Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence


ಬಾತ್ರೂಮ್‌ ವಾಟರ್‌ಪೂಫಿಂಗ್‌ ಎಂದರೇನು? ಬಾತ್ರೂಮ್‌ ಫ್ಲೋರ್‌ಗಳು ಮತ್ತು ಗೋಡೆಗಳನ್ನು ರಕ್ಷಿಸಲು ಮಾರ್ಗದರ್ಶಿ

ಸ್ನಾನದಿಂದ ಹಿಡಿದು ಕೈ ತೊಳೆಯುವವರೆಗೆ ನೀರು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಆದರೆ, ಅತಿಯಾಗಿ ನೀರಿಗೆ ತೆರೆದುಕೊಳ್ಳುವಿಕೆ ಸಮಸ್ಯೆಗಳ ಸರಮಾಲೆಗೆ ಎಡೆಮಾಡಬಹುದು. ಬಾತ್ರೂಮ್‌ ವಾಟರ್‌ಪೂಫಿಂಗ್‌ ನಿಮ್ಮ ಬಾತ್ರೂಮ್‌ವನ್ನು ಶುಷ್ಕ, ಸುರಕ್ಷಿತ ಮತ್ತು ಉತ್ತಮವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಒಂದು ರಕ್ಷೆಯಾಗಿ ಕಾರ್ಯನಿರ್ವಹಿಸುತ್ತ ಮಹತ್ವಕ್ಕೆ ಬರುವುದು.

Share:


ನಮ್ಮ ಮನೆಗಳ ಪರ ಕಾಳಜಿ ವಹಿಸುವುದು ಮನೆಯ ಪ್ರತಿಯೊಂದು ಮೂಲೆಗೂ ಗಮನ ಕೊಡುವುದನ್ನು ಒಳಗೊಂಡಿರುತ್ತದೆ ಮತ್ತು ಬಾತ್ರೂಮು ಇದಕ್ಕೆ ಹೊರತಾಗಿರುವುದಿಲ್ಲ. ಬಾತ್ರೂಮ್ ವಾಟರ್‌ಪೂಫಿಂಗ್‌ ನಿಮ್ಮ ಬಾತ್ರೂಮ್ನ ದೀರ್ಘಾಯುಷ್ಯ ಮತ್ತು ತಾಳಿಕೆಯನ್ನು ಖಾತ್ರಿಪಡಿಸುವ ಒಂದು ನಿರ್ಣಾಯಕ ಅಂಶವಾಗಿದೆ. ಇದು ನಿಮ್ಮ ಬಾತ್ರೂಮ್‌ನ ಕಟ್ಟಡ ಮತ್ತು ಮೇಲ್ಮೈಗಳನ್ನು ನೀರಿನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುತ್ತದೆ, ಆಮೂಲಕ ಭವಿಷ್ಯದಲ್ಲಿ ಸಂಭವನೀಯ ಹಾನಿ ಮತ್ತು ಸಮಸ್ಯೆಗಳನ್ನು ತಡೆಯುತ್ತದೆ. ಬಾತ್ರೂಮ್‌ಗಳಿಗೆ ವಿವಿಧ ಸೀಲಾಂಟ್‌ಗಳು, ಮೆಂಬ್ರೇನ್‌ಗಳು ಮತ್ತು ವಾಟರ್‌ಪೂಫಿಂಗ್‌ ರಾಸಾಯನಿಕಗಳನ್ನು ಅನ್ವಯಿಸುವುದರಿಂದ ನೀರು ಸೋರಿಕೆ ಮತ್ತು ಬಸಿಯುವಿಕೆಯನ್ನು ತಡೆಯುವುದು ಸುಲಭವಾಗುತ್ತದೆ.

 

ಇದು ನಿಮ್ಮ ಬಾತ್ರೂಮ್ನ ರಚನೆ ಮತ್ತು ಸೌಂದರ್ಯವನ್ನು ಮಾತ್ರ ರಕ್ಷಿಸುವುದಲ್ಲದೇ ಶುಚಿತ್ವದ ಮತ್ತು ಆರೋಗ್ಯಕರ ಪರಿಸರವನ್ನು ಉತ್ತೇಜಿಸುತ್ತದೆ. ತೇವಾಂಶ-ಸಂಬಂಧಿತ ಹಾನಿಯು ದುಬಾರಿ ರಿಪೇರಿಗಳಿಗೆ ಕಾರಣವಾಗಬಹುದು ಮತ್ತು ನಿಮ್ಮ ಬಾತ್ರೂಮ್ನ ಒಟ್ಟಾರೆ ಕಾರ್ಯಚಟುವಟಿಕೆ ಮತ್ತು ಆಕರ್ಷಣೆಗೆ ಕುಂದು ತರಬಹುದು. ಆದ್ದರಿಂದ, ನೀರು-ಸಂಬಂಧಿತಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಮನೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಬಾತ್ರೂಮ್ ವಾಟರ್‌ಪೂಫಿಂಗ್‌ನಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯ.



ಬಾತ್ರೂಮ್ ಫ್ಲೋರ್ ವಾಟರ್‌ಪೂಫಿಂಗ್‌ಗೆ ಕ್ರಮಗಳು



ಬಾತ್ರೂಮ್ ಫ್ಲೋರ್ ವಾಟರ್‌ಪೂಫಿಂಗ್‌ ನಿಮ್ಮ ಬಾತ್ರೂಮು ನೀರಿನಿಂದಾಗುವ ಹಾನಿಯಿಂದ ರಕ್ಷಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ನಿರ್ಣಾಯಕ ಹಂತವಾಗಿದೆ. ಈ ಕ್ರಮಗಳನ್ನು ಅನುಸರಿಸುವ ಮೂಲಕ, ನೀವು ನಿಮ್ಮ ಬಾತ್ರೂಮ್‌ನ ದೀರ್ಘಾಯುಷ್ಯವನ್ನು ಖಚಿತಪಡಿಸಿಕೊಳ್ಳಬಹುದು.

 

1. ನಿರೋಧನ ಸಾಧಿಸಲು ಬಾತ್ರೂಮ್‌ವನ್ನು ಸಿದ್ಧಗೊಳಿಸಿ

ನಿಜವಾದ ಬಾತ್ರೂಮ್ ಅಥವಾ ಟಾಯ್ಲೆಟ್ ವಾಟರ್‌ಪೂಫಿಂಗ್‌ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ಬಾತ್ರೂಮ್ ಅನ್ನು ಸರಿಯಾಗಿ ಸಿದ್ಧಪಡಿಸುವುದು ಅತ್ಯಗತ್ಯ. ಅಸ್ತಿತ್ವದಲ್ಲಿರುವ ಯಾವುದೇ ಫ್ಲೋರಿಂಗ್ ಅನ್ನು ತೆಗೆದುಹಾಕಿ ಮತ್ತು ಮುಂದಿನ ಕ್ರಮಕ್ಕೆ ತೆರಳುವ ಮೊದಲು ಮೇಲ್ಮೈ ಅನ್ನು ಸ್ವಚ್ಛ ಹಾಗೂ ಶುಷ್ಕಗೊಳಿಸಿ ಮತ್ತು ಯಾವುದೇ ಕಸ ಅಥವಾ ಮಾಲಿನ್ಯಕಾರಕಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

 

2. ಸರಿಯಾದ ವಾಟರ್‌ಪೂಫಿಂಗ್‌ ಸಾಮಗ್ರಿಯನ್ನು ಆರಿಸಿಕೊಳ್ಳಿ

ಸೂಕ್ತವಾದ ವಾಟರ್‌ಪೂಫಿಂಗ್‌ ಸಾಮಗ್ರಿಯನ್ನು ಆಯ್ಕೆ ಮಾಡುವುದು ನಿಮ್ಮ ಯೋಜನೆಯ ಯಶಸ್ಸಿಗೆ ಅತ್ಯಂತ ನಿರ್ಣಾಯಕವಾಗಿದೆ. ಮಾರುಕಟ್ಟೆಯಲ್ಲಿ ವಾಟರ್‌ಪೂಫಿಂಗ್‌ ಮೆಂಬ್ರೇನ್‌ಗಳು, ದ್ರವರೂಪಿ ವಾಟರ್‌ಪೂಫಿಂಗ್‌ ಸಂಯುಕ್ತಗಳು ಮತ್ತು ಸಿಮೆಂಟಿಯಸ್ ಕೋಟಿಂಗ್‌ಗಳಂತಹ ವಿವಿಧ ಆಯ್ಕೆಗಳು ಲಭ್ಯವಿವೆ. ಆ ಪ್ರತಿಯೊಂದೂ ತಮ್ಮದೇ ಅನುಕೂಲಗಳು ಮತ್ತು ಅನ್ವಯಿಕೆ ವಿಧಾನಗಳನ್ನು ಹೊಂದಿವೆ, ಆದ್ದರಿಂದ ನಿಮ್ಮ ಬಾತ್ರೂಮ್‌ನ ಅಗತ್ಯತೆಗಳು ಮತ್ತು ನಿಮ್ಮ ಕೌಶಲ್ಯದ ಮಟ್ಟಕ್ಕೆ ಸೂಕ್ತವಾಗುವಂತ ವಾಟರ್‌ಪೂಫಿಂಗ್‌ ಕೋಟಿಂಗ್ ಅನ್ನು ಆಯ್ಕೆ ಮಾಡುವುದು ಅತ್ಯಗತ್ಯ.

 

3. ಪ್ರೈಮರ್ ಬಳಸಿ ಮೇಲ್ಮೈಯನ್ನು ಸಿದ್ಧಗೊಳಿಸಿ

ವಾಟರ್‌ಪೂಫಿಂಗ್‌ ವಸ್ತು ಬಾತ್ರೂಮ್ ನೆಲಕ್ಕೆ ಸರಿಯಾಗಿ ಅಂಟಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರೈಮರ್ ಅನ್ನು ಹಚ್ಚುವುದು ಅತ್ಯಗತ್ಯ. ಪ್ರೈಮರ್ ಮೇಲ್ಮೈ ಮತ್ತು ವಾಟರ್‌ಪೂಫಿಂಗ್‌ ಪದರದ ನಡುವೆ ಒಂದು ಬಂಧವನ್ನು ಸೃಷ್ಟಿಸಿ ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಪ್ರೈಮರ್ ಅನ್ನು ಅನ್ವಯಿಸುವಾಗ ತಯಾರಕರ ಸೂಚನೆಗಳನ್ನು ಅನುಸರಿಸಿ ಮತ್ತು ಮುಂದುವರಿಯುವ ಮೊದಲು ಅದನ್ನು ಸಂಪೂರ್ಣವಾಗಿ ಒಣಗಲು ಬಿಡಿ.

 

4. ಜಾಯಿಂಟ್‌ಗಳನ್ನು ಮುಚ್ಚುವುದು



ನೆಲ ಮತ್ತು ಗೋಡೆಗಳ ನಡುವಿನ ಜಾಯಿಂಟ್‌ಗಳು ದುರ್ಬಲತೆಯ ಜಾಗಗಳಾಗಿದ್ದು ನೀರು ಅಲ್ಲಿಂದ ಸುಲಭವಾಗಿ ನುಸುಳುತ್ತದೆ. ಈ ಜಾಯಿಂಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲು ನೀವು ವಾಟರ್‌ಪೂಫಿಂಗ್‌ ಸೀಲಾಂಟ್ ಅಥವಾ ಟೇಪ್ ಅನ್ನು ಬಳಸಬೇಕು. ಒಳಚರಂಡಿ ಅಥವಾ ಕೊಳವೆಗಳ ಸುತ್ತಲಿನ ಮೂಲೆಗಳು ಮತ್ತು ಪ್ರದೇಶಗಳಿಗೆ ವಿಶೇಷ ಗಮನ ಕೊಡುವುದು ಅವಶ್ಯಕ, ಏಕೆಂದರೆ ಅವುಗಳು ನೀರಿನ ಸೋರಿಕೆಯ ಸಾಮಾನ್ಯ ಪ್ರದೇಶಗಳಾಗಿವೆ.

 

5. ಪರೀಕ್ಷಿಸುವುದು

ಬಾತ್ರೂಮ್‌ ವಾಟರ್‌ಪೂಫಿಂಗ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಅದರ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ನೀರು ಹನಿಸಿ ಪರೀಕ್ಷೆಯನ್ನು ನಡೆಸುವುದು ಅತ್ಯಗತ್ಯ. ಬಾತ್ರೂಮ್‌ನ ನೆಲದ ಮೇಲೆ ಗಮನಾರ್ಹ ಪ್ರಮಾಣದಲ್ಲಿ ನೀರನ್ನು ಸುರಿಯಿರಿ ಮತ್ತು ಸ್ವಲ್ಪ ಸಮಯದವರೆಗೆ ಅದು ಕುಳಿತುಕೊಳ್ಳಲು ಬಿಡಿ. ಸೋರಿಕೆ ಅಥವಾ ಬಸಿಯುವಿಕೆಯ ಯಾವುದಾದರು ಚಿಹ್ನೆಗಳಿವೆಯೇ ಎಂದು ಪರಿಶೀಲಿಸಿ. ಯಾವುದೇ ಸಮಸ್ಯೆಗಳಿದ್ದರೆ, ಟೈಲ್ಸ್ ಅಥವಾ ಇತರ ಫ್ಲೋರ್ ಕವರಿಂಗ್ ಅನ್ನು ಅಳವಡಿಸುವ ಮೊದಲು ಸಮಸ್ಯೆಯ ಪ್ರದೇಶಗಳನ್ನು ಗುರುತಿಸಿ ಮತ್ತು ಅಗತ್ಯ ರಿಪೇರಿ ಮಾಡಿ.


ಬಾತ್ರೂಮ್ ಗೋಡೆಗಳನ್ನು ವಾಟರ್‌ಪೂಫ್ ಮಾಡುವುದು ಹೇಗೆ?



ಬಾತ್ರೂಮ್ ವಾಟರ್‌ಪೂಫಿಂಗ್‌ ಫ್ಲೋರ್ ವಾಟರ್‌ಪೂಫಿಂಗ್‌ನಷ್ಟೇ ಮುಖ್ಯವಾದ ಸಂಗತಿಯಾಗಿದೆ. ಶವರ್ ಮತ್ತು ಸ್ನಾನದ ಬಿದ್ದ ನೀರು ಮತ್ತು ತೇವಾಂಶವು ಸುಲಭವಾಗಿ ಗೋಡೆಗಳೊಳಗೆ ಬಸಿಯುತ್ತದೆ, ಇದು ಶಿಲೀಂಧ್ರ ಬೆಳವಣಿಗೆ, ಬಣ್ಣ ಸಿಪ್ಪೆಸುಲಿಯುವಿಕೆ ಮತ್ತು ರಚನಾತ್ಮಕ ಹಾನಿಗಳಿಗೆ ಕಾರಣವಾಗುತ್ತದೆ. ನಿಮ್ಮ ಬಾತ್ರೂಮ್ ಗೋಡೆಗಳನ್ನು ಪರಿಣಾಮಕಾರಿಯಾಗಿ ವಾಟರ್‌ಪೂಫಿಂಗ್‌ ಮಾಡಲು ಈ ಹಂತಗಳನ್ನು ಅನುಸರಿಸಿ:

 

1. ಸರಿಯಾದ ಗೋಡೆಯ ವಾಟರ್‌ಪೂಫಿಂಗ್‌ ಸಾಮಗ್ರಿಯನ್ನು ಆಯ್ಕೆಮಾಡಿ

ಸೂಕ್ತವಾದ ಗೋಡೆಯ ವಾಟರ್‌ಪೂಫಿಂಗ್‌ ಸಾಮಗ್ರಿಯನ್ನು ಆಯ್ಕೆ ಮಾಡುವುದು ಯಶಸ್ವಿ ಫಲಿತಾಂಶ ಪಡೆಯಲು ನಿರ್ಣಾಯಕವಾಗಿದೆ. ವಾಟರ್‌ಪೂಫಿಂಗ್‌ ಮೆಂಬ್ರೇನ್‌ಗಳನ್ನು ಸಾಮಾನ್ಯವಾಗಿ ಈ ಉದ್ದೇಶಕ್ಕಾಗಿ ಬಳಸಲಾಗುತ್ತವೆ, ಏಕೆಂದರೆ ಅದು ಗೋಡೆಗಳೊಳಗೆ ನೀರು ನುಸುಳುವುದನ್ನು ತಡೆಯುವ ತಡೆಗೋಡೆಯನ್ನು ರಚಿಸುತ್ತದೆ. ಆಯ್ಕೆಮಾಡಿದ ವಸ್ತುವು ನಿಮ್ಮ ಬಾತ್ರೂಮ್ನಲ್ಲಿ ನಿರ್ದಿಷ್ಟ ರೀತಿಯ ಗೋಡೆಯ ಮೇಲ್ಮೈಗೆ ಸೂಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

 

2. ಪ್ರೈಮರ್ ಬಳಸಿ ಮೇಲ್ಮೈಯನ್ನು ಸಿದ್ಧಗೊಳಿಸಿ



ಫ್ಲೋರ್‌ಗೆ ಮಾಡಿದಂತೆ, ಗೋಡೆಯ ವಾಟರ್‌ಪೂಫಿಂಗಿಗೂ ಪ್ರೈಮರ್ ಅನ್ನು ಲೇಪಿಸುವುದು ಅತ್ಯಗತ್ಯ. ಪ್ರೈಮರ್ ಗೋಡೆಯ ಮೇಲ್ಮೈಗೆ ವಾಟರ್‌ಪೂಫಿಂಗ್‌ ವಸ್ತುಗಳ ಅಂಟಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ ಮತ್ತು ಆಮೂಲಕ ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಪ್ರೈಮರ್ ಅನ್ನು ಅನ್ವಯಿಸುವ ಮೊದಲು ಗೋಡೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ಯಾವುದೇ ಬಿರುಕುಗಳು ಅಥವಾ ರಂಧ್ರಗಳಿದ್ದರೆ ಮುಚ್ಚಿಬಿಡಿ.

 

3. ವಾಟರ್‌ಪೂಫ್ ಬಣ್ಣವನ್ನು ಹಚ್ಚಿ

ವಾಟರ್‌ಪೂಫ್ ಬಣ್ಣವು ಒಂದು ಹೆಚ್ಚುವರಿ ರಕ್ಷಣಾ ಪದರವಾಗಿದ್ದು ಅದನ್ನು ವಾಟರ್‌ಪೂಫಿಂಗ್‌ ಪೊರೆಯ ಮೇಲೆ ಹಚ್ಚಬಹುದು. ಈ ಬಣ್ಣವು ನೀರಿನ ವಿರುದ್ಧ ಒಂದು ಎರಡನೇಯ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗೋಡೆಗಳಿಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ. ಬಾತ್ರೂಮ್‌ನ ಬಳಕೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಉತ್ತಮ ಗುಣಮಟ್ಟದ ವಾಟರ್‌ಪೂಫ್ ಬಣ್ಣವನ್ನೇ ಆಯ್ಕೆಮಾಡಿ.

 

4. ಪರೀಕ್ಷಿಸುವುದು

ಗೋಡೆಗಳ ಬಾತ್ರೂಮ್ ವಾಟರ್‌ಪೂಫಿಂಗ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಕೂಲಂಕಷ ಪರೀಕ್ಷಾ ವಿಧಾನವನ್ನು ಕೈಗೊಳ್ಳಿ. ಗೋಡೆಗಳ ಮೇಲೆ ನೀರನ್ನು ಚಿಮುಕಿಸಿ ಮತ್ತು ನೀರು ಬಸಿಯುತ್ತದೆಯೇ ಎಂಬುದನ್ನು ಗಮನಿಸಿ. ಮೂಲೆಗಳು, ಅಂಚುಗಳು ಮತ್ತು ನೆಲಜೋಡಣೆಗಳ ಸುತ್ತಲಿನ ಪ್ರದೇಶಗಳಿಗೆ ಗಮನ ಕೊಡಿ, ಏಕೆಂದರೆ ಅವು ಅತ್ಯಂತ ಸಾಮಾನ್ಯ ದುರ್ಬಲ ತಾಣಗಳಾಗಿರುತ್ತವೆ. ಯಾವುದಾದರು ಸೋರಿಕೆ ಪತ್ತೆಯಾದರೆ, ಗೋಡೆಗಳು ಸಂಪೂರ್ಣವಾಗಿ ವಾಟರ್‌ಪೂಫ್ ಆಗುವವರೆಗೆ ಅಗತ್ಯ ರಿಪೇರಿ ಮಾಡಿ ಮತ್ತು ಮರುಪರೀಕ್ಷೆ ಮಾಡಿ.




ಬಾತ್ರೂಮ್‌ ವಾಟರ್‌ಪೂಫಿಂಗ್‌ ಆರೋಗ್ಯಕರ ಮನೆ ಪರಿಸರವನ್ನು ಉತ್ತೇಜಿಸುವ ನಿಟ್ಟಿನಲ್ಲಿನ ನಿರ್ಣಾಯಕ ಹೂಡಿಕೆಯಾಗಿದೆ, ಅದು ನಿಮ್ಮ ಬಾತ್ರೂಮ್‌ನ ರಚನೆ ಮತ್ತು ಮೇಲ್ಮೈಗಳನ್ನು ರಕ್ಷಿಸುತ್ತದೆ ಮತ್ತು ನಿಮ್ಮ ಮನೆಯ ಒಟ್ಟಾರೆ ಮೌಲ್ಯವನ್ನು ಸಂರಕ್ಷಿಸುತ್ತದೆ. ಈ ಲೇಖನದಲ್ಲಿ ವಿವರಿಸಿರುವ ಕ್ರಮಗಳನ್ನು ಅನುಸರಿಸುವ ಮೂಲಕ ಬಾತ್ರೂಮ್‌ನ ಗೋಡೆಗಳನ್ನು ವಾಟರ್‌ಪೂಫ್ ಮಾಡುವ ಮೂಲಕ, ನಿಮ್ಮ ಬಾತ್ರೂಮ್‌ ಅನ್ನು ನೀರು-ಸಂಬಂಧಿತ ಹಾನಿಯಿಂದ ಪರಿಣಾಮಕಾರಿಯಾಗಿ ರಕ್ಷಿಸಬಹುದು, ವಾಟರ್‌ಪೂಫಿಂಗ್‌ ರಾಸಾಯನಿಕಗಳು ನಿಮ್ಮ ಬಾತ್ರೂಮ್‌ವನ್ನು ಆರಾಮದಾಯಕ ಮತ್ತು ಕ್ರಿಯಾತ್ಮಕ ಸ್ಥಳವನ್ನಾಗಿ ಮಾಡುತ್ತವೆ. ವಾಟರ್‌ಪೂಫಿಂಗ್‌ ತರುವಾತ ಹೆಚ್ಚುವರಿಯಾಗಿ, ನಿಮ್ಮ ಮನೆಗೆ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಲು ಬಾತ್ರೂಮ್‌ ಮತ್ತು ಶೌಚಾಲಯದ ವಾಸ್ತುವನ್ನು ಸಹ ನೀವು ಪರಿಗಣಿಸಬಹುದು.



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

1. ಟೈಲ್ಸ್ ಜೋಡಿಸುವ ಮೊದಲು ನೀವು ಬಾತ್ರೂಮ್ ನೆಲವನ್ನು ವಾಟರ್‌ಪೂಫ್ ಮಾಡಬೇಕೇ?

ಹೌದು, ಸೋರಿಕೆ ಅಥವಾ ಬಸಿಯುವಿಕೆಯಿಂದ ಉಂಟಾಗುವ ನೀರು-ಸಂಬಂಧಿತ ಹಾನಿಯಿಂದ ನಿಮ್ಮ ಬಾತ್ರೂಮು ಚೆನ್ನಾಗಿ ರಕ್ಷಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಟೈಲ್ಸ್ ಜೋಡಿಸುವುದಕ್ಕಿಂತ ಮೊದಲು ನಿಮ್ಮ ಬಾತ್ರೂಮ್ ನೆಲವನ್ನು ವಾಟರ್‌ಪೂಫ್ ಮಾಡುವುದು ಅತ್ಯಗತ್ಯ.

 

2. ನೀವು ಇಡೀ ಬಾತ್ರೂಮ್ ಅನ್ನು ವಾಟರ್‌ಪೂಫ್ ಮಾಡುತ್ತೀರಾ ಅಥವಾ ಕೇವಲ ಶವರ್ ಅನ್ನು ಮಾತ್ರ ಮಾಡುತ್ತೀರಾ?

ಗರಿಷ್ಠ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಶವರ್, ಫ್ಲೋರ್‌ಗಳು ಮತ್ತು ಗೋಡೆಗಳನ್ನು ಒಳಗೊಂಡಂತೆ ಸಂಪೂರ್ಣ ಬಾತ್ರೂಮ್ ಪ್ರದೇಶವನ್ನು ವಾಟರ್‌ಪೂಫ್ ಮಾಡಲು ಶಿಫಾರಸು ಮಾಡಲಾಗುತ್ತದೆ. ಇಡೀ ಬಾತ್ರೂಮ್ ಪ್ರದೇಶವನ್ನು ವಾಟರ್‌ಪೂಫ್ ಮಾಡುವುದು ಹಾನಿ ಮತ್ತು ಶಿಲೀಂಧ್ರ ಬೆಳವಣಿಗೆಗೆ ಕಾರಣವಾಗಬಹುದಾದ ನೀರು ಸೋರಿಕೆಯನ್ನು ತಡೆಯುತ್ತದೆ.

 

3. ನೀವು ನಲ್ಲಿಗಳ ಸುತ್ತಲೂ ವಾಟರ್‌ಪೂಫಿಂಗ್‌ ಮಾಡುತ್ತೀರಾ?

ಹೌದು, ನೀರಿನ ಹಾನಿಯಿಂದ ರಕ್ಷಿಸಲು ಮತ್ತು ನಿಮ್ಮ ಬಾತ್ರೂಮ್‌ನ ಸಮಗ್ರತೆಯನ್ನು ಕಾಪಾಡಲು ನಲ್ಲಿಗಳ ಸುತ್ತಲೂ ವಾಟರ್‌ಪೂಫಿಂಗ್‌ ಮಾಡುವುದು ಬಹಳ ಮುಖ್ಯ. ನಲ್ಲಿಗಳ ಸುತ್ತಲೂ ಸೀಲ್‌ಮಾಡಿ ಮುಚ್ಚಿದರೆ ನೀರು ಮೇಲ್ಮೈ ಮೂಲಕ ನುಸುಳಿ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಬಹುದು.

 

4. ಈಗಾಗಲೇ ಅಸ್ತಿತ್ವದಲ್ಲಿರುವ ಬಾತ್ರೂಮ್ ಟೈಲ್ಸ್ ಅನ್ನು ನಾವು ವಾಟರ್‌ಪೂಫಿಂಗ್‌ ಮಾಡಬಹುದೇ?

ಹೌದು, ಅಸ್ತಿತ್ವದಲ್ಲಿರುವ ಬಾತ್ರೂಮ್ ಟೈಲ್ಸ್ ಅನ್ನು ವಾಟರ್‌ಪೂಫ್ ಮಾಡಬಹುದಾಗಿದೆ. ಆದರೆ, ವಾಟರ್‌ಪೂಫಿಂಗ್‌ ವಸ್ತುವು ಮೇಲ್ಮೈಗೆ ಸರಿಯಾಗಿ ಅಂಟಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಂಚುಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು ಮತ್ತು ದುರಸ್ತಿ ಮಾಡಬೇಕು.

 

5. ಬಾತ್ರೂಮ್ ವಾಟರ್‌ಪೂಫಿಂಗ್‌ ಎಷ್ಟು ಕಾಲ ಉಳಿಯುತ್ತದೆ?

ಬಾತ್ರೂಮ್ ವಾಟರ್‌ಪೂಫಿಂಗ್‌ನ ಪರಿಣಾಮಕಾರಿತ್ವವು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ, ಉದಾಹರಣೆಗೆ ಬಳಸಿದ ವಾಟರ್‌ಪೂಫಿಂಗ್‌ ವಸ್ತುಗಳ ಪ್ರಕಾರ, ಜಾಗ ನೀರಿಗೆ ಒಡ್ಡಿಕೊಳ್ಳುವ ಮಟ್ಟ ಮತ್ತು ಅಳವಡಿಕೆಯ ಗುಣಮಟ್ಟ ಇತ್ಯಾದಿ. ಸಾಮಾನ್ಯವಾಗಿ, ವಾಟರ್‌ಪೂಫಿಂಗ್‌ ತಡೆಗೋಡೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತ ನಿರ್ವಹಣೆ ಮತ್ತು ತಪಾಸಣೆಯೊಂದಿಗೆ ಇದರ ಪರಿಣಾಮಕಾರಿತ್ವವು ಸುಮಾರು 5-10 ವರ್ಷಗಳವರೆಗೆ ಇರುತ್ತದೆ.


ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....