ಮನೆ ನಿರ್ಮಾಣದ ಸಮಯದಲ್ಲಿ ಅನಿರೀಕ್ಷಿತ ಖರ್ಚುಗಳನ್ನು ತಪ್ಪಿಸಲು ಸಮರ್ಪಕ ಯೋಜನೆ ಅಗತ್ಯ. ಇದಕ್ಕಾಗಿ ಕೆಲವು ಪ್ರಾಯೋಗಿಕ ಸಲಹೆಗಳು ಇಲ್ಲಿವೆ:
1) ಸಮಗ್ರ ಅಧ್ಯಯನ ಮತ್ತು ಸಮರ್ಪಕ ತಯಾರಿ
ನೀವು ಸರಿಯಾಗಿ ಯೋಜನೆ ರೂಪಿಸಿದರೆ ಮತ್ತು ಸಮರ್ಪಕವಾಗಿ ಅಧ್ಯಯನ ನಡೆಸಿ ಮುಂದಡಿ ಇಟ್ಟರೆ ನಿರ್ಮಾಣದ ಸಮಯದಲ್ಲಿ ಅನಿರೀಕ್ಷಿತ ವೆಚ್ಚಗಳು ಎದುರಾಗುವುದು ಕಡಿಮೆಯಾಗುತ್ತದೆ. ಭೂಮಿ, ಅನುಮತಿ, ಯುಟಿಲಿಟಿಗಳು ಮತ್ತು ವಸ್ತುಗಳ ಒಟ್ಟು ವೆಚ್ಚವನ್ನು ಮನೆ ನಿರ್ಮಿಸುವ ಮೊದಲೇ ಅರ್ಥಮಾಡಿಕೊಳ್ಳಿ.
ಅನುಮತಿಗಳು, ಸೌಕರ್ಯ ಸಂಪರ್ಕಗಳು ಮತ್ತು ನಿವೇಶನ ಸಜ್ಜುಗಳಿಸುವುದು ಸೇರಿದಂತೆ ಒಳಗೊಂಡಿರುವ ಎಲ್ಲಾ ಗುಪ್ತ ವೆಚ್ಚಗಳ ಕುರಿತು ಸಮಗ್ರ ಅಂದಾಜು ತಿಳಿದಿರಿ.
ಅನಿರೀಕ್ಷಿತ ಗುಪ್ತ ವೆಚ್ಚಗಳನ್ನು ತಪ್ಪಿಸಲು ನಿವೇಶನಗಳ ಸಮೀಕ್ಷೆ ಮತ್ತು ಕಾನೂನು ಪರಿಶೀಲನೆ ಮಾಡಿ.
2) ಅನುಮತಿ ಮತ್ತು ದಾಖಲೀಕರಣದಲ್ಲಿ ಅತ್ಯುತ್ತಮವಾಗಿರಿ
ಕಾನೂನು ಮತ್ತು ನಿಯಂತ್ರಕ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಮನೆ ನಿರ್ಮಾಣ ವಿಳಂಬವಾಗಬಹುದು ಮತ್ತು ದಂಡ ಪಾವತಿಸಬೇಕಾಗಬಹುದು. ಮನೆ ನಿರ್ಮಾಣ ಆರಂಭಿಸುವ ಮುನ್ನ ಅಗತ್ಯವಿರುವ ಎಲ್ಲಾ ಪರವಾನಗಿಗಳನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳಿ.
ನಿವೇಶನ ಖರೀದಿ ಅಂತಿಮಗೊಳಿಸುವ ಮೊದಲು ಅದರ ಮೂಲ ದಾಖಲೆಗಳು, ಮಾರಾಟ ದಾಖಲೆಗಳು ಮತ್ತು ಋಣಭಾರ ದಾಖಲೆಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ದೃಢೀಕರಿಸಿ.
ಪರವಾನಿಗೆ ಶುಲ್ಕಗಳು ಮತ್ತು ಹೆಚ್ಚುವರಿ ಪರಿಶೀಲನೆ ವೆಚ್ಚಗಳನ್ನು ನಿಮ್ಮ ಆರಂಭಿಕ ಬಜೆಟ್‌ನಲ್ಲಿ ಸೇರಿಸಿ, ನಂತರ ಅಚ್ಚರಿಗಳು ಎದುರಾಗದಂತೆ.
3) ಯುಟಿಲಿಟಿ ಸಂಪರ್ಕಗಳ ಕುರಿತು ಮುಂಚಿತವಾಗಿಯೇ ಯೋಜಿಸಿ
ನಿಮ್ಮ ಪ್ರಾಪರ್ಟಿಗೆ ವಿದ್ಯುತ್, ನೀರಿನಂತಹ ಯುಟಿಲಿಟಿ ಸಂಪರ್ಕ ಒದಗಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಮತ್ತು ಇದು ದುಬಾರಿಯೂ ಹೌದು. ಇವುಗಳ ಕುರಿತು ಮೊದಲೇ ಯೋಜನೆ ರೂಪಿಸಿದರೆ ತುರ್ತು ವೆಚ್ಚಗಳಿಂದ ತಪ್ಪಿಸಿಕೊಳ್ಳಬಹುದು.
ನಿಮ್ಮ ನಿವೇಶನಕ್ಕೆ ಮೂಲಭೂತ ಅಗತ್ಯಗಳು ದೊರಕುವುದೇ ಎಂದು ಖಚಿತಪಡಿಸಿಕೊಳ್ಳಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳು ಮತ್ತು ಬೋರ್‌ವೆಲ್‌ಗಳಂತಹ ಪರ್ಯಾಯಗಳ ಕುರಿತೂ ಆಲೋಚಿಸಿ.
ಭೂಮಿ ಖರೀದಿಸುವ ಮುನ್ನ ಯುಟಿಲಿಟಿ ಸಂಪರ್ಕಗಳ ಶುಲ್ಕಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ವೆಚ್ಚಗಳ ಕುರಿತು ತಿಳಿದುಕೊಳ್ಳಿ.
4) ವಸ್ತುಗಳ ಬಳಕೆ ಮತ್ತು ವ್ಯರ್ಥ ವಸ್ತುಗಳ ಕುರಿತು ನಿಗಾ ವಹಿಸಿ
ವಸ್ತುಗಳನ್ನು ವ್ಯರ್ಥ ಮಾಡುವುದರಿಂದ ನಿಮ್ಮ ನಿರ್ಮಾಣ ವೆಚ್ಚಗಳು ವೇಗವಾಗಿ ಹೆಚ್ಚಾಗುತ್ತವೆ. ವಸ್ತುಗಳನ್ನು ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಖರೀದಿಸುವುದನ್ನು ತಪ್ಪಿಸಿ ಮತ್ತು ಬಳಕೆಯ ಮೇಲೆ ನಿಗಾ ಇಡಿ.
5) ನಂಬಿಕಸ್ಥ ವೃತ್ತಿಪರರ ಜತೆ ಕೆಲಸ ಮಾಡಿ
ಅನುಭವಿ ಗುತ್ತಿಗೆದಾರರು, ವಾಸ್ತುಶಿಲ್ಪಿಗಳು ಮತ್ತು ಸಲಹೆಗಾರರನ್ನು ನೇಮಿಸಿಕೊಳ್ಳುವುದರಿಂದ ಗುಪ್ತ ವೆಚ್ಚಗಳಿಗೆ ಕಾರಣವಾಗುವ ತಪ್ಪುಗಳನ್ನು ತಡೆಯಬಹುದು. ಬಜೆಟ್ ಒಳಗೆ ಉಳಿಯುವ ಮಹತ್ವವನ್ನು ಅರ್ಥಮಾಡಿಕೊಳ್ಳುವ ವೃತ್ತಿಪರರೊಂದಿಗೆ ಕೆಲಸ ಮಾಡಿ.
ಅತ್ಯುತ್ತಮ ಹಿನ್ನೆಲೆ ಹೊಂದಿರುವ ಗುತ್ತಿಗೆದಾರರನ್ನು ಆಯ್ಕೆ ಮಾಡಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವು ಕ್ವೋಟೇಷನ್‌ಗಳನ್ನು ಪಡೆಯಿರಿ.
ತಂಡದ ಜತೆಗೆ ನಿಮ್ಮ ಬಜೆಟ್ ಕುರಿತು ಸ್ಪಷ್ಟವಾಗಿ ಸಂವಹನ ಮಾಡಿ ಮತ್ತು ಅವರಿಗೆ ನಿಮ್ಮ ಹಣಕಾಸು ಮಿತಿಯ ಕುರಿತು ಸ್ಪಷ್ಟ ಅರಿವು ಇರಲಿ.
6) ತುರ್ತು ನಿಧಿಯನ್ನು ರಚಿಸಿ
ನೀವು ಎಷ್ಟೇ ಚೆನ್ನಾಗಿ ಯೋಜಿಸಿದರೂ ಅನಿರೀಕ್ಷಿತ ವೆಚ್ಚಗಳು ಬರುವುದನ್ನು ತಪ್ಪಿಸಲಾಗದು. ಇಂತಹ ಸಂದರ್ಭಗಳಲ್ಲಿ ತುರ್ತು ನಿಧಿ ನಿಮ್ಮ ಬಜೆಟ್‌ಗೆ ಅಡ್ಡಿಪಡಿಸದೆ ಈ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
7) ನಿಯಮಿತವಾಗಿ ನಿಮ್ಮ ಬಜೆಟ್ ಮತ್ತು ಪ್ರಗತಿಯ ಅವಲೋಕನ ಮಾಡಿ
ನಿರ್ಮಾಣ ಪ್ರಗತಿಯೊಂದಿಗೆ ಖರ್ಚುಗಳನ್ನು ಗಮನಿಸಿ ಮತ್ತು ಅಗತ್ಯವಿದ್ದರೆ ಹೊಂದಾಣಿಕೆ ಮಾಡಿ. ಎಲ್ಲವೂ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಬಜೆಟ್ ಅನ್ನು ನಿಯಮಿತವಾಗಿ ಪರಿಶೀಲಿಸಿ.
ನಿಮ್ಮ ನಿರ್ಮಾಣ ತಂಡದೊಂದಿಗೆ ವಾರಕ್ಕೊಮ್ಮೆ ಮೀಟಿಂಗ್ ನಡೆಸಿ, ಬಜೆಟ್ ಮತ್ತು ನಿರ್ಮಾಣ ಪ್ರಗತಿಯನ್ನು ಪರಿಶೀಲಿಸಿ.
ಅನಿರೀಕ್ಷಿತ ವೆಚ್ಚಗಳು ಎದುರಾದಲ್ಲಿ ಬಜೆಟ್ ಅನ್ನು ಹೊಂದಾಣಿಕೆ ಮಾಡಿ ಮತ್ತು ಸಂಭಾವ್ಯ ವೆಚ್ಚಗಳ ಕುರಿತು ಮುಂಚಿತವಾಗಿಯೇ ಎಚ್ಚರಿಕೆಯಿಂದಿರಿ.