ಕನ್‌ಸ್ಟ್ರಕ್ಷನ್‌ನಲ್ಲಿ ಗುತ್ತಿಗೆದಾರರ ಪಾತ್ರ

ನಿಮ್ಮ ಮನೆಯ ನಿರ್ಮಾಣ ಕಾಮಗಾರಿಯಲ್ಲಿ ಅನೇಕ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಮಾಲೀಕರು - ನೀವು ಮತ್ತು ನಿಮ್ಮ ಕುಟುಂಬ, ಆರ್ಕಿಟೆಕ್ಟ್‌ - ಮನೆಯನ್ನು ವಿನ್ಯಾಸಗೊಳಿಸುವವರು, ಕಾರ್ಮಿಕರು ಮತ್ತು ಗಾರೆಯವರು - ನಿಮ್ಮ ಮನೆಯನ್ನು ನಿರ್ಮಿಸುವವರು ಮತ್ತು ಗುತ್ತಿಗೆದಾರ - ಹಾಗೂ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಯೋಜಿಸುವವರು ಮತ್ತು ಸಂಯೋಜಿಸುವವರು. ನಿಮ್ಮ ಮನೆಯ ಕಟ್ಟಡ ಕಾಮಗಾರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅವಿಭಾಜ್ಯ ಪಾತ್ರವನ್ನು ವಹಿಸುತ್ತಿರುತ್ತಾರೆ, ಅಂದಾಜು ಸಮಯ ಮತ್ತು ಬಜೆಟ್‌ನಲ್ಲಿ ಕಟ್ಟಡ ಯೋಜನೆಯು ಪೂರ್ಣಗೊಂಡಿದೆ ಎನ್ನುವುದನ್ನು ಖಚಿತಪಡಿಸುವಲ್ಲಿ ಗುತ್ತಿಗೆದಾರನ ಪಾತ್ರ ಬಹಳ ಮುಖ್ಯವಾಗಿರುತ್ತದೆ.

ಒಬ್ಬ ಗುತ್ತಿಗೆದಾರನ ಪಾತ್ರಗಳು:
 
ಸರಳವಾಗಿ ಹೇಳುವುದಾದಲ್ಲಿ, ಸ್ಟ್ರಕ್ಚರಲ್ ಎಂಜಿನಿಯರ್ ಒಬ್ಬ ಸಿವಿಲ್ ಎಂಜಿನಿಯರ್ ಆಗಿದ್ದು, ಅವರು ನಿಮ್ಮ ಮನೆಯ ಕಟ್ಟಡದ ಸಮಗ್ರತೆಯನ್ನು ನಿರ್ಣಯಿಸುವಲ್ಲಿ ಪರಿಣತಿ ಹೊಂದಿರುತ್ತಾರೆ. ಅವರು ಅಡಿಪಾಯದ ಶಕ್ತಿ, ಗೋಡೆಗಳ ಸ್ಥಿರತೆ ಮತ್ತು ಭಾರ ಹೊರುವ ಸಾಮರ್ಥ್ಯ ಹಾಗೂ ಬಳಸಿದ ಸಾಮಗ್ರಿಗಳಾದಂತಹ ಸಿಮೆಂಟ್, ಕಬ್ಬಿಣ, ಜಲ್ಲಿಕಲ್ಲುಗಳು ಇತ್ಯಾದಿಗಳ ಗುಣಮಟ್ಟ ಮುಂತಾದ ಪ್ರಮುಖ ಅಂಶಗಳನ್ನು ವಿಶ್ಲೇಷಿಸುತ್ತಾರೆ.
1

ಪ್ಲಾನಿಂಗ್

 

ನಿಮ್ಮ ಮನೆಯ ಬಗೆಗಿನ ನಿಮ್ಮ ಕಲ್ಪನೆಯನ್ನು ಸಾಕಾರಗೊಳಿಸಲು, ನಿಮಗೆ ಒಂದು ಯೋಜನೆ ಬೇಕಾಗುತ್ತದೆ. ನಿರ್ಮಾಣ ಹಂತಕ್ಕೆ ತಲುಪಲು ನಿಮಗೆ ಸಹಾಯ ಮಾಡುವ ಸಲುವಾಗಿ ಯೋಜನೆ ಹಾಕುವುದು, ಸಮಯ ನಿಗದಿಪಡಿಸುವುದು ಮತ್ತು ಬಜೆಟ್ ಅನ್ನು ರೂಪಿಸಲು ಗುತ್ತಿಗೆದಾರನು ನಿಮಗೆ ಸಹಾಯ ಮಾಡುತ್ತಾನೆ.

2

ಯೋಜನಾ ನಿರ್ವಹಣೆ

 

ಒಮ್ಮೆ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ ನಂತರ, ಗುತ್ತಿಗೆದಾರನು ವ್ಯವಸ್ಥಾಪಕನ ಪಾತ್ರವನ್ನು ವಹಿಸುತ್ತಾನೆ, ಸಾಮಗ್ರಿಗಳ ಖರೀದಿಯಿಂದ ಹಿಡಿದು ಗಾರೆಯವರು ಮತ್ತು ಕಾರ್ಮಿಕರನ್ನು ನೇಮಿಸಿಕೊಳ್ಳುವುದು, ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು

3

ಯೋಜನೆಯ ಮೇಲ್ವಿಚಾರಣೆ

 

ಗಾರೆಯವರು ಮತ್ತು ಕಾರ್ಮಿಕರು ಪ್ರತಿ ಇಟ್ಟಿಗೆ ಮತ್ತು ಟೈಲ್ ಅನ್ನು ಹಾಕಿದರೆ, ಗುತ್ತಿಗೆದಾರರ ಮಾರ್ಗದರ್ಶನವು ನಿಮ್ಮ ಮನೆಯನ್ನು ರೂಪಿಸುತ್ತದೆ. ಗುತ್ತಿಗೆದಾರನಿಗೆ ಸ್ಥಳದಲ್ಲಿ ನಡೆಯುವ ಕೆಲಸಗಳ ಕುರಿತು ಎಲ್ಲಾ ಮಾಹಿತಿ ಇರಬೇಕು ಮತ್ತು ಪ್ರತಿ ಸಣ್ಣ ಬದಲಾವಣೆ ಹಾಗೂ ಬೆಳವಣಿಗೆಯ ಬಗ್ಗೆ ತಿಳಿದುಕೊಂಡಿರಬೇಕು.

4

ಕಾನೂನು ಮತ್ತು ನಿಬಂಧನೆಗಳ ಪರಿಶೀಲನೆಗಳು

 

ಮನೆ ನಿರ್ಮಾಣದ ಬಗ್ಗೆ ವಿಶೇಷವಾಗಿ ಕಾನೂನಿನ ಜಟಿಲತೆಗಳು ಮತ್ತು ಇತರ ನಿಬಂಧನೆಗಳ ಕುರಿತು ನಿಮಗೆ ಎಲ್ಲವೂ ತಿಳಿದಿಲ್ಲದಿರಬಹುದು. ಆದ್ದರಿಂದ ಗುತ್ತಿಗೆದಾರನು, ನಿಮ್ಮ ನೆರವಿನ ವ್ಯಕ್ತಿ ಆಗಿದ್ದು, ಅವರು ಯೋಜನೆಯನ್ನು ಪ್ರಾರಂಭಿಸುವ ಮೊದಲು ಅಗತ್ಯವಿರುವ ಎಲ್ಲಾ ಒಪ್ಪಿಗೆಗಳು ಮತ್ತು ಪರವಾನಗಿಗಳನ್ನು ಚೆನ್ನಾಗಿ ಅರಿತಿರುವವರಾಗಿರುತ್ತಾರೆ.

ಮತ್ತು ಕೊನೆಯಲ್ಲಿ, ಮನೆ ನಿರ್ಮಾಣ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ನಿಮ್ಮ ಕಟ್ಟಡದ ಗುತ್ತಿಗೆದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ನೀವು ಮನೆಯ ಕಾಮಗಾರಿಯನ್ನು ಪ್ರಾರಂಭಿಸುವ ಸಮಯ ಬಂದಾಗ, ನೀವು ಸರಿಯಾದ ಗುತ್ತಿಗೆದಾರರನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ, ಅವರು ಸರಿಯಾದ ಅನುಭವ, ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿರುವವರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಮನೆ ನಿರ್ಮಾಣದ ಪ್ರಯಾಣದಲ್ಲಿ ನಿಮಗೆ ಸಹಾಯ ಮಾಡಲು ನೀವು ನಿಜವಾಗಿಯೂ ಅವಲಂಬಿಸಬಹುದಾದ ವ್ಯಕ್ತಿಯಾಗಿರಬೇಕಾಗುತ್ತದೆ.

ಮನೆಯ ನಿರ್ಮಾಣದ ಕುರಿತಾಗಿ ಇದೇ ರೀತಿಯ ಹೆಚ್ಚಿನ ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ರವರ #ಮನೆಯ ಬಗ್ಗೆ ಮಾತನಾಡೋಣ ಯನ್ನು ಆಲಿಸಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ