Share:
Share:
ನೀರು ಜಾರಿ ಹೋಗುವಂತಹ ಸ್ಥಳಗಳಲ್ಲಿ ಕಟ್ಟಿದ ಕಟ್ಟಡಗಳ ಗೋಡೆಗಳ ಹಿಂದೆ ನೀರು ಶೇಖರಣೆಯಾಗಲು ಸಾದ್ಯವಿಲ್ಲ. ಅಂತಹ ಸ್ಥಳಗಳಲ್ಲಿ ವೀಪ್ ರಂಧ್ರಗಳ ಅವಶ್ಯಕತೆ ಇರುವುದಿಲ್ಲ. ನೀರು ಜಾರಿಹೋಗದಂಥ ಜಾಗಗಳ ಕೆಳಗೆ ಕಟ್ಟಿದ ಕಟ್ಟಡಗಳಿಗೆ, ವಾಟರ್ ಪ್ಲಾಸ್ಟರಿಂಗ್ ಮಾಡದೆ ಇರುವ ಕಟ್ಟಡಗಳಿಗೆ, ಭುಮಿಯ ಮತ್ತು ಸಾಚುರೇಟೆಡ್ ಒತ್ತಡಕ್ಕಿಂತ ಮೇಲ್ಮೈನ ನೀರಿನ ಒತ್ತಡ ಹೆಚ್ಚಿರುವ ಕಡೆ ವೀಪ್ ರಂಧ್ರಗಳ ಅವಶ್ಯಕತೆ ಇರುತ್ತದೆ.
ಕಟ್ಟಡವು ನೀರು ಜಾರಿ ಹೋಗುವಂತಹ ಸ್ಥಳಗಳಲ್ಲಿ ಇರುವುದರಿಂದ, ಕಟ್ಟಡವನ್ನು ವಿನ್ಯಾಸ ಗೊಳಿಸುವ ಸಮಯದಲ್ಲಿ ಭೂಮಿಯ ಒತ್ತಡವನ್ನು ಮಾತ್ರ ಪರಿಗಣಿಸಲಾಗುತ್ತದೆ.
ಯಾವಾಗ ನೀರು ಮಾತ್ತು ಮಣ್ಣ ಸೇರುತ್ತದೆಯೋ ಆವಾಗ ಸ್ಯಾಚುರೆಟೆಡ್ ಒತ್ತಡ ಅಥವಾ ಭೂಮಿಯ ಒತ್ತಡವು ಮುಳುಗಿದ ತೂಕವಾಗಿ ಪರಿವರ್ತನೆಯಾಗುತ್ತದೆ. ಇದು ಸಾಚುರೇಟೆಡ್ ಒತ್ತಡಕ್ಕಿಂತ ಕಡಿಮೆಇರುತ್ತದೆ ಮತ್ತು ಸಾಚುರೆಟೆಡ್ ಒತ್ತಡಕ್ಕಿಂತ ಹೆಚ್ಚಗಿರುತ್ತದೆ. ಮಣ್ಣಿನ ಒತ್ತಡ ಮತ್ತು ನೀರಿನ ಒತ್ತಡವನ್ನು ಕಟ್ಟಡವನ್ನು ವಿನ್ಯಾಸ ಮಾಡುವಾಗ ಖಂಡಿತವಾಗಿಯೂ ಪರಿಗಣನೆಗೆ ತೆಗೆದುಕೊಳ್ಳಬೇಕು.
ಕಟ್ಟಡವು ವೀಪ್ ರಂಧ್ರಗಳನ್ನು ಹೊಂದಿದ್ದಋೂ, ನೀರು ಜಾರು ಹೋಗುವಂತಹ ಜಾಗವು ಕಟ್ಟಡಕ್ಕಿಂತ ಮೇಲಿದ್ದಾಗ, ವೀಪ್ ರಂಧ್ರಗಳನ್ನು ನೀರಿನಿಂದಾದ ಒತ್ತಡವನ್ನು ಕಡಿಮೆಮಾಡಲು ಬಳಸುತ್ತಾರೆ. ಈ ಒತ್ತಡವು ರಂಧ್ರಗಳಿಂದ ಕಡಿಮೆಯಾಗುತ್ತದೆ. ಇದರಲ್ಲಿ ಮುಖ್ಯವಾದ ಅಂಶವೆಂದರೆ ರಂಧ್ರಗಳನ್ನು ಯಾವ ಎತ್ತರದಲ್ಲಿ ಇರಿಸಲಾಗಿದೆ ಎಂಬುದಾಗಿದೆ. ವೀಪ್ ರಂಧ್ರಗಳು ಎತ್ತರದಲ್ಲಿ ಇದ್ದಷ್ಟು, ಕಟ್ಟಡದ ಮೇಲೆ ನೀರಿನ ಒತ್ತಡ ಹೆಚ್ಚಾಗುತ್ತದೆ.
ವೀಪ್ ರಂಧ್ರಗಳನ್ನು ಸಾಮಾನ್ಯವಾಗಿ ಹೊರಗಿನ ಇಟ್ಟಿಗೆಯ ಗೋಡೆಗೆ ಇಡಲಾಗುತ್ತದೆ. ಇದು ಇಟ್ಟಿಗೆಗಳ ಗಾರೆಯ ಮಧ್ಯೆ ಲಂಬವಾದ ಸಂದುಗಳಂತೆ ಕಾಣುತ್ತವೆ. ಇಟ್ಟಿಗೆಗಳ ಗಾರೆಯಲ್ಲಿ ಇರುವ ರಂಧ್ರಗಳಿಂದ ಮೇಲ್ಮೈ ಮೇಲೆ ನೀರು ಸುರಿದು ಗೋಡೆಯ ಒಳಗೆ ಬರುತ್ತದೆ. ನೀರು ಗುರುತ್ವಾಕರ್ಷಣೆಯಿಂದ ಗೋಡೆಯಿಂದ ಕೆಳಗೆ ಮತ್ತು ಅಡಿಪಾಯಕ್ಕಿಂತ ಮೇಲೆ ಬಂದು, ಅಲ್ಲಿಂದ ವೀಪ್ ರಂಧ್ರಗಳ ಮೂಲಕ ಹೊರಗೆ ಹೊಗುತ್ತವೆ. ಇವುಗಳು ಎಲ್ಲ ಕಿಟಕಿಗಳ, ಬಾಗಿಲುಗಳ, ಮತ್ತು ಎಲ್ಲ ಹೊರ ಹೊಗುವ ಜಾಗಗಳ ಮೇಲೆ ಇಡಲಾಗುತ್ತದೆ.
ವೀಪ್ ರಂಧ್ರಗಳನ್ನು ಎಲ್ಲ ಕಿಟಕಿಗಳ ಟ್ರ್ಕ್ಯಾಕ್ ಮೇಲೆ ಇಡಲಾಗುತ್ತದೆ. ಇದು ಕಿಟಕಿಗಳು ಎಷ್ಟು ಹಳೆಯವು ಮತ್ತು ಅವುಗಳ ಮಾದರಿಯ ಮೇಲೆ ಬೇರೆ ರೀತಿಯಾಗಿ ಕಾಣಬಹುದು, ಸಾಮಾನ್ಯವಾಗಿ ಇದು ಆಯತಾಕಾರದ ಕಪ್ಪು ಬಣ್ಣದ ಮದ್ಯದಲ್ಲಿ ಬೆಳ್ಳಿಯ ಬೆಳಕು ಹೊಳೆದಂತೆ ಕಾಣುತ್ತದೆ. ಈ ಪಟ್ಟಿಗಳು ನೀರು ಒಂದೇ ದಿಕ್ಕಿನಲ್ಲಿ ಹರಿದು ಹೋಗಲು ಅನುವು ಮಾಡಿಕೊಡುತ್ತದೆ. ಇವು ಹಲಗೆಯ ಮೇಲೆ ನೀರು ಶೇಖರಣೆಯಾಗಿ ಕೊಳೆಯಂದೆ ಮಾಡುತ್ತದೆ. ( ವಾಟರ್ ಪ್ರೂಪ್ ವಸ್ತುಗಳಂತೆ ವರ್ತಿಸುತ್ತದೆ)
ವೀಪ್ ರಂಧ್ರಗಳನ್ನು ಲಂಬವಾದ ಇಟ್ಟಿಗೆಯ ಗಾರೆಯನ್ನು ಕೆರೆದು ಮಾಡಲಾಗುತ್ತದೆ. ಓಪನ್ ಹೆಡ್ ಜಾಯಿಂಟ್ ಗಳನ್ನು ಸರಿಯಾಗಿ 21 ಇಂಚಿನ ಅಂತರದಲ್ಲಿ ಮಾಡಲಾಗುತ್ತದೆ ಮತ್ತು ಈ ಗೋಡೆಗಳು ಸಾಮಾನ್ಯವಾಗಿ ಕೂಡಿಸುವ ಜಾಗದಷ್ಟೆ ಎತ್ತರವಾಗಿರುತ್ತವೆ.
ಇದು ಅತಿ ಹೆಚ್ಚು ಮೆಚ್ಚುಗೆ ಗಳಿಸಿದ ಮತ್ತು ನಂಬಿಕೆಗೆ ಅರ್ಹವಾದ ನೀರು ಹರಿದುಹೋಗಿವಂತೆ ಮಾಡುವ ವಿಧಾನವಾಗಿದೆ. ಇದನ್ನು ಮಾಡಲು ಪ್ಲಾಸ್ಟಿಕ್ ಅನ್ನು ಸವರಿದ ರಚನೆಯಿಂದ, ಎದುರಿಗೆ ನೀರು ಹರಿದು ಹೋಗಲು ಹನಿ ಹನಿಯಾಗಿ ಹೋಗವಂತೆ ಮಾಡಲಾಗುತ್ತದೆ. ಇದು ಮಳೆನೀರು ರಂಧ್ರಗಳಿಂದ ಒಳಗೆ ಸೋರದಂತೆ ತಡೆಯುತ್ತದೆ.
ಈ ತಂತ್ರದ ನ್ಯೂನತೆಯೆಂದರೆ, ಇದು ಗೋಡೆಗಳಲ್ಲಿ ದೊಡ್ಡ ಅಂತರಗಳನ್ನು ಸೃಷ್ಟಿಸುತ್ತದೆ ಮತ್ತು ಓಪನ್ ಹೆಡ ಜಾಯಿಂಟ್ ಗಳು ನೋಡಲು ಅಷ್ಟೋಂದು ಅಂದವಾಗಿ ಕಾಣದೇ ಇರಬಹುದು. ವೀಪ್ ನ ಅಂತರಗಳು ಲೋಹದ ಮತ್ತು ಪ್ಲಾಸ್ಟಿಕ್ ನ ಜಾಲರಿಗಳಿಂದ ಮುಚ್ಚಿ, ರಂಧ್ರಗಳನ್ನು ಕಾಣದಂತೆ ಮಾಡಬಹುದು.
ಹತ್ತಿಯ ಬತ್ತಿಗಳಿಂದ ವೀಪ್ ಗಳನ್ನು ಮಾಡಬಹುದು. 12 ಇಂಚಿನ (30 ಸೆಂಮೀ) ಉದ್ದವಾದ ಹಗ್ಗವನ್ನು ಸಂದುಗಳಿಂದ ಏರಿಸಲಾಗುವುದು. ಹಗ್ಗದ ಮತ್ತೊಂದು ತುದಿಯನ್ನು ಕಲ್ಲಿನ ಬಿರುಕಿಗೆ ತುರುಕಲಾಗುವುದು.
ಹತ್ತಿಯ ಹಗ್ಗಗಳು ಹೊರಗಿನಿಂದ ಸ್ವಲ್ಪಮಟ್ಟಿಗೆ ತೇವಾಂಶವನ್ನು ಗೋಡೆಗಳ ಒಳಗೆ ಹೀರಿಕೊಂಡು, ಗೋಡೆಗಳ ಒಳಗೆ ಹಿಡಿದಿಟ್ಟುಕೊಂಡು ಹೊರಗಡೆ ಬಿಡಬಲ್ಲದು. ವೀಪ್ ರಂಧ್ರಗಳಿಗೆ ಹೋಲಿಸಿದರೆ ಇವುಗಳ ಆವಿಯ ಮಟ್ಟವು ನಿಧಾನವಾಗುತ್ತದೆ. ಹತ್ತಿಗೆ ಬೆಂಕಿಯು ಸಹ ಹಿಡಿಯಬಹುದು.
ವೀಪ್ ರಂಧ್ರಗಳ ಕೊಳವೆಗಳನ್ನು ಟೋಳ್ಳಾದ ಪ್ಲಾಸ್ಟಿಕ್ ಅಥವಾ ಲೋಹದ ಕೊಳವೆಗಳಿಂದ ಮಾಡುತ್ತಾರೆ. ಅವುಗಳು ಹೆಚ್ಚುಕಡಿಮೆ 16 ಇಂಚಿನ ಅಂತರದಲ್ಲಿ ಇರುತ್ತವೆ. ನೀರು ಹರಿದು ಹೋಗುವಂತೆ ಮಾಡಲು ಈ ಕೊಳವೆಗಳನ್ನು ಸ್ವಲ್ಪ ಕೋನವಾಗಿ ಇಡಲಾಗುತ್ತದೆ. ಇರಿಸಲಾಗುವ ಕೋನವು ಹೆಚ್ಚು ಕಡಿದಾಗಿ ಅಥವಾ ಸಮತಟ್ಟಾಗಿ ಇಡದಂತೆ ನೋಡಿಕೊಳ್ಳಬೇಕು.
ಸುಕ್ಕುಗಟ್ಟಿದ ಪ್ಲಾಸ್ಟಿಕ್ ನಿಂದ ವೀಪ್ ಚನಲ್‌ಳನ್ನು ಅಥವಾ ಸುರಂಗಗಳನನ್ನು ಮಾಡಲಾಗುತ್ತದೆ. ಇವಗಳನ್ನು ಇತ್ತಿಚಿನ ತಂತ್ರಜ್ಞಾನದಲ್ಲಿ ಗಾರೆಯ ಹಾಸಿನ ಸಂದಿಯ ಕೆಳಗೆ ಮಾಡಲಾಗುತ್ತದೆ. ಹೆಚ್ಚಿನ ವೀಪ್ ರಂಧ್ರಗಳ ಮಾರ್ಗಗಳ ಮೂಲಕ, ಈ ಸುರಂಗಗಳು ನೀರು ಶೀಘ್ರವಾಗಿ ಗೋಡೆಯ ಕಳಗೆ ಇರುವ ರಂಧ್ರಗಳ ಮೂಲಕ ಹೊರ ಹೋಗುವಂತೆ ಮಾಡುತ್ತದೆ. ಹಗ್ಗದ ವೀಪ್ ರಂಧ್ರಗಳು ಹೆಚ್ಚು ಗಮನಕ್ಕೆ ಬರುವಂತೆ ಇರುತ್ತವೆ ಆದರೆ ಸುಕ್ಕುಗಟ್ಟಿದ ಪ್ಲಾಸ್ಟಿಕ್ ವೀಪ್ ಗಳು ಗಾರೆಯಲ್ಲಿ ಸೇರಿಕೊಂಡು ಹೆಚ್ಚು ಗಮನಕ್ಕೆ ಬರುವುದಿಲ್ಲ.
1. ನೆಲಮಾಳಿಗೆಗಳಿಗೆ ವೀಪ್ ರಂಧ್ರಗಳ ಅವಶ್ಯಕತೆ ಇದೆಯೇ?
ಅಡಿಪಾಯವನ್ನು ಕಲ್ಲು ಮತ್ತು ಕಾಂಕ್ರೀಟ್ ನಿಂದ ಕಟ್ಟಿದ್ದರೆ, ನಿಮ್ಮ ವಾಟರ್ ಪ್ರೂಪ್ ವ್ಯವಸ್ಥೆಯ ಜೊತೆಯಲ್ಲೆ ವೀಪ್ ರಂಧ್ರಗಳನ್ನು ಇಡಬೇಕು. ಇವುಗಳನ್ನು ಸಿಎಂಯು ಬ್ಲೋಕ್, ಸಿಂಡರ್ ಬ್ಲಾಕ್ ಅಥವಾ ಕಾಂಕ್ರೀಟ್ ಬ್ಲಾಕ್ ಎಂದು ಸಹ ಕರೆಯುತ್ತರೆ. ಎಲ್ಲ ಒತ್ತಡಗಳಿಂದ ನಿಮ್ಮ ಅಡಿಪಾಯ ಕಲಾಂತರದಲ್ಲಿ ನೀರು ನೆಲಮಾಳಿಗೆಯಲ್ಲಿ ಸೋರಿ ಹಾಳಾಗಬಹುದು.
2. ವೀಪ್ ರಂಧ್ರಗಳ ಉದ್ದೇಶವೇನು?
ಯಾವುದೇ ಪರಿಸ್ಥಿತಿಯಲ್ಲಿಯೂ ವೀಪ್ ರಂಧ್ರಗಳನ್ನು ಮುಚ್ಚಬಾರದು. ಅವುಗಳು ಒಳಚರಂಡಿಯ ಮತ್ತು ನೀರು ಇಟ್ಟಿಗೆಯ ಹಿಂದೆ ಸೇರಿಕೊಳ್ಳುವುದನ್ನು ತಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಈ ನೀರು ಉಪಚರಿಸದ ಕಟ್ಟಿಗೆಯ ಸಂಪರ್ಕಕ್ಕೆ ಬಂದರೆ ಅದು ಕೊಳೆಯುವಂತೆ ಮಾಡುತ್ತದೆ ಮತ್ತು ಶಿಲೀಂಧ್ರಗಳು ಬೆಳೆಯುವಂತೆ ಮಾಡುತ್ತವೆ ನಂತರ ಕಾಲಾಂತರದಲ್ಲಿ ಮನೆಯ ರಚನೆಗಳಿಗೂ ಸಮಸ್ಯೆಯಾಗುವಂತೆ ಮಾಡುತ್ತವೆ.
3. ವೀಪ್ ರಂಧ್ರಗಳ ಉದ್ದೇಶ ಏನು?
ವೀಪ್ ರಂಧ್ರಗಳು ಗಾರೆಯ ಸಂದುಗಳ ರಂಧ್ರವಾಗಿದೆ. ಇದು ಮಸೊನ್ರಿ ಡಿಸೈನ್ ಮಾನುವಲ್ ಪ್ರಕಾರ, ತೇವಾಂಶವನ್ನು ಮತ್ತು ನೀರನ್ನು ಗೋಡೆಯಿಂದ ಹೊರಹೋಗಲು ಅನುವು ಮಾಡಿ ಕೊಡುತ್ತವೆ.
ನೀವು ಈಗ ನಿಮ್ಮ ಕಟ್ಟಡಕ್ಕೆ ಸರಿಯಾದ ವೀಪ್ ರಂಧ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಇದು ಯಾವಾಗಲು ಗಟ್ಟಿಯಾಗಿ ಮತ್ತು ಬಾಳಿಕೆಬರುವಂತೆ ಖಚಿತಗೊಳಿಸಿಕೊಳ್ಳ ಬಹುದು.