ಅಲ್ಟ್ರಾಟೆಕ್ ಸಿಮೆಂಟ್ ಸಮಗ್ರ 360°ಬಿಲ್ಡಿಂಗ್ ಸಾಮಗ್ರಿಗಳ ಡೆಸ್ಟಿನೇಶನ್ ಆಗಿದ್ದು, ಗ್ರೇ ಸಿಮೆಂಟ್, ವೈಟ್ ಸಿಮೆಂಟ್, ಕಟ್ಟಡ ಉತ್ಪನ್ನಗಳು, ಕಟ್ಟಡ ಸೌಲಭ್ಯಗಳು ಸೇರಿದಂತೆ ವಿವಿಧ ಉತ್ಪನ್ನಗಳು ಮತ್ತು ವಿವಿಧ ಅಗತ್ಯಗಳು ಮತ್ತು ಅಪ್ಲಿಕೇಶನ್‌ಗಳಿಗೆ ಪೂರಕವಾದ ರೆಡಿ ಮಿಕ್ಸ್ ಕಾಂಕ್ರೀಟ್‌ಗಳ ಸೌಲಭ್ಯವನ್ನು ಇದು ಹೊಂದಿದೆ.
100+ ರೆಡಿ ಮಿಕ್ಸ್ ಕಾಂಕ್ರೀಟ್ (ಆರ್‌ಎಂಸಿ) ಘಟಕಗಳು 35 ನಗರಗಳಲ್ಲಿದ್ದು, ಭಾರತದಲ್ಲಿ ಕಾಂಕ್ರೀಟ್‌ನಲ್ಲಿ ಅತಿದೊಡ್ಡ ಉತ್ಪಾದಕ ಅಲ್ಟ್ರಾಟೆಕ್ ಆಗಿದೆ. ವಿಶೇಷ ಗ್ರಾಹಕರ ನಿರ್ದಿಷ್ಟ ಅಗತ್ಯವನ್ನು ಪೂರೈಸಲು ಕೆಲವು ಸ್ಪೆಷಾಲಿಟಿ ಕಾಂಕ್ರೀಟ್‌ಗಳನ್ನೂ ಇದು ಹೊಂದಿದೆ.
ಅಲ್ಟ್ರಾಟೆಕ್‌ನ ಉತ್ಪನ್ನಗಳು ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್, ಪೋರ್ಟ್‌ಲ್ಯಾಂಡ್ ಪೊಜೊಲಾನಾ ಸಿಮೆಂಟ್ ಮತ್ತು ಪೋರ್ಟ್‌ಲ್ಯಾಂಡ್ ಬ್ಲಾಸ್ಟ್ ಫರ್ನೇಸ್ ಸ್ಲ್ಯಾಗ್ ಸಿಮೆಂಟ್ ಅನ್ನು ಒಳಗೊಂಡಿದೆ.
ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್ ಅತ್ಯಂತ ಸಾಮಾನ್ಯವಾಗಿ ಬಳಸಿದ ವಿಶಾಲ ಶ್ರೇಣಿಯ ಅಪ್ಲಿಕೇಶನ್‌ಗಳಿಗಾಗಿದೆ. ಈ ಅಪ್ಲಿಕೇಶನ್‌ಗಳು ಸಾಮಾನ್ಯ, ಪ್ರಮಾಣಿತ, ಅಧಿಕ ಸಾಮರ್ಥ್ಯದ ಕಾಂಕ್ರೀಟ್‌ಗಳು, ಮಸಾನರಿ ಮತ್ತು ಪ್ಲಾಸ್ಟರಿಂಗ್ ವರ್ಕ್‌ಗಳು, ಪ್ರೀಕಾಸ್ಟ್ ಕಾಂಕ್ರೀಟ್ ಉತ್ಪನ್ನಗಳನ್ನು ಒಳಗೊಂಡಿದೆ. ಉದಾ., ಬ್ಲಾಕ್‌ಗಳು, ಪೈಪ್‌ಗಳು ಇತ್ಯಾದಿ. ಪ್ರೀಕಾಸ್ಟ್ ಮತ್ತು ಪ್ರೀ ಸ್ಟ್ರೆಸ್ಟಡ್ ಕಾಂಕ್ರೀಟ್‌ನಂತಹ ವಿಶೇಷ ಕೆಲಸವನ್ನೂ ಇದು ಒಳಗೊಂಡಿದೆ.
ಪೋರ್ಟ್‌ಲ್ಯಾಂಡ್ ಪೊಜೊಲಾನಾ ಸಿಮೆಂಟ್ ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್ ಆಗಿದ್ದು, ಫ್ಲೈ ಆಶ್, ಕಾಲ್ಸಿನ್ಡ್ ಕ್ಲೇ, ರೈಸ್ ಹಸ್ಕ್ ಆಶ್ ಇತ್ಯಾದಿಯಂತಹ ಪೊಜೊಲಾನಿಕ್ ಸಾಮಗ್ರಿಗಳೊಂದಿಗೆ ಬ್ಲೆಂಡ್ ಅಥವಾ ಇಂಟರ್‌ಗ್ರೌಂಡ್ ಮಾಡಲಾಗಿರುತ್ತದೆ.
ಪೋರ್ಟ್‌ಲ್ಯಾಂಡ್ ಪೊಜೊಲಾನಾ ಸಿಮೆಂಟ್ ಅನ್ನು ಉತ್ಪಾದಿಸಲು ಜಿಪ್ಸಮ್ ಮತ್ತು ಪೊಜೊಲಾನಿಕ್ ಸಾಮಗ್ರಿಗಳ ನಿರ್ದಿಷ್ಟ ಪ್ರಮಾಣವನ್ನು ಇಂಟರ್‌ಗ್ರೌಂಡ್ ಮಾಡಲಾಗಿರುವ ಅಥವಾ ಇಂಟಿಮೇಟ್ ಆಗಿ ಬ್ಲೆಂಡ್ ಮಾಡಿರುವುದೇ ಪೋರ್ಟ್‌ಲ್ಯಾಂಡ್ ಸಿಮೆಂಟ್ ಕ್ಲಿಂಕರ್ ಆಗಿದೆ. ಪೊಜೊಲಾನಾಸ್‌ನಲ್ಲಿ ಸಿಮೆಂಟ್ ಆಗುವ ಗುಣ ಇರುವುದಿಲ್ಲ. ಆದರೆ, ಸಾಮಾನ್ಯ ತಾಪಮಾನದಲ್ಲಿರುವ ತೇವಾಂಶದಲ್ಲಿನ ಕ್ಯಾಲ್ಶಿಯಂ ಹೈಡ್ರಾಕ್ಸೈಡ್ ಬಳಸಿಕೊಂಡು ಸಿಮೆಂಟ್ ಆಗುವ ಗುಣಗಳನ್ನು ಇದು ಗಳಿಸುತ್ತದೆ. ಪೋರ್ಟ್‌ಲ್ಯಾಂಡ್ ಪೊಜೊಲಾನಾ ಸಿಮೆಂಟ್ ಬಳಸಿ ತಯಾರಿಸಿದ ಕಾಂಕ್ರೀಟ್ ಅತ್ಯಧಿಕ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಚ್ಚು ಬಾಳಿಎಕ ಹೊಂದಿರುತ್ತದೆ ಮತ್ತು ತೇವಾಂಶದಿಂದ ಉಂಟಾಗುವ ಬಿರುಕು, ಥರ್ಮಲ್ ಬಿರುಕನ್ನು ತಡೆಯುತ್ತದೆ ಮತ್ತು ಕಾಂಕ್ರೀಟ್ ಮತ್ತು ಮಾರ್ಟರ್‌ನಲ್ಲಿ ಅತ್ಯಧಿಕ ಪ್ರಮಾಣದ ಕೊಹೆಶನ್ ಮತ್ತು ಕಾರ್ಯಾಚರಣೆಯನ್ನು ಹೊಂದಿದೆ.
ತಮ್ಮ ಕನಸಿನ ಮನೆಯನ್ನು ನಿರ್ಮಿಸುವುದಕ್ಕೂ ಮೊದಲು, ಪರಿಣಿತಿ ಮತ್ತು ಪರಿಪೂರ್ಣತೆ ನಿರೀಕ್ಷೆಯನ್ನು ಹೊಂದಿರುವ ಪ್ರತಿ ಬಿಲ್ಡರ್‌ನ ಪ್ರಜ್ಞಾಪೂರ್ವಕ ಆಯ್ಕೆ ಅಲ್ಟ್ರಾಟೆಕ್ ಆಗಿರುತ್ತದೆ. ಅಲ್ಟ್ರಾಟೆಕ್ ಪ್ರೀಮಿಯಂ ಎಂಬುದು ಅಲ್ಟ್ರಾಟೆಕ್ ಹೌಸ್‌ನಿಂದ ಒದಗಿಸಲಾಗುತ್ತಿರುವ ಇತ್ತೀಚಿನ ಕ್ರಾಂತಿಕಾರಕ ಉತ್ಪನ್ನವಾಗಿದೆ. ಅಧಿಕ ಪ್ರತಿಕ್ರಿಯಾತ್ಮಕ ಸಿಲಿಕಾ ಮತ್ತು ಸ್ಲ್ಯಾಗ್‌ನ ಸೂಕ್ತ ಮಿಶ್ರಣ ಹೊಂದಿರುವ ಇದು ನಿಮ್ಮ ಮನೆಗೆ ಬಾಳಿಕೆ, ಸಾಮರ್ಥ್ಯ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಕಠಿಣ ಪರಿಸರ ಹಾಗೂ ಸವಕಳಿಯಿಂದ ಬಿರುಕುಗಳ ಶ್ರಿಂಕೇಜ್‌ವರೆಗೆ ಅಲ್ಟ್ರಾಟೆಕ್ ಪ್ರೀಮಿಯಂ ಎಲ್ಲವಕ್ಕೂ ಸೂಕ್ತ ಉತ್ಪನ್ನವಾಗಿರುತ್ತದೆ. ಅತ್ಯಂತ ಉತ್ತಮ ಮಟ್ಟದಲ್ಲಿ ಇಂಜಿನಿಯರಿಂಗ್ ಮಾಡಿದ ಕಣಗಳ ವಿತರಣೆಯಿಂದಾಗಿ ಕಾಂಕ್ರೀಟ್ ಮೌಲ್ಯ ಹೆಚ್ಚುತ್ತದೆ ಮತ್ತು ಇದರಿಂದಾಗಿ ಸಾಂದ್ರ ಮತ್ತು ಅಭೇದ್ಯವಾಗಿರುತ್ತದೆ.
ಸಿಮೆಂಟ್ ಅಲ್ಟ್ರಾಟೆಕ್‌ನ ಬಲ್ಕ್ ಸಿಮೆಂಟ್ ಟರ್ಮಿನಲ್ ಶ್ರೀಲಂಕಾದ ಕೊಲಂಬೋದಲ್ಲಿದೆ. ವಿಶೇಷವಾಗಿ ಇಂಜಿನಿಯರಿಂಗ್ ಮಾಡಿದ, ಸ್ವಯಂ ವಿಲೇವಾರಿ ಮಾಡುವ ಬಲ್ಕ್ ಸಿಮೆಂಟ್ ಕ್ಯಾರಿಯರ್‌ನಿಂದ ಸಿಮೆಂಟ್ ಸ್ವೀಕರಿಸಲಾಗುತ್ತದೆ. ಇದನ್ನು ನಂತರ ಪೋರ್ಟ್‌ನಲ್ಲಿ ರೋಡ್ ಬೌಸರ್‌ಗಳ ಮೂಲಕ ಹೊರತೆಗೆದು, ಟರ್ಮಿನಲ್‌ಗೆ ಪೋರ್ಟ್‌ನಿಂದ 10 ಕಿ.ಮೀವರೆಗೆ ಸಾಗಣೆ ಮಾಡಲಾಗುತ್ತದೆ. ಸಿಮೆಂಟ್ ಅನ್ನು 4 x 7500 T ಸಿಮೆಂಟ್ ಕಾಂಕ್ರೀಟ್ ಸಿಲೋಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆರ್‌ಎಂಸಿ ಮತ್ತು ಆಸ್ಬೆಸ್ಟಾಸ್ ಘಟಕಗಳಿಗೆ ಬಲ್ಕ್ ರೂಪದಲ್ಲಿ ಸಿಮೆಂಟ್ ಅನ್ನು ಸುಧಾರಿತ ಬಲ್ಕ್ ಸಿಮೆಂಟ್ ಟರ್ಮಿನಲ್ (ಎಲ್ಲ ಪರಿಸರದ ನಿಯಮಗಳಿಗೆ ಇದು ಒಳಗೊಂಡಿದೆ) ವಿಲೇವಾರಿ ಮಾಡುತ್ತದೆ. ಟರ್ಮಿನಲ್ ಆಧುನಿಕ ಇಟಾಲಿಯನ್ ವೆಂಟೋಮ್ಯಾಟಿಕ್ ಪ್ಯಾಕರ್ ಅನ್ನು ಹೊಂದಿದ್ದು, ದ್ವೀಪದಲ್ಲಿನ ಗ್ರಾಹಕರಿಗೆ ಸೇವೆ ಒದಗಿಸಲು 50 ಕಿಲೋ ಪೇಪರ್ ಬ್ಯಾಗ್‌ಗಳಲ್ಲಿ ಸಿಮೆಂಟ್ ಅನ್ನು ಇದು ಪ್ಯಾಕ್ ಮಾಡುತ್ತದೆ.
ಸಿಮೆಂಟ್‌ನ ಮೇಲೆ ಅತಿ ಹೆಚ್ಚು ಗಮನ ಹೊಂದಿರುವ ಆದಿತ್ಯ ಬಿರ್ಲಾ ಗ್ರೂಪ್, ವಿಶ್ವದ ವಿವಿಧ ವಲಯಗಳ ಸಹಕಾರಕ್ಕೆ ವಿವಿಧ ಭಾಗಗಳಲ್ಲಿನ ದೇಶಗಳಲ್ಲಿ ವ್ಯವಸ್ಥೆ ಮಾಡಲು, ಸಿಮೆಂಟ್‌ನ ಸ್ಥಳೀಯ ಉತ್ಪಾದಕತೆಯ ಅರ್ಹತೆಗಾಗಿ ಸಮೀಪದ ದೇಶಗಳಲ್ಲಿ ಘಟಕವನ್ನು ಹೊಂದಿರಬೇಕು ಎಂದು ಭಾವಿಸಿದೆ. ಭಾರತದ ಸಮೀಪದ ಎರಡು ದೇಶಗಳಲ್ಲಿ ಸಿಮೆಂಟ್‌ನ ಪ್ರಾಥಮಿಕ ಕಚ್ಚಾ ಸಾಮಗ್ರಿಯಾದ ಲೈಮ್‌ಸ್ಟೋನ್ ಸೀಮಿತ ಸಂಗ್ರಹವನ್ನು ಹೊಂದಿವೆ. ಇದರಿಂದಾಗಿ, ತಮ್ಮ ದೇಶೀಯ ನಿರ್ಮಾಣ ಚಟುವಟಿಕೆಗಾಗಿ ಆಮದಿನ ಮೇಲೆ ಈ ಎರಡು ದೇಶಗಳು ಅವಲಂಬನೆ ಹೊಂದಿವೆ. ಇದೇ ಉದ್ದೇಶದಿಂದ ಶ್ರೀಲಂಕಾದ ಕೋಲಂಬೋದಲ್ಲಿ ಜಂಟಿ ಸಹಭಾಗಿತ್ವದ ಸಗಟು ಸಿಮೆಂಟ್ ಟರ್ಮಿನಲ್ ಅನ್ನು ಸ್ಥಾಪಿಸಲಾಗಿದೆ.
ಗುಜರಾತ್ ಸಿಮೆಂಟ್ ವರ್ಕ್ಸ್ (ಜಿಸಿಡಬ್ಲ್ಯೂ) ರಫ್ತಿಗಾಗಿ ಕ್ಯಾಪ್ಟಿವ್ ಜೆಟ್ಟಿ ಇಂಜಿನಿಯರ್ಡ್ ಅನ್ನು ಹೊಂದಿದೆ. ಇದೇ ರೀತಿ ಕಳೆದ ಐದು ವರ್ಷಗಳಲ್ಲಿ, ಜಿಸಿಡಬ್ಲ್ಯೂ ಇಂದ ಶ್ರೀಲಂಕಾದಲ್ಲಿ ಸಮೂಹದ ಜಂಟಿ ಸಹಭಾಗಿತ್ವ ಸಂಸ್ಥೆ (ಜೆವಿ) ಆಗಿರುವ ಅಲ್ಟ್ರಾಟೆಕ್ ಸಿಮೆಂಟ್ ಲಂಕಾ (ಪ್ರೈ) ಲಿ. ಗೆ ಸಗಟು ಸಿಮೆಂಟ್ ಅನ್ನು ರಫ್ತು ಮಾಡಲಾಗಿದೆ.
ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವ ಮೂಲಕ ಶ್ರೀಲಂಕಾದ ಸಿಮೆಂಟ್ ಅಗತ್ಯವನ್ನು ಅಲ್ಟ್ರಾಟೆಕ್ ಸಿಮೆಂಟ್ ಪೂರೈಸುತ್ತಿದೆ. ಕಂಪನಿಯ ಗ್ರಾಹಕರು ಗುಣಮಟ್ಟ ಮತ್ತು ಸೇವೆಯ ಮಟ್ಟವನ್ನು ಮನ್ನಿಸಿದ್ದು, ಸೈಟ್‌ನಲ್ಲಿ ಗ್ರಾಹಕರಿಗೆ ತಾಂತ್ರಿಕ ಸೇವೆಯನ್ನು ಒದಗಿಸುವ ತಾಂತ್ರಿಕ ವಿಭಾಗದಲ್ಲಿನ ಅರ್ಹ ಇಂಜಿನಿಯರುಗಳ ಜೊತೆಗೆ ಕ್ಷೇತ್ರದ ಪಡೆದ ಮತ್ತು ಮಾರ್ಕೆಟಿಂಗ್ ತಂಡವೂ ಪೂರಕವಾಗಿ ಕೆಲಸ ಮಾಡುತ್ತಿದೆ.
ಇದರಿಂದಾಗಿ ಅತ್ಯಂತ ಸ್ಫರ್ಧಾತ್ಮಕ ಮಾರುಕಟ್ಟೆಯಲ್ಲಿ ಗಮನಾರ್ಹ ಮಾರುಕಟ್ಟೆ ಪಾಲನ್ನು ಗಳಿಸಲು ಕಂಪನಿಗೆ ಸಾಧ್ಯವಾಗಿದೆ. ವಿಶ್ವದ ಎರಡು ಅತಿದೊಡ್ಡ ಉತ್ಪಾದಕರು ಸೇರಿದಂತೆ ಬಹುರಾಷ್ಟ್ರೀಯ ಪ್ರತಿಸ್ಫರ್ಧಿಗಳೊಂದಿಗೆ ಸ್ಫರ್ಧೆಗಿಳಿಯಲು ಸಾಧ್ಯವಾಗಿದೆ. ಈ ಸ್ಫರ್ಧಾತ್ಮಕ ವಾತಾವರಣದಲ್ಲಿ, ಕಂಪನಿಯ ಗ್ರಾಹಕರ ವಲಯವು ಬ್ರ್ಯಾಂಡ್ ಈಕ್ವಿಟಿಯನ್ನು ನೀಡಿದೆ ಮತ್ತು ದ್ವೀಪದಲ್ಲಿ ಪ್ರೀಮಿಯಂ ಗುಣಮಟ್ಟದ ಸಿಮೆಂಟ್ ಪೂರೈಕೆದಾರರಿಗೆ ಮನ್ನಣೆ ನೀಡಿದೆ.
ಮತ್ತಷ್ಟು ಓದುನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ