ಸಾಮಾನ್ಯವಾಗಿ ಕಟ್ಟಡದ ಕೆಲಸ ಒಂದು ಸ್ಪಷ್ಟವಾದ ಪ್ಲಾನ್‌ನೊಂದಿಗೆ ಶುರುವಾಗುತ್ತೆ. ಅಳತೆ ಫಿಕ್ಸ್ ಇರುತ್ತೆ, ಸಾಮಾನುಗಳನ್ನು ಆರ್ಡರ್ ಮಾಡಿರುತ್ತಾರೆ ಮತ್ತು ಎಲ್ಲವೂ ಹಂತ ಹಂತವಾಗಿ ಶುರುವಾಗುತ್ತೆ. ಆದರೆ ಒಂದು ಸಣ್ಣ ಬದಲಾವಣೆ ಕೂಡ ಕೆಲಸವನ್ನು ಎಷ್ಟೋ ದಿನಗಳ ಕಾಲ ನಿಲ್ಲಿಸಿಬಿಡಬಹುದು. ಕೆಲಸ ಲೇಟ್ ಆಗಲು ಇವೇ ಪ್ರಮುಖ ಕಾರಣಗಳು. ಇವುಗಳನ್ನು ಒಂದೊಂದಾಗಿ ಅರ್ಥಮಾಡಿಕೊಳ್ಳೋಣ ಮತ್ತು ಮುಂದೆ ಇವುಗಳನ್ನು ಹೇಗೆ ತಪ್ಪಿಸಬಹುದು ಅಂತ ಕಲಿಯೋಣ.
ಕಟ್ಟಡದ ಕೆಲಸ ನಡೆಯುವಾಗ ಡಿಸೈನ್ ಬದಲಿಸುವುದು: ದೊಡ್ಡ ಕಟ್ಟಡ ನಿರ್ಮಾಣದ ಕೆಲಸ ತಡವಾಗಲು ಇರುವ ಸಾಮಾನ್ಯ ಕಾರಣಗಳಲ್ಲಿ ಇದೂ ಒಂದು
ಡಿಸೈನ್ ಬದಲಾದಾಗ ಹೊಸ ಸಾಮಾನುಗಳು ಬೇಕಾಗುತ್ತವೆ ಮತ್ತು ಅವು ಸೈಟ್ ತಲುಪಲು ಸಮಯ ತಗಲುತ್ತದೆ. ಕೆಲವು ಸಾಮಾನುಗಳು ಹತ್ತಿರದ ಅಂಗಡಿಗಳಲ್ಲಿ ಸಿಗದಿರಬಹುದು, ಎಲ್ಲವೂ ಬರುವವರೆಗೆ ಕೆಲಸ ಮುಂದುವರಿಸಲು ಆಗುವುದಿಲ್ಲ.
ಗೋಡೆ ಸರಿಸುವುದು, ಬಾಗಿಲಿನ ಜಾಗ ಬದಲಿಸುವುದು ಅಥವಾ ಟೈಲ್ಸ್ ಬಣ್ಣ ಬದಲಿಸುವುದು ಇವೆಲ್ಲ ನೋಡಲು ಸಣ್ಣ ಬದಲಾವಣೆ ಎನಬಹುದು, ಆದರೆ ಇವುಗಳಿಂದ ಕೆಲಸಕ್ಕೆ ಅಡ್ಡಿಯಾಗುತ್ತದೆ:
ಈಗಾಗಲೇ ಮುಗಿದಿರುವ ಕೆಲಸವನ್ನು ಮತ್ತೆ ಮಾಡಬೇಕಾಗುವುದು
ಹೊಸ ಸೂಚನೆಗಳಿಗಾಗಿ ಕಾಯುವುದು
ಕೆಲಸ ದಿನದಿಂದ ದಿನಕ್ಕೆ ಲೇಟ್ ಆಗುವುದು
ಕಟ್ಟಡ ನಿರ್ಮಾಣದ ಕೆಲಸ ತಡವಾಗಲು ಇರುವ ಇತರ ಕಾರಣಗಳು
ಕೆಲಸದ ಮಧ್ಯೆ ಡಿಸೈನ್ ಬದಲಿಸುವುದರ ಜೊತೆಗೆ ಇನ್ನೂ ಅನೇಕ ವಿಷಯಗಳಿಂದ ಕೆಲಸ ತಡವಾಗಬಹುದು. ಈ ಸಮಸ್ಯೆಗಳು ಚಿಕ್ಕದಾಗಿ ಕಂಡರೂ ಕೆಲಸವನ್ನು ಎಷ್ಟೋ ದಿನಗಳ ಕಾಲ ನಿಲ್ಲಿಸಿಬಿಡುತ್ತವೆ:
ಸರಿಯಾದ ಸಂವಹನ ಇಲ್ಲದಿರುವುದು
ಜನರ ನಡುವೆ ಮಾತುಕತೆ ಸರಿಯಾಗಿ ಇರದಿದ್ದಾಗ ತಪ್ಪುಗಳಾಗುತ್ತವೆ. ವಿಷಯಗಳನ್ನು ಮತ್ತೆ ವಿವರಿಸುವಾಗ ಕೆಲಸ ಲೇಟ್ ಆಗುತ್ತೆ. ಅದಕ್ಕೇ ಸರಿಯಾದ ಸಂವಹನ ಇಲ್ಲದಿರುವುದು ಕೆಲಸ ತಡವಾಗಲು ಒಂದು ಸಾಮಾನ್ಯ ಕಾರಣ.
ಕೆಲಸಗಾರರ ಕೊರತೆ
ಬೇಕಾದಷ್ಟು ಕೆಲಸಗಾರರು ಇಲ್ಲದಿದ್ದಾಗ ಕೆಲಸ ನಿಧಾನವಾಗಿ ಸಾಗುತ್ತದೆ.
ಅನುಮತಿ ಪಡೆಯುವಲ್ಲಿ ವಿಳಂಬ
ಕೆಲಸ ಮುಂದುವರಿಯಲು ಅಗತ್ಯವಿರುವ ಅನುಮತಿಗಳು ಬೇಕು. ಕೆಲವೊಮ್ಮೆ ಕಾಗದಪತ್ರಗಳ ಅಪ್ರೂವಲ್ ಪಡೆಯಲು ಸಮಯ ಹಿಡಿಯುತ್ತದೆ. ಸಾಮಾನು ಮತ್ತು ಕೆಲಸಗಾರರು ರೆಡಿ ಇದ್ದರೂ ಅಪ್ರೂವಲ್ ಸಿಗುವವರೆಗೆ ಕೆಲಸ ನಿಲ್ಲಿಸಬೇಕಾಗುತ್ತದೆ.
ಡಿಸೈನ್ ಬದಲಾವಣೆಯಿಂದ ಆಗುವ ವಿಳಂಬವನ್ನು ತಪ್ಪಿಸುವ ಹಂತಗಳನ್ನು ನೋಡುವ ಮೊದಲು ಈ ಬ್ಲಾಗ್‌ನಲ್ಲಿರುವ ಪ್ರಮುಖ ಕಾರಣಗಳನ್ನು ಓದಿ: ಮನೆ ಕಟ್ಟುವ ಕೆಲಸ ಲೇಟ್ ಆಗುವುದನ್ನು ತಪ್ಪಿಸುವುದು ಹೇಗೆ.
ಯಶಸ್ವಿ ಕಟ್ಟಡ ನಿರ್ಮಾಣಕ್ಕೆ ವಿಳಂಬವನ್ನು ತಪ್ಪಿಸುವುದು ಹೇಗೆ?
ಆರಂಭದಲ್ಲಿ ಸರಿಯಾದ ಪ್ಲಾನ್ ಮಾಡಿಕೊಂಡರೆ ಮುಂದೆ ಕೆಲಸ ವೇಗವಾಗಿ ನಡೆಯುತ್ತದೆ. ನಿರ್ಧಾರಗಳು ಸ್ಪಷ್ಟವಾಗಿದ್ದರೆ ಕೆಲಸ ಸುಗಮವಾಗಿ ಸಾಗುತ್ತದೆ ಮತ್ತು ಕೆಲಸ ಲೇಟ್ ಆಗುವುದನ್ನು ತಪ್ಪಿಸಬಹುದು.
ಇವುಗಳನ್ನು ಪಾಲಿಸಿ:
ಕೆಲಸ ಶುರುವಾಗುವ ಮೊದಲೇ ಎಲ್ಲಾ ಪ್ಲಾನ್‌ಗಳನ್ನು ಫಿಕ್ಸ್ ಮಾಡಿ.
ಲೇಔಟ್, ಅಳತೆ ಮತ್ತು ಫಿನಿಶಿಂಗ್ ಹೇಗಿರಬೇಕು ಎಂದು ಮೊದಲೇ ನಿರ್ಧರಿಸಿ.
ಒಮ್ಮೆ ಕೆಲಸ ಶುರುವಾದ ಮೇಲೆ ಪ್ಲಾನ್ ಬದಲಿಸಬೇಡಿ.
ಮೊದಲೇ ತೆಗೆದುಕೊಳ್ಳುವ ಸಣ್ಣ ನಿರ್ಧಾರಗಳು ಮುಂದೆ ಕೆಲಸ ಸುಲಭವಾಗಿ ನಡೆಯಲು ಮತ್ತು ಕಾಯುವ ಸಮಯ ಉಳಿಸಲು ಸಹಾಯ ಮಾಡುತ್ತವೆ.