ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಸಂಪತ್ತು ಮತ್ತು ಸುಖ-ಕ್ಷೇಮಕ್ಕಾಗಿ ವಾಸ್ತು ಪ್ರಕಾರ ನಿಮ್ಮ ಮನೆಗೆ ಬಣ್ಣ ಹಚ್ಚಿ 

ಸರಿಯಾದ ಬಣ್ಣಗಳು ನಿಮ್ಮ ಮನೆಯನ್ನು ಸಾಮರಸ್ಯ, ಶಕ್ತಿ ಮತ್ತು ಸುಖ-ಸಂತೋಷದ ತಾಣವಾಗಿ ಬದಲಾಯಿಸಬಹುದು. ಈ ಬ್ಲಾಗ್‌ನಲ್ಲಿ ನಾವು ಸಕಾರಾತ್ಮಕ ಮನೆಗಾಗಿ ಬೇಕಾದ ವಾಸ್ತು ಬಣ್ಣಗಳ ಬಗ್ಗೆ ತಿಳಿಸುತ್ತೇವೆ. 

Share:



ಬಣ್ಣಗಳು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ, ನಮ್ಮ ಮನಸ್ಥಿತಿ, ಭಾವನೆಗಳು ಮತ್ತು ಸಮಗ್ರ ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತವೆ. ಭಾರತೀಯರ ಪುರಾತನ ವಾಸ್ತುಶಿಲ್ಪದ ವಿಜ್ಞಾನವಾದ ವಾಸ್ತು ಶಾಸ್ತ್ರದ ಜಗತ್ತಿನಲ್ಲಿ, ಬಣ್ಣಗಳು ಮನೆಯೊಳಗಿನ ಶಕ್ತಿಯ ಹರಿವಿನ ಮೇಲೆ ಆಳವಾದ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ವಾಸ್ತು ತತ್ವಗಳ ಪ್ರಕಾರ ನಿಮ್ಮ ಮನೆಯ ವಿವಿಧ ಕೋಣೆಗಳಿಗೆ ಸರಿಯಾದ ಬಣ್ಣಗಳನ್ನು ಆರಿಸುವುದರಿಂದ ಸಾಮರಸ್ಯದ ಒಂದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಹಾಯವಾಗುತ್ತದೆ. ಈ ಬ್ಲಾಗ್‌ನಲ್ಲಿ, ನಾವು ಕೇವಲ ಪೇಂಟಿಂಗ್ ಸಲಹೆಗಳು ಮಾತ್ರವಲ್ಲದೇ ಹೆಚ್ಚಿನದನ್ನು ಅನ್ವೇಷಿಸುತ್ತೇವೆ. ಮನೆಗಳಿಗೆ ಮತ್ತು ಅದರೊಳಗಿನ ವಿವಿಧ ಕೋಣೆಗಳಿಗೆ ಸೂಕ್ತವಾದ ವಾಸ್ತು ಬಣ್ಣಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ವಾಸ್ತು ನಿರ್ದೇಶನದ ಪ್ರಕಾರ, ಗೋಡೆಯ ಬಣ್ಣಗಳ ಬಳಕೆಯನ್ನೂ ಸಹ ನಾವು ಅನ್ವೇಷಿಸುತ್ತೇವೆ. ಒಂದು ಧನಾತ್ಮಕ ಮತ್ತು ರೋಮಾಂಚನಕಾರಿ ವಾತಾವರಣವನ್ನು ಸೃಷ್ಟಿಸಲು ಈ ಬಣ್ಣಗಳನ್ನು ಹೇಗೆ ಸಂಯೋಜಿಸಬೇಕು.


ಮನೆಯ ಬಣ್ಣಗಳನ್ನು ಆಯ್ಕೆ ಮಾಡಲು ವಾಸ್ತುವಿನ ಅಂಶಗಳು ಯಾವುವು?



ವಾಸ್ತು ಶಾಸ್ತ್ರದಲ್ಲಿ, ಬಣ್ಣಗಳು ಪಂಚಭೂತಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶಕ್ಕೆ ಸಂಬಂಧಿಸಿವೆ. ನಿಮ್ಮ ಮನೆಯ ಪ್ರತಿಯೊಂದು ದಿಕ್ಕೂ ಈ ಅಂಶಗಳಲ್ಲಿ ಒಂದಕ್ಕೆ ಸಂಬಂಧಿಸಿದ್ದು, ಸರಿಯಾದ ಬಣ್ಣವು ಅವುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

 

  • ಉತ್ತರ ದಿಕ್ಕು ಬೆಳವಣಿಗೆ ಮತ್ತು ಸಮೃದ್ಧಿಗೆ ಸಂಬಂಧಿಸಿದೆ, ಆದ್ದರಿಂದ ಹಸಿರು ಬಣ್ಣದ ಛಾಯೆಗಳು ಅಲ್ಲಿ ಶಕ್ತಿಯನ್ನು ಹೆಚ್ಚಿಸುತ್ತವೆ. 

     

  • ಸ್ಪಷ್ಟತೆ ಮತ್ತು ಹೊಸ ಆರಂಭಕ್ಕೆ ಸಂಬಂಧಿಸಿದ ಪೂರ್ವ ದಿಕ್ಕಿಗೆ ಬಿಳಿ ಅಥವಾ ಕ್ರೀಮ್‌ನಂತಹ ತಿಳಿ ಬಣ್ಣಗಳು ಪ್ರಯೋಜನಕಾರಿ. 

     

  • ದಕ್ಷಿಣ ದಿಕ್ಕು ಬೆಂಕಿ ಮತ್ತು ಚೈತನ್ಯವನ್ನು ಸೂಚಿಸುತ್ತದೆ, ಅಲ್ಲಿ ಕೆಂಪು ಅಥವಾ ಹಳದಿ ಬಣ್ಣಗಳು ಚೆನ್ನಾಗಿ ಒಪ್ಪುತ್ತವೆ.

     

  • ಪಶ್ಚಿಮ ದಿಕ್ಕು ಶಾಂತತೆಗೆ ಸಂಬಂಧಿಸಿದ್ದು ನೀಲಿ ಬಣ್ಣದ ಛಾಯೆಗಳಿಗೆ ಹೆಚ್ಚು ಸೂಕ್ತವಾಗಿದೆ.

 

ಮನೆಗೆ ವಾಸ್ತು ಬಣ್ಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರತಿಯೊಂದು ಜಾಗದಲ್ಲಿ ದಿಕ್ಕು, ಬಳಕೆ ಮತ್ತು ಭಾವನೆಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಎಂದು ತಿಳಿಯುವುದು ಮುಖ್ಯ. ಸಮತೋಲಿತ ಬಣ್ಣಗಳು ಸಾಮರಸ್ಯವನ್ನು ಸೃಷ್ಟಿಸುತ್ತವೆ, ಆದರೆ ಅತಿಯಾದ ಅಥವಾ ಹೊಂದಿಕೆಯಾಗದ ಬಣ್ಣಗಳು ಶಕ್ತಿಯ ಹರಿವಿಗೆ ಅಡ್ಡಿಯಾಗಬಹುದು.

 

ಸಲಹೆ: ಬಣ್ಣವನ್ನು ಅಂತಿಮಗೊಳಿಸುವ ಮೊದಲು ಹಗಲು ಮತ್ತು ಕೃತಕ ಬೆಳಕಿನಲ್ಲಿ ಪರೀಕ್ಷಿಸಿ. ದಿಕ್ಕು ಮತ್ತು ಬೆಳಕಿಗೆ ಅನುಗುಣವಾಗಿ ಒಂದೇ ಬಣ್ಣವು ವಿಭಿನ್ನವಾಗಿ ಕಾಣಿಸಬಹುದು.


ಕೊಠಡಿಗಳಿಗೆ ವಾಸ್ತು ಬಣ್ಣಗಳು

ಮನೆಯ ಪ್ರತಿಯೊಂದು ಕೋಣೆಯೂ ಒಂದು ಉದ್ದೇಶವನ್ನು ಹೊಂದಿರುತ್ತದೆ: ಅಡುಗೆ ಮಾಡುವುದು, ವಿಶ್ರಾಂತಿ, ಓದುವುದು ಅಥವಾ ಪ್ರಾರ್ಥನೆ. ಆ ಉದ್ದೇಶವನ್ನು ಪ್ರತಿಬಿಂಬಿಸುವ ಬಣ್ಣಗಳನ್ನು ಆರಿಸುವುದು ಜಾಗವನ್ನು ಹೆಚ್ಚು ಆರಾಮದಾಯಕ ಮತ್ತು ಸಮತೋಲಿತವಾಗಿಸುತ್ತದೆ.



ವಾಸ್ತು ಪ್ರಕಾರ ಅಡುಗೆ ಮನೆಯ ಬಣ್ಣ

ನಿಮ್ಮ ಅಡುಗೆ ಮನೆಯು ಮನೆಯ ಶಕ್ತಿಯನ್ನು ನಿರ್ಧರಿಸುತ್ತದೆ. ವಾಸ್ತು ಪ್ರಕಾರ ಕಿತ್ತಳೆ, ಕೆಂಪು, ಹಳದಿ ಮತ್ತು ಗುಲಾಬಿ ಬಣ್ಣಗಳು ಸಕಾರಾತ್ಮಕತೆ, ಉಷ್ಣತೆ ಮತ್ತು ಹಸಿವನ್ನು ಉಂಟುಮಾಡುತ್ತವೆ, ಇದು ಊಟ ಮತ್ತು ಸಮಯವನ್ನು ಹೆಚ್ಚು ಸಂತೋಷಗೊಳಿಸುತ್ತದೆ.

 

  • ಇವುಗಳನ್ನು ಬಳಸಿ: ಕಿತ್ತಳೆ, ಕೆಂಪು, ಹಳದಿ, ಗುಲಾಬಿ
 
  • ಇವುಗಳನ್ನು ತಪ್ಪಿಸಿ: ಕಪ್ಪು ಮತ್ತು ಬೂದು ಬಣ್ಣಗಳು ಅವು ಭಾರವೆನಿಸುವುದರಿಂದ ಶಕ್ತಿಯ ಹರಿವನ್ನು ಕಡಿಮೆ ಮಾಡಬಹುದು.


ಮಲಗುವ ಕೋಣೆಗೆ ವಾಸ್ತು ಬಣ್ಣಗಳು

ಉತ್ತಮ ನಿದ್ರೆ ಮತ್ತು ಮನಸ್ಸಿನ ಶಾಂತಿ ಬೇಕೇ? ಮನಸ್ಸನ್ನು ಶಾಂತಗೊಳಿಸಲು ಮತ್ತು ವಿಶ್ರಾಂತಿ ನೀಡಲು ಮಲಗುವ ಕೋಣೆಗೆ ತಿಳಿ ನೀಲಿ, ಹಸಿರು, ಲ್ಯಾವೆಂಡರ್ ಮತ್ತು ಗುಲಾಬಿ ಬಣ್ಣಗಳನ್ನು ವಾಸ್ತು ಶಿಫಾರಸು ಮಾಡುತ್ತದೆ.

 

  • ಇವುಗಳನ್ನು ಬಳಸಿ: ತಿಳಿ ನೀಲಿ, ಹಸಿರು, ಲ್ಯಾವೆಂಡರ್, ಗುಲಾಬಿ.

 

  • ಇವುಗಳನ್ನು ತಪ್ಪಿಸಿ: ಕಣ್ಣಿಗೆ ರಾಚುವ ಗಾಢವಾದ ಬಣ್ಣಗಳು.


ಲಿವಿಂಗ್ ರೂಮ್‌ಗೆ ವಾಸ್ತು ಬಣ್ಣಗಳು

ನಿಮ್ಮ ಲಿವಿಂಗ್ ರೂಮ್ ಉಲ್ಲಾಸದಾಯಕವಾಗಿ ಮತ್ತು ಮುಕ್ತವಾಗಿರಬೇಕು, ಏಕೆಂದರೆ ಅಲ್ಲಿ ನೀವು ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ. ಹಳದಿ, ಹಸಿರು ಮತ್ತು ನೀಲಿ ಬಣ್ಣಗಳು ಬಾಂಧವ್ಯವನ್ನು ಪ್ರೋತ್ಸಾಹಿಸುವ ಸ್ವಾಗತಾರ್ಹ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ.

 

  • ಇವುಗಳನ್ನು ಬಳಸಿ: ಹಳದಿ, ಹಸಿರು, ನೀಲಿ

     

  • ಇವುಗಳನ್ನು ತಪ್ಪಿಸಿ: ಜಾಗವನ್ನು ಚಿಕ್ಕದಾಗಿ ಕಾಣುವಂತೆ ಮಾಡುವ ಗಾಢ ಮತ್ತು ಅನಾಕರ್ಷಕವಾಗಿಸುವ ಬಣ್ಣಗಳು.



ವಾಸ್ತು ಪ್ರಕಾರ ಪೂಜಾ ಕೋಣೆಯ ಬಣ್ಣಗಳು

ಪೂಜಾ ಕೋಣೆ ನಿಮ್ಮ ಪವಿತ್ರವಾದ ಸ್ಥಳ; ಅದು ನಿರ್ಮಲವಾಗಿ, ಶಾಂತವಾಗಿ ಮತ್ತು ಸ್ಪೂರ್ತಿದಾಯಕವಾಗಿರಬೇಕು. ಪೂಜಾ ಕೋಣೆಗೆ ಬಿಳಿ ಬಣ್ಣವು ಸೂಕ್ತವಾಗಿದೆ, ಇದರ ಜೊತೆಗೆ ತಿಳಿ ಹಳದಿ, ನೀಲಿ ಅಥವಾ ಗುಲಾಬಿ ಬಣ್ಣಗಳನ್ನು ಬಳಸಬಹುದು.

 

  • ಇವುಗಳನ್ನು ಬಳಸಿ: ಬಿಳಿ, ತಿಳಿ ಹಳದಿ, ತಿಳಿ ಗುಲಾಬಿ, ತಿಳಿ ನೀಲಿ

     

  • ಇವುಗಳನ್ನು ತಪ್ಪಿಸಿ: ಶಾಂತತೆಯನ್ನು ಕದಡುವ ಗಾಢ ಬಣ್ಣಗಳು.



ವಾಸ್ತು ಪ್ರಕಾರ ಊಟದ ಕೋಣೆಯ ಬಣ್ಣಗಳು

ಊಟದ ಸಮಯವು ಬಾಂಧವ್ಯಕ್ಕಾಗಿ ಇರುತ್ತದೆ. ಹಸಿವನ್ನು ಹೆಚ್ಚಿಸಲು ಮತ್ತು ಸ್ನೇಹಪರ ಸಂಭಾಷಣೆಗೆ ಹಳದಿ, ಕಿತ್ತಳೆ ಮತ್ತು ತಿಳಿ ಕಂದು ಬಣ್ಣಗಳನ್ನು ವಾಸ್ತು ಶಿಫಾರಸು ಮಾಡುತ್ತದೆ.

 

  • ಇವುಗಳನ್ನು ಬಳಸಿ: ಹಳದಿ, ಕಿತ್ತಳೆ, ತಿಳಿ ಕಂದು

     

  • ಇವುಗಳನ್ನು ತಪ್ಪಿಸಿ: ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಗಾಢ ಅಥವಾ ತಣ್ಣನೆಯ ಬಣ್ಣಗಳು.



ಬಾಲ್ಕನಿಗೆ ವಾಸ್ತು ಬಣ್ಣಗಳು

ಬಾಲ್ಕನಿಯು ನೀವು ವಿಶ್ರಾಂತಿ ಪಡೆಯುವ ಮತ್ತು ಪ್ರಕೃತಿಯೊಂದಿಗೆ ಬೆರೆಯುವ ಜಾಗ. ತಿಳಿ ನೀಲಿ, ಹಸಿರು ಮತ್ತು ಬಿಳಿ ಬಣ್ಣಗಳು ಶಾಂತತೆಯನ್ನು ಹರಡುತ್ತವೆ.

 

  • ಇವುಗಳನ್ನು ಬಳಸಿ: ತಿಳಿ ನೀಲಿ, ಹಸಿರು, ಬಿಳಿ

     

  • ಇವುಗಳನ್ನು ತಪ್ಪಿಸಿ: ಜಾಗವನ್ನು ಇಕ್ಕಟ್ಟಾಗಿ ಕಾಣುವಂತೆ ಮಾಡುವ ಗಾಢ ಅಥವಾ ಮಂಕಾದ ಬಣ್ಣಗಳು.



ಬಾಲ್ಕನಿಗೆ ವಾಸ್ತು ಬಣ್ಣಗಳು

ಬಾಲ್ಕನಿಯು ನೀವು ವಿಶ್ರಾಂತಿ ಪಡೆಯುವ ಮತ್ತು ಪ್ರಕೃತಿಯೊಂದಿಗೆ ಬೆರೆಯುವ ಜಾಗ. ತಿಳಿ ನೀಲಿ, ಹಸಿರು ಮತ್ತು ಬಿಳಿ ಬಣ್ಣಗಳು ಶಾಂತತೆಯನ್ನು ಹರಡುತ್ತವೆ.

 

  • ಇವುಗಳನ್ನು ಬಳಸಿ: ತಿಳಿ ನೀಲಿ, ಹಸಿರು, ಬಿಳಿ

     

  • ಇವುಗಳನ್ನು ತಪ್ಪಿಸಿ: ಜಾಗವನ್ನು ಇಕ್ಕಟ್ಟಾಗಿ ಕಾಣುವಂತೆ ಮಾಡುವ ಗಾಢ ಅಥವಾ ಮಂಕಾದ ಬಣ್ಣಗಳು.



ಮನೆಯ ಹೊರಭಾಗಕ್ಕೆ ಸರಿಯಾದ ವಾಸ್ತು ಬಣ್ಣಗಳು ಯಾವುವು?

ನಿಮ್ಮ ಮನೆಯ ಹೊರಭಾಗವು ಮೊದಲ ಅನಿಸಿಕೆ ಮತ್ತು ಶಕ್ತಿಯ ಹರಿವಿನ ಮೂಲವಾಗಿದೆ. ವಾಸ್ತು ಪ್ರಕಾರ, ಹೊರಭಾಗಕ್ಕೆ ಸರಿಯಾದ ಬಣ್ಣಗಳನ್ನು ಆರಿಸುವುದು ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ತರುತ್ತದೆ. ಸೂಕ್ತವಾದ ಬಣ್ಣಗಳು ನೈಸರ್ಗಿಕ ಅಂಶಗಳನ್ನು ಸಮತೋಲನಗೊಳಿಸುತ್ತವೆ ಮತ್ತು ಸ್ವಾಗತಾರ್ಹ ವಾತಾವರಣವನ್ನು ಸೃಷ್ಟಿಸುತ್ತವೆ. ಮನೆಯನ್ನು ಅನಾಕರ್ಷಕವಾಗಿ ಕಾಣುವಂತೆ ಮಾಡುವ ಅತಿಯಾದ ಗಾಢ ಅಥವಾ ಕಠಿಣ ಬಣ್ಣಗಳನ್ನು ತಪ್ಪಿಸಿ.

 

ವಾಸ್ತು ಪ್ರಕಾರ ಮುಖ್ಯ ಬಾಗಿಲು/ಪ್ರವೇಶ ದ್ವಾರದ ಬಣ್ಣಗಳು

 ಮುಖ್ಯ ಬಾಗಿಲು ಮನೆಯ ಶಕ್ತಿಯ ದ್ವಾರವಾಗಿದೆ, ಆದ್ದರಿಂದ ಅದರ ಬಣ್ಣ ಬಹಳ ಮುಖ್ಯ.

  • ಅತ್ಯುತ್ತಮ ಬಣ್ಣಗಳು:

    • ಕೆಂಪು: ಶಕ್ತಿ ಮತ್ತು ಅದೃಷ್ಟ

    • ಕಂದು: ಸ್ಥಿರತೆ ಮತ್ತು ಭೂಮಿಯೊಂದಿಗೆ ನಂಟು

    • ಹಳದಿ / ಹಳದಿ-ಕಿತ್ತಳೆ: ಸಂತೋಷ ಮತ್ತು ಸಮೃದ್ಧಿ

    • ಹಸಿರು: ಬೆಳವಣಿಗೆ ಮತ್ತು ಸಾಮರಸ್ಯ

  • ಇವುಗಳನ್ನು ತಪ್ಪಿಸಿ:

    • ಕಪ್ಪು, ಗಾಢ ನೀಲಿ, ಬೂದು: ಇವು ಸಕಾರಾತ್ಮಕ ಶಕ್ತಿಯನ್ನು ತಡೆಯಬಹುದು ಮತ್ತು ಮಂದವಾಗಿಸಬಹುದು.


ವಾಸ್ತು ದಿಕ್ಕಿನ ಪ್ರಕಾರ ಗೋಡೆಯ ಬಣ್ಣಗಳು

ಮನೆಯ ವಾಸ್ತು ಬಣ್ಣಗಳನ್ನು ಅರ್ಥಮಾಡಿಕೊಳ್ಳುವಾಗ, ದಿಕ್ಕು ಕೂಡ ಬಣ್ಣಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಿಕ್ಕಿನ ಆಧಾರದ ಮೇಲೆ ಗೋಡೆಗಳಿಗೆ ವಾಸ್ತು ಬಣ್ಣಗಳ ಮಾಹಿತಿ ಇಲ್ಲಿದೆ:

ದಿಕ್ಕುಶಿಫಾರಸು ಮಾಡಿದ ಬಣ್ಣಗಳುಅರ್ಥ ಮತ್ತು ಪ್ರಯೋಜನಗಳು
ಉತ್ತರಹಸಿರುನೀರಿನ ಅಂಶಕ್ಕೆ ಸಂಬಂಧಿಸಿದೆ, ಇದು ಸಾಮರಸ್ಯವನ್ನು ಸೃಷ್ಟಿಸುತ್ತದೆ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.
ಪೂರ್ವಬಿಳಿವಾಯು ಅಂಶಕ್ಕೆ ಸಂಬಂಧಿಸಿದೆ, ಇದು ಬುದ್ಧಿವಂತಿಕೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ದಕ್ಷಿಣಕೆಂಪು, ಹಳದಿಅಗ್ನಿ ಅಂಶಕ್ಕೆ ಸಂಬಂಧಿಸಿದೆ, ಕೆಂಪು ಬಣ್ಣವು ಶಕ್ತಿಯನ್ನು ತರುತ್ತದೆ ಮತ್ತು ಹಳದಿ ಬಣ್ಣವು ಉಷ್ಣತೆ ಮತ್ತು ಭರವಸೆಯನ್ನು ನೀಡುತ್ತದೆ.
ಪಶ್ಚಿಮನೀಲಿಭೂಮಿ ಅಂಶಕ್ಕೆ ಸಂಬಂಧಿಸಿದ್ದು, ಇದು ವಿಶ್ರಾಂತಿ ಮತ್ತು ಸ್ಥಿರತೆಯನ್ನು ನೀಡುತ್ತದೆ.
ಈಶಾನ್ಯಬಿಳಿ, ತಿಳಿ ನೀಲಿಇದು ಅತ್ಯಂತ ಮಂಗಳಕರ ದಿಕ್ಕು; ಇಲ್ಲಿನ ಬಣ್ಣಗಳು ಧ್ಯಾನ ಮತ್ತು ಮನಸ್ಸಿನ ಶಾಂತಿಗೆ ಸಹಾಯ ಮಾಡುತ್ತವೆ.
ಆಗ್ನೇಯಬೆಳ್ಳಿ, ತಿಳಿ ಬೂದುಅಗ್ನಿ ಅಂಶಕ್ಕೆ ಸಂಬಂಧಿಸಿದ್ದು, ಈ ಬಣ್ಣಗಳು ನಾವೀನ್ಯತೆ ಮತ್ತು ಉತ್ಸಾಹವನ್ನು ನೀಡುತ್ತವೆ.
ನೈರುತ್ಯಪೀಚ್, ತಿಳಿ ಕಂದುಇವು ಆರಾಮ, ಸ್ಥಿರತೆ ಮತ್ತು ಭಾವನಾತ್ಮಕ ಸಮತೋಲನವನ್ನು ನೀಡುವ ಮಣ್ಣಿನ ಬಣ್ಣಗಳು.
ವಾಯುವ್ಯಬಿಳಿ, ತಿಳಿ ಬೂದುವಾಯು ಅಂಶಕ್ಕೆ ಸಂಬಂಧಿಸಿದ್ದು, ಸ್ಪಷ್ಟ ಆಲೋಚನೆ ಮತ್ತು ಉತ್ತಮ ಸಂವಹನಕ್ಕೆ ಸಹಾಯ ಮಾಡುತ್ತದೆ.

ಬಣ್ಣದ ಮೂಲಕ ಸಮತೋಲನವನ್ನು ಸೃಷ್ಟಿಸುವುದು

ಮನೆ ಹೇಗಿರಬೇಕು ಎಂಬುದನ್ನು ನಿರ್ಧರಿಸುವಲ್ಲಿ ಬಣ್ಣ ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತು ಬಣ್ಣಗಳನ್ನು ಅನುಸರಿಸುವ ಮೂಲಕ, ನೀವು ಸಮತೋಲನ, ಸಂತೋಷ ಮತ್ತು ಕ್ಷೇಮದ ವಾತಾವರಣವನ್ನು ಸೃಷ್ಟಿಸಬಹುದು.

 

ಪ್ರತಿ ಕೋಣೆಯ ಉದ್ದೇಶ ಮತ್ತು ದಿಕ್ಕಿಗೆ ಹೊಂದಿಕೆಯಾಗುವ ಬಣ್ಣಗಳನ್ನು ಆರಿಸಿ. ಸರಿಯಾದ ಬಣ್ಣಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. ಸಮತೋಲಿತ ಮನೆ ಶಾಂತಿ ಮತ್ತು ಉಷ್ಣತೆಯಿಂದ ಕೂಡಿರುತ್ತದೆ.



ನಿಮ್ಮ ಮನೆಯು ನಿಮ್ಮ ಗುರುತು, ಮತ್ತು ಬಣ್ಣಗಳು ಮನೆಯ ಶಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಪ್ರತಿ ಕೋಣೆಗೆ ಯಾವ ಬಣ್ಣಗಳು ಸೂಕ್ತವೆಂದು ವಾಸ್ತು ಶಾಸ್ತ್ರವು ಸ್ಪಷ್ಟವಾಗಿ ತಿಳಿಸುತ್ತದೆ. ಸರಿಯಾದ ಬಣ್ಣಗಳನ್ನು ಆರಿಸುವ ಮೂಲಕ ನೀವು ಮನೆಯ ವಾತಾವರಣವನ್ನು ಸುಧಾರಿಸಬಹುದು ಮತ್ತು ಎಲ್ಲರ ಆರೋಗ್ಯ, ಸಾಮರಸ್ಯ ಹಾಗೂ ಕ್ಷೇಮಕ್ಕೆ ಪೂರಕವಾದ ಜಾಗವನ್ನು ಸೃಷ್ಟಿಸಬಹುದು. ವಾಸ್ತುವಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು "ಮನೆಗಾಗಿ ವಾಸ್ತು ಸಲಹೆಗಳು" ಎಂಬ ಲೇಖನವನ್ನು ಓದಬಹುದು.



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

1. ವಾಸ್ತು ಪ್ರಕಾರ ಮನೆಗೆ ಯಾವ ಬಣ್ಣ ಉತ್ತಮ?

ಬಿಳಿ, ತಿಳಿ ಹಳದಿ ಮತ್ತು ಬೇಜ್ ಬಣ್ಣಗಳು ಮನೆಗೆ ಉತ್ತಮ. ಅವು ಮನೆಯಲ್ಲಿ ಶಾಂತಿ, ಸಕಾರಾತ್ಮಕತೆ ಹಾಗೂ ಸಮತೋಲನವನ್ನು ತರುತ್ತವೆ.

 

2. ಎಲ್ಲಾ ಕೋಣೆಗಳಿಗೆ ಯಾವ ಬಣ್ಣ ಉತ್ತಮ?

ಆಫ್-ವೈಟ್, ಕ್ರೀಮ್ ಮತ್ತು ತಿಳಿ ಪೇಸ್ಟಲ್ ಬಣ್ಣಗಳು ಎಲ್ಲಾ ಕೋಣೆಗಳಿಗೆ ಹೊಂದಿಕೊಳ್ಳುತ್ತವೆ. ಅವು ಸಾಮರಸ್ಯವನ್ನು ಕಾಪಾಡುತ್ತವೆ ಮತ್ತು ವಿವಿಧ ಉದ್ದೇಶ ಹಾಗೂ ಮೂಡ್‌ಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ.

 

3. ಮನೆಗೆ ಯಾವ ಬಣ್ಣ ಒಳ್ಳೆಯದಲ್ಲ?

ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಮತ್ತು ಗಾಢ ಕೆಂಪು ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ. ವಾಸ್ತು ಪ್ರಕಾರ, ಇವು ನಕಾರಾತ್ಮಕತೆಯನ್ನು ತರಬಹುದು ಮತ್ತು ಶಕ್ತಿಯ ಹರಿವಿಗೆ ಅಡ್ಡಿಪಡಿಸಬಹುದು.

 

4. ಮಲಗುವ ಕೋಣೆಗೆ ಅತ್ಯುತ್ತಮ ಬಣ್ಣ ಯಾವುದು?

ತಿಳಿ ನೀಲಿ, ತಿಳಿ ಗುಲಾಬಿ ಹಾಗೂ ಮಣ್ಣಿನ ಬಣ್ಣಗಳು ಸೂಕ್ತವಾಗಿವೆ. ಇವು ವಿಶ್ರಾಂತಿ ನೀಡುತ್ತವೆ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಶಾಂತ ವಾತಾವರಣವನ್ನು ಸೃಷ್ಟಿಸುತ್ತವೆ.

 

5. ಸಕಾರಾತ್ಮಕ ಶಕ್ತಿಗಾಗಿ ಕೋಣೆಗೆ ಯಾವ ಬಣ್ಣ ಉತ್ತಮ?

ಹಳದಿ ಮತ್ತು ತಿಳಿ ಹಸಿರು ಉತ್ಸಾಹಭರಿತ ಸಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. ಇವು ಸೃಜನಶೀಲತೆ, ಸಂತೋಷ ಮತ್ತು ಸ್ಪಷ್ಟ ಆಲೋಚನೆಯನ್ನು ಹೆಚ್ಚಿಸುತ್ತವೆ.


ಸಂಬಂಧಿತ ಲೇಖನಗಳು


ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್



ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....