ಟೈಟಲ್ ಡೀಡ್ ಎಂದರೇನು ಮತ್ತು ಅದರ ಪ್ರಾಮುಖ್ಯತೆ

ಜಮೀನು ಮತ್ತು ಆಸ್ತಿಯ ವಿಚಾರಕ್ಕೆ ಬಂದಾಗ, ಸಮಸ್ಯಾರಹಿತ ಖರೀದಿ ಪ್ರಕ್ರಿಯೆಗಾಗಿ ದಾಖಲೆ ಪತ್ರಗಳ ಮೂಲಭೂತ ಜ್ಞಾನವು ಅಗತ್ಯವಾಗಿರುತ್ತದೆ

 
 

 

1
ಒಂದು ಟೈಟಲ್‌ ಎನ್ನುವುದು ಆ ಜಮೀನು ಅಥವಾ ಸ್ವತ್ತಿನ ಮಾಲಿಕತ್ವವನ್ನು ಅಧೀಕೃತವಾಗಿ ಹಕ್ಕುಪತ್ರವಾಗಿರುತ್ತದೆ, ಮತ್ತು ಒಂದು ಪ್ರಮಾಣಪತ್ರವು ಇದರ ಮಾಲಿಕತ್ವವನ್ನು ಹೊಂದಲು ಆ ವ್ಯಕ್ತಿಯ ಹಕ್ಕನ್ನು ಪ್ರಮಾಣೀಕರಿಸುತ್ತದೆ. ಮಾರುವವರು ಮತ್ತು ಖರೀದಿಸುವವರು ಒಂದು ಒಪ್ಪಂದಕ್ಕೆ ತಲುಪಿದ ನಂತರ, ಸ್ವತ್ತಿನ ನೋಂದಣಿಯ ಮೂಲಕ ಖರೀದಿಸುವವರು ಔಪಚಾರಿಕವಾಗಿ ಮೇಲೆ ತಿಳಿಸಿದ ಸ್ವತ್ತಿನ ಮಾಲಿಕತ್ವವನ್ನು ಹೊಂದುತ್ತಾರೆ. ಈ ಮಾಹಿತಿಯನ್ನು ಸೇಲ್‌ ಡೀಡ್‌ ಒಳಗೊಂಡಿರುತ್ತದೆ.
2
ಭಾರತದ ನೋಂದಣಿ ಕಾಯ್ದೆ 1908 ರ ಪ್ರಕಾರ, ಸೇಲ್‌ ಡೀಡ್‌ ಅನ್ನು ನೋಂದಣಿ ಮಾಡಬೇಕು ಏಕೆಂದರೆ ಸ್ವತ್ತನ್ನು ಮಾಲೀಕರ ಹೆಸರಿಗೆ ವರ್ಗಾವಣೆ ಮಾಡುವಿಕೆಗೆ ಇದು ಒಂದು ಅಧೀಕೃತ ಪುರಾವೆ ಆಗಿರುತ್ತದೆ. ಸೇಲ್‌ ಡೀಡ್‌ ಅನ್ನು ನ್ಯಾಯಾಲಯದಲ್ಲಿ ಮಾನ್ಯತೆ ನೀಡಿದ ನಂತರ ಅದು ಒಂದು ಟೈಟಲ್‌ ಡೀಡ್‌ ಆಗುತ್ತದೆ. ಆದ್ದರಿಂದ ಈ ಎರಡೂ ಪದಗಳನ್ನು ಪರಸ್ಪರ ಒಂದರ ಬದಲಿಗೆ ಇನ್ನೊಂದನ್ನು ಬಳಸಲಾಗುತ್ತದೆ.
3
ಹೊಸ ಮನೆಯ ನಿರ್ಮಾಣಕ್ಕಾಗಿ ಜಮೀನನ್ನು ಖರೀದಿಸುವಾಗ, ಮಾರಾಟಗಾರನಿಗೆ ಆ ಜಮೀನಿನ ಮೇಲಿರುವ ಹಕ್ಕನ್ನು ಖಚಿತಪಡಿಸಲು ಮೂಲಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇದರಿಂದಾಗಿ ಸ್ವತ್ತಿನ ಹಕ್ಕನ್ನು ಸುಲಭವಾಗಿ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದು ಪಿತ್ರಾರ್ಜಿತ ಆಸ್ತಿಯ ಹಕ್ಕುಸಾಧಿಸುವಿಕೆಗಳಲ್ಲಿ ಮಾಲಿಕತ್ವದ ಸಂಪೂರ್ಣ ಸರಪಳಿಯನ್ನೂ ಸಹ ಖಚಿತಪಡಿಸುತ್ತದೆ.
4
ಬ್ಯಾಂಕ್‌ ಸಾಲಗಳನ್ನು ಪಡೆಯಲು ಟೈಟಲ್‌ ಡೀಡ್‌ನ ಅಗತ್ಯವಿರುತ್ತದೆ. ನೀವು ಜಮೀನನ್ನು ಖರೀದಿಸಿದ ನಂತರ ಒಂದು ಮನೆಯನ್ನು ನಿರ್ಮಿಸಲು ಸಾಲದ ಅಗತ್ಯವಿದ್ದರೆ, ಈ ದಾಖಲೆಯು ಆ ಜಮೀನಿನ ಹಕ್ಕುಗಳಿಗಾಗಿನ ಪುರಾವೆಯನ್ನು ಒದಗಿಸುತ್ತದೆ. ಬ್ಯಾಂಕಿನ ಬಾಕಿ ಮೊತ್ತವನ್ನು ಪಾವತಿಸದೇ ಇದ್ದಲ್ಲಿ, ನಿಮ್ಮ ಜಮೀನಿನ ಮಾಲಿಕತ್ವವನ್ನು ವರ್ಗಾಯಿಸಲು ಮತ್ತು ಅವರ ಬಾಕಿ ಮೊತ್ತಗಳನ್ನು ಪಡೆಯಲು ಬ್ಯಾಂಕ್‌ ಈ ದಾಖಲೆಯನ್ನು ಬಳಸಿಕೊಳ್ಳಬಲ್ಲದು.
 

ಈ ಎಲ್ಲಾ ಕಾರಣಗಳಿಂದ, ನೀವು ಒಂದು ಜಮೀನನ್ನು ಖರೀದಿಸಲು ನೋಡುತ್ತಿರುವಾಗ, ಅದರ ಟೈಟಲ್‌ ಡೀಡ್‌ ಅನ್ನು ಹೊಂದಿರುವ, ಮತ್ತು ಅದಕ್ಕೆ ಕ್ಲಿಯರ್‌ ಟೈಟಲ್‌ ಇರುವುದು ಅತ್ಯಂತ ಅಗತ್ಯವಾಗಿರುತ್ತದೆ.

 

ಮನೆ ನಿರ್ಮಾಣದ ಸಮಯದಲ್ಲಿನ ಕಾನೂನು ದಾಖಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು, ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಯಮಾತು ಅನ್ನು ಟ್ಯೂನ್‌ ಮಾಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ