ಟೈಲ್‌ಗಳನ್ನು ಅಳವಡಿಸಲು 101 ಮಾರ್ಗದರ್ಶಿ

ಟೈಲ್‌ಗಳನ್ನು ಅಳವಡಿಸುವುದು ಪ್ರಯಾಸದ ಕೆಲಸವಾಗಿರುತ್ತದೆ, ಅದಕ್ಕಾಗಿ ಮುನ್ನೆಚ್ಚರಿಕೆಯ ಕ್ರಮವನ್ನು ಅನುಸರಿಸಬೇಕಿರುತ್ತದೆ. ಟೈಲಿಂಗ್‌ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮಗಳ ಚೆಕ್‌ಲಿಸ್ಟ್‌ ಅನ್ನು ಇಲ್ಲಿ ನೀಡಲಾಗಿದೆ.

 
1
ರೂಮಿನ ಗಾತ್ರಕ್ಕೆ ಮತ್ತು ನಿಮ್ಮ ಮನೆಯ ಶೈಲಿಗೆ ಹೊಂದಿಕೆಯಾಗುವ ಟೈಲ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಕಿರಿದಾದ ಜಾಗಗಳಲ್ಲಿ ದೊಡ್ಡದಾದ ಮತ್ತು ಮಬ್ಬು ಬಣ್ಣದ ಟೈಲ್‌ಗಳನ್ನು ಬಳಸುವುದರಿಂದ ಗಾತ್ರ ಹೆಚ್ಚಿಸಲು ಮತ್ತು ವೆಂಟಿಲೇಶನ್‌ ಮಟ್ಟಗಳನ್ನು ಹೆಚ್ಚಿಸಲು ಸೂಕ್ತವಾಗಿರುತ್ತವೆ, ಆದರೆ ಹಲವಾರು ಅಡುಗೆ ಮನೆ ಮತ್ತು ಬಾತ್‌ರೂಮ್‌ ಸ್ಥಳಗಳು ಚಿಕ್ಕದಾದ ಟೈಲ್‌ಗಳನ್ನು ಹೊಂದಿರುತ್ತವೆ. 
2
‌ನಿಮ್ಮ ಟೈಲ್‌ಗಳ ಮುಖಾಂತರ ನೀರು ಬರುವುದನ್ನು ಮತ್ತು ಅದು ದೀರ್ಘಾವಧಿಯಲ್ಲಿ ಹಾಳಾಗುವುದನ್ನು ತಪ್ಪಿಸಲು ಸರಿಯಾದ ರೀತಿಯ ಮಣ್ಣಿನ ಪದರದ ಕಾಂಪ್ಯಾಕ್ಷನ್‌, ಸಬ್‌ಫ್ಲೋರ್‌ ಲೆವೆಲಿಂಗ್‌, ಇಟ್ಟಿಗೆ ಮತ್ತು ಪ್ಲಾಸ್ಟರ್‌ವರ್ಕ್‌ ಪೂರ್ಣಗೊಳಿಸುವಿಕೆ, ಮತ್ತು ವಾಟರ್‌ಪ್ರೂಫಿಂಗ್ ಮೂಲಕ ಟೈಲ್‌ನ ಮೇಲ್ಮೈಯನ್ನು ಸಿದ್ಧಗೊಳಿಸುವುದಕ್ಕೆ ಆದ್ಯತೆ ನೀಡಿ.
3
ಟೈಲ್‌ ಅಳವಡಿಸುವ ಕೆಲಸ ಆರಂಭಿಸುವ ಮೊದಲು ಮೇಲ್ಮೈ ನಯವಾಗಿದೆ ಮತ್ತು ರಚನಾತ್ಮಕತೆ ದೃಷ್ಟಿಯಿಂದ ದೃಢವಾಗಿದೆ ಎಂದು ಪರಿಶೀಲಿಸಿ, ಮತ್ತು ಸೈಟ್‌ನಲ್ಲಿ ಸಾಕಷ್ಟು ಗಾಳಿ ಮತ್ತು ಬೆಳಕು ಇದೆ ಎಂದು ಖಾತರಿಪಡಿಸಿಕೊಳ್ಳಿ.
4
ಟೈಲ್‌ಗಳನ್ನು ಲಂಬ ಕೋನಗಳನ್ನು ಜೋಡಿಸಬೇಕು ಮತ್ತು ಅಂಚುಗಳು ಬಾಗಬಾರದು. 1:6 ಅನುಪಾತದಲ್ಲಿ ಮುಂಚಿತವಾಗಿಯೇ ರೆಡಿ ಮಿಕ್ಸ್‌ ಸಿಮೆಂಟ್‌ ಪ್ಲಾಸ್ಟರ್‌ ಅನ್ನು ಸಿದ್ಧಪಡಿಸಿ ಇರಿಸಿಕೊಳ್ಳಿ. ಸಿಮೆಂಟ್‌ ಜೋಡಣೆಗಳು ಕುಗ್ಗುವುದನ್ನು ತಪ್ಪಿಸಲು ಇದೇ ಮಿಶ್ರಣವನ್ನು ಅನುಸರಿಸಿ. ಎರಡು ಟೈಲ್‌ಗಳ ನಡುವೆ ಕನಿಷ್ಟ ಜೋಡಣೆ ಕಾಪಾಡಿಕೊಳ್ಳಿ ಮತ್ತು ಹೆಚ್ಚಿನ ಜೋಡಣೆಯನ್ನು ಒರೆಸಿಹಾಕಿ.
5
ಟೈಲ್‌ಗಳನ್ನು ಪರಸ್ಪರ ಸಮಾನ ದೂರದಲ್ಲಿ ಇರಿಸಿ. ಅಳವಡಿಸಿದ ನಂತರ ಜೋಡಣೆಯ ಸ್ಥಳವನ್ನು ಸಿಮೆಂಟ್‌ ನೀರುಗಾರೆಯಿಂದ ತುಂಬಿಸಿ.
6
ಅಳವಡಿಕೆಯ ನಂತರ, ಟೈಲಿಂಗ್‌ ಪ್ರದೇಶವನ್ನು ಒದ್ದೆ ಬಟ್ಟೆಯಿಂದ ಸ್ವಚ್ಛಗೊಳಿಸಿ ಮತ್ತು ಕಸವನ್ನು ಗುಡಿಸಿ. ಹೊಸದಾಗಿ ಅಳವಡಿಸಲಾದ ಟೈಲ್‌ಗಳನ್ನು ಹೊಂದಿರುವ ನೆಲಗಳನ್ನು ಕನಿಷ್ಟ ಒಂದು ವಾರದವರೆಗೆ ಉಪಯೋಗಿಸಬೇಡಿ.
7
ಬಿರುಕುಗಳು, ತುಂಡಾಗುವಿಕೆ, ಮತ್ತು ಜೋಡಣೆ ತಪ್ಪುವಿಕೆಯಂತಹ ನ್ಯೂನತೆಗಳಿಂದಾಗಿ ನಂತರದ ಸಮಯದಲ್ಲಿ ಉಂಟಾಗುವ ಹೆಚ್ಚುವರ ವೆಚ್ಚವನ್ನು ತಪ್ಪಿಸಲು ಟೈಲ್‌ ಅಳವಡಿಕೆಯನ್ನು ಮಾಡುವಾಗ ಸೂಕ್ತವಾದ ಮೇಲ್ವಿಚಾರಣೆಯನ್ನು ನಡೆಸಿ. ಟೈಲಿಂಗ್‌ ವೆಚ್ಚವನ್ನು ಸಾಮಾನ್ಯವಾಗಿ ನಿಮ್ಮ ಮನೆ ನಿರ್ಮಾಣದ ಒಂದು ಘಟ್ಟದಲ್ಲಿ ಮುಗಿಸಬಹುದು.
 ಟೈಲ್‌ ನಿರ್ಮಾಣವು ಖಂಡಿತವಾಗಿಯೂ ಪರಿಶ್ರಮದ್ದಾಗಿರುತ್ತದೆ, ಆದರೆ ಸರಿಯಾದ ಕ್ರಮಗಳನ್ನು ಅನುಸರಿಸಿದರೆ, ದೀರ್ಘ ಬಾಳಿಕೆ ಬರುತ್ತದೆ. ಒಮ್ಮೆ ನೀವು ಇವುಗಳ ಮೇಲೆ ಹಿಡಿತ ಸಾಧಿಸಿದರೆಂದರೆ, ನಿಮ್ಮ ಮನೆಯ ದುರಸ್ತಿಯು ಕಷ್ಟವೆಂದೆನಿಸುವುದಿಲ್ಲ.

ಮನೆ ನಿರ್ಮಾಣದಲ್ಲಿ ಅಗತ್ಯವಿರುವ ಕಾನೂನಾತ್ಮಕ ದಾಖಲೆಗಳ ಬಗ್ಗೆ ಇನ್ನಷ್ಟು ತಿಳಿಯಲು, ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಮಾತು ಅನ್ನು ನೋಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ