ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಮನೆಗೆ ಎಲೆಕ್ಟ್ರಿಕಲ್‌ ವೈರಿಂಗ್‌ ಮಾಡಲು ಮಾರ್ಗದರ್ಶಿ

Share:


ಈ ಅಂಶಗಳನ್ನು ಗಮನಿಸಿ

 

  • ಸುರಕ್ಷತೆ ಮತ್ತು ಅನುಕೂಲ ಗಮನದಲ್ಲಿಟ್ಟುಕೊಂಡು ಔಟ್‌ಲೆಟ್‌ಗಳು ಮತ್ತು ಸ್ವಿಚ್‌ಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಅಳವಡಿಸಿ.
 
  • ಮನೆಗೆ ಎಲೆಕ್ಟ್ರಿಕಲ್‌ ವೈರಿಂಗ್‌ ಮಾಡುವಾಗ ವಿದ್ಯುತ್‌ ದಕ್ಷತೆಗೆ ಗಮನ ನೀಡುವ ಮೂಲಕ ವಿದ್ಯುತ್‌ ಬಿಲ್‌ ಕಡಿಮೆ ಮಾಡಿಕೊಳ್ಳಿ
 
  • ನಿಮ್ಮ ಮನೆಯ ವಿನ್ಯಾಸ ಮತ್ತು ರಚನೆಗೆ ತಕ್ಕಂತೆ ವಿದ್ಯುತ್‌ ಸ್ವಿಚ್‌ಗಳನ್ನು ಕಸ್ಟಮೈಜ್‌ ಮಾಡಿಕೊಳ್ಳಿ
 
  • ನಿಮ್ಮ ಮನೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮನೆಗೆ ಸಮರ್ಪಕವಾದ ವೈರಿಂಗ್‌ ಸಿಸ್ಟಮ್‌ ಆಯ್ಕೆ ಮಾಡಿ
 
  • ಸಾಧ್ಯವಿರುವಲ್ಲಿ ವಿದ್ಯುತ್‌ ವೈರಿಂಗ್‌ ಮರೆಮಾಚುವಂತೆ ಮಾಡುವ ಮೂಲಕ ಮನೆಯ ಸೌಂದರ್ಯ ಕಳೆಗುಂದದಂತೆ ನೋಡಿಕೊಳ್ಳಿ
 
  • ಮನೆಯ ಎಲ್ಲಾ ಎಲೆಕ್ಟ್ರಿಕಲ್‌ ವೈರಿಂಗ್‌ಗಳು ಸ್ಥಳೀಯ ಪ್ರಾಧಿಕಾರಗಳ ಸುರಕ್ಷತಾ ಮಾನದಂಡಗಳು ಮತ್ತು ನಿಯಮಾವಳಿಗಳಿಗೆ ತಕ್ಕಂತೆ ಇರುವುದನ್ನು ಖಚಿತಪಡಿಸಿ.


ವಿದ್ಯುತ್‌ ವೈರಿಂಗ್‌ ಎನ್ನುವುದು ಮನೆಯ ಕಾರ್ಯನಿರ್ವಹಣೆ ಮತ್ತು ಸುರಕ್ಷತೆಗೆ ಅಡಿಪಾಯ ಎನ್ನಬಹುದು. ಹೊಸ ಮನೆ ನಿರ್ಮಾಣ ಅಥವಾ ಹಳೆಯ ಮನೆಯ ನವೀಕರಣದ ಸಂದರ್ಭದಲ್ಲಿ ವೈರಿಂಗ್‌ ಕುರಿತು ಸಮರ್ಪಕವಾಗಿ ಯೋಜನೆ ಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ನಿಮ್ಮ ಮನೆಯ ವಿದ್ಯುತ್‌ ವ್ಯವಸ್ಥೆಯು ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿರಲು ಬೇಕಾದ ಅಮೂಲ್ಯ ಸಲಹೆಗಳನ್ನು ಮತ್ತು ಪರಿಗಣಿಸಬೇಕಾದ ಅಂಶಗಳನ್ನು ಈ ಮಾರ್ಗದರ್ಶಿಯಲ್ಲಿ ನೀಡಲಾಗಿದೆ.

 

 

 


ಮನೆಗೆ ವಿದ್ಯುತ್‌ ವೈರ್‌ ಅಳವಡಿಸುವಾಗ ಪರಿಗಣಿಸಬೇಕಾದ ಅಂಶಗಳು



1) ಔಟ್‌ಲೆಟ್‌ ಜೋಡಿಸುವ ಸ್ಥಳಗಳು

ವಿದ್ಯುತ್‌ ವೈರಿಂಗ್‌ ಸಮಯದಲ್ಲಿ ಔಟ್‌ಲೆಟ್‌ಗಳನ್ನು(ಪವರ್‌ ಪಾಯಿಂಟ್‌ಗಳನ್ನು) ಜೋಡಿಸುವಾಗ ಸೌಕರ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಮನೆಯ ವಿದ್ಯುತ್‌ ವೈರ್‌ ಯೋಜನೆ ಮಾಡುವಾಗ ಹೆಚ್ಚು ವಿದ್ಯುತ್‌ ಅಗತ್ಯವಿರುವ ಸ್ಥಳಗಳನ್ನು ಗಮನದಲ್ಲಿಟ್ಟುಕೊಳ್ಳಿ. ಅಡುಗೆಮನೆ, ಹಾಲ್‌ ಮತ್ತು ಬೆಡ್‌ರೂಂನಲ್ಲಿ ಹೆಚ್ಚು ವಿದ್ಯುತ್‌ ಪಾಯಿಂಟ್‌ಗಳ ಅಗತ್ಯವಿರುತ್ತದೆ. ವಿಶೇಷವಾಗಿ ಕೌಂಟರ್‌ಟಾಪ್‌ಗಳು, ಮನರಂಜನಾ ಪ್ರದೇಶಗಳು ಮತ್ತು ಬೆಡ್‌ ಪಕ್ಕದ ಟೇಬಲ್‌ಗಳಲ್ಲಿ ಹೆಚ್ಚು ವಿದ್ಯುತ್‌ ಔಟ್‌ಲೆಟ್‌ಗಳ ಅಗತ್ಯವಿರುತ್ತದೆ.  

 

ಮನೆಯ ಹೊರಗಡೆ ಗಾರ್ಡನ್‌ ಟೂಲ್‌ಗಳಿಗೆ ಅಥವಾ ಹಾಲಿಡೇ ಲೈಟ್‌ಗಳಿಗೆ ಬಳಸಲು ಸೂಕ್ತವಾಗುವಂತೆ ಅವಶ್ಯವಿರುವಷ್ಟು ವಿದ್ಯುತ್‌ ಪಾಯಿಂಟ್‌ಗಳನ್ನು ಇಡಲು ಮರೆಯಬೇಡಿ. ಕಿಟಕಿ ಅಥವಾ ಬಾಗಿಲುಗಳ ಹತ್ತಿರ ಸ್ವಿಚ್‌ ಬೋರ್ಡ್‌ ಇತ್ಯಾದಿ ಔಟ್‌ಲೆಟ್‌ಗಳನ್ನು ಅಳವಡಿಸಿದರೆ ವಾಕ್ಯೂಮಿಂಗ್‌ ಮತ್ತು ಇತರೆ ಕೆಲಸಗಳಿಗೆ ಹೆಚ್ಚು ಅನುಕೂಲವಾಗುತ್ತದೆ.

 

2) ವಿದ್ಯುತ್‌ ದಕ್ಷತೆ 

ಆಧುನಿಕ ಎಲೆಕ್ಟ್ರಿಕಲ್‌ ವ್ಯವಸ್ಥೆಗಳಲ್ಲಿ ವಿದ್ಯುತ್‌ ದಕ್ಷತೆ ಅಥವಾ ವಿದ್ಯುತ್‌ ಉಳಿತಾಯ ಮಾಡಲು ಹೆಚ್ಚು ಆದ್ಯತೆ ನೀಡಬೇಕು. ವಿದ್ಯುತ್‌ ಉಳಿತಾಯ ಮಾಡುವ ವೈರಿಂಗ್‌ ಮತ್ತು ಉಪಕರಣಗಳನ್ನು ಬಳಸುವ ಮೂಲಕ ನಿಮ್ಮ ವಿದ್ಯುತ್‌ ಬಿಲ್‌ಗಳನ್ನು ಕಡಿಮೆ ಮಾಡಬಹುದು. ಜತೆಗೆ, ಪರಿಸರದ ಮೇಲೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡಬಹುದು. ಕಡಿಮೆ ವೋಲ್ಟೇಜ್‌ ವೈರ್‌ಗಳು, ಎನರ್ಜಿ-ಸೆವಿಂಗ್‌ ಪವರ್‌ ಪಾಯಿಂಟ್‌ಗಳು ಮತ್ತು ಸ್ಮಾರ್ಟ್‌ ಹೋಮ್‌ ಸಿಸ್ಟಮ್‌ಗಳನ್ನು ಇದಕ್ಕಾಗಿ ಪರಿಗಣಿಸಬಹುದು. ಇದರೊಂದಿಗೆ ಪ್ರೋಗ್ರಾಮೇಬಲ್‌ ಥರ್ಮೋಸ್ಟಾಟ್‌ ಮತ್ತು ಎನರ್ಜಿ-ಎಫಿಶಿಯಂಟ್‌ ಲೈಟಿಂಗ್‌ ಕಡೆಗೂ ಗಮನ ನೀಡಿ. ಇವು ನಿಮ್ಮ ಮನೆಯ ವಿದ್ಯುತ್‌ ಬಳಕೆಯನ್ನು ಸಾಕಷ್ಟು ಕಡಿಮೆ ಮಾಡುತ್ತದೆ.

 

3) ಕಸ್ಟಮ್‌ ಲೈಟ್‌ ಸ್ವಿಚ್‌ಗಳು



ನಿಮ್ಮ ಮನೆಯ ಅವಶ್ಯಕತೆಗೆ ತಕ್ಕಂತೆ ಕಸ್ಟಮ್‌ ಆಗಿ ವಿನ್ಯಾಸ ಮಾಡಿಕೊಂಡಿರುವ ಲೈಟ್‌ ಸ್ವಿಚ್‌ಗಳಿಂದ ಮನೆಯ ಅಂದ ಹೆಚ್ಚುತ್ತದೆ. ಡಿಮ್ಮರ್‌ ಸ್ವಿಚ್‌ಗಳು, ಚಲನೆಗೆ ಪ್ರತಿಕ್ರಿಯಿಸುವ (ಮೋಶನ್‌ ಆಕ್ಟಿವೇಟೆಡ್‌) ಲೈಟ್‌ಗಳು ಮತ್ತು ಮಲ್ಟಿ-ವೇ ಸ್ವಿಚ್‌ಗಳ ಮೂಲಕವೂ ಆರಾಮವಾಗಿ ಬೆಳಕನ್ನು ನಿಯಂತ್ರಿಸಬಹುದು.

 

4) ವೈರಿಂಗ್‌ ವ್ಯವಸ್ಥೆಯ ವಿಧಗಳು



ಮನೆಗೆ ಯಾವ ಬಗೆಯ ವೈರಿಂಗ್‌ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುವಿರೋ ಅದು ನಿಮ್ಮ ಮನೆಯ ಸುರಕ್ಷತೆ ಮತ್ತು ಕಾರ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅತ್ಯುತ್ತಮವಾಗಿ ವಿದ್ಯುತ್‌ ಹರಿವಿನ ಸಾಮರ್ಥ್ಯ ಹೊಂದಿರುವುದರಿಂದ ಮತ್ತು ದೀರ್ಘಾವಧಿ ಬಾಳಿಕೆ ಬರುವ ಕಾರಣ ಹೆಚ್ಚಾಗಿ ತಾಮ್ರದ ವೈರ್‌ ಬಳಸಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ವಿಶೇಷವಾಗಿ ದೊಡ್ಡ ಕೇಬಲ್‌ಗಳಿಗೆ ಅಲ್ಯೂಮಿನಿಯಂ ವೈರ್‌ಗಳನ್ನು ಸಹ ಬಳಸಲಾಗುತ್ತದೆ. ನಿಮ್ಮ ವಿಶೇಷ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ವೈರ್‌ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಲು ತಜ್ಞ ಎಲೆಕ್ಟ್ರಿಷಿಯನ್‌ಗಳ ಸಲಹೆ ಪಡೆಯುವುದು ಅಗತ್ಯವಾಗಿದೆ.

 

5) ಸೌಂದರ್ಯ ಮತ್ತು ಮರೆಮಾಚುವಿಕೆ



ಆಧುನಿಕ ಮನೆ ವಿನ್ಯಾಸದಲ್ಲಿ ಸೌಂದರ್ಯಕ್ಕೆ ಪ್ರಮುಖ ಆದ್ಯತೆ ಇರುತ್ತದೆ. ಮನೆಯ ವೈರಿಂಗ್‌ ವ್ಯವಸ್ಥೆಗಳು ಕಣ್ಣು ಕುಕ್ಕುವಂತೆ ಇರಬಾರದು. ಹೊರಗೆ ಕಾಣಿಸದಂತೆ ಮರೆಮಾಚಲು ಗೋಡೆಯೊಳಗೆ, ನೆಲದೊಳಗೆ ಅಥವಾ ಕ್ಯೂಡೊಂಟ್‌ನೊಳಗೆ ವೈರಿಂಗ್‌ ಮಾಡಬೇಕು. ಇದರಿಂದ ಮನೆಯ ಗೋಡೆಗಳು ಸುಂದರವಾಗಿ ಉಳಿಯುತ್ತವೆ. ಇದರೊಂದಿಗೆ ರಿಸೆಸ್ಡ್‌ ಔಟ್‌ಲೆಟ್‌ಗಳು ಮತ್ತು ಮೇಲ್ನೋಟಕ್ಕೆ ಕಾಣಿಸದ ಸ್ವಿಚ್‌ಗಳನ್ನು ಬಳಸಬಹುದು. ಈ ರೀತಿ ಸಮರ್ಪಕವಾಗಿ ವೈರಿಂಗ್‌ ಅನ್ನು ಮರೆಮಾಚಿದರೆ ಮನೆಯ ಸೌಂದರ್ಯದೊಂದಿಗೆ ವೈರುಗಳಿಗೆ ಹಾನಿಯಾಗುವುದೂ ತಪ್ಪುತ್ತದೆ.

 

 

ಮನೆಯಲ್ಲಿ ವಿದ್ಯುತ್ ವೈರಿಂಗ್ ಸುರಕ್ಷತೆ ಮತ್ತು ಅನುಸರಣೆ



ವಿದ್ಯುತ್ ವೈರಿಂಗ್ ಮಾಡುವ ವಿಷಯಕ್ಕೆ ಬಂದಾಗ ಸುರಕ್ಷತೆಯು ಅತ್ಯಂತ ಮುಖ್ಯವಾದ ವಿಚಾರವಾಗಿದೆ. ಎಲ್ಲಾ ವೈರಿಂಗ್‌ಗಳು ಸ್ಥಳೀಯ ಕಟ್ಟಡ ಕೋಡ್‌ಗಳು ಮತ್ತು ನಿಯಮಗಳಿಗೆ ಅನುಗುಣವಾಗಿ ಇರುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಇದು ಅಗ್ನಿ ಆಕಸ್ಮಿಕದಂತಹ ಸಂಭಾವ್ಯ ಅಪಾಯಗಳನ್ನು ತಡೆಯುತ್ತದೆ. ಮನೆ ತಪಾಸಣೆ ಅಥವಾ ಮಾರಾಟದ ಸಮಯದಲ್ಲಿ ಕಾನೂನು ಸಮಸ್ಯೆಗಳನ್ನು ತಪ್ಪಿಸುತ್ತದೆ. 

 

ಮನೆಗೆ ಎಲೆಕ್ಟ್ರಿಕಲ್‌ ವೈರಿಂಗ್‌ ಮಾಡಲು ಮತ್ತು ಈಗಾಗಲೇ ಇರುವ ವೈರಿಂಗ್‌ ಅನ್ನು ಮೇಲ್ದರ್ಜೆಗೆ ಏರಿಸಲು ಪರವಾನಗಿ ಪಡೆದಿರುವ ಎಲೆಕ್ಟ್ರಿಷಿಯನ್‌ನನ್ನು ನೇಮಕ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇವರು ಸಮರ್ಪಕವಾಗಿ ವೈರಿಂಗ್‌ ಗ್ರೌಂಡಿಂಗ್‌ ಮಾಡುತ್ತಾರೆ, ಸರ್ಕ್ಯೂಟ್‌ ಬ್ರೇಕರ್‌ಗಳಿಂದ ರಕ್ಷಿಸುತ್ತಾರೆ ಮತ್ತು ಇತ್ತೀಚಿನ ಸುರಕ್ಷತಾ ಮಾನದಂಡಗಳ ಪ್ರಕಾರ ವೈರಿಂಗ್‌ ಅಳವಡಿಸುತ್ತಾರೆ. 

 

ಯಾವುದೇ ಸಂಭಾವ್ಯ ಸಮಸ್ಯೆಗಳು ಗಂಭೀರ ಸಮಸ್ಯೆಗಳಾಗುವುದನ್ನು ತಪ್ಪಿಸಲು ಅವುಗಳನ್ನು ಮೊದಲೇ ಗುರುತಿಸಿ ಪರಿಹರಿಸಲು ನಿಮ್ಮ ಮನೆಯ ವೈರಿಂಗ್‌ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ನಿರ್ವಹಿಸುವುದಕ್ಕೆ ಶಿಫಾರಸು ಮಾಡಲಾಗುತ್ತದೆ.



ಮನೆಗೆ ವಿದ್ಯುತ್‌ ವೈರಿಂಗ್‌ ಮಾಡಲು ಯೋಜನೆ ರೂಪಿಸುವಾಗ ಮತ್ತು ವೈರಿಂಗ್‌ ಮಾಡುವಾಗ ಪರಿಗಣಿಸಬೇಕಾದ ಅಗತ್ಯ ಅಂಶಗಳನ್ನು ಈ ಮಾರ್ಗದರ್ಶಿಯಲ್ಲಿ ತಿಳಿಸಲಾಗಿದೆ. ಪವರ್‌ ಪಾಯಿಂಟ್‌ ಅಥವಾ ಔಟ್‌ಲೆಟ್‌ಗಳನ್ನು ಸರಿಯಾದ ಸ್ಥಳಗಳಲ್ಲಿ ಅಳವಡಿಸುವುದು, ವಿದ್ಯುತ್‌ ಉಳಿತಾಯ ಮಾಡಲು ಪ್ರಯತ್ನಿಸುವುದು, ಕಸ್ಟಮ್‌ ಬೆಳಕಿನ ಆಯ್ಕೆಗಳ ಮೂಲಕ ಕಾರ್ಯಕ್ಷಮತೆ ಮತ್ತು ಮನೆಯ ಸೌಂದರ್ಯ ಹೆಚ್ಚಿಸಬಹುದು. ಸರಿಯಾದ ರೀತಿಯ ವೈರಿಂಗ್‌ ವ್ಯವಸ್ಥೆ ಆಯ್ಕೆ ಮಾಡುವುದು, ಗೋಡೆಯಲ್ಲಿ ಎಲ್ಲರಿಗೂ ಕಾಣದಂತೆ ಮರೆಮಾಚುವಿಕೆ ಮಾಡುವುದು ಸುರಕ್ಷಿತವಾಗಿದೆ. ಇದರಿಂದ ಮನೆಯ ಅಂದವೂ ಹಾಳಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಪಾಯಗಳನ್ನು ತಡೆಗಟ್ಟಲು ಮತ್ತು ದೀರ್ಘಕಾಲ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಲು ಸುರಕ್ಷತಾ ಮಾನದಂಡಗಳು ಮತ್ತು ಸ್ಥಳೀಯ ನಿಯಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ. 

 

ಮನೆಯ ಎಲೆಕ್ಟ್ರಿಕಲ್‌ ಕೆಲಸದ ಈ ಸಲಹೆಗಳನ್ನು ಪಾಲಿಸುವ ಮೂಲಕ ಮನೆಯ ಮಾಲೀಕರು ದಕ್ಷ, ಸುರಕ್ಷಿತ ಮತ್ತು ಅತ್ಯುತ್ತಮ ವಿನ್ಯಾಸ ಹೊಂದಿರುವ ಎಲೆಕ್ಟ್ರಿಕಲ್‌ ವ್ಯವಸ್ಥೆಯನ್ನು ತಮ್ಮದಾಗಿಸಿಕೊಳ್ಳಬಹುದು.




ಪದೇ ಪದೇ ಕೇಳಲಾದ ಪ್ರಶ್ನೆಗಳು

 

1. ಮನೆಗೆ ಎಲೆಕ್ಟ್ರಿಕಲ್‌ ವೈರಿಂಗ್‌ ಹೇಗೆ ಮಾಡಬೇಕು?

ಪರವಾನಗಿ ಪಡೆದಿರುವ ಎಲೆಕ್ಟ್ರಿಷಿಯನ್‌ ಮೂಲಕ ಮನೆಗೆ ಎಲೆಕ್ಟ್ರಿಕಲ್‌ ವೈರಿಂಗ್‌ ಮಾಡಲು ಯಾವಾಗಲೂ ಆದ್ಯತೆ ನೀಡಬೇಕು. ವೈರಿಂಗ್‌ ವಿನ್ಯಾಸವನ್ನು ಯೋಜಿಸುವುದು, ಸಮರ್ಪಕ ಮೆಟೀರಿಯಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಸ್ಥಳೀಯ ಕೋಡ್‌ಗಳು ಹಾಗೂ ಸುರಕ್ಷತಾ ಮಾನದಂಡಗಳಿಗೆ ತಕ್ಕಂತೆ ಅಳವಡಿಸುವುದು ಅತ್ಯಂತ ಅಗತ್ಯವಾಗಿದೆ. ಮುಖ್ಯ ಎಲೆಕ್ಟ್ರಿಕಲ್‌ ಪ್ಯಾನೆಲ್‌ನಿಂದ ಪ್ರತಿಯೊಂದು ವಿದ್ಯುತ್‌ ಪಾಯಿಂಟ್‌ಗಳು, ಸ್ವಿಚ್‌ಗಳ ತನಕ ವ್ಯವಸ್ಥಿತ ವಿಧಾನ ಅನುಸರಿಸಿ ವೈರಿಂಗ್‌ ಮಾಡಬೇಕು.

 

2. ಮನೆಗೆ ಎಲೆಕ್ಟ್ರಿಕಲ್‌ ವೈರಿಂಗ್‌ ಮಾಡುವಾಗ ಯಾವ ಗುಣಮಟ್ಟ ಇರಬೇಕು?

ಗುಣಮಟ್ಟದ ಗೃಹ ಎಲೆಕ್ಟ್ರಿಕ್‌ ವೈರಿಂಗ್‌ನಲ್ಲಿ ಸಾಮಾನ್ಯವಾಗಿ ದೀರ್ಘ ಬಾಳಿಕೆ ಮತ್ತು ವಿದ್ಯುತ್‌ ಹರಿವು ಉತ್ತಮವಿರುವ ತಾಮ್ರದ ವೈರ್‌ಗಳನ್ನು ಬಳಸಲಾಗುತ್ತದೆ. ಲೈಟಿಂಗ್‌ ಸರ್ಕ್ಯೂಟ್‌ಗಳು, ಔಟ್‌ಲೆಟ್‌ಗಳು ಮತ್ತು ಪ್ರಮುಖ ಅಪ್ಲಿಕೇಷನ್‌ಗಳನ್ನು ವೈರಿಂಗ್‌ ವ್ಯವಸ್ಥೆಯು ಒಳಗೊಂಡಿರುತ್ತದೆ. ಮನೆಯ ಎಲೆಕ್ಟ್ರಿಕ್‌ ವೈರಿಂಗ್‌ ವ್ಯವಸ್ಥೆಗೆ ಸರ್ಕ್ಯೂಟ್‌ ಬ್ರೇಕರ್‌ಗಳು ರಕ್ಷಣೆ ನೀಡುತ್ತವೆ. ಗೋಡೆಗಳು, ಮೇಲ್ಚಾವಣಿ ಮತ್ತು ನೆಲದ ಮೇಲೆ ಸುರಕ್ಷತಾ ಮಾನದಂಡಕ್ಕೆ ತಕ್ಕಂತೆ ಅಳವಡಿಸಲಾಗುತ್ತದೆ.

 

3. ಮನೆಗೆ ಯಾವ ವೈರಿಂಗ್‌ ಅತ್ಯುತ್ತಮ?

ಮನೆಗೆ ವೈರಿಂಗ್‌ ಮಾಡುವಾಗ ತಾಮ್ರದ ವೈರ್‌ಗಳನ್ನು ಸಾಮಾನ್ಯವಾಗಿ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಈ ವೈರ್‌ಗಳು ಅತ್ಯುತ್ತಮ ವಾಹಕ ಗುಣಗಳನ್ನು ಮತ್ತು ವಿಶ್ವಸಾರ್ಹತೆಯನ್ನು ಹೊಂದಿವೆ. ಹೀಗಿದ್ದರೂ ನಿರ್ದಿಷ್ಟ ಅಗತ್ಯಗಳು ಮತ್ತು ಸ್ಥಳೀಯ ನಿಯಮಗಳಿಗೆ ತಕ್ಕಂತೆ ಅಲ್ಯುಮಿನಿಯಂ ಅಥವಾ ಫ್ಲೆಕ್ಸಿಬಲ್‌ ಕಂಡಕ್ಟ್‌ ಸಿಸ್ಟಮ್ಸ್‌ ಇತ್ಯಾದಿ ಇತರೆ ವೈರ್‌ಗಳನ್ನೂ ಬಳಸಬಹುದು. ನಿಮ್ಮ ಮನೆಗೆ ಯಾವ ವೈರಿಂಗ್‌ ಉತ್ತಮ ಎಂದು ತಿಳಿಯಲು ಎಲೆಕ್ಟ್ರಿಷಿಯನ್‌ ಜತೆ ಸಮಲೋಚನೆ ಮಾಡುವುದು ಉತ್ತಮವಾಗಿದೆ.

 

4. ಮನೆಗೆ ಯಾವ ಬಗೆಯ ಎಲೆಕ್ಟ್ರಿಕಲ್‌ ವೈರ್‌ಗಳನ್ನು ಬಳಸಲಾಗುತ್ತದೆ?

ಮನೆಗಳಲ್ಲಿ ಸಾಮಾನ್ಯವಾಗಿ ಲೋಹವಲ್ಲದ (ಎನ್‌ಎಂ) ಕೇಬಲ್ ಅಥವಾ ರೋಮೆಕ್ಸ್ ವಿದ್ಯುತ್ ವೈರ್‌ ಬಳಸಲಾಗುತ್ತದೆ. ಇದು ಎರಡು ಅಥವಾ ಹೆಚ್ಚಿನ ಇನ್ಸುಲೇಟೆಡ್ ವೈರ್‌ಗಳು ಮತ್ತು ಬೇರ್‌ ಗ್ರೌಂಡ್‌ ವೈರ್‌ ಅನ್ನು ಒಳಗೊಂಡಿರುತ್ತದೆ. ಇವುಗಳಿಗೆ ಪ್ಲಾಸ್ಟಿಕ್‌ ಕವಚ ಹಾಕಲಾಗಿರುತ್ತದೆ. ಭಾರವಾದ ಉಪಕರಣಗಳಂತಹ ನಿರ್ದಿಷ್ಟ ಅವಶ್ಯಕತೆಗೆ ದಪ್ಪವಾದ ಗೇಜ್ ವೈರ್‌ ಅನ್ನು ಬಳಸಬಹುದು.

 

5. ಎಲೆಕ್ಟ್ರಿಕಲ್‌ ವೈರಿಂಗ್‌ ಮಾಡಲು ಎಷ್ಟು ಖರ್ಚಾಗುತ್ತದೆ?

ಮನೆಯ ಗಾತ್ರ, ವೈರಿಂಗ್‌ ವ್ಯವಸ್ಥೆಯ ಸಂಕೀರ್ಣತೆಗೆ ತಕ್ಕಂತೆ ಮನೆಗೆ ಎಲೆಕ್ಟ್ರಿಕಲ್‌ ವೈರಿಂಗ್‌ ಮಾಡಲು ಖರ್ಚಾಗುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಸಂಪೂರ್ಣವಾಗಿ ಎಲೆಕ್ಟ್ರಿಕ್‌ ವೈರಿಂಗ್‌ ಮಾಡಲು ಅಥವಾ ಅಪ್‌ಗ್ರೇಡ್‌ ಮಾಡಲು 1,60,000 ರೂ.ನಿಂದ 8,00,000 ರೂ.ವರೆಗೆ ಖರ್ಚಾಗಬಹುದು. ನಿಮ್ಮ ಪ್ರಾಜೆಕ್ಟ್‌ಗೆ ಒಟ್ಟು ಎಷ್ಟು ಖರ್ಚಾಗಬಹುದು ಎಂದು ತಿಳಿಯಲು ಪರವಾನಿಗೆ ಪಡೆದ ಎಲೆಕ್ಟ್ರಿಷಿಯನ್‌ನಿಂದ ಅಂದಾಜು ವೆಚ್ಚದ ಕ್ವೊಟೇಷನ್‌ ಪಡೆಯಿರಿ.


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....