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದಲ್ಲಿ, ವಂಚನೆ ನಡೆದಿದ್ದಲ್ಲಿಅದನ್ನು ಖಚಿತಪಡಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ, ಜಮೀನು ಖರೀದಿ ವಿಚಾರದಲ್ಲಿ ತಜ್ಞರ ವಕೀಲರ ನೆರವು ಪಡೆಯಬೇಕಾಗುತ್ತದೆ. ವಕೀಲರು ಈ ಕೆಳಗಿನ ವಿಚಾರಗಳಿಗೆ ಸಂಬಂಧಿಸಿ ನೆರವು ನೀಡಬಹುದು:
ದಾಖಲೆಗಳ ಸಮಗ್ರ ಪರಿಶೀಲನೆ: ಜಮೀನಿಗೆ ಸಂಬಂಧಿಸಿದಂತೆ ಇರುವ ಎಲ್ಲ ದಾಖಲೆಗಳನ್ನು ಅವರು ಪರಿಶೀಲಿಸಿ, ಅದನ್ನು ಖರೀದಿಸಬಹುದೇ ಅಥವಾ ಬೇಡ ಎಂಬ ಅಭಿಪ್ರಾಯ ತಿಳಿಸಬಹುದು.
ಹಕ್ಕುಪತ್ರದ ಶೋಧ: ಗೊತ್ತಿಲ್ಲದೇ ಇರುವ ಕಾನೂನು ಅಂಶಗಳು, ಮಾಲೀಕತ್ವದ ದಾಖಲೆಗಳನ್ನು ಪಡೆಯುವ ಬಗ್ಗೆ ಸಲಹೆ.
ವಿವಾದ ಪರಿಹಾರಕ್ಕೆ ನೆರವು: ಹಕ್ಕುಪತ್ರದ ಬಗ್ಗೆ ವಿಚಾರ ಇತ್ಯರ್ಥವಾಗದೇ ಇದ್ದಲ್ಲಿ ಅಥವಾ ಮಾಲೀಕತ್ವದ ಬಗ್ಗೆ ಸಮಸ್ಯೆ ಇದ್ದಲ್ಲಿ ಅದರ ಪರಿಹಾರದ ಬಗ್ಗೆ ನೆರವು.
ವಕೀಲರ ಮೂಲಕ ದಾಖಲೆಗಳನ್ನು ಪರಿಶೀಲಿಸುವುದರಿಂದ ಜಮೀನು ಖರೀದಿ ಬಗ್ಗೆ ಕಾನೂನಿನ ಯಾವುದೇ ಹಂತವನ್ನು ತಪ್ಪಿಸುವುದಿಲ್ಲ ಎಂಬ ನಂಬಿಕೆ ಉಂಟಾಗುತ್ತದೆ. ಇದಲ್ಲದೆ ಖರೀದಿಯ ಹಂತಗಳಲ್ಲಿ ಉಂಟಾಗುವ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಪಡೆಯಲೂ ಸಾಧ್ಯ.
ಸಮಸ್ಯೆಗಳು ಎದುರಾಗುವ ಸಂದರ್ಭಗಳ ಬಗ್ಗೆ ಎಚ್ಚರ ಇರಲಿ
ಜಮೀನು ಮಾಲೀಕತ್ವದ ಬಗ್ಗೆ ಎಲ್ಲ ಅಂಶಗಳನ್ನು ಪರಿಶೀಲಿದ್ದರೂ ಕೆಲವೊಂದು ಅಂಶಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ:
ಜಮೀನಿನ ಬಗ್ಗೆ ಅಪೂರ್ಣ ಅಥವಾ ಇಲ್ಲದ ದಾಖಲೆಗಳು: ಸೇಲ್ ಡೀಡ್, ಋಣಭಾರ ರಾಹಿತ್ಯಪತ್ರ (ಇ.ಸಿ.) ಖಾತೆ ಸೇರಿದಂತೆ ಪ್ರಮುಖ ದಾಖಲೆಗಳು ಇಲ್ಲದೇ ಇದ್ದರೆ ಅಥವಾ ಪೂರ್ಣ ಪ್ರಮಾಣದಲ್ಲಿ ಅವುಗಳು ಇಲ್ಲದೇ ಇದ್ದರೆ ಅಂಥ ಜಮೀನಿನ ಮಾಲೀಕತ್ವದ ಬಗ್ಗೆ ಸಂಶಯ ಉಂಟಾಗುತ್ತದೆ.
ಮಾಲೀಕತ್ವದ ದಾಖಲೆಗಳ ಬಗ್ಗೆ ಸ್ಪಷ್ಟತೆಯ ಕೊರತೆ: ಜಮೀನಿನ ಮಾಲೀಕತ್ವದ ಬಗ್ಗೆ ಹಲವು ಮಂದಿ ಹಕ್ಕು ಸ್ಥಾಪಿಸಿದರೆ ಅಥವಾ ದಾಖಲೆಗಳಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗಬಹುದು.
ಅಪೂರ್ಣ ಪಾವತಿ ವಿಚಾರ: ಜಮೀನಿನ ಆಧಾರದಲ್ಲಿ ಪಡೆಯಲಾಗಿರುವ ಸಾಲ ಮರು ಪಾವತಿ ಮಾಡದಿರುವುದು, ತೆರಿಗೆ ಪಾವತಿ ಬಾಕಿ ಇದ್ದರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಅಂಶಗಳನ್ನು ಪರಿಶೀಲಿಸದೆ ಜಮೀನು ಖರೀದಿಸಿದರೆ ಬಾಕಿ ಪಾವತಿಯನ್ನು ನೀವೇ ಮಾಡಬೇಕಾದೀತು.
ಖಚಿತವಲ್ಲದ ಮಾರಾಟಗಾರ: ಜಮೀನು ಮಾರಾಟ ಮಾಡುವಾತನ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅಥವಾ ಅದರ ಮಾಲೀಕತ್ವದ ಬಗ್ಗೆ ಸ್ಪಷ್ಟ ದಾಖಲೆ ಕೊಡದಿದ್ದರೆ ಅದೊಂದು ಸಮಸ್ಯೆಯಾದೀತು.
ಮೇಲ್ಕಂಡ ಎಲ್ಲ ಅಂಶಗಳನ್ನು ನೋಡಿ ಜಮೀನು ಖರೀದಿಸಿ ಸಂಭಾವ್ಯ ಅಪಾಯಗಳಿಂದ ಪಾರಾಗಿ. ಜತೆಗೆ ಜಮೀನು ಖರೀದಿಗೆ ಮಾಡಿರುವ ಹೂಡಿಕೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ವಕೀಲರೊಬ್ಬರು ಜಮೀನಿನ ದಾಖಲೆಗಳನ್ನು ನೋಡಿ ಅದರಿಂದ ಉಂಟಾಗಬಹುದಾಗಿರುವ ಸಮಸ್ಯೆಯನ್ನು ಪರಿಹರಿಸಿ, ಜಮೀನು ಖರೀದಿಯಲ್ಲಿ ನೆರವಾಗುತ್ತಾರೆ.