ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಕಾಂಕ್ರೀಟ್ ಒಡೆದು ಹೋಗಲು ಕಾರಣಗಳೇನು? ಮತ್ತು ತಡೆಯುವುದು ಹೇಗೆ

ನಿಮ್ಮ ಮನೆ ಎನ್ನುವುದು ನಿಮ್ಮ ಗುರುತು. ಕಾಂಕ್ರೀಟ್ ಒಡೆದು ಹೋಗುವುದರಿಂದ ಗೋಡೆಗಳಲ್ಲಿ ಬಿರುಕು ಮತ್ತು ಕಿತ್ತು ಬರುತ್ತದೆ. ಇದರಿಂದಾಗಿ ಮನೆಯ ಕಟ್ಟಡದ ದೃಢತೆ ಕಡಿಮೆಯಾಗಲು ಕಾರಣವಾಗುತ್ತದೆ. ಹೀಗಾಗಿ, ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕಾದದ್ದು ಅಗತ್ಯ. ಈ ಬ್ಲಾಗ್ ನಲ್ಲಿ ಈ ಸಮಸ್ಯೆಗೆ ಕಾರಣಗಳು, ಅದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳು ಮತ್ತು ಅದನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮ, ಕಾಂಕ್ರೀಟ್ ಒಡೆದು ಹೋಗುವುದನ್ನು ಹೇಗೆ ತಡೆಗಟ್ಟುವುದು, ಅದನ್ನು ದುರಸ್ತಿ ಮಾಡಿ ಮನೆಯ ಕಟ್ಟಡವನ್ನು ಮತ್ತಷ್ಟು ದೃಢಪಡಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ:

Share:


ಈ ಅಂಶಗಳನ್ನು ಗಮನಿಸಿ

 

  • ಪ್ರತಿಕೂಲ ಹವಾಮಾನದಿಂದ, ತೇವಾಂಶ, ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಕೆ, ತುಕ್ಕಿನ ಕಾರಣದಿಂದ ಕಾಂಕ್ರೀಟ್ ಬಿರುಕು ಬಿಡಲು ಕಾರಣವಾಗುವ ಸಾಧ್ಯತೆಗಳು ಇವೆ

     

  • ಕಾಕ್ರೀಟ್ ಒಡೆದು ಹೋಗುವುದರಿಂದ ಮನೆಯ ಕಟ್ಟಡ ದೃಢತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜತೆಗೆ ಅದರ ಸೌಂದರ್ಯದ ಮೇಲೂ ಕರಾಳ ಛಾಯೆ ಮೂಡುತ್ತದೆ. ಸೂಕ್ತ ಸಂದರ್ಭದಲ್ಲಿ ಅದನ್ನು ದುರಸ್ತಿ ಮಾಡದೇ ಇದ್ದರೆ ದುರಸ್ತಿಗಾಗಿ ಬಹಳ ವೆಚ್ಚ ಮಾಡಬೇಕಾದ ಅನಿವಾರ್ಯತೆ ಉಂಟಾಗಬಹುದು.

     

  • ಬಿರುಕು ಬಿಟ್ಟ ಕಾಂಕ್ರೀಟ್ ದುರಸ್ತಿಗೆ ಹಲವು ವಿಧಗಳಲ್ಲಿ ದುರಸ್ತಿ ಮಾಡಲಾಗುತ್ತದೆ. ಈ ಪೈಕಿ ಇಪೋಕ್ಸಿಯನ್ನು ನೆಲದ ಮೇಲೆ ಬಳಿಯುವುದರ ಮೂಲಕ, ಬಿರುಕು ಬಿಟ್ಟ ಕಾಂಕ್ರೀಟನ್ನು ಕಿತ್ತು ಹಾಕಿ ಹೊಸತು ಹಾಕುವ ಮೂಲಕ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಅದಕ್ಕಾಗಿ ತಜ್ಞರ ಸಲಹೆ ಪಡೆದು ದುರಸ್ತಿ ಕಾರ್ಯ ನಡೆಸುವುದು ಉತ್ತಮ

     

  • ಉತ್ತಮ ಗುಣಮಟ್ಟದ ಸಿಮೆಂಟ್, ನೆಲದಲ್ಲಿ ಇರುವ ಬಿರುಕುಗಳನ್ನು ಸರಿಯಾಗಿ ಮುಚ್ಚದೇ ಇದ್ದರೆ, ಸೂಕ್ತ ರೀತಿಯ ತಂತ್ರಜ್ಞಾನ ಪದ್ಧತಿ ಅಳವಡಿಸದೇ ಇದ್ದರೆ ಮತ್ತು ಕಾಂಕ್ರೀಟ್ ಹಾಕಿದ ಬಳಿಕ ಸೂಕ್ತ ರೀತಿಯಲ್ಲಿ ನೆಲದಲ್ಲಿನ ಬಿರುಕುಗಳನ್ನು ಮುಚ್ಚದೇ ಇದ್ದಲ್ಲಿ ಇಂಥ ಸಮಸ್ಯೆಗಳು ಉದ್ಭವಿಸುತ್ತವೆ. ಜತೆಗೆ ಅದಕ್ಕೆ ಸರಿಯಾದ ರೀತಿಯಲ್ಲಿ ನಿರ್ವಹಣೆಯೂ ಬೇಕಾಗುತ್ತದೆ. ಹೀಗೆ ಮಾಡಿದಾಗ ಬಿರುಕಿನಿಂದ ಉಂಟಾಗುವ ಸಮಸ್ಯೆ ತಗ್ಗಿಸಬಹದು ಮತ್ತು ದೀರ್ಘ ಬಾಳಿಕೆಯನ್ನು ನಿರೀಕ್ಷಿಸಬಹುದು.



ಕಾಂಕ್ರೀಟ್ ನಲ್ಲಿ ಬಿರುಕು ಇರುವ ಅಂಶ ನಿಮ್ಮ ಮನೆಯ ತಳಪಾಯದ ಭದ್ರತೆಯನ್ನೇ ತಗ್ಗಿಸುವ ಅಪಾಯ ಇದೆ. ಇದರ ಜತೆಗೆ ಅದು ಕಿತ್ತು ಬರುವ ಸಾಧ್ಯತೆಯೂ ಇದೆ. ನೀರಿನ ಇಂಗುವಿಕೆ, ಕಾಂಕ್ರೀಟ್ ಗೆ ತುಕ್ಕು ಹಿಡಿಯುವಿಕೆ ಮತ್ತು ಹವಾಮಾನದಲ್ಲಿ ಉಂಟಾಗುವ ಅನಿರೀಕ್ಷಿತ ಬದಲಾವಣೆಗಳಿಂದಾಗಿ ಕಾಂಕ್ರಿಟ್ ಬಿರುಕು ಬಿಡಲು ಕಾರಣವಾಗಬಹುದು. ಜತೆಗೆ ಈ ಸಮಸ್ಯೆ ನಿಮ್ಮ ಮನೆಯ ಕಟ್ಟಡದ ಭದ್ರತೆಗೆ ಸವಾಲು ಒಡ್ಡಬಹುದು.


ಮನೆ ಕಟ್ಟುವ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಕಾಂಕ್ರೀಟ್ ಅನ್ನು ಬೆರೆಸುವುದರಿಂದ ಈ ಸಮಸ್ಯೆ ಬಾರದಂತೆ ಪ್ರಯತ್ನಿಸಬಹುದು. ಜತೆಗೆ ಅದರಿಂದ ಕಟ್ಟಡದ ಬಾಳಿಕೆ ಬರುವ ಅವಧಿ ಹೆಚ್ಚಲಿದೆ. ಸರಿಯಾದ ರೀತಿಯಲ್ಲಿ ಕಾಂಕ್ರೀಟ್ ಅನ್ನು ಬೆರೆಸಿ ಬಳಕೆ ಮಾಡುವುದರಿಂದ ಕಟ್ಟಡದ ತಳಪಾಯ ಭದ್ರವಾಗಿ ಇರಲಿದೆ. ಇದರಿಂದಾಗಿ ಕಾಂಕ್ರೀಟ್ ನಲ್ಲಿ ಬಿರುಕು ಮೂಡದಂತೆ ಮತ್ತು ನಿರೀಕ್ಷೆಗೂ ಮೀರಿ ದುರಸ್ತಿಗಾಗಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಎದುರುವುದಿಲ್ಲ. ಮನೆ ನಿರ್ಮಾಣದ ಅವಧಿಯಲ್ಲಿ ಕಾಂಕ್ರೀಟ್ ಬೆರೆಸುವಿಕೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡರೆ ಇಂಥ ಸಮಸ್ಯೆ ಬರುವುದಿಲ್ಲ

 

 



ಕಾಂಕ್ರೀಟ್ ಬಿರುಕು ಬಿಡುವುದು ಎಂದರೇನು?

ಕಾಂಕ್ರೀಟ್ ನಲ್ಲಿ ಬಿರುಕು ಬಿಡುವುದು ಎಂದರೆ ಚೆಕ್ಕೆಗಳಾಗಿ ಏಳುವುದು, ಸೀಳು ಬಿಡುವುದು ಅಥವಾ ಕಿತ್ತು ಬರುವುದು ಎಂದು ಹೆಸರಿಸಬಹುದು. ಕಟ್ಟಡದ ಒಳಕ್ಕೆ ನೀರು ಇಂಗುವುದು, ಹವಾಮಾನದಲ್ಲಿ ಬದಲಾವಣೆ ಅಥವಾ ಕಾಂಕ್ರೀಟ್ ಕಿತ್ತು ಬಂದು ಅಳವಡಿಸಲಾಗಿರುವ ಕಬ್ಬಿಣದ ರಾಡ್ ಗಳು ಕಂಡು ಬರುತ್ತವೆ. ಇದರಿಂದಾಗಿ ಸಮಯ ಕಳೆದಂತೆ ಅದು ದುರ್ಬಲಗೊಳ್ಳಲಿದೆ.

 

 

ಕಾಂಕ್ರೀಟ್ ಬಿರುಕು ಬಿಡಲು ಕಾರಣವೇನು?

ಹಲವು ಬಾಹ್ಯ ಕಾರಣಗಳಿಂದ ಕಾಂಕ್ರೀಟ್ ಬಿರುಕು ಬಿಡಲು ಕಾರಣವಾಗುತ್ತವೆ. ಈ ಪೈಕಿ ಕೆಲವೊಂದನ್ನು ಈ ಕೆಳಗೆ ವಿವರಿಸಲಾಗಿದೆ

 

  • ತೇವಾಂಶದ ಒಳ ಪ್ರವೇಶ: ಕಾಂಕ್ರೀಟ್ ನ ಒಳಗೆ ತೇವಾಂಶ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಚಳಿಗಾಲದ ಅವಧಿಯಲ್ಲಿ ಹೀಗೆ ಪ್ರವೇಶ ಮಾಡಿದ ನೀರು ಕಾಂಕ್ರೀಟ್ ಒಳಗೆ ವಿಸ್ತರಣೆಯಾಗಿ, ಮೇಲ್ಭಾಗದಲ್ಲಿರುವ ಕಾಂಕ್ರೀಟ್ ಬಿರುಕು ಬಿಡುವ ಸಾಧ್ಯತೆ ಇರುತ್ತದೆ,

 

  • ಕಾಂಕ್ರೀಟ್ ಗೆ ಹಾಕಿರುವ ಕಬ್ಬಿಣದ ಸರಳುಗಳಲ್ಲಿ ಕೊರೆತ: ಹೆಚ್ಚಿನ ಕಾಂಕ್ರೀಟ್ ಗಳ ಒಳಭಾಗದಲ್ಲಿ ಸರಳುಗಳನ್ನು ಹಾಕಿ ಅವುಗಳನ್ನು ಸದೃಢಗೊಳಿಸಿರುತ್ತಾರೆ. ರಾಸಾಯನಿಕಗಳು ಮತ್ತು ತೇವದ ಕಾರಣದಿಂದ ಆ ಸರಳುಗಳಿಗೆ ತುಕ್ಕು ಹಿಡಿದರೆ ಅವುಗಳು ಕಾಂಕ್ರೀಟ್ ನಿಂದ ಎದ್ದು ಬರುವ ಸಾಧ್ಯತೆ ಇರುತ್ತದೆ. ಈ ಒತ್ತಡದಿಂದ ಕಾಂಕ್ರೀಟ್ ಬಿರುಕು ಬಿಡುವ ಸಾಧ್ಯತೆಗಳು ಇರುತ್ತವೆ.

 



 

  • ಕಳಪೆ ಗುಣಮಟ್ಟದ ವಸ್ತುಗಳು: ನಿರ್ಮಾಣದ ವೇಳೆ ಕಳಪೆ ಗುಣಮಟ್ಟದ ಸಿಮೆಂಟ್ ಅಥವಾ ಸರಿಯಾದ ರೀತಿಯಲ್ಲಿ ಸಿಮೆಂಟ್ ಅನ್ನು ಬೆರೆಸದೇ ಇದ್ದರೆ ಕಾಂಕ್ರೀಟ್ ನ ಗುಣಮಟ್ಟ ದುರ್ಬಲವಾಗಿರುತ್ತದೆ.ಈ ಕಾರಣದಿಂದಲೂ ಕೂಡ ಅದು ಬಿರುಕು ಅಥವಾ ಸೀಳು ಬಿಡುವ ಸಾಧ್ಯತೆ ಇದೆ.

 



 

  • ಪರಿಸರದ ಕಾರಣಗಳು: ಪ್ರತಿಕೂಲ ಹವಾಮಾನ, ಉಪ್ಪಿನ ವಾತಾರಣಕ್ಕೆ ಸರಳು ತಾಗಿಕೊಂಡು ಇರುವುದು ಮತ್ತು ತಾಪಮಾನದಲ್ಲಿ ಬದಲಾವಣೆ ಕಾಂಕ್ರೀಟ್ ಶಿಥಿಲವಾಗಲು ಕಾರಣವಾಗಬಹುದು.


ಕಾಂಕ್ರೀಟ್ ಬಿರುಕು ಬಿಡುವುದರಿಂದ ಉಂಟಾಗುವ ಪರಿಣಾಮಗಳು

ಕಾಂಕ್ರೀಟ್ ಬಿರುಕು ಬಿಡುವ ವಿಚಾರ ಕೇವಲ ನಿರ್ಲಕ್ಷ್ಯದ ವಿಚಾರ ಅಲ್ಲ, ಅದನ್ನು ಸೂಕ್ಷ್ಮವಾಗಿ ಗಮನಿಸಿ ಸರಿಪಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ದುರಸ್ತಿಗಾಗಿ ದೊಡ್ಡ ಮೊತ್ತದ ಹಣ ವೆಚ್ಚ ಮಾಡುವ ಪರಿಸ್ಥಿತಿ ಎದುರಾಗಬಹುದು:

 

  • ಕಟ್ಟಡದ ಗಟ್ಟಿತನದಲ್ಲಿ ರಾಜಿ: ಕಾಂಕ್ರೀಟ್ ಬಿರುಕಿನ ಪ್ರಮಾಣ ಹೆಚ್ಚಾಗುವುದರಿಂದ ಅದು ಕಟ್ಟಡದ ಗಟ್ಟಿತನಕ್ಕೆ ಧಕ್ಕೆ ತರುವ ಅಪಾಯ ಇದೆ. ಇದರಿಂದಾಗಿ ನಿಧಾನವಾಗಿ ಭಾರವನ್ನು ಹೊರುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ವರ್ಷಗಳು ಕಳೆದಂತೆ ಅದನ್ನು ಗಟ್ಟಿಯಾಗಿ ಇರಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿ, ಭದ್ರತೆಗೆ ಅಪಾಯ ತಂದೊಡ್ಡಬಹುದು. ವಿಶೇಷವಾಗಿ ಗೋಡೆಗಳು, ಬೀಮ್ ಗಳು ಮತ್ತು ತಳಪಾಯಗಳು ಕುಸಿಯುವ ಸಾಧ್ಯತೆಗಳಿವೆ.

  • ಕಟ್ಟಡದ ಸೌಂದರ್ಯಕ್ಕೆ ಧಕ್ಕೆ: ಬಿರುಕು ಬಿಟ್ಟ, ಕಿತ್ತು ಬಂದಿರುವ ಮತ್ತು ಸೀಳಾಗಿರುವ ಕಾಂಕ್ರೀಟ್ ಮೇಲ್ಭಾಗ ನಿಧಾನವಾಗಿ ಕಟ್ಟಡದ ಸೌಂದರ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಅಧಿಕ. ಇದರಿಂದಾಗಿ ಕಟ್ಟಡದ ನಿರ್ವಹಣೆ ಸಮರ್ಪಕವಾಗಿಲ್ಲ ಮತ್ತು ಅದು ಹೊಸತಾಗಿದ್ದರೂ, ಹಳೆಯದಾಗಿರುವಂತೆ ಕಾಣುತ್ತದೆ. ಇದರಿಂದಾಗಿ ನಿಮ್ಮ ಆಸ್ತಿಯ ಮೌಲ್ಯ ತಗ್ಗುವ ಸಾಧ್ಯತೆ ಇದೆ.

  • ಹೆಚ್ಚಾಗಲಿರುವ ದುರಸ್ತಿ ವೆಚ್ಚ: ಬಿರುಕು ಬಿಟ್ಟಿರುವ ಕಾಂಕ್ರೀಟ್ ಅನ್ನು ದುರಸ್ತಿ ಮಾಡದೇ ಇದ್ದರೆ ಆ ಸಮಸ್ಯೆ ನಿವಾರಣೆಗೆ ಹೆಚ್ಚಿನ ಮೊತ್ತ ಬೇಕಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಆರಂಭದ ಹಂತದಲ್ಲಿ ಬಿರುಕು ಬಿಟ್ಟಿರುವುದನ್ನು ನೋಡಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡದೇ ಇದ್ದರೆ ದುರಸ್ತಿಯ ವೆಚ್ಚ ಅಧಿಕವಾಗುತ್ತದೆ. ಆರಂಭದಲ್ಲಿಯೇ ಬಿರುಕು ಗಮನಿಸಿ, ಅದನ್ನು ಪರಿಹರಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಿರುಕು ಬಿಡದಂತೆ ಮುನ್ನೆಚ್ಚರಿಕೆ ವಹಿಸಬೇಕು.

 

 

ಬಿರುಕು ಬಿಟ್ಟ ಕಾಂಕ್ರೀಟ್ ನ ದುರಸ್ತಿ ಹೇಗೆ?

ಬಿರುಕು ಬಿಟ್ಟಿರುವ ಕಾಂಕ್ರೀಟ್ ನ ಪ್ರಮಾಣ ನೋಡಿಕೊಂಡು ಅದನ್ನು ದುರಸ್ತಿ ಮಾಡುವ ವಿಧಾನವೂ ಅವಲಂಬಿತವಾಗುತ್ತದೆ. ಇಲ್ಲಿ ಕೆಲವು ವಿಧಾನಗಳನ್ನು ವಿವರಿಸಲಾಗಿದ್ದು, ಕಾಂಕ್ರೀಟ್ ತಳಪಾಯವನ್ನು ಮತ್ತಷ್ಟು ಸದೃಢಗೊಳಿಸಿ ದೀರ್ಘಾವಧಿಗೆ ಬಾಳಿಕೆ ಬರುವಂತೆ ಮಾಡಲಾಗುತ್ತದೆ

 

1. ಮೇಲ್ಮೈ ದುರಸ್ತಿ: 

 

  • ಇಪಾಕ್ಸಿ ಫಿಲ್ಲರ್ಸ್: ಕಾಂಕ್ರೀಟ್ ಹಾಕಿರುವ ನೆಲ ಬಿರುಕು ಬಿಟ್ಟಾಗ ಅವುಗಳನ್ನು ಮುಚ್ಚಿ, ಹಿಂದಿನಂತೆಯೇ ನಯವಾಗಿರುವ ನೆಲವನ್ನು ಹೊಂದಲು ಸಾಧ್ಯವಾಗುತ್ತದೆ. ಜತೆಗೆ ತ್ವಚೆ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಂಕ್ರೀಟ್ ನ ಒಳಕ್ಕೆ ನುಗ್ಗದಂತೆ ತಡೆಯುತ್ತದೆ.

 

  • ಮೇಲ್ಮೈಗೆ ಲೇಪನ: ಬಿರುಕು ಬಿಟ್ಟಿರುವ ಸ್ಥಳಕ್ಕೆ ದಪ್ಪವಾಗಿ ಕಾಂಕ್ರೀಟ್ ಅನ್ನು ಲೇಪಿಸಲಾಗುತ್ತದೆ. ಈ ಮೂಲಕ ಬಿರುಕು ಬಿಟ್ಟಿರುವ, ಎದ್ದು ಬಂದಿರುವ ಸ್ಥಳವನ್ನು ದುರಸ್ತಿ ಮಾಡಲಾಗುತ್ತದೆ. ಇಂಥ ಕ್ರಮದ ಮೂಲಕ ಹೆಚ್ಚು ಸಮಯ ಬಾಳಿಕೆ ಬರುವಂತೆ ಮಾಡಲಾಗುತ್ತದೆ ಮತ್ತು ಅದನ್ನು ಸುಂದರವಾಗಿ ಕಾಣುವಂತೆ ಮಾಡಲಾಗುತ್ತದೆ.

 

2. ಭಾರೀ ದುರಸ್ತಿ: 

 

  • ಹೊಸತಾಗಿ ಕಾಂಕ್ರೀಟ್ ಹಾಕುವುದು: ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳನ್ನು ತೆಗೆದು ಹಾಕಬೇಕು. ಅದರ ಬದಲಾಗಿ ಹೊಸತನ್ನು ಹಾಕಬೇಕು. 

 

  • ಬಿರುಕು ಬಿಟ್ಟಿರುವ ಭಾಗದ ದುರಸ್ತಿ: ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿರುವ ಕಾಂಕ್ರೀಟ್ ನ ಭಾಗಗಳನ್ನು ತುಂಡು ಮಾಡಿ ತೆಗೆಯಬೇಕು. ಆ ಜಾಗಕ್ಕೆ ಹೊಸತಾಗಿ ಕಾಂಕ್ರೀಟ್ ಹಾಕಬೇಕು. ಹೀಗೆ ಮಾಡುವ ಮೂಲಕ ಕಟ್ಟಡವನ್ನು ಮತ್ತಷ್ಟು ದೃಢಗೊಳಿಸಬಹುದು.

 

ಭಾರೀ ಪ್ರಮಾಣದಲ್ಲಿ ಹಾಳಾಗಿರುವ ಕಾಂಕ್ರೀಟ್ ಅನ್ನು ದುರಸ್ತಿ ಮಾಡಲು ವೃತ್ತಿಪರರ ಅಗತ್ಯ ಇರುತ್ತದೆ. ಅವರು ಅದನ್ನು ನೋಡಿ ಯಾವ ಪ್ರಮಾಣದಲ್ಲಿ ಕಾಂಕ್ರೀಟ್ ಹಾಳಾಗಿದೆ, ಅದನ್ನು ಯಾವ ರೀತಿ ದುರಸ್ತಿ ಮಾಡಬೇಕಾದೀತು, ದುರಸ್ತಿ ಮಾಡಿದ ಬಳಿಕ ಅದು ಎಷ್ಟು ಸಮಯದ ವರೆಗೆ ಬಾಳಿಕೆ ಬಂದೀತು, ನಿಮ್ಮ ಮನೆಯ ಕಟ್ಟಡಕ್ಕೆ ಮುಂದಿನ ವರ್ಷಗಳಲ್ಲಿ ಯಾವ ರೀತಿ ಹಾನಿಯೂ ಸಂಭವಿಸಲಾರದು ಎಂಬ ಅಂಶವನ್ನು ಅವರು ದೃಢೀಕರಿಸಲಿದ್ದಾರೆ,

 

 

ಕಾಂಕ್ರೀಟ್ ಬಿರುಕು ಬಿಡದಂತೆ ಕೈಗೊಳ್ಳಬೇಕಾದ ಕ್ರಮಗಳು

ಕಾಂಕ್ರೀಟ್ ಬಿರುಕು ಬಿಡದಂತೆ ಮಾಡಬೇಕಾದದ್ದು ಅತೀ ಅಗತ್ಯವಾಗಿದೆ. ಹೀಗೆ ಮಾಡುವ ಮೂಲಕ ನಿಮ್ಮ ಮನೆಯನ್ನು ಮತ್ತಷ್ಟು ದೀರ್ಘಾವಧಿಗೆ ಬಾಳಿಕೆ ಬರುವಂತೆ ಮಾಡಬೇಕಾದದ್ದು ಅಗತ್ಯವಾಗಿದೆ. ಅದಕ್ಕಾಗಿ ಈ ಕೆಳಗಿನ ಅಂಶಗಳನ್ನು ಕೈಗೊಳ್ಳಬೇಕು:

 

1. ಉತ್ತಮ ಗುಣಮಟ್ಟದ ಸಿಮೆಂಟ್:

The strength of your home’s foundation relies heavily on the quality of the materials used. This is why you should never compromise when it comes to the quality of cement. Opting for high-quality cement helps create a durable concrete mix that is resistant to cracking and damage. With better bonding properties, premium cement can withstand environmental challenges and minimise the risk of spalling, keeping your foundation secure and long-lasting.

 

2. ಮೇಲ್ಭಾಗವನ್ನು ಸೀಲ್ ಮಾಡಿ

ಕಾಂಕ್ರೀಟನ್ನು ತೇವಾಂಶದಿಂದ ಮತ್ತು ಹಾನಿಕಾರಕ ರಾಸಾಯನಿಕದಿಂದ ರಕ್ಷಿಸುವ ನಿಟ್ಟಿನಲ್ಲಿ ನೀರು ನಿರೋಧಕ ಅಥವಾ ಸೀಲಂಟ್ ಗಳನ್ನು ಲೇಪಿಸಬೇಕು. ಈ ಲೇಪನ ರಕ್ಷಣೆಯನ್ನು ಒದಗಿಸಿ ಕಾಂಕ್ರೀಟ್ ಹಾಳಾಗದಂತೆ ತಡೆಯುತ್ತದೆ. ಭಾರೀ ಪ್ರಮಾಣದಲ್ಲಿ ಚಳಿ ಅಥವಾ ಮಳೆ ಇರುವ ಸ್ಥಳಗಳಲ್ಲಿ ಕಾಂಕ್ರೀಟ್ ಗೆ ಈ ಅಂಶ ನೆರವಾಗುತ್ತದೆ.

 

3. ಸರಿಯಾದ ಪ್ರಮಾಣದಲ್ಲಿ ಅಳವಡಿಕೆ:

ಸರಿಯಾದ ಅನುಭವ ಇರುವ ಮತ್ತು ನಿಗದಿತ ಸಮಯಕ್ಕೆ ಕೆಲಸವನ್ನು ಮುಕ್ತಾಯಗೊಳಿಸುವ ಗುತ್ತಿಗೆದಾರರೇ ಅತ್ಯುತ್ತಮ ರೀತಿಯಲ್ಲಿ ಕಾಂಕ್ರೀಟ್ ಕೆಲಸ ಮಾಡಲು ಸಮರ್ಥರಾಗಿರುತ್ತಾರೆ. ಸರಿಯಾದ ರೀತಿಯಲ್ಲಿ ಕಾಂಕ್ರೀಟ್ ಮಿಶ್ರಣ, ಅದನ್ನು ಸುರಿಯುವ ರೀತಿ ಮತ್ತು ಒಣಗಿಸುವುದು ಅಗತ್ಯವಾಗುತ್ತದೆ. ಸರಿಯಾದ ರೀತಿಯಲ್ಲಿ ಕಾಂಕ್ರೀಟ್ ಒಣಗಿದರೆ ಅದರಲ್ಲಿ ಗಾಳಿ ತುಂಬುವುದು, ಒಂದೊಂದು ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಕಾಂಕ್ರೀಟ್ ಸರಿಯಾದ ರೀತಿ ಕೂರದೇ ಇರುವಂಥ ಸಮಸ್ಯೆಗಳು ದೂರವಾಗುತ್ತದೆ ಮತ್ತು ಕಾಂಕ್ರೀಟ್ ಬಿರುಕು ಬಿಡುವುದಿಲ್ಲ. ಕೌಶಲ್ಯಯುಕ್ತ ಗುತ್ತಿಗೆದಾರರು ಮನೆ ನಿರ್ಮಾಣದ ವಿವಿಧ ವಸ್ತುಗಳನ್ನು ಬಳಕೆ ಮಾಡಲು ಮತ್ತು ವಿವಿಧ ಪರಿಸ್ಥಿತಿ ನಿಭಾಯಿಸಲು ಶಕ್ತರಾಗಿರುತ್ತಾರೆ.

 

4. ಸರಿಯಾದ ರೀತಿಯಲ್ಲಿ ನಿರ್ವಹಣೆ:

ಕಾಲಕ್ಕೆ ಅನುಗುಣವಾಗಿ ನಿಮ್ಮ ಮನೆಯ ಕಟ್ಟಡದ ಕಾಂಕ್ರೀಟ್ ಹಾಕಿದ ಸ್ಥಳದ ಪರಿಶೀಲನೆ ಅಗತ್ಯ. ಈ ವೇಳೆ, ಬಿರುಕಿನ ಸಮಸ್ಯೆಗಳು ಉಂಟಾಗಿದ್ದದ್ದು ಕಂಡು ಬಂದರೆ ಅದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಬೇಕು. ಸಣ್ಣ ಪ್ರಮಾಣದ ಬಿರುಕು, ಬಣ್ಣ ಕಳೆದುಕೊಳ್ಳುವುದು ಅಥವಾ ಜಾರುವ ಹಂತವನ್ನು ಗುರುತಿಸಿ. ಇಂಥ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಗುರುತಿಸಿ ದುರಸ್ತಿ ಮಾಡಬೇಕು ಅಥವಾ ಸಣ್ಣ ಪ್ರಮಾಣದ ನಿರ್ವಹಣೆಯ ಅಗತ್ಯವಿದ್ದರೆ ಅದನ್ನು ಕೈಗೊಳ್ಳಬೇಕು. ಸಮಸ್ಯೆಯ ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳುವ ಮೂಲಕ ಅದು ಕೈಮೀರಿ ಹೋಗಿ ಹೆಚ್ಚು ಹಣ ಖರ್ಚಾಗುವುದನ್ನು ತಡೆಯಬಹುದು

 

ಈ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿಮ್ಮ ಮನೆಯ ಕಟ್ಟಡಕ್ಕೆ ಹಾಕಿರುವ ಕಾಂಕ್ರೀಟ್ ಬಿರುಕು ಬಿಡುವುದನ್ನು ತಪ್ಪಿಸಲು ಸಾಧ್ಯವಿದೆ ಮತ್ತು ಅದರ ಬಾಳ್ವಿಕೆಯನ್ನು ವಿಸ್ತರಿಸಲು ಸಾಧ್ಯವಿದೆ. ಜತೆಗೆ ಆ ಕಟ್ಟಡ ಸುರಕ್ಷಿತವಾಗಿ ಇರಿಸುವ ಮೂಲಕ ವರ್ಷಗಳ ಕಾಲ ಚೆಂದವಾಗಿ ಕಾಣುವಂತೆ ಮಾಡಲು ಸಾಧ್ಯವಿದೆ.

 



ನೀವು ಜೀವನದಲ್ಲಿ ಒಂದೇ ಬಾರಿ ಮನೆಯನ್ನು ಕಟ್ಟಲಿದ್ದೀರಿ. ಹೀಗಾಗಿ, ಕಾಂಕ್ರೀಟ್ ಬಿರುಕು ಬಿಡುವ ಸಮಸ್ಯೆಯನ್ನು ಅದರ ಆರಂಭದಲ್ಲಿಯೇ ಪರಿಹರಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ಸಿಮೆಂಟ್ ಬಳಕೆ ಮತ್ತು ಸರಿಯಾದ ರೀತಿಯಲ್ಲಿ ಕಟ್ಟಡ ನಿರ್ಮಾಣ ತಂತ್ರಜ್ಞಾನ ಬಳಕೆ ಮಾಡುವುದರ ಮೂಲಕ ಕಾಂಕ್ರೀಟ್ ಹಾಳಾಗದಂತೆ ತಡೆಯುವುದು ಸಾಧ್ಯವಿದೆ. ಆರಂಭದಲ್ಲಿಯೇ ಇಂಥ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಕಿಸೆಗೆ ಭಾರ ಎನಿಸುವಂಥ ದುರಸ್ತಿಗಳನ್ನು ತಪ್ಪಿಸಿಕೊಳ್ಳಬಹುದು. ಜತೆಗೆ ಕಟ್ಟಡವನ್ನು ಸರಿಯಾಗಿ ನೋಡಿಕೊಳ್ಳುವ ಮೂಲಕ ಅದನ್ನು ದೀರ್ಘ ಕಾಲದ ವರೆಗೆ ಬಾಳಿಕೆ ಬರುವಂತೆ ಮಾಡಲೂ ಸಾಧ್ಯವಿದೆ.




ಪದೇ ಪದೆ ಕೇಳುವ ಪ್ರಶ್ನೆಗಳು

 

1. ಕಾಂಕ್ರೀಟ್ ಬಿರುಕು ಬಿಡಲು ಇರುವ ಕಾರಣಗಳೇನು?

ಕಾಂಕ್ರೀಟ್ ಗೆ ತೇವದ ಪ್ರಮಾಣ ಒಳ ಪ್ರವೇಶಿಸುವ ಕಾರಣದಿಂದ ಸಾಮಾನ್ಯವಾಗಿ ಬಿರುಕು ಬಿಡುತ್ತದೆ. ಮುಂದಿನ ಹಂತದಲ್ಲಿ ಅದರ ಪ್ರಮಾಣ ದೊಡ್ಡದಾಗುತ್ತದೆ. ಕಾಂಕ್ರೀಟ್ ಗೆ ಹಾಕಿರುವ ಸರಳುಗಳಿಗೆ ತುಕ್ಕು ಹಿಡಿಯುವುದು, ಕಳಪೆ ಗುಣಮಟ್ಟದ ಕಾಂಕ್ರೀಟ್, ಕಾಂಕ್ರೀಟ್ ಹಾಕಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇದ್ದದ್ದು ಅಥವಾ ಮಿತಿಗಿಂತ ಹೆಚ್ಚಾಗಿ ಅದರ ಮೇಲೆ ಭಾರ ಇರಿಸುವುದು ಬಿರುಕಿಗೆ ಕಾರಣವಾಗುತ್ತದೆ.

 

2. ಕಾಂಕ್ರೀಟ್ ಬಿರುಕು ಬಿಡುವುದು ಅಪಾಯಕಾರಿಯೇ?

ಹೌದು. ಇದು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಕಾಂಕ್ರೀಟ್ ಬಿರುಕು ಕಟ್ಟಡವನ್ನು ದುರ್ಬಲಗೊಳಿಸುವ ಅಪಾಯವಿದೆ. ಹೀಗಾಗಿ, ಅದು ಸುರಕ್ಷತೆಗೂ ಪ್ರಶ್ನೆಯಾಗಿ ಕಾಡಲಿದೆ. ಬಿರುಕು ಬಿಟ್ಟ ಕಾಂಕ್ರೀಟ್ ನ ತುಂಡುಗಳು ಬೀಳಲು ಆರಂಭಿಸಿದಾಗ ಈ ಪ್ರಶ್ನೆ ಉದ್ಭವವಾಗುತ್ತದೆ.

 

3. ಕಾಂಕ್ರೀಟ್ ಬೀಳುವುದು ಗಂಭೀರ ಸಮಸ್ಯೆಯೇ?

ಅದು ಬಿರುಕು ಯಾವ ಹಂತದಲ್ಲಿ ಇದೆ ಎನ್ನುವದನ್ನು ಅವಲಂಬಿಸಿಕೊಂಡು ಇದೆ. ಕೆಲವೊಂದು ಸಂದರ್ಭದಲ್ಲಿ ಅದು ಕೇವಲ ಸಣ್ಣ ವಿಚಾರವಾಗಿರುತ್ತದೆ. ಕಾಂಕ್ರೀಟ್ ಬಿರುಕು ಬಿಡುವುದು ಎನ್ನುವುದು ಮುಂದೆ ಭಾರೀ ಸಮಸ್ಯೆ ಇದೆ ಎಂಬ ಅಂಶದ ಮುನ್ಸೂಚನೆಯೂ ಇರುವ ಸಾಧ್ಯತೆ ಇದೆ. ಅದನ್ನು ನಿರ್ಲಕ್ಷಿಸುವುದರಿಂದ ಆ ಅಂಶ ಭಾರೀ ಸಮಸ್ಯೆಯಾಗಿ ಪರಿಣಮಿಸಲಿದೆ, ಅದರ ದುರಸ್ತಿಗಾಗಿ ಹೆಚ್ಚಿನ ಮೊತ್ತ ವಿನಿಯೋಗ ಮಾಡಬೇಕಾಗಿ ಬರಬಹುದು.

 

4. ಬಿರುಕು ಬಿಡುವುದು ಮತ್ತು ಕಾಂಕ್ರೀಟ್ ಕುಸಿಯುವುದರ ನಡುವಿನ ವ್ಯತ್ಯಾಸವೇನು?

ಇದರಲ್ಲಿ ಒಳಗಿನಿಂದಲೇ ಕಾಂಕ್ರೀಟ್ ಹಂತ ಹಂತವಾಗಿ ಕುಸಿಯುತ್ತಾ ಬರುತ್ತದೆ. ಆದರೆ, ಬಿರುಕು ಎನ್ನುವುದು ಸಾಮಾನ್ಯವಾಗಿ ಕಣ್ಣಿಗೆ ಕಾಣುತ್ತದೆ.

 

5. ಕಾಂಕ್ರೀಟ್ ಬಿರುಕು ಬಿಡುವುದನ್ನು ದುರಸ್ತಿ ಮಾಡಲು ಸಾಧ್ಯವಿದೆ?

ಅದಕ್ಕೆ ವೆಚ್ಚವಾಗುವ ಅಂಶ ಭಾರೀ ಕಡಿಮೆ. ಸಣ್ಣ ಪ್ರಮಾಣದಲ್ಲಿ ಕಾಂಕ್ರೀಟ್ ಬಿರುಕು ಬಿಟ್ಟಿದ್ದರೆ, ಅದರ ದುರಸ್ತಿಗೆ ಹೆಚ್ಚು ಹಣ ಖರ್ಚು ಮಾಡಬೇಕಾದ ಅಗತ್ಯವಿಲ್ಲ. ಆದರೆ ಬಿರುಕು ದೊಡ್ಡ ಗಾತ್ರದಲ್ಲಿ ಇದ್ದರೆ ಅದರ ದುರಸ್ತಿಗೆ ಹೆಚ್ಚು ಮೊತ್ತ ವಿನಿಯೋಗ ಆಗುವ ಸಾಧ್ಯತೆ ಇದೆ.

 

6. ಕಾಂಕ್ರೀಟ್ ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆಯೇ?

ಹೌದು. ಇದೊಂದು ಸಾಮಾನ್ಯ ಸಮಸ್ಯೆಯೇ. ಹವಾಮಾನ ಪ್ರತಿಕೂಲವಾಗಿ ಇರುವ ಸ್ಥಳಗಳಲ್ಲಿ, ಸೂಕ್ತ ರೀತಿಯಲ್ಲಿ ಕಾಂಕ್ರೀಟ್ ಅನ್ನು ಸರಿಯಾದ ರೀತಿಯಲ್ಲಿ ಹಾಕದೇ ಇದ್ದರೆ ಇಂಥ ಸಮಸ್ಯೆ ಬರುತ್ತದೆ.


ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....