ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿನಿರ್ವಹಣ ತಂಡ


ಶ್ರೀ ಕೆ.ಸಿ ಝನ್ವರ್‌

ವ್ಯವಸ್ಥಾಪಕ ನಿರ್ದೇಶಕರು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌.

kailash-jhanwar

ಶ್ರೀ ಕೆ.ಸಿ ಝನ್ವರ್‌

ವ್ಯವಸ್ಥಾಪಕ ನಿರ್ದೇಶಕರು
ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌. 

 

ಶ್ರೀ ಕೆ.ಸಿ ಝನ್ವರ್‌ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಗ್ರೂಪ್‌ನಲ್ಲಿ 38 ವರ್ಷಗಳಿಗೂ ಹೆಚ್ಚು ಕಾಲ ವೃತ್ತಿ ಜೀವನವನ್ನು ಕಳೆದಿದ್ದು, ಆದಿತ್ಯ ಬಿರ್ಲಾ ಗ್ರೂಪ್‌ನ ಹಿರಿಯರಾಗಿದ್ದಾರೆ. ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ, ಝನ್ವರ್ 1981 ರಲ್ಲಿ ಮ್ಯಾನೇಜ್‌ಮೆಂಟ್ ಟ್ರೇನೀ ಆಗಿ ಆದಿತ್ಯ ಬಿರ್ಲಾ ಗ್ರೂಪ್‌ನ ಸಿಮೆಂಟ್ ಉದ್ಯಮಕ್ಕೆ ಸೇರಿದ್ದರು.

 

ಗ್ರೂಪ್‌ನಲ್ಲಿ ಸಿಮೆಂಟ್ ಮತ್ತು ರಾಸಾಯನಿಕ ವಲಯಗಳಲ್ಲಿ ಹಣಕಾಸು, ಕಾರ್ಯಾಚರಣೆಗಳು ಮತ್ತು ಸಾಮಾನ್ಯ ನಿರ್ವಹಣೆ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಪ್ರಾಜೆಕ್ಟ್‌ ನಿರ್ವಹಣೆ ಮತ್ತು ವಾಣಿಜ್ಯ ಕೌಶಲ್ಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಸ್ವಾಧೀನ ಮತ್ತು ವಿಲೀನದಲ್ಲೂ ಅವರು ಗಮನಾರ್ಹ ಅನುಭವವನ್ನು ಹೊಂದಿದ್ದಾರೆ. ಗ್ರಾಹಕರು ಮತ್ತು ಇತರ ಪಾಲುದಾರರೊಂದಿಗೆ ನೆಟ್‌ವರ್ಕಿಂಗ್ ಮತ್ತು ಸಂಬಂಧ ನಿರ್ಮಾಣ ಕೌಶಲಗಳಲ್ಲಿ ಅವರು ಅಪಾರ ಪರಿಣಿತಿಯನ್ನು ಹೊಂದಿದ್ದಾರೆ ಮತ್ತು ಉದ್ಯಮಕ್ಕೆ ಬಲಿಷ್ಠವಾದ ಫ್ರಾಂಚೈಸಿಯನ್ನು ಅವರು ನಿರ್ಮಿಸಿಕೊಟ್ಟಿದ್ದಾರೆ. ಅವರು ಅತ್ಯುತ್ತಮ ತಂಡ ನಿರ್ಮಾತೃ ಆಗಿದ್ದಾರೆ ಮತ್ತು ಉತ್ತಮ ಮಾನವ ಕೌಶಲಗಳನ್ನು ಹೊಂದಿದ್ದಾರೆ.

ಶ್ರೀ ಇ.ಆರ್‌. ರಾಜ ನಾರಾಯಣನ್‌

ಬ್ಯುಸಿನೆಸ್ ಮುಖ್ಯಸ್ಥರು ಮತ್ತು ಮುಖ್ಯ ಉತ್ಪಾದಕ ಅಧಿಕಾರಿ

raj-narayanan

ಶ್ರೀ ಇ.ಆರ್‌. ರಾಜ ನಾರಾಯಣನ್‌

ಬ್ಯುಸಿನೆಸ್ ಮುಖ್ಯಸ್ಥರು ಮತ್ತು ಮುಖ್ಯ ಉತ್ಪಾದಕ ಅಧಿಕಾರಿ

 

ಶ್ರೀ ರಾಜ್ ನಾರಾಯಣ್ ಅವರು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ ಬ್ಯುಸಿನೆಸ್ ಮುಖ್ಯಸ್ಥರು ಮತ್ತು ಮುಖ್ಯ ಉತ್ಪಾದಕ ಅಧಿಕಾರಿಯಾಗಿದ್ದಾರೆ. ಅಲ್ಟ್ರಾಟೆಕ್‌ಗೆ ಸೇರುವುದಕ್ಕೂ ಮೊದಲು, ಕ್ಲೋರ್ ಅಲ್ಕಲಿ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್‌ನ ವಿಎಫ್‌ವೈ ವಿಭಾಗದ ಸಮೂಹ ಕಾರ್ಯಾಚರಣೆ ಅಧ್ಯಕ್ಷರಾಗಿದ್ದರು. ಸಮೂಹದಲ್ಲಿ ಅವರ ಇತರ ಕಾರ್ಯನಿರ್ವಹಣೆಯಲ್ಲಿ, ಇನ್ಸುಲೇಟರ್‌ಗಳು ಮತ್ತು ರಸಗೊಬ್ಬರಗಳ ವಿಭಾಗದ ಸಿಇಒ ಮತ್ತು ಓವರ್‌ಸೀಸ್ ಕೆಮಿಕಲ್ ಬ್ಯುಸಿನೆಸ್‌ಗಳ ಹಿರಿಯ ಅಧ್ಯಕ್ಷರಾಗಿದ್ದರು. 

 

2008 ರಲ್ಲಿ ಆದಿತ್ಯ ಬಿರ್ಲಾ ಗ್ರೂಪ್‌ಗೆ ಸೇರುವುದಕ್ಕೂ ಮೊದಲು, ರಾಜ್ ನಾರಾಯಣ್ ಅವರು ರಾಸಾಯನಿಕ ಮತ್ತು ಔದ್ಯಮಿಕ ಉತ್ಪನ್ನ ವಲಯದ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಲಿಂಡೆ ಗ್ಯಾಸಸ್ ಇಂಡಿಯಾ ಲಿಮಿಟೆಡ್‌ ಎಂ.ಡಿ, ಲ್ಯಾಕ್ಸೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಎಂ.ಡಿ ಮತ್ತು ಭಾರತದಲ್ಲಿ ಬೇಯರ್ ಕೆಮಿಕಲ್ಸ್‌ ದೇಶೀಯ ಮುಖ್ಯಸ್ಥರಾಗಿ ಅವರು ಕೆಲಸ ಮಾಡಿದ್ದಾರೆ.

 

2018 ರಲ್ಲಿ ಇವರು ಆದಿತ್ಯ ಬಿರ್ಲಾ ಗ್ರೂಪ್‌ ಚೇರ್ಮನ್‌ ಅವರ ಅತ್ಯುತ್ತಮ ನಾಯಕರು ಪುರಸ್ಕಾರವನ್ನು ಸ್ವೀಕರಿಸಿದ್ದಾರೆ. ಅರ್ಹತೆಯಲ್ಲಿ ಅವರು ಕೆಮಿಕಲ್ ಇಂಜಿನಿಯರ್ ಆಗಿದ್ದಾರೆ.

ಶ್ರೀ ವಿವೇಕ್ ಅಗರ್ವಾಲ್

ಬ್ಯುಸಿನೆಸ್ ಮುಖ್ಯಸ್ಥರು ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿ

vivek-agarwal

ಶ್ರೀ ವಿವೇಕ್ ಅಗರ್ವಾಲ್

ಬ್ಯುಸಿನೆಸ್ ಮುಖ್ಯಸ್ಥರು ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿ

 

ಶ್ರೀ ವಿವೇಕ್ ಅಗರ್ವಾಲ್‌ ಅಲ್ಟ್ರಾಟೆಕ್ ಸಿಮೆಂಟ್‌ನಲ್ಲಿ ಬ್ಯುಸಿನೆಸ್ ಮುಖ್ಯಸ್ಥರು ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿದ್ದಾರೆ. ಶ್ರೀ ಅಗರ್ವಾಲ್ ಅವರು ತನ್ನ ವೃತ್ತಿಯ ಮುಖ್ಯ ಭಾಗವನ್ನು ಅಲ್ಟ್ರಾಟೆಕ್‌ನ ಸಿಮೆಂಟ್ ಉದ್ಯಮದಲ್ಲಿ ಕಳೆದಿದ್ದಾರೆ ಮತ್ತು ಹಲವು ಸಂಕೀರ್ಣ ಹುದ್ದೆಗಳನ್ನು ಹೊಂದಿದ್ದಾರೆ. ಸಿಮೆಂಟ್ ಮಾರ್ಕೆಟಿಂಗ್ ವಿಭಾಗದಲ್ಲಿ ವಲಯ ಮ್ಯಾನೇಜರ್ ಆಗಿ 1993 ರಲ್ಲಿ ಅವರು ಗ್ರೂಪ್‌ಗೆ ಸೇರಿದ್ದಾರೆ ಮತ್ತು ಗ್ರೇ ಸಿಮೆಂಟ್ ಸೌತ್‌ನ ವಲಯ ಮುಖ್ಯಸ್ಥರು ಮತ್ತು ಬಿರ್ಲಾ ವೈಟ್‌ನ ಮಾರ್ಕೆಟಿಂಗ್ ಮುಖ್ಯಸ್ಥರು ಮತ್ತು ಆರ್‌ಎಂಸಿ ಬ್ಯುಸಿನೆಸ್‌ನ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.

 

2010 ರಲ್ಲಿ ಸ್ವಾಧೀನಪಡಿಸಿಕೊಂಡ ಸಂಸ್ಥೆ ಸ್ಟಾರ್ ಸಿಮೆಂಟ್‌ ಸಿಇಒ ಆಗಿ ಶ್ರೀ ಅಗರ್ವಾಲ್ ಅಧಿಕಾರ ವಹಿಸಿಕೊಂಡರು ಮತ್ತು 2013 ಅಕ್ಟೋಬರ್‌ನಲ್ಲಿ ಸಿಮೆಂಟ್ ಬ್ಯುಸಿನೆಸ್‌ನಲ್ಲಿ ಮುಖ್ಯ ಮಾರ್ಕೆಟಿಂಗ್ ಅಧಿಕಾರ ಹುದ್ದೆಯನ್ನು ವಹಿಸಿಕೊಂಡರು. 2017 ರಲ್ಲಿ ಆದಿತ್ಯ ಬಿರ್ಲಾ ಫೆಲ್ಲೋ ಆಗಿ ಶ್ರೀ ಅಗರ್ವಾಲ್ ಅವರನ್ನು ಹೆಸರಿಸಲಾಗಿದೆ ಮತ್ತು 2019 ರಲ್ಲಿ ಚೇರ್ಮನ್‌ ಅವರ ಅದ್ಭುತ ನಾಯಕ ಪುರಸ್ಕಾರವನ್ನು ಸ್ವೀಕರಿಸಿದ್ದಾರೆ. ಅವರು ಬಿಇ (ಆನರ್ಸ್‌) ಅನ್ನು ಎನ್‌ಐಟಿ ಅಲಹಾಬಾದ್‌ನಿಂದ ವ್ಯಾಸಂಗ ಮಾಡಿದ್ದಾರೆ ಮತ್ತು ಎಫ್‌ಎಂಎಸ್ ದೆಹಲಿಯಿಂದ ಎಂಬಿಎ ವ್ಯಾಸಂಗ ಮಾಡಿದ್ದಾರೆ. ಅವರು ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಿಂದ ಸುಧಾರಿತ ಮ್ಯಾನೇಜ್‌ಮೆಂಟ್ ಪ್ರೋಗ್ರಾಮ್ (ಎಎಂಪಿ) ವ್ಯಾಸಂಗ ಮಾಡಿದ್ದಾರೆ.

ಶ್ರೀ ಅಟುಲ್ ಡಾಗ

ವ್ಯಾಪಾರ ಮುಖ್ಯಸ್ಥ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ

ಶ್ರೀ ಅಟುಲ್ ಡಾಗ

ವ್ಯಾಪಾರ ಮುಖ್ಯಸ್ಥ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ

 

ಶ್ರೀ ಅಟುಲ್ ಡಾಗ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನಲ್ಲಿ ಸಂಪೂರ್ಣ ಸಮಯದ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ. ಅಲ್ಟ್ರಾಟೆಕ್ನಲ್ಲಿ, ಹೂಡಿಕೆದಾರರ ಸಂಬಂಧಗಳನ್ನು ನಿರ್ವಹಿಸಲು ದೃಡವಾದ ವೇದಿಕೆಯನ್ನು ರಚಿಸುವುದು, ಎಂ & ಎ ಅವಕಾಶಗಳನ್ನು ಮೌಲ್ಯಮಾಪನ ಮಾಡುವುದು ಮತ್ತು ದೇಶೀಯ ಹಣಕಾಸು ಮಾರುಕಟ್ಟೆಗಳಲ್ಲಿ ದೀರ್ಘಾವಧಿಯ ಸಾಲಗಳನ್ನು ಹೆಚ್ಚಿಸಲು ಹೊಸ ಮಾನದಂಡಗಳನ್ನು ರೂಪಿಸುವುದು ಮುಂತಾದ ಹಲವಾರು ಉಪಕ್ರಮಗಳನ್ನು ಅವರು ಕೈಗೊಂಡಿದ್ದಾರೆ. ಅರ್ಹತೆಯ ಪ್ರಕಾರ ಚಾರ್ಟರ್ಡ್ ಅಕೌಂಟೆಂಟ್, ಅವರು 29 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಅದರಲ್ಲಿ ಎರಡು ದಶಕಗಳಲ್ಲಿ ಆದಿತ್ಯ ಬಿರ್ಲಾ ಗ್ರೂಪ್ನಲ್ಲಿದ್ದಾರೆ. ಅವರು 1988 ರಲ್ಲಿ ಅಂದಿನ ಇಂಡಿಯನ್ ರೇಯಾನ್ ಲಿಮಿಟೆಡ್‌ನ ವಿಭಾಗವಾದ ರಾಜಶ್ರೀ ಸಿಮೆಂಟ್‌ನಲ್ಲಿ ಗುಂಪಿಗೆ ಸೇರಿದರು. ಅವರು ದಿವಂಗತ ಶ್ರೀ ಆದಿತ್ಯ ಬಿರ್ಲಾ ಅವರೊಂದಿಗೆ ಕಾರ್ಯನಿರ್ವಾಹಕ ಸಹಾಯಕರಾಗಿ ಕೆಲಸ ಮಾಡಿದ್ದಾರೆ, ಅಲ್ಲಿ ಅವರು ಸಿಮೆಂಟ್, ಅಲ್ಯೂಮಿನಿಯಂ, ಕಾರ್ಬನ್ ಕಪ್ಪು ಮತ್ತು ವಿಎಸ್ಎಫ್ ಮತ್ತು ಕೆಮಿಕಲ್ಸ್ ವ್ಯವಹಾರದೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಶ್ರೀ ಡಾಗಾ ಅವರು ಕಾರ್ಪೊರೇಟ್ ಮ್ಯಾನೇಜ್ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ ಅನ್ನು  ಪೋರ್ಟ್ಫೋಲಿಯೋ ಮಾಲೀಕರಾಗಿ ಆದಿತ್ಯ ಬಿರ್ಲಾ ಮ್ಯಾನೇಜ್ಮೆಂಟ್ ಕಾರ್ಪೊರೇಶನ್ ಪ್ರೈವೇಟ್ ಲಿಮಿಟೆಡ್ ನ ಕಾರ್ಪೊರೇಟ್ ಫೈನಾನ್ಸ್ ಗ್ರೂಪ್ ಜೊತೆ ಕೆಲಸ ಮಾಡಿದ್ದಾರೆ. 2007 ರಲ್ಲಿ, ಅವರು ಪ್ರಾರಂಭದ ಹಣಕಾಸು ಕಾರ್ಯದ ಮುಖ್ಯಸ್ಥರಾಗಿ ಆದಿತ್ಯ ಬಿರ್ಲಾ ರಿಟೇಲ್ ಲಿಮಿಟೆಡ್‌ಗೆ ತೆರಳಿದರು. ಅವರು ಬಲವಾದ ತಂಡವನ್ನು ನಿರ್ಮಿಸಿದರು, 2010 ರಿಂದ ಮುಖ್ಯ ಹಣಕಾಸು ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. 2014 ರಲ್ಲಿ ಶ್ರೀ ಡಾಗಾ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.


ಶ್ರೀ ರಮೇಶ ಮಿತೃಗೋತ್ರಿ

ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ

ramesh-mitragotri

ಶ್ರೀ ರಮೇಶ ಮಿತೃಗೋತ್ರಿ

ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ

 

ರಮೇಶ್ ಮಿತೃಗೋತ್ರಿ ಅವರು ವಿವಿಧ ಉದ್ಯಮಗಳು ಮತ್ತು ವಲಯಗಳಾದ ಗ್ರಾಹಕರ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್ ಮತ್ತು ನಿರ್ಮಾಣ, ಕಾರ್ಯಕ್ಷಮತೆ ಸಾಮಗ್ರಿಗಳು, ಸಿಮೆಂಟ್, ರಿಟೇಲ್ ಮತ್ತು ರಾಸಾಯನಿಕಗಳಲ್ಲಿ 35 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಕುಟುಂಬ ಮಾಲೀಕತ್ವದ ಕಂಪನಿ ಮತ್ತು ನಿರ್ವಹಿತ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಅವರು ಕೆಲಸ ಮಾಡಿದ್ದಾರೆ.  ಸಾಂಸ್ಥಿಕ ರೂಪಾಂತರ ಮತ್ತು ಉದ್ಯಮದ ವಿವಿಧ ಅವಧಿಯಲ್ಲಿ ಆಡಳಿತ ಬದಲಾವಣೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಲೈನ್ ಮ್ಯಾನೇಜರ್‌ಗಳೊಂದಿಗೆ ಬ್ಯುಸಿನೆಸ್ ಮತ್ತು ಪಾರ್ಟ್ನರ್‌ಶಿಪ್‌ ಅನ್ನು ಅರ್ಥ ಮಾಡಿಕೊಳ್ಳುವಿಕೆಯು ಸವಾಲಿನ ಸಮಯದಲ್ಲಿ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುವಂತೆ ಮಾಡಿದೆ.

 

ಸಿಮೆಂಟ್ ಉದ್ಯಮದಲ್ಲಿ ಎಚ್‌ಆರ್ (ಮಾರ್ಕೆಟಿಂಗ್ ವಿಭಾಗ) ಮುಖ್ಯಸ್ಥರಾಗಿ 2007 ರಲ್ಲಿ ಅವರು ಆದಿತ್ಯ ಬಿರ್ಲಾ ಗ್ರೂಪ್‌ಗೆ ಸೇರಿದರು.  2009 ರಲ್ಲಿ, ಮುಖ್ಯ ಮಾನವ ಅಧಿಕಾರಿಯಾಗಿ ಆದಿತ್ಯ ಬಿರ್ಲಾ ರಿಟೇಲ್ ಲಿಮಿಟೆಡ್‌ಗೆ ವರ್ಗಾವಣೆಗೊಂಡರು.  2015 ರಲ್ಲಿ, ಕೆಲವು ಕಾಲ ಅವರು ಉದ್ಯೋಗಿ ಸಂಬಂಧಗಳ ಸಮೂಹ ಮುಖ್ಯಸ್ಥರಾಗಿ ಕೆಲಸ ಮಾಡಿದರು ಮತ್ತು ಸೆಂಚುರಿ ಗ್ರೂಪ್ ಅನ್ನು ಎಬಿಜಿ ಕೆಲಸದ ವಿಧಾನಕ್ಕೆ ಅಳವಡಿಸುವುದು ಮತ್ತು ಇತರ ಜವಾಬ್ದಾರಿಗಳನ್ನು ನಿರ್ವಹಿಸಿದರು.  ನಂತರ ಅವರು ರಾಸಾನಯನಿಕ, ರಸಗೊಬ್ಬರ ಮತ್ತು ಇನ್ಸುಲೇಟರ್‌ಗಳ ಉದ್ಯಮದ ಸಿಎಚ್‌ಆರ್‌ಒ ಆಗಿ ವರ್ಗಾವಣೆಗೊಂಡರು.  2016 ನವೆಂಬರ್‌ನಲ್ಲಿ, ಅಲ್ಟ್ರಾಟೆಕ್‌ ಸಿಮೆಂಟ್‌ನ ಸಿಎಚ್‌ಆರ್‌ಒ ಆಗಿ ಅಧಿಕಾರ ವಹಿಸಿಕೊಂಡರು ಮತ್ತು ಇದು ಆಗ ಸ್ವಾಧೀನಗಳು ಮತ್ತು ಸಾವಯವ ಪ್ರಗತಿಯ ಮೂಲಕ ತ್ವರಿತ ವಿಸ್ತರಣೆಯನ್ನು ಕಂಡಿತು.

ಶ್ರೀ ಆಶಿಶ್ ದ್ವಿವೇದಿ

ಸಿಇಒ - ಬಿರ್ಲಾ ವೈಟ್

ashish-dwivedi

ಶ್ರೀ ಆಶಿಶ್ ದ್ವಿವೇದಿ

ಸಿಇಒ - ಬಿರ್ಲಾ ವೈಟ್

 

ಶ್ರೀ ಆಶಿಶ್ ದ್ವಿವೇದಿ, ಅಲ್ಟ್ರಾ ಟೆಕ್ ಸಿಮೆಂಟ್‌ ಲಿಮಿಟೆಡ್‌ನ ವೈಟ್ ಸಿಮೆಂಟ್ ವ್ಯವಹಾರವಾದ ಬಿರ್ಲಾ ವೈಟ್‌ನ ಸಿಇಒ ಆಗಿದ್ದಾರೆ. ಅವರು ಕೆಮಿಕಲ್ ಎಂಜಿನಿಯರಿಂಗ್ ಮತ್ತು ಎಂಬಿಎ ಪದವಿ ಹೊಂದಿದ್ದಾರೆ. ಅವರು 23 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಆದಿತ್ಯ ಬಿರ್ಲಾ ಸಂಸ್ಥೆಯೊಂದಿಗಿದ್ದಾರೆ. ವಿಲೀನ ಮತ್ತು ಸ್ವಾಧೀನಗಳು, ಮರುಸಂರಚನೆ ಮತ್ತು ಸಮೂಹ ಪ್ರಕ್ರಿಯೆಗಳ ರಚನೆ ಸೇರಿದಂತೆ ಅವರು ಹಲವಾರು ಕಾರ್ಯತಂತ್ರದ ಉಪಕ್ರಮಗಳ ಅವಿಭಾಜ್ಯ ಅಂಗವಾಗಿದ್ದಾರೆ.

 

ಅವರ ಪ್ರಸ್ತುತ ಪಾತ್ರಕ್ಕೆ ಮುನ್ನ, ಅವರು ವಿಶೇಷ ರಾಸಾಯನಿಕಗಳು ಹಾಗೂ ಸಮೂಹದ ರಾಸಾಯನಿಕ, ರಸಗೊಬ್ಬರ ಮತ್ತು ಇನ್ಸುಲೇಟರ್ ವಿಭಾಗದ ವ್ಯವಹಾರ ಕಾರ್ಯತಂತ್ರದ ಅಧ್ಯಕ್ಷರಾಗಿದ್ದರು. ಹಲವಾರು ಉತ್ಪನ್ನಗಳಾದ್ಯಂತ ಅವರು ಡೌನ್‌ಸ್ಟ್ರೀಮ್ ಸ್ಪೆಷಾಲಿಟಿ ರಾಸಾಯನಿಕಗಳ ವ್ಯವಹಾರವನ್ನು ಬೆಳೆಸಿದರು ಮತ್ತು ಉಪ್ಪಿನ ವ್ಯವಹಾರವನ್ನು ಹೆಚ್ಚಿಸುವುದಕ್ಕೆ ಜವಾಬ್ದಾರರಾಗಿದ್ದಾರೆ.

Loading....