ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ಮನೆಯೊಂದಕ್ಕೆ ಯಾವ ಬಗೆಯ ಬಾಗಿಲು ಅತ್ಯುತ್ತಮವಾಗಿದೆ?
ನಿಮ್ಮ ಅಗತ್ಯಗಳು, ಬಜೆಟ್ ಮತ್ತು ನಿಮ್ಮ ಮನೆ ಇರುವ ನಿರ್ದಿಷ್ಟ ಸ್ಥಳಕ್ಕೆ ತಕ್ಕಂತೆ ಬಾಗಿಲುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬಾಳಿಕೆ ಮತ್ತು ಭದ್ರತೆಯ ಕಾರಣದಿಂದ ಮನೆಯ ಪ್ರವೇಶದ್ವಾರಕ್ಕೆ ಲೋಹ ಅಥವಾ ಫೈಬರ್ ಗ್ಲಾಸ್ ಬಾಗಿಲುಗಳನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಮನೆಯೊಳಗೆ ಬಳಸಲು ನಿಮ್ಮ ವಿನ್ಯಾಸದ ಆದ್ಯತೆಗೆ ತಕ್ಕಂತೆ ಮರದ ಪ್ಯಾನಲ್ ಡೋರ್ಸ್‌ನಿಂದ ಫ್ಲಶ್ ಬಾಗಿಲಿನ ತನಕ ವೈವಿಧ್ಯಮಯ ಆಯ್ಕೆಗಳನ್ನು ಹೊಂದಿರುತ್ತವೆ.
2. ಬಾಗಿಲುಗಳನ್ನು ಹೇಗೆ ನಿರ್ಮಿಸಲಾಗುತ್ತದೆ?
ವಿವಿಧ ರೀತಿಯಲ್ಲಿ ಬಾಗಿಲುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸಾಮಾನ್ಯವಾಗಿ ಚೌಕಟ್ಟು ಅಥವಾ ಫ್ರೇಮ್ ಅನ್ನು ಮರ, ಲೋಹ ಅಥವಾ ಸಂಯೋಜಿತ ವಸ್ತುಗಳಂತಹ ಕೋರ್ ವಸ್ತುವಿನೊಂದಿಗೆ ಜೋಡಿಸಿ ಬಾಗಿಲುಗಳನ್ನು ನಿರ್ಮಿಸಲಾಗುತ್ತದೆ. ಕೋರ್ ಅನ್ನು ವೆನೀರ್ ಅಥವಾ ಫಿನಿಶಿಂಗ್ ವಸ್ತುವಿನಿಂದ ಕವರ್ ಮಾಡಲಾಗುತ್ತದೆ. ಇದಕ್ಕೆ ಬಣ್ಣ ಬಳಿಯಬಹುದು, ಸ್ಟೇನ್ ಅಥವಾ ಕೋಟಿಂಗ್ ಮಾಡಬಹುದು. ಗಾಜಿನ ಪ್ಯಾನಲ್‌ಗಳು, ಹಾರ್ಡ್‌ವೇರ್ ಮತ್ತು ಇನ್ಸುಲೇಷನ್‌ನಂತಹ ಇತರ ಫೀಚರ್‌ಗಳನ್ನು ಬಾಗಿಲಿನ ನಿರ್ದಿಷ್ಟ ಉದ್ದೇಶಕ್ಕೆ ತಕ್ಕಂತೆ ಸೇರಿಸಬಹುದು
3. ಪ್ರವೇಶ ದ್ವಾರಕ್ಕೆ ಯಾವ ಬಗೆಯ ಬಾಗಿಲು ಅತ್ಯುತ್ತಮ?
ಲೋಹ ಅಥವಾ ಫೈಬರ್‌ಗ್ಲಾಸ್ ಬಾಗಿಲು ಮನೆಯ ಪ್ರವೇಶ ದ್ವಾರಕ್ಕೆ ಹೆಚ್ಚು ಸೂಕ್ತವಾಗಿದೆ. ಏಕೆಂದರೆ, ಇವು ಉತ್ತಮ ಭದ್ರತೆ, ಬಾಳಿಕೆ ಮತ್ತು ಇನ್ಸುಲೇಷನ್ ಒದಗಿಸುತ್ತವೆ. ಇದರೊಂದಿಗೆ ನೋಡಲು ಇವು ಥೇಟ್ ಮರದ ಬಾಗಿಲಿನಂತೆ ಕಾಣಿಸಬಹುದು. ತೇವಾಂಶದ ತೊಂದರೆಗಳನ್ನು ಮರದ ಬಾಗಿಲಿಗಿಂತ ಹೆಚ್ಚು ತಡೆದುಕೊಳ್ಳುತ್ತದೆ.
4. ಯಾವ ಬಗೆಯ ಡೋರ್ ಫ್ರೇಮ್ ಅತ್ಯುತ್ತಮವಾಗಿದೆ?
ಬಾಗಿಲಿನ ಬಳಕೆ ಮತ್ತು ಮನೆಯ ಶೈಲಿಗೆ ತಕ್ಕಂತೆ ಅತ್ಯುತ್ತಮ ಮರದ ಅಥವಾ ಲೋಹದಿಂದ ನಿರ್ಮಿಸಿರುವ ಬಾಗಿಲಿನ ಚೌಕಟ್ಟುಗಳು ಉತ್ತಮವಾಗಿವೆ. ಮರದ ಚೌಕಟ್ಟುಗಳು ಮನೆಗೆ ಸಾಂಪ್ರದಾಯಿಕ ನೋಟ ನೀಡುತ್ತವೆ. ಇದರ ನಿರ್ಮಾಣವೂ ಸುಲಭ. ಆದರೆ, ಲೋಹದ ಫ್ರೇಮ್‌ಗಳು ಹೆಚ್ಚಿನ ದೃಢತೆ ಮತ್ತು ಭದ್ರತೆಯನ್ನು ಒದಗಿಸುತ್ತವೆ.
5. ಮನೆಯ ಒಳಾಂಗಣಕ್ಕೆ ಅತ್ಯುತ್ತಮವಾದ ಬಾಗಿಲು ಯಾವುದು?
ಮನೆಯ ಕೊಠಡಿಯ ಕಾರ್ಯ ಮತ್ತು ನಿಮ್ಮ ವಿನ್ಯಾಸದ ಅಭಿರುಚಿಯನ್ನು ಇದು ಅವಲಂಬಿಸಿರುತ್ತದೆ. ಪ್ಯಾನೆಲ್ ಬಾಗಿಲುಗಳು ಬಹುಬಳಕೆಗೆ ಯೋಗ್ಯವಾಗಿದ್ದು, ಹೆಚ್ಚಿನ ಶೈಲಿಗಳಿಗೆ ಹೊಂದಿಕೊಳ್ಳುತ್ತವೆ. ಫ್ಲಶ್ ಡೋರ್‌ಗಳು ಸರಳವಾಗಿದ್ದು, ಆಧುನಿಕವಾಗಿ ಕಾಣಿಸುತ್ತವೆ. ಸ್ಥಳಾವಕಾಶ ಉಳಿಸಲು ಬಯಸುವವರಿಗೆ ಸ್ಲೈಡಿಂಗ್ ಅಥವಾ ಪಾಕೆಟ್ ಬಾಗಿಲುಗಳು ಸೂಕ್ತವಾಗಿವೆ.
6. ಅಡುಗೆ ಕೋಣೆಗೆ ಯಾವ ಬಾಗಿಲು ಅತ್ಯುತ್ತಮ?
ಸ್ಥಳಾವಕಾಶ ಉಳಿಸುವ ದೃಷ್ಟಿಯಿಂದ ಮತ್ತು ಡೈನಿಂಗ್ ಅಥವಾ ಲಿವಿಂಗ್ ಪ್ರದೇಶಗಳಿಗೆ ಹೋಗಿಬರುವಾಗ ಸುಲಭವಾಗಿ ತೆರೆಯಲು ಸಾಧ್ಯವಾಗುವ ಕಾರಣದಿಂದ ಅಡುಗೆಕೋಣೆಗೆ ಸ್ಲೈಡಿಂಗ್ ಅಥವಾ ಬೈ-ಫೋಲ್ಡ್ ಬಾಗಿಲುಗಳು ಹೆಚ್ಚು ಸೂಕ್ತವಾಗಿವೆ. ಅಡುಗೆ ಕೋಣೆಗೆ ಬೆಳಕು ಸರಾಗವಾಗಿ ಬರಲು ಅನುವು ನೀಡುವುದರಿಂದ ಗಾಜಿನ ಪ್ಯಾನೆಲ್ ಡೋರ್ ಕೂಡ ಉತ್ತಮ ಆಯ್ಕೆಯಾಗಿದೆ.
7. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರವೇಶದ್ವಾರಕ್ಕೆ ಯಾವ ಬಾಗಿಲು ಉತ್ತಮ?
ವಾಸ್ತುಶಾಸ್ತ್ರದ ಪ್ರಕಾರ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಮುಖ್ಯ ದ್ವಾರದ ಬಾಗಿಲನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಮನೆಯ ಇತರೆ ಬಾಗಿಲುಗಳಿಗಿಂತ ಪ್ರವೇಶದ್ವಾರದ ಬಾಗಿಲು ದೊಡ್ಡದಾಗಿರಬೇಕು. ಉತ್ತಮ ಗುಣಮಟ್ಟದ ಮರದಿಂದ ಮಾಡಲ್ಪಟ್ಟಿರಬೇಕು ಮತ್ತು ಒಳಮುಖವಾಗಿ ತೆರೆಯಬೇಕು.