ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಬಾತ್‌ರೂಂನ ಸಾಮಾಗ್ರಿಗಳನ್ನು ಆಯ್ಕೆ ಮಾಡಲು ಸಲಹೆಗಳು

Share:


ಈ ಅಂಶಗಳನ್ನು ಗಮನಿಸಿ

 

  • ನಿಮ್ಮ ಬಾತ್‌ರೂಂಗೆ ದೀರ್ಘಕಾಲ ಬಾಳಿಕೆ ಬರುವ, ನೀರು ತಡೆಯುವ ಮತ್ತು ಸುಲಭವಾಗಿ ನಿರ್ವಹಿಸಬಹುದಾದ ಸಾಮಗ್ರಿಗಳನ್ನು ಆಯ್ಕೆಮಾಡಿ.

     

  • ಸುಲಭವಾಗಿ ಬಳಸಬಹುದಾದ ಬಾತ್‌ರೂಂ ಉಪಕರಣಗಳನ್ನು ಆರಿಸಿ.

     

  • ನೆಲಹಾಸಿಗಾಗಿ ನೀರು ತಡೆಯುವ ಸಾಮಗ್ರಿಗಳಾದ ಪೊರ್ಸಿಲೈನ್, ವಿನೈಲ್ ಅಥವಾ ನೈಸರ್ಗಿಕ ಕಲ್ಲುಗಳನ್ನು ಆಯ್ಕೆಮಾಡಿ.

     

  • ಗೋಡೆಗಳಿಗೆ ಟೈಲ್ಸ್, ಅಕ್ರಿಲಿಕ್ ಪ್ಯಾನೆಲ್‌ಗಳು ಅಥವಾ ತೇವಾಂಶ ತಡೆಯುವ ಬಣ್ಣಗಳಂತಹ ಸಾಮಗ್ರಿಗಳನ್ನು ಆರಿಸಿ.
     

  • ಶೈಲಿ ಮತ್ತು ಪ್ರಾಯೋಗಿಕತೆಗಾಗಿ ಕ್ವಾರ್ಟ್ಜ್, ಗ್ರಾನೈಟ್ ಅಥವಾ ಲ್ಯಾಮಿನೇಟ್‌ನಂತಹ ಬಾತ್‌ರೂಂ ಕೌಂಟರ್‌ಟಾಪ್ ಸಾಮಗ್ರಿಗಳನ್ನು ಪರಿಗಣಿಸಿ.

     

  • ಬಾತ್‌ರೂಂ ಮೇಲ್ಛಾವಣಿಗಳಿಗೆ ಪಿವಿಸಿ ಪ್ಯಾನೆಲ್‌ಗಳು ಅಥವಾ ಸಿಮೆಂಟ್ ಬೋರ್ಡ್‌ಗಳಂತಹ ತೇವಾಂಶ ತಡೆಯುವ ಸಾಮಗ್ರಿಗಳನ್ನು ಬಳಸಿ.

     

  • ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸಿ, ಇದು ದೀರ್ಘಕಾಲದ ಬಾಳಿಕೆ ಮತ್ತು ವಿದ್ಯುತ್ ಉಳಿತಾಯಕ್ಕೆ ಸಹಕಾರಿ.

     

  • ಪ್ರತಿಯೊಂದು ಸಾಮಗ್ರಿಯೂ ಬಾತ್‌ರೂಂನ ಕಾರ್ಯಕ್ಷಮತೆ, ಬಾಳಿಕೆ ಮತ್ತು ಒಟ್ಟಾರೆ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ.



ನಿಮ್ಮ ಬಾತ್ರೂಮನ್ನು ಉನ್ನತೀಕರಿಸುವ ಮತ್ತು ನಿಮ್ಮ ಎಲ್ಲಾ ಬಾತ್‌ರೂಂನ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುವ ಅತ್ಯುತ್ತಮ ಬಾತ್‌ರೂಂನ ಪರಿಕರಗಳು ಮತ್ತು ಸಾಮಗ್ರಿಗಳನ್ನು ಆಯ್ಕೆ ಮಾಡುವ ಕುರಿತು ನಮ್ಮ ತಜ್ಞರ ಸಲಹೆಗಳೊಂದಿಗೆ ನಿಮ್ಮ ಬಾತ್ರೂಮನ್ನು ಸೊಗಸಾದ, ಕ್ರಿಯಾತ್ಮಕ ಸ್ವರ್ಗವಾಗಿ ಪರಿವರ್ತಿಸಿ.


ಬಾತ್‌ರೂಂನ ನೆಲದ ಸಾಮಾಗ್ರಿಗಳನ್ನು ಆರಿಸುವಾಗ ಗಮನಿಸಬೇಕಾದ ಮುಖ್ಯ ವಿಷಯಗಳು

ಬಾತ್‌ರೂಂನ ನೆಲಹಾಸುಗಳಿಗೆ ಉತ್ತಮವಾದ ಸಾಮಾಗ್ರಿಗಳನ್ನು ಆಯ್ಕೆಮಾಡುವಾಗ ಬಾಳಿಕೆ ಮತ್ತು ನೀರಿನ ಪ್ರತಿರೋಧವು ಪ್ರಮುಖ ಅಂಶಗಳಾಗಿವೆ. ಏಕೆಂದರೆ ಬಾತ್‌ರೂಂಗಳು ಹೆಚ್ಚಿನ ತೇವಾಂಶದ ವಾತಾವರಣವನ್ನು ಹೊಂದಿವೆ, ಆದ್ದರಿಂದ ಹಾನಿಯಾಗದೆ ತೇವಾಂಶವನ್ನು ತಡೆದುಕೊಳ್ಳುವ ಸಾಮಾನು ಬಳಸಬೇಕು.

 

  • ಪಾರ್ಸಿಲೇನ್ ಅಥವಾ ಸೆರಾಮಿಕ್ ಟೈಲ್ಸ್: ಇವು ನೀರಿನ ಪ್ರತಿರೋಧ ಮತ್ತು ವಿನ್ಯಾಸದಲ್ಲಿನ ಬಹುಮುಖತೆಯಿಂದಾಗಿ ಬಾತ್‌ರೂಂ ನೆಲಹಾಸು ಸಾಮಾನುಗಳಲ್ಲಿ ಅತ್ಯಂತ ಜನಪ್ರಿಯ ಆಯ್ಕೆಗಳಾಗಿವೆ. ಅವು ಬಾಳಿಕೆ ಬರುವವು ಮತ್ತು ವಿವಿಧ ಬಣ್ಣಗಳು ಮತ್ತು ಮಾದರಿಗಳಲ್ಲಿ ಬರುತ್ತವೆ, ಕಸ್ಟಮೈಸ್ ಮಾಡಿದ ನೋಟವನ್ನು ರಚಿಸಲು ಸೂಕ್ತವಾಗಿವೆ.

     

  • ವಿನೈಲ್ ಫ್ಲೋರಿಂಗ್: ಮತ್ತೊಂದು ಹೆಚ್ಚು ಜಲನಿರೋಧಕ ಆಯ್ಕೆಯಾದ ವಿನೈಲ್ ಕಾಲಿಗೆ ಮೃದುವಾಗಿರುತ್ತದೆ ಮತ್ತು ಟೈಲ್‌ಗಳಿಗಿಂತ ಕಡಿಮೆ ತಂಪಾಗಿರುತ್ತದೆ, ಇದು ಹೆಚ್ಚು ಆರಾಮದಾಯಕ ಆಯ್ಕೆಯಾಗಿದೆ. ಜೊತೆಗೆ ಕಡಿಮೆ ವೆಚ್ಚದ ಮತ್ತು ಸುಲಭವಾಗಿ ಅಳವಡಿಸಬಹುದಾಗಿದೆ.

     

  • ನೈಸರ್ಗಿಕ ಕಲ್ಲು: ಐಷಾರಾಮಿ ಮತ್ತು ಶಾಶ್ವತವಾದ, ಮಾರ್ಬಲ್ ಅಥವಾ ಗ್ರಾನೈಟ್‌ನಂತಹ ಕಲ್ಲಿನ ನೆಲಹಾಸು ನಿಮ್ಮ ಬಾತ್‌ರೂಂಗೆ ಸೊಬಗನ್ನು ನೀಡುತ್ತದೆ. ಆದರೆ, ಬಾತ್‌ರೂಂನ ನೆಲದ ವಸ್ತುಗಳ ಆಯ್ಕೆಯು ನೀರಿನ ಪ್ರತಿರೋಧವನ್ನು ಖಚಿತಪಡಿಸಿಕೊಳ್ಳಲು ಸೀಲ್ ಮಾಡುವುದನ್ನು ಒಳಗೊಂಡಿರುತ್ತದೆ, ಇದು ಹೆಚ್ಚು ನಿರ್ವಹಣೆ ಅಗತ್ಯವಿರುವ ಆಯ್ಕೆಯಾಗಿದೆ.

     

  • ಎಂಜಿನಿಯರ್ಡ್ ವುಡ್: ಇದು ಗಟ್ಟಿಮರದ ಸೌಂದರ್ಯದ ಆಕರ್ಷಣೆಯನ್ನು ಉತ್ತಮ ತೇವಾಂಶ ನಿರೋಧಕತೆಯೊಂದಿಗೆ ಸಂಯೋಜಿಸುತ್ತದೆ, ಇದು ಬಾತ್‌ರೂಂನ ಬಳಕೆಗೆ ಸೂಕ್ತವಾಗಿದೆ. ಆದರೆ, ಇದು ಟೈಲ್ ಅಥವಾ ವಿನೈಲ್ ಗಿಂತ ತೇವಾಂಶಕ್ಕೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ.



ಬಾಳಿಕೆ ಬರುವ ಮತ್ತು ಜಲನಿರೋಧಕ ಬಾತ್‌ರೂಂ ಗೋಡೆಯ ಸಾಮಾನುಗಳನ್ನು ಹೇಗೆ ಆರಿಸುವುದು

ಬಾತ್‌ರೂಂ ಗೋಡೆಯ ಸಾಮಾನು ಆಯ್ಕೆಮಾಡುವಾಗ, ಜಲಪ್ರತಿರೋಧವು ಅತ್ಯಂತ ಮಹತ್ವದ್ದಾಗಿದೆ. ತೇವಾಂಶದ ಹಾನಿಯ ವಿರುದ್ಧ ದೀರ್ಘಕಾಲೀನ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ವಸ್ತುಗಳನ್ನು ಆಯ್ಕೆ ಮಾಡುವಂತೆಯೇ ಬಾತ್‌ರೂಂ ಗೆ ಸರಿಯಾದ ಜಲಪ್ರತಿರೋಧವು ಮುಖ್ಯವಾಗಿದೆ. ಕೆಲವು ಅತ್ಯುತ್ತಮ ಆಯ್ಕೆಗಳು ಇಲ್ಲಿವೆ:

 

  • ಟೈಲ್ಸ್: ಬಾತ್‌ರೂಂ ಗೋಡೆಯ ವಸ್ತುಗಳಿಗೆ ಪಾರ್ಸಿಲೇನ್ ಅಥವಾ ಸೆರಾಮಿಕ್ ಟೈಲ್ಸ್ ಅತ್ಯುತ್ತಮ ಆಯ್ಕೆಗಳಾಗಿವೆ. ಅವು ಜಲನಿರೋಧಕ, ಸ್ವಚ್ಛಗೊಳಿಸಲು ಸುಲಭ ಮತ್ತು ವಿವಿಧ ವಿನ್ಯಾಸಗಳಲ್ಲಿ ಬರುತ್ತವೆ. ಸಬ್‌ವೇ ಟೈಲ್ಸ್‌ಗಳಿಂದ ಹಿಡಿದು ದೊಡ್ಡ-ಸ್ವರೂಪದ ಶೈಲಿಗಳವರೆಗೆ, ಟೈಲ್ಸ್ ನಿಮ್ಮ ಬಾತ್‌ರೂಂನ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸಬಹುದು ಮತ್ತು ಗೋಡೆಗಳನ್ನು ನೀರಿನ ಹಾನಿಯಿಂದ ರಕ್ಷಿಸಬಹುದು.

     

  • ಅಕ್ರಿಲಿಕ್ ಪ್ಯಾನೆಲ್‌ಗಳು: ಇವು ನಯವಾದ, ಆಧುನಿಕ ನೋಟವನ್ನು ನೀಡುತ್ತವೆ ಮತ್ತು ಅಳವಡಿಸಲು ಮತ್ತು ನಿರ್ವಹಣೆ ಸುಲಭ. ಅವು ಜಲನಿರೋಧಕವಾಗಿದ್ದು ಅನೇಕ ಬಣ್ಣಗಳು ಮತ್ತು ಮಾದರಿಗಳಲ್ಲಿ ಲಭ್ಯವಿದೆ, ಇದು ಬಾತ್‌ರೂಂ ನವೀಕರಣಕ್ಕೆ ಉತ್ತಮ ಆಯ್ಕೆ.

     

  • ಅಕ್ರಿಲಿಕ್ ಪ್ಯಾನೆಲ್‌ಗಳು: ಇವು ನಯವಾದ, ಆಧುನಿಕ ನೋಟವನ್ನು ನೀಡುತ್ತವೆ ಮತ್ತು ಅಳವಡಿಸಲು ಮತ್ತು ನಿರ್ವಹಣೆ ಸುಲಭ. ಅವು ಜಲನಿರೋಧಕವಾಗಿದ್ದು ಅನೇಕ ಬಣ್ಣಗಳು ಮತ್ತು ಮಾದರಿಗಳಲ್ಲಿ ಲಭ್ಯವಿದೆ, ಇದು ಬಾತ್‌ರೂಂ ನವೀಕರಣಕ್ಕೆ ಉತ್ತಮ ಆಯ್ಕೆ.

     

  • ಗಾಜು: ಗಾಜಿನ ಫಲಕಗಳು ಅಥವಾ ಟೈಲ್‌ಗಳು ಸಂಪೂರ್ಣವಾಗಿ ಜಲನಿರೋಧಕವಾಗಿದ್ದರೂ ಸೊಗಸಾದ ಸ್ಪರ್ಶವನ್ನು ನೀಡಬಹುದು. ಆದರೆ, ಅವು ದುಬಾರಿಯಾಗಬಹುದು ಮತ್ತು ನೀರಿನ ಕಲೆಗಳು ಮತ್ತು ಸಾಬೂನಿನ ನೊರೆಯಿಂದ ಅವುಗಳನ್ನು ಮಕ್ತವಾಗಿಸಲು ಆಗಾಗ್ಗೆ ಸ್ವಚ್ಛಗೊಳಿಸುವ ಅಗತ್ಯವಿರುತ್ತದೆ.

     

     

ನಿಮ್ಮ ಬಾತ್‌ರೂಂಗೆ ಉತ್ತಮವಾದ ಕೌಂಟರ್‌ಟಾಪ್ ಸಾಮಾನುಗಳನ್ನು ಆಯ್ಕೆ ಮಾಡುವುದು

ಬಾತ್‌ರೂಂ ಕೌಂಟರ್‌ಟಾಪ್ ಸಾಮಾನುಗಳು ಶೈಲಿ ಮತ್ತು ಉಪಯುಕ್ತತೆ ಎರಡರಲ್ಲೂ ಪ್ರಮುಖ ಪಾತ್ರವಹಿಸುತ್ತವೆ. ಸರಿಯಾದದನ್ನು ಹೇಗೆ ಆರಿಸುವುದು ಎಂಬುದು ಇಲ್ಲಿದೆ:

 

  • ಕ್ವಾರ್ಟ್ಜ್: ಕ್ವಾರ್ಟ್ಜ್ ಹೆಚ್ಚು ಬಾಳಿಕೆ ಬರುವ, ಗೀರುವಿಕೆ ಆಗದ ಮತ್ತು ರಂಧ್ರಗಳಿಲ್ಲದ ಸಾಮಾಗ್ರಿಯಾಗಿದ್ದು, ಬಾತ್‌ರೂಂ ಕೌಂಟರ್‌ಟಾಪ್‌ಗಳಿಗೆ ಸೂಕ್ತವಾಗಿದೆ. ಇದು ವಿವಿಧ ಬಣ್ಣಗಳು ಮತ್ತು ಮಾದರಿಗಳಲ್ಲಿ ಲಭ್ಯವಿದೆ, ಮತ್ತು ಇದರ ನಿರ್ವಹಣೆ ಸುಲಭವಾಗಿರುವುದರಿಂದ ಮನೆಮಾಲೀಕರು ಹೆಚ್ಚಾಗಿ ಬಳಸುತ್ತಾರೆ.

     

  • ಗ್ರಾನೈಟ್: ಗ್ರಾನೈಟ್‌ಗೆ ನಿಯಮಿತ ಸೀಲ್ ಮಾಡುವುದು ಅಗತ್ಯವಿದ್ದರೂ, ಇದು ಯಾವುದೇ ಬಾತ್‌ರೂಂ ಸೌಂದರ್ಯವನ್ನು ಹೆಚ್ಚಿಸುವ ನೈಸರ್ಗಿಕ, ಐಷಾರಾಮಿ ನೋಟವನ್ನು ಒದಗಿಸುತ್ತದೆ. ಇದು ಶಾಖ ಮತ್ತು ಗೀರುವಿಕೆ ತಡೆಯಬಲ್ಲದ್ದಾಗಿದ್ದು, ಇದು ಉಪಯುಕ್ತ ಆಯ್ಕೆಯಾಗಿದೆ.

     

  • ಲ್ಯಾಮಿನೇಟ್: ನೀವು ಬಜೆಟ್‌ನಲ್ಲಿದ್ದರೆ, ಲ್ಯಾಮಿನೇಟ್ ಕೌಂಟರ್‌ಟಾಪ್‌ಗಳು ಕೈಗೆಟುಕುವವು ಮತ್ತು ವಿವಿಧ ವಿನ್ಯಾಸಗಳಲ್ಲಿ ಬರುತ್ತವೆ. ಆದರೆ, ಅವು ನೈಸರ್ಗಿಕ ಕಲ್ಲಿನ ಆಯ್ಕೆಗಳಂತೆ ಬಾಳಿಕೆ ಬರುವುದಿಲ್ಲ ಮತ್ತು ಗೀರುವಿಕೆಗಳಿಗೆ ಗುರಿಯಾಗಬಹುದು.
     

  • ಮಾರ್ಬಲ್: ಮಾರ್ಬಲ್ ಬಾತ್‌ರೂಂ ಕೌಂಟರ್‌ಟಾಪ್ ವಸ್ತುವಾಗಿದ್ದು ಅದು ಶಾಶ್ವತವಾದ ಸೊಬಗನ್ನು ನೀಡುತ್ತದೆ, ಆದರೆ ಅದರ ರಂಧ್ರಯುಕ್ತವಾಗಿರುವುದರಿಂದ, ಕಲೆಗಳು ಮತ್ತು ಗೀರುಗಳನ್ನು ತಪ್ಪಿಸಲು ಇದಕ್ಕೆ ನಿಯಮಿತ ನಿರ್ವಹಣೆ ಅಗತ್ಯವಿರುತ್ತದೆ.
     
  • ಎಂಜಿನಿಯರ್ಡ್ ಸ್ಟೋನ್ ಅಂದರೆ ಕೃತಕ ಗ್ರಾನೈಟ್/ಮಾರ್ಬಲ್: ಈ ಸ್ವರೂಪದಲ್ಲಿ ಹಲವಾರು ಬಣ್ಣಗಳ ಆಯ್ಕೆಗಳು ಲಭ್ಯವಿದೆ.

 

  • ಫುಲ್ ಬಾಡಿ ವಿಟ್ರಿಫೈಡ್ ಟೈಲ್ ಸ್ಲ್ಯಾಬ್‌ಗಳು: 16 ಮಿಮೀ ದಪ್ಪದ ಟೈಲ್‌ಗಳು ದೊಡ್ಡ ಸ್ಲ್ಯಾಬ್‌ಗಳಲ್ಲಿ ಬರುತ್ತವೆ ಮತ್ತು ವಿವಿಧ ಬಣ್ಣಗಳಲ್ಲಿ ಬರುವ ತುಂಬಾ ಸೂಕ್ತ ಮತ್ತು ಬಾಳಿಕೆ ಬರುವ ಆಯ್ಕೆಯಾಗಿದೆ. ಕಲೆಗಳ ಸಮಸ್ಯೆ ತಡೆಯುವ ಸಾಮರ್ಥ್ಯ ಹೊಂದಿದ್ದು ಬಾಳಿಕೆ ಬರುವ ಆಯ್ಕೆ.

 

 

ಟೈಲ್‌ಗಳ ಜಾರುವಿಕೆ ತಡೆಯುವ ಸಾಮರ್ಥ್ಯ

ಟೈಲ್ ಜಾರುವ ಸಾಧ್ಯತೆ ಎಷ್ಟು ಎಂಬುದನ್ನು ಸೂಚಿಸಲು, ಆರ್ ರೇಟಿಂಗ್ ಅಥವಾ ಲೋಲಕ ಪರೀಕ್ಷೆಯಂತಹ ರೇಟಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಟೈಲ್ ಜಾರುವಿಕೆ ತಡೆಯುವ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ರೇಟಿಂಗ್ ಹೆಚ್ಚಾದಷ್ಟೂ, ಟೈಲ್ ಜಾರುವ ಸಾಧ್ಯತೆ ಕಡಿಮೆ. ಆರ್ ರೇಟಿಂಗ್‌ಗಳು ಇಲ್ಲಿವೆ:

ಆರ್9: ಕಡಿಮೆ ಜಾರುವಿಕೆ ತಡೆಯುವ ಸಾಮರ್ಥ್ಯ, ಮಲಗುವ ಕೋಣೆಗಳು ಮತ್ತು ಹಾಲ್‌ಗಳಂತಹ ಒಣ ಪ್ರದೇಶಗಳಿಗೆ ಸೂಕ್ತವಾಗಿದೆ.

 

ಆರ್10: ಮಧ್ಯಮ ಜಾರುವಿಕೆ ತಡೆಯುವ ಸಾಮರ್ಥ್ಯ, ಬಾತ್‌ರೂಂಗಳು, ಅಡುಗೆಮನೆಗಳು ಮತ್ತು ಗ್ಯಾರೇಜ್‌ಗಳಂತಹ ಹೆಚ್ಚಿನ ತೇವ ಇರುವ ಪ್ರದೇಶಗಳಿಗೆ ಸೂಕ್ತವಾಗಿದೆ.

 

ಆರ್11: ಹೆಚ್ಚಿನ ಜಾರುವಿಕೆ ತಡೆಯುವ ಸಾಮರ್ಥ್ಯ, ಮೆಟ್ಟಿಲುಗಳು ಮತ್ತು ಟೆರೇಸ್‌ಗಳಂತಹ ಹೊರಾಂಗಣ ಪ್ರದೇಶಗಳಿಗೆ ಸೂಕ್ತವಾಗಿದೆ.

 

ಆರ್12: ಅತಿ ಹೆಚ್ಚಿನ ಜಾರುವಿಕೆ ತಡೆಯುವ ಸಾಮರ್ಥ್ಯ, ಈಜುಕೊಳಗಳು ಮತ್ತು ಸೌನಾಗಳಂತಹ ಜಾರುವ ಅಪಾಯ ಹೆಚ್ಚಿರುವ ಪ್ರದೇಶಗಳಿಗೆ ಸೂಕ್ತವಾಗಿದೆ.

 

ಆರ್13: ಅತಿ ಹೆಚ್ಚಿನ ಜಾರುವಿಕೆ ತಡೆಯುವ ಸಾಮರ್ಥ್ಯ, ಕೈಗಾರಿಕಾ ಅಡುಗೆಮನೆಗಳು ಮತ್ತು ಆಹಾರ ಸಂಸ್ಕರಣಾ ಪ್ರದೇಶಗಳಂತಹ ಕಠಿಣ ಪರಿಸ್ಥಿತಿಗಳಿರುವ ಪ್ರದೇಶಗಳಿಗೆ ಸೂಕ್ತವಾಗಿದೆ.
 

ಗಮನಿಸಿ: ಬಾತ್‌ರೂಂ ಟೈಲ್‌ಗಳು ಕನಿಷ್ಠ ಆರ್10 ಅಥವಾ ಹೆಚ್ಚಿನ ರೇಟಿಂಗ್ ಹೊಂದಿರಬೇಕು.



ಜನಪ್ರಿಯ ಬಾತ್‌ರೂಂ ಟೈಲ್ ಆಯ್ಕೆಗಳ ಹೋಲಿಕೆ: ಸಾಧಕ-ಬಾಧಕಗಳು

ಟೈಲ್ಸ್ ಬಾತ್‌ರೂಂ ನವೀಕರಣಕ್ಕೆ ಬಹುಮುಖ ಸಾಮಾನು, ಆದರೆ ಪರಿಣಾಮಕಾರಿ ಬಾತ್‌ರೂಂ ಪರಿಕರಗಳೊಂದಿಗೆ ಜೋಡಿಸುವ ಮೂಲಕ ಅವುಗಳ ಕಾರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು:

 

  • ಪಾರ್ಸಿಲೇನ್/ಸೆರಾಮಿಕ್: ಬಾಳಿಕೆ ಮತ್ತು ನೀರಿನ ಪ್ರತಿರೋಧಕ್ಕೆ ಹೆಸರುವಾಸಿಯಾದ ಪಾರ್ಸಿಲೇನ್ ಮತ್ತು ಸೆರಾಮಿಕ್ ಟೈಲ್‌ಗಳು ಗೋಡೆಗಳು ಮತ್ತು ನೆಲಕ್ಕೆ ಸೂಕ್ತವಾಗಿವೆ. ಅವು ಹಲವು ವಿನ್ಯಾಸಗಳಲ್ಲಿ ಬರುತ್ತವೆ ಆದರೆ ಕಾಲಿಗೆ ತಂಪು ಮತ್ತು ಗಟ್ಟಿ ಎಂದೆನಿಸಬಹುದು.

     

  • ಗಾಜಿನ ಟೈಲ್ಸ್: ಇವು ವಿಶಿಷ್ಟ ನೋಟದ ಆಕರ್ಷಣೆಯನ್ನು ಸೇರಿಸುತ್ತವೆ ಮತ್ತು ಸಂಪೂರ್ಣವಾಗಿ ಜಲನಿರೋಧಕವಾಗಿರುತ್ತವೆ. ಆದಾಗ್ಯೂ, ಗಾಜಿನ ಟೈಲ್ಸ್ ಹೆಚ್ಚು ದುಬಾರಿಯಾಗಬಹುದು ಮತ್ತು ಬಿರುಕು ಬಿಡುವ ಸಾಧ್ಯತೆ ಹೆಚ್ಚು.

     

  • ನೈಸರ್ಗಿಕ ಕಲ್ಲು: ಇದು ಐಷಾರಾಮಿ ಸ್ಪರ್ಶವನ್ನು ನೀಡುತ್ತದೆ ಆದರೆ ನೀರಿನ ಪ್ರತಿರೋಧವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಸೀಲ್ ಮಾಡಬೇಕು.

     

  • ವಿನೈಲ್ ಟೈಲ್ಸ್: ಕೈಗೆಟುಕುವ ಮತ್ತು ಅಳವಡಿಸಲು ಸುಲಭವಾದ ವಿನೈಲ್ ಟೈಲ್ಸ್ ಡಿಐವೈ ಯೋಜನೆಗಳಿಗೆ ಉತ್ತಮವಾಗಿವೆ. ಆದರೆ, ಅವು ನೈಸರ್ಗಿಕ ಕಲ್ಲು ಅಥವಾ ಸೆರಾಮಿಕ್‌ನಂತೆಯೇ ಸೌಂದರ್ಯದ ಮೌಲ್ಯವನ್ನು ನೀಡುವುದಿಲ್ಲ.

 

ಬಾತ್‌ರೂಂಗಳಿಗೆ ಮೇಲ್ಚಾವಣಿ ಸಾಮಾನುಗಳು: ತೇವಾಂಶ ನಿರೋಧಕ ಪರಿಹಾರಗಳು

ಬಾತ್‌ರೂಂನ ಮೇಲ್ಚಾವಣಿ ಸಾಮಾನನ್ನು ಪರಿಗಣಿಸುವಾಗ, ಫಂಗಸ್‌ ಬರದಂತೆ ತಪ್ಪಿಸಲು ತೇವಾಂಶ ನಿರೋಧಕತೆಯ ಮೇಲೆ ಕೇಂದ್ರೀಕರಿಸಿ:

 

  • ಪಿವಿಸಿ ಪ್ಯಾನೆಲ್‌ಗಳು ತೇವಾಂಶ ಮತ್ತು ಫಂಗಸ್‌ಗೆ ಹೆಚ್ಚು ನಿರೋಧಕವಾಗಿರುತ್ತವೆ, ಇದು ಬಾತ್‌ರೂಂನ ಛಾವಣಿಗಳಿಗೆ ಸೂಕ್ತವಾಗಿದೆ. ಅವುಗಳನ್ನು ಸ್ಥಾಪಿಸುವುದು ಸುಲಭ ಮತ್ತು ವಿವಿಧ ವಿನ್ಯಾಸಗಳಲ್ಲಿ ಬರುತ್ತವೆ.

     

  • ತೇವಾಂಶ-ನಿರೋಧಕ ಡ್ರೈವಾಲ್: ಗ್ರೀನ್ ಬೋರ್ಡ್ ಎಂದೂ ಕರೆಯಲ್ಪಡುವ ಇದು ಬಾತ್‌ರೂಂನ ಛಾವಣಿಗಳಿಗೆ ಜನಪ್ರಿಯ ಆಯ್ಕೆಯಾಗಿದೆ. ಇದನ್ನು ತೇವಾಂಶವನ್ನು ನಿರೋಧಕವಾಗಿ ತಯಾರಿಸಲಾಗಿದೆ ಮತ್ತು ಅಲಂಕಾರಕ್ಕೆ ಹೊಂದಿಕೆಯಾಗುವಂತೆ ಬಣ್ಣ ಮಾಡಬಹುದು.

     

  • ಸಿಮೆಂಟ್ ಬೋರ್ಡ್: ಟೈಲ್ಸ್ ಅಡಿಯಲ್ಲಿ ಬೇಸ್ ಆಗಿ ಬಳಸಲಾಗುವ ಸಿಮೆಂಟ್ ಬೋರ್ಡ್ ತುಂಬಾ ಬಾಳಿಕೆ ಬರುವ ಮತ್ತು ಜಲನಿರೋಧಕವಾಗಿದ್ದು, ಹೆಚ್ಚಿನ ತೇವಾಂಶ ಉಂಟಾಗುವ ಬಾತ್‌ರೂಂನ ಛಾವಣಿಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

     

     

ಪರಿಸರ ಸ್ನೇಹಿ ಬಾತ್‌ರೂಂ ಸಾಮಗ್ರಿಗಳನ್ನು ಆಯ್ಕೆ ಮಾಡಲು ಸಲಹೆಗಳು

ಬಾತ್‌ರೂಂ ವಿನ್ಯಾಸದಲ್ಲಿ ಸುಸ್ಥಿರತೆ ಹೆಚ್ಚು ಅಗತ್ಯವಾಗಿದೆ. ಪರಿಸರ ಸ್ನೇಹಿ ಬಾತ್‌ರೂಂ ನವೀಕರಣ ಸಾಮಗ್ರಿಗಳನ್ನು ಆಯ್ಕೆ ಮಾಡಲು ಸಲಹೆಗಳು ಇಲ್ಲಿವೆ:

 

  • ಮರುಬಳಕೆಯ ಟೈಲ್‌ಗಳು: ಪರಿಸರದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಕಡಿಮೆ ಮಾಡಲು ಮರುಬಳಕೆಯ ಗಾಜು ಅಥವಾ ಸೆರಾಮಿಕ್ ಟೈಲ್‌ಗಳನ್ನು ಆರಿಸಿ.
     

  • ಬಿದಿರು: ಈ ವೇಗವಾಗಿ ನವೀಕರಿಸಬಹುದಾದ ವಸ್ತುವು ಬಾತ್‌ರೂಂನ ನೆಲಹಾಸು ಮತ್ತು ಪೀಠೋಪಕರಣಗಳಿಗೆ ಸುಸ್ಥಿರವಾಗಿದೆ.

     

  • ಕಡಿಮೆ ವಿಒಸಿ ಬಣ್ಣಗಳು: ಒಳಾಂಗಣದಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಕಡಿಮೆ ಹಬೆಯಾಗುವ ಸಾವಯವ ಸಂಯುಕ್ತಗಳನ್ನು ಹೊಂದಿರುವ ಬಣ್ಣಗಳನ್ನು ಆರಿಸಿ.

     

  • ನೀರಿನ ಸಮರ್ಥ ಬಳಕೆಯ ಜೋಡಣೆಗಳು: ಉಪಯುಕ್ತತೆಗೆ ಧಕ್ಕೆಯಾಗದಂತೆ ನೀರಿನ ಬಳಕೆಯನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ನಲ್ಲಿಗಳು, ಶವರ್‌ಗಳು ಮತ್ತು ಶೌಚಾಲಯಗಳನ್ನು ಸ್ಥಾಪಿಸಿ.







ಮಾಮೂಲಿ ಕೇಳಲಾಗುವ ಪ್ರಶ್ನೆಗಳು

 

1. ಬಾತ್‌ರೂಂಗೆ ಯಾವ ವಸ್ತು ಉತ್ತಮ?

ಅತ್ಯುತ್ತಮ ವಸ್ತುವು ಅದರ ಬಳಕೆಯನ್ನು ಅವಲಂಬಿಸಿರುತ್ತದೆ. ಅವುಗಳ ನೀರಿನ ಪ್ರತಿರೋಧದಿಂದಾಗಿ, ಪಾರ್ಸಿಲೇನ್ ಟೈಲ್ಸ್ ಅಥವಾ ವಿನೈಲ್ ಅನ್ನು ಬಾತ್‌ರೂಂನ ನೆಲಹಾಸಿಗೆ ಅತ್ಯುತ್ತವೆಂದು ಪರಿಗಣಿಸಲಾಗುತ್ತದೆ. ಕೌಂಟರ್‌ಟಾಪ್‌ಗಳಿಗೆ ಕ್ವಾರ್ಟ್ಜ್ ದೀರ್ಘಕಾಲ ಬಾಳಿಕೆ ಬರುವ ಮತ್ತು ನಿರ್ವಹಿಸಲು ಸುಲಭವಾಗಿದೆ, ಆದರೆ ಗೋಡೆಗಳಿಗೆ ಸಾಮಾನ್ಯವಾಗಿ ಟೈಲ್ಸ್ ಬಳಸುತ್ತಾರೆ.

 

2. ನನ್ನ ಬಾತ್‌ರೂಂಗೆ ಸಾಮಾಗ್ರಿಗಳನ್ನು ಆಯ್ಕೆಮಾಡುವಾಗ ನಾನು ಯಾವ ಅಂಶಗಳನ್ನು ಪರಿಗಣಿಸಬೇಕು?

ಬಾತ್‌ರೂಂನ ಸಾಮಾಗ್ರಿಗಳನ್ನು ಆಯ್ಕೆಮಾಡುವಾಗ, ನೀರಿನ ಪ್ರತಿರೋಧ, ದೀರ್ಘಕಾಲ ಬಾಳಿಕೆ ಮತ್ತು ಸರಳ ನಿರ್ವಹಣೆಯ ಮೇಲೆ ಕೇಂದ್ರೀಕರಿಸಬೇಕು. ನೆಲಕ್ಕೆ ನೀರು-ನಿರೋಧಕ ಟೈಲ್ಸ್ ಅಥವಾ ವಿನೈಲ್ ಅಗತ್ಯವಿದೆ; ಗೋಡೆಗಳಿಗೆ ಟೈಲ್ಸ್ ಅಥವಾ ಅಕ್ರಿಲಿಕ್ ಪ್ಯಾನೆಲ್‌ಗಳು, ಕೌಂಟರ್‌ಟಾಪ್‌ಗಳಿಗೆ ಕ್ವಾರ್ಟ್ಜ್ ಅಥವಾ ಗ್ರಾನೈಟ್ ಮತ್ತು ಬಾತ್‌ರೂಂನ ಮೇಲ್ಚಾವಣಿಗೆ ವಸ್ತುಗಳು ಪಿವಿಸಿ ನಂತಹ ತೇವಾಂಶ-ನಿರೋಧಕವಾಗಿರಬೇಕು. ನಿಮ್ಮ ಆಯ್ಕೆಗಳು ನಿಮ್ಮ ಬಜೆಟ್, ಶೈಲಿ ಮತ್ತು ಪರಿಸರ ಸ್ನೇಹಿ ಆದ್ಯತೆಗಳಿಗೆ ಸರಿಹೊಂದುತ್ತವೆ ಎಂದು ಖಚಿತಪಡಿಸಿಕೊಳ್ಳಿ.
 

3. ಬಾತ್‌ರೂಂನ ಗೋಡೆಗಳಿಗೆ ನಾನು ಯಾವ ಸಾಮಾನು ಬಳಸಬೇಕು?

ಪಾರ್ಸಿಲೇನ್ ಅಥವಾ ಸೆರಾಮಿಕ್ ಟೈಲ್ಸ್, ಅಕ್ರಿಲಿಕ್ ಪ್ಯಾನೆಲ್‌ಗಳು ಅಥವಾ ತೇವಾಂಶ-ನಿರೋಧಕ ಡ್ರೈವಾಲ್‌ಗಳು ನೀರಿನ ಹಾನಿಗೆ ಪ್ರತಿರೋಧವನ್ನು ಹೊಂದಿರುವುದರಿಂದ ಬಾತ್‌ರೂಂನ ಗೋಡೆಯ ಸಾಮಾನುಗಳಿಗೆ ಉತ್ತಮ ಆಯ್ಕೆಗಳಾಗಿವೆ.

 

4. ಬಾತ್‌ರೂಂಗಳಲ್ಲಿ ಯಾವ ಸಾಮಾನು ಬಳಸಲಾಗುತ್ತದೆ?

ಸಾಮಾನ್ಯ ಸಾಮಾಗ್ರಿಗಳಲ್ಲಿ ನೆಲ ಮತ್ತು ಗೋಡೆಗಳಿಗೆ ಸೆರಾಮಿಕ್ ಅಥವಾ ಪಾರ್ಸಿಲೇನ್ ಟೈಲ್ಸ್, ಕೌಂಟರ್‌ಟಾಪ್‌ಗಳಿಗೆ ಕ್ವಾರ್ಟ್ಜ್ ಅಥವಾ ಗ್ರಾನೈಟ್ ಮತ್ತು ಛಾವಣಿಗಳಿಗೆ ಪಿವಿಸಿ ಅಥವಾ ತೇವಾಂಶ-ನಿರೋಧಕ ಡ್ರೈವಾಲ್ ಸೇರಿವೆ.

 

5. ಬಾತ್‌ರೂಂಗೆ ಸಾಮಗ್ರಿಗಳನ್ನು ಹೇಗೆ ಆರಿಸುವುದು?

ನಿಮ್ಮ ಶೈಲಿಗೆ ಸರಿಹೊಂದುವ ಪಾರ್ಸಿಲೇನ್ ಟೈಲ್ಸ್ ಅಥವಾ ಕ್ವಾರ್ಟ್ಜ್ ನಂತಹ ದೀರ್ಘಕಾಲ ಬಾಳಿಕೆ ಬರುವ, ತೇವಾಂಶ ತಡೆಯುವಂತಹ ಸಾಮಾನುಗಳನ್ನು ಆರಿಸಿ. ಸುಸ್ಥಿರತೆಯನ್ನು ಉತ್ತೇಜಿಸಲು ಪರಿಸರ ಸ್ನೇಹಿ ಸಾಮಾನುಗಳನ್ನು ಆರಿಸಿ. ನೆಲಹಾಸಿನಿಂದ ಕೌಂಟರ್‌ಟಾಪ್‌ಗಳವರೆಗೆ ಅತ್ಯುತ್ತಮ ಬಾತ್‌ರೂಂನ ಸಾಮಾನುಗಳು ತೇವಾಂಶವನ್ನು ತಡೆದುಕೊಳ್ಳಬಲ್ಲವು ಮತ್ತು ಕಾರ್ಯಕ್ಷಮತೆ ಮತ್ತು ಸೌಂದರ್ಯಕ್ಕಾಗಿ ನಿಮ್ಮ ಬಾತ್‌ರೂಂನ ಒಟ್ಟಾರೆ ವಿನ್ಯಾಸಕ್ಕೆ ಪೂರಕವಾಗಿರುತ್ತವೆ.


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....