ಟಕ್ ಪಾಯಿಂಟಿಂಗ್‌ನಲ್ಲಿ ಗಾರೆಯನ್ನು ಸಂದಿಯಲ್ಲಿ ತುಂಬಿಸಿ ಮಧ್ಯದಲ್ಲಿ 5 mm ಅಗಲ ಮತ್ತು 3 mm ಆಳದ ಗೆರೆಯನ್ನು ಮಾಡಲಾಗುತ್ತದೆ. ನಂತರ ಆ ಗೆರೆಯಲ್ಲಿ ಬಿಳಿ ಸಿಮೆಂಟ್ ಪುಟ್ಟಿಯನ್ನು ತುಂಬಿ ಸುಮಾರು 3 mm ನಷ್ಟು ಹೊರಬರುವಂತೆ ಮಾಡುವುದೇ ಇದರ ವಿಶೇಷ.
ಸಲಹೆ: ಇಲ್ಲಿ ಅಚ್ಚುಕಟ್ಟುತನವೇ ಮುಖ್ಯ; ಆ ಸಣ್ಣ “ಟಕ್” ಗೆರೆಗಳು ನೇರವಾಗಿ ಮತ್ತು ಸ್ವಚ್ಛವಾಗಿರಬೇಕು.
7. ವಿ ಪಾಯಿಂಟಿಂಗ್
ಇದು ಗಾರೆಯನ್ನು ಸಂದಿಯಲ್ಲಿ ತುಂಬುವ ಪ್ರಕ್ರಿಯೆಯಿಂದ ಶುರುವಾಗುತ್ತದೆ. ನಂತರ ಸಂದಿಯ ಮಧ್ಯದಲ್ಲಿ ವಿ ಆಕಾರದ ಗೆರೆಯನ್ನು ಮಾಡಲಾಗುತ್ತದೆ. ಇದಕ್ಕೆ ವಿ ಆಕಾರದ ವಿಶೇಷ ಟೂಲ್ ಬಳಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ.
8. ವೆದರ್ಡ್ ಪಾಯಿಂಟಿಂಗ್
ವೆದರ್ಡ್ ಪಾಯಿಂಟಿಂಗ್‌ನಲ್ಲಿ ಗಾರೆ ಹಸಿಯಾಗಿರುವಾಗಲೇ ಅಡ್ಡ ಸಂದಿಗಳ ಮೇಲ್ಭಾಗವನ್ನು ಪಾಯಿಂಟಿಂಗ್ ಟೂಲ್‌ನಿಂದ 3-6 mm ನಷ್ಟು ಒಳಕ್ಕೆ ಒತ್ತಲಾಗುತ್ತದೆ. ಇದು ಮೇಲಿನಿಂದ ಕೆಳಕ್ಕೆ ಇಳಿಜಾರಿನಂತೆ ಕಾಣಿಸುತ್ತದೆ ಮತ್ತು ಅಂಚುಗಳು ಸವೆದು ಹೋದಂತೆ ಅಂದವಾಗಿ ಕಾಣುತ್ತವೆ.
ಕಟ್ಟಡ ನಿರ್ಮಾಣದಲ್ಲಿ ಪಾಯಿಂಟಿಂಗ್‌ನ ಪ್ರಯೋಜನಗಳು
ಕಟ್ಟಡ ನಿರ್ಮಾಣದಲ್ಲಿ ಬೇರೆ ಬೇರೆ ವಿಧದ ಪಾಯಿಂಟಿಂಗ್‌ನ ಮುಖ್ಯ ಲಾಭಗಳು ಇಲ್ಲಿವೆ:
1. ಕಟ್ಟಡದ ರಚನೆಯನ್ನು ಗಟ್ಟಿಗೊಳಿಸಿ, ಮನೆಗೆ ಬಲ ನೀಡುತ್ತದೆ.
2. ಹೊರಗಿನ ಗೋಡೆಗಳನ್ನು ತೇವಾಂಶ ಮತ್ತು ಹವಾಮಾನದಿಂದ ರಕ್ಷಿಸುತ್ತದೆ.
3. ಕಟ್ಟಡಕ್ಕೆ ಹೊಸ ಕಳೆಯನ್ನು ನೀಡಿ ಅಂದವನ್ನು ಹೆಚ್ಚಿಸುತ್ತದೆ.
4. ನಿಮ್ಮ ಆಸ್ತಿಯ ಮೌಲ್ಯವನ್ನು ಹೆಚ್ಚಿಸಿ ಬೇಡಿಕೆ ತರುತ್ತದೆ.
5. ಪದೇ ಪದೇ ರಿಪೇರಿ ಮಾಡುವ ಅಗತ್ಯವಿರುವುದಿಲ್ಲ, ಇದರಿಂದ ಸಮಯ ಮತ್ತು ಹಣ ಎರಡೂ ಉಳಿಯುತ್ತದೆ.
ಕಟ್ಟಡ ನಿರ್ಮಾಣದಲ್ಲಿ ಪಾಯಿಂಟಿಂಗ್ ಮಾಡುವ ಉದ್ದೇಶ
ಪಾಯಿಂಟಿಂಗ್ ಮಾಡುವ ಮುಖ್ಯ ಉದ್ದೇಶಗಳು ಇಲ್ಲಿವೆ:
1. ರಕ್ಷಣೆ
ಪಾಯಿಂಟಿಂಗ್ ವಾತಾವರಣದ ಪರಿಣಾಮಗಳಿಂದ ಗಾರೆಯ ಸಂದಿಗಳು ಹಾಳಾಗದಂತೆ ಕಾಪಾಡುತ್ತದೆ.
2. ಅಂದ ಹೆಚ್ಚಿಸುವುದು
ಪಾಯಿಂಟಿಂಗ್ ಗೋಡೆಯ ವಿನ್ಯಾಸ, ದಪ್ಪ, ಬಣ್ಣಗಳು ಮತ್ತು ಸಂದಿಗಳ ರಚನೆಯನ್ನು ಎದ್ದು ಕಾಣುವಂತೆ ಮಾಡುವ ಮೂಲಕ ಗೋಡೆಗೆ ಮೆರುಗು ನೀಡುತ್ತದೆ.
3. ಹವಾಮಾನದಿಂದ ರಕ್ಷಣೆ
ಪಾಯಿಂಟಿಂಗ್ ಸಂದಿಗಳನ್ನ ಮುಚ್ಚುವ ಮೂಲಕ ಮಳೆ ನೀರು ಅಥವಾ ತೇವಾಂಶ ಕಟ್ಟಡದ ಒಳಗೆ ಹೋಗದಂತೆ ತಡೆಯುತ್ತದೆ.
4. ಗಟ್ಟಿಗೊಳಿಸುವುದು
ಗಾರೆಯ ಸಂದಿಗಳನ್ನು ತುಂಬಿ ಗಟ್ಟಿಗೊಳಿಸುವುದರಿಂದ, ಇದು ಕಟ್ಟಡಕ್ಕೆ ಹೆಚ್ಚಿನ ಶಕ್ತಿ ಮತ್ತು ಸ್ಥಿರತೆಯನ್ನು ನೀಡುತ್ತದೆ.