ಹಂತ1: ಅರ್ಜಿ ಫಾರಂಗಳನ್ನು ಪಡೆಯುವುದು
ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಮತ್ತು ಅನುಮತಿ ಪಡೆಯುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.ಅವುಗಳನ್ನು ಸ್ಥಳೀಯ ನಗರ ಆಡಳಿತ ಸಂಸ್ಥೆಗಳಿಂದ ಅಥವಾ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ಪಡೆದುಕೊಳ್ಳಬೇಕು. ನಿಮ್ಮ ಸ್ಥಳಕ್ಕೆ ಅನುಗುಣವಾಗಿ ಅರ್ಜಿ ಭರ್ತಿ ಮಾಡಬೇಕು. ಪರಿಸರ ಸಂಬಂಧಿ ಅನುಮತಿ, ಸುರಕ್ಷಾ ತಪಾಸಣೆ, ಕಟ್ಟಡ ನಿರ್ಮಾಣ ಕಾಮಗಾರಿಗೆ ಅನಮತಿಗಾಗಿ ಅರ್ಜಿ ಭರ್ತಿ ಮಾಡಬೇಕು. ಶೀಘ್ರವಾಗಿ ಅನುಮತಿ ಪಡೆಯುವ ನಿಟ್ಟಿನಲ್ಲಿ ಎಲ್ಲ ರೀತಿಯ ದಾಖಲೆಗಳನ್ನು ಸಲ್ಲಿಸಿ ವಿಳಂಬ ತಪ್ಪಿಸಬೇಕು.
ಹಂತ 2: ಅರ್ಜಿಗಳನ್ನು ಭರ್ತಿ ಮಾಡುವುದು ಮತ್ತು ದಾಖಲೆಗಳ ಸಲ್ಲಿಕೆ
ಅರ್ಜಿಗಳನ್ನು ಪಡೆದ ಬಳಿಕ ಅವುಗಳನ್ನು ಆಮೂಲಾಗ್ರವಾಗಿ ಓದಿ ಭರ್ತಿ ಮಾಡಬೇಕು. ಅದರಲ್ಲಿ ಕೇಳಿರುವ ಯೋಜನೆಯ ವಿವರಗಳನ್ನು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಅಪೂರ್ಣ ಅಥವಾ ಮಾಹಿತಿ ನೀಡದೇ ಇದ್ದಲ್ಲಿ ಪರವಾನಗಿ ಮತ್ತು ಅನುಮತಿ ನೀಡುಲು ಸಂಬಂಧಿತ ಅಧಿಕಾರಿ ವಿಳಂಬ ಮಾಡಬಹುದು. ಭರ್ತಿ ಮಾಡಿದ ಅರ್ಜಿಗಳ ಜತೆಗೆ ಮನೆಯ ನೀಲನಕಾಶೆ, ಜಮೀನು ಮಾಲೀಕತ್ವದ ದಾಖಲೆಗಳು, ಪರಿಸರ ಸಂಬಂಧಿ ಅನುಮತಿ ಅಥವಾ ಗುತ್ತಿಗಾರನಿಗೆ ಆ ಕೆಲಸ ನಿರ್ವಹಿಸಲು ಇರುವ ಪರವಾನಗಿಯ ಪ್ರತಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೇಳೆ ಎಲ್ಲ ದಾಖಲೆಗಳನ್ನೂ ನೀಡುತ್ತಿದ್ದೀರಿ ಎಂಬುದನ್ನು ದೃಢೀಕರಿಸಿ.
ಹಂತ 3: ಶುಲ್ಕ ಪಾವತಿ
ಭರ್ತಿ ಮಾಡಿದ ಅರ್ಜಿಯ ಜತೆಗೆ ದಾಖಲೆಗಳನ್ನೂ ಸಲ್ಲಿಸಿದ ಬಳಿಕ ನೀವು ಅನುಮತಿಗಾಗಿ ಕೆಲವೊಂದು ಶುಲ್ಕ ಪಾವತಿ ಮಾಡಬೇಕಾಗಿರುತ್ತದೆ. ಮನೆ ನಿರ್ಮಾಣದ ಯೋಜನೆಗೆ ಅನುಗುಣವಾಗಿ ನೀಡಬೇಕಾದ ಶುಲ್ಕದಲ್ಲಿಯೂ ವ್ಯತ್ಯಾಸವಾಗುತ್ತದೆ. ಈ ಶುಲ್ಕದ ಪಾವತಿಯ ಅಂಶವನ್ನೂ ನಿಮ್ಮ ಬಜೆಟ್ ನಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ಮನೆ ನಿರ್ಮಾಣದ ಸ್ಥಳ, ಉದ್ದೇಶಿತ ಮನೆಯ ವಿನ್ಯಾಸ ಮತ್ತು ನೀವು ಸಲ್ಲಿಸಿರುವ ಯೋಜನೆಯ ಆಧಾರದಲ್ಲಿ ಪರವಾನಗಿ ನೀಡಲಾಗುತ್ತದೆ. ಹೀಗಾಗಿ, ಅದಕ್ಕೆ ಸಂಬಂಧಿಸಿದ ಶುಲ್ಕದಲ್ಲೂ ವ್ಯತ್ಯಾಸ ಇರುತ್ತದೆ.
ನಿಮ್ಮ ಮನೆಯ ನಿರ್ಮಾಣದ ಶೈಲಿಯ ಅನ್ವಯ ಪರವಾನಗಿಯ ವಿಧದಲ್ಲಿಯೂ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ವಲಯದ ಪರವಾನಗಿ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ಸುರಕ್ಷತಾ ತಪಾಸಣೆ ಮತ್ತು ಪರಿಸರ ಸಂಬಂಧಿ ನಿಯಮಗಳ ಪಾಲನೆ ಬಗ್ಗೆ ಪರವಾನಗಿ ಸೇರಿದಂತೆ ಹಲವು ವಿಧಗಳಿರುತ್ತವೆ. ಪ್ರತಿಯೊಂದು ವಿಧಕ್ಕೂ ಪ್ರತ್ಯೇಕ ಶುಲ್ಕವಿದೆ. ಉದಾಹರಣೆಗೆ ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಹೋಲಿಕೆ ಮಾಡಿದರೆ ಗೃಹ ನಿರ್ಮಾಣಕ್ಕೆ ಸೀಮಿತ ಪರವಾನಗಿ ಬೇಕಾಗುತ್ತದೆ. ಆದರೆ, ಪ್ರತಿಯೊಂದಕ್ಕೂ ಬೇರೆ ಬೇರೆ ಶುಲ್ಕಗಳಿವೆ. ಪ್ರತಿಯೊಂದು ಪರವಾನಗಿ ವಿಧವನ್ನು ತಿಳಿದುಕೊಂಡರೆ ನಿಮ್ಮ ಮನೆ ನಿರ್ಮಾಣದ ಬಜೆಟ್ ಅನ್ನೂ ನಿರ್ಧರಿಸಬಹುದು.
ಹಂತ 4: ಜಮೀನಿಗೆ ಭೇಟಿ ಮತ್ತು ಸುರಕ್ಷಾ ತಪಾಸಣೆ
"ನೀವು ಅರ್ಜಿ ಸಲ್ಲಿಸಿದ ನಂತರ ಮತ್ತು ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ, ನಿಮ್ಮ ಅರ್ಜಿಯನ್ನು ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ. ನಿಮ್ಮ ಉದ್ದೇಶಿತ ಕಟ್ಟಡವು ಎಲ್ಲಾ ನಿಯಮಗಳು ಮತ್ತು ಕಾನೂನುಗಳಿಗೆ ಅನ್ವಯವಾಗಿರಲಿದೆಯೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬಹುದು. ತಪಾಸಣೆ ಮಾಡುವವರು ಮನೆ ನಿರ್ಮಾಣ ಮಾಡಲಿರುವ ಜಮೀನು, ನಿರ್ಮಾಣದಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮ, ಉದ್ದೇಶಿತ ಯೋಜನೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದ್ದೆಯೇ ಎಂಬುದನ್ನು ಅವರು ಪರಿಶೀಲಿಸುತ್ತಾರೆ. ಹೀಗಾಗಿ, ಈ ಎಲ್ಲ ನಿಯಮಗಳ ಪಾಲನೆ ಮಾಡಿ, ಅನುಮತಿ ಪಡೆಯಬೇಕಾದದ್ದು ನಿಮ್ಮ ಕರ್ತವ್ಯ. "
ಹಂತ 5: ಮನೆ ನಿರ್ಮಾಣಕ್ಕೆ ಅಂದಾಜು ಸಮಯ
ಜಮೀನಿಗೆ ಅಧಿಕಾರಿಗಳು ಬಂದು ತಪಾಸಣೆ ನಡೆಸಿದ ಬಳಿಕ ನೀವು ಸಲ್ಲಿಸಿದ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ. ನಂತರ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡುತ್ತಾರೆ. ನೀವು ಸಲ್ಲಿಸಿದ ಯೋಜನೆಯ ವಿವರಗಳ ಆಧಾರದಲ್ಲಿ ಮತ್ತು ಪ್ರಾಧಿಕಾರ ಹೊಂದಿರುವ ಕೆಲಸದ ಒತ್ತಡದ ಆಧಾರದಲ್ಲಿ ಪರವಾನಗಿ ನೀಡುವ ಪ್ರಕ್ರಿಯೆಗೆ ಕೆಲವೊಂದು ವಾರಗಳು ಬೇಕಾಗಬಹುದು. ಅದಕ್ಕಾಗಿ ಅಂದಾಜು ಗಡುವು ನೀಡಲಾಗುತ್ತದೆ. ಹೀಗಾಗಿ, ಆ ಅವಧಿಯ ವರೆಗೆ ಕಾಯಬೇಕು ಮತ್ತು ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕ ಇರಿಸಿಕೊಳ್ಳಬೇಕು. ಈ ಮೂಲಕ ವಿನಾ ವಿಳಂಬ ತಪ್ಪಿಸಲು ಸಹಾಯಕವಾಗುತ್ತದೆ.
ಪರವಾನಗಿ ಮತ್ತು ಅನುಮತಿ ಪಡೆಯಲು ಅಂದಾಜು ವೆಚ್ಚ: ಅದರ ಮಹತ್ವ ಏನು?
ಮನೆ ನಿರ್ಮಾಣ ಕೆಲಸಕ್ಕೆ ಪರವಾನಗಿ ಮತ್ತು ಅನುಮತಿ ಪಡೆಯುವುದು ನಿಮ್ಮ ಒಟ್ಟಾರೆ ನಿರ್ಮಾಣ ವೆಚ್ಚದ ಅವಿಭಾಜ್ಯ ಅಂಗವೇ ಆಗುತ್ತದೆ. ಮನೆ ನಿರ್ಮಾಣದ ಒಟ್ಟು ಅಂದಾಜು ವೆಚ್ಚವೇ ನಿಮ್ಮ ಪ್ರಧಾನ ಚಿಂತನೆಯಾಗಿದ್ದರೂ, ಪರವಾನಗಿ ಮತ್ತು ಅನುಮತಿ ಪಡೆಯುವುದಕ್ಕಾಗಿ ಮಾಡುವ ಖರ್ಚು ಕೂಡ ನಿಮ್ಮ ಮನೆ ನಿರ್ಮಾಣದ ಒಟ್ಟು ವೆಚ್ಚದ ಮೇಲೆ ಪ್ರಭಾವ ಬೀರಬಹುದು. ವಿವಿಧ ಅಂಶಗಳ ಆಧಾರದಲ್ಲಿ ಈ ಅಂದಾಜು ವೆಚ್ಚ ನಿರ್ಧಾರವಾಗಬಹುದು. ಮನೆಯ ವಿನ್ಯಾಸ, ಜಮೀನು ಇರುವ ಸ್ಥಳ, ಅದಕ್ಕೆ ಬೇಕಾಗುವ ವಿಧದ ಪರವಾನಗಿಯ ಆಧಾರದಲ್ಲಿ ಶುಲ್ಕವೂ ತೀರ್ಮಾನವಾಗುತ್ತದೆ.