ವಿದ್ಯುತ್ ಕಾಮಗಾರಿಯ ಸಮಯದಲ್ಲಿ ಸುರಕ್ಷತೆಯ ವಿಷಯದಲ್ಲಿ ಬರಬಹುದಾದ ಅಪಾಯಗಳನ್ನು ತಪ್ಪಿಸಲು ಬಯಸುವಿರಾ?

25 ನೇ ಆಗಸ್ಟ್, 2020

ನಿಮ್ಮ ಮನೆಯ ನಿರ್ಮಾಣದ ಅಂತಿಮಘಟ್ಟಗಳಲ್ಲಿ, ವಿದ್ಯುತ್ ಕೆಲಸವೂ ಒಂದಾಗಿರುತ್ತದೆ. ಆದಾಗ್ಯೂ, ಈ ಹಂತದಲ್ಲಿ ನೀವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ, ಏಕೆಂದರೆ ಅಪಘಾತಗಳು ಸಂಭವಿಸಿದಲ್ಲಿ ಗಂಭೀರ ಸಮಸ್ಯೆಗಳು ಮತ್ತು ಸುರಕ್ಷತೆಯ ವಿಷಯದಲ್ಲಿ ಬರಬಹುದಾದ ಅಪಾಯಗಳಿಗೆ ಕಾರಣವಾಗಬಹುದು.

ಕೆಲವು ಪ್ರಮುಖ ವಿದ್ಯುತ್ ಸುರಕ್ಷತಾ ಸಲಹೆಗಳು ಇಲ್ಲಿವೆ.

  • ನಿಮ್ಮ ಮನೆಯನ್ನು ನಿರ್ಮಿಸಲು ಪ್ರಾರಂಭಿಸುವ ಮೊದಲೇ, ನೀವು ಎಲ್ಲಾ ವೈರಿಂಗ್ ಮತ್ತು ವಿದ್ಯುತ್ ಔಟ್‌ಲೆಟ್‌ಗಳ ಸ್ಥಳವನ್ನು ಯೋಜಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
  • ನಿಮ್ಮ ಎಲ್ಲಾ ವಿದ್ಯುತ್ ಕಾಮಗಾರಿಗಳಿಗಾಗಿ ಒಬ್ಬ ಪ್ರಮಾಣೀಕೃತ ವಿದ್ಯುತ್ ಗುತ್ತಿಗೆದಾರರನ್ನು ನೇಮಿಸುವುದು ಒಳ್ಳೆಯದು.
  • ನಿಮ್ಮ ಮನೆಯ ಅರ್ಥಿಂಗ್‌ ಅನ್ನು ಸರಿಯಾಗಿ ಮಾಡಲಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಎಂಜಿನಿಯರ್ ನಿಮಗೆ ಸಹಾಯವನ್ನು ಮಾಡುತ್ತಾರೆ.
  • ಗುಣಮಟ್ಟದ ವಿದ್ಯುತ್ ವಸ್ತುಗಳನ್ನು ಪಡೆಯುವ ಸಲುವಾಗಿ, ಅವುಗಳ ಮೇಲೆ ಐಎಸ್‌ಐ ಮಾರ್ಕ್‌ ಇದೆಯೇ ಎನ್ನುವುದನ್ನು ಖರೀದಿಗೆ ಮೊದಲು ಪರಿಶೀಲಿಸಿಕೊಳ್ಳಿ.
  • ಒಂದೇ ವಿದ್ಯುತ್ ಪಾಯಿಂಟ್‌ನಿಂದ ಹೆಚ್ಚಿನ ಸಂಪರ್ಕಗಳನ್ನು ನೀಡುವುದನ್ನು ತಪ್ಪಿಸಿ, ಹಾಗೂ ನಿಮ್ಮ ಎಲ್ಲಾ ವಿದ್ಯುತ್ ಉಪಕರಣಗಳಿಗೆ ಫ್ಯೂಸ್ ಅನ್ನು ಬಳಸಿ.
  • ಎಲ್ಲಾ ವಿದ್ಯುತ್ ಸಂಪರ್ಕಗಳು ಮತ್ತು ಪಾಯಿಂಟ್‌ಗಳನ್ನು ಯಾವುದೇ ನೀರಿನ ಮೂಲಗಳಿಂದ ದೂರವಿಡಿ.
  • ಕೊನೆಯದಾಗಿ, ಕೂಲಂಕುಷವಾಗಿ ಪರಿಶೀಲಿಸಿ ಮತ್ತು ಗಮನಕ್ಕೆ ಬಾರದ ಲೈವ್ ತಂತಿಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಯಾವುದೇ ತೊಂದರೆಗಳನ್ನು ತಪ್ಪಿಸುವ ಸಲುವಾಗಿ, ನಿಮ್ಮ ಮನೆಯ ವಿದ್ಯುತ್ ಕಾಮಗಾರಿಯನ್ನು ನಿರ್ವಹಿಸುವಾಗ ಈ ಸುರಕ್ಷತಾ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ