ಕಾಂಕ್ರೀಟ್‌ನ ಸಮಗ್ರ ಸಾಮರ್ಥ್ಯವನ್ನು ಪರೀಕ್ಷಿಸುವುದು ಹೇಗೆ

ಬಲಿಷ್ಠ ಮನೆಯನ್ನು ನಿರ್ಮಿಸಲು ಸರಿಯಾದ ಕಾಂಕ್ರೀಟ್ ಮಿಶ್ರಣ ಅತ್ಯಂತ ಮುಖ್ಯ. ಆದ ಕಾರಣ, ನಿಮ್ಮ ಕಾಂಕ್ರೀಟ್ ಮಿಶ್ರಣ ಬಳಸುವ ಮೊದಲು ಅದನ್ನು ಪರೀಕ್ಷಿಸುವುದು ಮುಖ್ಯ. ಆದ ಕಾರಣ, ಕಾಂಕ್ರೀಟ್ ಪರೀಕ್ಷೆಯನ್ನು ಮಾಡಬೇಕು. ಕಾಂಕ್ರೀಟ್ ಪರೀಕ್ಷೆಯಲ್ಲಿ 2 ವಿಧಗಳಿವೆ - ಕಾಸ್ಟಿಂಗ್‌ಗೆ ಮೊದಲು ಮತ್ತು ಸೆಟ್ಟಿಂಗ್‌ನ ಬಳಿಕ. ಕಾಂಕ್ರೀಟ್‌ನ ಸಮಗ್ರ ಸಾಮರ್ಥ್ಯವನ್ನು ಹೇಗೆ ಪರೀಕ್ಷಿಸಲಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.

 
 
1
ಕಾಂಕ್ರೀಟ್ ಸೆಟ್ ಆಗಿ ಗಟ್ಟಿಯಾದ ಬಳಿಕ ಈ ಪರೀಕ್ಷೆಯನ್ನು ಮಾಡಲಾಗುತ್ತದೆ.
2
ಈ ಪರೀಕ್ಷೆಯಲ್ಲಿ, ಕಾಂಕ್ರೀಟ್ ಕ್ಯೂಬ್‌ಗಳನ್ನು ಒತ್ತಡ ಪರೀಕ್ಷೆ ಮಷೀನ್‌ನಲ್ಲಿ ಪರೀಕ್ಷಿಸಲಾಗುತ್ತದೆ.
3
150ಮಿಮೀ x 150ಮಿಮೀ x 150ಮಿಮೀ ನ ಕಾಂಕ್ರೀಟ್ ಕ್ಯೂಬ್ ಮೌಲ್ಡ್ ಅನ್ನು ಬಳಸಲಾಗುತ್ತದೆ.
4
ಇದನ್ನು ಕಾಂಕ್ರೀಟ್‌ನ 3 ಲೇಯರ್‌ಗಳಿಂದ ಭರ್ತಿ ಮಾಡಲಾಗುತ್ತದೆ ಮತ್ತು ಟ್ಯಾಂಪಿಂಗ್ ರಾಡ್‌ನ ಸಹಾಯದಿಂದ ಒತ್ತಲಾಗುತ್ತದೆ.
5
ಮೇಲಿನ ಮೇಲ್ಮೈ ಅನ್ನು ಕರಣಿ ಸಹಾಯದಿಂದ ಸಮತಟ್ಟುಗೊಳಿಸಲಾಗುತ್ತದೆ ಮತ್ತು ನಂತರ ಮೌಲ್ಡ್ ಅನ್ನು ಒದ್ದೆ ಸೆಣಬಿನ ಚೀಲದಿಂದ ಮುಚ್ಚಿ 24 ಗಂಟೆಗಳ ಕಾಲ ಬಿಡಲಾಗುತ್ತದೆ.
6
24 ಗಂಟೆಗಳ ಬಳಿಕ, ಮೌಲ್ಡ್‌ನಿಂದ ಕ್ಯೂಬ್‌ ಅನ್ನು ತೆಗೆಯಲಾಗುತ್ತದೆ ಮತ್ತು 28 ದಿನಗಳ ಕಾಲ ನೀರಿನಲ್ಲಿ ಕ್ಯೂರ್ ಮಾಡಲಾಗುತ್ತದೆ.
7
ಕ್ಯೂಬ್‌ನ ಗಾತ್ರ ಮತ್ತು ತೂಕವನ್ನು ಅಳೆದ ಬಳಿಕ, ಅದನ್ನು ಪರೀಕ್ಷಿಸಲಾಗುತ್ತದೆ.
8
ಪರೀಕ್ಷೆ ಮಾಡುವ ಯಂತ್ರ ಮತ್ತು ಕಾಂಕ್ರೀಟ್‌ನ ಮೇಲ್ಮೈ ಅನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಕ್ಯೂಬ್ ಅನ್ನು ಪ್ಲೇಟ್‌ಗಳ ನಡುವೆ ಇರಿಸಲಾಗುತ್ತದೆ.
9
ನಂತರ, ಕ್ಯೂಬ್ ಮುರಿಯುವ ತನಕ ಯಾವುದೇ ತಳ್ಳಾಟ ಇಲ್ಲದೆ ನಿಧಾನವಾಗ ಲೋಡ್ ಹೆಚ್ಚಿಸಲಾಗುತ್ತದೆ.
10
ಗರಿಷ್ಠ ಲೋಡ್ ಅನ್ನು ದಾಖಲಿಸಿಕೊಳ್ಳುವ ಮೂಲಕ ಕಾಂಕ್ರೀಟ್‌ನ ಸಮಗ್ರ ಸಾಮರ್ಥ್ಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ.
 ಈ ರೀತಿ ಕಾಂಕ್ರೀಟ್‌ನ ಸಮಗ್ರ ಪರೀಕ್ಷೆ ನಡೆಸಲಾಗುತ್ತದೆ.

ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಮತ್ತು ತಜ್ಞ ಸಲಹೆಗಳನ್ನು ಪಡೆಯಲು, ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್‌ಗೆ ಹೋಗಿ.ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ