ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಕಾಂಕ್ರೀಟ್ ಗೆ ಬೇಕಾದ ಕನಿಷ್ಠ ಕ್ಯೂರಿಂಗ್ ಸಮಯ ಎಷ್ಟು?



ಕಾಂಕ್ರೀಟ್ ಕ್ಯೂರಿಂಗ್ ಸಮಯದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ, ಏಕೆಂದರೆ ಮನೆ ಎಷ್ಟು ದೃಢ ಮತ್ತು ಬಾಳಿಕೆ ಬರುತ್ತದೆ ಎಂಬುದು ಇದರ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಇದನ್ನು ಗಡಿಬಿಡಿಯಲ್ಲಿ ಮಾಡಿದರೆ ಅಥವಾ ಬಿಟ್ಟುಬಿಟ್ಟರೆ ಬೇಗನೆ ಬಿರುಕುಗಳು ಮೂಡಬಹುದು. ಅದಕ್ಕಾಗಿಯೇ ಕಾಂಕ್ರೀಟ್ ಕ್ಯೂರಿಂಗ್ ಸಮಯದ ಬಗ್ಗೆ ತಿಳಿಯುವುದು ತುಂಬಾ ಮುಖ್ಯ.

 

ಕಾಂಕ್ರೀಟ್ ಕ್ಯೂರಿಂಗ್ ಸಮಯ ಎಂದರೇನು?

ಕಾಂಕ್ರೀಟ್ ಗಟ್ಟಿಯಾಗಲು ತೆಗೆದುಕೊಳ್ಳುವ ಸಮಯವೇ ಇದು. ಸರಳವಾಗಿ ಹೇಳಬೇಕೆಂದರೆ, ಕೆಲವು ದಿನಗಳವರೆಗೆ ಕಾಂಕ್ರೀಟ್ ಅನ್ನು ತೇವವಾಗಿಡುವುದು, ಇದರಿಂದ ನೀರು ಸಿಮೆಂಟ್ ಒಳಗಿನಿಂದ ನಿಧಾನವಾಗಿ ಗಟ್ಟಿಯಾಗಲು ಸಹಾಯ ಮಾಡುತ್ತದೆ. ಎಷ್ಟು ಹೆಚ್ಚು ಕ್ಯೂರಿಂಗ್ ಮಾಡುತ್ತೇವೆಯೋ ಅಷ್ಟು ಹೆಚ್ಚು ಗಟ್ಟಿಯಾಗುತ್ತದೆ.

 

ಕನಿಷ್ಠ ಕಾಂಕ್ರೀಟ್ ಕ್ಯೂರಿಂಗ್ ಸಮಯ

ಕಾಂಕ್ರೀಟ್ ತಕ್ಷಣವೇ ಪೂರ್ಣ ಶಕ್ತಿ ಪಡೆಯುವುದಿಲ್ಲ. ಹೆಚ್ಚಿನ ಶಕ್ತಿ ಮೊದಲ 7 ದಿನಗಳಲ್ಲಿ ಸಿಗುತ್ತದೆ, ಆದರೆ 28 ದಿನಗಳವರೆಗೆ ಅದು ಗಟ್ಟಿಯಾಗುತ್ತಲೇ ಇರುತ್ತದೆ. ಸರಿಯಾದ ಕಾಂಕ್ರೀಟ್ ಸ್ಲ್ಯಾಬ್ ಕ್ಯೂರಿಂಗ್ ಸಮಯವು ಸ್ಲ್ಯಾಬ್ ಅನ್ನು ಬಲಗೊಳಿಸುತ್ತದೆ ಮತ್ತು ಹೆಚ್ಚಿನ ತೂಕವನ್ನು ಸುರಕ್ಷಿತವಾಗಿ ಹೊರಬಲ್ಲದು. 

 

ಕಾಂಕ್ರೀಟ್ ಕ್ಯೂರಿಂಗ್ ಸಮಯದ ಚಾರ್ಟ್

ಕಾಂಕ್ರೀಟ್ ಹಾಕಿದಾಗ ಅದು ಹೊರಗಿನಿಂದ ಗಟ್ಟಿಯಾಗಿ ಕಂಡರೂ ಒಳಗಿನಿಂದ ಇನ್ನೂ ಮೆತ್ತಗಿರುತ್ತದೆ. ಅದಕ್ಕೆ ನೀರು ಹಾಕುವುದು ಅಥವಾ ಒದ್ದೆ ಬಟ್ಟೆಯಿಂದ ಮುಚ್ಚುವುದು ಅದಕ್ಕೆ ಶಕ್ತಿ ನೀಡುತ್ತದೆ. ಕಾಂಕ್ರೀಟ್ ಕ್ಯೂರಿಂಗ್ ಸಮಯದ ಬಗ್ಗೆ ಇಲ್ಲಿದೆ ಒಂದು ಚಾರ್ಟ್:

1. ದಿನ 1–3: ಕಾಂಕ್ರೀಟ್ ಮೆತ್ತಗಿರುತ್ತದೆ, ತುಂಬಾ ನಾಜೂಕು.

2. ದಿನ 4–7: ಗಟ್ಟಿಯಾಗಲು ಶುರುವಾಗುತ್ತದೆ. ತೇವವಾಗಿಡಿ.

3. ದಿನ 8–14: ಶಕ್ತಿ ಹೆಚ್ಚಾಗುತ್ತದೆ, ಆದರೂ ಕಾಳಜಿ ಬೇಕು.

4. ದಿನ 15–28: ಸುಮಾರು ಪೂರ್ಣ ಶಕ್ತಿ ಬಂದಿರುತ್ತದೆ. ಸಾಮಾನ್ಯ ಭಾರವನ್ನು ಹೊರಬಲ್ಲದು.

 

 

ಕಾಂಕ್ರೀಟ್ ಕ್ಯೂರಿಂಗ್ ಗೆ ಕೆಲವು ಸುಲಭ ಸಲಹೆಗಳು

ಕಾಂಕ್ರೀಟ್ ಸರಿಯಾಗಿ ಕ್ಯೂರಿಂಗ್ ಆಗಲು ಕೆಲವು ಸುಲಭ ಟಿಪ್ಸ್ ಇಲ್ಲಿದೆ:

  • ಮೇಲ್ಭಾಗವನ್ನು ನೀರು ಅಥವಾ ಒದ್ದೆ ಬಟ್ಟೆಯಿಂದ ತೇವವಾಗಿಡಿ.

  • ಮೊದಲ ವಾರ ಸ್ಲ್ಯಾಬ್ ಮೇಲೆ ನಡೆಯಬೇಡಿ.

  • ಬಿಸಿಲು ಹೆಚ್ಚಿದ್ದರೆ ಪ್ಲಾಸ್ಟಿಕ್ ಶೀಟ್ ಗಳಿಂದ ಮುಚ್ಚಿ.

  • ತುಂಬಾ ಬೇಗನೆ ಅದರ ಮೇಲೆ ಭಾರವಾದ ವಸ್ತುಗಳನ್ನು ಸುರಿಯುವುದನ್ನು ತಪ್ಪಿಸಿ.

     

ಇದನ್ನೂ ಓದಿ: ಕಾಂಕ್ರೀಟ್ ಎಂದರೇನು, ಅದರ ವಿಧಗಳು, ಸಂಯೋಜನೆ, ಗುಣಲಕ್ಷಣಗಳು ಮತ್ತು ಉಪಯೋಗಗಳು?

 

 

ಶಕ್ತಿ ಸಮಯದ ಜೊತೆ ಬರುತ್ತದೆ

ಕಾಂಕ್ರೀಟ್ ಕ್ಯೂರಿಂಗ್ ಸಮಯ ಮತ್ತು ಶಕ್ತಿ ಒಂದಕ್ಕೊಂದು ಸಂಬಂಧಿಸಿವೆ. ಎಷ್ಟು ಸರಿಯಾಗಿ ಕ್ಯೂರಿಂಗ್ ಆಗುತ್ತದೆಯೋ, ಅಷ್ಟು ಗಟ್ಟಿಯಾಗುತ್ತದೆ ಮತ್ತು ಬಾಳಿಕೆ ಬರುತ್ತದೆ. ಕಾಂಕ್ರೀಟ್ ಅನ್ನು ಸರಿಯಾಗಿ ನೋಡಿಕೊಳ್ಳಿ, ಅದು ಹಲವು ವರ್ಷಗಳ ಕಾಲ ಗಟ್ಟಿಯಾಗಿರುತ್ತದೆ.



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....