ಸ್ವಂತ ಮನೆ ಕಟ್ಟುವುದು ಸಣ್ಣ ನಿರ್ಧಾರವಲ್ಲ. ಎಷ್ಟೋ ಕುಟುಂಬಗಳಿಗೆ ಇದು ಜೀವನದಲ್ಲಿ ಒಂದೇ ಬಾರಿ ಆಗುವ ಕೆಲಸ. ಅದಕ್ಕೇ ಒಳಗಿನ ಕೊಠಡಿಗಳ ಯೋಜನೆ ಎಷ್ಟು ಮುಖ್ಯವೋ, ಹೊರಗಿನ ಎಲಿವೇಶನ್ ಪ್ಲಾನ್ ಕೂಡ ಅಷ್ಟೇ ಮುಖ್ಯ. ದಕ್ಷಿಣಾಭಿಮುಖ ಸೈಟ್ ಇದ್ದರೆ ನಿಮಗೆ ಬಿಸಿಲು ಮತ್ತು ವಿನ್ಯಾಸದ ಬಗ್ಗೆ ಅನುಮಾನಗಳಿರಬಹುದು. ಚಿಂತೆ ಬೇಡ, ಸರಿಯಾದ ಯೋಜನೆ ಇದ್ದರೆ ನಿಮ್ಮ ಮನೆ ಸುಂದರವಾಗಿ ಮತ್ತು ಆರಾಮದಾಯಕವಾಗಿರುತ್ತೆ.
ಭಾರತೀಯ ಹವಾಮಾನಕ್ಕೆ ಹೊಂದಿಕೆಯಾಗುವ G2 ದಕ್ಷಿಣಾಭಿಮುಖ ಮನೆಗಳ ಎಲಿವೇಶನ್ ಐಡಿಯಾಗಳನ್ನು ಇಲ್ಲಿ ನೋಡೋಣ.
ದಕ್ಷಿಣಾಭಿಮುಖದ ಅನುಕೂಲಗಳನ್ನು ತಿಳಿಯಿರಿ
G+2 ಮನೆಯಲ್ಲಿ ಮೂರು ಅಂತಸ್ತುಗಳು ಕಾಣಿಸುತ್ತವೆ. ಅಂದರೆ ನಿಮ್ಮ ಮನೆಯ ಮುಂಭಾಗದ ವಿನ್ಯಾಸ ನಿಮ್ಮ ಮನೆಯ ಗುರುತಾಗುತ್ತೆ. ದಕ್ಷಿಣಾಭಿಮುಖ G2 ಮನೆಗೆ ವಿನ್ಯಾಸ ಹೇಗಿರಬೇಕು ಅಂದರೆ:
ಕಠಿಣ ಬಿಸಿಲನ್ನು ತಡೆಯಬೇಕು
ಗಾಳಿ ಸರಾಗವಾಗಿ ಬರಬೇಕು
ನೋಡಲು ಆಧುನಿಕವಾಗಿರಬೇಕು ಮತ್ತು ನಿರ್ವಹಣೆ ಸುಲಭವಾಗಿರಬೇಕು
ವರ್ಷಗಳ ಕಾಲ ಉಪಯೋಗಕ್ಕೆ ಬರಬೇಕು
ನೆನಪಿಡಿ, ಮನೆ ಕಟ್ಟುವುದು ಒಂದೇ ಸಲ, ಅದಕ್ಕೇ ಸರಿಯಾಗಿ ಕಟ್ಟಿ.
ಸೂಕ್ತವಾದ ಡಿಸೈನ್ ಐಡಿಯಾಗಳು
ನಿಮ್ಮ ಮನೆಯ ಅಂದ ಹೆಚ್ಚಿಸುವ ಕೆಲವು G2 ದಕ್ಷಿಣಾಭಿಮುಖ ಎಲಿವೇಶನ್ ಡಿಸೈನ್‌ಗಳು ಇಲ್ಲಿವೆ:
1. ಬಾಲ್ಕನಿ ಮತ್ತು ಓವರ್‌ಹ್ಯಾಂಗ್‌ಗಳ ಬಳಕೆ
ಪ್ರತಿ ಅಂತಸ್ತಿನ ಬಾಲ್ಕನಿಗಳು ಬಿಸಿಲನ್ನು ತಡೆದು ಗಾಳಿಯ ಚಲನೆಗೆ ನೆರವಾಗುತ್ತವೆ. ದೊಡ್ಡ ಛಜ್ಜಾಗಳು ಅಥವಾ ಶೇಡ್‌ಗಳು ಗೋಡೆಯನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸುತ್ತವೆ.
ಮೇಲಿನ ಅಂತಸ್ತುಗಳಲ್ಲಿ ವಿಸ್ತರಿಸಿದ ಬಾಲ್ಕನಿ ಇರಲಿ
ಕೊಠಡಿಯ ಒಳಗಿನ ಬಿಸಿ ಕಡಿಮೆ ಮಾಡಲು ಅಡ್ಡ ಶೇಡ್‌ಗಳನ್ನು ಬಳಸಿ
ಟಿಪ್: ಹೆಚ್ಚು ಅಲಂಕಾರಿಕ ವಸ್ತುಗಳ ಬದಲು ದಕ್ಷಿಣದ ಕಡೆ ಬಾಲ್ಕನಿಯನ್ನು ವಿಸ್ತರಿಸಿ. |
2. ಹೊರಭಾಗಕ್ಕೆ ತಿಳಿ ಬಣ್ಣಗಳನ್ನು ಆರಿಸಿ
ದಕ್ಷಿಣಾಭಿಮುಖ ಮನೆಗಳಿಗೆ ಬಿಸಿಲು ಜಾಸ್ತಿ ಬೀಳುತ್ತೆ. ತಿಳಿ ಬಣ್ಣಗಳು ಬಿಸಿಲನ್ನು ಪ್ರತಿಫಲಿಸಿ ಒಳಗಡೆ ತಂಪಾಗಿರುವಂತೆ ಮಾಡುತ್ತವೆ.
ಬೇಜ್, ಆಫ್-ವೈಟ್ ಅಥವಾ ಪಾಸ್ಟಲ್ ಬಣ್ಣಗಳನ್ನು ಬಳಸಿ
ಬಾಳಿಕೆಗಾಗಿ ಬಣ್ಣದ ಜೊತೆಗೆ ಕಲ್ಲು ಅಥವಾ ವಿನ್ಯಾಸದ ಫಲಕಗಳನ್ನು ಬಳಸಿ
3. ಸಮರೂಪತೆ ಮತ್ತು ಸ್ಪಷ್ಟ ರೇಖೆಗಳತ್ತ ಗಮನ ಕೊಡಿ
ಸರಳವಾದ G2 ದಕ್ಷಿಣಾಭಿಮುಖ ಎಲಿವೇಶನ್ ಡಿಸೈನ್ ಅಚ್ಚುಕಟ್ಟಾಗಿದ್ದಾಗ ಚೆನ್ನಾಗಿ ಕಾಣುತ್ತದೆ. ಹೆಚ್ಚು ಅಲಂಕಾರ ಮಾಡಿದರೆ ಖರ್ಚು ಮತ್ತು ನಿರ್ವಹಣೆ ಜಾಸ್ತಿಯಾಗುತ್ತೆ.
ಅಧಿಕ ವಿನ್ಯಾಸದ ಬದಲು ನೇರವಾದ ಗೆರೆಗಳಿರಲಿ
ಸರಳವಾದ ಮೆಟಲ್ ಗ್ರಿಲ್ ಬಳಸಿ
ಟಿಪ್: ತುಂಬಾ ಶೈಲಿಗಳನ್ನು ಬೆರೆಸುವ ಬದಲು ಯಾವುದಾದರೂ ಒಂದು ಸಾಮಗ್ರಿ (ಕಲ್ಲು, ಟೆಕ್ಸ್ಚರ್ ಪೇಂಟ್ ಅಥವಾ ವುಡ್ ಫಿನಿಶ್) ಮೇಲೆ ಗಮನ ಕೊಡಿ. |
4. ಕಿಟಕಿಗಳನ್ನು ಜಾಣತನದಿಂದ ಯೋಜಿಸಿ
ಕಿಟಕಿಗಳು ಸರಿಯಾದ ಜಾಗದಲ್ಲಿದ್ರೆ ಬಿಸಿಲಾಗದಂತೆ ಬೆಳಕು ಬರುತ್ತದೆ.
ಸನ್-ಕಂಟ್ರೋಲ್ ಗ್ಲಾಸ್ ಬಳಸಿ
ದಕ್ಷಿಣದ ಕಡೆ ವರ್ಟಿಕಲ್ ಸ್ಕ್ರೀನ್ ಹಾಕಿ
ಒಂದೇ ಬಾರಿ ಕಟ್ಟಿ, ಜಾಣತನದಿಂದ ಕಟ್ಟಿ
ನಿಮ್ಮ ಮನೆ ಇವತ್ತು ಚೆನ್ನಾಗಿ ಕಂಡರೆ ಸಾಲದು, ಮುಂದಿನ ಎಷ್ಟೋ ವರ್ಷಗಳ ಕಾಲ ಆರಾಮದಾಯಕವಾಗಿರಬೇಕು. G2 ದಕ್ಷಿಣಾಭಿಮುಖ ಮನೆಗಳಿಗೆ ಸರಿಯಾದ ಎಲಿವೇಶನ್ ಆರಿಸುವುದರಿಂದ ವಿದ್ಯುತ್ ಉಳಿಸಬಹುದು, ನಿರ್ವಹಣೆ ಕಡಿಮೆ ಮಾಡಬಹುದು ಮತ್ತು ಮನೆಯವರು ಖುಷಿಯಾಗಿರುವಂತೆ ಮಾಡಬಹುದು.