ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ಮನೆಗಳಲ್ಲಿ ಬಳಸುವ ವಿವಿಧ ಬಗೆಯ ವೈರಿಂಗ್‍ಗಳು ಯಾವುವು?
ಮನೆಯಲ್ಲಿ ಬಳಸುವ ವೈರಿಂಗ್ ವ್ಯವಸ್ಥೆಯ ವಿಧಗಳೆಂದರೆ, ಕೇಸಿಂಗ್ ಮತ್ತು ಕ್ಯಾಪಿಂಗ್ ವೈರಿಂಗ್, ಕಾಂಡುಯಿಟ್ ವೈರಿಂಗ್, ಕಡಿಮೆ ವೋಲ್ಟೇಜ್ ವೈರಿಂಗ್ ಮತ್ತು ಕ್ಲೀಟ್ ವೈರಿಂಗ್. ಈ ಎಲ್ಲಾ ವಿಧಗಳು ಮನೆಯ ನಿರ್ದಿಷ್ಟ ಅವಶ್ಯಕತೆಗೆ ಅನುಗುಣವಾಗಿ ವಿವಿಧ ಉದ್ದೇಶಗಳನ್ನು ಪೊರೈಸುತ್ತವೆ.
2. ಯಾವ ಬಗೆಯ ವೈರಿಂಗ್ ಮನೆಗೆ ಅತ್ಯುತ್ತಮ?
ಮನೆಯಲ್ಲಿ ಅಳವಡಿಸಲು ಅತ್ಯುತ್ತಮ ವೈರಿಂಗ್ ಯಾವುದೆಂಬುದು ನಿಮ್ಮನಿರ್ದಿಷ್ಟ ಅವಶ್ಯಕತೆಗಳ ಮೇಲೆ ಅವಲಂಬಿತವಾಗಿರುತ್ತದೆ, ಆದರೆ ಸಾಮಾನ್ಯವಾಗಿ, ಸುರಕ್ಷತೆ ಮತ್ತು ದೀರ್ಘಬಾಳಿಕೆಯ ದೃಷ್ಟಿಯಿಂದ ಕಾಂಡುಯಿಟ್ ವೈರಿಂಗಿಗೆ ಆದ್ಯತೆ ನೀಡಲಾಗುತ್ತದೆ. ಮನೆಯ ಭದ್ರತಾ ವ್ಯವಸ್ಥೆ ಮತ್ತು ಲೈಟಿಂಗ್ ಮೊದಲಾದವುಗಳಿಗೆ ಕಡಿಮೆ ವೋಲ್ಟೇಜ್ ವೈರಿಂಗ್ ಸೂಕ್ತ.
3. ಹೊಸ ಮನೆಯಲ್ಲಿ ಇಲೆಕ್ಟ್ರಿಕಲ್ ಔಟ್‌ಲೆಟ್‌ಗಳನ್ನು ಎಲ್ಲಿ ಇರಿಸಬೇಕು?
ಆಯಾ ಕೊಠಡಿಗಳ ಅವಶ್ಯಕತೆಗೆ ತಕ್ಕಂತೆ ಇಲೆಕ್ಟ್ರಿಕಲ್ ಔಟ್‌ಲೆಟ್‌ಗಳನ್ನು ಸೂಕ್ತ ಜಾಗದಲ್ಲಿ ಇರಿಸಬೇಕು. ಉದಾಹರಣೆಗೆ ಅಡುಗೆಮನೆಯಲ್ಲಿ ಕೌಂಟರ್‌ಗಳ ಸಮೀಪ ಅನೇಕ ಔಟ್‌ಲೆಟ್‌ಗಳು ಬೇಕಾದರೆ, ಲಿವಿಂಗ್ ರೂಮಿನಲ್ಲಿ ಮನರಂಜನಾ ಸಾಧನಗಳ ಹಿಂಭಾಗದಲ್ಲಿ ಔಟ್‌ಲೆಟ್‌ಗಳ ಅವಶ್ಯಕತೆಯೊರುತ್ತದೆ. ಮಲಗುವ ಕೋಣೆ ಮತ್ತು ಸ್ನಾನಗಹದಲ್ಲಿ ಸಹ ನೀರಿನ ಮೂಲಗಳಿಂದ ದೂರದಲ್ಲಿ ಸೂಕ್ತ ಸ್ಥಳದಲ್ಲಿ ಔಟ್‌ಲೆಟ್‌ಗಳು ಬೇಕಾಗುತ್ತವೆ.
4. ಇಲೆಕ್ಟ್ರಿಕಲ್ ಔಟ್‌ಲೆಟ್‌ಗಳ ವಿನ್ಯಾಸವನ್ನು ಹೇಗೆ ಮಾಡಬೇಕು?
ಎಲೆಕ್ಟ್ರಿಕ್ ಔಟ್‌ಲೆಟ್‌ಗಳನ್ನು ಉಪಯೋಗಿಸಲು ಸುಲಭವಾಗುವಂತಹ ಸ್ಥಳಗಳಲ್ಲಿ ವ್ಯವಸ್ಥಿತವಾಗಿ, ಎಕ್ಸ್ಟೆನ್ಷನ್ ಕಾಡ್‍ಗಳ ಅತಿಯಾದ ಬಳಕೆಗೆ ಆಸ್ಪದ ನೀಡದಂತೆ ಸ್ಥಾಪಿಸಬೇಕು. ಔಟ್‌ಲೆಟ್‌ಗಳ ನಡುವೆ ಸ್ಥಳೀಯ ನಿಯಮಗಳಿಗೆ ಅನುಸಾರವಾಗಿ ಸೂಕ್ತ ಅಂತರವಿರಬೇಕು ಮತ್ತು ಹೆಚ್ಚು ಪವರ್ ಬೇಡುವ ಅಡುಗೆಮನೆ ಮೊದಲಾದ ಜಾಗಗಳಿಗೆ ಪ್ರತ್ಯೇಕ ಸರ್ಕ್ಯೂಟ್ ಇರಬೇಕು.
5. ಇಲೆಕ್ಟ್ರಿಕಲ್ ವೈರುಗಳ ವರ್ಣ ಕೋಡ್ ಎಂದರೇನು?
ವ್ಯಾಪಕವಾಗಿ ಬಳಕೆಯಲ್ಲಿರುವ ವೈರಿಂಗಿನ ವರ್ಣ ಕೋಡ್‍ಗಳೆಂದರೆ ಕಪ್ಪು(ಲೈವ್), ಕೆಂಪು (ಸೆಕಂಡರಿ ಲೈವ್) ಮತ್ತು ಹಸಿರು ಅಥವಾ ಬರಿಯ ತಾಮ್ರ(ಗ್ರೌಂಡ್).ಈ ಕೋಡ್‍ಗಳು ಇಲೆಕ್ಟ್ರಿಷಿಯನ್ ಮತ್ತು ಮನೆಯ ಮಾಲಿಕರಿಗೆ ಸುರಕ್ಷಿತ ಮತ್ತು ಸಕ್ಷಮ ವಿದ್ಯುತ್ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ.
6. ಮನೆಯಲ್ಲಿ ಯಾವ ಬಗೆಯ ಇಲೆಕ್ಟ್ರಿಕಲ್ ವೈರುಗಳನ್ನು ಬಳಸಲಾಗುತ್ತದೆ?
ಕಾಂಡುಯಿಟ್ ವೈರಿಂಗ್ ಆಧುನಿಕ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ವೈರಿಂಗಿನ ವಿಧವಾಗಿದ್ದು ಅತ್ಯಂತ ದೀರ್ಘಬಾಳಿಕೆಯ ಮತ್ತು ಸುರಕ್ಷಿತ ವಿಧವಾಗಿದೆ. ಇತರೆ ವಿಧಗಳಾದ ಕಡಿಮೆ ವೋಲ್ಟೇಜ್ ಅಥವಾ ಕ್ಲೀಟ್ ವೈರಿಂಗ್ ವಿಧಾನಗಳು ಸಹ ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಯಾವ ಬಗೆಯ ವೈರನ್ನು ಮನೆಯಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿಯುವುದು ಸುರಕ್ಷತೆ ಮತ್ತು ಕ್ಷಮತೆಯ ದೃಷ್ಟಿಯಿಂದ ಅವಶ್ಯಕ.