ಪದೇ ಪದೇ ಕೇಳಲಾದ ಪ್ರಶ್ನೆಗಳು
1. ತೆರೆದ ಮತ್ತು ಮರೆಮಾಚಿದ ಪೈಪಿಂಗ್ ನಡುವೆ ಇರುವ ವ್ಯತ್ಯಾಸಗಳೇನು?
ಇದರ ಪ್ರಮುಖ ವ್ಯತ್ಯಾಸ ಗೋಚರತೆ. ತೆರೆದ ಪೈಪಿಂಗ್ ಎಲ್ಲರಿಗೂ ಕಾಣಿಸುತ್ತದೆ. ಇದು ಮನೆಯ ಅಲಂಕಾರದ ಭಾಗವಾಗಿರುತ್ತದೆ. ಕೈಗಾರಿಕಾ ವಿನ್ಯಾಸದಂತೆ ಕಾಣಿಸುತ್ತದೆ. ಮರೆಮಾಚಿದ ಪೈಪಿಂಗ್‌ಅನ್ನು ಗೋಡೆಗಳು ಅಥವಾ ನೆಲದೊಳಗೆ ಮರೆಮಾಚಲಾಗಿರುತ್ತದೆ. ಇದರಿಂದ ಹೊರಗೆ ಸ್ವಚ್ಛ ನೋಟ ಇರುತ್ತದೆ. ಯಾರಿಗೂ ಕಾಣಿಸುವುದಿಲ್ಲ.
2. ಮರೆಮಾಚಿದ ಪೈಪಿಂಗ್ ಎಂದರೇನು?
ಗೋಡೆಗಳು ಅಥವಾ ಸೀಲಿಂಗ್‌ನೊಳಗೆ ಪ್ಲಂಬಿಂಗ್ ಪೈಪ್‌ಗಳನ್ನು ಅಡಗಿಸಿ ಜೋಡಿಸಲಾಗುತ್ತದೆ. ಇದರಿಂದ ಹೊರನೋಟಕ್ಕೆ ನಯವಾಗಿ, ಆಧುನಿಕವಾಗಿ ಕಾಣಿಸುತ್ತದೆ. ಪೈಪ್‌ನೊಳಗೆ ಹರಿಯುವ ನೀರಿನ ಶಬ್ದ ಹೊರಕ್ಕೆ ಕೇಳುವುದೂ ಕಡಿಮೆಯಾಗುತ್ತದೆ.
3. ತೆರೆದ ಪೈಪಿಂಗ್ ಎಂದರೇನು?
ಪ್ಲಂಬಿಂಗ್ ಪೈಪ್‌ಗಳನ್ನು ಹೊರಗೆ ಕಾಣಿಸುವಂತೆ ಜೋಡಿಸಿರುವುದನ್ನು ತೆರೆದ ಪೈಪಿಂಗ್ ಎನ್ನುತ್ತಾರೆ. ಕೈಗಾರಿಕಾ ಶೈಲಿಯ ಇಂಟೀರಿಯರ್‌ನಲ್ಲಿ ಹೆಚ್ಚಾಗಿ ಇದನ್ನು ಬಳಸಲಾಗುತ್ತದೆ. ಇದು ಬಳಕೆಗೂ ಸುಲಭ, ಅಲಂಕಾರದಂತೆಯೂ ಕಾಣಿಸುತ್ತದೆ.
4. ತೆರೆದ ಪ್ಲಂಬಿಂಗ್‌ನ ಪ್ರಯೋಜನಗಳು ಏನು?
ಹೊರಭಾಗದಲ್ಲಿ ಕಾಣಿಸುವ ಕೊಳಾಯಿ ಪೈಪ್‌ಗಳನ್ನು ಸುಲಭವಾಗಿ ದುರಸ್ತಿ ಮಾಡಬಹುದು. ಮರೆಮಾಚಿದ ಕೊಳಾಯಿ ಪೈಪ್‌ಗಳಿಗೆ ಹೋಲಿಸಿದರೆ ತೆರೆದ ಪೈಪಿಂಗ್ ಅನ್ನು ಅಳವಡಿಸುವುದು ಕಡಿಮೆ ವೆಚ್ಚದಾಯಕವಾಗಿದೆ.
5. ಯಾವ ಬಗೆಯ ಪೈಪಿಂಗ್ ಅನ್ನು ಸಾಮಾನ್ಯವಾಗಿ ಬಳಸಲಾಗಿರುತ್ತದೆ?
ನಯವಾದ ನೋಟ ಮತ್ತು ಶಬ್ದ ಕಡಿಮೆ ಮಾಡುವ ಪ್ರಯೋಜನಗಳಿಂದಾಗಿ ಆಧುನಿಕ ಮನೆಗಳಲ್ಲಿ ಹೆಚ್ಚಾಗಿ ಮರೆಮಾಚಿದ ಪೈಪಿಂಗ್ ಅನ್ನು ಬಳಸಲಾಗುತ್ತದೆ. ಆದರೆ, ಕೈಗಾರಿಕಾ ಶೈಲಿಯ ವಿನ್ಯಾಸಗಳಲ್ಲಿ ತೆರೆದ ಅಥವಾ ಬಾಹ್ಯಾ ಪೈಪಿಂಗ್ ಬಳಕೆ ಜನಪ್ರಿಯತೆ ಪಡೆಯುತ್ತಿದೆ.
6. ಮರೆಮಾಚಿದ ಪ್ಲಂಬಿಂಗ್‌ನ ಪ್ರಯೋಜನಗಳೇನು?
ಪೈಪ್‌ಗಳನ್ನು ಮರೆಮಾಚುವ ಕಾರಣ ಮನೆಯ ಸೌಂದರ್ಯಕ್ಕೆ ಯಾವುದೇ ಅಡ್ಡಿಪಡಿಸದೆ ಶುಭ್ರ ಮತ್ತು ಆಧುನಿಕ ನೋಟವನ್ನು ನೀಡುತ್ತದೆ. ನೀರಿನ ಹರಿವಿನ ಶಬ್ದ ಕಡಿಮೆ ಇರುತ್ತದೆ. ಪೈಪ್‌ಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಮನೆಯ ಇಂಟೀರಿಯರ್ ವಿನ್ಯಾಸಕ್ಕೆ ಪೂರಕವಾಗಿದೆ. ಸಮರ್ಪಕವಾದ ಪ್ಲ್ಯಾನಿಂಗ್ ಮೂಲಕ ಬಾಳ್ವಿಕೆ ಮತ್ತು ನಿರ್ವಹಣೆಯ ಸವಾಲುಗಳನ್ನು ಕಡಿಮೆ ಮಾಡಿಕೊಳ್ಳಬಹುದು.