ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿಗೋಡೆಯ ವಾಟರ್‌ಪ್ರೂಫಿಂಗ್ ಮತ್ತು ಅದರ ವಿಧಗಳು: ಸಂಪೂರ್ಣ ಮಾರ್ಗದರ್ಶಿ

ದುಬಾರಿ ರಿಪೇರಿಗಳನ್ನು ತಪ್ಪಿಸಲು ಮತ್ತು ಆರೋಗ್ಯಕರ ಜೀವನ ಪರಿಸರವನ್ನು ಕಾಪಾಡಿಕೊಳ್ಳಲು ನಿಮ್ಮ ಆಂತರಿಕ ಮತ್ತು ಬಾಹ್ಯ ಗೋಡೆಗಳನ್ನು ವಾಟರ್‌ಪ್ರೂಫಿಂಗ್ ಮಾಡುವುದು ಬಹಳ ಮುಖ್ಯವಾಗಿದೆ. ಗೋಡೆಗಳಲ್ಲಿನ ತೇವಾಂಶವು ಕಟ್ಟಡದ ರಚನೆಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಅದು ಶಿಲೀಂಧ್ರ ಬೆಳವಣಿಗೆಗೆ ಕಾರಣವಾಗಬಹುದು, ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ನಿಮ್ಮ ಮನೆಯ ಮೌಲ್ಯವನ್ನೂ ಕಡಿಮೆ ಮಾಡುತ್ತದೆ. ಹಲವಾರು ವಿಧದ ಗೋಡೆಯ ವಾಟರ್‌ಪ್ರೂಫಿಂಗ್ ವಿಧಾನಗಳು ಲಭ್ಯವಿದೆ, ಆ ಪ್ರತಿಯೊಂದನ್ನೂ ಬೇರೆಬೇರೆ ಅಗತ್ಯತೆಗಳು ಮತ್ತು ಬಜೆಟ್‌ಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಈ ಬ್ಲಾಗ್‌ನಲ್ಲಿ, ನಿಮ್ಮ ಗೋಡೆಗಳ ವಾಟರ್‌ಪ್ರೂಫಿಂಗ್ ಮಾಡಲು ಇರುವ ಕೆಲವು ಜನಪ್ರಿಯ ಮತ್ತು ಪರಿಣಾಮಕಾರಿ ವಿಧಾನಗಳನ್ನು ನಾವು ಚರ್ಚಿಸುತ್ತೇವೆ.

Share:


ದುಬಾರಿ ರಿಪೇರಿಗಳನ್ನು ತಪ್ಪಿಸಲು ಮತ್ತು ಆರೋಗ್ಯಕರ ಜೀವನ ಪರಿಸರವನ್ನು ಕಾಪಾಡಿಕೊಳ್ಳಲು ನಿಮ್ಮ ಆಂತರಿಕ ಮತ್ತು ಬಾಹ್ಯ ಗೋಡೆಗಳನ್ನು ವಾಟರ್‌ಪ್ರೂಫಿಂಗ್ ಮಾಡುವುದು ಬಹಳ ಮುಖ್ಯವಾಗಿದೆ. ಗೋಡೆಗಳಲ್ಲಿನ ತೇವಾಂಶವು ಕಟ್ಟಡದ ರಚನೆಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಅದು ಶಿಲೀಂಧ್ರ ಬೆಳವಣಿಗೆಗೆ ಕಾರಣವಾಗಬಹುದು, ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ನಿಮ್ಮ ಮನೆಯ ಮೌಲ್ಯವನ್ನೂ ಕಡಿಮೆ ಮಾಡುತ್ತದೆ. ಹಲವಾರು ವಿಧದ ಗೋಡೆಯ ವಾಟರ್‌ಪ್ರೂಫಿಂಗ್ ವಿಧಾನಗಳು ಲಭ್ಯವಿದೆ, ಆ ಪ್ರತಿಯೊಂದನ್ನೂ ಬೇರೆಬೇರೆ ಅಗತ್ಯತೆಗಳು ಮತ್ತು ಬಜೆಟ್‌ಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಈ ಬ್ಲಾಗ್‌ನಲ್ಲಿ, ನಿಮ್ಮ ಗೋಡೆಗಳ ವಾಟರ್‌ಪ್ರೂಫಿಂಗ್ ಮಾಡಲು ಇರುವ ಕೆಲವು ಜನಪ್ರಿಯ ಮತ್ತು ಪರಿಣಾಮಕಾರಿ ವಿಧಾನಗಳನ್ನು ನಾವು ಚರ್ಚಿಸುತ್ತೇವೆ.ಗೋಡೆ ವಾಟರ್‌ಪ್ರೂಫಿಂಗ್ ಎಂದರೇನು?

ಗೋಡೆಯ ವಾಟರ್‌ಪ್ರೂಫಿಂಗ್ ಅಂದರೆ ಕಟ್ಟಡದ ಗೋಡೆಗಳ ಮೂಲಕ ನೀರು ನುಸುಳುವುದನ್ನು ತಡೆಯಲು ಬಳಸಲಾಗುವ ಒಂದು ವಿಶೇಷ ತಂತ್ರವಾಗಿದೆ. ಇದು ನೀರನ್ನು ಹೊರಗಿಡುವ ವಾಟರ್‌ಪ್ರೂಫಿಂಗ್ ತಡೆಯನ್ನು ರಚಿಸುವುದು ವಿವಿಧ ವಾಟರ್‌ಪ್ರೂಫಿಂಗ್ ಸಾಮಗ್ರಿಗಳು ಮತ್ತು ವಿಧಾನಗಳ ಅಳವಡಿಕೆಯನ್ನು ಒಳಗೊಂಡಿರುತ್ತದೆ. ಭಾರೀ ಮಳೆ, ಹೆಚ್ಚಿನ ಆರ್ದ್ರತೆ ಅಥವಾ ತೇವಾಂಶದ ಇತರ ಮೂಲಗಳಿಗೆ ಒಡ್ಡಿಕೊಳ್ಳುವ ಪ್ರದೇಶಗಳಿಗೆ ಈ ರಕ್ಷಣಾತ್ಮಕ ಕ್ರಮವು ವಿಶೇಷವಾಗಿ ಮುಖ್ಯವಾಗಿದೆ.

 

ಹೊರ ಮತ್ತು ಒಳ ಗೋಡೆಗಳಿಗೆ, ಎರಡಕ್ಕೂ, ವಾಟರ್‌ಪ್ರೂಫಿಂಗ್ ಮಾಡಬಹುದು, ಮತ್ತು ಇದು ನೀರು-ಸಂಬಂಧಿತ ಸಮಸ್ಯೆಗಳಾದ ಸೋರುವಿಕೆ, ತೇವ, ಜವಳು, ಶಿಲೀಂಧ್ರ ಬೆಳವಣಿಗೆ ಮತ್ತು ರಚನಾತ್ಮಕ ಹಾನಿಗಳ ವಿರುದ್ಧ ಒಂದು ಪರಿಣಾಮಕಾರಿ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಗೋಡೆಗಳನ್ನು ಮುಚ್ಚುವ ಮೂಲಕ ಮತ್ತು ನೀರು ಒಳ ಬಸಿಯುವುದನ್ನು ತಡೆಯುವ ಮೂಲಕ, ಗೋಡೆಯ ವಾಟರ್‌ಪ್ರೂಫಿಂಗ್ ಕಟ್ಟಡದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ರಚನೆಗೆ ಸುದೀರ್ಘ ಜೀವಿತಾವಧಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.


ಗೋಡೆ ವಾಟರ್‌ಪ್ರೂಫಿಂಗ್‌ನ ಪ್ರಯೋಜನಗಳು1. ನೀರಿನಿಂದಾಗುವ ಹಾನಿಯ ವಿರುದ್ಧ ರಕ್ಷಣೆ

ಗೋಡೆಯ ವಾಟರ್‌ಪ್ರೂಫಿಂಗ್‌ನ ಪ್ರಾಥಮಿಕ ಪ್ರಯೋಜನವೆಂದರೆ ಕಟ್ಟಡಗಳನ್ನು ನೀರು-ಸಂಬಂಧಿತ ಹಾನಿಯಿಂದ ರಕ್ಷಿಸುವಲ್ಲಿನ ಅದರ ಸಾಮರ್ಥ್ಯ. ಒಂದು ಜಲನಿರೋಧಕ ತಡೆಗೋಡೆಯನ್ನು ಸೃಷ್ಟಿಸುವ ಮೂಲಕ, ಗೋಡೆಗಳೊಳಗೆ ನೀರು ಹರಿಯುವುದನ್ನು ತಡೆಯುತ್ತದೆ, ಇದು ಲೊಡ್ದಾಗುವಿಕೆ, ಕೊಳೆತ ಮತ್ತು ರಾಚನಿಕ ಘಟಕಗಳ ಕ್ಷೀಣತೆಗೆ ಕಾರಣವಾಗಬಹುದು. ಭಾರೀ ಮಳೆ ಅಥವಾ ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಈ ರಕ್ಷಣೆಯು ವಿಶೇಷವಾಗಿ ನಿರ್ಣಾಯಕವಾಗಿದೆ.

 

2. ಇದು ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ

ತೇವಾಂಶಭರಿತ ಮತ್ತು ಹಸಿ ಪರಿಸರ ಶಿಲೀಂಧ್ರದ ಸಂತಾನೋತ್ಪತ್ತಿಯ ನೆಲೆಯಾದ್ದು, ಇದು ಒಳಾಂಗಣ ಗಾಳಿಯ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ಆರೋಗ್ಯಕ್ಕೆ ಅಪಾಯಗಳನ್ನು ಉಂಟುಮಾಡುತ್ತದೆ. ಗೋಡೆಗಳ ವಾಟರ್‌ಪ್ರೂಫಿಂಗ್ ಲೇಪನವು ತೇವಾಂಶದ ಶೇಖರಣೆಯನ್ನು ತಡೆಯುತ್ತದೆ, ಆಮೂಲಕ ಗೋಡೆಗಳು ಮತ್ತು ಇತರ ಮೇಲ್ಮೈಗಳ ಮೇಲೆ ಶಿಲೀಂಧ್ರ ಬೆಳೆಯುವುದಕ್ಕೆ ಇದು ಹೆಚ್ಚಿನ ಸವಾಲೊಡ್ಡುತ್ತದೆ.

 

3. ರಾಚನಿಕ ಸಮಗ್ರತೆಯನ್ನು ವೃದ್ಧಿಸುತ್ತದೆ

ನೀರು ಗೋಡೆಗಳೊಳಗೆ ನುಸುಳುತ್ತಿದ್ದರೆ, ಅದು ಸಮಯ ಕಳೆದಂತೆ ಕಟ್ಟಡದ ರಾಚನಿಕ ಸಮಗ್ರತೆಯನ್ನು ದುರ್ಬಲಗೊಳಿಸುತ್ತದೆ. ವಾಟರ್‌ಪ್ರೂಫಿಂಗ್ ಗೋಡೆಗಳನ್ನು ಮರುಬಲಪಡಿಸುತ್ತದೆ, ಬಾಹ್ಯ ಶಕ್ತಿಗಳ ಪ್ರತಿ ಅವುಗಳ ಪ್ರತಿರೋಧವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ರಚನೆಯ ಒಟ್ಟಾರೆ ಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ.

 

4. ವೆಚ್ಚ-ಪರಿಣಾಮಕಾರಿ ಪರಿಹಾರ

ಗೋಡೆಯ ವಾಟರ್‌ಪ್ರೂಫಿಂಗ್‌ನಲ್ಲಿ ಮಾಡಲಾಗುವ ಆರಂಭಿಕ ಹೂಡಿಕೆಯು ಗಣನೀಯವೆಂದು ತೋರುತ್ತದೆಯಾದರೂ, ದೀರ್ಘಾವಧಿಯಲ್ಲಿ ಇದು ವೆಚ್ಚ-ಪರಿಣಾಮಕಾರಿ ಪರಿಹಾರವಾಗಿದೆ ಎಂದು ಸಾಬೀತಾಗುತ್ತದೆ. ನೀರಿನ ಹಾನಿಯನ್ನು ತಡೆಗಟ್ಟುವ ಮೂಲಕ, ಆಸ್ತಿ ಮಾಲೀಕರು ದುಬಾರಿ ರಿಪೇರಿ ಮತ್ತು ನಿರ್ವಹಣೆ ಕೆಲಸದಿಂದ ತಪ್ಪಿಸಿಕೊಳ್ಳಬಹುದು, ಅಂತಿಮವಾಗಿ ಕಟ್ಟಡದ ಜೀವನದಲ್ಲಿ ಹಣವನ್ನು ಉಳಿಸಬಹುದು.

 

5. ಉತ್ತಮ ಎನರ್ಜಿ ಎಫಿಷಿಯನ್ಸಿ

ವಾಟರ್‌ಪ್ರೂಫಿಂಗ್ ಕಟ್ಟಡದ ಉತ್ತಮ ಎನರ್ಜಿ ಎಫಿಷಿಯನ್ಸಿಗೆ ಕೊಡುಗೆ ನೀಡುತ್ತದೆ. ಗೋಡೆಗಳಲ್ಲಿನ ಬಿರುಕುಗಳು ಮತ್ತು ಸೀಳುಗಳನ್ನು ಮುಚ್ಚುವ ಮೂಲಕ, ಇದು ಗಾಳಿಯ ಸೋರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಉಷ್ಣತೆಯ ಹಾದಾಟವನ್ನು ತಡೆಯುತ್ತದೆ, ಇದು ಹೆಚ್ಚು ಪರಿಣಾಮಕಾರಿ ತಾಪನ ಮತ್ತು ತಂಪಾಗಿಸುವ ವ್ಯವಸ್ಥೆಗಳಿಗೆ ಕಾರಣವಾಗುತ್ತದೆ.

 

6. ಆಸ್ತಿಯ ಮೌಲ್ಯವನ್ನು ವರ್ಧಿಸುತ್ತದೆ

ಸರಿಯಾದ ವಾಟರ್‌ಪ್ರೂಫಿಂಗ್‌ಬಳಸಿ  ಉತ್ತಮವಾಗಿ ನಿರ್ವಹಿಸಲ್ಪಟ್ಟ ಆಸ್ತಿಯು ಸಂಭಾವ್ಯ ಖರೀದಿದಾರರಿಗೆ ಹೆಚ್ಚು ಆಕರ್ಷಕವಾಗಿರುತ್ತದೆ. ಇದು ಕಟ್ಟಡಕ್ಕೆ ಮೌಲ್ಯವನ್ನು ಸೇರಿಸುತ್ತದೆ ಮತ್ತು ನೀವು ಎಂದಾದರೂ ಆಸ್ತಿಯನ್ನು ಮಾರ್ಕೆಟ್‌ನಲ್ಲಿ ಮಾರಲು ನಿರ್ಧರಿಸಿದರೆ ಅದು ಒಂದು ಗಮನಾರ್ಹ ಸೇಲ್ಲಿಂಗ್ ಪಾಯಿಂಟ್ ಆಗಬಹುದು.

 

ಗೋಡೆಯ ವಾಟರ್‌ಪ್ರೂಫಿಂಗ್ ನಿಮ್ಮ ಆಸ್ತಿಯನ್ನು ರಕ್ಷಿಸುವುದಲ್ಲದೆ ಸುರಕ್ಷಿತ ಮತ್ತು ಆರಾಮದಾಯಕ ಜೀವನ ಅಥವಾ ಕೆಲಸದ ವಾತಾವರಣವನ್ನು ಖಾತ್ರಿಪಡಿಸುವ ಒಂದು ಚತುರ ಹೂಡಿಕೆಯಾಗಿದೆ. ಅದು ಒಂದು ಹೊಸ ನಿರ್ಮಾಣವಾಗಲಿ ಅಥವಾ ಅಸ್ತಿತ್ವದಲ್ಲಿರುವ ಕಟ್ಟಡವಾಗಿರಲಿ, ಗೋಡೆಗಳನ್ನು ವಾಟರ್‌ಪ್ರೂಫಿಂಗ್ ಮಾಡುವುದರಿಂದ ಲಭಿಸುವ ಅನುಕೂಲಗಳು ಈ ರಕ್ಷಣಾತ್ಮಕ ಕ್ರಮವು ಬರಿ ಒಂದು ಐಷಾರಾಮವಾಗಿರುವ ಬದಲಿಗೆ ಒಂದು ಅಗತ್ಯವಾಗಿದೆ ಎಂಬುದು ಸ್ಪಷ್ಟ.


ಗೋಡೆ ವಾಟರ್‌ಪ್ರೂಫಿಂಗ್ ವಿಧಗಳು

ಗೋಡೆಯ ವಾಟರ್‌ಪ್ರೂಫಿಂಗ್ ಅನ್ನು ಎರಡು ಮುಖ್ಯ ವಿಧಗಳಾಗಿ ವಿಂಗಡಿಸಬಹುದು: ಹೊರ ಮತ್ತು ಒಳ ವಾಟರ್‌ಪ್ರೂಫಿಂಗ್. ಈ ಪ್ರತಿಯೊಂದು ವಿಧವೂ ಬೇರೆಬೇರೆ ವಿಧಾನಗಳು ಮತ್ತು ಸಾಮಗ್ರಿಗಳನ್ನು ಒಳಗೊಂಡಿರುತ್ತದೆ, ಅವು ನಿರ್ದಿಷ್ಟ ಅಗತ್ಯತೆಗಳು ಮತ್ತು ಪರಿಸ್ಥಿತಿಗಳಿಗೆ ಸೂಕ್ತವಾಗಿರುತ್ತವೆ.

 

 

1. ಹೊರ ಗೋಡೆಯ ವಾಟರ್‌ಪ್ರೂಫಿಂಗ್ಬಾಹ್ಯ ತೇವಾಂಶದ ಹಾನಿಕಾರಕ ಪರಿಣಾಮಗಳಿಂದ ಕಟ್ಟಡಗಳನ್ನು ರಕ್ಷಿಸಲು ಹೊರ ಗೋಡೆಗಳ ಮೇಲೆ ವಾಟರ್‌ಪ್ರೂಫಿಂಗ್ ಮಾಡುವುದು ಮಹತ್ವಪೂರ್ಣವಾಗಿದೆ. ರಕ್ಷಣಾತ್ಮಕ ಪದರದ ವಾಟರ್‌ಪ್ರೂಫಿಂಗ್ ರಾಸಾಯನಿಕಗಳು ಬಾಹ್ಯ ಗೋಡೆಗಳನ್ನು ತಮ್ಮ ಸುಂದರ ನೋಟವನ್ನು ಕಾಪಾಡಿಕೊಳ್ಳಲು ಮತ್ತು ಸಂಭಾವ್ಯ ನೀರು ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.

 

a. ಸಿಮೆಂಟ್ ಆಧಾರದ ವಾಟರ್‌ಪ್ರೂಫಿಂಗ್ಈ ವಿಧಾನವು ಸಿಮೆಂಟ್ ಆಧಾರಿತ ವಾಟರ್‌ಪ್ರೂಫಿಂಗ್ ಸಂಯುಕ್ತಗಳನ್ನು ನೇರವಾಗಿ ಹೊರ ಗೋಡೆಗಳ ಮೇಲೆ ಲೇಪಿಸುವುದನ್ನು ಒಳಗೊಳ್ಳುತ್ತದೆ. ಈ ಸಂಯುಕ್ತಗಳು ಒಂದು ದಟ್ಟವಾದ, ರಕ್ಷಣಾತ್ಮಕ ಪದರವನ್ನು ರೂಪಿಸುತ್ತವೆ, ಅದು ಗೋಡೆಗಳ ಮೂಲಕ ನೀರು ಬಸಿಯುವುದನ್ನು ತಡೆಯುತ್ತದೆ. ಸಿಮೆಂಟಿಯಸ್ ವಾಟರ್‌ಪ್ರೂಫಿಂಗ್ ಬಹಳ ತಾಳಿಕೆ ಬರುವದು ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲದು, ಆಕಾರಣ ಇದು ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಬಾಹ್ಯ ಗೋಡೆಗಳಿಗೆ ಸೂಕ್ತವಾಗಿರುತ್ತದೆ.

 

b. ದ್ರವರೂಪಿ ವಾಟರ್‌ಪ್ರೂಫಿಂಗ್ ಪೊರೆಗೋಡೆಗಳ ಹೊರ ವಾಟರ್‌ಪ್ರೂಫಿಂಗ್‌ಗಾಗಿ ದ್ರವರೂಪಿ ವಾಟರ್‌ಪ್ರೂಫಿಂಗ್ ಪೊರೆಗಳು ಬಹಳ ಜನಪ್ರಿಯ ಆಯ್ಕೆಗಳಾಗಿವೆ. ದ್ರವರೂಪಿ ಲೇಪನವನ್ನಾಗಿ ಬಳಿಯಲಾಗುವ ಇವು ಗೋಡೆಗಳ ಮೇಲೆ ಒಂದು ತಡೆರಹಿತ, ಫ್ಲೆಕ್ಸಿಬಲ್ ಮತ್ತು ವಾಟರ್‌ಪ್ರೂಫ್ ತಡೆಗೋಡೆಯನ್ನು ರೂಪಿಸುತ್ತವೆ. ಈ ಪೊರೆಗಳು ವಿವಿಧ ಮೇಲ್ಮೈಗಳಿಗೆ ಸುಲಭವಾಗಿ ಅಂಟಿಕೊಳ್ಳುತ್ತವೆ ಮತ್ತು ಕಟ್ಟಡದಲ್ಲಿ ಯಾವುದೇ ಬಿರುಕು ಬಿಡದಂತೆ ಚಲನೆಗಳಿಗೆ ಅನುವು ಮಾಡಿಕೊಡಬಹುದು, ನೀರಿನ ನುಸುಳುವಿಕೆ ವಿರುದ್ಧ ಅತ್ಯುತ್ತಮ ದೀರ್ಘಕಾಲೀನ ರಕ್ಷಣೆಯನ್ನು ಒದಗಿಸುತ್ತದೆ.

 

c. ಲಿಕ್ವಿಡ್ ಬಿಟುಮಿನಸ್ ಮೆಂಬರೇನ್ ವಾಟರ್‌ಪ್ರೂಫಿಂಗ್ಬಿಟುಮಿನಸ್ ವಾಟರ್‌ಪ್ರೂಫಿಂಗ್ ಹೊರ ಗೋಡೆಗಳಿಗೆ ಬಿಟುಮೆನ್-ಆಧಾರಿತ ವಸ್ತುಗಳನ್ನು ಬಳಸಿ ವಾಟರ್‌ಪ್ರೂಫಿಂಗ್ ಮಾಡುವುದನ್ನು ಒಳಗೊಂಡ ಒಂದು ಕಾಲದ-ಪರೀಕ್ಷೆಯನ್ನು ಎದುರಿಸಿ ನಿಂತ ವಿಧಾನವಾಗಿದೆ. ಗರಿಷ್ಠ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಇದನ್ನು ಅನೇಕ ಪದರಗಳಲ್ಲಿ ಲೇಪಿಸಲಾಗುತ್ತದೆ. ಬಿಟುಮಿನಸ್ ಪೊರೆಗಳು UV ಕಿರಣಗಳ ಪ್ರತಿ ನಿರೋಧಕವಾಗಿರುತ್ತವೆ ಮತ್ತು ತಾಪಮಾನ ವ್ಯತ್ಯಾಸಗಳನ್ನು ತಡೆದುಕೊಳ್ಳಬಲ್ಲವು, ಹಾಗಾಗಿ ಅವುಗಳನ್ನು ಹೊರಾಂಗಣ ಅನ್ವಯಗಳಿಗೆ ಸೂಕ್ತವಾಗಿಸುತ್ತದೆ.

 

d. ಮೆಂಬ್ರೇನ್ ವಾಟರ್‌ಪ್ರೂಫಿಂಗ್

ಮೆಂಬ್ರೇನ್ ವಾಟರ್‌ಪ್ರೂಫಿಂಗ್ ವ್ಯವಸ್ಥೆಗಳು ಮಾರ್ಪಡಿಸಿದ ಬಿಟುಮೆನ್, PVC, ಅಥವಾ EPDM ನಂತಹ ವಸ್ತುಗಳಿಂದ ತಯಾರಿಸಿದ ಪೂರ್ವನಿರ್ಮಿತ ಶೀಟುಗಳನ್ನು ಒಳಗೊಂಡಿರುತ್ತವೆ. ಈ ಹಾಳೆಗಳನ್ನು ಹೊರ ಗೋಡೆಗಳಿಗೆ ಅಳವಡಿಸಲಾಗುತ್ತದೆ, ಆಮೂಲಕ ನೀರಿನ ಬಸಿಯುವಿಕೆ ವಿರುದ್ಧ ಒಂದು ನಿರಂತರ ತಡೆಗೋಡೆಯನ್ನು ರೂಪಿಸಿದಂತಾಗುತ್ತದೆ. ಮೆಂಬ್ರೇನ್ ವಾಟರ್‌ಪ್ರೂಫಿಂಗ್ ಅದರ ಅನುಸ್ಥಾಪನೆಯ ಸುಲಭತೆಗೆ ಹೆಸರುವಾಸಿಯಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಕೆಳದರ್ಜೆಯ ಅನ್ವಯಗಳಿಗೆ ಮತ್ತು ಬುನಾದಿ ಗೋಡೆಗಳಿಗೆ ಬಳಸಲಾಗುತ್ತದೆ.

 

 

2. ಒಳ ಗೋಡೆಯ ವಾಟರ್‌ಪ್ರೂಫಿಂಗ್ಒಳ ಗೋಡೆಗಳನ್ನು ವಾಟರ್‌ಪ್ರೂಫ್ ಮಾಡುವುದು ತೇವಾಂಶ ಮತ್ತು ನೀರು ನುಸುಳುವಿಕೆಗಳಿಂದ ಒಳಾಂಗಣ ಜಾಗಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಒಳಾಂಗಣಗಳನ್ನು ವಾಟರ್‌ಪ್ರೂಫಿಂಗ್ ದ್ರವದೊಂದಿಗೆ ಸುರಕ್ಷಿತಗೊಳಿಸುವುದು ಆರಾಮದಾಯಕ ಮತ್ತು ಆರೋಗ್ಯಕರ ಮನೆ ಪರಿಸರವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

 

a. ಪೇಂಟ್ ಮತ್ತು ಸೀಲಾಂಟ್ಗಳುವಾಟರ್‌ಪ್ರೂಫ್ ಬಣ್ಣಗಳು ಮತ್ತು ಸೀಲಾಂಟ್ಗಳ ಮೂಲಕ ಗೋಡೆಗಳ ಒಳಾಂಗಣ ವಾಟರ್‌ಪ್ರೂಫಿಂಗ್ ಅನ್ನು ಸಾಧಿಸುವುದು ಸಾಧ್ಯ. ತೇವಾಂಶವು ವಾಸಿಸುವ ಸ್ಥಳಗಳಿಗೆ ಪ್ರವೇಶಿಸುವುದನ್ನು ತಡೆಯುವ ರಕ್ಷಣಾತ್ಮಕ ತಡೆಗೋಡೆಯನ್ನು ಸೃಷ್ಟಿಸಲು ಒಳ ಗೋಡೆಗಳಿಗೆ ಈ ಉತ್ಪನ್ನಗಳನ್ನು ಅನ್ವಯಿಸಲಾಗುತ್ತದೆ. ಅವು ನೀರಿನ ಪ್ರತಿ ಒಂದು ಮಟ್ಟದ ಪ್ರತಿರೋಧವನ್ನು ನೀಡುತ್ತವೆಯಾದರೂ, ಅವು ಬಾತ್ರೂಮ್‌ಗಳು ಮತ್ತು ಅಡಿಗೆಮನೆಗಳಂತಹ ಕನಿಷ್ಠ ಪ್ರಮಾಣದಲ್ಲಿ ನೀರಿಗೆ ತೆರೆದುಕೊಂಡಿರುವ ಪ್ರದೇಶಗಳಿಗೆ ಅವು ಅಧಿಕ ಸೂಕ್ತವಾಗಿವೆ.

 

b. ವಾಟರ್‌ಪ್ರೂಫ್ ಮೆಂಬ್ರೇನ್‌ಗಳುಆಂತರಿಕ ವಾಟರ್‌ಪ್ರೂಫಿಂಗ್ ಮೆಂಬ್ರೇನ್‌ಗಳನ್ನು ಗೋಡೆಗಳ ಒಳ ಭಾಗದಲ್ಲಿ ಸ್ಥಾಪಿಸಲಾಗಿದೆ. ಅವು ನೀರಿನ ವಿರುದ್ಧ ಒಂದು ದೃಢವಾದ ತಡೆಗೋಡೆಯನ್ನು ಒದಗಿಸುತ್ತವೆ ಮತ್ತು ಹೊರ ವಾಟರ್‌ಪ್ರೂಫಿಂಗ್ ವ್ಯವಸ್ಥೆ ಸೂಕ್ತವಾಗಿಲ್ಲದಂತಿರುವ ಪ್ರದೇಶಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿರುತ್ತವೆ. ವಾಟರ್‌ಪ್ರೂಫಿಂಗ್ ಮೆಂಬ್ರೇನ್‌ಗಳನ್ನು ಸಾಮಾನ್ಯವಾಗಿ ಬೇಸ್‌ಮೆಂಟ್‌ಗಳಲ್ಲಿ ಮತ್ತು ಬುನಾದಿಯ ಗೋಡೆಗಳಲ್ಲಿ ನೀರು ಬಸಿದು ಒಳಹೋಗದಂತೆ ಇರಿಸಲು ಬಳಸಲಾಗುತ್ತದೆ.

 

c. ಡ್ರೇನೇಜ್ ಬೋರ್ಡ್‌ಗಳುಡ್ರೇನೇಜ್ ಬೋರ್ಡ್‌ಗಳನ್ನು ನೀರಿನ ಸೋರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಒಳ ಗೋಡೆಗಳ ಮೇಲೆ ಅಳವಡಿಸಲಾಗುತ್ತದೆ. ಈ ಬೋರ್ಡ್‌ಗಳು ನೀರನ್ನು ಡ್ರೇನೇಜ್ ವ್ಯವಸ್ಥೆಗೆ ನಿರ್ದೇಶಿಸುವ ಕಾಲುವೆಗಳನ್ನು ಹೊಂದಿವೆ, ಅವುಗಳ ಮೂಲಕ ನೀರು ಗೋಡೆಗಳೊಳಗೆ ಸಂಗ್ರಹವಾಗುವುದಿಲ್ಲ ಎಂಬುದನ್ನು ಖಚಿತಪಡಿಸಲಾಗುತ್ತದೆ. ನೀರಿನ ಹರಿವನ್ನು ನಿಯಂತ್ರಿಸಲು ಇತರ ಒಳ ವಾಟರ್‌ಪ್ರೂಫಿಂಗ್ ವಿಧಾನಗಳೊಂದಿಗಿನ ಸಹಯೋಗದಲ್ಲಿ ಡ್ರೇನೇಜ್ ಬೋರ್ಡ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

 

d. ಸಿಮೆಂಟಿಯಸ್ ಕೋಟಿಂಗ್

ಸಿಮೆಂಟಿಯಸ್ ಕೋಟಿಂಗ್‌ಗಳನ್ನು ನೇರವಾಗಿ ಒಳ ಗೋಡೆಗಳಿಗೆ ಅನ್ವಯಿಸಲಾಗುತ್ತದೆ ಮತ್ತು ಮೇಲ್ಮೈಯನ್ನು ಭೇದಿಸುವುದರ ಮೂಲಕ ಮತ್ತು ನೀರಿನ ಪ್ರವೇಶವನ್ನು ತಡೆಯುವ ಮೂಲಕ ವಾಟರ್‌ಪ್ರೂಫಿಂಗ್ ತಡೆಗೋಡೆಯನ್ನು ರಚಿಸುತ್ತದೆ. ಅವುಗಳನ್ನು ಹೆಚ್ಚಾಗಿ ತೇವಾಂಶದ ವಿರುದ್ಧ ಒಟ್ಟಾರೆ ರಕ್ಷಣೆಯನ್ನು ಹೆಚ್ಚಿಸಲು ಇತರ ವಾಟರ್‌ಪ್ರೂಫಿಂಗ್ ವಿಧಾನಗಳೊಂದಿಗೆ ಬಳಸಲಾಗುತ್ತದೆ.ಕೊನೆಯಲ್ಲಿ, ಗೋಡೆಗಳ ವಾಟರ್‌ಪ್ರೂಫಿಂಗ್ ನಿಮ್ಮ ಮನೆ ಅಥವಾ ಕಟ್ಟಡದ ಬಾಳಿಕೆ ಮತ್ತು ದೀರ್ಘಾಯುಷ್ಯವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ರಕ್ಷಣಾತ್ಮಕ ಕ್ರಮವಾಗಿದೆ. ಗೋಡೆಗಳ ಮೇಲೆ ಜವಳು ಅಡರುವುದರಿಂದಾಗುವ ಹಾನಿಕಾರಕ ಪರಿಣಾಮಗಳು ರಾಚನಿಕ ಕ್ಷೀಣತೆ, ಶಿಲೀಂಧ್ರ ಬೆಳವಣಿಗೆ ಮತ್ತು ಸಂಪೂರ್ಣ ರಚನೆಯ ಸಮಗ್ರತೆಯನ್ನು ಕುಂಠಿತಗೊಳಿಸುವ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಸೂಕ್ತವಾದ ಗೋಡೆಯ ವಾಟರ್‌ಪ್ರೂಫಿಂಗ್ ವಿಧಾನಗಳು ಅಥವಾ ಗೋಡೆಗಳಿಗೆ ವಾಟರ್‌ಪ್ರೂಫಿಂಗ್ ರಾಸಾಯನಿಕಗಳಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ನಿಮ್ಮ ಆಸ್ತಿಯನ್ನು ನೀರು-ಸಂಬಂಧಿತ ಹಾನಿಯಿಂದ ರಕ್ಷಿಸಿಕೊಳ್ಳಬಹುದು, ಆರೋಗ್ಯಕರ ಜೀವನ ಪರಿಸರವನ್ನು ಕಾಪಾಡಿಕೊಳ್ಳಬಹುದು ಮತ್ತು ದೀರ್ಘಾವಧಿಯಲ್ಲಿ ದುಬಾರಿ ದುರಸ್ತಿಯಿಂದ ತಪ್ಪಿಸಿಕೊಳ್ಳಬಹುದು.ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

1. ಜವಳು ಅಡರುವುದು ಅಥವಾ ತೇವಾಂಶವು ಒಂದು ಗಂಭೀರ ಸಮಸ್ಯೆಯೇ?

ತೇವಾಂಶವು ನಿಜವಾಗಿಯೂ ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು, ಏಕೆಂದರೆ ಇದು ಶಿಲೀಂಧ್ರ ಬೆಳವಣಿಗೆ, ರಾಚನಿಕ ಕ್ಷೀಣತೆ ಮತ್ತು ಕಳಪೆ ಒಳಾಂಗಣ ಗಾಳಿಯ ಗುಣಮಟ್ಟದಿಂದಾಗಿ ಆರೋಗ್ಯದ ಅಪಾಯಗಳು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಉಪಚರಿಸದೆ ಬಿಟ್ಟರೆ, ಒದ್ದೆಗೊಂಡ ಗೋಡೆಗಳು ಕಟ್ಟಡದ ರಚನೆಯನ್ನು ಗಮನಾರ್ಹವಾಗಿ ಹಾನಿಗೊಳಿಸಬಹುದು ಮತ್ತು ವಾಸಿಸಲು ಅದರ ಸೂಕ್ತತೆಯನ್ನು ಕುಂಠಿತಗೊಳಿಸಬಹುದು.

 

2. ಜವಳು ಅಡರಿದ ಗೋಡೆಗೆ ವಾಟರ್‌ಪ್ರೂಫಿಂಗ್ ಮಾಡಬಹುದೇ?

ಜವಳು ಅಡರಿದ ಗೋಡೆಗೆ ವಾಟರ್‌ಪ್ರೂಫಿಂಗ್ ಮಾಡುವುದನ್ನು ಸಾಮಾನ್ಯವಾಗಿ ಶಿಫಾರಸು ಮಾಡುವುದಿಲ್ಲ. ಯಾವುದೇ ವಾಟರ್‌ಪ್ರೂಫಿಂಗ್ ಪರಿಹಾರವನ್ನು ಅನ್ವಯಿಸುವ ಮೊದಲು, ತೇವಾಂಶದ ಮೂಲ ಕಾರಣವನ್ನು ಪರಿಹರಿಸುವುದು ಅತ್ಯಗತ್ಯ, ಇದು ಸೋರಿಕೆಗಳನ್ನು ಸರಿಪಡಿಸುವುದು, ಒಳಚರಂಡಿಯನ್ನು ಸುಧಾರಿಸುವುದು ಅಥವಾ ಘನೀಕರಣದ ಸಮಸ್ಯೆಗಳನ್ನು ಪರಿಹರಿಸುವುದನ್ನು ಒಳಗೊಂಡಿರಬಹುದು. ಅಂತಹ ಗೋಡೆಯು ಒಣಗಿದ ನಂತರ ಮತ್ತು ಮೂಲ ಕಾರಣವನ್ನು ಪರಿಹರಿಸಿದ ನಂತರ, ಭವಿಷ್ಯದ ತೇವವನ್ನು ತಡೆಗಟ್ಟಲು ವಾಟರ್‌ಪ್ರೂಫಿಂಗ್ ಕ್ರಮಗಳನ್ನು ಅನ್ವಯಿಸಬಹುದು.

 

3. ಗೋಡೆಗಳ ಮೇಲೆ ಜವಳು ಅಡರಲು ಕಾರಣವೇನು?

ಗೋಡೆಗಳ ಮೇಲೆ ತೇವವು ವಿವಿಧ ಅಂಶಗಳಿಂದ ಉಂಟಾಗಬಹುದು, ಛಾವಣಿಗಳಿಂದ ನೀರು ಸೋರಿಕೆ, ದೋಷಯುಕ್ತ ಕೊಳಾಯಿ ವ್ಯವಸ್ಥೆ, ನೆಲದಿಂದ ಏರುತ್ತಿರುವ ತೇವ, ಅಸಮರ್ಪಕ ವಾತಾಯನ ಮತ್ತು ತಾಪಮಾನ ಮತ್ತು ಆರ್ದ್ರತೆಯ ವ್ಯತ್ಯಾಸಗಳಿಂದಾಗುವ ಘನೀಕರಣ.

 

4. ಜವಳು ಅಥವಾ ತೇವದ ಚಿಹ್ನೆಗಳಾವುವು?

ಗೋಡೆಗಳ ಮೇಲೆ ತೇವದ ಸಾಮಾನ್ಯ ಚಿಹ್ನೆಗಳು ನೀರಿನ ಕಲೆಗಳು, ಬಣ್ಣ ಅಥವಾ ವಾಲ್‌ಪೇಪರ್ ಸಿಪ್ಪೆಸುಲಿಯುವಿಕೆ , ಬೂಜಿನ ವಾಸನೆ, ಗೋಚರಿಸುವಂತ ಶಿಲೀಂಧ್ರ ಬೆಳವಣಿಗೆ ಮತ್ತು ಪೀಡಿತ ಪ್ರದೇಶಗಳಲ್ಲಿ ಒದ್ದೆ ಅಥವಾ ತೇವಾಂಶ ಸ್ಪರ್ಶ ಹತ್ತುವುದು.

 

5. ಕಿಟಕಿಗಳನ್ನು ತೆರೆಯುವುದರಿಂದ ತೇವಾಂಶ ಕಡಿಮೆಯಾಗುತ್ತದೆಯೇ?

ಕಿಟಕಿಗಳನ್ನು ತೆರೆಯುವುದು, ಗಾಳಿ ಹೊರಹೋಗುವಂತೆ ಮಾಡಿ ಮತ್ತು ತಾಜಾ ಗಾಳಿಯ ಪರಿಚಲನೆಗೆ ಅನುವು ಮಾಡಿಕೊಡುತ್ತ, ವಾತಾಯನವನ್ನು ಸುಧಾರಿಸುವ ಮೂಲಕ ಜವುಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾತ್ರೂಮ್‌ಗಳು ಮತ್ತು ಅಡಿಗೆಮನೆಗಳಂತಹ ತೇವಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಸರಿಯಾದ ವಾತಾಯನ ಅತ್ಯಗತ್ಯ.


ಸಂಬಂಧಿತ ಲೇಖನಗಳು
ಶಿಫಾರಸು ಮಾಡಿದ ವೀಡಿಯೊಗಳು
ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....