ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ


ಸ್ಮಾರ್ಟ್‌ ಹೋಮ್‌ ಬೆಳಕಿನ ವ್ಯವಸ್ಥೆ ನಿರ್ಮಾಣಕ್ಕೆ ಸಲಹೆಗಳು

ಸ್ಮಾರ್ಟ್ ಹೋಮ್ ಲೈಟಿಂಗ್ ಇರುವುದು ಕೇವಲ ಅನುಕೂಲಕ್ಕೆ ಅಲ್ಲ. ಅದು ಪರಿಣಾಮಕಾರಿ ಮತ್ತು ವೈಯಕ್ತಿಕಗೊಳಿಸುವ ವಾಸಸ್ಥಳದ ನಿರ್ಮಾಣಕ್ಕೆ ಸಹಕಾರಿ. ನೀವು ಸ್ಮಾರ್ಟ್ ಹೋಮ್ ತಂತ್ರಜ್ಞಾನಕ್ಕೆ ಹೊಸಬರಾಗಿರಬಹುದು ಅಥವಾ ಈಗಿರುವ ಮನೆಯಲ್ಲಿ ಸ್ಮಾರ್ಟ್‌ ಲೈಟ್‌ ತಂತ್ರಜ್ಞಾನವನ್ನು ಅಳವಡಿಸಲು ಬಯಸಿರಬಹುದು. ಅತ್ಯುತ್ತಮ ಸ್ಮಾರ್ಟ್‌ಲೈಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಹಿಡಿದು ನಿಮ್ಮ ದಿನಚರಿ ಉತ್ತಮಗೊಳ್ಳಲು ಬೆಳಕಿನ ಆಟೋಮೇಷನ್‌ ಅಳವಡಿಸುವವರೆಗೆ ಈ ಮಾರ್ಗದರ್ಶಿ ಸಮಗ್ರ ವಿವರವನ್ನು ನೀಡುತ್ತಿದೆ. ಈ ವ್ಯವಸ್ಥೆ ಮೂಲಕ ನಿಮ್ಮ ದಿನಚರಿಯನ್ನು ಹೇಗೆ ಸುಧಾರಿಸಬಹುದು? ಹೇಗೆ ವಿದ್ಯುತ್‌ ಉಳಿತಾಯ ಮಾಡಬಹುದು? ದೀರ್ಘಾವಧಿಯಲ್ಲಿ ನಿಮಗೆ ಎಷ್ಟು ಹಣ ಉಳಿತಾಯ ಮಾಡಬಹುದು ಎಂಬೆಲ್ಲ ವಿವರವನ್ನು ಒಳಗೊಂಡಿದೆ. ಮನೆಯನ್ನು ಸ್ಮಾರ್ಟ್‌ ಮತ್ತು ಸುಸ್ಥಿರವಾಗಿಸಲು ಬಯಸುವವರಿಗೆ ಉಪಯುಕ್ತ ವಿವರ ಇಲ್ಲಿದೆ.

Share:


ಈ ಅಂಶಗಳನ್ನು ಗಮನಿಸಿ

 

  • ಸ್ಮಾರ್ಟ್ ಲೈಟ್‌ಗಳು ವೈಯಕ್ತೀಕರಿಸಬಹುದಾದ, ಸ್ವಯಂಚಾಲಿತ ನಿಯಂತ್ರಣಕ್ಕೆ ಅವಕಾಶ ನೀಡುತ್ತವೆ, ಸೌಲಭ್ಯ ಮತ್ತು ವಾತಾವರಣವನ್ನು ಸುಧಾರಿಸುತ್ತವೆ.

     

  • ಸ್ಮಾರ್ಟ್ ಲೈಟ್‌ಗಳನ್ನು ಆಯ್ಕೆಮಾಡುವಾಗ ನಿಮ್ಮ ಸ್ಮಾರ್ಟ್ ಹೋಮ್ ಸಿಸ್ಟಮ್ ಮತ್ತು ವಾಯ್ಸ್ ಅಸಿಸ್ಟೆಂಟ್‌ಗಳೊಂದಿಗೆ ಹೊಂದಾಣಿಕೆಯಾಗುವುದೇ ಎಂದು ಪರಿಶೀಲಿಸಿ.

     

  • ಮನೆಯ ಬೆಳಕಿನ ವ್ಯವಸ್ಥೆಯನ್ನು ಸ್ವಯಂಚಾಲಿತವಾಗಿಸುವುದರಿಂದ ವಿದ್ಯುತ್‌ ದಕ್ಷತೆ ಮತ್ತು ದಿನಚರಿ ಉತ್ತಮಗೊಳ್ಳುತ್ತದೆ.

     

  • ವಿದ್ಯುತ್‌ನ ಕಾರ್ಯಕ್ಷಮತೆ ಹೆಚ್ಚುವುದರಿಂದ ಸರಿಯಾದ ರೀತಿಯಲ್ಲಿ ಅಳವಡಿಸಿದರೆ ಸಮಯದ ಜತೆ ಹಣವನ್ನೂ ಉಳಿಸಬಹುದು.



ಸ್ಮಾರ್ಟ್ ಹೋಮ್ ಲೈಟಿಂಗ್ ಸಿಸ್ಟಮ್‌ಗಳು ಸ್ವಯಂಚಾಲಿತ (ಆಟೋಮೇಷನ್‌) ಮತ್ತು ವೈಯಕ್ತೀಕರಣದ (ಕಸ್ಟಮೈಜ್‌) ಮೂಲಕ ನಿಮ್ಮ ಮನೆಯ ವಾತಾವರಣ, ಸೌಲಭ್ಯ ಮತ್ತು ವಿದ್ಯುತ್‌ ದಕ್ಷತೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಕಂಡುಕೊಳ್ಳಿ.



ನಿಮ್ಮ ಮನೆಗೆ ಅತ್ಯುತ್ತಮ ಸ್ಮಾರ್ಟ್‌ ಲೈಟ್‌ಗಳು: ಯಾವುದನ್ನು ಆಯ್ಕೆ ಮಾಡುವಿರಿ?

ನಿಮ್ಮ ಮನೆಗೆ ಅತ್ಯುತ್ತಮವಾದ ಸ್ಮಾರ್ಟ್ ಲೈಟ್‌ಗಳನ್ನು ಆಯ್ಕೆ ಮಾಡುವಾಗ ಹಲವು ಅಂಶಗಳನ್ನು ಗಮನಿಸಬೇಕು. ಅದು ಈಗಾಗಲೇ ಮನೆಯಲ್ಲಿರುವ ಸ್ಮಾರ್ಟ್ ಹೋಮ್ ಸಿಸ್ಟಮ್‌ನೊಂದಿಗಿನ ಹೊಂದಾಣಿಕೆಯಾಗಬೇಕು. ಬಳಸಲು ಸುಲಭವಾಗಿರಬೇಕು. ಸಾಕಷ್ಟು ಫೀಚರ್‌ಗಳನ್ನು ಹೊಂದಿರಬೇಕು. ಇದಕ್ಕಾಗಿ ಈ ಮುಂದಿನ ಅಂಶಗಳನ್ನು ಪರಿಗಣಿಸಬಹುದು:

 

     1) ಹೊಂದಾಣಿಕೆ: ಅಮೆಜಾನ್‌ ಅಲೆಕ್ಸಾ, ಗೂಗಲ್‌ ಅಸಿಸ್ಟೆಂಟ್‌ ಅಥವಾ ಆಪಲ್‌ ಹೋಮ್‌ಕಿಟ್‌ನಂತಹ ಸ್ಮಾರ್ಟ್‌ ಸಾಧನಗಳ ಜತೆ ಲೈಟ್‌ಗಳು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಿ.

 

      2) ಫೀಚರ್‌ಗಳು: ಲೈಟ್‌ಗಳಲ್ಲಿ ಮಂದಬೆಳಕು ಅಥವಾ ಡಿಮ್ಮಿಂಗ್‌, ಬಣ್ಣಗಳು ಬದಲಾಗುವುದು ಮತ್ತು ಸಮಯ ಸೆಟ್‌ ಮಾಡುವ ಫೀಚರ್‌ಗಳು ಇವೆಯೇ ಎಂದು ತಿಳಿದುಕೊಳ್ಳಿ.

 

      3) ವಿದ್ಯುತ್‌ ದಕ್ಷತೆ: ಸಾಮಾನ್ಯವಾಗಿ ಸ್ಮಾರ್ಟ್‌ ಲೈಟ್‌ಗಳು ಎಲ್‌ಇಡಿಗಳನ್ನು ಹೊಂದಿರುತ್ತವೆ. ಇವು ದೀರ್ಘಬಾಳಿಕೆ ಹೊಂದಿವೆ ಮತ್ತು ಕಡಿಮೆ ವಿದ್ಯುತ್‌ ಬಳಸುತ್ತವೆ.

 

     4) ಸುಲಭ ಅಳವಡಿಕೆ: ಕೆಲವು ಸ್ಮಾರ್ಟ್ ಬಲ್ಬ್‌ಗಳನ್ನು ಈಗಿರುವ ಬೆಳಕಿನ ಫಿಕ್ಚರ್‌ಗಳಿಗೆ ನೇರವಾಗಿ ಜೋಡಿಸಬಹುದು, ಆದರೆ ಇತರವುಗಳಿಗೆ ಸಂಪರ್ಕಕ್ಕಾಗಿ ಹಬ್ ಅಥವಾ ಬ್ರಿಡ್ಜ್ ಅಗತ್ಯವಿರುತ್ತದೆ.

 

 



ಸ್ಮಾರ್ಟ್‌ ಹೋಮ್‌ ಬೆಳಕಿನ ವ್ಯವಸ್ಥೆ ಅಳವಡಿಕೆ: ಆರಂಭಿಕರಿಗೆ ಮಾರ್ಗದರ್ಶಿ

ಮನೆಗೆ ಮೊದಲ ಬಾರಿ ಸ್ಮಾರ್ಟ್ ಲೈಟಿಂಗ್ ಸಿಸ್ಟಮ್ ಅಳವಡಿಸುವ ಕುರಿತು ನಿಮಗೆ ಅಳುಕು ಇರಬಹುದು. ಆದರೆ, ಇದು ಸರಳವಾಗಿದೆ. ಇಲ್ಲಿ ಹಂತಹಂತದ ಮಾರ್ಗದರ್ಶಿ ನೀಡಲಾಗಿದೆ.

 

  1. ಸೂಕ್ತವಾದ ಲೈಟ್‌ಗಳನ್ನು ಆಯ್ಕೆ ಮಾಡಿ: ನಿಮ್ಮ ಮನೆಯ ಅಗತ್ಯಗಳಿಗೆ ಸೂಕ್ತವಾಗುವಂತಹ ಅತ್ಯುತ್ತಮ ಸ್ಮಾರ್ಟ್‌ಲೈಟ್‌ಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ, ಮೇಲಿನ ಬೆಳಕಿಗೆ ಎಲ್‌ಇಡಿ ಸ್ಮಾರ್ಟ್ ಬಲ್ಬ್‌ಗಳನ್ನು ಅಥವಾ ಸಣ್ಣ ಮೂಲೆಗಳಿಗೆ ಸ್ಮಾರ್ಟ್ ಲ್ಯಾಂಪ್‌ಗಳನ್ನು ಆಯ್ಕೆ ಮಾಡಿ.

     

  2. ಸ್ಮಾರ್ಟ್‌ ಬಲ್ಬ್‌ ಇನ್‌ಸ್ಟಾಲ್‌ ಮಾಡುವುದು: ಸ್ಮಾರ್ಟ್ ಬಲ್ಬ್‌ಗಳನ್ನು ಈಗಿರುವ ಫಿಕ್ಚರ್‌ಗಳಿಗೆ ಸ್ಕ್ರೂ ಮಾಡಿ. ಫಿಲಿಪ್ಸ್ ಹ್ಯೂನಂತಹ ಸಿಸ್ಟಮ್ ಬಳಸುತ್ತಿದ್ದರೆ, ಹಬ್ ಅನ್ನು ನಿಮ್ಮ ವೈ-ಫೈಗೆ ಸಂಪರ್ಕಿಸಿ. ಇನ್‌ಸ್ಟಾಲ್‌ ಮಾಡುವ ತೊಂದರೆಗಳನ್ನು ತಪ್ಪಿಸಲು ವಿದ್ಯುತ್ ಸುರಕ್ಷತಾ ನಿಯಮಗಳನ್ನು ಅನುಸರಿಸಿ.

     

  3. ಆಪ್‌ ಡೌನ್‌ಲೋಡ್‌ ಮಾಡಿ: ಈಗ ಬಹುತೇಕ ಸ್ಮಾರ್ಟ್‌ ಹೋಮ್‌ ಲೈಟಿಂಗ್‌ ವ್ಯವಸ್ಥೆಗಳನ್ನು ಮೊಬೈಲ್‌ ಆಪ್‌ ಮೂಲಕವೇ ನಿಯಂತ್ರಿಸಬಹುದು. ಆಪ್‌ನಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಿ ಲೈಟ್‌ಗಳನ್ನು ಬಳಸಿ.

     

  4. ನಿಮ್ಮ ಸ್ಮಾರ್ಟ್‌ ಹೋಮ್‌ ಹಬ್‌ಗೆ ಸಂಪರ್ಕ ಕಲ್ಪಿಸಿ: ಅಲೆಕ್ಸಾ ಅಥವಾ ಗೂಗಲ್‌ನಂತಹ ವಿವಿಧ ಸಾಧನಗಳಿಗೆ ಸ್ಮಾರ್ಟ್‌ ಬಲ್ಬ್‌ಗಳನ್ನು ಸಂಪರ್ಕ ಮಾಡಿ. ಆಪ್‌ನಿಂದಲೇ ಧ್ವನಿ ಸಂಕೇತಗಳನ್ನು ನೀಡುವ ಮೂಲಕ ಇವುಗಳನ್ನು ನಿಯಂತ್ರಿಸಿ.

     

  5. ವೇಳಾಪಟ್ಟಿ ಮತ್ತು ಆಟೋಮೇಷನ್‌ ಸೆಟ್ ಮಾಡಿ: ಲೈಟ್‌ಗಳನ್ನು ನಿರ್ದಿಷ್ಟ ಸಮಯಗಳಲ್ಲಿ ಆನ್ ಮತ್ತು ಆಫ್ ಆಗುವಂತೆ ಪ್ರೋಗ್ರಾಂ ಮಾಡಬಹುದು. ನೀವು ಅವುಗಳನ್ನು ಸೂರ್ಯೋದಯ/ಸೂರ್ಯಾಸ್ತದ ಸಮಯದ ಜತೆ ಅಥವಾ ಮೋಷನ್ ಸೆನ್ಸಾರ್‌ಗಳೊಂದಿಗೆ ಸಿಂಕ್ ಮಾಡಬಹುದು.



ನಿಮ್ಮ ದಿನಚರಿ ಉತ್ತಮಗೊಳ್ಳಲು ಸ್ಮಾರ್ಟ್‌ ಲೈಟಿಂಗ್‌ ಆಟೋಮೇಷನ್‌ ಹೇಗೆ ಸಹಕಾರಿ?

ಸ್ಮಾರ್ಟ್ ಹೋಮ್ ಲೈಟಿಂಗ್ ಆಟೋಮೇಷನ್ ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿಮ್ಮ ಮನೆಯ ಇತರ ಸ್ಮಾರ್ಟ್ ಡಿವೈಸ್‌ಗಳೊಂದಿಗೆ ಸಂಯೋಜಿಸುವ ಮೂಲಕ ಸುಗಮಗೊಳಿಸುತ್ತದೆ. ಇದು ಹೇಗೆ ಎಂಬ ವಿವರ ಇಲ್ಲಿದೆ:

 

  • ಬೆಳಗ್ಗೆ ಎದ್ದೇಳುವುದು: ಬೆಳಗ್ಗೆ ಸೂರ್ಯೋದಯವಾಗುತ್ತಿದ್ದಂತೆ ಬೆಳಕಿನ ಕಿರಣಗಳು ಕಾಣಿಸಲು ಆರಂಭವಾದಗ ಸ್ಮಾರ್ಟ್‌ಲೈಟ್‌ಗಳು ಉರಿಯುವಂತೆ ಸೆಟ್‌ ಮಾಡಿ.
     

  • ಸಂಜೆಯ ವಿಶ್ರಾಂತಿ: ಸಂಜೆಯ ಸಮಯದಲ್ಲಿ ಲೈಟ್‌ಗಳು ಮಂದವಾಗುವಂತೆ ಸಿಂಕ್ ಮಾಡಿ, ಮಲಗುವ ಮುನ್ನ ಆರಾಮದಾಯಕ ವಾತಾವರಣವನ್ನು ಸೃಷ್ಟಿಸಿ.

     

  • ರಜೆಯ ಮೋಡ್: ನೀವು ಮನೆಯಲ್ಲಿರುವಂತೆ ಕಾಣುವಂತೆ ಮಾಡಲು ಲೈಟ್‌ಗಳನ್ನು ನಿರ್ದಿಷ್ಟ ಅಂತರಗಳಲ್ಲಿ ಆನ್ ಮತ್ತು ಆಫ್ ಆಗುವಂತೆ ಸ್ವಯಂಚಾಲಿತಗೊಳಿಸಿ. ಭದ್ರತೆಯನ್ನು ಹೆಚ್ಚಿಸಲು ಇದು ಸಹಕಾರಿ.

     

  • ಮೋಷನ್‌ ಇರುವ ಲೈಟಿಂಗ್‌: ಬಾತ್‌ರೂಂ ಅಥವಾ ಹಾಲ್‌ನಲ್ಲಿ ನೀವು ಹೋದಾಗ ಸ್ವಿಚ್‌ ಮುಟ್ಟದೆ ಸ್ವಯಂಚಾಲಿತವಾಗಿ ಲೈಟ್‌ಗಳು ಆನ್‌ ಆಗುವಂತೆ ಮೋಷನ್‌ ಸೆನ್ಸಾರ್‌ಗಳನ್ನು ಅಳವಡಿಸಿ.

 

 

ಸಾಟಿಯಿಲ್ಲದ ಆಟೋಮೇಷನ್‌ಗಾಗಿ ಪ್ರಮುಖ ಹೋಮ್‌ ಲೈಟಿಂಗ್‌ ಕಂಟ್ರೋಲ್‌ ಸಿಸ್ಟಮ್‌ಗಳು

ವಿವಿಧ ಬಗೆಯ ಲೈಟಿಂಗ್ ನಿಯಂತ್ರಣ ವ್ಯವಸ್ಥೆಗಳು ಲಭ್ಯವಿವೆ. ನಿಮ್ಮ ಬಜೆಟ್‌ಗೆ ತಕ್ಕಂತೆ, ಸುಲಭವಾಗಿ ಬಳಸಲು ಸಾಧ್ಯವಿರುವ, ವೈಯಕ್ತೀಕರಣ ಮಾಡಲು ಸಾಧ್ಯವಿರುವುದನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಪ್ರಮುಖ ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ:

  1. ಫಿಲಿಪ್ಸ್‌ ಹ್ಯೂ: ಇದು ಸಂಕೀರ್ಣ ಬೆಳಕಿನ ದೃಶ್ಯಗಳು ಮತ್ತು ಶೆಡ್ಯೂಲ್‌ಗಳನ್ನು ರಚಿಸಲು ಸೂಕ್ತವಾಗಿದೆ. ಇದು ಎಲ್ಲಾ ಬಗೆಯ ಪ್ರಮುಖ ಸ್ಮಾರ್ಟ್‌ಹೋಮ್‌ ಸಿಸ್ಟಮ್‌ಗಳೊಂದಿಗೆ ಹೊಂದಾಣಿಕೆಯಾಗುತ್ತದೆ.

     

  2. ಲುಟ್ರಾನ್ ಕ್ಯಾಸೆಟಾ: ಇದು ಅತ್ಯುತ್ತಮ ಡಿಮ್ಮಿಂಗ್‌ ಗುಣ ಹೊಂದಿದೆ. ಆಧುನಿಕ ನಿಯಂತ್ರಣ ಬಯಸುವವರಿಗೆ ಇದು ಅಚ್ಚುಮೆಚ್ಚಿನ ಆಯ್ಕೆ.

     

  3. ಸ್ಯಾಮ್‌ಸಂಗ್ ಸ್ಮಾರ್ಟ್‌ಥಿಂಗ್ಸ್: ಸ್ಮಾರ್ಟ್ ಲೈಟ್‌ಗಳು ಸೇರಿದಂತೆ ಹಲವು ಸ್ಮಾರ್ಟ್ ಸಾಧನಗಳೊಂದಿಗೆ ಸಂಯೋಜನೆ ಮಾಡಲು ಸಾಧ್ಯವಿರುವ ಬಹುಮುಖ ವ್ಯವಸ್ಥೆ ಇದಾಗಿದೆ.

     

  4. ವೆಮೊ: ಇದು ಬಜೆಟ್‌ ಸ್ನೇಹಿ ಆಯ್ಕೆಯಾಗಿದೆ. ಇದು ಅನನ್ಯವಾದ ಆಟೋಮೇಷನ್‌ ಫೀಚರ್‌ಗಳನ್ನು ಹೊಂದಿದೆ.

     

ಹೆಚ್ಚುವರಿಯಾಗಿ, ಸ್ಮಾರ್ಟ್‌ಲೈಟ್‌ಗಳನ್ನು ಫಾಲ್ಸ್‌ ಸೀಲಿಂಗ್‌ನ ಜತೆ ಅಳವಡಿಸಲು ಯತ್ನಿಸಿ. ಇದರಿಂದ ನಿಮ್ಮ ಮನೆಯ ಸೌಂದರ್ಯ ನಯವಾಗಿ, ಆಧುನಿಕವಾಗಿ ಕಾಣಿಸುತ್ತದೆ.



ಸ್ಮಾರ್ಟ್‌ ಲೈಟಿಂಗ್‌ ವ್ಯವಸ್ಥೆ ಮೂಲಕ ವಿದ್ಯುತ್‌ ಉಳಿತಾಯ ಮತ್ತು ಹಣ ಉಳಿತಾಯ

ಸ್ಮಾರ್ಟ್ ಲೈಟಿಂಗ್ ವ್ಯವಸ್ಥೆಯ ಒಂದು ದೊಡ್ಡ ಪ್ರಯೋಜನವೆಂದರೆ ದೀರ್ಘಾವಧಿಯ ವೆಚ್ಚ ಉಳಿತಾಯ ಮತ್ತು ಸುಧಾರಿತ ಇಂಧನ ದಕ್ಷತೆಯ ಸಾಮರ್ಥ್ಯ. ಯಾಕೆಂದು ತಿಳಿಯಿರಿ:

 

  • ವಿದ್ಯುತ್‌ ದಕ್ಷತೆಯ ಎಲ್‌ಇಡಿಗಳು: ಮನೆಯಲ್ಲಿ ಬಳಸುವ ಬಹುತೇಕ ಸ್ಮಾರ್ಟ್‌ಲೈಟ್‌ಗಳು ಎಲ್‌ಇಡಿಗಳಾಗಿವೆ. ಇವು ಸಾಂಪ್ರದಾಯಿಕ ಇನ್‌ಕ್ಯಾಂಡೆಸೆಂಟ್ ಬಲ್ಬ್‌ಗಳಿಗಿಂತ ಶೇಕಡ 75ರವರೆಗೆ ಕಡಿಮೆ ಶಕ್ತಿಯನ್ನು ಬಳಸುತ್ತವೆ.

     

  • ಆಟೋಮೇಷನ್‌: ಬಳಕೆ ಮಾಡದೆ ಇರುವಾಗ ವಿದ್ಯುತ್‌ ವ್ಯರ್ಥವಾಗುವುದನ್ನು ತಪ್ಪಿಸಲು ಸ್ವಯಂಚಾಲಿತವಾಗಿ ಆಫ್‌ ಆಗುತ್ತದೆ. ಇದರಿಂದ ವಿದ್ಯುತ್‌ ಬಿಲ್‌ ಕಡಿಮೆಯಾಗುತ್ತದೆ.

     

  • ಡಿಮ್ಮಿಂಗ್‌ ಫೀಚರ್‌: ಅಗತ್ಯಕ್ಕೆ ತಕ್ಕಂತೆ ಬೆಳಕು ಮಂದವಾಗುವ ಫೀಚರ್‌ ಇರುವ ಕಾರಣ ವಿದ್ಯುತ್‌ ಬಳಕೆ ಕಡಿಮೆಯಾಗುತ್ತದೆ.

     

ಸ್ಮಾರ್ಟ್‌ ಹೋಮ್‌ ಲೈಟಿಂಗ್‌ ಸಿಸ್ಟಮ್‌ಗೆ ಹೂಡಿಕೆ ಮಾಡುವುದರಿಂದ ಮನೆಯ ವಾತಾವರಣ ಹೆಚ್ಚು ಆಹ್ಲಾದವಾಗುತ್ತದೆ ಮತ್ತು ಶಕ್ತಿ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.




ನಿಮ್ಮ ಮನೆಗೆ ಸ್ಮಾರ್ಟ್‌ ದೀಪಗಳನ್ನು ಅಳವಡಿಸುವ ಮೂಲಕ ನಿಮ್ಮ ವಾಸಸ್ಥಳದ ಸೌಕರ್ಯ ಮತ್ತು ಸೌಂದರ್ಯವನ್ನು ಉತ್ತಮಪಡಿಸುವಿರಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್‌ ಮಾಡಬಹುದಾದ ಹೆಚ್ಚು ವಿದ್ಯುತ್‌ ದಕ್ಷತೆಯ ವ್ಯವಸ್ಥೆಯನ್ನು ಸ್ಥಾಪಿಸುತ್ತೀರಿ. ನೀವು ಹೊಸದಾಗಿ ಸ್ಮಾರ್ಟ್‌ ಲೈಟಿಂಗ್‌ ಅಳವಡಿಸುವ ಕುರಿತು ಯೋಚಿಸುತ್ತಿರಬಹುದು ಅಥವಾ ಈಗ ಇರುವ ಸ್ಮಾರ್ಟ್‌ ದೀಪ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲು ಬಯಸುತ್ತಿರಬಹುದು. ಭವಿಷ್ಯದ ದೃಷ್ಟಿಯಿಂದ ಇದು ಖಂಡಿತವಾಗಿಯೂ ಸ್ಮಾರ್ಟ್‌ ನಿರ್ಧಾರವಾಗಿದೆ.




ಪದೇ ಪದೇ ಕೇಳಲಾದ ಪ್ರಶ್ನೆಗಳು

 

1. ಸ್ಮಾರ್ಟ್‌ ಲೈಟಿಂಗ್‌ ಸಿಸ್ಟಮ್‌ ಎಂದರೇನು?

ನಿಮ್ಮ ಮನೆಯ ದೀಪಗಳನ್ನು ದೂರದಿಂದಲೇ ನಿಮ್ಮ ಮೊಬೈಲ್‌ ಆಪ್‌ ಮೂಲಕ ಅಥವಾ ಧ್ವನಿ ನಿರ್ದೇಶನಗಳ ಮೂಲಕ ನಿಯಂತ್ರಿಸಲು ಸ್ಮಾರ್ಟ್‌ ಹೋಮ್‌ ಲೈಟಿಂಗ್‌ ವ್ಯವಸ್ಥೆ ಅನುವು ಮಾಡುತ್ತದೆ. ಇದನ್ನು ಇತರೆ ಸ್ಮಾರ್ಟ್‌ ಹೋಮ್‌ ಸಾಧನಗಳಿಗೆ ಸಂಪರ್ಕಿಸಬಹುದು.

2. ನನ್ನ ಮನೆಗೆ ಸ್ಮಾರ್ಟ್‌ಲೈಟ್‌ಗಳನ್ನು ಅಳವಡಿಸುವುದು ಹೇಗೆ?

ಸಾಂಪ್ರದಾಯಿಕ ಬಲ್ಬ್‌ಗಳನ್ನು ತೆಗೆದು ಆ ಸ್ಥಳಕ್ಕೆ ಸ್ಮಾರ್ಟ್‌ ಬಲ್ಬ್‌ಗಳನ್ನು ಸುಲಭವಾಗಿ ಹಾಕಬಹುದು. ಈ ಬಲ್ಬ್‌ಗಳಿಗೆ ಅಲೆಕ್ಸಾ, ಗೂಗಲ್‌ ಹೋಮ್‌ ಅಥವಾ ಸ್ಮಾರ್ಟ್‌ ಲೈಟಿಂಗ್‌ ಆಪ್‌ ಇತ್ಯಾದಿ ಸ್ಮಾರ್ಟ್‌ ಲೈಟಿಂಗ್‌ ಕಂಟ್ರೋಲ್‌ ವ್ಯವಸ್ಥೆಗಳ ಮೂಲಕ ನಿಯಂತ್ರಿಸಬಹುದು.

 

3. ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್ ಲೈಟ್ ಸಿಸ್ಟಮ್ ಯಾವುದು?

ಪಿಲಿಪ್ಸ್ ಹ್ಯೂ ಮತ್ತು ಲುಟ್ರಾನ್ ಕ್ಯಾಸೆಟಾ ಅವುಗಳ ವಿಶಾಲ ಹೊಂದಾಣಿಕೆ, ಸುಲಭ ಸೆಟಪ್ ಮತ್ತು ಸ್ಥಿರ ಕಾರ್ಯಕ್ಷಮತೆಯಿಂದಾಗಿ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್ ಲೈಟ್ ಸಿಸ್ಟಮ್‌ಗಳೆಂದು ಖ್ಯಾತಿಪಡೆದಿವೆ.

 

4. ಮನೆಯ ದೀಪಗಳನ್ನು ಸ್ಮಾರ್ಟ್‌ ಲೈಟ್‌ಗಳಿಗೆ ಬದಲಾಯಿಸುವುದು ಹೇಗೆ?

ಸರಳವಾಗಿ ಸಾಂಪ್ರದಾಯಿಕ ಬಲ್ಬ್‌ಗಳನ್ನು ತೆಗೆದು ಸ್ಮಾರ್ಟ್‌ ಎಲ್‌ಇಡಿಗಳನ್ನು ಅಳವಡಿಸಿ. ಸಂಕೀರ್ಣ ಸೆಟಪ್‌ ಬೇಕಿದ್ದರೆ ಹೋಮ್‌ ಲೈಟಿಂಗ್‌ ಆಟೋಮೇಷನ್‌ ಸಿಸ್ಟಮ್‌ಗಳ ಜತೆಗೆ ಸ್ಮಾರ್ಟ್‌ ಸ್ವಿಚ್‌ಗಳನ್ನು ಅಥವಾ ಡಿಮ್ಮರ್‌ಗಳನ್ನು ಅಳವಡಿಸಿ.

 

5. ಸ್ಮಾರ್ಟ್‌ ಲೈಟಿಂಗ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಸ್ಮಾರ್ಟ್‌ ಲೈಟಿಂಗ್‌ ವ್ಯವಸ್ಥೆಗಳು ವೈ-ಫೈ, ಬ್ಲೂಟೂತ್‌ ಅಥವಾ ಝಿಗ್‌ಬೀಯ ಮೂಲಕ ನಿಮ್ಮ ಮನೆಯ ಲೈಟ್‌ಗಳನ್ನು ಸೆಂಟ್ರಲ್‌ ಹಬ್‌ ಅಥವಾ ಆಪ್‌ಗೆ ಕನೆಕ್ಟ್‌ ಮಾಡುತ್ತದೆ. ಈ ಮೂಲಕ ದೂರದಿಂದಲೇ ಲೈಟ್‌ಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

 

6. ಸ್ಮಾರ್ಟ್ ದೀಪದ ಬಲ್ಬ್‌ಗಳನ್ನು ಎಲ್ಲಾ ಫಿಕ್ಸರ್‌ಗಳಲ್ಲಿ ಬಳಕೆ ಮಾಡಬಹುದೇ?

ಬಲ್ಬ್‌ ಗಾತ್ರ ಮತ್ತು ವೋಲ್ಟೇಜ್‌ ಹೊಂದಾಣಿಕೆಯಾದರೆ ಸ್ಮಾರ್ಟ್‌ ಲೈಟ್‌ ಬಲ್ಬ್‌ಗಳನ್ನು ಸಾಮಾನ್ಯವಾಗಿ ಯಾವುದೇ ರೀತಿಯ ಸ್ಟಾಂಡರ್ಡ್‌ ಫಿಕ್ಸರ್‌ಗಳಲ್ಲಿ ಬಳಸಬಹುದಾಗಿದೆ.

 


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....