ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಆದಿತ್ಯ ಬಿರ್ಲಾ ಸಮೂಹದ ಸಿಮೆಂಟ್ ಉತ್ಪಾದಿಸುವ ಅಗ್ರಗಣ್ಯ ಸಂಸ್ಥೆಯಾಗಿದೆ. 7.9 ಶತಕೋಟಿ ಅಮೆರಿಕನ್ ಡಾಲರ್ ಕಟ್ಟಡ ನಿರ್ಮಾಣ ಸೌಕರ್ಯಗಳ ಶಕ್ತಿಕೇಂದ್ರವಾಗಿರುವ ಅಲ್ಟ್ರಾಟೆಕ್ ಭಾರತದಲ್ಲಿ ಕಂದು ಸಿಮೆಂಟ್, ರೆಡಿ ಮಿಕ್ಸ್ ಕಾಂಕ್ರೀಟ್ (ಆರ್‌ಎಂಸಿ) ಮತ್ತು ವೈಟ್ ಸಿಮೆಂಟ್ ಉತ್ಪಾದಿಸುವ ಅತಿದೊಡ್ಡ ಸಂಸ್ಥೆಯಾಗಿದೆ. ಇದು ವಿಶ್ವದಲ್ಲಿ, ಚೀನಾವನ್ನು ಹೊರತುಪಡಿಸಿ ಮೂರನೇ ಅತಿದೊಡ್ಡ ಸಿಮೆಂಟ್ ಉತ್ಪಾದಕ ಸಂಸ್ಥೆಯಾಗಿದೆ. ಅಲ್ಟ್ರಾಟೆಕ್, ಒಂದೇ ದೇಶದಲ್ಲಿ ಸಿಮೆಂಟ್ ಉತ್ಪಾದನೆಯ 100+ ಎಂಟಿಪಿಎ ಅನ್ನು ಹೊಂದಿರುವ ಜಾಗತಿಕ ಮಟ್ಟದ (ಚೀನಾ ಹೊರತುಪಡಿಸಿ) ಸಂಸ್ಥೆಯಾಗಿದೆ. ಕಂಪನಿಯ ವ್ಯವಹಾರ ಕಾರ್ಯಾಚರಣೆಗಳು ಯುಎಇ, ಬಹರೇನ್, ಶ್ರೀಲಂಕಾ ಮತ್ತು ಭಾರತದಾದ್ಯಂತ ವಿಸ್ತರಿಸಿವೆ.
ಅಲ್ಟ್ರಾಟೆಕ್ ಒಟ್ಟಾರೆ ವರ್ಷಕ್ಕೆ 135.55 ಮಿಲಿಯನ್ ಟನ್‌ಗಳ (ಎಂಟಿಪಿಎ) ಕಂದು ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಅಲ್ಟ್ರಾಟೆಕ್ 22 ಏಕೀಕೃತ ಉತ್ಪಾದನಾ ಘಟಕಗಳು, 27 ಪುಡಿ ಮಾಡುವ ಘಟಕಗಳು, ಒಂದು ಕ್ಲಿಂಕರೈಜೇಷನ್ ಘಟಕ ಮತ್ತು 7 ಬೃಹತ್ ಪ್ಯಾಕೇಜಿಂಗ್ ಟರ್ಮಿನಲ್‌ಗಳನ್ನು ಹೊಂದಿದೆ. ದೇಶಾದ್ಯಂತ ಅಲ್ಟ್ರಾಟೆಕ್ ಒಂದು ಲಕ್ಷಕ್ಕೂ ಹೆಚ್ಚು ಚಾನೆಲ್ ಪಾರ್ಟ್ನರ್‌ಗಳನ್ನು ಹೊಂದಿದೆ ಮತ್ತು ಭಾರತದಾದ್ಯಂತ 80% ಗೂ ಹೆಚ್ಚು ಮಾರುಕಟ್ಟೆ ವ್ಯಾಪ್ತಿಯನ್ನು ಹೊಂದಿದೆ. ಬಿಳಿ ಸಿಮೆಂಟ್ ಘಟಕದಲ್ಲಿ ಅಲ್ಟ್ರಾಟೆಕ್ ಬಿರ್ಲಾ ವೈಟ್ ಅನ್ನುವ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಖ್ಯಾತವಾಗಿದೆ. ಇದು 1.5 ಎಂಟಿಪಿಎ ಪ್ರಸ್ತುತ ಸಾಮರ್ಥ್ಯದೊಂದಿಗೆ ಒಂದು ಬಿಳಿ ಸಿಮೆಂಟ್ ಘಟಕ ಮತ್ತು ಒಂದು ವಾಲ್ ಕೇರ್ ಪುಟ್ಟಿ ಘಟಕವನ್ನು ಹೊಂದಿದೆ. ನಿರ್ದಿಷ್ಟ ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ವಿಶೇಷ ಕಾಂಕ್ರೀಟ್‌ಗಳನ್ನೂ ಕೂಡ ಇದು ಹೊಂದಿದೆ. ನಮ್ಮ ನಿರ್ಮಾಣಕ್ಕೆ ಸಂಬಂಧಿಸಿದ ಉತ್ಪನ್ನಗಳ ವ್ಯವಹಾರ ವಿನೂತನ ಕೇಂದ್ರವಾಗಿದ್ದು ಹೊಸ ಕಾಲದ ನಿರ್ಮಾಣಗಳ ಅಗತ್ಯವನ್ನು ಪೂರೈಸಲು ವೈಜ್ಞಾನಿಕವಾಗಿ ಸಿದ್ಧಪಡಿಸಿದ ಉತ್ಪನ್ನಗಳನ್ನು ಒದಗಿಸುತ್ತದೆ.
ವೈಯಕ್ತಿಕವಾಗಿ ಮನೆ ನಿರ್ಮಿಸುವವರಿಗೆ ತಮ್ಮ ಮನೆಗಳ ನಿರ್ಮಾಣಕ್ಕಾಗಿ ಒಂದು ನಿಲುಗಡೆಯ ತಾಣವನ್ನು ಒದಗಿಸುವ ಪರಿಕಲ್ಪನೆಯೊಂದಿಗೆ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ (ಯುಬಿಎಸ್) ಅನ್ನು ಅಲ್ಟ್ರಾಟೆಕ್ ರೂಪಿಸಿದೆ. ಈಗ ಅಲ್ಟ್ರಾಟೆಕ್ ಭಾರತದಾದ್ಯಂತ 3000+ ಕ್ಕೂ ಹೆಚ್ಚು ಮಳಿಗೆಗಳೊಂದಿಗೆ ಅತಿದೊಡ್ಡ ಏಕೈಕ ರಿಟೇಲ್ ಸರಣಿ ಬ್ರ್ಯಾಂಡ್ ಆಗಿದೆ.
ಅಲ್ಟ್ರಾಟೆಕ್, ಗ್ಲೋಬಲ್ ಸಿಮೆಂಟ್ ಮತ್ತು ಕಾಂಕ್ರೀಟ್ ಅಸೋಸಿಯೇಷನ್ (ಜಿಸಿಸಿಎ) ಇದರ ಸ್ಥಾಪಕ ಸದಸ್ಯನಾಗಿದೆ. 2050 ರ ವೇಳೆಗೆ ಇಂಗಾಲ ತಟಸ್ಥ ಕಾಂಕ್ರೀಟ್ ತಯಾರಿಸುವ ವಲಯದ ಆಕಾಂಕ್ಷೆಯಾದ ಜಿಸಿಸಿಎ ಕ್ಲೈಮೇಟ್ ಆ್ಯಂಬಿಶನ್ 2050 ಕ್ಕೆ ಇದು ಸಂಸ್ಥೆಯು GCCA ಇಂದ ಘೋಷಿಸಲಾದ ನೆಟ್ ಜೀರೋ ಕಾಂಕ್ರೀಟ್ ರೋಡ್‌ಮ್ಯಾಪ್‌ಗೂ ಸಹ ಬದ್ಧವಾಗಿದೆ. ಇದರಲ್ಲಿ 2030 ಯ ವರೆಗೆ CO2 ಹೊರಸೂಸುವಿಕೆಯನ್ನು ಕಾಲುಭಾಗದಷ್ಟು ಕಡಿಮೆಗೊಳಿಸುವ ಮೈಲುಗಲ್ಲು ಬದ್ಧತೆಯು ಒಳಗೊಂಡಿದೆ ಸಹಿದಾರನಾಗಿದೆ, ಕಡಿಮೆ ಇಂಗಾಲದ ತಂತ್ರಜ್ಞಾನಗಳು ಮತ್ತು ತನ್ನ ಮೌಲ್ಯ ಸರಣಿಯಾದ್ಯಂತ ಪ್ರಕ್ರಿಯೆಗಳ ಅಳವಡಿಕೆಯ ವೇಗವರ್ಧನೆಗಾಗಿ ಮತ್ತು ಈ ಮೂಲಕ ಜೀವಿತಾವಧಿಯಲ್ಲಿ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು ವಿಜ್ಞಾನ ಆಧರಿತ ಟಾರ್ಗೆಟ್ ಉಪಕ್ರಮ (ಎಸ್‌ಬಿಟಿಐ), ಆಂತರಿಕ ಕಾರ್ಬನ್ ಬೆಲೆ ಮತ್ತು ಇಂಧನ ಉತ್ಪಾದಕತೆ (#EP100) ಮಾದರಿಯ ಹೊಸ ಕಾಲದ ಪರಿಕರಗಳನ್ನು ಅಲ್ಟ್ರಾಟೆಕ್ ಅಳವಡಿಸಿಕೊಂಡಿದೆ. ಅಲ್ಟ್ರಾಟೆಕ್, ಡಾಲರ್ ಆಧರಿತ ಸುಸ್ಥಿರತೆ ಲಿಂಕ್ ಮಾಡಿರುವ ಬಾಂಡ್‌ಗಳನ್ನು ಜಾರಿ ಮಾಡಿದ ಭಾರತದ ಮೊದಲ ಕಂಪನಿ ಮತ್ತು ಏಷ್ಯಾದ ಎರಡನೇ ಕಂಪನಿಯಾಗಿದೆ. ತನ್ನ ಸಿಎಸ್‌ಆರ್ ಭಾಗವಾಗಿ ಅಲ್ಟ್ರಾಟೆಕ್, ಶಿಕ್ಷಣ, ಆರೋಗ್ಯ, ಸುಸ್ಥಿರ ಜೀವನ, ಸಮುದಾಯ ಮೂಲಸೌಕರ್ಯಗಳು ಮತ್ತು ಸಾಮಾಜಿಕ ಉದ್ದೇಶಗಳ ಕ್ಷೇತ್ರಗಳಲ್ಲಿ ಭಾರತದಾದ್ಯಂತ 500 ಕ್ಕೂ ಹೆಚ್ಚು ಗ್ರಾಮಗಳಾದ್ಯಂತ ಸುಮಾರು 1.6 ಮಿಲಿಯನ್ ಫಲಾನುಭವಿಗಳನ್ನು ತಲುಪುತ್ತಿದೆ.
ನಾಯಕನಾಗಲು
ಕಟ್ಟಡ ಪರಿಹಾರಗಳಲ್ಲಿ
ಮಧ್ಯಸ್ಥಗಾರರಿಗೆ ಉನ್ನತ ಮೌಲ್ಯವನ್ನು ತಲುಪಿಸಲು
ನ ನಾಲ್ಕು ಕಂಬಗಳ ಮೇಲೆ
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
This website uses cookies to serve content relevant for you and to improve your overall website
experience.
By continuing to visit this site, you agree to our use of cookies.
Accept
UltraTech is India’s No. 1 Cement
Address
"B" Wing, 2nd floor, Ahura Center Mahakali Caves Road Andheri (East) Mumbai 400 093, India
© 2020 ಎಲ್ಲ ಹಕ್ಕುಗಳನ್ನು ಒಳಗೊಂಡಿದೆ, ಅಲ್ಟ್ರಾಟೆಕ್ ಸಿಮೆಂಟ್ ಲಿ.