ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj


ಕೊಳವೆಬಾವಿ ಎಂದರೆ ಏನು? ಕೊಳವೆಬಾವಿಯ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳನ್ನು ಸರಿಪಡಿಸುವುದು ಹೇಗೆ

ಕೊಳವೆಬಾವಿಯೊಂದಿಗೆ ನೀವು ಎದುರಿಸಬಹುದಾದ ಸಾಮಾನ್ಯ ಸಮಸ್ಯೆಗಳನ್ನು ಕಂಡುಕೊಳ್ಳಿರಿ ಮತ್ತು ಕೊಳವೆಬಾವಿ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಂಪೂರ್ಣ ಕೈಪಿಡಿಯಲ್ಲಿ ಅವುಗಳನ್ನು ಸರಿಪಡಿಸುವ ತಂತ್ರಗಳನ್ನು ಕಲಿಯಿರಿ.

Share:


ಬಹಳಷ್ಟು ಮನೆ, ಕೃಷಿ ಭೂಮಿ ಮತ್ತು ಕೈಗಾರಿಕೆಗಳಿಗೆ ಕೊಳವೆಬಾವಿಗಳು ನೀರಿನ ಅಗತ್ಯ ಮೂಲವಾಗಿವೆ. ಕೊರೆಯುವ ತಂತ್ರಜ್ಞಾನವನ್ನು ಬಳಸಿಕೊಂಡು ಭೂಮಿಯ ಆಳದಲ್ಲಿರುವ ನೀರಿನ್ನು ಹೊರತೆಗೆದು, ಖಚಿತವಾದ ನೀರು ಸರಬರಾಜು ಪಡೆಯಲಾಗುತ್ತದೆ. ಆದರೂ, ಉಳಿದ ಇತರೆ ವ್ಯವಸ್ಥೆಗಳಂತೆ, ಕೊಳವೆಬಾವಿಗಳ ಕಾರ್ಯನಿರ್ವಹಣೆ ಹಾಗೂ ನೀರು ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಎದುರಾಗಬಹುದು. ಅದಕ್ಕಾಗಿ ಈ ಸಮಗ್ರ ಕೈಪಿಡಿಯಲ್ಲಿ, ನಾವು ಕೊಳೆಬಾವಿಯ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳನ್ನು ಸೂಕ್ತವಾಗಿ ರಿಪೇರಿ ಮಾಡುವ ಪರಿಹಾರಗಳನ್ನು ಒದಗಿಸುತತ್ತೇವೆ, ಮತ್ತು ನಿರಂತರವಾಗಿ ನೀರು ಸರಬರಾಜು ಆಗುವ ಖಾತ್ರಿಯನ್ನು ಕೊಡುತ್ತೇವೆ.



ಕೊಳವೆಬಾವಿ ಎಂದರೆ ಏನು?

ಭೂಮಿಯ ಆಳದಲ್ಲಿರುವ ನೀರನ್ನು ಮೇಲಕ್ಕೆತ್ತಲು ಕೊರೆಯಲಾಗಿರುವ ಅಗಲಕಿರಿದಾದ ಬಾವಿಯೇ ಕೊಳವೆಬಾವಿಯಾಗಿದೆ. ಆಳವಾಗಿ ಕೊರೆಯಲಾಗಿರುವ ಕೊಳವೆಬಾವಿಯು ಕುಸಿಯದಂತೆ ತಡೆಯಲು ಸಾಮಾನ್ಯವಾಗಿ ಕೇಸಿಂಗ್ ಪೈಪ್​ ಅನ್ನು ಒಳಗೊಂಡಿರುತ್ತದೆ, ಜೊತೆಗೆ ನೀರನ್ನು ಮೇಲಕ್ಕೆತ್ತುವ ಸಬ್​ಮರ್ಸಿಬಲ್ ಪಂಪ್ ಅನ್ನು ಕೊಳವೆಬಾವಿ ಒಳಗೊಂಡಿರುತ್ತದೆ. ನೀರಿನ ಉತ್ಪತ್ತಿ ಮತ್ತು ಸ್ಥಳದ ಮೇಲೆ ಕೊಳವೆಬಾವಿಯ ಆಳವು ಅವಲಂಬಿತವಾಗಿರುತ್ತದೆ.


ಕೊಳವೆಬಾವಿಯ ಪ್ರಾಮುಖ್ಯತೆ

ನೀರಿನ ಮೂಲ ಕಡಿಮೆಯಾಗಿರುವ ಹಾಗೂ ಕಡಿಮೆಯಾಗಿರುವ ಭೂಮಿಯ ಪ್ರದೇಶಗಳಲ್ಲಿ ನೀರಿನ ಅಗತ್ಯ ಪೂರೈಸಲು ಕೊಳವೆಬಾವಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅವು ಸಾಮಾನ್ಯವಾಗಿ 100 ರಿಂದ 2000 ಅಡಿಗಳಷ್ಟು ಆಳವಾಗಿರುತ್ತವೆ, ಭೂಗರ್ಭದಲ್ಲಿನ ನೀರಿನ ಸಲೆಗಳನ್ನು ಹೊಂದಿರುತ್ತವೆ. ವಾಣಿಜ್ಯ, ಕೈಗಾರಿಕಾ ಮತ್ತು ಮನೆಗಳಿಗೆ ನೀರಿನ ಅವಶ್ಯಕತೆಗಳನ್ನು ಪೂರೈಸಲು ಕೊಳವೆಬಾವಿಗಳು ಮಹತ್ವದ್ದಾಗಿವೆ. ಅವು ದೇಶೀಯ ಬಳಕೆ, ನೀರಾವರಿ ಮತ್ತು ವಿವಿಧ ಕೈಗಾರಿಕೆಗಳಿಗೆ ನಂಬುಗೆಯ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಕೊಳವೆಬಾವಿಗಳು ವಿಶೇಷವಾಗಿ ಸಾಕಷ್ಟು ಹಾಗೂ ನಿಯಮಿತವಾಗಿ ಮಳೆ ಬೀಳದ ಪ್ರದೇಶಗಳಲ್ಲಿ ಎದುರಾಗುವ ನೀರಿನ ಕೊರತೆಗೆ ಸಮರ್ಥವಾದ ಪರಿಹಾರವನ್ನು ಒದಗಿಸುತ್ತವೆ.


ಕೊಳವೆಬಾವಿಯ ಸಾಮಾನ್ಯ ಸಮಸ್ಯೆಗಳು



ನೀರಿನ ಉತ್ಪತ್ತಿ ಹಾಗೂ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುವಂತಹ ಹಲವಾರು ಸಮಸ್ಯೆಗಳನ್ನು ಕೊಳವೆಬಾವಿಗಳು ಎದುರಿಸಬಹುದು. ಇಲ್ಲಿ ಅಂತಹ ಕೆಲವು ಸಾಮಾನ್ಯ ಸಮಸ್ಯೆಗಳನ್ನು ನೋಡೋಣ:

 

1. ಜಲ ಸಂಪನ್ಮೂಲದ ಸ್ಥಿತಿ:

ಕಾಲಕಳೆದಂತೆ ಅಂತರ್ಜಲದ ಗುಣಮಟ್ಟ ಹಾಗೂ ಪ್ರಮಾಣವು  ಬದಲಾಗಬಹುದು. ಜಲಕ್ಷಾಮ, ಪರಿಸರ ಮಾಲಿನ್ಯ ಅಥವಾ ಜಲಚರಗಳ ಸವೆತವು ಕೊಳವೆಬಾವಿಯ ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನೀರಿನ ಸಂಪನ್ಮೂಲವನ್ನು ಸರಿಯಾಗಿ ನಿರ್ವಹಿಸುವ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆ ಮೂಲಕ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ನಾವು ತೆಗೆದುಕೊಳ್ಳುವುದು ಅಗತ್ಯವಾಗಿದೆ .

 

2. ನೀರಿನ ಉತ್ಪತ್ತಿಯಲ್ಲಿ ಕೊರತೆ:

ಕೊಳವೆಬಾವಿಗಳು ಕೆಲವೊಂದು ಸಲ ಸಾಕಷ್ಟು ಪ್ರಮಾಣದ ನೀರನ್ನು ಒದಗಿಸುವುದಿಲ್ಲ. ನೀರಿನ ಸೆಲೆಯು ಕಡಿಮೆಯಾಗುವುದು, ಸೆಲೆಯ ರಂದ್ರಗಳು ಮುಚ್ಚಿಹೋಗುವುದು ಅಥವಾ ಅಂತರ್ಜಲದ ಮರುಪೂರಣದ ಕೊರತೆಯಿಂದ ಇದು ಉಂಟಾಗಬಹುದು. ನೀರು ಉತ್ಪತ್ತಿ ಪರೀಕ್ಷೆಯನ್ನು ನಡೆಸುವುದರಿಂದ ಕೊಳವೆಬಾವಿಯ ನೀರಿನ ಉತ್ಪಾದನೆ ನಿರ್ಧರಿಸಲು ಮತ್ತು ಕಡಿಮೆ ನೀರಿನ ಉತ್ಪಾದನೆಗೆ ಇರುವ ಸಂಭಾವ್ಯ ಕಾರಣಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

 

3. ಕೊಳವೆಬಾವಿಯ ಭೌತಿಕ ಸ್ಥಿತಿಗತಿ:

ಕಾಲ ಕಳೆದಂತೆ ಕೊಳವೆಬಾವಿಗಳ ಕೇಸಿಂಗ್​ ಪೈಪ್​ ಹಾಳಾಗಬಹುದು, ಇದು ಬಾವಿಯ ಸ್ಟ್ರಕ್ಚರ್​ ಹಾನಿಗೂ ಕಾರಣವಾಗುತ್ತದೆ. ಕೇಸಿಂಗ್​ ಪೈಪ್ ಮೇಲಿನ​ ಬಿರುಕುಗಳು, ಸೋರಿಕೆ ಅಥವಾ ತುಕ್ಕು ಹಿಡಿಯುವುದು , ಕಲ್ಮಶವು ಬಾವಿಗೆ ಇಳಿಯಲು ಅವಕಾಶ ಮಾಡಿಕೊಡುತ್ತದೆ. ಮತ್ತು ಇದು ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕೊಳವೆಬಾವಿಯ ಕೇಸಿಂಗ್‌ ಪೈಪ್​ನ ನಿಯಮಿತ ತಪಾಸಣೆ ಮತ್ತು ನಿರ್ವಹಣೆಯು ಹೀಗೆ ಆಗಬಹುದಾದ ಯಾವುದೇ ಹಾನಿಯನ್ನು ಮೊದಲೇ ಗುರುತಿಸಲು ಮತ್ತು ಮತ್ತಷ್ಟು ಹಾಳಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

 

4. ಕೊಳವೆಬಾವಿ ಪಂಪಿಂಗ್ ಸಲಕರಣೆಗಳ ಸ್ಥಿತಿಗತಿ:

ಕೊಳವೆಬಾವಿಯಲ್ಲಿ ಬಳಸುವ ಸಬ್‌ಮರ್ಸಿಬಲ್ ಪಂಪ್‌ಗಳು ಮೋಟಾರ್ ಹಾಳಾಗುವುದು, ಬ್ಲಾಕ್ ಆಗುವುದು ಅಥವಾ ಇಂಪೆಲ್ಲರ್‌ಗಳಿಗೆ ಹಾನಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತವೆ. ಈ ಸಮಸ್ಯೆಗಳಿಂದ ನೀರಿನ ಹರಿವು ಕಡಿಮೆಯಾಗಬಹುದು ಅಥವಾ ನೀರೆತ್ತುವ ಪಂಪ್ ಸಂಪೂರ್ಣವಾಗಿ ಹಾಳಾಗಲು ಕಾರಣವಾಗಬಹುದು. ನೀರನ್ನು ಪಂಪ್​ ಮಾಡುವ ಉಪಕರಣಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡುವುದು, ಅಂದರೆ ಸ್ವಚ್ಛಗೊಳಿಸುವುದು ಅಥವಾ ಸವೆದಿರುವ ಭಾಗಗಳನ್ನು ಬದಲಾಯಿಸುವುದೂ ಸೇರಿದಂತೆ, ಉತ್ತಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.


ಕೊಳವೆಬಾವಿಗಳ ಸಮಸ್ಯೆಗಳನ್ನು ಸರಿಪಡಿಸಲು ಉತ್ತಮ ಪರಿಹಾರಗಳು



ಕೊಳವೆಬಾವಿಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸಲು, ಹಲವಾರು ಪರಿಹಾರಗಳನ್ನು ಕೈಗೊಳ್ಳಬಹುದು:

 

1. ಪಂಪ್ ಅನ್ನು ಬದಲಾಯಿಸುವುದು ಅಥವಾ ರಿಪೇರಿ ಮಾಡುವುದು:

ಸಬ್​​ಮರ್ಸಿಬಲ್ ಪಂಪ್  ಹಾಳಾದಲ್ಲಿ ಅಥವಾ ಅದಕ್ಕೆ ಹಾನಿಯಾದ ಸಂದರ್ಭದಲ್ಲಿ ಅದನ್ನು ಬದಲಾಯಿಸುವುದು ಅಥವಾ ರಿಪೇರಿ ಮಾಡುವುದು ಅತ್ಯಗತ್ಯವಾಗುತ್ತದೆ. ಈ ಸಮಸ್ಯೆಯನ್ನು ವೃತ್ತಿಪರ ತಂತ್ರಜ್ಞರು ಕಂಡುಹಿಡಿಯುತ್ತಾರೆ ಮತ್ತು ಅತ್ಯುತ್ತಮ ಪರಿಹಾರ ಸೂಚಿಸುತ್ತಾರೆ. ಇದರೊಂದಿಗೆ ಆಗಾಗ ಕೊಳವೆಬಾವಿಯ ಫಿಲ್ಟರ್‌ಗಳನ್ನು ಸ್ವಚ್ಛಗೊಳಿಸುವುದು ಮತ್ತು  ಬ್ಲಾಕ್ ಆಗಿರುವುದನ್ನು ನೋಡುವ ಮೂಲಕ ಪಂಪ್‌ನ ಆಗಾಗ ಗಮನಿಸಿ ನಿರ್ವಹಣೆ ಮಾಡುವುದು ಪಂಪ್ ಹಾಳಾಗದಂತೆ ತಡೆಯಲು ಸಹಾಯ ಮಾಡುತ್ತದೆ.

 

2. ಕೊಳವೆಬಾವಿ ರಂದ್ರವನ್ನು ಮರು ಅಭಿವೃದ್ಧಿಪಡಿಸುವುದು ಮತ್ತು ಸ್ವಚ್ಛಗೊಳಿಸುವುದು:

ಕೊಳವೆಬಾವಿಯ ಬೋರ್​ಹೋಲ್​ ಕಾಲಕಳೆದಂತೆ ಕೆಸರು, ಖನಿಜ ನಿಕ್ಷೇಪಗಳು ತುಂಬಿಕೊಳ್ಳುವುದರಿಂದ ಅಥವಾ ಜೈವಿಕ ಬೆಳವಣಿಗೆಯಿಂದಾಗಿ ನೀರಿನ ಉತ್ಪತ್ತಿಯನ್ನು ಕಡಿಮೆ ಮಾಡುತ್ತವೆ. ಕೊಳವೆಬಾವಿಯನ್ನು  ಮರುಅಭಿವೃದ್ಧಿಪಡಿಸುವುದು ನೀರಿನ ಹರಿವನ್ನು ಪುನಃಸ್ಥಾಪಿಸಲು ಈ ನಿಕ್ಷೇಪಗಳನ್ನು ಸ್ವಚ್ಛಗೊಳಿಸುವುದು ಮತ್ತು ಹೊರಹಾಕುವುದನ್ನು ಒಳಗೊಂಡಿರುತ್ತದೆ. ವೃತ್ತಿಪರ ಬೋರ್‌ವೆಲ್ ಸೇವಾ ಪೂರೈಕೆದಾರರು ಬೋರ್​ಹೋಲ್​​ ಅನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಜೆಟ್ಟಿಂಗ್, ಸರ್ಜಿಂಗ್ ಅಥವಾ ಏರ್‌ಲಿಫ್ಟಿಂಗ್‌ನಂತಹ ತಂತ್ರಗಳನ್ನು ಬಳಸಬಹುದು.

 

3. ಪಂಪಿಂಗ್ ರೇಟ್ ಕಡಿಮೆ ಮಾಡುವುದು:

ಕೊಳವೆಬಾವಿ ಸಾಕಷ್ಟು ನೀರನ್ನು ನೀಡದಿದ್ದರೆ, ಪಂಪಿಂಗ್ ರೇಟ್​ ಅನ್ನು ಕಡಿಮೆ ಮಾಡುವ ಮೂಲಕ ನೀರಿನ ಪೂರೈಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ತಂತ್ರವು ಆಳದಲ್ಲಿನ ಜಲಚರವನ್ನು ಸಮರ್ಪಕವಾಗಿ ಮರುಪೂರಣ ಮಾಡಲು ಸಹಾಯಮಾಡುತ್ತದೆ ಮತ್ತು ಸಮರ್ಪಕವಾದ ಪರಿಹಾರವನ್ನು ಕೊಡುತ್ತದೆ. ನಿಮ್ಮ ಕೊಳವೆಬಾವಿಗೆ ಸೂಕ್ತವಾದ ಪಂಪಿಂಗ್ ದರವನ್ನು ನಿರ್ಧರಿಸಲು ಜಲವಿಜ್ಞಾನಿ ಅಥವಾ ಕೊಳವೆಬಾವಿ ತಜ್ಞರನ್ನು ಸಂಪರ್ಕಿಸಿ.

 

ಸಣ್ಣ ಕೊಳವೆಬಾವಿ ಯಂತ್ರಗಳನ್ನು ಅಳವಸುವುದು, ಕೊಳವೆಬಾವಿಯ ನೀರಿನ ಪಂಪ್‌ಗಳನ್ನು ಆಗಾಗ ನಿರ್ವಹಣೆ ಮಡುವುದು, ನಿರ್ವಹಣೆ ಮತ್ತು ಅಡೆತಡೆಗಳನ್ನು ತಡೆಗಟ್ಟಲು ಮತ್ತು ನೀರಿನ ಗುಣಮಟ್ಟವನ್ನು ಹೆಚ್ಚಿಸಲು ಬೋರ್‌ವೆಲ್ ಫಿಲ್ಟರ್‌ಗಳನ್ನು ಅಳವಡಿಸುವುದು ಸೇರಿದಂತೆ ಈ ಪರಿಹಾರಗಳನ್ನು ಕಾರ್ಯಗತಗೊಳಿಸುವ ಮೂಲಕ, ನಿಮ್ಮ ಕೊಳವೆಬಾವಿ ವ್ಯವಸ್ಥೆಯ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಹೊಂದಬಹುದು.



ಕೊಳವೆಬಾವಿಗಳು ನಂಬಿಕೆಯ ಮತ್ತು ಸ್ಥಿರವಾದ ನೀರಿನ ಪೂರೈಕೆಯನ್ನು ಒದಗಿಸುತ್ತವೆಯಾದರೂ, ಅವುಗಳಿಗೆ ಹಲವು ಸಾಮಾನ್ಯ ಸಮಸ್ಯೆಗಳನ್ನು ಎದುರಿಸಬಹುದು. ಕೊಳವೆಬಾವಿ ಸಮಸ್ಯೆಗಳು ಮತ್ತು ಪರಿಹಾರಗಳ ಸೂಕ್ಷ್ಮ ಪರಿಜ್ಞಾನದೊಂದಿಗೆ, ಕೊಳವೆಬಾವಿಗಳನ್ನು ಸರಿಯಾಗಿ ನಿರ್ವಹಣೆ ಮಾಡಬಹುದು ಎಂದು ಈಗ ನೀವು ಖಚಿತಪಡಿಸಿಕೊಳ್ಳಬಹುದು. ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವಾಗ ವೃತ್ತಿಪರರನ್ನು ಸಂಪರ್ಕಿಸುವುದು ಅಗತ್ಯವಾಗಿದೆ. ಮತ್ತು ನಿಮ್ಮ ಕೊಳವೆಬಾವಿ ವ್ಯವಸ್ಥೆಯ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದೀರ್ಘಾಯುಷ್ಯ ಪಡೆಯಲು ಮುಂಜಾಗ್ರತೆ ವಹಿಸುವುದು ಅಗತ್ಯ.



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....