ನಿಮ್ಮ ಹೊಸ ಮನೆಯನ್ನು ನಿರ್ಮಾಣ ಮಾಡುವ ಪ್ರಯಾಣದಲ್ಲಿ, ನೀವು ಮುಂದಿಡುವ ಮೊದಲ ಹೆಜ್ಜೆಯು ನಿವೇಶನವನ್ನು ಆಯ್ಕೆ ಮಾಡುವುದು ಆಗಿರುತ್ತದೆ. ಈ ಒಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ನೀವು ಒಮ್ಮೆ ನಿವೇಶನವನ್ನು ಖರೀದಿಸಿದ ನಂತರ, ನಿಮ್ಮ ನಿರ್ಧಾರದಿಂದ ಹಿಂದೆ ಬರಲು ಸಾಧ್ಯವಾಗುವುದಿಲ್ಲ. ಮನೆಯನ್ನು ನಿರ್ಮಿಸಲು ಬೇಕಾದ ಹಾಗೂ ಸೂಕ್ತವಾದ ನಿವೇಶನವನ್ನು ಆಯ್ಕೆ ಮಾಡುವ ಸಲುವಾಗಿ ನಿಮಗೆ ಸಹಾಯ ಮಾಡಲು ನಾವು ಕೆಲವು ಸಲಹೆಗಳನ್ನು ರಚಿಸಿದ್ದೇವೆ.
ನಿವೇಶನವನ್ನು ಖರೀದಿಸುವುದು ನಿಮ್ಮ ಮನೆ ನಿರ್ಮಾಣದ ಮೊದಲ ದೊಡ್ಡ ಹೆಜ್ಜೆಯಾಗಿರುತ್ತದೆ. ನಂತರದಲ್ಲಿ ಕಾನೂನಿನ ತೊಡಕುಗಳಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ, ನಿಮ್ಮ ಮನೆಯ ನಿರ್ಮಾಣವನ್ನು ಪ್ರಾರಂಭಿಸುವ ಮೊದಲೇ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀವು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
ನಿಮ್ಮ ಮನೆಯನ್ನು ನಿರ್ಮಿಸುವ ಸಲುವಾಗಿ ಭೂಮಿಯನ್ನು ಖರೀದಿಸುವುದು ಒಂದು ಬದಲಾಯಿಸಲಾಗದ ನಿರ್ಧಾರವಾಗಿರುತ್ತದೆ. ಅಂದರೆ, ಒಮ್ಮೆ ನೀವು ಈ ಖರೀದಿಯನ್ನು ಮಾಡಿದ ನಂತರ, ಅದನ್ನು ನೀವು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ ಅಥವಾ ರದ್ದುಗೊಳಿಸುವ ಸಲುವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ
ನೀವು ನಿವೇಶನವನ್ನು ಖರೀದಿಸಲು ನಿರ್ಧರಿಸಿದ ನಂತರ, ನಿಮ್ಮ ಬಳಿ ಎಲ್ಲಾ ದಾಖಲೆಗಳಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇವುಗಳಿಲ್ಲದಿದ್ದಲ್ಲಿ, ನಿಮ್ಮ ಖರೀದಿಯು ವಿಳಂಬವಾಗುತ್ತದೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ