ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಮನೆ ಕನ್‌ಸ್ಟ್ರಕ್ಷನ್‌ನ ಹಂತಗಳು

ನಿಮ್ಮ ಮನೆಯನ್ನು ನಿರ್ಮಿಸುವುದು ನಿಮ್ಮ ಜೀವನದ ಅತಿ ದೊಡ್ಡ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ನಿಮ್ಮ ಮನೆಯು ನಿಮ್ಮ ಗುರುತಾಗಿರುತ್ತದೆ. ಅದಕ್ಕಾಗಿಯೇ ನಿಮ್ಮ ಮನೆಯ ನಿರ್ಮಾಣದ ಪ್ರತಿಯೊಂದು ಘಟ್ಟದಲ್ಲೂ ಏನು ಮಾಡಬೇಕೆಂದು ನಿಮಗೆ ತಿಳಿದಿರುವುದು ನಿರ್ಣಾಯಕವಾಗಿರುತ್ತದೆ. ನಿಮ್ಮ ಹೊಸ ಮನೆಯ ನಿರ್ಮಾಣವನ್ನು ಯೋಜಿಸಬೇಕಾಗುತ್ತದೆ ಮತ್ತು ಟ್ರ್ಯಾಕ್ ಮಾಡಬೇಕಾಗುತ್ತದೆ, ಹಾಗಾಗಿ ನಿಮ್ಮ ಮನೆಯನ್ನು ಕಟ್ಟುವ ಪ್ರಯಾಣದಲ್ಲಿನ ವಿವಿಧ ಘಟ್ಟಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ

logo

Step No.1

ನಿಮ್ಮ ಮನೆಯನ್ನು ನಿರ್ಮಿಸುವ ಮೊದಲ ಹೆಜ್ಜೆಯು ಬಲವಾದ ಮತ್ತು ಭದ್ರವಾದ ಅಡಿಪಾಯವನ್ನು ಹಾಕುವುದಾಗಿರುತ್ತದೆ. ಮೊದಲಿಗೆ, ನಿವೇಶನದಲ್ಲಿ ಬಂಡೆಗಳು ಮತ್ತು ಭಗ್ನಾವಶೇಷಗಳಿದ್ದಲ್ಲಿ, ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ. ಅಗೆತವನ್ನು ಪ್ರಾರಂಭಿಸುವ ಮೊದಲು, ನಿವೇಶನದಲ್ಲಿನ ಗುರುತುಗಳು ಯೋಜನೆಯ ಪ್ರಕಾರ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ನಿರ್ಮಾಣ ತಂಡವು ನಿವೇಶನವನ್ನು ಸಮತಟ್ಟಾಗಿಸಬೇಕು ಮತ್ತು ಅಡಿಪಾಯವನ್ನು ಹಾಕಲು ಗುಂಡಿಗಳು ಮತ್ತು ಕಂದಕಗಳನ್ನು ಅಗೆಯಬೇಕು.

ಕಾಂಕ್ರೀಟ್ ಅನ್ನು ಸುರಿದ ನಂತರ, ಅದು ಹೊಂದಿಕೆ ಆಗಲು ಬಿಡಬೇಕು ಮತ್ತು ನಂತರ ಸಂಪೂರ್ಣವಾಗಿ ಕ್ಯೂರ್ ಮಾಡಬೇಕಾಗುತ್ತದೆ. ಕ್ಯೂರ್ ಮಾಡಿದ ನಂತರ ಜಲನಿರೋಧಕ ಹಾಗೂ ಗೆದ್ದಲು-ನಿರೋಧಕ ಪ್ರಕ್ರಿಯೆಗಳನ್ನು ಮಾಡುವುದು ಉತ್ತಮ. ತೇವ ವಿರೋಧಿ ಪಾಯವನ್ನು ಹಾಕಲು ಅಲ್ಟ್ರಾಟೆಕ್ ILW ಅತ್ಯಂತ ಸೂಕ್ತವಾಗಿರುತ್ತದೆ. ನಂತರ, ನಿಮ್ಮ ತಂಡವು ಅಡಿಪಾಯದ ಗೋಡೆಗಳ ಸುತ್ತಲಿನ ಪ್ರದೇಶವನ್ನು ಮಣ್ಣಿನಿಂದ ತುಂಬಿಸಬೇಕಾಗುತ್ತದೆ.

Step No.2

ಅಡಿಪಾಯವು ಸಿದ್ಧವಾದ ನಂತರ, ಮುಂದಿನ ಹಂತವಾಗಿ ಮನೆಯ ಕಟ್ಟಡವನ್ನು ನಿರ್ಮಿಸುವುದಾಗಿರುತ್ತದೆ. ಇದರಲ್ಲಿ ಕಿಟಕಿಗಳು ಮತ್ತು ಬಾಗಿಲುಗಳ ಚೌಕಟ್ಟುಗಳ ಜೊತೆಗೆ ಸ್ತಂಭಗಳು, ಅಡ್ಡಕಟ್ಟುಗಳು, ಕಾಲಮ್‌ಗಳು, ಗೋಡೆಗಳು, ಛಾವಣಿಯ ಸ್ಲ್ಯಾಬ್‌ಗಳ ಸ್ಥಾಪನೆಗಳು ಸೇರಿರುತ್ತವೆ. ನೀವು ಹೊಸದಾಗಿ ನಿರ್ಮಿಸುವ ಮನೆಯು ಹೇಗೆ ಕಾಣುತ್ತದೆ ಎನ್ನುವುದನ್ನು ತೋರಿಸಲು ಕೋಣೆಗಳನ್ನು ಪ್ರತ್ಯೇಕಿಸಲಾಗುತ್ತದೆ. 1 ಮತ್ತು ಮನೆಯ ಸುತ್ತಲೂ ಇರುವ ಕಾಲಮ್‌ಗಳ ಟಿಪ್ಪಣಿ ಮಾಡಿಕೊಳ್ಳಿ, ಏಕೆಂದರೆ ಅವುಗಳು ರಚನೆಯಲ್ಲಿನ ಹೆಚ್ಚಿನ ಭಾರವನ್ನು ಹೊರುತ್ತವೆ. ಇದು ನಿಮ್ಮ ಮನೆಯ ಶಕ್ತಿ ಮತ್ತು ನಿರ್ಮಿತಿಯನ್ನು ನಿರ್ಧರಿಸುವುದರಿಂದ ನಿರ್ಮಾಣದ ಒಂದು ಪ್ರಮುಖ ಹಂತವಾಗಿದೆ. ಆದ್ದರಿಂದ ನಿಮ್ಮ ಹೊಸ ಮನೆಯ ನಿರ್ಮಾಣ ಕಾರ್ಯದಲ್ಲಿ ಮೇಲ್ವಿಚಾರಣೆಯು ಬಹಳ ಮುಖ್ಯ ಪಾತ್ರ ವಹಿಸುತ್ತದೆ.

Step No.3

ನಿಮ್ಮ ಮನೆಯ ಕಾಂಕ್ರೀಟ್ ನಿರ್ಮಿತಿಯು ಸಿದ್ಧವಾದ ನಂತರ, ನೀವು ಕೊಳಾಯಿ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಅಳವಡಿಸಲು ಪ್ರಾರಂಭಿಸಬಹುದು. ವಿದ್ಯುತ್ ಬೋರ್ಡ್‌ಗಳು ಹಾಗೂ ಸ್ವಿಚ್ಚುಗಳು ನಿಮಗೆ ಸಿಗುವ ಜಾಗಗಳಲ್ಲಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಲುಷಿತವನ್ನು ತಪ್ಪಿಸುವ ಸಲುವಾಗಿ ಕೊಳಚೆ ನೀರಿನ ಕೊಳವೆಗಳು ಯಾವಾಗಲೂ ಕುಡಿಯುವ ನೀರಿನ ಕೊಳವೆಗಳಿಗಿಂತ ಕೆಳ ಮಟ್ಟದಲ್ಲಿರಬೇಕು. ವಿದ್ಯುತ್ ವೈರ್‌ಗಳು ಗೋಡೆಯ ಒಳಕ್ಕೆ ಅಳವಡಿಸುವುದಕ್ಕಾಗಿ, ಪ್ಲ್ಯಾಸ್ಟರ್ ಮಾಡುವ ಮೊದಲು ಗೋಡೆಗಳ ಒಳಗೆ ತಂತಿಗಳ ಪೈಪ್‌ಗಳನ್ನು ಹೊಂದಿರುವ ಪಿವಿಸಿ ಕೊಳವೆಗಳನ್ನು ಅಳವಡಿಸಬೇಕು. ಇದು ನೋಡಲು ಚೆನ್ನಾಗಿ ಕಾಣುವುದು ಮಾತ್ರವಲ್ಲದೇ, ತೇವಾಂಶ, ತಾಪಮಾನ ಮತ್ತು ಇಲಿ-ಹೆಗ್ಗಣಗಳಿಂದ ತಂತಿಗಳನ್ನು ರಕ್ಷಿಸುತ್ತದೆ. ಈ ಕಾಮಗಾರಿಯನ್ನು ಮುಗಿಸಿದ ನಂತರವೇ, ಗೋಡೆಗಳಿಗೆ ಪ್ಲಾಸ್ಟರ್ ಮಾಡಬೇಕಾಗುತ್ತದೆ.

Step No.4

ಗೋಡೆಗಳನ್ನು ವಾಲ್ ಫಿನಿಷ್ ಉಪಯೋಗಿಸಿ ಪ್ಲ್ಯಾಸ್ಟರ್ ಮಾಡಿದ ನಂತರ, ಕಿಟಕಿಗಳು ಮತ್ತು ಬಾಗಿಲುಗಳನ್ನು ಅಳವಡಿಸಬೇಕಾಗುತ್ತದೆ. ಕಿಟಕಿಗಳು ಮತ್ತು ಬಾಗಿಲುಗಳು ಪ್ರತ್ಯೇಕತೆ ಮತ್ತು ಗಾಳಿ ಬೆಳಕನ್ನು ಒದಗಿಸುತ್ತದೆ, ಆದ್ದರಿಂದ ಅದಕ್ಕಾಗಿ ಬಳಸಬೇಕಾದ ಸೂಕ್ತವಾದ ಸಾಮಗ್ರಿಗಳ ಬಗ್ಗೆ ನಿಮ್ಮ ಗುತ್ತಿಗೆದಾರರೊಂದಿಗೆ ಮೊದಲೇ ಮಾತನಾಡಿಕೊಳ್ಳಿ.

Step No.5

ಅಂತಿಮವಾಗಿ, ನಿಮ್ಮ ನಿರ್ಮಾಣ ತಂಡವು ಟೈಲ್‌ಗಳನ್ನು ಹಾಕಬೇಕಾಗುತ್ತದೆ, ವಿದ್ಯುತ್ ಬೋರ್ಡ್‌ಗಳು, ಕ್ಯಾಬಿನೆಟ್‌ಗಳು, ಕಿಚನ್ ಕೌಂಟರ್‌ಟಾಪ್‌ಗಳು ಇತ್ಯಾದಿಗಳನ್ನು ಅಳವಡಿಸಬೇಕಾಗುತ್ತದೆ. ಎಲ್ಲಾ ಭಾಗಗಳನ್ನು ಅಳವಡಿಸಿದ ನಂತರ, ನಿಮ್ಮ ಮನೆಯನ್ನು ವಾಲ್‌ಪೇಪರ್‌ಗಳಿಂದ ಪ್ಲ್ಯಾಸ್ಟರ್ ಮಾಡಬಹುದು ಅಥವಾ ಪೈಂಟಿಂಗ್ ಮಾಡಬಹುದು. ನಿಮ್ಮ ಮನೆಯ ಅಂತಿಮ ಸಜ್ಜುಗೊಳಿಕೆಯ ಬಗ್ಗೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ.

ಲೇಖನವನ್ನು ಹಂಚಿಕೊಳ್ಳಿ :


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....