ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿಮೈಕ್ರೋ ಕಾಂಕ್ರೀಟ್: ಬಳಸುವಿಕೆ ಮತ್ತು ಪ್ರಯೋಜನಗಳು

ಮೈಕ್ರೊ ಕಾಂಕ್ರೀಟ್ ನೆಲದಿಂದ ಸೀಲಿಂಗ್ ವರೆಗೆ ಮತ್ತು ಗೋಡೆಯಿಂದ ಗೋಡೆಗೆ ಎಲ್ಲವನ್ನೂ ಅಲಂಕರಿಸುವ ಮತ್ತು ಒಂದುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ. ಒಳಾಂಗಣ ಮತ್ತು ಹೊರಾಂಗಣ ಎರಡರಲ್ಲೂ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.

 

ಈ ಲೇಖನದ ಮೂಲಕ, ಮೈಕ್ರೋ ಕಾಂಕ್ರೀಟ್, ಅದರ ಉಪಯೋಗಗಳು ಮತ್ತು ಅದನ್ನು ಎಲ್ಲೆಲ್ಲಿ ಬಳಸಲಾಗುತ್ತದೆಯೊ ಅಲ್ಲಿ ಪರಿಪೂರ್ಣ, ನಯಗೊಳಿಸಿದ ಮತ್ತು ಹೊಸದರಂತೆಯೆ ಕಾಣಲು ಹೇಗೆ ಸಹಾಯ ಮಾಡುತ್ತದೆ ಹಾಗೂ ಅದರ ಅನುಕೂಲತೆಗಳ ಬಗ್ಗೆ ತಿಳಿದುಕೊಳ್ಳುತ್ತೀರಿ.

Share:
ಮೈಕ್ರೋ ಕಾಂಕ್ರೀಟ್ ಎಂದರೇನು?ಮೈಕ್ರೋ ಕಾಂಕ್ರೀಟ್ ಎಂದರೆ ಸಿಮೆಂಟ್​ನಿಂದ-ಮಾಡಲಾದ ವಸ್ತುಗಳ ತೆಳುವಾದ ಪದರವಾಗಿದ್ದು, ನೀವು ಬಯಸಿದಂತೆ ಮತ್ತು ಸೌಂದರ್ಯ ಕೊಡುವಂತೆ ವಿವಿಧ ಮೇಲ್ಪದರಗಳಲ್ಲಿ ಹಚ್ಚಬಹುದು. ಇದನ್ನು ಕೇವಲ 2 ಮಿ.ಮೀ. ನಿಂದ 3 ಮಿ.ಮೀ. ವರೆಗಿನ ದಪ್ಪದ ತೆಳುವಾದ ಪದರದಲ್ಲಿ ಹಚ್ಚಬಹುದು.

ಮೈಕ್ರೋ ಕಾಂಕ್ರೀಟ್ ಅನ್ನು ಸಿಮೆಂಟ್, ರೇಸಿನ್, ಅಡಿಟಿವ್​ಗಳು, ಮಿನರಲ್ ಪಿಗ್ಮೆಂಟ್​ಗಳು ಮತ್ತು ಪಾಲಿಮರ್‌ಗಳಿಂದ ತಯಾರಿಸಲಾಗುತ್ತದೆ. ಇದನ್ನು ಸಮತಲವಾಗಿ ಮತ್ತು ಲಂಬವಾಗಿ ಎರಡೂ ಮೇಲ್ಮೈಗಳಲ್ಲಿ ಬಳಸಬಹುದು. ಮನೆ ನವೀಕರಣ ಅಥವಾ ರೆಸಾರ್ಟ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಕಾರ್ಖಾನೆಗಳು, ಕೈಗಾರಿಕಾ ಕಟ್ಟಡಗಳು ಮತ್ತು ಈಜುಕೊಳಗಳಂತಹ ವಾಣಿಜ್ಯ ಆಸ್ತಿಗಳನ್ನು ನವೀಕರಿಸಲು ಇದನ್ನು ಬಳಸಬಹುದು.

ಮೈಕ್ರೋ ಕಾಂಕ್ರೀಟ್​ನ ವ್ಯಾಪಕ ಶ್ರೇಣಿಯ ಬಳಸುವಿಕೆಯ ಕಾರಣದಿಂದಾಗಿ, ಮನೆ ಅಥವಾ ಕಟ್ಟಡದ ಒಳಾಂಗಣ ಮತ್ತು ಹೊರಾಂಗಣಕ್ಕೆ ಉತ್ಕೃಷ್ಟ ಅಥವಾ ಸಮಕಾಲೀನ ನೋಟ ಕೊಡಲು ಬಯಸುವ ಎಲ್ಲರಿಗೂ ಅಲ್ಟ್ರಾಟೆಕ್ ಮೈಕ್ರೋ ಕಾಂಕ್ರೀಟ್ ಎಲ್ಲ ರೀತಿಯಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಮೈಕ್ರೊ ಸಿಮೆಂಟ್ ಮಿಶ್ರಣವನ್ನು ಬಳಸಿದಾಗ ಅದು ರಕ್ಷಣಾತ್ಮಕ ಲೇಪನವಾಗಿ ಕಾರ್ಯನಿರ್ವಹಿಸುತ್ತದೆ, ಅದು ಯಾವುದೇ ಮೇಲ್ಪದರು ಸುದೀರ್ಘ ಬಾಳಿಕೆಯನ್ನು ಖಚಿತಪಡಿಸುತ್ತದೆ.

 

ಮೈಕ್ರೋ ಕಾಂಕ್ರೀಟ್ ಏಕೆ ಅನೇಕರಿಗೆ ಆದ್ಯತೆಯ ಆಯ್ಕೆಯಾಗಿದೆ?1) ಇದು ಹಲವು ಕಡೆಗಳಲ್ಲಿ ಬಳಸಬಹುದಾಗಿದೆ

ಮೈಕ್ರೋ ಕಾಂಕ್ರೀಟ್ ಉಪಯೋಗ ಹಾಗೂ ಬಳಸುವುದನ್ನು ಅಡುಗೆಮನೆಯಿಂದ, ಫ್ಲೋರ್​ಗಳಿಂದ ಹಿಡಿದು ಈಜುಕೊಳಗಳವರೆಗೆ ಮಾಡಬಹುದು. ಇದು ಅತ್ಯಂತ ಬಾಳಿಕೆ ಬರುವ ಮತ್ತು ವಿಶ್ವಾಸಾರ್ಹ ಆಯ್ಕೆಯಾಗಿದ್ದು, ಪ್ರತಿ ಮೇಲ್ಪದರಕ್ಕೆ ಸದೃಢವಾದ ಮತ್ತು ದೋಷರಹಿತ ಫಿನಿಶಿಂಗ್​ ಕೊಡಲು ಹಲವು ಮೇಲ್ಪದರಗಳಲ್ಲಿ ಬಳಸಬಹುದು.

2) ಇದು ಮೊದಲೇ ಪ್ಯಾಕ್ ಮಾಡಲಾದ ಮಿಶ್ರಣವಾಗಿದೆ

ಮೈಕ್ರೋ ಕಾಂಕ್ರೀಟ್ ಮೊದಲೇ ಪ್ಯಾಕ್ ಮಾಡಲಾದ ಮಿಶ್ರಣವಾಗಿರುವುದು ಬಳಸುವ ಪ್ರಯೋಜನಗಳಲ್ಲಿ ಒಂದಾಗಿದೆ. ಇದರರ್ಥ, ಸಾಮಾನ್ಯ ಕಾಂಕ್ರೀಟ್​ಗಿಂತ ಭಿನ್ನವಾಗಿದ್ದು, ಮೈಕ್ರೋ ಕಾಂಕ್ರೀಟ್​ಗೆ ಯಾವುದೇ ವೃತ್ತಿಪರ ಮಿಶ್ರಣ ಉಪಕರಣಗಳು ಅಥವಾ ಉಪಕರಣಗಳ ಬಳಕೆಯ ಅಗತ್ಯ ಬೀಳುವುದಿಲ್ಲ. ಮೈಕ್ರೊ ಕಾಂಕ್ರೀಟ್ ಅನ್ನು ಯಾರಾದರೂ ಹಚ್ಚಬಹುದು (ಯಾವುದೇ ಕಾಂಕ್ರೀಟ್ ಹಾಕುವ ಕೌಶಲ್ಯ ಗೊತ್ತಿಲ್ಲದಿದ್ದರೂ ಸಹ) ಮತ್ತು ಅದರ ಬಳಸುವಿಕೆಯ ಮೂಲಕ ಹೆಚ್ಚು ಮೃದುವಾದ ಮತ್ತು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಬಹುದು.

3) ಇದು ಕಡಿಮೆ ನೀರಿನ ಅವಶ್ಯಕತೆಯನ್ನು ಹೊಂದಿದೆ

ಮೈಕ್ರೋ ಕಾಂಕ್ರೀಟ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದನ್ನು ವಿವಿಧ ಮೇಲ್ಮೈಗಳಲ್ಲಿ ಹಚ್ಚಬಹುದು, ಜೊತೆಗೆ ಇದನ್ನು ಉಪಯೋಗಿಸುವುದು ಕೂಡ ಸುಲಭವಾಗಿದೆ. ಆದರೆ ಇವೇ ಅಂಶಗಳೇ ಹೆಚ್ಚು ಪ್ರಯೋಜನಕಾರಿಯಾಗಿವೆ, ಅದರಿಂದಾಗಿಯೇ ಹಲವರು ಅದನ್ನು ಆಯ್ಕೆ ಮಾಡುತ್ತಾರೆ ಎಂಬುದು

ಮೈಕ್ರೋ ಕಾಂಕ್ರೀಟ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದನ್ನು ಬಳಸುವುದು ಸುಲಭಾವಾಗಿದೆ ಹಾಗೂ ವಿವಿಧ ಮೇಲ್ಪದರಗಳಿಗೆ ಹಚ್ಚಬಹುದು. ಈ ಅಂಶಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದರೂ, ಇದರಿಂದಾಗಿಯೇ ಅದು ಅನೇಕರಿಗೆ ಆಯ್ಕೆಯ ಉತ್ಪನ್ನವಾಗಿದೆ ಎಂಬುದು ಈ ಪ್ರಯೋಜನಗಳಿಂದ ಮಾತ್ರವಲ್ಲ.

4) ಇದು ಶೀಘ್ರವಾಗಿ ಒಣಗುತ್ತದೆ

ಮೈಕ್ರೋ ಕಾಂಕ್ರೀಟ್‌ನ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಅದು ಬೇಗನೆ ಒಣಗುತ್ತದೆ. ಜೊತೆಗೆ ಮೈಕ್ರೋ ಕಾಂಕ್ರೀಟ್ ಅನ್ನು ಬಳಸಿ ಮಾಡಲಾಗುವ ಮೇಲ್ಪದರಗಳನ್ನು ಯಾವುದೇ ಅಡ್ಡಿಯಿಲ್ಲದೆ ಬಳಸಬಹುದು. ತ್ವರಿತ ಒಣಗಿಸುವ ಸಮಯವನ್ನು ಹೊಂದಿರುವ ಮೈಕ್ರೋ ಕಾಂಕ್ರೀಟ್‌ನ ಈ ಪ್ರಯೋಜನವು ಅದನ್ನು ಹಚ್ಚಿನ ಪ್ರದೇಶವನ್ನು ಒಂದು ದಿನದೊಳಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

 

ಮೈಕ್ರೋ ಕಾಂಕ್ರೀಟ್ ಅನ್ನು ಹೇಗೆ ಅನ್ವಯಿಸುವುದು?1. ಮೇಲ್ಪದರು ತಯಾರಿಕೆ

ಮೇಲ್ಪದರು ಒಣಗಿರುವಾಗ ಮತ್ತು ಗ್ರೀಸ್ ಅಥವಾ ಯಾವುದೇ ಕೊಳಕು ಇಲ್ಲದಿದ್ದಾಗ ಮಾತ್ರ ಮೈಕ್ರೋ ಕಾಂಕ್ರೀಟ್ ಅನ್ನು ಅನ್ವಯಿಸಬೇಕು. ಅದಕ್ಕಾಗಿಯೇ, ಯಾವುದೇ ಕಾಂಕ್ರೀಟ್ ಅಥವಾ ಸ್ಟೀಲ್ ಮೇಲ್ಮೈಗೆ ಅನ್ವಯಿಸುವ ಮೊದಲು, ಮೇಲ್ಮೈಯನ್ನು ಸ್ವಚ್ಛಗೊಳಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಮೈಕ್ರೋ ಕಾಂಕ್ರೀಟ್ ಅನ್ನು ಅನ್ವಯಿಸುವ ಮೊದಲು ತುಕ್ಕು ಹಿಡಿದಿರುವ ಲೋಹದ ಮೇಲ್ಪದರುಗಳನ್ನು ಸ್ವಚ್ಛಗೊಳಿಸಿದ ನಂತರ ಹಚ್ಚಬೇಕು.

2. ಮಿಶ್ರಣ

ಮೈಕ್ರೊ ಕಾಂಕ್ರೀಟ್ ಅನ್ನು ಮಿಶ್ರಣ ಮಾಡುವುದು ಸಾಂಪ್ರದಾಯಿಕ ಕಾಂಕ್ರೀಟ್​ಗಿಂತ ಅತ್ಯಂತ ಸುಲಭವಾಗಿದೆ, ಇದು ಕೂಡ ಮೈಕ್ರೋ ಕಾಂಕ್ರೀಟ್ ಅತ್ಯಂತ ಉತ್ಕೃಷ್ಟ ಆಯ್ಕೆಯಾಗಿರುವುದಕ್ಕೆ ಇರುವ ಮತ್ತೊಂದು ಕಾರಣವಾಗಿದೆ. ಅಗತ್ಯವಿರುವ ಪ್ರಮಾಣವನ್ನು ಆಧರಿಸಿ, ಮಿಶ್ರಣವನ್ನು ಕೈಯಿಂದ ಅಥವಾ ಮಿಶ್ರಣ ಪಾತ್ರೆಯಲ್ಲಿ ಹಾಕಿಕೊಂಡು ಬೆರೆಸಬಹುದು.

ಮೈಕ್ರೋ ಕಾಂಕ್ರೀಟ್‌ಗೆ ಕಡಿಮೆ ನೀರಿನ ಅವಶ್ಯಕತೆ ಇರುವುದರಿಂದ, ಅದರ ಮಿಶ್ರಣವನ್ನು ತಯಾರಿಸುವಾಗ ಮೈಕ್ರೋ ಕಾಂಕ್ರೀಟ್‌ಗೆ 1:8 ನೀರಿನ ಅನುಪಾತವನ್ನು ಅನುಸರಿಸುವುದು ಅಗತ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ನೀರು ಮತ್ತು ಮೈಕ್ರೊ ಕಾಂಕ್ರೀಟ್ ಅನ್ನು ಒಟ್ಟಿಗೆ ಸೇರಿಸಿದ ನಂತರ, ನಂತರ ಮಿಶ್ರಣವನ್ನಾಗಿಸಲು ನಿರಂತರವಾಗಿ ಕಲಕಿ ಅದು ಉಪಯೋಗಕ್ಕೆ ಸಿದ್ಧವಾಗುವಂಗತೆ ಮಾಡಬೇಕಾಗುತ್ತದೆ.

3. ಸುರಿಯುವುದು (ಪೋರಿಂಗ್)

ಮೇಲ್ಪದರ ಯಾವುದೇ ಇರಲಿ, ಮೈಕ್ರೋ ಕಾಂಕ್ರೀಟ್ ಅನ್ನು ಮಿಶ್ರಣ ಮಾಡಿದ ತಕ್ಷಣ ಸುರಿಯಬೇಕು. ತಕ್ಷಣವೇ ಸುರಿಯುವಿಕೆ (ಪೋರಿಂಗ್​) ಮಾಡಬೇಕಾದ ಅಗತ್ಯವೇನೆಂದರೆ ಹೆಚ್ಚು ಸಮಯ ಹಾಗೇ ಇಡುವುದರಿಂದ ಮಿಶ್ರಣವು ಒಣಗಬಹುದು. ಹೀಗಾಗಿ ಮಿಶ್ರಣವನ್ನು ಬಳಸುವ ಸಮಯದಲ್ಲಿ ಮುಂದೆ ಅದು ಸದೃಢತೆ ಕೊಡಲು ಮತ್ತು ಹರಿದು ಎಲ್ಲಡೆ ಬಳಕೆ ಆಗುವಂತೆ ತ್ವರಿತವಾಗಿ ಸುರಿಯಲಾಗುತ್ತದೆ. ಮಿಶ್ರಣವನ್ನು ಸುರಿದ ನಂತರ, ಅದನ್ನು ಒಣಗಲು ಬಿಡುವ ಮೊದಲು ಮಿಶ್ರಣವನ್ನು ಸರಿಯಾಗಿ ಮಾಡಲು ಅಗತ್ಯ ಸಾಧನಗಳನ್ನು ಬಳಸಬಹುದು.

 

ಮೈಕ್ರೋ ಕಾಂಕ್ರೀಟ್‌ನ ಕೆಲವು ಅನುಕೂಲಗಳು ಯಾವುವು?

  1. ಮೈಕ್ರೊ ಕಾಂಕ್ರೀಟ್ ಮಿಶ್ರಣಕ್ಕೆ ಭಾರೀ ಯಂತ್ರೋಪಕರಣಗಳ ಅಗತ್ಯವಿರುವುದಿಲ್ಲ ಏಕೆಂದರೆ ಅದು ಹರಿಯುವ ವಸ್ತುಗಳನ್ನು ಹೊಂದಿದೆ ಮತ್ತು ಅದು ಕುಗ್ಗಿಸುವಿಕೆಯ ಯಾವುದೇ ಅಗತ್ಯವಿರುವುದಿಲ್ಲ.

  2. ಇದು ಒಳಹೋಗಲು ಕಡಿಮೆ ಜಾಗ ಸಾಕು ಮತ್ತು ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಬಳಸಬಹುದು.

  3. ಇದು ಜೀರೋ ಕ್ಲೋರೈಡ್‌ ಹೊಂದಿದ್ದು, ಇದು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.

  4. ಮೈಕ್ರೋ ಕಾಂಕ್ರೀಟ್ ಮೇಲ್ಮೈಗಳಲ್ಲಿ ಯಾವುದೇ ಕ್ರ್ಯಾಕ್​ಗಳು ಉಂಟಾಗುವುದಿಲ್ಲ ಏಕೆಂದರೆ ಅದು ಕುಗ್ಗುವುದಿಲ್ಲ.

  5. ಮೈಕ್ರೋ ಕಾಂಕ್ರೀಟ್ ಸಹ ಬಜೆಟ್ ಸ್ನೇಹಿ ಆಯ್ಕೆಯಾಗಿದೆ ಏಕೆಂದರೆ ಇದು ಸಾಂಪ್ರದಾಯಿಕ ಕಾಂಕ್ರೀಟ್​ಗಿಂತ ಕಡಿಮೆ ವೆಚ್ಚವನ್ನು ಹೊಂದಿದೆ.

  6. ಕಾಂಕ್ರೀಟ್ ಅನ್ನು ಮಿಶ್ರಣ ಮಾಡಲು ಅಥವಾ ಹಾಕಲು ನೀವು ಪರಿಣತಿಯನ್ನು ಹೊಂದಿರಬೇಕಾಗಿಲ್ಲ, ಏಕೆಂದರೆ ಇದು ಮೊದಲೇ-ಪ್ಯಾಕೇಜ್ ಮಾಡಿದ ರೂಪದಲ್ಲಿ ಬರುತ್ತದೆ, ಇದು ಮನುಷ್ಯರು ಮಾಡುವ ತಪ್ಪುಗಳಿಗೆ ಅವಕಾಶವನ್ನು ಕೊಡುವುದಿಲ್ಲ.

  7. ಇದು ಕಡಿಮೆ ನೀರಿನ ಅಗತ್ಯವನ್ನು ಹೊಂದಿದೆ ಮತ್ತು ನಿಗದಿತ ಬಳಕೆಗಾಗಿ ಕಾಂಕ್ರೀಟ್‌ನಲ್ಲಿ 1:8 ನೀರಿನ ಸಿಮೆಂಟ್ ಅನುಪಾತಕ್ಕೆ ಹಾಕಿಬೇಕು.

 

ಇದನ್ನೂ ಓದಿ: ಫ್ಲೋರ್​ ಸ್ಕ್ರೀಡಿಂಗ್ ಕುರಿತು ಮಾರ್ಗದರ್ಶಿಮೈಕ್ರೋ ಕಾಂಕ್ರೀಟ್ ಅದರ ಬಹುಮುಖತೆ, ಬಾಳಿಕೆ ಮತ್ತು ವಿನ್ಯಾಸ ನಮ್ಯತೆಯಿಂದಾಗಿ ಕಟ್ಟಲು ಅದು ಅದ್ಭುತ ವಸ್ತುವಾಗಿದೆ. ನಿಮ್ಮ ಮಹಡಿಗಳು, ಗೋಡೆಗಳು ಅಥವಾ ಪೀಠೋಪಕರಣಗಳಿಗೆ ನಯವಾದ, ಆಧುನಿಕ ಸ್ಪರ್ಶವನ್ನು ಕೊಡಲು ಅಥವಾ ಅನನ್ಯ ಮತ್ತು ಕಲಾತ್ಮಕ ವಿನ್ಯಾಸವನ್ನು ರಚಿಸಲು ನೀವು ಬಯಸುವುದಾದರೆ, ಮೈಕ್ರೋ ಕಾಂಕ್ರೀಟ್ ಉತ್ತಮ ಆಯ್ಕೆಯಾಗಿದೆ. ಆದ್ದರಿಂದ ನೀವು ಕ್ರಿಯಾತ್ಮಕ ಮತ್ತು ಸೊಗಸಾದ ವಸ್ತುವನ್ನು ಹುಡುಕುತ್ತಿದ್ದರೆ, ನಿಮ್ಮ ಮುಂದಿನ ವಿನ್ಯಾಸ ಯೋಜನೆಗಾಗಿ ಮೈಕ್ರೋ ಕಾಂಕ್ರೀಟ್ ಅನ್ನು ಬಳಸುವುದನ್ನು ಪರಿಗಣಿಸಿ!ಸಂಬಂಧಿತ ಲೇಖನಗಳು


ಗೋಡೆಗಳಲ್ಲಿ ತೇವಾಂಶ : ವಿಧಗಳು, ಕಾರಣಗಳು, ಮುನ್ನೆಚ್ಚರಿಕೆಗಳು/ ಅಲ್ಟ್ರಾಟೆಕ್

ಗೋಡೆಗಳಲ್ಲಿ ತೇವಾಂಶ : ವಿಧಗಳು, ಕಾರಣಗಳು, ಮುನ್ನೆಚ್ಚರಿಕೆಗಳು

ಗೋಡೆಗಳಲ್ಲಿನ ತೇವಾಂಶವು ಕಟ್ಟಡದ ಸ್ವರೂಪಕ್ಕೆ ಗಂಭೀರ ಹಾನಿ ಮಾಡುತ್ತದೆ ಮತ್ತು ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಗೋಡೆಗಳಲ್ಲಿ ನೀರು ಸೋರುವಿಕೆಯನ್ನು ಹೇಗೆ ಸಮರ್ಪಕವಾಗಿ ತಡೆಗಟ್ಟಬಹುದು ಎಂಬುದನ್ನು ಈ ಮಾರ್ಗದರ್ಶಿಯನ್ನು ಓದಿ ತಿಳಿದುಕೊಳ್ಳಬಹುದು.

ಸಿಮೆಂಟ್‌ನ ವಿವಿಧ ಪ್ರಕಾರಗಳನ್ನು ತಿಳಿದುಕೊಳ್ಳುವುದು: ಉಪಯೋಗಗಳು ಮತ್ತು ಗ್ರೇಡ್​ಗಳು

ಸಿಮೆಂಟ್‌ನ ವಿವಿಧ ಪ್ರಕಾರಗಳನ್ನು ತಿಳಿದುಕೊಳ್ಳುವುದು: ಉಪಯೋಗಗಳು ಮತ್ತು ಗ್ರೇಡ್​ಗಳು

ನಿಮ್ಮ ಮನೆ ಕಟ್ಟಲು ಸೂಕ್ತವಾದ ವಿವಿಧ ಪ್ರಕಾರದ ಸಿಮೆಂಟ್ ಕುರಿತು ತಿಳಿದುಕೊಳ್ಳಿರಿ. ಮನೆ ನಿರ್ಮಾಣ ಮಾಡುವಾಗ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಅದರ ಸಾಮಾನ್ಯ ಉಪಯೋಗಗಳು ಮತ್ತು ಗ್ರೇಡ್​ಗಳನ್ನು ಕಂಡುಕೊಳ್ಳಿರಿ.

ಇಟ್ಟಿಗೆಗಳ ವಿಧಗಳು: ಉತ್ತಮ ಗುಣಮಟ್ಟದ ಇಟ್ಟಿಗೆಗಳ ಗುಣಲಕ್ಷಣಗಳು | ಅಲ್ಟ್ರಾಟೆಕ್

ಇಟ್ಟಿಗೆಗಳ ವಿಧಗಳು: ಉತ್ತಮ ಗುಣಮಟ್ಟದ ಇಟ್ಟಿಗೆಗಳ ಗುಣಲಕ್ಷಣಗಳು

ಬಿಸಿಲಿನಲ್ಲಿ ಒಣಗಿಸಿದ ಮತ್ತು ಸುಟ್ಟ ಮಣ್ಣಿಮಿಂದ ಮಾಡಿದ ಇಟ್ಟಿಗೆಗಳನ್ನು ಒಳಗೊಂಡಂತೆ ಮನೆಗಳಿಗೆ ವಿವಿಧ ರೀತಿಯ ಇಟ್ಟಿಗೆಗಳು ಇರುತ್ತವೆ. ಅವುಗಳ ವಿವಿಧ ಗುಣಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿರಿ ಮತ್ತು ಇಟ್ಟಿಗೆಗಳನ್ನು ಆಯ್ಕೆಮಾಡುವಾಗ ಮೂಲಭೂತ ತಪ್ಪುಗಳು ಆಗದಂತೆ ನೋಡಿಕೊಳ್ಳಿರಿ.

 Related Articles


 Recommended Videos

ಶಿಫಾರಸು ಮಾಡಿದ ವೀಡಿಯೊಗಳು

  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....