ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj

ಮನೆಗೆ ಫೌಂಡೇಶನ್​ ಹಾಕಲು ತಿಳಿದಿರಬೇಕಾದ ಕ್ರಮಗಳ ಕುರಿತು ಮಾರ್ಗದರ್ಶಿ

ನಿರ್ಮಾಣ ಕ್ಷೇತ್ರದಲ್ಲಿ ಮನೆಗೆ ಫೌಂಡೇಶನ್ ಹಾಕುವ ಮೂಲಕ ಮನೆ ಕಟ್ಟುವ ಪ್ರಕ್ರಿಯೆ ಆರಂಭವಾಗುತ್ತದೆ. ನಾವು ಈ ಮಾರ್ಗದರ್ಶಿಯಲ್ಲಿ, ನಿಮ್ಮ ಮನೆಗೆ ದೃಢವಾದ ಮತ್ತು ಸ್ಥಿರವಾದ ತಳಹದಿಯನ್ನು ಹಾಕಿಕೊಳ್ಳಲು ತಿಳಿದಿರಬೇಕಾದ ಪ್ರತಿ ಹಂತಗಳ ಕುರಿತು ಅರಿವು ಕೊಡುತ್ತೇವೆ. ಮನೆಗೆ ಫೌಂಡೇಶನ್ ಹಾಕುವುದರೊಂದಿಗೆ ಸದೃಢ ಮನೆ ಹೊಂದುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ.

Share:


ಮನೆ ಕಟ್ಟಲು ಫೌಂಡೇಶನ್ ಹಾಕುವ ಫೌಂಡೇಶನ್ ಇಡೀ ಮನೆಯ ಭಾರವನ್ನು ಹೊತ್ತುಕೊಳ್ಳುತ್ತದೆ. ಹೀಗಾಗಿ ಫೌಂಡೇಶನ್ ಹಾಕುವುದು ಮನೆ ಕಟ್ಟುವ ಯೋಜನೆಯ ಅತ್ಯಂತ ಪ್ರಮುಖ ಭಾಗವಾಗಿದೆ. ಸರಿಯಾಗಿ ಫೌಂಡೇಶನ್ ಹಾಕದೇ ಇರುವುದು ನಂತರ ಕಟ್ಟಲಾಗುವ ಗೋಡೆಗಳಲ್ಲಿ ಹಾಗೂ ಮಹಡಿಗಳಲ್ಲಿ ಬಿರುಕು ಉಂಟಾಗಲು, ಅಥವಾ ಮನೆಯ ಇಡೀ ಸ್ಟ್ರಕ್ಚರ್ ಹಾಳಾಗಲು ಕಾರಣವಾಗುತ್ತದೆ. ಆದ್ದರಿಂದಾಗಿ ವಾಸದ ಮನೆಗೆ ಫೌಂಡೇಶನ್​ ಹಾಕುವುದಕ್ಕಿಂತ ಮೊದಲು ಅಗತ್ಯವಿರುವ ವಸ್ತುಗಳನ್ನು ಎಚ್ಚರಿಕೆಯಿಂದ ಸರಿಯಾಗಿ ಆಯ್ಕೆ ಮಾಡಿಕೊಳ್ಳುವುದು ಮತ್ತು ನಿಖರವಾಗಿ ಹಂತ-ಹಂತದ ನಿರ್ಮಾಣವನ್ನು ಮಾಡುವುದು ಅಗತ್ಯವಾಗಿರುತ್ತದೆ. ಈ ಮಾರ್ಗದರ್ಶಿಯು ಮನೆಯ ಫೌಂಡೇಶನ್ ಹಾಕುವ ಸಂಪೂರ್ಣ ಪ್ರಕ್ರಿಯೆಯ ಮೂಲಕ ನಿಮ್ಮನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಆರಂಭದಲ್ಲಿ ಗಟ್ಟಿಯಾದ ಫೌಂಡೇಶನ್ ಹಾಕಲು ಸರಿಯಾದ ಕಾಂಕ್ರೀಟ್ ಬಳಸುವುದೂ ಸೇರಿದಂತೆ ಉತ್ತಮ ತಂತ್ರಗಳನ್ನು ಮತ್ತು ಸಾಮಗ್ರಿಗಳನ್ನು ಬಳಸಬೇಕು. ಈ ಎಲ್ಲವನ್ನೂ ಪಾಲಿಸಿದಾಗ ನೀವು ಕಟ್ಟುವ ಮನೆಯು ದಶಕಗಳವರೆಗೆ ದೃಢವಾಗಿ ಉಳಿಯುವಂತೆ, ದೀರ್ಘಕಾಲ ಬಾಳಿಕೆ ಬರುವಂತೆ ಗಟ್ಟಿಯಾದ ಫೌಂಡೇಶನ್ ಹಾಕುವುದು ಸಾಧ್ಯವಾಗುತ್ತದೆ.



ಮನೆಗೆ ಹಾಕುವ ಫೌಂಡೇಶನ್​ ಎಂದರೇನು?



ಫೌಂಡೇಶನ್ ಯಾವುದೇ ಮನೆ ಅಥವಾ ಕಟ್ಟಡ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಭಾಗಗವಾಗಿರುತ್ತದೆ. ಯಾಕೇಂದರೆ ಫೌಂಡೇಶನ್ ಎಂಬುದು ಇಡೀ ಕಟ್ಟಡದ ಸಂಪೂರ್ಣ ಭಾರವನ್ನು ಹೊತ್ತುಕೊಂಡಿರುತ್ತದೆ. ಹೀಗೆ ಹೊತ್ತಿರುವ ಭಾರವನ್ನು ತನ್ನ ಕೆಳಗಿನ ಭೂಮಿಗೆ ವರ್ಗಾವಣೆ ಮಾಡುತ್ತದೆ. ಗೋಡೆಗಳು, ಮಹಡಿಗಳು, ಛಾವಣಿ, ಮನೆಯ ಇತರ ಸೌಲಭ್ಯಗಳು ಮತ್ತು ಮನೆಯಲ್ಲಿ ಇರುವವರ ಸಂಪೂರ್ಣ ತೂಕವನ್ನು ಹೊತ್ತುಕೊಳ್ಳುವಂತೆ ಫೌಂಡೇಶನ್​ ಕಟ್ಟಡಕ್ಕೆ ತಳಹದಿಯನ್ನು ಒದಗಿಸುತ್ತದೆ. ಇಡೀ ಮನೆಯ ಭಾರವನ್ನು ಅದಕ್ಕೆ ಆಧಾರವಾಗಿರುವ ಭೂಮಿಯಲ್ಲಿ ಸಮಾನಾಂತರವಾಗಿ ಹಂಚುವ ಮೂಲಕ ದೃಢತೆಯನ್ನು ಕೊಡುವುವುದು ಫೌಂಡೇಶನ್​ ಕೆಲಸವಾಗಿದೆ. ಹೀಗಾಗಿ ನಾವು ಮಾರ್ಗದರ್ಶನ ಮಾಡಿದಂತೆ ಫೌಂಡೇಶನ್ ಹಾಕುವುದರಿಂದ ಮುಂದೆ ಕಾಲಕಳೆದಂತೆ ಕಟ್ಟಡವು ಭಾಗುವ ಉಂಟಾಗುವ ಬಿರುಕುಗಳು ಮತ್ತು ಹಾನಿಯನ್ನು ಉಂಟುಮಾಡವುದನ್ನು ತಡೆಯುತ್ತದೆ.

 

ಆಳವಿಲ್ಲದ ಹಾಗೂ ಆಳವಾದ, ಹೀಗೆ ಪ್ರಮುಖವಾಗಿ ಎರಡು ವಿಧಗಳ ಫೌಂಡೇಶನ್ ಮಾದರಿಗಳನ್ನು ವಸತಿ ನಿರ್ಮಾಣಗಳಲ್ಲಿ ಬಳಸಲಾಗುತ್ತದೆ. ಆಳವಿಲ್ಲದ ಫೌಂಡೇಶನ್ ಸುಮಾರು 1.5 ಮೀಟರ್ ಅಥವಾ ಅದಕ್ಕಿಂತ ಕಡಿಮೆ ಆಳದ ಗುಂಡಿ ತೋಡುವ ಮೂಲಕ ಈ ರೀತಿಯ ಫೌಂಡೇಶನ್ ಹಾಕಲಾಗುತ್ತದೆ. ಒಂದೇ ಮನೆ ನಿರ್ಮಾಣ ಹಾಗೂ ಕಡಿಮೆ ಅಂತಸ್ತುಗಳ ಕಟ್ಟಡಗಳಿಗೆ ಈ ಪದ್ದತಿಯು ಸೂಕ್ತವಾಗಿದೆ. ಈ ಫೌಂಡೇಶನ್ ಸ್ಪ್ರೆಡ್ ಫೂಟಿಂಗ್‌ಗಳು, ಮ್ಯಾಟ್ ಸ್ಲ್ಯಾಬ್‌ಗಳು, ಫ್ಲೋಟಿಂಗ್ ಸ್ಲ್ಯಾಬ್‌ಗಳು ಇತ್ಯಾದಿಗಳನ್ನು ಒಳಗೊಂಡಿವೆ. ಆಳವಾದ ಫೌಂಡೇಶನ್​​​ಗಳನ್ನು ನಿರ್ಮಿಸಲು 1.5 ಮೀಟರ್‌ಗಳಷ್ಟು ಆಳದ ಗುಂಡಿಯನ್ನು ತೆಗೆದು ಫೌಂಡೇಶನ್ ಹಾಕಲಾಗುತ್ತದೆ. ದುರ್ಬಲ ಅಥವಾ ಅಸ್ಥಿರವಾದ ಮಣ್ಣು ಹೊಂದಿರುವ ಭೂಮಿಯ ಮೇಲೆ ಬಹುಮಹಡಿ ಕಟ್ಟಡಗಳು ಮತ್ತು ಮನೆಗಳನ್ನು ಕಟ್ಟಲು ಈ ರೀತಿ ಆಳವಾದ ಫೌಂಡೇಶನ್​​ಗಳ ಅಗತ್ಯವಿದೆ.  ಸರಿಯಾದ ವಿನ್ಯಾಸದ ಫೌಂಡೇಶನ್ ಮನೆಗೆ ಅಸ್ಥಿರತೆ, ಅಸುರಕ್ಷತೆ ಸೇರಿದಂತೆ ಇನ್ಯಾವುದೆ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ.

 

ದುರ್ಬಲವಾಗಿರುವ ಅಥವಾ ಅಸ್ಥಿರವಾಗಿರುವ ಭೂಮಿಯ ಮೇಲೆ ಕಟ್ಟುವ ಬಹುಮಹಡಿ ಕಟ್ಟಡಗಳು ಮತ್ತು ಮನೆಗಳಿಗೆ ಸರಿಯಾಗಿ ಫೌಂಡೇಶನ್ ಹಾಕುವುದು ಅತ್ಯಗತ್ಯವಾಗಿದೆ. ಸಾಧಾರಣ ಆಳದ ಫೌಂಡೇಶನ್ ಹಾಕುವಾಗ ಪೈಲ್ಸ್, ಪಿಯರ್ಸ್ ಹಾಗೂ ಕೈಸನ್ ಫೌಂಡೇಶನ್ ಪದ್ದತಿಗಳನ್ನು ಬಳಸಲಾಗುತ್ತದೆ. ಭೂಮಿಯ ಪರಿಸ್ಥಿತಿ, ಕಟ್ಟಡದ ಭಾರ ಹಾಗೂ ನಿರ್ಮಾಣದ ಬಜೆಟ್ ಅವಲಂಬಿಸಿ ಮನೆಗೆ ಯಾವ ರೀತಿಯ ಫೌಂಡೇಶನ್ ಹಾಕಬೇಕು ಎಂಬ ನಿರ್ಧಾರ ಮಾಡಲಾಗುತ್ತದೆ. ಸರಿಯಾದ ವಿನ್ಯಾಸದ ಫೌಂಡೇಶನ್ ಮನೆಗೆ ಅಸ್ಥಿರತೆ, ಅಸುರಕ್ಷತೆ ಸೇರಿದಂತೆ ಇನ್ಯಾವುದೆ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ.


ಫೌಂಡೇಶನ್ ಹಾಕಲು ಅಗತ್ಯವಿರುವ ಪರಿಕರಗಳು ಮತ್ತು ಸಾಮಗ್ರಿಗಳು



ನಿಮ್ಮ ಮನೆಯ ಫೌಂಡೇಶನ್​ ಯೋಜನೆಯನ್ನು ಪ್ರಾರಂಭಿಸಲು, ಅಗತ್ಯ ಉಪಕರಣಗಳು ಮತ್ತು ವಸ್ತುಗಳನ್ನು ಮೊದಲೇ ಸಂಗ್ರಹಿಸಿಕೊಳ್ಳಿ:

 

1. ಭೂಮಿಯನ್ನು ಅಗೆಯಲು ಒಂದು ಸಲಿಕೆ

2. ಗಟ್ಟಿಯಾದ ಭೂಮಿ ಅಗೆಯಲು  ಒಂದು ಪಿಕಾಸಿ ಅಥವಾ ಗುದ್ದಲಿ

3. ಕಾಂಕ್ರೀಟ್ ಕೆಲಸಕ್ಕಾಗಿ ಒಂದು ಟ್ರೋವೆಲ್

4. ಸಮಾನ ನಿಖರತೆ ಪಡೆಯಲು ಒಂದು ಸ್ಪಿರಿಟ್ ಲೆವಲ್ ಸಾಧನ

5. ಅಳತೆ ಮಾಡಿ ಮತ್ತು ಗುರುತು ಹಾಕಿಕೊಳ್ಳಲು ಅಳತೆ ಟೇಪ್, ನಾರಿನ ಹುರಿ ಮತ್ತು ಗೂಟಗಳು

6. ಸಾಮಗ್ರಿಗಳನ್ನು ಸಾಗಿಸಲು ಒಂದು ಕೈಗಾಡಿ

7. ಪಾರ್ಮ್​​ವರ್ಕ್​ಗಾಗಿ ಮರದ ಹಲಗೆಗಳು

8. ಸರಿಯಾಗಿ ಮಿಶ್ರಣ ಮಾಡಲು ಕಾಂಕ್ರೀಟ್ ಮಿಕ್ಸರ್

9. ದೃಢತೆ ಕೊಡಲು ಬಲವರ್ಧಿತ ಉಕ್ಕು

10. ಗೋಡೆಗಳನ್ನು ಗುರುತು ಮಾಡಿಕೊಳ್ಳಲು ಕಾಂಕ್ರೀಟ್ ಬ್ಲಾಕ್​ಗಳು

11. ಒಳಚರಂಡಿಗಾಗಿ ವ್ಯವಸ್ಥೆಗಾಗಿ ಜಲ್ಲಿಕಲ್ಲು

12. ಮಿಶ್ರಣ  ಮಾಡಲು ಮತ್ತು ಕ್ಯೂರಿಂಗ್‌ ಮಾಡಲು ಉಸುಕು, ಸಿಮೆಂಟ್ ಮತ್ತು ನೀರು.

 

ಇವೆಲ್ಲವೂ ನೀವು ನಿಮ್ಮ ಕನಸಿನ ಮನೆ ಹೊಂದಲು ಫೌಂಡೇಶನ್ ನಿರ್ಮಿಸಲು ನಿಮ್ಮನ್ನು ಸಜ್ಜುಗೊಳಿಸಲು ಅಗತ್ಯವಾಗಿರುವ ಮೂಲ ಉಪಕರಣಗಳು ಮತ್ತು ಸಾಮಗ್ರಿಗಳಾಗಿವೆ.


ಫೌಂಡೇಶನ್​ ನಿರ್ಮಾಣದ ಹಂತಗಳು ಹಾಗೂ ಕಾರ್ಯವಿಧಾನ

ಹಂತ ಹಂತವಾಗಿ ಮನೆಗೆ ಫೌಂಡೇಶನ್​​ ಹೇಗೆ ನಿರ್ಮಿಸುವುದು ಎಂದು ನೀವು ಯಾವಾಗಲದಾದರೂ ಯೋಚಿಸಿದ್ದರೆ, ಈ ಅಗತ್ಯ ನಿರ್ಮಾಣ ಹಂತಕ್ಕೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಕೊಡುವ ಮೂಲಕ ಫೌಂಡೇಶನ್​ ಹಾಕುವ ಕಾರ್ಯವಿಧಾನವನ್ನು ಆರಂಭಿಸೋಣ.

 

 

1) ಜಾಗದ ಆಯ್ಕೆ



ಫೌಂಡೇಶನ್​ ಹಾಕಲು ಸರಿಯಾದ ಜಾಗವನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಉತ್ತಮ ಲೋಡ್-ಬೇರಿಂಗ್ ಸಾಮರ್ಥ್ಯವನ್ನು ಹೊಂದಿರುವ ಸ್ಥಿರವಾದ, ದಟ್ಟವಾದ ಮಣ್ಣು ಇರುವ ಭೂಮಿಯ ಸೈಟ್‌ಗಳನ್ನು ಆಯ್ಕೆಮಾಡಿಕೊಳ್ಳಿರಿ. ಸಡಿಲವಾಗಿ ಆವರಿಸಿರುವ ಅಥವಾ ಮರಳು ರೀತಿಯ ಮಣ್ಣ ಇರುವ ಭೂಮಿಯ ಸೈಟ್ ಆಯ್ಕೆಯನ್ನು ತಪ್ಪಿಸಿ. ಈ ರೀತಿಯ ಸೈಟ್ ನಲ್ಲಿ ಫೌಂಡೇಶನ್ ಸ್ಥಳಾಂತರಿಸಬಹುದು ಮತ್ತು ಸರಿದಾಡಬಹುದು. ಸೈಟ್​​ನಲ್ಲಿ ನೀರು ಜಿನುಗುವುದಿಲ್ಲ ಅಥವಾ ಹೆಚ್ಚಿನ ಅಂತರ್ಜಲ ಮಟ್ಟವನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ರೀತಿಯ ಭೂಮಿಯ ಒಳಗೆ ಫೌಂಡೇಶನ್​ ಒತ್ತಡವನ್ನು ತಡೆದುಕೊಳ್ಳುವುದಿಲ್ಲ. ಸೈಟ್ ಅನ್ನು ಸಂಪೂರ್ಣವಾಗಿ ಸಮೀಕ್ಷೆ ಮಾಡಿ ಮತ್ತು ಭೂಮಿಯ ಆಳದಲ್ಲಿ ಕೇಬಲ್‌ಗಳು, ಪೈಪ್‌ಗಳು ಅಥವಾ ದೊಡ್ಡ ಮರದ ಬೇರುಗಳು ಇವೆಯೇ ಎಂಬುದನ್ನು ಪರೀಕ್ಷಿಸಿ. ಹಾಗಿದ್ದಲ್ಲಿ ಅದು ಭೂಮಿ ಅಗೆಯುವುದು ಮತ್ತು ಫೌಂಡೇಶನ್​ ಕೆಲಸ ಮಾಡಲು ಅಡ್ಡಿಯಾಗಬಹುದು. ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ವಿಶೇಷವಾಗಿ ಮರದ ಬೇರುಗಳು ಫೌಂಡೇಶನ್​ ಗೋಡೆಗಳು ಮತ್ತು ಕಾಲಂಗಳಿಗೆ ಹಾನಿಯನ್ನುಂಟು ಮಾಡುತ್ತವೆ.

 

 

2) ಭೂಮಿಯನ್ನು ಅಗೆಯುವುದು



ಫೌಂಡೇಶನ್ ಹಾಕುವ ಕಾಮಗಾರಿಯಲ್ಲಿ, ನೀವು ಸೈಟ್ ಅನ್ನು ಅಂತಿಮಗೊಳಿಸಿದ ನಂತರ, ನಾರಿನ ಹುರಿ, ಗೂಟಗಳು ಹಾಗೂ ಸಂಪಡಿಸುವ ಪೇಂಟ್ ಅನ್ನು ಬಳಸಿಕೊಂಡು ಮನೆಯ ಅಡಿಪಾಯದ ವಿನ್ಯಾಸವನ್ನು ಸರಿಯಾಗಿ ಗುರುತಿಸಿ. ನಂತರ, ನಿರ್ಮಾಣದಲ್ಲಿ ನಿರ್ದಿಷ್ಟಪಡಿಸಿದ ಪ್ರಮಾಣ ಮತ್ತು ಆಳದ ಪ್ರಕಾರ ಅಡಿಪಾಯ ಕಂದಕಗಳು ಮತ್ತು ಅಡಿಭಾಗಗಳನ್ನು ಅಗೆಯಬೇಕು. ಭೂಮಿಯಲ್ಲಿ ಎಷ್ಟು ಆಳದವರೆಗೆ ಗುಂಡಿ ತೋಡಬೇಕು ಎಂಬುದನ್ನು ಮಣ್ಣಿನ ಪ್ರಕಾರ ಮತ್ತು ಕಟ್ಟಡದ ಒಟ್ಟು ಭಾರದ ಮೇಲೆ ನಿರ್ಧರಿಸಲಾಗುತ್ತದೆ. ಮರಳು ಅಥವಾ ಸಡಿಲವಾದ ಮಣ್ಣಿ ಇದ್ದಲ್ಲಿ ಆಳವಾದ ತಳಹದಿಯ ಅಗತ್ಯವಿರುತ್ತದೆ. ಕಾಲಮ್​ಗಳು ಸರಿಯಾದ ಇಳಿಜಾರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಿ. ಮುಂದೆ ಮಣ್ಣು ಕಾಂಕ್ರೀಟ್ ಜೊತೆಗೆ ಸೇರುವುದನ್ನು ತಡೆಯಲು ನೀವು ಕಾಂಕ್ರೀಟ್ ಹಾಕುವುದನ್ನು ಆರಂಭಿಸುವ ಮೊದಲು ಅಗೆದ ಹಾಕಿರುವ ಮಣ್ಣನ್ನು ನೆಲಸಮಗೊಳಿಸಿ ಮತ್ತು ಸಂಪೂರ್ಣವಾಗಿ ಸರಿಮಾಡಿಕೊಳ್ಳಿರಿ.

 

 

 3) ಗೆದ್ದಲು ಹಿಡಿಯುವುದನ್ನು ತಪ್ಪಿಸುವುದು



ಗೆದ್ದಲುಗಳು ಮನೆಯ ಕಟ್ಟಿಗೆಯ ನಿರ್ಮಾಣ ಮತ್ತು ಮನೆಯ ಫೌಂಡೇಶನ್​ಗೆ ಹಾನಿಮಾಡಿ ನಾಶ ಮಾಡಬಹುದು. ಆದ್ದರಿಂದ, ಕಾಂಕ್ರೀಟ್ ಹಾಕುವ ಮೊದಲು ಅಡಿಪಾಯದ ಟ್ರೆಂಚ್​ಗಳ ಬದಿಗಳಲ್ಲಿ ಮತ್ತು ಕೆಳಭಾಗದಲ್ಲಿ ಗೆದ್ದಲು ನಿರೋಧಕ ರಾಸಾಯನಿಕಗಳನ್ನು ಹಾಕಿರಿ. ಈ ರೀತಿ ಮಾಡುವುದರಿಂದ ಗೆದ್ದಲು ಫೌಂಡೇಶನ್​ಗೆ ಹಾನಿಮಾಡುವುದು ಅಥವಾ ದುರ್ಬಲ ಗೊಳಿಸುವುದನ್ನು ರಾಸಾಯನಿಕಗಳು ತಡೆಯುತ್ತವೆ. ಫೌಂಡೇಶನ್​ ಹಾಕುವ ಕಾರ್ಯವಿಧಾನದಲ್ಲಿ ಮಣ್ಣಿನ ಪ್ರಕಾರ ಮತ್ತು ಅಂತರ್ಜಲದ ಮಟ್ಟದ ಆಧಾರದ ಮೇಲೆ ಸೂಕ್ತವಾದ ಟರ್ಮಿಟೈಡ್ ಅನ್ನು ಆಯ್ಕೆ ಮಾಡಿ. ಇದನ್ನು ಬಳಸುವಾಗ ರಾಸಾಯನಿಕದ ಎಲ್ಲ ಸೂಚನೆಗಳು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿರಿ.

 

 

4) ಅಗೆದ ಮಣ್ಣು ಒಂದೆಡೆ ಸೇರುವುದು



ಅಗೆದ ಮಣ್ಣನ್ನು ಒಂದೆಡೆ ಶೇಖರಿಸುವುದು ಫೌಂಡೇಶನ್ ಹಾಕುವ ಮೊದಲು ಮಾಡುವ ನಿರ್ಣಾಯಕ ಕೆಲಸವಾಗಿದೆ. ಟ್ರೆಂಚ್​ಗಳನ್ನು ಅಗೆದ ನಂತರ, ಹ್ಯಾಂಡ್ ಟ್ಯಾಂಪರ್ ಅಥವಾ ಮೆಕ್ಯಾನಿಕಲ್ ಪ್ಲೇಟ್ ಕಾಂಪಾಕ್ಟರ್ ಅನ್ನು ಬಳಸಿಕೊಂಡು ತಳದಲ್ಲಿನ ಮಣ್ಣನ್ನು ಒತ್ತಿರಿ. ಹೀಗೆ ಮಾಡುವುದರಿಂದ ಲೋಡ್-ಬೇರಿಂಗ್ ಸಾಮರ್ಥ್ಯ ಹೆಚ್ಚಾಗಲು ಸಹಾಯ ಮಾಡುತ್ತದೆ. ಮಟ್ಟಸವಾದ ದೃಢತೆ ಕೊಡಲು ಹಲವು ಬಾರಿ ಹೀಗೆ ಕಾಂಪಾಕ್ಟರ್​​ಗಳನ್ನು ಉಪಯೊಗಿಸಿ. ಹೀಗೆ ಒತ್ತುವ ಸಮಯದಲ್ಲಿ ಮಣ್ಣು ಹಸಿಯಾಗಿರಬೇಕು. ಫೌಂಡೇಶನ್​​ ನಿರ್ಮಿಸುವಾಗ ಇದು ಮತ್ತೆ ನೆಲೆಗೊಳ್ಳುವುದನ್ನು ತಡೆಯುತ್ತದೆ ಮತ್ತು ಫೌಂಡೇಶನ್​ಗೆ ಸ್ಥಿರವಾದ ನೆಲೆಯನ್ನು ಒದಗಿಸುತ್ತದೆ.

 

 

5) ಕಟ್ಟಿಗೆಯ ಫಾರ್ಮ್​ವರ್ಕ್​

 



ಕಾಂಕ್ರೀಟ್ ಸುರಿಯಲು ಫೌಂಡೇಶನ್​​ ಟ್ರೆಂಚ್​ಗಳ ಒಳಗೆ ಉದ್ದಕ್ಕೂ ಮರದ ಹಲಗೆಗಳನ್ನು ಅಥವಾ ಪ್ಲೈವುಡ್ ಅನ್ನು ಜೋಡಿಸಿರಬೇಕು. ಕಾಂಕ್ರೀಟ್ ಸುರಿಯುವಾಗ ಉಬ್ಬುವಿಕೆಯನ್ನು ತಡೆಗಟ್ಟಲು ಫಾರ್ಮ್​ವರ್ಕ್​ ಅನ್ನು ಭದ್ರವಾಗಿ ಜೋಡಿಸಬೇಕು. ಫಾರ್ಮ್​ವರ್ಕ್​​ ಮೂಲೆಗಳನ್ನು ಲಂಬವಾಗಿ ಮತ್ತು ಜೋಡಿಸಲ್ಪಟ್ಟಿವೆ ಎಂಬುದನ್ನು ನೋಡಲು ಸ್ಪಿರಿಟ್ ಮಟ್ಟದ ಸಾಧನವನ್ನು ಬಳಸಿ. ಕಾಂಕ್ರೀಟ್ ಗಟ್ಟಿಯಾದ ನಂತರ ಫಾರ್ಮ್​ವರ್ಕ್​​ಗೆ ತೆಗೆಯಲು ಬಿಡುಗಡೆ ದ್ರಾವಕವನ್ನು ಹಚ್ಚಿರಿ.  ಆದ್ದರಿಂದ ಕಾಂಕ್ರೀಟ್ ಅಂಟಿಕೊಳ್ಳುವುದಿಲ್ಲ. ಫಾರ್ಮ್​ವರ್ಕ್​​ ದ್ರವ ರೂಪದ ಕಾಂಕ್ರೀಟ್ ಅನ್ನು ಹೊಂದಿರುತ್ತದೆ, ನುಣುಪಾದ ಫಿನಿಶಿಂಗ್​ ಕೊಡುತ್ತದೆ ಮತ್ತು ಫೌಂಡೇಶನ್​ ಸರಿಯಾದ ಅಳತೆಯಲ್ಲಿರುವಂತೆ ಮಾಡುತ್ತದೆ. 

 

 

6) ಬಲವರ್ಧನೆಯ ಸ್ಟೀಲ್ (ರಿಬಾರ್) ಕೆಲಸ

 



ಸ್ಟೀಲ್ ರಿಬಾರ್ ಬಲವರ್ಧನೆಯು ಕಾಂಕ್ರೀಟ್ ಅಡಿಪಾಯದ ಗೋಡೆಗಳು ಮತ್ತು ಪಾದಗಳ ಶಕ್ತಿ ಮತ್ತು ಬಾಳಿಕೆ ಸುಧಾರಿಸುತ್ತದೆ. ಅಡಿಪಾಯವನ್ನು ನಿರ್ಮಿಸುವಾಗ ರಿಬಾರ್ ವಿನ್ಯಾಸ ಮತ್ತು ವಿನ್ಯಾಸಕ್ಕಾಗಿ ಸ್ಟ್ರಕ್ಚರಲ್ ಎಂಜಿನಿಯರ್ ಅನ್ನು ಸಂಪರ್ಕಿಸುವುದು ಅವಶ್ಯಕ. ಕಾಂಕ್ರೀಟ್ ಸುರಿಯುವ ಮೊದಲು ವಿನ್ಯಾಸದ ಪ್ರಕಾರ ರಿಬಾರ್ಗಳನ್ನು ಇರಿಸಿ. ರಿಬಾರ್ ಕೇಜ್ ಅನ್ನು ಸ್ಥಾನದಲ್ಲಿ ಹಿಡಿದಿಡಲು ಪ್ಲಾಸ್ಟಿಕ್ ಅಥವಾ ಲೋಹದ ಬಾರ್ ಕುರ್ಚಿಗಳನ್ನು ಬಳಸಿ. ರೆಬಾರ್ ಕುರ್ಚಿಗಳು ಉಕ್ಕಿನ ಮೇಲೆ ಸರಿಯಾದ ಅಂತರ ಮತ್ತು ಕಾಂಕ್ರೀಟ್ ಹೊದಿಕೆಯನ್ನು ಒದಗಿಸುತ್ತವೆ. ರೆಬಾರ್ಗಳು ಕರ್ಷಕ ಹೊರೆಗಳನ್ನು ಹೊಂದುತ್ತವೆ ಮತ್ತು ಕಾಂಕ್ರೀಟ್ನಲ್ಲಿ ಬಿರುಕುಗಳನ್ನು ತಡೆಯುತ್ತವೆ. ಸರಿಯಾದ ರಿಬಾರ್ ಗಾತ್ರ, ಅಂತರ ಮತ್ತು ಅತಿಕ್ರಮಣಗಳನ್ನು ಖಚಿತಪಡಿಸಿಕೊಳ್ಳಿ.

 

 

7) ಅಡಿಭಾಗಕ್ಕೆ ಕಾಂಕ್ರೀಟ್ ಹಾಕುವುದು



ಶಿಫಾರಸು ಮಾಡಿದ ನೀರು-ಸಿಮೆಂಟ್ ಅನುಪಾತದ ಪ್ರಕಾರ ಉತ್ತಮ ಗುಣಮಟ್ಟದ ಕಾಂಕ್ರೀಟ್ ಮಿಶ್ರಣವನ್ನು ತಯಾರಿಸಿ. 18-24 ಇಂಚುಗಳ ನಿರಂತರ ಲಿಫ್ಟ್‌ಗಳಲ್ಲಿ ಫೌಂಡೇಶನ್​ ಟ್ರೆಂಚ್​ಗಳಿಗೆ ಕಾಂಕ್ರೀಟ್ ಹಾಕಿರಿ. ಕಾಂಕ್ರೀಟ್ ಅನ್ನು ಒತ್ತೊತ್ತಾಗಿಸಲು ಮತ್ತು ಫೌಂಡೇಶನ್​​ ಅನ್ನು ದುರ್ಬಲಗೊಳಿಸುವ ಗಾಳಿ ತುಂಬಿರುವ ಖಾಲಿಜಾಗಗಳನ್ನು ಸರಿ ಮಾಡಲು ಪೆಟ್ಟಿಲು ಮಣಿಯನ್ನು ಬಳಸಿರಿ. ಅಚ್ಚುಕಟ್ಟಾಗಿ ಫಿನಿಶಿಂಗ್​ ಮಾಡಲು ಪೆಟ್ಟಿಲು ಮಣಿ ಬಳಸಿ ಮೇಲಿನ ಮೇಲ್ಮೈಯನ್ನು ನೆಲಸಮಗೊಳಿಸಿ. ಹೀಗೆ ಫೌಂಡೇಶನ್​ಗೆ ಕಾಂಕ್ರೀಟ್​ ಹಾಕಿದ ನಂತರ ಅದು ಕ್ಯೂರಿಂಗ್​ ಆಗಲು ಕನಿಷ್ಟ 7 ದಿನಗಳವರೆಗೆ ನೀರು ಸಿಂಪಡಿಸಿ. ಕಾಂಕ್ರೀಟ್​ನ್ನು ಸರಿಯಾದ ಹಾಕುವುದು ಮತ್ತು ಸೂಕ್ತವಾಗಿ ಕ್ಯೂರಿಂಗ್ ಮಾಡುವುದರಿಂದ ಫೌಂಡೇಶನ್​ ಬಲವಾಗಿದ್ದು, ಬಾಳಿಕೆ ಬರುತ್ತದೆ. ಇನ್ನೂ ಉತ್ತಮ ಫಲಿತಾಂಶ ಪಡೆಯಲು ವೃತ್ತಿಪರರ ಮಾರ್ಗದರ್ಶನವನ್ನು ಪಡೆಯಿರಿ.


ಉತ್ತಮ ಫೌಂಡೇಶನ್​ ಅವಶ್ಯಕತೆ ಏನು?

 

ಕಟ್ಟಡ ಅಡಿಪಾಯಗಳು, ವಿಶೇಷವಾಗಿ ಉತ್ತಮ ಫೌಂಡೇಶನ್​ಗಳು, ಈ ಕೆಳಗಿನ ಗುಣಗಳನ್ನು ಹೊಂದಿವೆ:

 

1. ಕಟ್ಟಡದ ಭಾರವನ್ನು ಭೂಮಿಗೆ ಸಮವಾಗಿ ವರ್ಗಾಯಿಸುತ್ತದೆ

 

2. ಕಟ್ಟಡಕ್ಕೆ ಬಿರುಕು ಉಂಟಾಗುವುದನ್ನು ಮತ್ತು ಸರಿದಾಡುವುದನ್ನು ತಡೆಯುತ್ತದೆ

 

3. ಮೇಲಿನ ಮಹಡಿಗಳಿಗೆ ಬಲವಾದ, ಸ್ಥಿರವಾದ ತಳಹದಿಯನ್ನು ಒದಗಿಸುತ್ತದೆ

 

4. ಭೂಮಿಯ ಕದಲಿಕೆಯ ಪರಿಣಾಮಗಳನ್ನು ತಡೆದುಕೊಳ್ಳುತ್ತದೆ

 

5. ಉತ್ತಮ ಗುಣಮಟ್ಟದ ಕಾಂಕ್ರೀಟ್ ಮತ್ತು ಸರಿಯಾದ ರಿಬಾರ್ ಬಲವರ್ಧನೆಯಿಂದ ಮಾಡಲ್ಪಟ್ಟಿದೆ

 

6. ಘನೀಕರಣದಿಂದ ಹಾನಿಯಾಗದಂತೆ ತಡೆಯಲು ಫ್ರಾಸ್ಟ್ ಲೈನ್ ಕೆಳಗೆ ವಿಸ್ತರಿಸುತ್ತದೆ



ಸರಿಯಾಗಿ ಫೌಂಡೇಶನ್​ ಹಾಕುವ ಹಂತಗಳನ್ನು ಅನುಸರಿಸುವ ಮೂಲಕ, ಸರಿಯಾದ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ಮತ್ತು ದೃಢವಾದ ತಂತ್ರಗಳನ್ನು ಬಳಸಿಕೊಳ್ಳುವ ಮೂಲಕ, ನಿಮ್ಮ ಮನೆಗೆ ನೀವು ಬಲವಾದ ಮತ್ತು ಬಾಳಿಕೆ ಬರುವ ಫೌಂಡೇಶನ್​ ಹಾಕಬಹುದು. ಅಂತಹ ಫೌಂಡೇಶನ್​ ದಶಕಗಳವರೆಗೆ ಸದೃಢವಾಗಿ ಉಳಿಯುತ್ತದೆ. ಮನೆಗೆ ಫೌಂಡೇಶನ್​ ಹಾಕುವಾಗ, ಸೂಕ್ತವಾದ ಸೈಟ್ ಅನ್ನು ಆಯ್ಕೆಮಾಡುವುದು, ಮಣ್ಣಿನ ಪರೀಕ್ಷೆಯನ್ನು ಸಂಪೂರ್ಣವಾಗಿ ನಡೆಸುವುದು, ಅಗತ್ಯವಿರುವ ಅಳತೆಯೆಂತೆ ಭೂಮಿಯನ್ನು ಅಗೆಯುವುದು, ಗಟ್ಟಿಮುಟ್ಟಾದ ಫಾರ್ಮ್​​ವರ್ಕ್​​ ಮಾಡಿಕೊಳ್ಳುವುದು, ಉತ್ತಮ ಗುಣಮಟ್ಟದ ಕಾಂಕ್ರೀಟ್ ಅನ್ನು ಎಚ್ಚರಿಕೆಯಿಂದ ಹಾಕುವುದು ಅಗತ್ಯವಾಗಿದೆ. ಅಡಿಪಾಯವನ್ನು ನಿರ್ಮಿಸುವ ಪ್ರತಿಯೊಂದು ಹಂತದಲ್ಲೂ ಸೂಕ್ಷ್ಮ ವಿವರಗಳಿಗೆ ಗಮನ ಕೊಡುವುದು ಮತ್ತು ಮೂಲೆಗಳನ್ನು ಕತ್ತರಿಸದಿರುವುದು ನಿಮ್ಮ ಮನೆಯು ತಲೆಮಾರುಗಳವರೆಗೆ ಬಂಡೆಯಂತೆ ದೃಢವಾಗಿ ಉಳಿಯಲು ಸಹಾಯ ಮಾಡುತ್ತದೆ.



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....