ಬೀಮ್ ಮತ್ತು ಗಿರ್ಡರ್ ನಡುವಿನ ವ್ಯತ್ಯಾಸವೇನು?
ಗಿರ್ಡರ್‌ಗಳು ಮತ್ತು ಬೀಮ್‌ಗಳು ಎರಡೂ ರಚನಾತ್ಮಕ ಆಧಾರವನ್ನು ಒದಗಿಸುತ್ತವಾದರೂ, ಬೀಮ್ ಮತ್ತು ಗಿರ್ಡರ್ ನಡುವಿನ ವ್ಯತ್ಯಾಸವು ಅವುಗಳ ಗಾತ್ರ, ಕಾರ್ಯ, ಲೋಡ್ -ಹೊರುವ ಸಾಮರ್ಥ್ಯ ಇತ್ಯಾದಿಗಳಲ್ಲಿ ಅಡಗಿದೆ. ಬೀಮ್‌ಗಳು ಮತ್ತು ಗಿರ್ಡರ್‌ಗಳ ನಡುವಿನ ವ್ಯತ್ಯಾಸಗಳ ಸ್ಪಷ್ಟ ವಿವರಣೆ ಇಲ್ಲಿದೆ:
ಗಾತ್ರ ಮತ್ತು ರಚನೆ:
ಬೀಮ್: ಚಿಕ್ಕದು, ಕಡಿಮೆ ಲೋಡ್ ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಗಿರ್ಡರ್: ಭಾರವಾದ ಲೋಡ್ ಗಳು ಮತ್ತು ಇತರೆ ಬೀಮ್‌ಗಳನ್ನು ಸಪೋರ್ಟ್ ಮಾಡಲು ನಿರ್ಮಿಸಲಾದ ಬೃಹತ್ ರಚನೆ.
ಕಾರ್ಯ ಮತ್ತು ಬಳಕೆ:
ಲೋಡ್ ಹೊರಬಲ್ಲ ಸಾಮರ್ಥ್ಯ:
ನಮ್ಯತೆ ಮತ್ತು ಬಿಗಿತ:
ಬೀಮ್: ಹೆಚ್ಚು ಫ್ಲೆಕ್ಸಿಬಲ್, ಸಣ್ಣ ಬೆಂಡಿಂಗ್ ಗೆ ಅವಕಾಶ ನೀಡುತ್ತದೆ.
ಗಿರ್ಡರ್: ದೃಢವಾಗಿರಲು ವಿನ್ಯಾಸಗೊಳಿಸಲಾಗಿದೆ, ವಿಶೇಷವಾಗಿ ಹೆಚ್ಚುವರಿ ಬೀಮ್‌ಗಳನ್ನು ಸಪೋರ್ಟ್ ಮಾಡುವಾಗ ಇದು ನಿರ್ಣಾಯಕವಾಗಿದೆ.
To learn more about beams, click on this article.
ಮನೆ ನಿರ್ಮಾಣದಲ್ಲಿ ಗಿರ್ಡರ್‌ಗಳನ್ನು ಬಳಸಲು ಕಾರಣವೇನು?
ವೈಯಕ್ತಿಕ ಮನೆ ನಿರ್ಮಾಣಕಾರರಿಗೆ, ನಿರ್ಮಾಣದಲ್ಲಿ ಗಿರ್ಡರ್ ಅನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳನ್ನು ಒದಗಿಸಬಹುದು:
1. ಹೆಚ್ಚಿದ ಸ್ಥಿರತೆ: ಗಿರ್ಡರ್‌ಗಳು ಭಾರವಾದ ಲೋಡ್ ಗಳನ್ನು ತಡೆದುಕೊಳ್ಳಲು ಹೆಚ್ಚುವರಿ ಶಕ್ತಿಯನ್ನು ಒದಗಿಸುತ್ತವೆ, ಇದರಿಂದ ರಚನೆಗೆ ಹೆಚ್ಚಿನ ಸ್ಥಿರತೆ ದೊರೆಯುತ್ತದೆ.
2. ದೊಡ್ಡ ಕೊಠಡಿಗಳಿಗೆ ಸಪೋರ್ಟ್ : ಆಂತರಿಕ ಕಂಬಗಳಿಲ್ಲದೆ ದೊಡ್ಡ ಕೊಠಡಿಗಳನ್ನು ನಿರ್ಮಿಸುವಾಗ, ಗಿರ್ಡರ್‌ಗಳು ಸ್ಟ್ರೆಂತ್ ಗೆ ಧಕ್ಕೆಯಾಗದಂತೆ ತೆರೆದ ಸ್ಥಳಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
3. ದೀರ್ಘಾವಧಿಯ ವೆಚ್ಚ ದಕ್ಷತೆ: ಗಿರ್ಡರ್ ಆರಂಭಿಕ ವೆಚ್ಚಗಳನ್ನು ಹೆಚ್ಚಿಸಬಹುದಾದರೂ, ಅದರ ಬಾಳಿಕೆಯಿಂದಾಗಿ ಕಾಲಕ್ರಮೇಣ ದುರಸ್ತಿ ವೆಚ್ಚಗಳು ಕಡಿಮೆಯಾಗುತ್ತವೆ.
ಗಿರ್ಡರ್‌ನ ಅರ್ಥ ಮತ್ತು ಅದರ ಅನ್ವಯವನ್ನು ಅರ್ಥಮಾಡಿಕೊಳ್ಳುವುದರಿಂದ ಮನೆ ನಿರ್ಮಿಸುವವರು ರಚನಾತ್ಮಕ ಸಮಗ್ರತೆ ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ಹೆಚ್ಚಿಸಲು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.