ವೈಟ್ ಟಾಪಿಂಗ್

ಕಾಂಕ್ರೀಟ್ ಹಾಳಾದ ರಸ್ತೆಗಳು: ದೀರ್ಘಕಾಲೀನ ಸಮಸ್ಯೆ

ತ್ವರಿತ ನಗರೀಕರಣದ ಫಲಿತಾಂಶವಾಗಿ, ಬಹುತೇಕ 35% ರಷ್ಟು ಭಾರತೀಯರು ನಗರದಲ್ಲಿ ವಾಸಿಸುತ್ತಿದ್ದಾರೆ ಮತ್ತು ಹಿಂದೆಂದಿಗಿಂತ ಹೆಚ್ಚಾಗಿ ನಗರದ ರಸ್ತೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ವಿಶ್ವದಲ್ಲಿ ಭಾರತವು 4ನೇ ಅತಿದೊಡ್ಡ ಆಟೋ ಮಾರ್ಕೆಟ್ ಆಗಿದ್ದು, ಮುಂದಿನ ವರ್ಷಗಳಲ್ಲಿ ನಮ್ಮ ರಸ್ತೆಗಳು ಇನ್ನಷ್ಟು ದಟ್ಟಣೆಗೆ ಒಳಗಾಗುತ್ತವೆ. ಇದರಿಂದ ರಸ್ತೆಗಳ ಮೇಲೆ ವಿಪರೀತ ಒತ್ತಡ ಉಂಟಾಗುತ್ತದೆ ಮತ್ತು ಬಿರುಕುಗಳು ಮತ್ತು ಅಪಾಯಕಾರಿ ರಸ್ತೆಗುಂಡಿಗಳಿಗೆ ಕಾರಣವಾಗುತ್ತವೆ. ಅಷ್ಟಕ್ಕೂ, ಕಳೆದ ನಾಲ್ಕು ವರ್ಷಗಳಲ್ಲಿ, ರಸ್ತೆ ಗುಂಡಿ ಸಂಬಂಧಿತ ಅಪಘಾತಗಳಿಂದ 11,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಸಮಸ್ಯೆ ಮುಂದುವರಿದರೂ, ರಸ್ತೆ ಸಮಸ್ಯೆ ಮತ್ತು ಪ್ರಯಾಣಿಕರ ಸಂಕಷ್ಟವನ್ನು ನಿವಾರಿಸುವ ದೀರ್ಘಕಾಲೀನ ಸಮಸ್ಯೆಗಳು ಕಂಡುಬಂದಿರಲಿಲ್ಲ.

Damaged roads: the long-standing problem

ಇಪ್ಪತ್ತು ವರ್ಷದ ಪರಿಹಾರ

ಅಲ್ಟ್ರಾಟೆಕ್ ವೈಟ್ ಟಾಪಿಂಗ್‌ ಅನ್ನು ಈ ಸಂಕೀರ್ಣ ಸಮಸ್ಯೆ ಪರಿಹಾರಕ್ಕಾಗಿ ಮತ್ತು ರಸ್ತೆಯನ್ನು ಸುರಕ್ಷಿತ ಮತ್ತು ಗುಂಡಿ ರಹಿತವನ್ನಾಗಿಸಲು ಅಭಿವೃದ್ಧಿಪಡಿಸಲಾಗಿದೆ. ಅಂದರೆ, ವೈಟ್ ಟಾಪಿಂಗ್ ಎಂಬುದು ಪೋರ್ಟ್‌ಲ್ಯಾಂಡ್ ಸಿಮೆಂಟ್ ಕಾಂಕ್ರೀಟ್ (ಪಿಸಿಸಿ) ಆಗಿದ್ದು, ಈಗಾಗಲೇ ಇರುವ ಬಿಟುಮಿನಸ್ ರಸ್ತೆಯ ಮೇಲೆ ನಿರ್ಮಾಣ ಮಾಡಲಾಗುತ್ತದೆ. ರಸ್ತೆಗಳ ಪುನಃಶ್ಚೇತನ ಅಥವಾ ರಚನಾತ್ಮಕ ಸಾಮರ್ಥ್ಯ ವರ್ಧನೆಗೆ ದೀರ್ಘಕಾಲೀನ ಪರ್ಯಾಯವಾಗಿ ಇದು ಕೆಲಸ ಮಾಡುತ್ತದೆ.

ಅನುಕೂಲಗಳು

 • ಬಿರುಕು, ಸ್ಟ್ರಕ್ಚರಲ್ ಬಿರುಕು ಮತ್ತು ರಸ್ತೆ ಗುಂಡಿಗಳನ್ನು ತಡೆಯುತ್ತದೆ ಮತ್ತು ಇದರಿಂದ ಸುರಕ್ಷಿತ ಮತ್ತು ವೇಗದ ಪ್ರಯಾಣ ಅನುಕೂಲ ಒದಗಿಸುತ್ತದೆ.
 • ಈಗಾಗಲೇ ಇರುವ ಬಿಟುಮನ್ ಪಾದಚಾರಿ ರಸ್ತೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
 • ಆರಂಭಿಕ ಬಜೆಟ್ ಬಿಟುಮನ್ ರಸ್ತೆಗಿಂತ ಹೆಚ್ಚಿರುತ್ತದೆ. ಆದರೆ, ಬಿಟುಮನ್ ಮತ್ತು ಕಾಂಕ್ರೀಟ್ ರಸ್ತೆಗಳಿಗೆ ಹೋಲಿಸಿದರೆ ಜೀವಿತಾವಧಿ ವೆಚ್ಚ ತುಂಬಾ ಕಡಿಮೆ ಇರುತ್ತದೆ.
 • ಕೇವಲ 14 ದಿನಗಳಲ್ಲಿ ಇದು ಸಿದ್ಧವಾಗುವುದರಿಂದ, ಕಾಂಕ್ರೀಟ್ ರಸ್ತೆಗಳಿಗೆ ಹೋಲಿಸಿದರೆ ಅತ್ಯಂತ ವೇಗವಾಗಿ ಸಿದ್ಧವಾಗುತ್ತದೆ.
 • ಬೆಳಕಿನ ಪ್ರತಿಫಲನವನ್ನು ರಾತ್ರಿಯಲ್ಲಿ ವರ್ಧಿಸುವುದರಿಂದ ಗೋಚರತೆ ಮತ್ತು ಪ್ರಯಾಣಿಕರ ಸುರಕ್ಷತೆ ಹೆಚ್ಚುತ್ತದೆ. ಇದರಿಂದ ಯಾವುದೇ ರಸ್ತೆಯ ಹೊಳಪು ಹೆಚ್ಚುತ್ತದೆ ಮತ್ತು ಇದರಿಂದ ಶಕ್ತಿ (20-30%) ಉಳಿತಾಯವಾಗುತ್ತದೆ
 • ಪಾದಚಾರಿ ಮಾರ್ಗ ವಿರೂಪವಾಗುವಿಕೆ ಕಡಿಮೆಯಾಗುತ್ತದೆ ಮತ್ತು ಇದರಿಂದ ವಾಹನದ ಇಂಧನ ಬಳಕೆ ಕಡಿಮೆಯಾಗುತ್ತದೆ (10-15%) ಮತ್ತು ಇದರಿಂದಾಗಿ ವಾಹನದ ವಾಯುಮಾಲಿನ್ಯವೂ ಕಡಿಮೆಯಾಗುತ್ತದೆ.
 • ವಾಹನ ಬ್ರೇಕ್ ಹಾಕುವ ಅಂತರ ಕಡಿಮೆಯಾಗುವುದರಿಂದ, ಒಣ ಮತ್ತು ಒದ್ದೆ ಮೇಲ್ಮೈ ಸ್ಥಿತಿಯಲ್ಲಿ ಸುರಕ್ಷಿತವಾಗಿರುತ್ತದೆ.
 • ಕಡಿಮೆ ಉಷ್ಣವನ್ನು ಹೀರಿಕೊಳ್ಳುವುದರಿಂದ ನಗರದಲ್ಲಿ ಉಷ್ಣತೆ ವರ್ಧನೆ ಕಡಿಮೆಯಾಗುತ್ತದೆ ಮತ್ತು ನಗರದ ಕಟ್ಟಡಗಳಲ್ಲಿ ಏರ್ ಕಂಡೀಷನಿಂಗ್‌ಗೆ ಶಕ್ತಿ ಬಳಕೆಯೂ ಕಡಿಮೆಯಾಗುತ್ತದೆ.
 • ವೈಟ್ ಟಾಪ್ ಮಾಡಿದ ರಸ್ತೆಗಳು 100% ಮರುಬಳಕೆ ಮಾಡಬಹುದು ಮತ್ತು ಅದನ್ನು ಒಡೆದು ಮರುಬಳಕೆ ಮಾಡಬಹುದು.

ನಿರ್ಮಾಣ ಹಂತಗಳು

 1. ಮಿಲ್ಲಿಂಗ್ ಮತ್ತು ಪ್ರೊಫೈಲ್ ಕರೆಕ್ಷನ್
 2. ಮೇಲ್ಮೈ ಸಿದ್ಧತೆ
 3. ಕಾಂಕ್ರೀಟ್ ಓವರ್‌ಲೇ
 4. ಮೇಲ್ಮೈ ಫಿನಿಶಿಂಗ್
 5. ಟೆಕ್ಷ್ಚರಿಂಗ್
 6. ಗ್ರೂವ್ ಕಟಿಂಗ್
 7. ಕ್ಯೂರಿಂಗ್ ಮತ್ತು ಟೆಸ್ಟಿಂಗ್
 8. ಕರ್ಬ್ ಲೇಯಿಂಗ್ ಮತ್ತು ಲೇನ್ ಮಾರ್ಕಿಂಗ್
The Twenty-year Solution

ಸಂಪರ್ಕ ವಿವರಗಳು

ಇನ್ನಷ್ಟು ಮಾಹಿತಿಗಾಗಿ, ನಮ್ಮ ಟೋಲ್ ಫ್ರೀ ಸಂಖ್ಯೆ 1800 210 3311 ಸಂಪರ್ಕಿಸಿ ಅಥವಾ ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯುಶನ್ಸ್ (ಯುಬಿಎಸ್) ಸೆಂಟರ್ ಅನ್ನು ಸಂಪರ್ಕಿಸಿ.

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...