ಮನೆ ನಿರ್ಮಾಣದಲ್ಲಿ ಉಂಟಾಗುವ ವಿಳಂಬವನ್ನು ಸುಸೂತ್ರ ಯೋಜನೆ ಜಾರಿಯಿಂದ ನಿರ್ವಹಿಸಬಹುದು. ಈ ರೀತಿ ನಿರ್ವಹಿಸುವುದರಿಂದ ನಿಮ್ಮ ಮನೆ ನಿರ್ಮಾಣದ ಕೆಲಸ ಸುಸೂತ್ರವಾಗಿ ನಡೆಯಬಹುದು:
1. ಸುದೀರ್ಘ ವೇಳಾಪಟ್ಟಿ ಸಿದ್ಧಪಡಿಸಿ: ನಿರ್ಮಾಣ ಕಾರ್ಯದ ವೇಳೆ ಉಂಟಾಗಬಹುದಾದ ಅಪಾಯಗಳ ಬಗ್ಗೆ ಗುತ್ತಿಗೆದಾರನ ಬಗ್ಗೆ ಚರ್ಚೆ ನಡೆಸಿ. ಜತೆಗೆ ಕೆಲಸ ಪೂರ್ತಿಗೊಳಿಸಲು ಹೆಚ್ಚುವರಿ ಕಾಲಮಿತಿ ಹಾಕಿಕೊಳ್ಳಿ. ನಿಮ್ಮ ಗುತ್ತಿಗೆದಾರನ ಅನುಭವ ಅಗತ್ಯಕ್ಕೆ ತಕ್ಕಂತೆ ವೇಳಾಪಟ್ಟಿ ಸಿದ್ಧಪಡಿಸಲು ನೆರವಾಗುತ್ತದೆ. ಇದರಿಂದ ವಿಳಂಬ ನಿರ್ವಹಿಸಲು ಸಾಧ್ಯವಾಗುತ್ತದೆ.
2. ನಿರಂತರವಾಗಿ ಕೆಲಸದ ಪ್ರಗತಿ ಗಮನಿಸಿ: ಪದೇ ಪದೇ ಸೈಟ್ ಗೆ ಹೋಗಿ ಮತ್ತು ಗುತ್ತಿಗೆದಾರ ನಿಮಗೆ ನೀಡುವ ಕೆಲಸದ ಮಾಹಿತಿ ನೆರವಾಗಲಿದೆ. ಇದರಿಂದಾಗಿ ಅಲ್ಲಿ ಇರುವ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿದೆ. ಇದರಿಂದಾಗಿ ಮನೆ ನಿರ್ಮಾಣ ಕೆಲಸ ಸುಗಮವಾಗಿ ಮುಂದುವರಿಯಲಿದೆ.
3. ನಂಬಿಕಸ್ತ ತಜ್ಞರನ್ನು ನೇಮಿಸಿ: ಮನೆಯ ನಿರ್ಮಾಣದ ಕೆಲಸಕ್ಕೆ ನಂಬಿಕಸ್ತ ಗುತ್ತಿಗೆದಾರನನ್ನು ನೇಮಿಸಿ. ಆತನ ಬಳಿ ಪರಿಣತ ಕಾರ್ಮಿಕರು, ಮನೆ ನಿರ್ಮಾಣಕ್ಕೆ ಬೇಕಾಗಿರುವ ವಸ್ತುಗಳ ಪೂರೈಕೆ, ಅದನ್ನು ಪೂರೈಸುವವರ ಜತೆ ನಿರಂತರ ಸಂಪರ್ಕ ಗುತ್ತಿಗೆದಾರನಿಗೆ ಇರುತ್ತದೆ.
4. ಗುಣಮಟ್ಟದ ವಸ್ತುಗಳ ಬಳಕೆ: ನಿಮ್ಮ ಮನೆಯ ಕೆಲಸ ವಹಿಸಿಕೊಂಡ ಗುತ್ತಿಗೆದಾರನಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಪೂರೈಸುವವರ ಜತೆಗೆ ನಿಕಟ ಸಂಪರ್ಕ ಇರಬೇಕು. ಇದರಿಂದಾಗಿ ವಿಳಂಬ ತಪ್ಪುತ್ತದೆ ಮತ್ತು ವಸ್ತುಗಳ ಕೊರತೆಯಿಂದ ಉಂಟಾಗುವ ಅನಾನುಕೂಲತೆ ತಪ್ಪುತ್ತದೆ.
5. ಅಪಾಯ ತಗ್ಗಿಸಿ: ಉತ್ತಮ ಗುತ್ತಿಗೆದಾರ ಮನೆ ನಿರ್ಮಾಣದ ವೇಳೆ ಉಂಟಾಗುವ ಪ್ರತಿಕೂಲ ಹವಾಮಾನ ಅಥವಾ ಮಾರುಕಟ್ಟೆಯಲ್ಲಿನ ಏರಿಳಿತ ಸೇರಿದಂತೆ ಹಲವು ಸಮಸ್ಯೆಗಳನ್ನು ನಿರೀಕ್ಷಿಸಿ ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾನೆ.
ಉತ್ತಮ ಕಾರ್ಮಿಕರ ತಂಡವನ್ನು ಹೊಂದಿರುವ ಯಶಸ್ವೀ ಗುತ್ತಿಗೆದಾರ ನಿಗದಿತ ಸಮಯಕ್ಕೆ ಅನುಗುಣವಾಗಿ ಗುಣಮಟ್ಟದ ಕೆಲಸದ ಮೂಲಕ ನಿಮ್ಮ ಮನೆಯ ಕೆಲಸ ಪೂರ್ತಿಗೊಳಿಸಲಿದ್ದಾನೆ. ನೀವು ಜೀವನದಲ್ಲಿ ಒಂದು ಬಾರಿ ಮಾತ್ರ ಮನೆ ಕಟ್ಟಲಿರುವುದರಿಂದ ಗುತ್ತಿಗೆದಾರನ ಆಯ್ಕೆಯಲ್ಲಿ ರಾಜಿ ಮಾಡಿಕೊಳ್ಳುವುದು ಬೇಡ.