Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence


ಬಿರುಕು ಬಿಟ್ಟ ಫ್ಲೋರ್ ಟೈಲ್ ಅನ್ನು ದುರಸ್ತಿ ಮಾಡುವುದು ಹೇಗೆ?

ಅದು ನಿಮ್ಮ ಅಡುಗೆಮನೆ, ಬಾತ್ರೂಮ್, ಅಥವಾ ಟೈಲ್ಸ್ ಹಾಕಿರುವ ಯಾವುದೇ ಇತರ ಪ್ರದೇಶವಿರಲಿ, ಬಿರುಕು ಬಿಟ್ಟ ಫ್ಲೋರ್ ಟೈಲ್ ಸೌಂದರ್ಯ ಕಳೆದುಕೊಳ್ಳುವುದಲ್ಲದೆ ಅದು ಗಾಯವನ್ನು ಉಂಟುಮಾಡುವ ಅಪಾಯವನ್ನೂ ಹೊಂದಿರುತ್ತದೆ. ಈ ಹಂತ-ಹಂತದ ಮಾರ್ಗದರ್ಶಿಯಲ್ಲಿ, ಬಿರುಕು ಬಿಟ್ಟ ಫ್ಲೋರ್ ಟೈಲ್ ಅನ್ನು ಬದಲಿಸುವ ಪ್ರಕ್ರಿಯೆಯಲ್ಲಿ ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ ಮತ್ತು ನಿಮ್ಮ ಜಾಗಕ್ಕೆ ಒಂದು ತಾಜಾ ಮತ್ತು ಹೊಳಪಿನಿಂದ ಕೂಡಿದ ನೋಟವನ್ನು ನೀಡಲು ಸಹಾಯ ಮಾಡುತ್ತೇವೆ.

Share:


• ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸೌಂದರ್ಯಯುತ ಆಕರ್ಷಣೆಯನ್ನು ಕಾಪಾಡಿಕೊಳ್ಳಲು ಬಿರುಕು ಬಿಟ್ಟ ಫ್ಲೋರ್ ಟೈಲ್ಸ್‌ಗಳನ್ನು ದುರಸ್ತಿಗೊಳಿಸುವುದು ಬಹಳ ಮುಖ್ಯ.

 

• ಯಶಸ್ವಿ ದುರಸ್ತಿಗಾಗಿ ಅಂಟು ಪದಾರ್ಥ, ಬದಲಿ ಟೈಲ್ಸ್‌ಗಳು ಮತ್ತು ಸುರಕ್ಷತಾ ದಿರಿಸು ಸೇರಿದಂತೆ ಅಗತ್ಯ ಸಾಧನಗಳನ್ನು ಒಂದೆಡೆ ಸೇರಿಸಿ.

 

• ದುರಸ್ತಿ ಪ್ರಕ್ರಿಯೆಯಲ್ಲಿ ಸುತ್ತಲಿನ ಜಾಗಗಳನ್ನು ಮುಚ್ಚಿ ಸುರಕ್ಷತಾ ದಿರಿಸನ್ನು ತೊಡುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಿ.

 

• ಶುಚಿಗೊಳಿಸುವಿಕೆಯಿಂದ ಹಿಡಿದು ಗ್ರೌಟಿಂಗ್ ವರೆಗೆ ಹಂತ-ಹಂತದ ಪ್ರಕ್ರಿಯೆಯನ್ನು ಅನುಸರಿಸಿ, ಹಾನಿಯನ್ನು ತಡೆಗಟ್ಟಲು ಪ್ರತಿ ಹಂತದಲ್ಲಿ ಜಾಗರೂಕತೆಯಿಂದ ಕೆಲಸ ಮಾಡಿ.

 

• ಕೊನೆಯ ಗ್ರೌಟಿಂಗ್ನೊಂದಿಗೆ ದುರಸ್ತಿ ಕಾರ್ಯವನ್ನು ಮುಕ್ತಾಯಗೊಳಿಸಿ ಮತ್ತು ಬದಲಿ ಟೈಲ್ಗೆ ಸ್ಥಿರತೆ ಮತ್ತು ಅದ್ಭುತ ಫಿನಿಶ್ ಅನ್ನು ನೀಡಿ.

 


ನೀವು ಒಂದು ಹೊಸ ಮನೆಗೇ ಹೋಗುತ್ತಿರಲಿ ಅಥವಾ ಮನೆಯನ್ನು ಪುನರುಜ್ಜೀವನ ಮಾಡುತ್ತಿರಲಿ, ಪೀಠೋಪಕರಣಗಳನ್ನು ಸ್ಥಳಾಂತರ ಮಾಡುವುದರಿಂದ ಉಂಟಾಗುವ ಹಾನಿಯ ಸಾಧ್ಯತೆಗಳು ಹೆಚ್ಚು. ಭಾರವಾದ ಪಾತ್ರೆಯೊಂದು ಕೈಜಾರಿ ಬೀಳುವುದು ಅಥವಾ ನೀವು ಪೈಪ್ ಅನ್ನು ಸರಿಪಡಿಸುವಾಗ ಸಿಂಕ್ ಬೀಳುವುದು ಇಂತಹ ಸಾಂದರ್ಭಿಕವಾಗಿ ಆಗುವ ಮನೆಯಲ್ಲಿನ ಅವಗಡಗಳಿಂದಾಗಿಯೂ ಫ್ಲೋರ್ ಟೈಲ್ಸ್ ಒಡೆಯುವುದು ಅಥವಾ ಬಿರುಕು ಬಿಡುವುದು ಆಗಬಹುದು. ಹೀಗೆ ಚೂಕು ಹಾರಿದ ಅಥವಾ ಬಿರುಕು ಬಿಟ್ಟ ಟೈಲ್ ಸುರಕ್ಷತೆಗೆ ಧಕ್ಕೆತರುವ ಅಪಾಯವನ್ನು ಹೊಂದಿರುತ್ತದೆ ಹಾಗಾಗಿ ಅದನ್ನು ಬೇಗನೆ ಸರಿಪಡಿಸಬೇಕು, ಅದಕ್ಕಾಗಿಯೇ ಬಿರುಕು ಬಿಟ್ಟ ಟೈಲ್ ಅನ್ನು ಸರಿಪಡಿಸುವುದು ಹೇಗೆ ಎಂಬುದನ್ನು ತಿಳಿಯುವುದು ಅತ್ಯಗತ್ಯ.

 

ಟೈಲ್ಸ್‌ಗಳ ಸಂಪೂರ್ಣ ಜೋಡಣೆಯನ್ನು ಬದಲಾಯಿಸದೆಯೇ ಕೇವಲ ಮುರಿದ ಫ್ಲೋರ್ ಟೈಲ್ ಅನ್ನು ಹೇಗೆ ಬದಲಾಯಿಸುವುದು ಎಂಬ ನಿಮ್ಮ ಪ್ರಶ್ನೆಗೆ ಉತ್ತರಿಸಿ ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ಬಿರುಕು ಬಿಟ್ಟ ಫ್ಲೋರ್ ಟೈಲ್ ಅನ್ನು ಸರಿಪಡಿಸಲು ಇರುವ ಈ ಸರಳ ಮತ್ತು ಪ್ರಯೋಜನಕಾರಿ ಮಾರ್ಗದರ್ಶಿ ಅರ್ಥಮಾಡಿಕೊಳ್ಳಲು ಸುಲಭವಾಗಿದೆ ಮತ್ತು ತಜ್ಞರ ಅಗತ್ಯವಿಲ್ಲದೆಯೇ ನೀವು ಅದನ್ನು ಉಪಯೋಗಿಸಿಕೊಳ್ಳಬಹುದು.


ನೀವು ಯಾವ ವಸ್ತುಗಳನ್ನು ಹೊಂದಿರಬೇಕು?



ಮೊಟ್ಟ ಮೊದಲಿಗೆ ಒಂದು ಒಡೆದ ಫ್ಲೋರ್ ಟೈಲ್ ಅನ್ನು ಸರಿಪಡಿಸಲು ನಿಮಗೆ ಯಾವಯಾವ ಸರಿಯಾದ ಸಾಧನಗಳು ಬೇಕೆಬುದರಿಂದ ಪ್ರಾರಂಭಿಸೋಣ:


1. ಸಾಮಗ್ರಿಗಳು

ನಿಮಗೆ ಬೇಕಾಗುವ ಮೊಟ್ಟ ಮೊದಲನೆ ಸಾಮಗರಿ ಅಂಟುವ ಪದಾರ್ಥ. ನಿಮ್ಮ ನಿರ್ದಿಷ್ಟ ಟೈಲ್‌ನ ಪ್ರಕಾರ ಮತ್ತು ನೀವು ಕೆಲಸ ಮಾಡುತ್ತಿರುವ ಮೇಲ್ಮೈಗೆ ಸೂಕ್ತವಾಗುವ ಒಂದು ಉತ್ತಮ ಗುಣಮಟ್ಟದ ಅಂಟು ಪದಾರ್ಥವನ್ನು ಆರಿಸಿಕೊಳ್ಳಿ. ಮತ್ತೊಂದು ಪ್ರಮುಖ ಸಾಮಗ್ರಿಯೆಂದರೆ ಅದು ಹೊಸ ಟೈಲ್. ಮುಂಚಿನ ಒಂದು ಸುಸಂಬದ್ಧ ನೋಟವನ್ನು ಕಾಪಾಡಿಕೊಳ್ಳಲು ಅಸ್ತಿತ್ವದಲ್ಲಿರುವ ಟೈಲ್ಸ್‌ಗಳ ಗಾತ್ರ, ಬಣ್ಣ ಮತ್ತು ವಿನ್ಯಾಸಗಳಲ್ಲಿ ಹೊಂದಿಕೆಯಾಗುವ ಒಂದು ಬದಲಿ ಟೈಲ್ ಅನ್ನು ಆಯ್ಕೆಮಾಡಿ. ಹೊಸ ಟೈಲ್ ಸ್ಥಳದಲ್ಲಿ ಸೇರಿಸಿದ ಮೇಲೆ ಟೈಲ್ಸ್‌ಗಳ ನಡುವಿನ ಜಾಗವನ್ನು ತುಂಬಲು ನಿಮಗೆ ಗ್ರೌಟ್ ಅಗತ್ಯವಿರುತ್ತದೆ. ಒಂದು ಅದ್ಭುತ ಫಿನಿಶ್ ಪಡೆಯಲು ಬಳಸಿದ ಗ್ರೌಟ್ ನ ಬಣ್ಣವು ಅಸ್ತಿತ್ವದಲ್ಲಿರುವ ಗ್ರೌಟ್‌ಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಂತಿಮವಾಗಿ, ಮಾಸ್ಕಿಂಗ್ ಟೇಪ್ ಪಕ್ಕದ ಟೈಲ್ಸ್‌ಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ, ಸರಿಯಾದ ಜೋಡಣೆಗೆ ಮಾರ್ಗದರ್ಶನ ನೀಡುತ್ತದೆ, ಹೆಚ್ಚುವರಿ ಅಂಟು ಪದಾರ್ಥವನ್ನು ನಿಬಾಯಿಸುತ್ತದೆ ಮತ್ತು ಚೊಕ್ಕ ಗ್ರೌಟ್ ಲೈನ್‌ಗಳನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ.

 

2. ಸಲಕರಣೆಗಳು

ಟೈಲ್ಸ್‌ಗಳ ನಡುವಿನ ಹಳೆಯ ಮತ್ತು ಹದಗೆಟ್ಟ ಗ್ರೌಟ್ ಅನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಗ್ರೌಟ್ ರಿಮೂವರ್ ಅನ್ನು ಬಳಸಬಹುದು. ಹೆಚ್ಚುವರಿಯಾಗಿ, ಕಟ್ಟಿಗೆ, ಲೋಹ ಮತ್ತು ಕಲ್ಲುಗಾರೆ ಕಾಮಗಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಕೊರೆಯಲು ಒಂದು ಕಾಂಬಿ ಡ್ರಿಲ್ ಬೇಕಾಗುತ್ತದೆ. ಇವುಗಳ ಜೊತೆಗೆ ಒಂದು ಸುತ್ತಿಗೆ, ಅದರೊಟ್ಟಿಗೆ, ಟೈಲ್ಸ್‌ಗಳು, ಗಾರೆ ಅಥವಾ ಇತರ ವಸ್ತುಗಳನ್ನು ಕಡೆದು ತೆಗೆಯಲು ಉಳಿಗಳು ಬೇಕಾಗುತ್ತವೆ. ಗ್ರೌಟ್ ಸ್ಪ್ರೆಡರ್ ಎನ್ನುವುದು ಟೈಲ್ಗಳ ನಡುವೆ ಗ್ರೌಟ್ ಅನ್ನು ಸಮವಾಗಿ ಲೇಪಿಸಲು ಬಳಸುವ ಸಾಧನವಾಗಿದೆ. ಇದು ಒಂದು ಅಚ್ಚುಕಟ್ಟಾಗಿ ಮತ್ತು ಏಕರೂಪದ ಗ್ರೌಟ್ ಅನ್ವಯವನ್ನು ಸಾಧಿಸಲು ಸಹಾಯ ಮಾಡುವ ಮೂಲಕ ಟೈಲ್‌ಗಳ ನಡುವಿನ ಜಾಗವನ್ನು ಸಮರ್ಪಕವಾಗಿ ತುಂಬಲಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ಮತ್ತೊಂದು ಪ್ರಮುಖ ಸಾಧನವೆಂದರೆ ಟೈಲ್ ಸ್ಪೇಸರ್‌, ಇದು ಟೈಲ್‌ಗಳ ನಡುವೆ ಸ್ಥಿರವಾದ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡಿ ಏಕರೂಪತೆಯನ್ನು ಖಾತ್ರಿಪಡಿಸುತ್ತದೆ ಮತ್ತು ಗ್ರೌಟಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಟ್ರಿಮ್ಮಿಂಗ್ ಚಾಕು, ಇದು ಸಾಮಾನ್ಯವಾಗಿ 2-3 ಇಂಚಿನ ಬ್ಲೇಡ್ ಹೊಂದಿದ್ದು ಬದಲಿ ಬ್ಲೇಡ್‌ಗಳನ್ನು ಹೊಂದಿರುತ್ತದೆ, ಟೈಲ್, ಗ್ರೌಟ್ ಅಥವಾ ಅಂಟು ಪದಾರ್ಥದಂತಹ ವಸ್ತುಗಳನ್ನು ಕತ್ತರಿಸಲು ಮತ್ತು ಅವುಗಳಿಗೆ ರೂಪನೀಡಲು ಉಪಯುಕ್ತವಾಗಿರುತ್ತದೆ. ಉಪಕರಣಗಳನ್ನು ಸ್ವಚ್ಛಗೊಳಿಸಲು, ಮೇಲ್ಮೈಗಳನ್ನು ಒರೆಸಲು ಮತ್ತು ಟೈಲ್ ಸ್ಥಾಪನೆಯ ಸಮಯದಲ್ಲಿ ಹೆಚ್ಚುವರಿ ಗ್ರೌಟ್ ಅಥವಾ ಅಂಟು ಪದಾರ್ಥವನ್ನು ಸ್ವಚ್ಛಗೊಳಿಸಲು ಒಂದು ಬಕೆಟ್ ನೀರು ಮತ್ತು ಸ್ಪಂಜು ಅತ್ಯಗತ್ಯ. ಸ್ಪಂಜು ಸ್ವಚ್ಛಗೊಳಿಸಲು ಒಂದು ನಿಯಂತ್ರಿತ ಮತ್ತು ನಿಖರವಾದ ವಿಧಾನವನ್ನು ಒದಗಿಸುತ್ತದೆ.

 

3. ಸುರಕ್ಷಾ ಉಪಕರಣ

ಯಾವಾಗಲೂ ಅಗತ್ಯ ಬೀಳದಿದ್ದರೂ, ಟೈಲ್ಸ್ ಬದಲಿಸುವ ಸಮಯದಲ್ಲಿ ಕೈಗವಸುಗಳನ್ನು ಧರಿಸುವುದು ನಿಮ್ಮ ಕೈಗಳನ್ನು ಚೂಪಾದ ಟೈಲ್ಸ್ ಅಂಚುಗಳಿಂದ ಮತ್ತು ಬಳಸಲಾಗುವ ವಸ್ತುಗಳಿಂದ ರಕ್ಷಿಸಬಹುದು. ಟೈಲ್ ಬದಲಿಸುವ ಪ್ರಕ್ರಿಯೆಯುದ್ದಕ್ಕೂ ಸುರಕ್ಷತಾ ಕನ್ನಡಕವನ್ನು ಧರಿಸಿ ನಿಮ್ಮ ಕಣ್ಣುಗಳನ್ನು ಧೂಳು, ಕಸ ಮತ್ತು ಚೂಪಾದ ಟೈಲ್ಸ್ ತುಣುಕುಗಳಿಂದ ರಕ್ಷಿಸಿಕೊಳ್ಳಿ. ಬಿರುಕು ಬಿಟ್ಟ ಟೈಲ್ ಅನ್ನು ದುರಸ್ತಿ ಮಾಡುವಾಗ ಧೂಳಿಗಾಗಿ ಮುಖವಾಡವನ್ನು ಬಳಸುವುದು ಒಂದು ಅಮೂಲ್ಯವಾದ ರಕ್ಷಣಾತ್ಮಕ ಪರಿಕರವಾಗಿರುತ್ತದೆ. ಇದು ನಿಮ್ಮ ಶ್ವಾಸ-ಸಂಬಂಧಿ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಲು ಮತ್ತು ಸುರಕ್ಷತಾ ಮಾನದಂಡಗಳ ಅನುಸರಣೆಗೆ ಮತ್ತು ಸ್ವಚ್ಛ ಆರೋಗ್ಯಕರ ಕೆಲಸದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.


ಬಿರುಕು ಬಿಟ್ಟ ಫ್ಲೋರ್ ಟೈಲ್ ಅನ್ನು ಬದಲಾಯಿಸುವ ಪ್ರಕ್ರಿಯೆ



ಮೊಟ್ಟ ಮೊದಲನೆಯದಾಗಿ, ಅಗತ್ಯವಿರುವ ಎಲ್ಲಾ ಸುರಕ್ಷತಾ ಸಾಧನಗಳನ್ನು ನೀವು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಬಿರುಕು ಬಿಟ್ಟ ಫ್ಲೋರ್ ಟೈಲ್ ಅನ್ನು ಹೇಗೆ ದುರಸ್ತಿ ಮಾಡಿಸುವುದು ಎಂಬುದನ್ನು ಈಗ ಚರ್ಚಿಸೋಣ.

 

1. ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಿ

ಒಂದು ಅಸ್ತವ್ಯಸ್ಥ ಜಾಗವು ದುರಸ್ತಿಪಡಿಸುವುದಕ್ಕಿಂತ ಹೆಚ್ಚು ಹಾನಿಯನ್ನು ಉಂಟುಮಾಡಬಹುದು. ನೀವು ಒಂದು ಚೊಕ್ಕ ವ್ಯವಸ್ಥೆಯೊಂದಿಗೆ ಪ್ರಾರಂಭಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೃದುವಾದ ಬಟ್ಟೆಯೊಂದರಿಂದ ಸುತ್ತಮುತ್ತಲಿನ ಜಾಗವನ್ನು ಒಣಗಿಸಿ. ಒಡೆದ/ಬಿರುಕು ಬಿಟ್ಟ ಟೈಲ್ ಅನ್ನು ಸರಿಪಡಿಸುವುದು ಧೂಳು ಜಮೆಗೊಳ್ಳಲು ಕಾರಣವಾಗಬಹುದು ಆದ್ದರಿಂದ ನೀವು ಕೆಲಸವನ್ನು ಪ್ರಾರಂಭಿಸುವ ಮೊದಲು ನೀವು ಒಂದು ಧೂಳಿನ ಶೀಟನ್ನು ಹಾಕಬೇಕಾಗಬಹುದು. ನೀವು ಕೆಲಸ ಮಾಡುವ ಜಾಗದ ಬಳಿ ಮುಚ್ಚಬೇಕಾದ ತೂತುಗಳಿದ್ದರೆ, ಅಂತಹ ಮುಚ್ಚಬೇಕಾದ ತೂತುಗಳನ್ನು ಧೂಳಿನಿಂದ ತುಂಬಿಹೋಗಬಾರದೆಂದು ನೀವು ಬಯಸಬಹುದು ಹಾಗಾಗಿ ಅವುಗಳನ್ನು ಹೊದಿಸಿ ಮುಚ್ಚಿಬಿಡಿ. ಇವು ಬಿರುಕು ಬಿಟ್ಟ ಟೈಲ್ಸ್‌ ಹೇಗೆ ದುರಸ್ತಿಗೊಳಿಸುವುದು ಎಂಬುದರ ಕುರಿತು ಕೆಲವು ಮೂಲಭೂತ ಆರಂಭಿಕ ಕ್ರಮಗಳಾಗಿವೆ.

 

2. ಗ್ರೌಟ್ ತೆಗೆದುಹಾಕಿ

ಬಿರುಕು ಬಿಟ್ಟ ಟೈಲ್‌ನ ಗ್ರೌಟ್ ಅನ್ನು ಸಡಿಲಗೊಳಿಸಲು ಗ್ರೌಟ್ ರಿಮೂವರ್ ಅನ್ನು ಬಳಸಿ. ಟೈಲ್ಸ್‌ಗಳಲ್ಲಿರುವ ಬಿರುಕುಗಳನ್ನು ಹೇಗೆ ಸರಿಪಡಿಸುವುದು ಎಂದು ಯೋಜಿಸುವ ಪ್ರಕ್ರಿಯೆಯಲ್ಲಿ, ನೀವು ಸುತ್ತಮುತ್ತಲಿನ ಟೈಲ್‌ಗಳನ್ನು ಹಾನಿಗೊಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾನಿಗೊಳಗಾದ ಟೈಲ್‌ನ ಮಧ್ಯದಲ್ಲಿ ಮಾಸ್ಕಿಂಗ್ ಟೇಪ್ ಅನ್ನು ಬಳಸಿ ಗುರುತುಹಾಕಿ ಆಮೂಲಕ ನೀವು ಆಕಸ್ಮಿಕವಾಗಿ ಕೈಜಾರಿ ಇನ್ನೊಂದು ಟೈಲ್ ಅನ್ನು ಭಗ್ನಗೊಳಿಸುವುದನ್ನು ತಪ್ಪಿಸಿ.

 

ಗ್ರೌಟ್ ಅನ್ನು ತೆಗೆದುಹಾಕುವುದು ಬಹಳ ಮುಖ್ಯವಾದ ಕಾರ್ಯವಾಗಿದೆ ಏಕೆಂದರೆ ಟೈಲ್‌ಗಳ ನಡುವೆ ಯಾವುದೇ ಗ್ರೌಟ್ ಉಳಿದಿದ್ದರೆ ಅದು ಬಿರುಕುಗಳಿಗೆ ಕಾರಣವಾಗುವ ಸುತ್ತಮುತ್ತಲಿನ ಟೈಲ್‌ಗಳ ಮೇಲೆ ಸಂಕೋಚನವನ್ನು ಉಂಟುಮಾಡಬಹುದು.

 

3. ಟೈಲ್ ಅನ್ನು ಸಡಿಲಗೊಳಿಸಿ

ಬಿರುಕು ಬಿಟ್ಟ ಟೈಲ್ನಲ್ಲಿ ರಂಧ್ರವನ್ನು ಕೊರೆಯಲು ಡ್ರಿಲ್ ಯಂತ್ರವನ್ನು ಬಳಸಿ. ನೀವು ತುಂಬಾ ಕ್ಷಿಪ್ರವಾಗಿ ಕೊರೆಯಲು ಹವಣಿಸಬೇಡಿ ಏಕೆಂದರೆ ನೀವು ಕೆಳಗೆ ಹಾಕಿರುವ ಪೈಪ್‌ಗಳು ಅಥವಾ ಕೇಬಲ್‌ಗಳನ್ನು ಹಾನಿಗೊಳಿಸಬಹುದು. ಒಡೆದ ಟೈಲ್‌ನ ಮಧ್ಯಭಾಗದಲ್ಲಿರುವ ಟೇಪ್‌ನ ಮೂಲಕ ನಿಧಾನಗತಿಯಲ್ಲಿ ಕೊರೆಯಲು ಪ್ರಾರಂಭಿಸಿ.

 

ಒಮ್ಮೆ ರಂಧ್ರವನ್ನು ಮಾಡಿದ ನಂತರ, ನೀವು ಆಳವಾಗಿ ಕೊರೆಯಲು ಕ್ಷಿಪ್ರವಾಗಿ ಮಶೀನು ಚಲಾಯಿಸಿ.

 

4. ಹಾನಿಗೊಳಗಾದ ಟೈಲ್‌ನ ಅವಶೇಷಗಳನ್ನು ಉಳಿಯಿಂದ ಹೊಡೆದು ತೆಗೆಯಿರಿ

ಒಡೆದ ಟೈಲ್ ಅನ್ನು ಹೇಗೆ ತೆಗೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಹಂತವು ನಿಮಗೆ ಸಹಾಯ ಮಾಡುತ್ತದೆ. ಕೊರೆಯುವಾಗ ನೀವು ಕೊರೆದ ರಂಧ್ರಗಳಿಂದ ಟೈಲ್ಸ್ ತುಣುಕುಗಳನ್ನು ತೆಗೆದುಹಾಕಲು ಉಳಿಯನ್ನು ಬಳಸಿ.

 

ತುಂಬಾ ಒರಟಾಗಿ ಮತ್ತು ಅವಸರದಿಂದ ಮಾಡಬೇಡಿ, ಟೈಲ್‌ನ ಮಧ್ಯಭಾಗದಿಂದ ಶುರುಮಾಡಿ ಬದಿಗಳತ್ತ ಚಲಿಸಿ. ತುಣುಕುಗಳು ಪಕ್ಕದ ಟೈಲ್‌ಗಳಿಗೆ ಹಾನಿ ಮಾಡದಂತೆ ಎಚ್ಚರಿಕೆ ವಹಿಸಿ.

 

ಅಂಟು ಪದಾರ್ಥವೇನಾದರು ಉಳಿದಿದ್ದರೆ, ಅದನ್ನು ಟ್ರಿಮ್ಮಿಂಗ್ ಚಾಕುವಿನಿಂದ ತೆಗೆದುಹಾಕಿ.

 

5. ಬದಲಿ ಟೈಲ್ ಅನ್ನು ಜೋಡಿಸಿ

ಚೂಕು ಹಾರಿದ ಟೈಲ್ಗಳನ್ನು ಹೇಗೆ ದುರಸ್ತಿಪಡಿಸುವುದು ಎಂಬ ಪ್ರಕ್ರಿಯೆಯಲ್ಲಿ ಇದು ಅತ್ಯಂತ ನಿರ್ಣಾಯಕ ಹಂತಗಳಲ್ಲಿ ಒಂದಾಗಿದೆ. ಮೊದಲನೆಯದಾಗಿ, ಬದಲಿ ಟೈಲ್ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಅಂಟು ಪದಾರ್ಥವನ್ನು ಬಳಸದೆ ಅದನ್ನು ಸ್ಥಾನದಲ್ಲಿ ಇರಿಸಲು ಪ್ರಯತ್ನಿಸಿ. ಇದು ಉಳಿದ ನೆಲ/ಗೋಡೆಯ ಟೈಲ್‌ಗಳಿಂದ ತುಸು ಹೊರಕ್ಕೆ ಚಾಚಿಕೊಂಡಿದ್ದರೆ, ಹೊಸ ಟೈಲ್‌ ಅನ್ನು ಅಲ್ಲಿ ಅಳವಡಿಸುವ ಮೊದಲು ನೀವು ಹೆಚ್ಚುವರಿ ಅಂಟು ಪದಾರ್ಥವನ್ನು ತೆಗೆದುಹಾಕಬೇಕಾಗಬಹುದು.

 

ಒಮ್ಮೆ ನೀವು ಸೆಟ್ಟಿಂಗ್‌ನೊಂದಿಗೆ ತೃಪ್ತರಾಗಿದ್ದರೆ ಗ್ರೌಟ್ ಸ್ಪ್ರೆಡರ್ ಅನ್ನು ಬಳಸಿಕೊಂಡು ನಿಮ್ಮ ಬದಲಿ ಟೈಲ್‌ನ ಹಿಂಭಾಗಕ್ಕೆ ಅಂಟು ಪದಾರ್ಥವನ್ನು ಲೇಪಿಸಿ ಮತ್ತು ಹೊಸ ಟೈಲ್ ಅನ್ನು ದೃಢವಾಗಿ ಇರಿಸಿ ಅದು ನಿಮ್ಮ ಉಳಿದ ನೆಲ/ಗೋಡೆಯೊಂದಿಗೆ ಸೂಕ್ತವಾಗಿ ಕುಳಿತುಕೊಳ್ಳುತ್ತದೆ.

 

6. ಹೊಸ ಟೈಲ್ ಅನ್ನು ಭದ್ರಗೊಳಿಸಿ

ಒಡೆದ ಫ್ಲೋರ್ ಟೈಲ್ ಅನ್ನು ದುರಸ್ತಿಪಡಿಸುವ ಮತ್ತು ಹೊಸ ಟೈಲ್ ಅನ್ನು ಅಳವಡಿಸುವ ಎಂಬ ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ವಿಯಾದರೆ, ನಟರ ಅದನ್ನು ಸುಭದ್ರವಾಗಿರಿಸಲು ನೀವು ಆ ಟೈಲ್‌ಗೆ ಗ್ರೌಟ್ ಮಾಡಬೇಕಾಗುತ್ತದೆ. ಇದನ್ನು ಮಾಡಲು, ಮೊದಲಿಗೆ, ಗ್ರೌಟ್ಗೆ ಹೊಂದಿಕೊಳ್ಳಲು ಜಾಗವನ್ನು ಕಲ್ಪಿಸಲು ಟೈಲ್ ಸ್ಪೇಸರ್ಗಳನ್ನು ಅಳವಡಿಸಿ ಮತ್ತು ಅಂಟು ಪದಾರ್ಥ ಒಣಗುವ ಮೊದಲು ಟೈಲ್ ಜಾರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

 

ಒಂದು ದಿನದ ತರುವಾತ, ನೀವು ಸ್ಪೇಸರ್ಗಳನ್ನು ತೆಗೆದುಹಾಕಬಹುದು ಮತ್ತು ಬದಲಿ ಟೈಲ್‌ನ ಸುತ್ತಲೂ ಹೊಸ ಗ್ರೌಟ್ ಅನ್ನು ಸೇರಿಸಬಹುದು.





ಫ್ಲೋರ್ ಟೈಲ್ಸ್ ಬಿರುಕು ದುರಸ್ತಿಪಡಿಸುವಿಕೆ ಮತ್ತು ಎತ್ತುವಿಕೆಯ ಕುರಿತ ಈ ಉಪಯುಕ್ತ ಹಂತ-ಹಂತದ ಕ್ರಮಾವಳಿಯು ಅಗತ್ಯ ಸಮಯದಲ್ಲಿ ನಿಮ್ಮ ಅನುಕೂಲಕಕ್ಕೆ ಬರಬಹುದು. ನೀವು ಈಗ ಉಪಕರಣಗಳು, ಸುರಕ್ಷಾ ದಿರಿಸು ಮತ್ತು ಬಿರುಕುಗೊಂಡ ಫ್ಲೋರ್ ಟೈಲ್ ಅನ್ನು ದುರಸ್ತಿಪಡಿಸುವ ಪ್ರಕ್ರಿಯೆಯ ಬಗ್ಗೆ ತಿಳಿದಿರುತ್ತೀರಿ. ಬಿರುಕುಗೊಂಡ ಫ್ಲೋರ್ ಟೈಲ್ ಅನ್ನು ಹೇಗೆ ಸರಿಪಡಿಸುವುದು ಎಂಬುದರ ಕುರಿತು ಈ ವ್ಯಾಪಕವಾದ ಮಾರ್ಗದರ್ಶಿಯೊಂದಿಗೆ, ಬಿರುಕುಗೊಂಡ ಟೈಲ್ ಅನ್ನು ಬದಲಿಸುವ ಮತ್ತು ನಿಮ್ಮ ಟೈಲ್ಸ್‌ಗಳ ಮೇಲ್ಮೈಗಳ ನೋಟವನ್ನು ಮರುಸ್ಥಾಪಿಸುವ ಕಾರ್ಯವನ್ನು ನಿಭಾಯಿಸಲು ನೀವು ಸುಸಜ್ಜಿತರಾಗಿರುತ್ತೀರಿ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....