Share:
Share:
ಟೊಳ್ಳು ಗೋಡೆಗಳು ಸಂಪ್ರದಾಯಿಕ ಗಟ್ಟಿ ಗೋಡೆಗಳಿಗಿಂತ ಹೆಚ್ಚಿನ ಅನುಕೂಲವನ್ನು ನೀಡುತ್ತವೆ. ಅವುಗಳೆಂದರೆ
ಆರೋಗ್ಯಕರವಾದ ಮಾತ್ತು ಬದುಕಲು ಅನುಕೂಲಕರವಾದ ವಾತಾವರಣವಿರುವಂತೆ ನೋಡಿಕೊಳ್ಳಲು ತೇವಾಂಶವನ್ನು ತಡೆಗಟ್ಟುವುದು ಅಗತ್ಯವಾದ ಅಂಶವಾಗಿದೆ. ಕಟ್ಟಡದಲ್ಲಿ ತೇವಾಂಶವು ಹಲಾವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಮುಖ್ಯವಾಗಿ ಶೀಲಿಂದ್ರಗಳ ಬೆಳವಣಿಗೆಯಾಗುತ್ತದೆ ಮತ್ತು ಕಟ್ಟಡದ ರಚನೆಗೂ ಧಕ್ಕೆ ತರುತ್ತವೆ. ಅದಕ್ಕಾಗಿಯೇ ಪೂರ್ವಭಾವಿಯಾಗಿ ತೇವಾಂಶ ಬರದಂತೆ ಕಾಪಾಡುವುದು ತುಂಬಾ ಮುಖ್ಯವಾಗುತ್ತದೆ.
ಉಷ್ಣ ನಿರೋಧಕ ಎಂದರೆ ಒಂದು ವಸ್ತು ಅಥವಾ ತಂತ್ರಜ್ಞಾನವಾಗಿದೆ. ಇದು ಎರಡು ಮೇಲ್ಮೈಗಳ ಅಥವಾ ಬೇರೆ ಬೇರೆ ಶಾಖಗಳುಳ್ಳ ಜಾಗದ ನಡುವೆ ಶಾಖದ ವರ್ಗಾವಣೆಯನ್ನು ತಡೆಯುತ್ತದೆ. ಇದು ಕಟ್ಟಡದ ವಿನ್ಯಾಸದ ಪ್ರಮುಖ ಅಂಶವಾಗಿದೆ, ಏಕೆಂದರೆ ಇದು ಒಳಾಂಗಣದ ಶಾಖವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಶಕ್ತಿಯ ಉಳಿತಾಯದೊಂದಿಗೆ ಸುಖದ ಮಟ್ಟವನ್ನು ಹೆಚ್ಚಿಸುತ್ತದೆ.
>ಶಬ್ದ ನಿರೋಧಕವನ್ನು ಅಕೌಸ್ಟಿಕ್ ಇನ್ಸುಲೇಶನ್ ಅಥವಾ ಧ್ವನಿನಿರೋಧಕ ಎಂದು ಸಹ ಕರೆಯುತ್ತಾರೆ. ಇದು ಎರಡು ಜಾಗಗಳ ನಡುವೆ ಶಬ್ಧದ ಓಡಾಟವನ್ನು ನಿಯಂತ್ರಿಸುತ್ತದೆ. ಶಬ್ದ ನಿರೋಧಕವು ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ತುಂಬಾ ಮುಖ್ಯವಾಗುತ್ತವೆ. ಏಕೆಂದರೆ ಇದು ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಶಬ್ದಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸುಖವನ್ನು ಹೆಚ್ಚಿಸುತ್ತದೆ.
ನೆಲ ಅಥವಾ ಗೋಡೆಗಳ ಮೇಲೆ ಬಿಳಿ ಅಥವಾ ಬೂದುಬಣ್ಣದ ಕಲೆ ಉಳಿದುಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ನೀರಿನಲ್ಲಿ ಕರಗುವ ಲವಣಗಳು ಮತ್ತು ಇತರ ವಸ್ತುಗಳು ಕಾಂಕ್ರೀಟ್ ಅಥವಾ ಕ್ಲಲಿನ ಮೇಲ್ಮೈ ಮೇಲೆ ಬಿದ್ದಾಗ ಅದು ಬಿಳಿಯ ಅಥವಾ ಬೂದು ಬಣ್ಣದ ಪುಡಿಯಾದ ವಸ್ತುವಾಗಿ ಮಾರ್ಪಾಟಾಗಿ ಉಳಿಯುವುದರಿಂದ ಆಗುತ್ತದೆ . ಇದು ನೋಡಲು ಕೆಟ್ಟದಾಗಿ ಕಾಣುವುದಲ್ಲದೆ, ಕಾಲಾಂತರದಲ್ಲಿ ನೆಲದ ಮೇಲ್ಮೈ ಯನ್ನು ಸಹ ಹಾಳು ಮಾಡುತ್ತದೆ.
ಮತ್ತು ಹಲವಾರು ಉಪಯೋಗಗಳು ಕೆಳಗಿನಂತಿವೆ:
ಒಟ್ಟಾಗಿ ಟೊಳ್ಳು ಗೋಡೆಗಳಿಂದಾಗುವ ಉಪಯೋಗದಿಂದ ಇದು ಹೆಚ್ಚು ಪ್ರಸಿದ್ದವಾಗಿದೆ. ವಸತಿನಿಲಯ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕು ಸಹ ಉಪಯುಕ್ತವಾಗಿದೆ. ತೇವಾಂಶವನ್ನು ತಡೆಗಟ್ಟಿ, ಹೆಚ್ಚು ಬಾಳಿಕೆ ಬರುವ, ಶಾಖದ ನಿರೊಧಕವನ್ನು ಹೆಚ್ಚಿಸಿ, ಶಬ್ದ ನಿರೊಧಕವಾಗಿ ಮತ್ತು ಬೇಕಾದ ಹಾಗೆ ವಿನ್ಯಾಸವನ್ನು ಮಾಡಲು ಅನುಕೂಲವಾಗಿರುವುದರಿಂದ ಕ್ಯಾವಿಟಿ ಗೋಡೆಗಳು ಹೆಚ್ಚು ಆರಾಮದಾಯಕ ಜೀವಿಸುವ, ಧಕ್ಷ , ಬಾಳಿಕೆ ಬರುವ ಕಟ್ಟಡದ ನಿರ್ಮಾಣಕ್ಕೆ ಸಹಾಯಕವಾಗಿದೆ.
ಟೊಳ್ಳು ಗೋಡೆಗಳು ಎಂದರೆ ಎರಡು ಪದರದಲ್ಲಿ ಕಲ್ಲಿನ ಗೋಡೆಗಳನ್ನು ಮಧ್ಯದಲ್ಲಿ ಅಂತರ ಇರುವಂತೆ ಕಟ್ಟುವುದು. ಮಧ್ಯದ ಅಂತರವನ್ನು ಸಾಮಾನ್ಯವಾಗಿ ಇನ್ಸುಲೇಶನ್ ವಸ್ತುಗಳಿಂದ ತುಂಬಿಸಲಾಗುತ್ತದೆ ಮತ್ತು ಇದು ಶಕ್ತಿಯ ಧಕ್ಷತೆಯನ್ನು ಹೆಚ್ಚಿಸುತ್ತದೆ, ಶಬ್ದ ಹರಡುವಿಕೆಯನ್ನು ಹೆಚ್ಚಿಸುತ್ತದೆ. ಟೊಳ್ಳು ಗೋಡೆಗಳನ್ನು ಹೆಚ್ಚಾಗಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಕಟ್ಟಲು ಬಳಸಲಾಗುತ್ತದೆ. ಕಟ್ಟಡಗಳನ್ನು ಎಲ್ಲಿಬೇಕಾದರೂ , ಪ್ರದೇಶದ ಆಧಾರದ ಮೇಲೆ ಬೇಕಾದ ಹಾಗೆ ವಿನ್ಯಾದ ಮತ್ತು ಉಳಿದ ಅವಶ್ಯಕತೆಗೆ ತಕ್ಕಂತೆ ಕಟ್ಟಬಹುದು.
ಟೊಳ್ಳು ಗೋಡೆಗಳನ್ನು ಈ ಕೆಳಗಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಟ್ಟಲಾಗುತ್ತದೆ.
ಟೊಳ್ಳು ಗೋಡೆಗಳನ್ನು ಕಟ್ಟುವಾಗ ಕಿಟಕಿ ಮತ್ತು ಗೋಡೆಗಳ ನಡುವಿನ ಅಂತರಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಏಕೆಂದರೆ ಟೊಳ್ಳು ಗೋಡೆಗಳು ತಮ್ಮ ವಿಶೇಷತೆಗಳಾದ ಇನ್ಸುಲೇಶನ್ , ಹವಾಮಾನ ವೈಪರೀತ್ಯ ನಿರೋಧಕ ಹಾಗೂ ಕಟ್ಟಡದ ಪ್ರಾಬಲ್ಯವನ್ನು ಹಾಗೆ ಉಳಿಸಿಕೊಳ್ಳಲು ಹೆಚ್ಚಿನ ಕಾಳಜಿ ನೀಡಬೇಕಾಗುತ್ತದೆ.
ಛಾವಣಿಗಳನ್ನು ಕಟ್ಟಲೂ ಕ್ಯಾವಿಟಿ ಗೋಡೆಗಳನ್ನು ಬಳಸಬಹುದು . ಇದು ಇನ್ಸುಲೇಶನ್ , ಶಬ್ದ ನಿರೋಧಕವನ್ನು ಮತ್ತು ಕಟ್ಟಡದ ಸಾಮರ್ಥ್ಯ ವನ್ನು ಹೆಚ್ಚಿಸುತ್ತದೆ. ವಿಷೇಶವಾಗಿ ಛಾವಣಿಯನ್ನು ರಾಪ್ಟರ್ ಗಳ ಮಧ್ಯದಲ್ಲಿ ಕಟ್ಟಲಾಗುತ್ತದೆ ಮತ್ತು ಸುತ್ತುವರೆದ ರೀತಿಯ ರಚನೆಯನ್ನು ಕಟ್ಟಿ ಮಧ್ಯದಲ್ಲಿ ಇರುವ ಅಂತರವನ್ನು ಇನ್ಸುಲೆಶನ್ ವಸ್ತುಗಳಿಂದ ತುಂಬಲಾಗುತ್ತದೆ. ಇದು ಶಾಖವನ್ನು ಕಡಿಮೆ ಮಾಡಲು ಮತ್ತು ಶಕ್ತಿಯ ಧಕ್ಷತೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
ಕೆಳಗಿನ ಗೋಡೆ ಅಥವಾ ಕಟ್ಟಡದ ಮೇಲ್ಛಾವಣಿ ಗಿಂತ ಮೇಲೆ ಹೋದ ರೇಲಿಂಗ್ ಗಳಿಗೆ ಪ್ಯಾರಾಫೆಟ್ ಗೋಡೆಗಳು ಎನ್ನುತ್ತಾರೆ. ಟೊಳ್ಳು ಗೋಡೆಗಳನ್ನು ಪ್ಯಾರಾಫೆಟ್ ಗಳನ್ನು ಕಟ್ಟುವಾಗ ಉಪಯೋಗಿಸುವುದರಿಂದ ಇನ್ಸುಲೇಶನ್, ಶಬ್ದ ನಿರೋಧಕವನ್ನು ಮತ್ತು ಕಟ್ಟಡದ ರಚನೆಗೆ ಗಟ್ಟಿತನವನ್ನು ನೀಡುತ್ತದೆ. ಟೊಳ್ಳು ಗೋಡೆಗಳನ್ನು ಪ್ಯಾರಾಫೆಟ್ ಗಳಲ್ಲಿ ಒಳಗೆ ಮತ್ತು ಹೊರಗಿನ ಗೋಡೆಯ ಪದರದ ನಡುವೆ ಅಂತರ ಬರುವಂತೆ ನಿರ್ಮಿಸಲಾಗುತ್ತದೆ. ಈ ಅಂತರವು ಇನ್ಸುಲೆಶನ್ ಮೆಟಿರಿಯಲ್ ನಿಂದ ತುಂಬಲಾಗುತ್ತದೆ. ಇದು ಕಟ್ಟಡದಲ್ಲಿ ಶಾಖ ನಷ್ಟವನ್ನು ತಡೆಯಲು ಮತ್ತು ಶಕ್ತಿಯನ್ನು ಧಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ನಿರ್ಣಾಯಕವಾಗಿ ಹೇಳುವುದೆಂದರೆ , ಟೊಳ್ಳು ಗೋಡೆಗಳು ಕಟ್ಟಡ ನಿರ್ಮಾಣದಲ್ಲಿ ಹಲವಾರು ರೀತಿಯ ಲಾಭವನ್ನು ನೀಡುತ್ತದೆ. ಶಾಖ ನಿರೊಧಕ, ಶಬ್ದ ನಿರೊಧಕ, ಕಟ್ಟಡಕ್ಕೆ ಸಾಮರ್ಥ್ಯ ನೀಡವುದರಿಂದ , ಇದು ಈಗ ಆಧುನಿಕ ಕಟ್ಟಡ ನಿರ್ಮಾಣದ ಜನಪ್ರಿಯ ಆಯ್ಕೆಯಾಗಿದೆ. ಕಟ್ಟಡದ ವಿವಿಧ ಭಾಗಗಳಲ್ಲಿ ಟೊಳ್ಳು ಗೋಡೆಗಳನ್ನು ನಿರ್ಮಾಣ ಮಾಡಬಹುದು. ಉದಾಹರಣೆಗೆ ಛಾವಣಿ, ಪ್ಯಾರಾಫೆಟ್ ಗೋಡೆಗಳು, ಬಾಗಿಲುಗಳು ಅಥವಾ ಕಿಟಕಿಯ ಆರಂಭಗಳಲ್ಲಿ ಉಪಯೊಗಿಸುವುದರಿಂದ ಶಕ್ತಿಯ ಧಕ್ಷತೆ ಮತ್ತು ಉಷ್ಣತೆವನ್ನು ಕಾಪಾಡುತ್ತದೆ. ಟೊಳ್ಳು ಗೋಡೆಗಳನ್ನು ಕಟ್ಟಲು ಸರಿಯಾದ ಕಟ್ಟಡ ನಿರ್ಮಾಣ ವಸ್ತುಗಳು, ಇನ್ಸುಲೇಶನ್, ವೆಂಟಿಲೇಶನ್, ಫ್ಲ್ಯಾಶಿಂಗ್ ಮತ್ತು ಬೆಂಕಿಯಿಂದ ರಕ್ಷಣೆ ಇವುಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಟೊಳ್ಳು ಗೋಡೆಗಳನ್ನು ಬಳಸುವುದರಿಂದ ನಾವು ನೆಮ್ಮದಿಯಿಂದ ಬದುಕುವ ಹಾಗೂ ಪರಿಣಾಮಕಾರಿಯಾಗಿ ಕೆಲಸಮಾಡುವ ಜಾಗಗಳನ್ನು ಬಾಳಿಕೆ ಬರುವಂತೆ ಮತ್ತು ಕಡಿಮೆ ಖರ್ಚಿನಲ್ಲಿ ಕಟ್ಟಬಹುದು.